November 1, 2020

ತೊಕ್ಕೊಟ್ಟು: ಬೀಕರ ಅಪಘಾತ ದಂಪತಿ ಸಾವು

ಉಳ್ಳಾಲ(ಅ27/2020): ತೊಕ್ಕೊಟ್ಟು ಓವರ್ ಬ್ರಿಡ್ಜ್ ಕೊನೆಯ ಉಳ್ಳಾಲ ತಿರುವಿನಲ್ಲಿ ಭೀಕರ ಅಪಘಾತ ಸಂಭವಿಸಿದ್ದು ಬೈಕಿನ ಮೇಲೆ ಕಂಟೇನರ್ ಲಾರಿ ಹರಿದಿದ್ದು ಬೈಕಿನಲ್ಲಿದ್ದ ದಂಪತಿ ದುರಂತ ಸಾವು ಕಂಡಿದ್ದಾರೆ. ಹಿಂಬದಿ ಸವಾರೆಯಾಗಿದ್ದ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದರೆ, ಬೈಕ್ ಚಲಾಯಿಸುತ್ತಿದ್ದ ಯುವಕ ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮೃತಪಟ್ಟಿದ್ದಾರೆ. 
ಉಳ್ಳಾಲ ಬೈಲಿನ ನಿವಾಸಿಗಳಾದ ರಾಯನ್ ಫೆರ್ನಾಂಡಿಸ್ (37) ಮತ್ತು ಅವರ ಪತ್ನಿ ಪ್ರಿಯಾ ಫೆರ್ನಾಂಡಿಸ್ (32) ಬೈಕಿನಲ್ಲಿದ್ದವರೆಂದು ತಿಳಿದು ಬಂದಿದೆ. ಪ್ರಿಯಾ ಮಂಗಳೂರಿನ ಫಾದರ್ ಮುಲ್ಲರ್ ನಲ್ಲಿ ಉದ್ಯೋಗದಲ್ಲಿದ್ದು ಅವರನ್ನು ಅವರ ಪತಿ ಪಿಕ್ ಮಾಡಿ ಮನೆಗೆ ಬರುವಾಗ ಮೇಲ್ಸೇತುವೆ ಕೊನೆಯಲ್ಲಿ ಬೈಕ್ ಉಳ್ಳಾಲಕ್ಕೆ ತಿರುವು ಪಡೆಯುವಾಗ ಕಂಟೇನರ್ ಲಾರಿ ಇವರ ಮೇಲಿನಿಂದ ಹರಿದಿದೆ. ಮಹಿಳೆ ಸ್ಥಳದಲ್ಲೇ ಸಾವು ಕಂಡಿದ್ದಾರೆ.
ಮಂಗಳೂರು ದಕ್ಷಿಣ ಸಂಚಾರಿ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

Related Post

%d bloggers like this: