December 5, 2020

ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆಯಿಂದ ದಿ.ಜಯ ಸಿ ಸುವರ್ಣರಿಗೆ ಶ್ರಧ್ಧಾಂಜಲಿ

ಉಡುಪಿ(21ಅ/2020): ವಿಶ್ವ ಬಿಲ್ಲವರ ಏಕತೆಯ ಪ್ರತೀಕವಾಗಿ, ದಕ್ಷ ಸಂಘಟನೆಯ ನೇತೃತ್ವವನ್ನು ನೀಡಿದವರು.ಬಿಲ್ಲವ ಸಮಾಜ ಸುಧಾರಣೆಗೆ ಅವಿರತ ಶ್ರಮಿಸಿದರು.ಕುಲಗುರು ಬ್ರಹ್ಮಶ್ರೀ ನಾರಾಯಣ ಗುರುಗಳ ಪ್ರೇರಣೆ, ಕುಲದೇವರಾದ ಕೋಟಿಚೆನ್ನಯರ ಅನುಗ್ರಹದಿಂದ ಸಮಾಜದ ಅಭಿವೃದ್ಧಿಯ ಕನಸುಗಳನ್ನು ಸಾಕಾರಗೊಳಿಸಿದವರು ದಿವಂಗತ ಶ್ರೀ ಜಯ ಸಿ ಸುವರ್ಣರು.
ಧಾರ್ಮಿಕ, ಸಾಮಾಜಿಕ,ಆರ್ಥಿಕ ಹೀಗೆ ಅನೇಕ ಸಮಾಜಮುಖಿ ಸಂಸ್ಥೆಗಳ ರೂವಾರಿಯೆನಿಸಿದವರು.ತಾಳ್ಮೆಯ ಸಾಕಾರಮೂರ್ತಿಯಾಗಿ ಸಾಮಾಜಿಕ ನ್ಯಾಯಕ್ಕೆ ಹೆಚ್ಚು ಆದ್ಯತೆ ನೀಡುತ್ತಿದ್ದ ಗೌರವಾನ್ವಿತ ಜಯ ಸಿ ಸುವರ್ಣರು ದೈವಾಧೀನರಾಗಿರುವುದು ದುಃಖದ ಸಂಗತಿ.ಅವರು ತೋರಿಸಿದ ಸಾಮಾಜಿಕ ಏಳ್ಗೆಯ ಹಾದಿಯಲ್ಲಿ ನಾವೆಲ್ಲರೂ ಮುನ್ನೆಡೆಯೋಣ.ಬಿಲ್ಲವರ ಒಗ್ಗಟ್ಟಿಗೆ ಜಯ ಸಿ ಸುವರ್ಣರ ಆದರ್ಶಗಳು ಮಾದರಿಯಾಗಲಿ.
ಅವರ ಕುಟುಂಬಕ್ಕೆ ದುಃಖವನ್ನು ಸಹಿಸುವ ಶಕ್ತಿಯನ್ನು ನೀಡಲೆಂದು ಹಾಗೂ ಅಗಲಿದ
ಪುಣ್ಯಾತ್ಮಕ್ಕೆ ಸ್ವರ್ಗಪ್ರಾಪ್ತಿಯನ್ನು ಭಗವಂತನಲ್ಲಿ ಪ್ರಾರ್ಥಿಸಿರುತ್ತಾರೆ.
ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆಯ ಗೌರವಾಧ್ಯಕ್ಷರಾದ ಶ್ರೀ ದಿವಾಕರ್ ಎಂ ಸನಿಲ್ ಹಾಗೂ ಜಿಲ್ಲಾಧ್ಯಕ್ಷರಾದ ಪ್ರವೀಣ್ ಎಂ ಪೂಜಾರಿ ಮತ್ತು ಸರ್ವಸದಸ್ಯರ ವತಿಯಿಂದ ಭಾವಪೂರ್ಣ ಶ್ರದ್ಧಾಂಜಲಿಯನ್ನು ಸಮರ್ಪಿಸಿರುತ್ತಾರೆ.

Leave a Reply

Your email address will not be published. Required fields are marked *

Related Post

%d bloggers like this: