December 5, 2020

ಧಾರ್ಮಿಕ ವಿಧಿ ವಿಧಾನಗಳು ಹಿಂದೂ ಧರ್ಮದ ಪ್ರಮುಖರಿಂದಲೇ ಆಗಬೇಕು: ಡಾ.ಭರತ್ ಶೆಟ್ಟಿ

ಗುರುಪುರ(25ಅ/2020): ಇತ್ತೀಚೆಗೆ ಸುಂಕದ ಕಟ್ಟೆ ದೇವಸ್ಥಾನಕ್ಕೆ ತಾನು ಹೋಗಿ ಪ್ರಸಾದ ಸ್ವೀಕರಿಸಿ ಬೇರೆ ಕೆಲಸದ ನಿಮಿತ್ತ ಬೇಗನೇ ನಿರ್ಗಮಿಸಿದ್ದೆ.ಇಲ್ಲಿ ಕಳಸ ಹಾಕುವ ಪ್ರಕ್ರಿಯೆ ಬಗ್ಗೆ ಮಾಹಿತಿ ಇರಲಿಲ್ಲ.
ಯಾವುದೇ ಧರ್ಮವಿರಲಿ ಯಾವುದೇ ಜಾತಿ ಪಂಗಡವಿರಲಿ ಯಾವುದೆ ಜಾತಿಯ ದೇವಸ್ಥಾನ,ಚರ್ಚ್,ಮಸೀದಿಗೆ ತೆರಳಿ ಪ್ರಾರ್ಥನೆ ಮಾಡಲು ಯಾವುದೇ ಅಡ್ಡಿ ಆಕ್ಷೇಗಳು ಇರಲಾರದು.
ಆದರೆ ಯಾವುದೇ ಧರ್ಮದ ಧಾರ್ಮಿಕ ವಿಧಿ ವಿಧಾನಗಳನ್ನು ಅಯಾ ಸಮಾಜದ ಅರ್ಚಕರು,ಮುಖಂಡರು ಮಾಡುವುದು ಸಂಪ್ರದಾಯ ಎಂದು
ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕ ಡಾ.ಭರತ್ ಶೆಟ್ಟಿ ವೈ ಪ್ರತಿಕ್ರಿಯಿಸಿದ್ದಾರೆ.
ಗ್ರಾಮಾಂತರ ಪ್ರದೇಶದಲ್ಲಿ ಶನಿವಾರ ಸುಮಾರು 9 ಕೋಟಿ ರೂ. ಮಿಕ್ಕಿ ಅಭಿವೃದ್ಧಿ ಕೆಲಸಗಳಿಗೆ ಚಾಲನೆ ನೀಡಿ ,ಸುದ್ದಿಗಾರರು ಪ್ರಶ್ನಿಸಿದಾಗ ಈ ಪ್ರತಿಕ್ರಿಯೆ ನೀಡಿದರು.
ನಮ್ಮ ಮುಜರಾಯಿ ಇಲಾಖೆಯಲ್ಲಿಯೇ ಸ್ಪಷ್ಟ ಉಲ್ಲೇಖವಿದೆ.ನಮ್ಮ ಧಾರ್ಮಿಕ ವಿಧಿ ವಿಧಾನಗಳು ಕ್ಷೇತ್ರದ ಅರ್ಚಕರಿಂದ ,ಹಿಂದೂ ಧರ್ಮದ ಪ್ರಮುಖರಿಂದ ನಡೆಯತಕ್ಕದ್ದು.
ಇತರ ಮತ,ಧರ್ಮಕ್ಕೆ ಹಿಂದೂ ಬಾಂಧವರು ತೆರಳಿ ಪ್ರಾರ್ಥನೆ ಮಾಡಬಹುದು.ಆದರೆ ಅವರ ಧರ್ಮದ ಆಚಾರ ನಡೆಸಲು ಸಾಧ್ಯವಿಲ್ಲ. ಸುಂಕದ ಕಟ್ಟೆ ದೇವಸ್ಥಾನದಲ್ಲಿ ಯಾವ ಕಾರಣಕ್ಕೆ ಇದನ್ನು ಅನ್ಯ ಧರ್ಮದವರಿಂದ ಮಾಡಿಸಿದರು ಎಂಬುದಕ್ಕೆ ನನಗೆ ಗೊತ್ತಿಲ್ಲ. ಅದು ಸಾಮಾನ್ಯ ವ್ಯಕ್ತಿ ಇರಲಿ,ಮಾಜಿ ಶಾಸಕರೇ ಇರಲಿ ಇಲ್ಲಿ
ಆತನ ಹುದ್ದೆ,ಪ್ರಭಾವ ಮುಖ್ಯ ಅಲ್ಲ.
ರಾಜಕೀಯ ವಿಚಾರವಿದ್ದರೆ ಅದು ಸರಿಯಲ್ಲ ಎಂಬ ಅಭಿಪ್ರಾಯ ನನ್ನದು ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *

Related Post

%d bloggers like this: