December 5, 2020

ಸರಕಾರಿ ಕಾಲೇಜಿನಲ್ಲಿ ಅರಳಿದ “ಪವರ್ ಲಿಪ್ಟರ್ ಕು.ಸುಮನಾ ಪೂಜಾರಿ”

ಉಡುಪಿ: ಕರಾವಳಿ ಕರ್ನಾಟಕದಲ್ಲಿ ಅಷ್ಟೇನೂ ಪ್ರೋತ್ಸಾಹ ಸಿಗದ ಕ್ರೀಡೆಗಳು ಪವರ್ ಲಿಪ್ಟಿಂಗ್, ಈ ಕ್ರೀಡಾ ಕ್ಷೇತ್ರದಲ್ಲಿ ಅಂತರ ಕಾಲೇಜು ಮಟ್ಟದಲ್ಲಿ ರಾಷ್ಟ್ರೀಯ ಮಟ್ಟದವರೆಗೆ ಸ್ಪರ್ದಿಸಿ ಚಿನ್ನದ ಪದಕ ಪಡೆದ ಕರಾವಳಿಯ ಹೆಮ್ಮೆಯ ಯುವ ಪ್ರತಿಭೆ ಕು.ಸುಮನಾ ಪೂಜಾರಿ.
ಮಣಿಪಾಲದ ಬಳಿಯ ಅಲೆವೂರು ಪ್ರಗತಿ ನಗರದ
ಮಾದವ ಪೂಜಾರಿ ಮತ್ತು ಸುಮಿತ್ರಾ ದಂಪತಿಗಳ ಪುತ್ರಿ,
ಕಾಲೇಜು ಸಹಪಾಠಿ ಅಕ್ಷಯ್ ಎಂಬುವರ ಪ್ರೋತ್ಸಾಹದಿಂದ ಪವರ್ ಲಿಪ್ಟಿಂಗ್ ಪ್ರಾಕ್ಟೀಸ್ ಮಾಡಲು ಶುರು ಮಾಡಿದ ಸುಮನಾ ಇಂದು ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟಿದ್ದಾರೆ.
ಸುಮನಾಳ ಹೆತ್ತವರಾದ ಮಾದವ ಪೂಜಾರಿಯವರದ್ದು ಅಟೋ ಚಾಲನೆಯ ಜೊತೆಗೆ ಸಣ್ಣ ಗೂಡಂಗಡಿಯ ದುಡಿಮೆ, ಬಡತನದ ನಡುವೆಯೂ ತಮ್ಮ ಮಗಳಿಗೆ ಪ್ರೋತ್ಸಾಹ ನೀಡಿರೂ ಖರ್ಚು ಭರಿಸಲು ಪರದಾಡಿದ್ದೂ ಇದೆ, ಆದರೆ ಸುಮನಾ ತನ್ನ ಕಾಲೇಜು ರಜಾ ದಿನಗಳಲ್ಲಿ ಕೆಲಸಕ್ಕೆ ಸೇರಿ ಸ್ಥಳೀಯ ಚೆಂಡೆ ತಂಡಕ್ಕೆ ಸೇರಿ ಒಂದಷ್ಟು ಸಂಪಾದಿಸಿ ತನ್ನ ಹೆತ್ತವರ ಭಾರ ಕಡಿಮೆ ಮಾಡಿರುವಳು.
ಕಾಪು ಶಾಸಕರಾದ ಲಾಲಾಜಿ ಮೆಂಡನ್ ತಮ್ಮ ವೈಯಕ್ತಿಕ ಸಹಾಯ ಮಾಡಿದ್ದಲ್ಲದೆ ಬೇರೆ ಯಾವ ಸಂಘಟನೆಯೂ ಈಕೆಯ ಸಾಧನೆಗಳನ್ನು ಗುರುತಿಸಿದ್ದೇ ಇಲ್ಲ.
ಉಡುಪಿಯ ಸರಕಾರಿ ಡಾ.ಜಿ.ಶಂಕರ್ ಮಹಿಳಾ ಕಾಲೇಜು ಅಜ್ಜರಕಾಡು ಇಲ್ಲಿ ದ್ವಿತೀಯ ವರ್ಷದ ಬಿ.ಕಂ ವಿದ್ಯಾರ್ಥಿನಿಯಾದ ಕು.ಸುಮನಾ ಪೂಜಾರಿ ಪಡೆದ ಪದಕಗಳ ಪಟ್ಟಿ ಹೀಗಿದೆ
ಜಿಲ್ಲಾ ಬೆಳ್ಳಿ ಪದಕ, ರಾಜ್ಯ ಮಟ್ಟದ ಜೂನಿಯರ್ಸ್ ಬೆಳ್ಳಿ, ಕೇರಳದಲ್ಲಿ ನಡೆದ ರಾಷ್ಟ್ರೀಯ ಸ್ಪರ್ಧೆಯಲ್ಲಿ 8ನೇ ಸ್ಥಾನ, ಭದ್ರಾವತಿಯಲ್ಲಿ ಜರುಗಿದ ಹಿರಿಯ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಚಿನ್ನದ ಪದಕ, ಪಶ್ಚಿಮ ಬಂಗಾಳದಲ್ಲಿ ಜರಗಲಿರುವ ರಾಷ್ಟ್ರೀಯ ಕ್ರೀಡಾಕೂಟಕ್ಕೆ ಆಯ್ಕೆ, ಮಂಗಳೂರು ಅಂತರ್ ಕಾಲೇಜು ಸ್ಪರ್ಧೆಯಲ್ಲಿ ಕಂಚು,ತೆಲಂಗಾಣದಲ್ಲಿ ಜರುಗಿದ ದಕ್ಷಿಣ ಭಾರತ ರಾಷ್ಟ್ರೀಯ ಸ್ಪರ್ಧೆಯಲ್ಲಿ ಜೂನಿಯರ್ ಬೆಳ್ಳಿ ಸೀನಿಯರ್ಸ್ ಚಿನ್ನ, ಮಂಗಳೂರು ವಿಶ್ವವಿದ್ಯಾನಿಲಯ ಅಂತರ್ ಕಾಲೇಜು ಸ್ಪರ್ಧೆಯಲ್ಲಿ ಚಿನ್ನ, ಮುಂಬಯಿಯಲ್ಲಿ ನಡೆದ ರಾಷ್ಟ್ರೀಯ ಅಂತರ್ ಕಾಲೇಜು ಸ್ಪರ್ಧೆಯಲ್ಲಿ 4ನೇ ಸ್ಥಾನ, ಮಂಗಳೂರಿನಲ್ಲಿ ಜರುಗಿದ ರಾಜ್ಯ ಮಟ್ಟದ ಬೆಂಚ್ ಪ್ರೆಸ್ ಸ್ಪರ್ಧೆಯಲ್ಲಿ ಕಂಚು ಪಡೆದಿದ್ದಾರೆ.
ಉಡುಪಿ ಸಾಲಿಗ್ರಾಮದ ವೀರ ಮಾರುತಿ ಜಿಮ್ ಮತ್ತು ಪಿಟ್ನೆಸ್ ಸೆಂಟರ್‌ನ ಕೋಚ್ ರಾಜೇಂದ್ರ ಗಾಣಿಗ ಇವರ ಮುತುವರ್ಜಿಯಿಂದ ಮುಂದಿನ ಸ್ಪರ್ಧೆಗಳಿಗೆ ಸಿದ್ದಳಾಗುತ್ತಿರುವ ಕು.ಸುಮನಾ ಪೂಜಾರಿ ಎಲ್ಲಾ ಕ್ರೀಡಾ ಪ್ರೇಮಿಗಳ ಸಹಕಾರವನ್ನು ಬಯಸುತ್ತಾರೆ.

Leave a Reply

Your email address will not be published. Required fields are marked *

Related Post

%d bloggers like this: