November 29, 2020

ಲೇಖನ

“ಆಟಿದ ಒಂಜಾತ್ ನೆನೆಪುಲು” – ಕೆ.ಎಲ್.ಕುಂಡಂತಾಯ

ಲೇಖನ: ಕೆ.ಎಲ್ ಕುಂಡಂತಾಯ(ಹಿರಿಯ ಜಾನಪದ ತಜ್ಞರು)
“ಆಡೊಂದು ಪೋಪುನ‌” ಎಂದರೆ ಮೆಲ್ಲನೆ ಸಾಗುವ ತಿಂಗಳು ಎಂದೇ ತುಳುವರು ಗುರುತಿಸುವ ತಿಂಗಳು “ಆಟಿ”.
ಸೌರಮಾನಿಗಳ ವರ್ಷದ ನಾಲ್ಕನೇ ತಿಂಗಳು .ಇದು ಕರ್ಕಾಟಕ ಮಾಸವೂ ಹೌದು .
ಕೃಷಿಕಾರ್ಯ ಮುಗಿದು ಧೋ ಎಂದು ಸುರಿಯುತ್ತಿರುವ ಮಳೆಯಿಂದ ವಾತಾವರಣ ತಂಪಾಗಿರುತ್ತದೆ . ಕಾಯಕವಿಲ್ಲದ ಅವಧಿಯಾಗಿರುವುದರಿಂದ ಈ ತಿಂಗಳು ಮೆಲ್ಲನೆ ಸರಿಯುವ ಹಾಗೆ ಭಾಸವಾಗುವುದು ಸಹಜ .

| ಆಟಿದ ಮರ್ದ್ |

ಆಹಾರದಲ್ಲಾಗುವ ಬದಲಾವಣೆಯಿಂದ,
ತಂಪಾದ ಪ್ರಕೃತಿಯ ಪರಿಣಾಮವಾಗಿ , ಸುರಿಯುವ ಮಳೆಯಿಂದಾಗಿ ಆರೋಗ್ಯವನ್ನು ರಕ್ಷಸಿಕೊಳ್ಳಲು ಆಟಿಯ ಅಮಾವಾಸ್ಯೆಯ ದಿನ “ಆಟಿದ ಮರ್ದ್” – ಹಾಳೆ ಮರದ ಕೆತ್ತೆಯಿಂದ ತಯಾರಿಸುವ ಮದ್ದನ್ನು ಸೇವಿಸುವುದು ರೂಢಿ . ಈ ಮದ್ದಿಗೆ ಒಂದು ಶ್ರದ್ಧೆ , ವಿಶ್ವಾಸ ,ನಂಬಿಕೆ ಹುಟ್ಟಲು ಹತ್ತಾರು ಒಪ್ಪಿಗೆಗಳು, ವಿಧಿಗಳು , ಕ್ರಮಗಳು. ಅದಕ್ಕೆ ಆಟಿ ತಿಂಗಳ‌ ಅಮಾವಾಸ್ಯೆ ಪ್ರಶಸ್ತವಾದ ದಿನ , ಇದು ಪುರಾತನವಾದ ನಿರ್ಧಾರ.ನಮಗೆ ಹುಣ್ಣಿಮೆ , ಸಂಕ್ರಮಣ ಎಲ್ಲವೂ ಪರ್ವದಿನಗಳೇ . ಅದಕ್ಕೆ ಸಂಬಂಧಿಸಿದ ಆಚರಣೆಗಳಿರುತ್ತವೆ. ‘ಆಟಿಮದ್ದಿನ’ ಉಷ್ಣ ತಡೆದುಕೊಳ್ಳಲು ‘ಮೆತ್ತೆಯ ಗಂಜಿ’ ಮರೆಯಬಾರದ ಸಂಗತಿ .ಅಂತೆಯೇ ಆಟಿ
ಅಮಾವಾಸ್ಯೆ “ಮದ್ದು ಕುಡಿಯುವ” ಆಚರಣೆ .
ಆಟಿ ತಿಂಗಳಲ್ಲಿ ನಮ್ಮ ರಕ್ಷಣೆಗೆ ನಾವು ಮದ್ದು ಕುಡಿಯುವುದು . ಮುಗಿಯಲಿಲ್ಲ ಗದ್ದೆಗಳಲ್ಲಿ ಬೆಳೆಯುತ್ತಿರುವ ನಮ್ಮ ಬೆಳೆಗಳ ರಕ್ಷಣೆಯೂ ಆಗಬೇಕಲ್ಲ . ಅಂದರೆ ಬೆಳೆಯ ಮೇಲಿನ ಕಾಳಜಿ , ಸಂರಕ್ಷಣೆ ಒಂದು ಮೌಲ್ಯವಾಗಿದ್ದ ದಿನಗಳಾಗಿದ್ದುವು . ಬೆಳೆಯನ್ನು ದೇವರೆಂದು ಭಕ್ತಿಯಿಂದ , ಮಕ್ಕಳೆಂಬ ಪ್ರೀತಿಯಿಂದ ಸ್ವೀಕರಿಸುವ ರೈತ ಇವತ್ತಿಗೂ ಆ ಬೆಳೆಯೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿದ್ದಾನೆ .
ನಾವು ಮದ್ದು ಕುಡಿದು ಆರೋಗ್ಯ ಕಾಪಾಡಿಕೊಳ್ಳುವಂತೆ ಬೆಳೆಯುತ್ತಿರುವ ‘ಎಣೆಲ್’ ಬೆಳೆಯ ರಕ್ಷಣೆಗೆ ಕಾಸರ್ಕದ ಮರದ ಗೆಲ್ಲುಗಳನ್ನು ಕಡಿದು ಗದ್ದೆಗೆ ಹಾಕುವ ಕ್ರಮವಿತ್ತು . ಈ ಮರದ ಗೆಲ್ಲು ಬೆಳೆಗೆ ಬರುವ ಮಾರಿ( ಹುಳು ಬಾಧೆ)ಯನ್ನು ತಡೆಯುತ್ತದೆ ಎಂಬುದೊಂದು ಒಡಂಬಡಿಕೆ .

| ರೆಡಿಮೇಡ್ ಆಕರ್ಷಣೆ |

ಕೃಷಿ ಪ್ರಧಾನವಾದ ಬದುಕು . ಮಳೆಗಾಲ ,
ಹೆಚ್ವು ಪ್ರಮಾಣದ ಮಳೆ ಸುರಿದರೆ ನೆರೆ ಹಾವಳಿ ,ಕೆಲವೊಮ್ಮೆ ಊರುಗಳ ನಡುವಿನ ಸಂಪರ್ಕವೇ ಕಡಿದುಹೋಗುವ ಸ್ಥಿತಿ . ಇದು ಒಂದು ಕಾಲದ ಆಟಿ ತಿಂಗಳ ವಾತಾವರಣ .
ಆದರೆ ಈಗ ಅಂತಹ ಮಳೆಯೂ ಇಲ್ಲ , ಸ್ವಲ್ಪಮಟ್ಟಿನ ಅಭಿವೃದ್ಧಿ ಸಾಧಿತವಾಗಿರುವುದರಿಂದ ಸಂಪರ್ಕ ಕಡಿದು ಹೋಗುವ ಸಾಧ್ಯತೆ ಕಡಿಮೆ .ನಾಗರಿಕತೆ ಬೆಳೆದಕಾರಣ , ಅದ್ಭುತವಾದ ತಂತ್ರಜ್ಞಾನ ಬೆಳೆದ ಈಕಾಲದಲ್ಲಿ ‘ಆಟಿ’ಯ ನೈಜ ಅನುಭವ ಆನುಭವಿಸುವ ಅವಕಾಶವೇ ಇಲ್ಲವಾಗಿದೆ . ಯೋಚಿಸಲೂ ಆಗದಷ್ಟು ನಾವು ಮುಂದುವರಿದು ಆಗಿದೆ . ಕೃಷಿಯನ್ನು ಅವಗಣಿಸಿಯಾಗಿದೆ . ಆದರೆ ಆ ಪ್ರಾಚೀನ ದಿನಗಳನ್ನು ಕಲ್ಪಿಸ ಬಹುದೇನೋ ?
ಆ ಕಾಲ “ರೆಡಿಮೇಡ್” ಕಾಲವಾಗಿರಲಿಲ್ಲ . ಆಹಾರ – ತಿಂಡಿತಿನಸುಗಳು ಮನೆಯಲ್ಲಿ ಮಾಡಿರುವುದಕ್ಕೆ ಸೀಮಿತವಾಗಿತ್ತು. ಮನೆಯಿಂದ – ಹಳ್ಳಿಯಿಂದ ಪೇಟೆಗೆ ಹೋಗಬೇಕಾದ ಸಂದರ್ಭ ಬಂದರೆ ಅಲ್ಲೆಲ್ಲೊ ಹೊಟೇಲುಗಳಲ್ಲಿ ಏನಾದರೆ ತಿಂದರೆ ಆಯಿತು , ಅವು ಮನೆಗೆ ಬರುತ್ತಿರಲಿಲ್ಲ .
ಅದಕ್ಕೆ ಮನೆಗಳಲ್ಲಿ ಬೇಡಿಕೆಯೂ ಇರಲಿಲ್ಲ .
ಪೇಟೆ ಆಹಾರಗಳ ಗುಣಮಟ್ಟದ ಬಗ್ಗೆ ವಿಶ್ವಾಸವೂ ಇರಲಿಲ್ಲ . ಇದ್ದಕ್ಕಿದ್ದಹಾಗೆ ಕಾಲಬದಲಾಯಿತು . ಮುಂದುವರಿದ – ಅಭಿವೃದ್ಧಿಯ ಧಾವಂತದಲ್ಲಿ ಮನೆಯ ತಿಂಡಿಗಳು ಮಾಡಲು ಅವಕಾಶವಿಲ್ಲ , ಅವಿಭಕ್ತ ಕುಟುಂಬ ಹರಿದು ಹಂಚಾಗಿ ಕುಟುಂಬವೊಂದರ ಸದಸ್ಯರ ಸಂಖ್ಯೆ ಮೂರು ತಪ್ಪಿದರೆ ನಾಲ್ಕಕ್ಕೆ ಸೀಮಿತವಾಯಿತು. ಹಳ್ಳಿಯಿಂದ ನಗರಕ್ಕೆ ವಲಸೆ ಅನಿವಾರ್ಯವಾಯಿತು. ಗಂಡ ಹೆಂಡತಿ ಇಬ್ಬರೂ ದುಡಿಯುವುದು ಅನಿವಾರ್ಯವಾಯಿತು . ಈ ದುಡಿಮೆ ಕಾರಣವಾಗಿ ಕೌಟುಂಬಿಕ ಬದುಕಿನ ಅವಧಿ ಹ್ರಸ್ವವಾಯಿತು .
ಹೀಗೆ ಒದಗಿದ ಅವಸರದ ಬದುಕಿಗೆ ರೆಡಿಮೇಡ್ ಆಹಾರಗಳ ಅವಲಂಬನೆ ಸಹಜವಾಯಿತು . ಹಳ್ಳಿಯ ವಾತಾವರಣವಿಲ್ಲವಾಯಿತು . ರೆಡಿಮೇಡ್ ಆಹಾರ ,ತಿಂಡಿಗಳೇ ಶ್ರೇಷ್ಠ ವಾದುವು . ಗೊತ್ತಿದೆ , ಗುಣಮಟ್ಟದ ಮೇಲೆ ಸಂಶಯವಿದೆ ಆದರೂ ಉಪಯೋಗ ನಮಗೆ ಗೊತ್ತಿಲ್ಲದಂತೆ ಬದುಕಿನ ಒಂದಂಗವಾಯಿತು . ಇವತ್ತಿಗೂ ನಗರದಲ್ಲಿರುವ ಮಂದಿ ಹಳ್ಳಿಯಲ್ಲಿರುವ ತವರಿಗೆ – ಮನೆಗೆ ಬಂದರೆ ಉಪ್ಪಿನಕಾಯಿ ಸಹಿತ ಲಭ್ಯವಾದುವುಗಳನ್ನು ಹೊತ್ತೊಯ್ಯುತ್ತಾರೆ .ಅಂದರೆ ಹಳ್ಳಿಮನೆಯ ಆಹಾರ ,ತಿನಸುಗಳೇ ಗುಣಮಟ್ಟದವು , ರುಚಿಯೂ ಇರುವಂತಹದ್ದು ,
ಕಲಬೆರಕೆಯಂತು ಖಂಡಿತಾ ಇಲ್ಲದಿರುವಂತಹದ್ದು , ಶುದ್ಧವಾದುದು ಎಂದು ಗೊತ್ತಿದೆ .
ಏನಿದು ಆಟಿ ಎಂದು , ಆಟಿ ಅಮಾವಾಸ್ಯೆ ಎಂದು ಆರಂಭಿಸಿ ರೆಡಿಮೇಡ್ ಆಹಾರಗಳ ಬಗ್ಗೆ ಬರೆಯತೊಡಗಿದೆ ಎಂದು ತಿಳಿಯ ಬೇಡಿರಿ .ಈ ಆಟಿ ತಿಂಗಳಲ್ಲಿ ನಮ್ಮ ಪೂರ್ವಜರು ಕಾಪಿಡುತ್ತಿದ್ದ ಆಹಾರಗಳು ಮತ್ತು ತಿಂಡಿಗಳ ಬಗ್ಗೆ ಒಮ್ಮೆ ನೆನಪಿಸಿಕೊಳ್ಳೋಣ ಎಂದು .

| ನೀರುಪ್ಪಡ್ |

ಉಪ್ಪಡ್ , ನೀರುಪ್ಪಡ್ , ಗೆರೆಂಗ್ ಬೈಪಾದ್ ಉರುಟು ತುಂಡು ಮಲ್ತ್ ದ್ ನುಂಗಾದ್ ದೀತಿನವು , ಅಪ್ಪಲ , ಸಾಂತಾನಿ ,ಪೆಲತರಿ , ಮುಂತಾದ ವಸ್ತುಗಳನ್ನು ಮಳೆಗಾಲಕ್ಕೆಂದೇ ಬೇಸಗೆಯಲ್ಲಿ ತಯಾರಿಸಿ ವಿಶಿಷ್ಟರೀತಿಯಲ್ಲಿ ಕಾಪಿಡುವ ಕ್ರಮವಿತ್ತು . ಅದಕ್ಕೆಂದೇ ನೀರುಪ್ಪಡ್ದ ಮಂಡೆ , ಉಪ್ಪಡ್ದ ಭರಣಿ , ಕರ , ಬೈತ ಕುರುಂಟು ಹೀಗೆ ಹಲವು ವಿಧದ ಪಾತ್ರೆಗಳಿದ್ದುವು . ಈ ಆಹಾರಗಳ ಮೆಲುಕು ಒಂದು ಅಪೂರ್ವ ಅನುಭವ .
ಮನೆಯ ಚಾವಡಿಯಲ್ಲಿ ಮುಚ್ಚಿಗೆಯ ಕೆಳಗೆ ಸಾಲಾಗಿ ನೇತಾಡಿಸಿಟ್ಟಿರುವ ಸೌತೆ ; ಮನೆಯ ಚಾವಡಿಗೂ ಒಂದು ಶೋಭೆ , ಮಳೆಗಾಲಕ್ಕೆ ಒಳ್ಳೆಯ ಪದಾರ್ಥ .ಸೌತೆಗೆ ಹೆಸರು ಮುಂತಾದ ಧಾನ್ಯಗಳನ್ನು ಬೆರೆಸಿ ಮಾಡುವ ಪದಾರ್ಥ , ಸೌತೆಗೆ ಕಾಪಿಟ್ಟ ಹಲಸಿನ ಬೋಲೆ ( ಹಲಸಿನ ಬೀಜ ) ಬೆರೆಸಿ ಮಾಡುವ ಪದಾರ್ಥವಂತೂ ಒಳ್ಳೆಯ ರುಚಿಯಾದ ಆಹಾರ . ಕೆಸುವಿನ‌ ಎಳತ್ತು ಎಲೆಯನ್ನು ಸುರುಳಿ ಸುತ್ತಿ ಒಂದು ಗಂಟುಹಾಕಿದರೆ ಅಥವಾ ಎರಡು ಸುತ್ತು ಮಾಡಿದರೆ ಅದು ‘ತೇಟ್ಲ‌’. ಸೌತೆ ಅಥವಾ ಬೋಲೆ( ಹಲಸಿನ ಬೀಜ)ಯೊಂದಿಗಿನ ಪದಾರ್ಥವೂ ಒಂದು ರುಚಿಕರ ಖಾದ್ಯವೇ .
ಉಪ್ಪುನೀರಿನಲ್ಲಿ ಹಾಕಿಟ್ಟ ಮಾವಿನಕಾಯಿ ಒಂದಿದ್ದರೆ ಉಪ್ಪು ,ಕಾಯಿ ಮೆಣಸು ಬೆರೆಸಿ( ನುರ್ತುದು) ಗಂಜಿಯ ಬಟ್ಟಲಲ್ಲೆ ಗಂಜಿಯೊಂದಿಗೆ ಊಟದ ವೇಳೆಯೇ ಸಿದ್ಧಪಡಿಸಿ ಮಾಡುವ ಊಟದ ರುಚಿ ಮರೆತು ಹೋಗಿ ಕನಿಷ್ಠ ಅರ್ಧ ಶತಮಾನವೇ ಕಳೆಯಿತು .ಅಲ್ಲಲ್ಲಿ ಇದೆ ಅನ್ನಿ.
ಹಲಸಿ ಸೋಳೆ – ರಚ್ಚೆಯನ್ನೂ ಇದೇ ಕ್ರಮದಲ್ಲಿ ಉಪಯೋಗಿಸುವುದಿದೆ .ಇದೆಲ್ಲ ಒಂದು ನೆನಪುಮಾತ್ರ . ಹಲಸಿನ , ಗೆಣಸಿನ ಹಪ್ಪಳಗಳನ್ನು ಗೆಂಡದಲ್ಲಿ ಕಾಯಿಸಿ ತಿನ್ನುವುದು ಒಂದು ಜಾನಪದ ಅನುಭವ .ಇವೆಲ್ಲ ಬರೆಯಲಾಗದ ರುಚಿಗಳು .
‘ತೊಜಂಕ್’ , ಕೆಸು ಮೊದಲಾದ ಸೊಪ್ಪು ಪ್ರಧಾನವಾಗಿ ಉಳಿದಂತೆ ಹಲವು ವಿಧದ ಸೊಪ್ಪುಗಳು ಮಳೆಗಾಲದ ಪದಾರ್ಥಗಳೇ ಆಗುತ್ತಿದ್ದುವು .ಇವುಗಳಲ್ಲಿ ಕೆಸುವಿನ ಎಲೆಯ ‘ಪತ್ರೊಡೆ’ ವಿಶೇಷ.
ಆಟಿ ಅಮಾವಾಸ್ಯೆ , ಆಟಿ ತಿಂಗಳ ಒಂದು ನೆನಪಾಗಿ ಈ ಬರವಣಿಗೆ.

ಆಟಿದ ಅಮಾಸೆ , ಆಟಿದ ಅಗೆಲ್ , ಆಡಿದ ಕತ್ತಲೆ , ಆಟಿ ಕುಳ್ಳುನಿ , ಆಟಿದ ದೊಂಬು , ಆಟಿದ ಪರ್ಬ , ಆಟಿದ ಪುಣ್ಣಮೆ,ಆಟಿಕಳಂಜೆ ,ಆಟಿಪಂತಿ ,ಆಟಿದ ಮಲಕ,ಆಟಿಪಿದಾಯಿಪಾಡುನಿ ಹೀಗೆ ಆಟಿ ತಿಂಗಳಿಗೆ ಸಂಬಂಧಿಸಿದ ಆಚರಣೆಗಳಾಗಿವೆ.

ಶರಣಾಗಿ ಗೆಲ್ಲುವುದೂ ಜೀವನದ ಕ್ಷೇಮಕ್ಕೆ ಉತ್ತಮ ಮಾರ್ಗ-ಪ್ರಕಾಶ್ ಅಮ್ಮಣಾಯ

ವಿಶೇಷ ಲೇಖನ- ಲೇಖಕರು ಜ್ಯೋತಿರ್ವಿಜ್ಞಾನಂ ಪ್ರಕಾಶ್ ಅಮ್ಮಣಾಯ.
ಅಶ್ವತ್ಥಾಮನ ದುರ್ಬುದ್ಧಿಯಿಂದ, ಮತ್ಸರದಿಂದ ಪಾಂಡವರನ್ನು ನಾಶ ಮಾಡಲು ಒಂದು ದಿವ್ಯಾಸ್ತ್ರ ಪ್ರಯೋಗಿಸುತ್ತಾನೆ.ಅದುವೇ ನಾರಾಯಣಾಸ್ತ್ರ. ಅದು ಪ್ರಯೋಗಿಸಲು ಇರುವಂತದ್ದಲ್ಲ.ಆದರೆ ಇದನ್ನು ಕಲಿತ ಅಶ್ವತ್ಥಾಮ ಮೊಟ್ಟ ಮೊದಲಬಾರಿಗೆ ಪ್ರಯೋಗಿಸಿದ್ದು ಭಗವಂತನು ಸಾರಥಿಯಾಗಿ ಕುಳಿತಿರುವ ಅರ್ಜುನನ ರಥಕ್ಕೆ. ಇದಕ್ಕೆ ಪ್ರತಿಯಾದ ಅಸ್ತ್ರ ಯಾವುದೂ ಇಲ್ಲ. ಅಲ್ಲದೆ ಅದರ ಉಪಸಂಹಾರವೂ ಅಶ್ವತ್ಥಾಮನಿಗೆ ಗೊತ್ತಿಲ್ಲ. ಎಂತಹ ಮೂರ್ಖ ನೋಡಿ ಅಶ್ವತ್ಥಾಮ. ಹೇಗೆ ಚೈನಾದವರು ಜೈವಿಕಾಸ್ತ್ರ ಪ್ರಯೋಗಕ್ಕಿಳಿದು ಕರೋನ ವೈರಸ್ಸನ್ನು ಸೃಷ್ಟಿಸಿ ಕೈಕಾಲು ಬಿಟ್ಟರೋ ಹಾಗೆಯೇ ಈ ಅಸ್ತ್ರಪ್ರಯೋಗವೂ ಆಯ್ತು. ಆಗ ಸ್ವತಃ ಕೃಷ್ಣನೇ ಎದ್ದುನಿಂತು, ‘ಅಶ್ವತ್ಥಾಮಾ ಏನು ಕೆಲಸ ಮಾಡಿದೆ ಹೇಳು? ಒಂದುವೇಳೆ ಪಾಂಡವರು ನಾಶವಾದರೂ ನೀನು ಪ್ರಯೋಗಿಸಿದ ಅಸ್ತ್ರ ತನ್ನ ಕೆಲಸ ನಿಲ್ಲಿಸದು. ಅದರ ವಿಚಾರ ನನಗೆ ಗೊತ್ತಿದೆ. ಅದರ ಉಪಸಂಹಾರ ತಿಳಿಯದ ನೀನು ಯಾಕೆ ಪ್ರಯೋಗಿಸಿದೆ ಹೇಳು. ಲಕ್ಷಾಂತರ ಸೈನಿಕರೂ,ಸೇನಾನಿಗಳೂ ಸಾವನ್ನಪ್ಪುತ್ತಿದ್ದಾರೆ ನಿನ್ನ ದುರ್ಬುದ್ಧಿಯಿಂದಾಗಿ.’ ಎಂದು ಕೇಳಿದ. ನಂತರ ಧರ್ಮರಾಯನಲ್ಲಿ,’ ಹೇ ಧರ್ಮನಂದನಾ, ನಾರಾಯಣಾಸ್ತ್ರಕ್ಕೆ ಪ್ರತ್ಯಸ್ತ್ರವಿಲ್ಲ.ಹಾಗಾಗಿ ನೀವೆಲ್ಲರೂ ಶರಣಾಗುವುದೊಂದೇ ದಾರಿ’ ಎಂದನು. ಆದರೆ ಭೀಮಸೇನನು,’ ಹೇ ವಾಸುದೇವಾ, ಶರಣಾಗುವುದು ಕ್ಷತ್ರಿಯ ಸಂಸ್ಕಾರವಲ್ಲ.ಯಾರು ಶರಣಾದರೂ ನಾನು ಶರಣಾಗಲಾರೆ’ ಎಂದು ಹೇಳುತ್ತಾ ನಾರಾಯಣಾಸ್ತ್ರಕ್ಕೆ ಮುನ್ನುಗ್ಗಿದ. ಕೊನೆಗೆ ಕೃಷ್ಣನು ಧರ್ಮರಾಯ,ನಕುಲ ಸಹದೇವರೊಂದಿಗೆ ಅರ್ಜುನ ಸಹಿತ ಭೀಮಸೇನನ ಆಯುಧವನ್ನು ಎಳೆದುಕೊಂಡು ನಿರಾಯುಧರಾದರು. ಅಷ್ಟರಲ್ಲಿ ನಾರಾಯಣಾಸ್ತ್ರವು ಗರಗರನೆ ತಿರುಗುತ್ತ, ಭಗವಂತನಾದ ಶ್ರೀಕೃಷ್ಣನೊಳಗೆ ಐಕ್ಯವಾಗುತ್ತದೆ, ರಣಾಂಗಣವು ಶಾಂತವಾಯ್ತು.

ಇಲ್ಲಿ ಒಂದು ತತ್ವವಿದೆ. ರಾಜಧರ್ಮ CAA ವಿರುದ್ಧ ಮುಸ್ಲಿಮರನ್ನು ಎತ್ತಿಕಟ್ಟಿ ಮಾಡಬಾರದ್ದನ್ನು ಮಾಡಿಸಿದರು.ಶವಗಳು ಉರುಳಿದವು. ಪ್ರತಿಭಟನೆ ತಾರಕ್ಕೇರಿತು.ಇದನ್ನು ನಿಯಂತ್ರಿಸಲು ಕರೋನ ವ್ಯಾಧಿ ಚೈನಾದಿಂದ ಭಾರತಕ್ಕೂ ಇಳಿಯಿತು. ಅಂದರೆ ಮಾಡಬಾರದ್ದನ್ನು ಮಾಡಿದರೆ ಆಗಬಾರದ್ದು ಆಗಿಹೋಗುತ್ತದೆ. ವ್ಯಾಪಾರವನ್ನೇ ಅವಲಂಭಿಸಿ ಬದುಕುವ ಕೋಟ್ಯಂತರ ಜನರ ಹೊಟ್ಟೆಗೆ ಘಾತವಾಗುತ್ತಿದೆ. ಈಗ?
ಭಾರತೀಯ ಸಂಸ್ಕಾರಗಳನ್ನು ಮೂಢನಂಬಿಕೆ ಎಂದವರು, ಹಿಂದೂ ದೇವತೆಗಳನ್ನು ನಿಂದಿಸಿದವರು,ಹಿಂದೂ ದೇವಾಲಯ( ಅಯೋಧ್ಯೆ,ಕಾಶಿ,ಮಧುರಾ ಇತ್ಯಾದಿ) ಏನು ಉತ್ತರ ಕೊಡುತ್ತಾರೆ? ಯಾವ ಔಷಧಿ ನೀಡಲು ಸಾಧ್ಯವಿದೆ.? ಈಗ ಉಳಿದಿರುವುದು ಒಂದೇ ದಾರಿ.ಭಗವಂತನಿಗೇ ಶರಣಾಗೋದು ಮಾತ್ರ. ಶರಣಾಗದಿದ್ದರೆ ಉಳಿಗಾಲವೂ ಇಲ್ಲ. ಒಣಗಿದ ಕಸದೊಂದಿಗೆ ಹಸಿಯೂ ಉರಿಯುವ ಸೂಚನೆ ಇದು.ಆದರೆ ಹಿಂದುಗಳಿಗೆ ಸನಾತನ ಸಂಸ್ಕಾರವಾದರೂ ಇದೆ.ಹಿಂದುವೇತರರಿಗೆ? ಮುಂದಿನ ಭವಿಷ್ಯದಲ್ಲಿ ನಮ್ಮ ಪ್ರಾರ್ಥನೆ ಇಷ್ಟೆ.
ಸರ್ವೇ ಜನಾಃ ಸುಖಿನೋ ಭವಂತು ಎಂಬ ವೇದವಾಕ್ಯ ನಮ್ಮಲ್ಲಿ ಮಾತ್ರ ಇರೋದು. ಇಸ್ಲಾಮಿಗರಲ್ಲಿ ಕಾಫೀರರನ್ನು ಕೊಲ್ಲಿರಿ,ಮೂರ್ತಿ ಆರಾಧಕರನ್ನು ಕೊಲ್ಲಿ ಎಂಬ ಧ್ಯೇಯ ವಾಕ್ಯ ಎಂದು ನಾನು ಹೇಳುತ್ತಿಲ್ಲ.ಅವರ ಗುರುಗಳೇ ಹೇಳುತ್ತಿದ್ದಾರೆ.

ಪೂಜ್ಯ ಶ್ರೀ ಚಿನ್ಮಯ ಸಾಗರ ಮಹರಾಜರ ಯುಗಾಂತ್ಯ,ಭಾವಪೂರ್ಣ ಶೃದ್ಧಾಂಜಲಿ

ಮುನಿಶ್ರೀ, ಜಂಗಲ ವಾಲೆ ಬಾಬಾ, ರಾಷ್ಟ್ರ ಸಂತ ಪೂಜ್ಯ ಶ್ರೀ ಚಿನ್ಮಯ ಸಾಗರ ಮಹರಾಜರ ಯುಗಾಂತ್ಯ ಗೊಂಡಿತು ಶ್ರೀ 108…

ಕಾರ್ಗಿಲ್ ಯುದ್ಧದ ವಿಜಯದ ಕಥೆ

ಕಾರ್ಗಿಲ್​ ವಶಪಡಿಸಿಕೊಳ್ಳಲು ನರಿಬುದ್ಧಿ ಉಪಯೋಗಿಸಿದ್ದ ಪಾಕಿಗಳಿಗೆ ಸಿಂಹಸ್ವರೂಪಿ ಭಾರತೀಯ ಯೋಧರು ಎಂದಿಗೂ ನೆನಪಿಸಿಕೊಳ್ಳುವಂತ ಪಾಠ ಕಲಿಸಿದ ವಿಜಯ ದಿವಸವನ್ನು ಇಡೀ…

ಡೆಂಗ್ಯೂ ಜ್ವರ – ರೋಗಲಕ್ಷಣಗಳು, ಚಿಕಿತ್ಸೆ ಮತ್ತು ತಡೆಗಟ್ಟುವಿಕೆ

ಡೆಂಗ್ಯೂ ವೈರಸ್ಗಳಿಂದ ಉಂಟಾಗುವ ಸೋಂಕು, ಇದರಲ್ಲಿ ನಾಲ್ಕು ವಿಭಿನ್ನ ಸಿರೊಟೈಪ್ಗಳಿವೆ. ಸಿರೊಟೈಪ್ ಸೂಕ್ಷ್ಮಜೀವಿಗಳ ಗುಂಪುಗಳನ್ನು ಅತ್ಯಂತ ನಿಕಟ ಸಂಬಂಧ ಹೊಂದಿದೆ,…

ನಗರಗಳ ವಿಕೇಂದ್ರೀಕರಣದ ಅಗತ್ಯ: ಒಂದು ಜಿಜ್ಞಾಸೆ

ಅಬ್ಬಕ್ಕ ವಿಶೇಷ(28-6-2019)ದೆಹಲಿ, ಮುಂಬೈ, ಕೊಲ್ಕೊತ್ತಾ ಮತ್ತು ಚೆನ್ನೈಯಂತಹ ಮಹಾನಗರಗಳು ಬೆಳೆಬೆಳೆದು ಕಾಲಿಡಲು ತೆರಪಿಲ್ಲದಂತಾಗಿದೆ. ಇನ್ನು ಅವು ಬೆಳೆಯುವುದೆಲ್ಲಿಗೆ? ಎರಡನೆಯ ಹಂತದ…

ತುಳುನಾಡಿನ ದೈವ ದೇವರುಗಳ ವಿಶೇಷತೆ ಮತ್ತು ಹಲಸಿನಕಾಯಿ ವಿಶೇಷ!

ಅಬ್ಬಕ್ಕ ವಿಶೇಷ(23-6-2019)ನೆಲದ ನಿಯಮಕ್ಕೆ ಮೊದಲ ಮಣೆ. ನಾವು ಎಲ್ಲಿಗೇ ಹೋಗಲಿ, ಏನೇ ಆಗಿರಲಿ ಸ್ಥಳೀಯ ರೂಢಿ ಆಚಾರ ರೀತಿ ನೀತಿ…

ವಿಪುಲ ಅವಕಾಶವನ್ನು ದೂರ ತಳ್ಳುವ ಸಂಕುಚಿತ ಮನಸ್ಥಿತಿ: ಪಾಂಡಿತ್ಯವಿರುವ ಸಮುದಾಯ ಇಲ್ಲವಾಗಿ ದೇಶ ದುರ್ಬಲವಾವಾಗಬಹುದು!

ಅಬ್ಬಕ್ಕ ನ್ಯೂಸ್ (20-6-2019)ನಮ್ಮ ಶಿಕ್ಷಣಕ್ಷೇತ್ರ ಸಾಗುತ್ತಿರುವ ಹಾದಿ ನೋಡಿದರೆ ದಿಗಿಲಾಗುತ್ತದೆ. ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಎಂಬ ಎರಡು ಕ್ಷೇತ್ರ ಬಿಟ್ಟರೆ…

ಪಾಡ್ದನ ಲೋಕದಲ್ಲೊಂದು ಸುತ್ತು: ಪಾಡ್ದನದ ಸಿಂದಕ್ಕ

ಸಿಂಧು ಗುಜರನ್ನ್. ಮೂಡಣದಿ ಭೂತಾಯಿ ಹಚ್ಚ ಹಸುರನ್ನು ಹೊದ್ದು ಬೆಚ್ಚಗೆ ಮಲಗಿರುವಳೋ ಎಂಬಂತೆ ಬಾಸಾವಾಗುವ ಸಹ್ಯಾದ್ರಿಯ ತಪ್ಪಲು. ಪಡುವಣದಿ ಮುಗಿಲೆತ್ತರಕ್ಕೆ…

Related Post