July 11, 2020

ಅಂತಾರಾಷ್ಟ್ರೀಯ

ಪಾಕಿಸ್ತಾನದಿಂದ ಡ್ರೋನ್ ಮೂಲಕ ಶಸ್ತ್ರ ಸಾಗಾಟದ ಯತ್ನ ವಿಫಲಗೊಳಿಸಿದ ಬಿಎಸ್‌ಫ್‌

ಜಮ್ಮುಕಾಶ್ಮೀರ(20/2020ಜೂ): ಜಮ್ಮು ಕಾಶ್ಮೀರದ ಅಂತರರಾಷ್ಟ್ರೀಯ ಗಡಿಗೆ ಹೊಂದಿಕೊಂಡಿರುವ ಕತುವಾ ಜಿಲ್ಲೆಯ ಪನ್ಸಾರ್‌ ಎಂಬಲ್ಲಿ ಹಾರಿ ಬರುತ್ತಿದ್ದ ಡ್ರೋನ್‌ ಅನ್ನು ಮುಂಜಾನೆ 5.10ರ ಸುಮಾರಿನಲ್ಲಿ ಗಸ್ತಿನಲ್ಲಿದ್ದ ಬಿಎಸ್‌ಫ್‌ ಯೋಧರು ಧ್ವಂಸಗೊಳಿಸಿದ್ದಾರೆ.  
ಶಸ್ತ್ರಾಸ್ತ್ರಗಳನ್ನು ಜೋಡಿಸಿ ಭಾರತಕ್ಕೆ ಕಳುಹಿಸಲಾಗಿದ್ದ ಪಾಕಿಸ್ತಾನದ ಡ್ರೋನ್‌‌ ಅನ್ನು ಗಡಿ ಭದ್ರತಾ ಪಡೆ (ಬಿಎಸ್‌ಎಫ್‌) ಶನಿವಾರ ಹೊಡೆದುರುಳಿಸಿದೆ.
ಡ್ರೋನ್‌‌ ಅನ್ನು ಪರಿಶೀಲಿಸಲಾಗಿದ್ದು, ಅದಕ್ಕೆ ಶಸ್ತ್ರಾಸ್ತ್ರಗಳನ್ನು ಜೋಡಿಸಿ ರವಾನಿಸಿರುವುದು ಖಚಿತವಾಗಿದೆ. ಅದರಲ್ಲಿ ಬಂದೂಕುಗಳು ಪತ್ತೆಯಾಗಿವೆ.ಡ್ರೋನ್‌‌ ಕುರಿತು ತನಿಖೆ ನಡೆಯುತ್ತಿದೆ.ಬಿಎಸ್‌ಎಫ್‌ ಸಿಬ್ಬಂದಿ ಡ್ರೋನ್‌‌ ಕಡೆಗೆ 9 ಸುತ್ತಿನ ಗುಂಡು ಹಾರಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

“ಕರೋನಾ ವೈರಸ್ ಬಗ್ಗೆ ಹೆದರಿಕೆ ಬೇಡ” ನರೇಂದ್ರ ಮೋದಿ

ನವದೆಹಲಿ: ಜಗತ್ತನ್ನೇ ಕಾಡುತ್ತಿರುವ ಕರೋನಾ ವೈರಸ್ ಇದೀಗ ಭಾರತದಲ್ಲೂ ಕಾಣಿಸಿಕೊಂಡಿದ್ದು ಜನತೆ ಆತಂಕಕ್ಕೀಡಾಗಿದ್ದಾರೆ. ಇನ್ನು ಕರೋನಾ ವೈರಸ್ ವಿರುದ್ದ ಹೋರಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು ಜನರು ಭಯ ಪಡುವ ಅಗತ್ಯವಿಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. 
ಕರೋನಾ ವೈರಸ್ ಸನ್ನದ್ಧತೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಪರಿಶೀಲನಾ ಸಭೆ ನಡೆಸಿ ಸೂಕ್ತ ನಿರ್ದೇಶನಗಳನ್ನು ನೀಡಿದ್ದಾರೆ. ಕೊರೋನಾ ವಿರುದ್ಧ ಎಲ್ಲರೂ ಒಟ್ಟಾಗಿ ಹೋರಾಡಬೇಕಿದೆ. ಇನ್ನು ದೇಶದ ಜನತೆ ಈ ಬಗ್ಗೆ ಭಯ ಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ. 
ಭಾರತಕ್ಕೆ ಆಗಮಿಸುವ ಜನರನ್ನು ಪರೀಕ್ಷಿಸುವುದರಿಂದ ಹಿಡಿದು ತ್ವರಿತ ವೈದ್ಯಕೀಯ ಚಿಕಿತ್ಸೆ ನೀಡುವವರೆಗೆ ವಿವಿಧ ಸಚಿವಾಲಯಗಳು ಮತ್ತು ರಾಜ್ಯಗಳು ಒಟ್ಟಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಪ್ರಧಾನಿ ಮೋದಿ ಟ್ವೀಟ್ ನಲ್ಲಿ ತಿಳಿಸಿದ್ದಾರೆ

ಯೆನೆಪೋಯಾದಲ್ಲಿ ಹರೇಕಳ ಹಾಜಬ್ಬ ಹಾಗೂ ಡಾ.ಹಬೀಬ್ ರಹಮಾನ್ ಗೆ ಅಭಿನಂದನೆ ಕಾರ್ಯಕ್ರಮ

ಅಬ್ಬಕ್ಕ ನ್ಯೂಸ್ (28.01.2020)ಕೊಣಾಜೆ: ಯಾವುದೇ ಫಲಾಪೇಕ್ಷೆ ಇಲ್ಲದೆ ಪ್ರಾಮಾಣಿಕತೆಯೊಂದಿಗೆ ನಿಸ್ವಾರ್ಥವಾಗಿ ಸಮಾಜಕ್ಕೆ ಕೊಡುಗೆ ನೀಡಿದರೆ ಒಂದಲ್ಲ ಒಂದು ದಿನ ಅವರನ್ನು…

ಪರ್ವೇಜ್ ಮುಷರಫ್ ಮರಣದಂಡನೆ

ಪೇಶಾವರ(17ಡಿ/2019) ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ವಖಾರ್ ಅಹಮದ್ ಸೇಠ್ ನೇತೃತ್ವದ ತ್ರಿಸದಸ್ಯ ಪೀಠವು ಬಹುಕಾಲದಿಂದ ವಿಚಾರಣೆ ನಡೆಯುತ್ತಿದ್ದ ದೇಶದ್ರೋಹ ಆರೋಪದ ಪ್ರಕರಣದ ಬಗ್ಗೆ ಮಂಗಳವಾರ ತೀರ್ಪು ಪ್ರಕಟಿಸಿತು ಎಂದು ಪಾಕ್ ಮಾಧ್ಯಮಗಳು ವರದಿ ಮಾಡಿವೆ.
ನವೆಂಬರ್ 3, 2007ರಲ್ಲಿ ದೇಶದ ಮೇಲೆ ಸಂವಿಧಾನಬಾಹಿರವಾಗಿ ತುರ್ತುಸ್ಥಿತಿ ಹೇರಲಾದ ಆರೋಪಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಇಂದು ತನ್ನ ತೀರ್ಪು ಪ್ರಕಟಿಸಿದೆ. ಪ್ರಸ್ತುತ ದುಬೈನಲ್ಲಿ ನೆಲೆಸಿರುವ ಮುಷರಫ್, 1999ರಿಂದ 2008ರವರೆಗೆ ಪಾಕಿಸ್ತಾನದ ಸರ್ವಾಧಿಕಾರಿಯಾಗಿದ್ದರು.
ಡಿಸೆಂಬರ್ 2013ರಂದು ಮುಷರಫ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಮಾರ್ಚ್ 31, 2014ರಂದು ನ್ಯಾಯಾಲಯ ಆರೋಪಿ ಎಂದು ಗುರುತಿಸಿತು. ಅದೇ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಸರ್ಕಾರ ಪೂರ್ಣ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿತು. ವಿವಿಧ ವೇದಿಕೆಗಳಲ್ಲಿ ಹಲವು ದೋಷಾರೋಪಗಳು ಸಲ್ಲಿಕೆಯಾದ ಕಾರಣ ವಿಚಾರಣೆ ಸಾಕಷ್ಟು ಸಮಯ ತೆಗೆದುಕೊಂಡಿತು. ಮಾರ್ಚ್ 2016ರಂದು ಮುಷರಫ್ ಪಾಕ್‌ನಿಂದ ಪರಾರಿಯಾದರು.
ಮುಷರಫ್ ವಿರುದ್ಧದ ದೋಷಾರೋಪ ವಿಚಾರಣೆಗೆಂದು ನ್ಯಾಯಮೂರ್ತಿ ಸೇಠ್ ನೇತೃತ್ವದಲ್ಲಿ ಸಿಂಧ್ ಹೈಕೋರ್ಟ್‌ನ ನ್ಯಾಯಮೂರ್ತಿ ನಜರ್ ಅಕ್ಬರ್ ಮತ್ತು ಲಾಹೋರ್ ಹೈಕೋರ್ಟ್‌ನ ನ್ಯಾಯಮೂರ್ತಿ ಶಾಹಿದ್ ಕರೀಂ ನೇತೃತ್ವದಲ್ಲಿ ನ್ಯಾಯಪೀಠ ರಚಿಸಲಾಯಿತು. ನವೆಂಬರ್ 19ರಂದು ವಿಚಾರಣೆ ನಡೆಸಿದ್ದ ನ್ಯಾಯಪೀಠ ತೀರ್ಪು ಕಾಯ್ದಿರಿಸಿತ್ತು.
ಲಭ್ಯ ದಾಖಲೆಗಳನ್ನು ಆಧರಿಸಿ ನ.28ರಂದು ತೀರ್ಪು ನೀಡುವುದಾಗಿ ಅಂದು ನ್ಯಾಯಪೀಠ ಪ್ರಕಟಿಸಿತ್ತು. ಆದರೆ ಅಂತಿಮ ತೀರ್ಪಿಗೆ ಕೆಲವೇ ದಿನಗಳು ಬಾಕಿಯಿರುವಂತೆ ಪಾಕಿಸ್ತಾನದ ಆಡಳಿತಾರೂಢ ತೆಹ್ರೀಕ್ ಇ ಇನ್ಸಾಫ್ ಪಕ್ಷವು ಇಸ್ಲಾಮಾಬಾದ್ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿ, ನ್ಯಾಯಪೀಠ ತೀರ್ಪು ಮುಂದೂಡುವಂತೆ ನಿರ್ದೇಶನ ನೀಡಲು ಕೋರಿತ್ತು.
ಸರ್ಕಾರದ ಮನವಿ ಪುರಸ್ಕರಿಸಿದ ಇಸ್ಲಾಮಾಬಾದ್ ಹೈಕೋರ್ಟ್‌ ನವೆಂಬರ್ 27ರಂದು ಆದೇಶ ನೀಡಿ, ನ್ಯಾಯಪೀಠದ ತೀರ್ಪು ಪ್ರಕಟಕ್ಕೆ ತಡೆಯಾಜ್ಞೆ ನೀಡಿತು. ಡಿಸೆಂಬರ್ 5ರ ಒಳಗೆ ಸರ್ಕಾರಿ ವಕೀಲರು ನ್ಯಾಯಪೀಠದ ಎದುರು ಹೊಸ ಮನವಿ ಸಲ್ಲಿಸಬೇಕು ಎಂದು ಆದೇಶಿಸಿತು.
ಅದರಂತೆ ವಿಶೇಷ ನ್ಯಾಯಾಲಯದ ಎದುರು ಹಾಜರಾದ ಸರ್ಕಾರಿ ವಕೀಲರು ತಮ್ಮ ವಾದ ಮಂಡಿಸಿದರು. ನ್ಯಾಯಪೀಠವು ಡಿ.17ಕ್ಕೆ ಕಲಾಪ ಮುಂದೂಡಿತ್ತು. ಅಂದು ವಾದ–ಪ್ರತಿವಾದ ಆಲಿಸುವುದರ ಜೊತೆಗೆ ತೀರ್ಪನ್ನೂ ಪ್ರಕಟಿಸಲಾಗುವುದು ಎಂದು ಹೇಳಿತ್ತು. ಅದರಂತೆ ಇಂದು ನ್ಯಾಯಪೀಠದ ತೀರ್ಪು ಹೊರಬಿದ್ದಿದೆ.

ಅಯೋಧ್ಯೆ ತೀರ್ಪು: ನ್ಯಾಯಮೂರ್ತಿಗಳಲ್ಲಿ ಅಬ್ದುಲ್ ನಜೀರ್ ಬೆಳುವಾಯಿಯವರು

ಮೂಡಬಿದಿರೆ(9ನ/2019): ಅಯೋಧ್ಯೆಯಲ್ಲಿನ ರಾಮ ಜನ್ಮಭೂಮಿ–ಬಾಬರಿ ಮಸೀದಿಗೆ ಸಂಬಂಧಿಸಿದ ಬಹುಕಾಲದ ಅನಿಶ್ಚಿತ ಸ್ಥಿತಿ ಕೊನೆಗೊಂಡಿದ್ದು, ಈ ಐತಿಹಾಸಿಕ ತೀರ್ಪು ನೀಡಿದ ಐವರು…

ರಾಮ ಮಂದಿರ ಅದೇ ಜನ್ಮ ಭೂಮಿಯಲ್ಲಿ, ಮಸೀದಿಗೆ ಪರ್ಯಾಯ ಸ್ಥಳ

ನವದೆಹಲಿ(9ನ/2019): ಸರ್ಕಾರ ವಿಶೇಷ ಅಧಿಕಾರ ಬಳಸಿ ಮಸೀದಿ ನಿರ್ಮಾಣಕ್ಕೆ 5 ಎಕರೆ ಜಮೀನು ನೀಡಬೇಕು. ಹಾಗೂ ರಾಮಮಂದಿರಾ ಜಮೀನನ್ನು ಟ್ರಸ್ಟ್‌ಗೆ…

ಉದಯವಾಯಿತು ನವ ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶಗಳು

ನವದೆಹಲಿ(31ಅ/2019): ಜಮ್ಮು- ಕಾಶ್ಮೀರದಲ್ಲಿ ದೆಹಲಿ ಮಾದರಿಯಲ್ಲಿ ವಿಧಾನಸಭೆ ಇರಲಿದೆ.ಜಮ್ಮು ಮತ್ತು ಕಾಶ್ಮೀರ ರಾಜ್ಯದ ಸ್ಥಾನಮಾನ ಕಳೆದುಕೊಂಡು ಎರಡು ಕೇಂದ್ರಾಡಳಿತ ಪ್ರದೇಶವಾಗಿ…

ಕದ್ರಿ ಗೋಪಾಲನಾಥ್ ನಿಧನ

ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದ ಸ್ಯಾಕ್ಸೋಫೋನ್ ವಾದಕ ಕರಾವಳಿಯ ನೆಚ್ಚಿನ ಕದ್ರಿ ಗೋಪಾಲ್‌ ನಾಥ್ ತೀವ್ರ ಹೃದಯಾಘಾತದಿಂದ ವಿಧಿವಶರಾದರು… ಕದ್ರಿ ಗೋಪಾಲನಾಥ್…

ರಫೇಲ್ ಯುದ್ದ ವಿಮಾನಕ್ಕೆ ಆಯುಧಪೂಜೆ ನೆರವೇರಿಸಿದ ರಾಜನಾಥ್

ಪ್ರಾನ್ಸ್ (9ಅ/2019): ರಫೇಲ್ ವಿಮಾನಕ್ಕೆ ‘ಆಯುಧಪೂಜೆ’ ನೆರವೇರಿಸಿದ ರಾಜನಾಥ್, ‘ಓಂ’ ಎಂದು ಬರೆದರು. ‘ಜಗತ್ತಿನಲ್ಲಿ ನಾಲ್ಕನೇ ಅತಿದೊಡ್ಡ ವಾಯುಪಡೆಯನ್ನು ಭಾರತ…