September 23, 2020

ಆಹಾರ

ಮುಂಬಯಿ: ಹಸಿದವರ ಹಸಿವು ನೀಗಿಸುತ್ತಿರುವ ಎರ್ಮಾಳು ಹರೀಶ್ ಶೆಟ್ಟಿ

ಮುಂಬೈ(2ಮೇ/2020): ಕರೋನಾ ಲಾಕ್ ಡೌನ್ ಸಂತ್ರಸ್ತರಿಗೆ ಮುಂಬಯಿ ಮಹಾನಗರದಲ್ಲಿ ನಿತ್ಯ 40ಸಾವಿರ ಜನರಿಗೆ ಅನ್ನದಾನ ಮಾಡುವ ಎರ್ಮಾಳು ಹರೀಶ್ ಶೆಟ್ಟಿ ಮತ್ತು ಮಿತ್ರರು.
ಹೋಟೆಲ್ ಉದ್ಯಮಿಗಳಾದ ಎರ್ಮಾಳು ಹರೀಶ್ ಶೆಟ್ಟಿಯವರು ಲಾಕ್ ಡೌನ್ ಘೋಷಣೆ ಆದಾಗ ಊರಿಗೆ ಬರಲಾಗದೆ ತಮ್ಮ ಕಾರ್ಯ ಕ್ಷೇತ್ರದಲ್ಲಿಯೇ ನಿಲ್ಲುವಂತಾಯಿತು. ದಿಢೀರ್ ಆದ ಬೆಳವಣಿಗೆಯಿಂದ ಅನೇಕರು ಮುಂಬಯಿ ಮಹಾನಗರದಲ್ಲಿ ಊಟವಿಲ್ಲದೆ ಪರದಾಡುವುದನ್ನು ಕಂಡು ತಮ್ಮ ಹೊಟೇಲ್ ಕೆಲಸಗಾರ ಮೂಲಕ ಮಾರ್ಚ್ 27ರಂದು 1000 ಊಟದೊಂದಿಗೆ ಪ್ರಾರಂಭಿಸಿದ ಎರ್ಮಾಳು ಹರೀಶ್ ಶೆಟ್ಟಿ ನಂತರ ತಮ್ಮ ಸ್ನೇಹಿತರನ್ನು ಜೊತೆಗೂಡಿ ಮುಂಬೈಯ ಆರು ಬೇರೆ ಬೇರೆ ಪ್ರದೇಶಗಳಲ್ಲಿ “ಸೆಂಟ್ರಲ್ ಕಿಚನ್” ಎಂಬ ಹೆಸರಿನಿಂದ ಪ್ರಾರಂಬಿಸಿದರು.
ಮಾರ್ಚ್ 27ಕ್ಕೆ 1000 ಊಟದೊಂದಿಗೆ ಶುರುವಾದ ಅನ್ನದಾನ ಎಪ್ರಿಲ್ 14ಕ್ಕೆ 9000 ಮುಟ್ಟಿತು.
ಎರ್ಮಾಳು ಹರೀಶ್ ಶೆಟ್ಟಿಯವರ ತಂಡದ ಸೇವಾ ಕಾರ್ಯದ ಬಗ್ಗೆ ಮಾಹಿತಿ ಪಡೆದ ರಾಜ್ಯ ಸರ್ಕಾರ ಎಪ್ರಿಲ್ 14ರಂದು 5000 ಊಟದ ಹೆಚುವರಿ ಬೇಡಿಕೆಯನ್ನು ಪೂರೈಸಲು ತಿಳಿಸಿತು,ನಂತರದ ದಿನಗಳಲ್ಲಿ ಆಹಾರದ ಬೇಡಿಕೆ 16000ದಿಂದ 18000ಕ್ಕೆ ಮುಟ್ಟಿತು.
ಇದರ ಜೊತೆಗೆ ಸಂತಕ್ರೂಸ್ ಬೈಂದರ್ ಪ್ರದೇಶದ ತುಳುವರ 200 ಕುಟುಂಬಕ್ಕೆ ರೇಶನ್ ಹಂಚಲಾಯಿತು.
B.E.S.T ಬಸ್ ನಲ್ಲಿ ನಿತ್ಯ ಊಟದ ಸಾಗಾಟ ನಡೆಯುತ್ತದೆ, ನಿತ್ಯ 35 ಜನರು ತಮ್ಮ ಸ್ವಂತ ಊರಿಗೆ ಹೋಗಲಾಗದ ಕೆಲಸಗಾರರು ಅಡುಗೆ ಮಾಡುತ್ತಿದ್ದು,ಇಂದಿಗೆ ಲಕ್ಷಂತರ ಊಟ ಸಿದ್ದವಾಗಿ ಹಸಿದವರಿಗೆ ತಲುಪಿರುತ್ತದೆ. ಊಟ ಅಂದರೆ ಬರೆ ಅನ್ನ ಸಾರು ಅಲ್ಲ ದಿನಾ ದಿನ ಬಗೆ ಬಗೆಯ ತಿನಸು ಸಿದ್ಧವಾಗುತ್ತದೆ, ದಾದರ್ ಚೆಂಬೂರು ಸುತ್ತಲಿನ ಜನರ ಹೊಟ್ಟೆ ತಣಿಸುವ ಎಲ್ಲಾ ಆರು “ಸೆಂಟ್ರಲ್ ಕಿಚನ್ನಲ್ಲಿ” ಚೋಲೆ ಮಸಾಲ, ವಡಾ ಪಾವ್, ಪಲಾವ್ ಹೀಗೆ ದಿನದ ಒಂದು ಬಗೆಯಲ್ಲಿ ಆಹಾರ ಸಿದ್ಧವಾಗುತ್ತದೆ,
B.M.C ನೀಡಿದ ಬೇಡಿಕೆಯಂತೆ ಸುಮಾರು ಮೂವತ್ತೆಂಟು ಸಾವಿರದಿಂದ ನಲ್ವತ್ತು ಸಾವಿರ ಊಟದ ಕಟ್ಟು ಸಾಗಾಟ ಎರ್ಮಾಳು ಹರೀಶ್ ಶೆಟ್ಟಿಯವ ನೇತೃತ್ವದಲ್ಲಿ ಆಗುತ್ತದೆ.
ಹರೀಶ್ ಶೆಟ್ಟಿಯವ ಹೇಳುವಂತೆ “ನಾವು ಉಡುಪಿಯವರು, ನಮ್ಮ ಕೆಲಸವೇ ಹಸಿದವರಿಗೆ ಅನ್ನ ನೀಡುವುದು”
ಎರ್ಮಾಳು ಹರೀಶ್ ಶೆಟ್ಟಿ ಪ್ರಚಾರ ಪ್ರೀಯರಲ್ಲ ಅವರ ಜೊತೆಗೆ ಇರುವ ಸ್ನೇಹಿತ ತಂಡವೂ ಪ್ರಚಾರದಿಂದ ದೂರ ಇರುವವರು ಲೋಕಸಭಾ ಸದಸ್ಯರಾದ ಗೋಪಾಲ್ ಶೆಟ್ಟಿ, ಮುಂಡಪ್ಪ ಪೈಯಡೆ, ರವಿಂದ್ರ ಶೆಟ್ಟಿ, ಡಾ.ಸತೀಶ್ ಶೆಟ್ಟಿ, ಪ್ರಕಾಶ್ ಶೆಟ್ಟಿ lic, ಮಂಜುನಾಥ ಬನ್ನುರು, ಸತೀಶ್ ಶೆಟ್ಟಿ ಗೋರೆಗಾವ್, ನಿಲೇಶ್ ಶೆಟ್ಟಿ, ಮಾಜಿ ಕಾರ್ಪೊರೇಟರ್ ಶಿವಾನಂದ ಶೆಟ್ಟಿ, ಕಾರ್ತಿಕ್ ಹರೀಶ್ ಶೆಟ್ಟಿ, ಗಂಗಾಧರ ಪೂಜಾರಿ, ಭಾಸ್ಕರ ಸಾಲ್ಯಾನ್, ವಿಜಯ್ ಭಂಡಾರಿ, ರತ್ನಾಕರ ಮುನ್ಕೂರು,ಮಹೇಶ್ ಶೆಟ್ಟಿ ಪೈಸಾರ್, ಅಜಿತ್ ಶೆಟ್ಟಿ ಮುಂತಾದವರು ಈ ಸೇವಾ ಕಾರ್ಯದಲ್ಲಿ ಕೈಜೋಡಿಸಿದ ಮಹನೀಯರು.
ಮುಂಬಯಿ ಮಹಾನಗರದಲ್ಲಿ ಹಸಿದವರ ಕಷ್ಟ ನೀಗಿಸಿದ ಈ ಕರಾವಳಿ ಮೂಲದ ಹೋಟೆಲ್ ಉದ್ಯಮಿಗಳಿಗೆ ಮುಂಬಯಿ ನಿವಾಸಿಗರು ಎಷ್ಟು ಧನ್ಯವಾದ ಹೇಳಿದರೂ ಕಡಿಮೆಯೇ.

ಮೂಳೂರು: ಜೀತೇಶ್ ದಂಪತಿಗಳಿಂದ 25 ಬಡಕುಟುಂಬಕ್ಕೆ ಜಿನಸು ಸಾಮಾಗ್ರಿಗಳ ವಿತರಣೆ

ಕಾಪು(5ಎ/2020): ಕರೋನಾ ಕರ್ಪ್ಯೂ ಸಂತ್ರಸ್ತರಾಗಿರುವ ಕಾಪು ವ್ಯಾಪ್ತಿಯ 25 ಕಡು ಬಡಕುಟುಂಬಗಳನ್ನು ಗುರುತಿಸಿ ಅವರಿಗೆ ಅಕ್ಕಿಯ ಜೊತೆಗೆ ಜಿನಸು ಸಾಮಾಗ್ರಿಗಳನ್ನು ವಿತರಿಸುವ ಕಾರ್ಯ ಇಂದು ನಡೆಯಿತು.

ಮೂಳೂರಿನವರಾದ ವಿಜಯ್ ಟೆಕ್ ವ್ಯವಸ್ಥಾಪಕರು ಜೀತೇಶ್ ಮೂಳೂರು ಮತ್ತು ಸುಜಾತಾ ದಂಪತಿಗಳು ಸ್ವಂತ ಖರ್ಚಿನಲ್ಲಿ ಜಿನಸು ಸಾಮಾಗ್ರಿಗಳನ್ನು ವಿತರಿಸಿದರು.
ಪ್ರತಿ ಮನೆಗೆ 10ಕೆಜಿ ಅಕ್ಕಿ, 1ಕೆಜಿ ಸಕ್ಕರೆ, ಚಹಾ ಹುಡಿ,ಉಪ್ಪಿನಕಾಯಿ ಮುಂತಾದ ಸಾಮಾಗ್ರಿಗಳನ್ನು ವಿತರಿಸಿದರು.
ಎಲ್ಲಾ 25 ಮನೆಗಳಿಗೆ ಜೀತೇಶ್ ದಂಪತಿಗಳು ಬೇಟಿ ನೀಡಿ ಮನೆಯವರ ಇತರ ಅಗತ್ಯತೆಗಳನ್ನು ವಿಚಾರಿಸಿದರು.

ಈ ಹಿಂದೆಯೂ ಜೀತೇಶ್ ದಂಪತಿಗಳು ಶಂಕರಪುರ ದ್ವಾರಕಾಮಯಿ ಶ್ರೀ ಸಾಯಿಬಾಬಾ ಮಂದಿರದ ಗುರೂಜಿ ಸಾಯಿಈಶ್ವರ್ ಇವರು ಉಡುಪಿ ಕಟಪಾಡಿಯಲ್ಲಿ ಕರೋನಾ ಕರ್ಪ್ಯೂ ಸಂತ್ರಸ್ತರಿಗೆ ವಿತರಿಸುವ ಒಂದು ಹೊತ್ತಿನ ಊಟದ ಸೇವೆಗೆ ಒಂದು ಕ್ವಿಂಟಾಲ್ ಅಕ್ಕಿ ನೀಡಿ ಸಂತ್ರಸ್ತರ ಸೇವೆಯಲ್ಲಿ ಭಾಗವಹಿಸಿದ್ದಾರೆ.
ಜೀತೇಶ್ ದಂಪತಿಗಳ ಈ ಸೇವೆಯನ್ನು ಸಂತ್ರಸ್ತರಿಗೆ ವಿತರಿಸಲು ಸ್ಥಳೀಯ ಸ್ವಯಂಸೇವಕರು ಜೊತೆಯಾದರು.

ಕಟಪಾಡಿ:ಪಡಿತರ ಪಡೆಯಲು ಒಟಿಪಿ ಅಗತ್ಯ ಇಲ್ಲ-ಗೀತಾಂಜಲಿ ಸುವರ್ಣ

ಉಡುಪಿ:(2ಎ/2020): ಕಟಪಾಡಿ ಪಡಿತರ ಅಂಗಡಿಯಲ್ಲಿ ನಿಧಾನ ಗತಿಯ ಪಡಿತರ ಹಂಚುವಿಕೆಯ ಬಗ್ಗೆ ಜಿ.ಪಂಚಾಯತ್ ಸದಸ್ಯೆ ಗೀತಾಂಜಲಿ ಸುವರ್ಣ ಗರಂ ಆದ ಘಟನೆ ಇಂದು ಜರಗಿತು.
ದೇಶಾದ್ಯಂತ ಕರೋನ ವೈರಸ್ ಹರಡುತ್ತಿರುವ ಹಿನ್ನೆಲೆಯಲ್ಲಿ ಘೋಷಿಸಿದ ಮೆಡಿಕಲ್ ಎಮರ್ಜೆನ್ಸಿಯ ಕಾರಣ , ಜನರಿಗೆ ತಿಂಗಳಿನ ಪಡಿತರ ವಿತರಣೆಯ ನಿಯಮಗಳಲ್ಲಿ ಸಡಿಲಿಕೆಯನ್ನು ಘನ ಸರ್ಕಾರವು ನೀಡಿದೆ.
ಅದರಂತೆ ಹಳ್ಳಿಗಳಲ್ಲಿ ಅಕ್ಕಿಯನ್ನು ವಿತರಿಸಲು ಒಟಿಪಿ ಸಮಸ್ಯೆ ಉಂಟಾಗುತ್ತಿತ್ತು. ಸರ್ಕಾರ ತುರ್ತು ಪರಿಸ್ಥಿತಿಯ ಸಲುವಾಗಿ ಈ ನಿಯಮಾವಳಿಯಲ್ಲಿ ಕೊಂಚ ಸಡಿಲಿಕೆಯನ್ನು ನೀಡಿದ್ದು , ಒಟಿಪಿಯ ಸಮಸ್ಯೆ ಇದ್ದಲ್ಲಿ ಒಟಿಪಿ ಇಲ್ಲದೆಯೂ ಪಡಿತರ ಅಕ್ಕಿ ವಿತರಿಸುವಂತೆ ಆದೇಶಿಸಿದೆ. ಆದರೆ ಕಟಪಾಡಿ ಪಂಚಾಯತ್ ವ್ಯಾಪ್ತಿಯಲ್ಲಿ ಒಟಿಪಿ ಸಮಸ್ಯೆಯಿಂದ ಅಕ್ಕಿ ವಿತರಣೆ ನಿಧಾನವಾಗಿ ಆಗುತ್ತಿದೆ ಎಂಬ ಸಾರ್ವಜನಿಕರ ದೂರಿನ ಮೇರೆಗೆ ಕೂಡಲೆ ಸ್ಥಳಕ್ಕೆ ಭೇಟಿ ನೀಡಿದ ಜಿ.ಪಂ ಸದಸ್ಯರು ಗೀತಾಂಜಲಿ ಸುವರ್ಣ ಸರ್ಕಾರದ ಆದೇಶ ಪ್ರತಿಯನ್ನು ಸಂಭಂದಿಸಿದ ಅಧಿಕಾರಿಗಳಿಗೆ ನೀಡಿ ಕೂಡಲೆ ಅಕ್ಕಿ ವಿತರಣೆ ಮಾಡಿ ಯಾವ ಫಲಾನುಭವಿಗಳನ್ನೂ ವಾಪಾಸು ಕಳುಹಿಸದಂತೆ ಸೂಚಸಲಾಯಿತು.
ಒ.ಟಿ.ಪಿ ನಿಯಮ ಸಡಿಲಿಕೆಯ ಬಗ್ಗೆ ತಹಶಿಲ್ದಾರರ ಕಚೇರಿಯಿಂದ ಯಾವುದೇ ಆದೇಶ ಪ್ರತಿ ಕಟಪಾಡಿ ಪಡಿತರ ಅಂಗಡಿಗೆ ತಲುಪದಿರುವುದೇ ಈ ಘಟನೆಗೆ ಕಾರಣವಾಯಿತು.
ಜಿ.ಪಂಚಾಯತ್ ಸದಸ್ಯೆ ಗೀತಾಂಜಲಿ ಸುವರ್ಣ ನಿತ್ಯ ತನ್ನ ಮನೆಯಲ್ಲಿ ಕರೋನಾ ಕರ್ಪ್ಯೂ ಸಂತ್ರಸ್ತರಿಗೆ ಸುಮಾರು 400 ಜನರಿಗೆ ಆಗುವಷ್ಟು ಊಟ ತಯಾರಿಸಿ, ಶಂಕರಪುರ ಶ್ರೀ ಸಾಯಿಬಾಬಾ ಮಂದಿರದ ವಾಹನ “ಸಾಯಿ ತುತ್ತು” ಮುಖಾಂತರ ವಿತರಣೆ ಮಾಡುತ್ತಿದ್ದು ಇಂದು ತನ್ನ ಅಡುಗೆ ಕೆಲಸ ಮುಗಿಯುವ ಸಮಯಕ್ಕೆ ಸರಿಯಾಗಿ ಬಂದ ಪೋನ್ ಕರೆಯಂತೆ ಪಡಿತರ ಅಂಗಡಿಗೆ ಧಾವಿಸಿರು,
ಪಡಿತರ ಅಂಗಡಿ ಮುಚ್ಚವವರೆಗೆ ಅಲ್ಲಿಯೇ ಇದ್ದು ಪಡಿತರ ಪಡೆಯುಲು ಬಂದ ಪ್ರತಿಯೊಬ್ಬರಿಗೂ ಕರೋನಾ ವೈರಸ್ ಬಗ್ಗೆ ಮಾಹಿತಿ ನೀಡಿ ಜಾಗ್ರತಿ ಮೂಡಿಸಿದರು.

ಸಂತ್ರಸ್ತರಿಗೆ ನೆರವು ನೀಡುವವರು ಅಬ್ಬಕ್ಕ ಟಿವಿ ಕಛೇರಿ ಸಂಪರ್ಕಿಸಿ

ನೆರೆ ಸಂತ್ರಸ್ತರಿಗೆ ಸಹಾಯ ನೀಡುವವರು ನಮ್ಮನ್ನು ಸಂಪರ್ಕಿಸಿ : ಅಬ್ಬಕ್ಕ ಟಿ.ವಿ ಪ್ರದಾನ ಕಛೇರಿ, ಚಿರಂಜೀವಿ ಟವರ್ಸ್, ಶ್ರೀ ಅಯ್ಯಪ್ಪ…

ಮಾವಿನ ಹಣ್ಣಿಗೆ ಅಮಿತ್ ಶಾ ಬಿರುದು; ಯಾಕಿದು?ಏನಿದು ಹೊಸ ಸುದ್ದಿ?!

ಅಬ್ಬಕ್ಕ ನ್ಯೂಸ್ (16-5-2019)ಲಕ್ನೋ: ದೇಶದ ಪ್ರಖ್ಯಾತ ಮಾವು ಬೆಳೆಗಾರ,ಹೊಸ ತಳಿಗಳ ಸಂಶೋಧಕ ಪದ್ಮಶ್ರಿ ಹಾಜಿ ಕೈಮುಲ್ಲಾ ಖಾನ್‌ ಅವರು ಹೊಸ ತಳಿಯ…

ಕೊಲೆಸ್ಟ್ರಾಲ್ ಅನ್ನು ಪಿಶಾಚಿ ಎಂದು ಗ್ರಹಿಸಿ ಭಯ ಪಡಬೇಡಿ: ಅದು ಔಷಧ ಮಾಫಿಯಾದ ಭೂತ

ಅಬ್ಬಕ್ಕ ನ್ಯೂಸ್:ಕೊಲೆಸ್ಟ್ರಾಲ್ ಅಂದರೆ ಫ್ಯಾಟ್. ಇದು ದೇಹದ ಮೂಲಭೂತ ಅಗತ್ಯ. ನಾವು ತಿನ್ನುವ ಆಹಾರದಲ್ಲಿ ಶೇಕಡ ಹತ್ತರಷ್ಟು ಆಹಾರ ಕೊಲೆಸ್ಟ್ರಾಲ್…

ಮಂಗಳೂರಿನಲ್ಲೊಂದು ವಿಶಿಷ್ಟ ಹೊಟೇಲ್ ಸ್ಟೀಕ್ ಪ್ಯಾಲೇಸ್! ಅಲ್ಲಿನ ವೈಶಿಷ್ಟ್ಯತೆ ಏನು ಗೊತ್ತೆ?

ಅಬ್ಬಕ್ಕ ನ್ಯೂಸ್ (12-4-2019)ಮಂಗಳೂರು: ನಗರದಲ್ಲಿ ಹೋಟೆಲ್ ಗಳು ಧಾರಾಳ ಇದೆ. ವೆರೈಟಿ ಫುಡ್ ಗಳ ಸೇವೆ ಕೊಡುವ ಮಂಗಳೂರಿನ ಹೋಟೆಲ್…

Related Post