September 23, 2020

ಅಡ್ವೆ ಕಂಕಣಗುತ್ತು ಹರೀಶ್ ಶೆಟ್ಟಿ ನಿಧನ

ಪಡುಬಿದ್ರೆ(10ಆಗಷ್ಟ್/2020) : ಕಾಪುವಿನ ಉದ್ಯಮಿ ಅಡ್ವೆ ಕಂಕಣಗುತ್ತು ಹರೀಶ್ ಶೆಟ್ಟಿ (63) ಅವರು ಅಂಗಾಂಗ ವೈಫಲ್ಯದಿಂದಾಗಿ ನಿಧನ ಹೊಂದಿದರು.
ಮೃತರು ಪತ್ನಿ, ಪುತ್ರ ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಕಾಪು ಮಾರುಕಟ್ಟೆ ವ್ಯಾಪಾರಸ್ಥರ ಹಿತರಕ್ಷಣಾ ಸಮಿತಿಯ ಅಧ್ಯಕ್ಷರಾಗಿದ್ದ ಅವರು ಕಾಪು ಮಾರ್ಕೆಟ್ ನಲ್ಲಿ ಹಲವು ದಶಕಗಳಿಂದ ಕೋಳಿ ಮಾರಾಟ ವ್ಯಾಪಾರ ನಡೆಸಿಕೊಂಡು ಬರುತ್ತಿದ್ದರು.ನಂದಿಕೂರು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾಗಿದ್ದ ಅವರು ಅಡ್ವೆ ನಂದಿಕೂರು ಕಂಬಳ ಸಮಿತಿಯ ಪದಾಧಿಕಾರಿಯಾಗಿದ್ದರು.
ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ, ಜನಪದ ಕ್ಷೇತ್ರಗಳೂ ಸೇರಿದಂತೆ ವಿವಿಧ ಕ್ಷೇತ್ರಗಳ ಅಭಿವೃದ್ಧಿಯಲ್ಲಿ ಅಪಾರ ಸೇವೆ ಸಲ್ಲಿಸಿದ್ದರು.
ಅಡ್ವೆ ಕಂಕಣಗುತ್ತು ಹರೀಶ್ ಶೆಟ್ಟಿ ಅವರ ನಿಧನಕ್ಕೆ ಶಾಸಕ ಲಾಲಾಜಿ ಆರ್. ಮೆಂಡನ್, ಮಾಜಿ ಸಚಿವ ವಿನಯಕುಮಾರ್ ಸೊರಕೆ, ಸಮಾಜ ಸೇವಕ ಸುರೇಶ್ ಶೆಟ್ಡಿ ಗುರ್ಮೆ, ದೇವಿಪ್ರಸಾದ್ ಶೆಟ್ಟಿ, ಅಡ್ವೆ ನಂದಿಕೂರು ಕಂಬಳ ಸಮಿತಿಯ ಅಧ್ಯಕ್ಷ ಕೊಳಚೂರು ಕೊಂಡೆಟ್ಟು ಸುಕುಮಾರ್ ಶೆಟ್ಟಿ, ನವೀನ್ ಚಂದ್ರ ಸುವರ್ಣ ಅಡ್ವೆ, ಕಾಪು ಮಾರುಕಟ್ಟೆ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಯೋಗೀಶ್ ರೈ ಸೇರಿದಂತೆ ಗಣ್ಯರು ಸಂತಾಪ ಸೂಚಿಸಿದ್ದಾರೆ.

Leave a Reply

Your email address will not be published. Required fields are marked *

Related Post

%d bloggers like this: