September 23, 2020

ಕಲ್ಲಿಕೋಟೆ ವಿಮಾನ ದುರಂತ:ವಿಮಾನ ಇಬ್ಬಾಗವಾಗಿ 16 ಸಾವು

ಕಲ್ಲಿಕೋಟೆ: ಕಲ್ಲಿಕೋಟೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ದುರಂತ ಸಂಭವಿಸಿದೆ.
ವಂದೇ ಭಾರತ್ ಮಿಷನ್ ನಲ್ಲಿ ದುಬಾಯಿಯಿಂದ ಇಲ್ಲಿಗೆ ಆಗಮಿಸುತ್ತಿದ್ದ ಏರ್ ಇಂಡಿಯಾದ ಐ.ಎಕ್ಸ್.-344 ವಿಮಾನವು ರನ್ ವೇನಲ್ಲಿ ಜಾರಿದ ಪರಿಣಾಮ ಈ ದುರಂತ ಸಂಭವಿಸಿದೆ ಎನ್ನಲಾಗುತ್ತಿದೆ.
ಈ ವಿಮಾನವು ರನ್ ವೇನಲ್ಲಿ ಇಳಿಯುವ ಯತ್ನದಲ್ಲಿ ಪೈಲಟ್ ನಿಯಂತ್ರಣ ತಪ್ಪಿ ಮುಂದಕ್ಕೆ ಜಾರಿ 35 ಅಡಿ ಆಳದ ಕಮರಿಗೆ ಉರುಳಿ ಬಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಕಮರಿಗೆ ಉರುಳಿದ ವಿಮಾನ ಇಬ್ಭಾಗವಾಗಿದೆ ಮತ್ತು ಆ ಸ್ಥಳದಿಂದ ಬೆಂಕಿ ಮತ್ತು ಹೊಗೆ ಕಾಣಿಸಿಕೊಂಡಿದೆ ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.
ಈ ವಿಮಾನದಲ್ಲಿ ಒಟ್ಟು 180 ಜನರು ಪ್ರಯಾಣಿಸುತ್ತಿದ್ದರು. ಇವರಲ್ಲಿ 174 ಜನ ಪ್ರಯಾಣಿಕರು, 4 ಕ್ಯಾಬಿನ್ ಸಿಬ್ಬಂದಿಗಳು ಮತ್ತು ಇಬ್ಬರು ಪೈಲಟ್ ಗಳು ಸೇರಿದ್ದಾರೆ. ಪ್ರಯಾಣಿಕರಲ್ಲಿ 10 ಜನ ಮಕ್ಕಳೂ ಇದ್ದರು ಎಂಬ ಮಾಹಿತಿ ಲಭ್ಯವಾಗಿದೆ.ಒಟ್ಟು 16 ಜನ ಮೃತ ಪಟ್ಟ ಮಾಹಿತಿ ಲಭ್ಯವಾಗಿದೆ.
ದುರ್ಘಟನೆಯ ಮಾಹಿತಿ ಲಭಿಸುತ್ತಿದ್ದಂತೆಯೇ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಘಟನಾ ಸ್ಥಳದಲ್ಲಿ ಪರಿಹಾರ ಕಾರ್ಯಾಚರಣೆಯನ್ನು ಕೈಗೊಂಡಿದೆ.

Leave a Reply

Your email address will not be published. Required fields are marked *

Related Post

%d bloggers like this: