December 5, 2020

ಮಂಗಳೂರು: ಹೊಟೇಲಿನಲ್ಲಿ ಗುಂಡು ಹಾರಾಟ

ಮಂಗಳೂರು(30ಅ/2020): ಮಂಗಳೂರಿನ ಫಳ್ನೀರ್ ಬಳಿ ಯುವಕರಿಂದ ಗುಂಡಿನ ದಾಳಿ ಆಗಿರುತ್ತದೆ.
ಎಂ.ಎಫ್.ಸಿ ಹೊಟೇಲ್ ಸಿಬ್ಬಂದಿ ಮೇಲೆ ಗುಂಡು ಹಾರಿಸಿದ ಅಪರಿಚಿತರ ತಂಡದ ಇಬ್ಬರ ಬಂದನ.
ಫಳ್ನೀರ್ ಬಳಿಯ ಎಂ.ಎಫ್.ಸಿ ಹೊಟೇಲ್ ಮತ್ತು ಫ್ರೆಶ್ ಮಾರ್ಟ್ ಬಳಿ ನಡೆದ ದಾಳಿ,ಸಿದ್ದಿಕ್ ಎಂಬವರಿಗೆ ಸೇರಿದ ಎಂಎಫ್ ಸಿ ಹೋಟೇಲ್,ಹೊಟೇಲ್ ನಲ್ಲಿ ಸಮೂಸ ಕೇಳಲು ಬಂದು ಗಲಾಟೆ ಮಾಡಿದ ನಾಲ್ವರ ತಂಡ,ಈ ವೇಳೆ ಹೊಟೇಲಿಗೆ ದಾಳಿ ಮಾಡಿ ಇಬ್ಬರು ಸಿಬ್ಬಂದಿಗೆ ಮಾರಣಾಂತಿಕ ಹಲ್ಲೆ,ಹೊಟೇಲಿನ ಗಾಜು, ಪೀಠೋಪಕರಣ ಧ್ವಂಸಗೈದು ಪರಾರಿ ಯತ್ನ
ಈ ವೇಳೆ ಅವರನ್ನು ಹಿಡಿಯಲು ಯತ್ನಿಸಿದ ಹೊಟೇಲ್ ಸಿಬ್ಬಂದಿ ಮೇಲೆ ಎರಡು ಸುತ್ತು ಗುಂಡು ಹಾರಾಟ.
ಒಂದು ಗುಂಡು ತಗುಲಿ ಹೊಟೇಲ್ನ ಓರ್ವ ಸಿಬ್ಬಂದಿಗೆ ಗಾಯವಾಗಿರುತ್ತದೆ.
ಗುಂಡು ಹಾರಿಸಿ ಪರಾರಿಯಾಗಲೆತ್ನಿಸಿದ ಇಬ್ಬರನ್ನು ಹಿಡಿದ ಸ್ಥಳೀಯರು.ಇನ್ನಿಬ್ಬರು ಆಟೋ ರಿಕ್ಷಾ ಹತ್ತಿ ಸ್ಥಳದಿಂದ ಪರಾರಿ ಆಗಿರುತ್ತಾರೆ.
ಪೂರ್ವದ್ವೇಷದ ಹಿನ್ನೆಲೆ ಉದ್ದೇಶಪೂರ್ವಕವಾಗಿ ದಾಳಿ ಶಂಕೆ ವ್ಯಕ್ತಪಡಿಸಿದ್ದಾರೆ.
ಕದ್ರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಪ್ರಕರಣ.

Leave a Reply

Your email address will not be published. Required fields are marked *

Related Post

%d bloggers like this: