December 5, 2020

ತೀಯಾ ಸಮಾಜ ಬೆಂಗಳೂರು: 18ನೇ ವಾರ್ಷಿಕೋತ್ಸವದ ಸಂಭ್ರಮ

ಬೆಂಗಳೂರು(30ಸೆ/2019): ಬೆಂಗಳೂರು ನೆಲಮಂಗಲ ಬಳಿಯ ಯಂಟಗಾನಹಳ್ಳಿಯ ತೀಯ ಸಮಾಜದ ಸ್ವಂತ ನಿವೇಶನದಲ್ಲಿ ತೀಯಾ ಸಮಾಜ ಬೆಂಗಳೂರು(ರಿ) ಇದರ 18ನೇ ವರ್ಷದ ವಾರ್ಷಿಕ ಸಭೆ ಹಾಗು ಭಗವತೀ ಪೂಜೆ ಜರಗಿತು.
ಕರಾವಳಿಯಲ್ಲಿ ನೆಲೆಸಿದ ತೀಯಾ ಸಮಾಜದ ಬಾಂಧವರು ಉದ್ಯೋಗ ನಿಮಿತ್ತ ಬೆಂಗಳೂರಿನಲ್ಲಿ ನೆಲೆಸಿದವರು 18 ವರ್ಷಗಳ ಹಿಂದೆ ತಮ್ಮ ಸಮಾಜದ ಎಳಿಗೆಗಾಗಿ ಈ ತೀಯಾ ಸಮಾಜ ಬೆಂಗಳೂರು ಎಂಬ ಸಂಸ್ಥೆಯನ್ನು ಕಟ್ಟಿದರು.

ಈ ಸಂಘವು ಹಲವಾರು ಸಾಮಾಜಿಕ ಕಾರ್ಯಕ್ರಮಗಳನ್ನು ಮಾಡುತಿದೆ, ಸಂಘದ ಕೇಂದ್ರ ಕಛೇರಿ ಬೆಂಗಳೂರು ಮಹಾನಗರದಲ್ಲಿ ಇದ್ದರೂ ಹಾಸನ-ಮಂಗಳೂರು ಹೆದ್ದಾರಿಯಲ್ಲಿ ಯಂಟಗಾನಹಳ್ಳಿಯಲ್ಲಿ ನಿವೇಶನ ಪಡೆದಿದ್ದು ಮುಂದಿನ ದಿನಗಳಲ್ಲಿ ಇಲ್ಲಿ ಸಮುದಾಯ ಭವನ ನಿರ್ಮಾಣ ವಾಗಲಿದೆ.
ಕಾರ್ಯಕ್ರಮದ ವೇದಿಕೆಯಲ್ಲಿಯೇ ಮಹಿಳಾ ಘಟಕದ ಉದ್ಘಾಟನೆ ಮಾಡಲಾಯಿತು ಅಧ್ಯಕ್ಷೆಯಾಗಿ ಶ್ರೀಮತಿ ಆಶಾಲತಾ, ಕಾರ್ಯದರ್ಶಿಯಾಗಿ ಶ್ರೀಮತಿ ಪ್ರಕೃತಿ,ಖಜಾಂಜಿಯಾಗಿ ದೀಪ್ತಿ ಕುಂಜತ್ತೂರು ಇವರನ್ನು ಆಯ್ಕೆ ಮಾಡಲಾಯಿತು.
ವೇದಿಕೆಯ ಮೇಲೆ ಸೌಂದರ್ಯ ಎಜುಕೇಶನ್ ಟ್ರಸ್ಟ್ ನ ಸೌಂದರ್ಯ ಮಂಜಪ್ಪ ,ಎರಿಯಕೋಡ್ ಭಗವತೀ ಕ್ಷೇತ್ರದ ಅಧ್ಯಕ್ಷರು ಪದ್ಮನಾಭ, ಸಮುದಾಯದ ಹಿರಿಯರಾದ ಲಕ್ಮಣ ಬೆಲ್ಚಡ,ಅಖಿಲ ಭಾರತೀಯ ತೀಯ ಸಂಘದ ಸದಾಶಿವ ಉಳ್ಳಾಲ್, ಯಂಟಗಾನಹಳ್ಳಿಯ ಮುಖಂಡ ಚಿಕ್ಕಣ್ಣ, ಎಚ್.ಎಸ್.ನರಸಿಂಹ, ನಂಜ್ಜಪ್ಪ, ರಮೇಶ್ ಬಂಗೇರ, ಬಿಡಿಎ ಸದಸ್ಯ ವಿಜಯ್ ಕುಮಾರ್, ಶ್ರೀನಿವಾಸ್ ಮತ್ತಿತರರು ಹಾಜರಿದ್ದರು.

1 thought on “ತೀಯಾ ಸಮಾಜ ಬೆಂಗಳೂರು: 18ನೇ ವಾರ್ಷಿಕೋತ್ಸವದ ಸಂಭ್ರಮ

Leave a Reply

Your email address will not be published. Required fields are marked *

Related Post

%d bloggers like this: