July 11, 2020

ಕರಾವಳಿ

ದಕ್ಷಿಣ ಕನ್ನಡದಲ್ಲಿ ಇಂದು 186 ಪಾಸಿಟಿವ್

ಮಂಗಳೂರು(11ಜು/2020): ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಕೂಡ ಕೊರೋನಾ ಸ್ಪೋಟ.ಮಂಗಳೂರಿನಲ್ಲಿ ಇಂದು ಬರೋಬ್ಬರಿ 186 ಪಾಸಿಟಿವ್ ಪತ್ತೆ.ದಿನೇ ದಿನೇ ಕರಾವಳಿಯಲ್ಲಿ ಹೆಚ್ಚಾಗುತ್ತಿದೆ ಸೋಂಕಿತರ ಸಂಖ್ಯೆ.ILI – 64 ಮಂದಿಗೆ ಕೊರೋನಾ ಪಾಸಿಟಿವ್.ಪ್ರಾಥಮಿಕ ಸಂಪರ್ಕದಿಂದ 37 ಪಾಸಿಟಿವ್.ಸಂಪರ್ಕವೇ ಪತ್ತೆಯಾಗದ 32 ಮಂದಿಗೆ ಕೊರೋನಾ ಪಾಸಿಟಿವ್.SARI – 17 ಮಂದಿಗೆ ಕೊರೋನಾ ಪಾಸಿಟಿವ್.ರೆಂಡಮ್ ಟೆಸ್ಟ್ ನಿಂದ 13 ಮಂದಿಗೆ ಪಾಸಿಟಿವ್.ವಿದೇಶದಿಂದ ಬಂದ 10 ಮಂದಿಗೆ ಕೊರೋನಾ ಸೋಂಕು ದೃಢ.ಶಸ್ತ್ರಚಿಕಿತ್ಸೆಯ ಮೊದಲು ಮಾಡಿದ ಟೆಸ್ಟ್ ನಿಂದ 7 ಮಂದಿಗೆ ಕೊರೋನಾ ಪಾಸಿಟಿವ್.ಹೆರಿಗೆಗಿಂತ ಮೊದಲು ಮಾಡಿದ ಟೆಸ್ಟ್‌ ‌ನಲ್ಲಿ‌ 4 ಮಹಿಳೆಯರಿಗೆ ಕೊರೋನಾ ಸೋಂಕು.ಹೊರ‌ಜಿಲ್ಲೆಯಿಂದ ಬಂದ ಇಬ್ಬರಿಗೆ ಕೊರೋನಾ ಪಾಸಿಟಿವ್.ದ.ಕ ಜಿಲ್ಲೆಯಲ್ಲಿ ಒಬ್ಬರಿಂದ ಒಬ್ಬರಿಗೆ ವೇಗವಾಗಿ ಹರಡುತ್ತಿದೆ ಸೋಂಕು.ಪ್ರತಿದಿನ‌ 100 ಕ್ಕೂ ಹೆಚ್ಚು ಪಾಸಿಟಿವ್ ಕೇಸ್ ಗಳು ಪತ್ತೆ.

ಉಳ್ಳಾಲ ಬಂಡಿಕೊಟ್ಯದ ಯುವಕ ಅಪಘಾತದಲ್ಲಿ ಬಲಿ

ಉಳ್ಳಾಲ(11ಜು/2020): ನೇತ್ರಾವತಿ ಸೇತುವೆಯಲ್ಲಿ ನಡೆದ ಅಪಘಾತದಲ್ಲಿ ಯುವಕ ಬಲಿ.
ಸ್ಕೂಟರ್ ಗೆ ಕಾರು ಢಿಕ್ಕಿ ಹೊಡೆದು ಸಿಮೆಂಟ್ ಲಾರಿಯಡಿಗೆ ಸಿಲುಕಿ ಸ್ಕೂಟರ್ ಚಾಲಕ ಸಾವು ಸಂಭವಿಸಿದೆ.
ಹಿಟ್ & ರನ್ ಮಾಡಿದ ಕಾರು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಉಳ್ಳಾಲ ಬಂಡಿಕೊಟ್ಯ ನಿವಾಸಿ ಉಬೇದ್(28) ದುರ್ಮರಣ.
ಜುಲೈ 23 ರಂದು ಉಬೇದ್ ಗೆ ಮದುವೆ ನಿಶ್ಚಯವಾಗಿತ್ತು.ಸಹಸವಾರ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ..ಹಿಟ್ & ರನ್ ಮಾಡಿದ ಸೋಮೇಶ್ವರ ಪುರಸಭಾ ವ್ಯವಸ್ಥಾಪಕ ಕೃಷ್ಣ ಸೇರಿ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮಂಗಳೂರು ದಕ್ಷಿಣ ಸಂಚಾರಿ ಠಾಣೆಯಲ್ಲಿ ಪ್ರಕರಣ.

ಸರ್ವಸ್ವವನ್ನೂ ಯಕ್ಷಗಾನ ಕಲೆಗೆ ಅರ್ಪಿಸಿದ ಮಹಾನ್ ಪುರುಷ ಹೊಸ್ತೋಟ: ಡಾ.ಎಂ.ಪ್ರಭಾಕರ ಜೋಶಿ

ಕೊಣಾಜೆ(11ಜು/2020): ಹೊಸ್ತೋಟ ಮಂಜುನಾಥ ಭಾಗವತರು ಯಕ್ಷಗಾನದ ಪ್ರಾತಿನಿಧಿಕ, ಅಭಯ ಚೈತನ್ಯ,ಅಸಾಧಾರಣ ಚೇತನರಾಗಿದ್ದಾರೆ ಮಾತ್ರವಲ್ಲದೆ ಸರ್ವಸ್ವವನ್ನೂ ಯಕ್ಷಗಾನ ಕಲೆಗೆ ಅರ್ಪಿಸಿದ ಮಹಾನ್ ಪುರುಷರಾಗಿದ್ದಾರೆ ಎಂದು ವಿದ್ವಾಂಸ ಪ್ರಭಾಕರ ಜೋಶಿಯವರು ಹೇಳಿದರು.
ಅವರು ಮಂಗಳೂರು‌ ವಿಶ್ವವಿದ್ಯಾಲಯದ ಡಾ.ಪಿ.ದಯಾನಂದ ಪೈ ಮತ್ತು ಶ್ರೀ ಪಿ.ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ ಇದರ ಆಶ್ರಯದಲ್ಲಿ ಶುಕ್ರವಾರ ಜಾಲತಾಣದಲ್ಲಿ‌ ನೇರಪ್ರಸಾರದ ಮೂಲಕ ನಡೆದ ಹೊಸ್ತೋಟ ಸ್ಮೃತಿ ಸಂಜೆ ಹಾಗೂ ತಾಳಮದ್ದಳೆ ಕಾರ್ಯಕ್ರಮದಲ್ಲಿ ಹೊಸ್ತೋಟ ಸ್ಮ್ರತಿ ಸ್ಮರಣೆಯನ್ನು ನೆರವೇರಿಸಿ ಮಾತನಾಡಿದರು.
ಹೊಸ್ತೋಟರು ಯಕ್ಷಗಾನದಲ್ಲಿ ಭಗವತ್ತ್ ತತ್ವ ತಿಳಿದವರಾಗಿದ್ದಾರೆ.ಎಲ್ಲ ವಿಭಾಗದ ಮೊದಲ ದರ್ಜೆಯ ಪಂಡಿತರಾಗಿ ಗುರುತಿಸಿಕೊಳ್ಳುವ ಅವರು ಸಮರ್ಪಿತ, ವ್ಯವಸ್ಥಿತ, ನಿರ್ಭೀತ, ವಿರಳ ವ್ಯಕ್ತಿಯಾಗಿದ್ದಾರೆ. ಅವರ ಕಲಾ ಚೈತನ್ಯ ಯಕ್ಷಗಾನದ ಕ್ಷೇತ್ರದಲ್ಲಿ‌ಇನ್ನಷ್ಟು ಉದ್ಭವಿಸಲಿ ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದಂತಹ ಮಂಗಳೂರು ವಿವಿ ಕುಲಪತಿ ಪ್ರೊ. ಪಿ.ಎಸ್.ಯಡಪಡಿತ್ತಾಯ ಅವರು ಮಾತನಾಡಿ, ಹೊಸ್ತೋಟ ಮಂಜುನಾಥ ಭಾಗವತರುಯಕ್ಷಗಾನ ಕ್ಷೇತ್ರದಲ್ಲಿ ಮಾಡಿದ ಸಾಧನೆ ಅಪಾರ.ಯಕ್ಷಗಾನ ಸಂಪ್ರದಾಯವನ್ನು ಮುಂದಿನ ತಲೆಮಾರಿಗೆ ದಾಟಿಸುವ ಕೆಲಸವನ್ನು ಯಕ್ಷಗಾನ ಅಧ್ಯಯನ ಕೇಂದ್ರ ಮಾಡುತ್ತಾ ಇದೆ. ಕೇಂದ್ರವು ದಶಮಾನೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಯೋಜನೆಯನ್ನು ರೂಪಿಸಿಕೊಂಡಿದ್ದು ವಿವಿಯಿಂದ ಎಲ್ಲಾ ರೀತಿಯ ಸಹಕಾರವನ್ನು ನೀಡುವುದಾಗಿ ಹೇಳಿದರು.
ಕಾರ್ಯಕ್ರಮದಲ್ಲಿ ಯಕ್ಷಗಾನ ಪೋಷಕರಾದ‌‌ ನಾರಾಯಣ ಭಟ್ ಕೊಡಕ್ಕಲ್ಲು ಅವರು ಅತಿಥಿಯಾಗಿ ಭಾಗವಹಿಸಿದ್ದರು.
ಯಕ್ಷಗಾನ ಅಧ್ಯಯನ ಕೇಂದ್ರದ ನಿರ್ದೇಶಕರಾದ ಪ್ರೊ.ಶ್ರೀಪತಿ ಕಲ್ಲೂರಾಯ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಯಕ್ಷಗಾನ ಅಧ್ಯಯನ ಕೇಂದ್ರದ ಸತೀಶ್ ಕೊಣಾಜೆ ವಂದಿಸಿದರು. ಯಕ್ಷಮಂಗಳ ವಿದ್ಯಾರ್ಥಿ ಪುರುಷೋತ್ತಮ ಅವರು ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಹೊಸ್ತೋಟ ಮಂಜುನಾಥ ಭಾಗವತರು ವಿರಚಿತ ಶ್ರೀರಾಮ ನಿರ್ಯಾಣ ಯಕ್ಷಗಾನ ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ಭವ್ಯಶ್ರೀ ಕುಲ್ಕುಂದ, ಸವಿನಯ ನೆಲ್ಲಿತೀರ್ಥ, ಯಜ್ಞೇಶ್ ರೈ ಕಟೀಲು ಭಾಗವಹಿಸಿದ್ದರು.
ಅರ್ಥಧಾರಿಗಳಾಗಿ ಡಾ.ಎಂ.ಪ್ರಭಾಕರ ಜೋಶಿ, ಉಜಿರೆ ಅಶೋಕ್ ಭಟ್, ಭಾಸ್ಕರ ರೈ ಕುಕ್ಕುವಳ್ಳಿ, ಪ್ರೊ.ಶ್ರೀಪತಿ ಕಲ್ಲೂರಾಯ, ಮೇಘಶ್ರೀ ಕಜೆ ಅವರು ಭಾಗವಹಿಸಿದ್ದರು. ಅಬ್ಬಕ್ಕ ಯೂಟ್ಯೂಬ್ ಚಾನೆಲ್ ಮೂಲಕ ಕಾರ್ಯಕ್ರಮದ ನೇರಪ್ರಸಾರಕ್ಕೆ ವ್ಯವಸ್ಥೆ ಮಾಡಲಾಗಿತ್ತು.
ಯಕ್ಷಗಾನ ಅಧ್ಯಯನ ಕೇಂದ್ರವು ಕಳೆದ ಹತ್ತು ವರ್ಷಗಳಿಂದ ಹತ್ತು ಹಲವಾರು ಯಕ್ಷಗಾನ ಚಟುವಟಿಕೆಗಳನ್ನು ನಡೆಸಿಕೊಂಡು ಯಶಸ್ವಿಯಾಗಿ ಮುನ್ನಡೆಯುತ್ತಿದ್ದು ಮುಂದೆ ನಡೆಯಲಿರುವ ದಶಮ ಸಂಭ್ರಮ ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ ಡಾ.ದಯಾನಂದ ಪೈ ಅವರಲ್ಲಿ ಚರ್ಚಿಸಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಮಂಗಳೂರು ವಿವಿ ಕುಲಪತಿ
ಪ್ರೊ.ಪಿ.ಎಸ್.ಯಡಪಡಿತ್ತಾಯ ಹೇಳಿದರು.

ಪೊಳಲಿ ಕ್ಷೇತ್ರಕ್ಕೆ ಬೇಟಿ ನೀಡಿದ ಶಿಕ್ಷಣ ಸಚಿವರು

ಬಂಟ್ವಾಳ(10ಜು/2020): ಎಸ್ಸೆಸ್ಸೆಲ್ಸಿ ಪರೀಕ್ಷೆ ಯಶಸ್ವಿಯಾಗಿ ಮುಗಿದ ಹಿನ್ನೆಲೆ ರಾಜ್ಯ ಶಿಕ್ಷಣ ಸಚಿವ ಎಸ್‌‌.ಸುರೇಶ್‌ ಕುಮಾರ್‌ ಅವರು ಪೊಳಲಿ ರಾಜರಾಜೇಶ್ವರಿ ದೇವಸ್ಥಾನಕ್ಕೆ ಇಂದು ಭೇಟಿ ನೀಡಿದರು.
ಈ ಸಂದರ್ಭ ದೇವಸ್ಥಾನದಲ್ಲಿ ಕಾಲಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದಿದ್ದ ಕೌಶಿಕ್‌‌‌ ನನ್ನು ಮತ್ತು ಆತನ ತಾಯಿಯ ಜೊತೆಗೆ ಭೇಟಿ ಮಾಡಿ ಮಾತನಾಡಿದ್ದು, ಆತನ ಪಠ್ಯೇತರ ಚಟುವಟಿಕೆಗಳ ಬಗ್ಗೆ ವಿಚಾರಿಸಿದರು. ಸಾಮಾಜಿಕ ಜಾಲತಾಣದಲ್ಲಿ ನಿನ್ನ ಸಾಧನೆಯ ಬಗ್ಗೆ ಬರೆದುಕೊಂಡಿದ್ದೆ ಎಂದು ತಿಳಿಸಿದರು. ಬಳಿಕ ಶಿಕ್ಷಣ ಸಚಿವರು ಆಪ್ತ ಸಹಾಯಕನನ್ನು ಕರೆದು ಫೋಟೊ ತೆಗೆಸಿಕೊಂಡರು.ವಿದ್ಯಾರ್ಥಿನಿಯೊಬ್ಬಳು ಸಚಿವ ಚಿತ್ರವನ್ನು ಬರೆದು ಉಡುಗೊರೆಯಾಗಿ ಸಚಿವರಿಗೆ ನೀಡಿದಳು.
ಶಿಕ್ಷಣ ಸಚಿವರು ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡುವ ದಾರಿ ನಡುವೆ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರಕ್ಕೆ ಭೇಟಿ ನೀಡಿದ್ದು, ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಡಾ.ಕಲ್ಲಡ್ಕ ಪ್ರಭಾಕರ್‌‌‌‌ ಭಟ್‌ ಅವರೊಂದಿಗೆ ಮಾತುಕತೆ ನಡೆಸಿದರು. ಈ ಬಾರಿ ಕೊರೊನಾದಿಂದಾಗಿ ಶಿಕ್ಷಣಕ್ಕೆ ಅಡ್ಡಿಯಾಗಿದ್ದು, ಈ ವಿಚಾರವಾಗಿ ಶೈಕ್ಷಣಿಕ ಚಟುವಟಿಕೆಯ ಬಗ್ಗೆ ಮಾಹಿತಿ ಹಾಗೂ ಚರ್ಚೆ ನಡೆಸಿದ್ದಾರೆ.

ಹೊಸಬೆಟ್ಟು ನಿವಾಸಿ ಕರೋನಾಗೆ ಬಲಿ

ಮಂಗಳೂರು(10ಜು/2020): ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನಾಗೆ ಮತ್ತೊಂದು ಬಲಿ.ಮಂಗಳೂರು ಹೊರವಲಯದ ಹೊಸಬೆಟ್ಟು ನಿವಾಸಿ 35 ವರ್ಷದ ಯುವಕ ಕೊರೋನಾಗೆ ಬಲಿಯಾಗಿದ್ದಾರೆ. ಮಂಗಳೂರಿನ ವೆನ್ ಲಾಕ್ ಕೋವಿಡ್ ಆಸ್ಪತ್ರೆಯಲ್ಲಿ ಸಾವು,ದ.ಕ ಜಿಲ್ಲೆಯಲ್ಲಿ ಕೊರೋನಾ ಸಾವಿನ ಸಂಖ್ಯೆ 31ಕ್ಕೆ ಏರಿಕೆ ಯಾಗಿದೆ.

ಖಾದರ್ ಗನ್ ಮ್ಯಾನ್ ಗೆ ಕರೋನ ದೃಡ

ಮಂಗಳೂರು(8ಜು/2020): ಶಾಸಕ ಯು.ಟಿ.ಖಾದರ್ ಗನ್ ಮ್ಯಾನ್ ಗೆ ಕೊರೋನಾ ಪಾಸಿಟಿವ್ ದೃಡವಾಗಿದೆ.ಮಂಗಳೂರಿನ ಡಿಎಆರ್ ಪೊಲೀಸ್ ಸಿಬ್ಬಂದಿಗೆ ಕೊರೋನಾ ಸೋಂಕು ತಗುಲಿದೆ.ಖಾದರ್ ಜೊತೆ ಎಸ್ಕಾರ್ಟ್ ವಾಹನದಲ್ಲಿದ್ದ ಪೊಲೀಸ್ ಸಿಬ್ಬಂದಿ ಜೊತೆಗೆ ಎಸ್ಕಾರ್ಟ್ ವಾಹನದಲ್ಲಿದ್ದ ಉಳಿದ ಮೂವರನ್ನು ಕ್ವಾರಂಟೈನ್ ಒಳಪಡಿಸಲಾಗಿದೆ.ಕಳೆದ ಹತ್ತು ದಿನದ ಹಿಂದೆ ಅನಾರೋಗ್ಯ ಎಂದು‌ ಮನೆಯಲ್ಲಿದ್ದ ಸಿಬ್ಬಂದಿಗೆ ಇಂದು ಬಂದ ವರದಿಯಲ್ಲಿ ಕೊರೋನಾ ಪಾಸಿಟಿವ್ ದೃಡವಾಗಿದೆ.

ಕಲ್ಕತ್ತಾ ಮೇಸ್ತ್ರಿಗಳನ್ನು ವಿಮಾನದಲ್ಲಿ ಮಂಗಳೂರಿಗೆ ಕರೆಸಿದ ಮೆರಿಯನ್ ಸಂಸ್ಥೆ

ಮಂಗಳೂರು(8ಜು/2020): ಲಾಕ್‌ಡೌನ್ ಬಳಿಕ ಕಟ್ಟಡ ಕಾರ್ಮಿಕರ ಕೊರತೆ ಉಂಟಾಗಿದ್ದು, ನಗರದ ಮೆರಿಯನ್ ಪ್ರೊಜೆಕ್ಟ್ಸ್‌ ಸಂಸ್ಥೆಯು ಕೋಲ್ಕೊತ್ತಾದಿಂದ ಐವರು ಮೇಸ್ತ್ರಿಗಳನ್ನು ವಿಮಾನದ ಮೂಲಕ ಕರೆಸಿಕೊಂಡಿದೆ.ಕ್ವಾರಂಟೈನ್‌ ವೆಚ್ಚವನ್ನೂ ಕಂಪನಿಯೇ ಭರಿಸುತ್ತಿದೆ.
ಸಂಸ್ಥೆಯು ಕೋಲ್ಕೊತ್ತಾದಿಂದ ಐವರು ಪರಿಣಿತ ಮೇಸ್ತ್ರಿಗಳನ್ನು ಮೊದಲು ವಿಮಾನದ ಮೂಲಕ ಕರೆಸಿಕೊಂಡಿದೆ. ಕೋಲ್ಕೊತ್ತಾದಿಂದ ಬೆಂಗಳೂರಿಗೆ ವಿಮಾನ ಹಾಗೂ ಅಲ್ಲಿಂದ ಪ್ರತ್ಯೇಕ ವಾಹನದ ಮೂಲಕ ನಗರಕ್ಕೆ ಕರೆಸಿಕೊಳ್ಳಲಾಗಿದೆ.ತಮ್ಮ ಊರಿಗೆ ತೆರಳಿದ್ದು, ವಾಪಸ್ ಬರಲು ಸೌಲಭ್ಯಗಳಿಲ್ಲ. ಅದಕ್ಕಾಗಿ ಮುಕ್ತಾಯ ಹಂತದಲ್ಲಿರುವ ಕಟ್ಟಡಗಳನ್ನು ಪೂರ್ಣಗೊಳಿಸಲು ವಿಮಾನದ ಮೂಲಕ ಕರೆಸಿಕೊಳ್ಳಲಾಗಿದೆ.ಸುಮಾರು 300 ಜನ ಕಾರ್ಮಿಕರಲ್ಲಿ ಈಗ 170 ಮಂದಿ ವಾಪಾಸು ಬರುವ ಸಿದ್ದತೆಯಲ್ಲಿ ಇದ್ದಾರೆ.ಊರಿಗೆ ತೆರಳಿದ್ದ ಉಳಿದ ಕಾರ್ಮಿಕರೂ ವಾಪಸ್‌ ಬರಲು ಸಿದ್ಧರಾಗಿದ್ದಾರೆ.ಕೋಲ್ಕತ್ತಾದಿಂದ ಮಂಗಳೂರಿಗೆ ಬಾಡಿಗೆ ವಿಮಾನದ ಮೂಲಕ ಕಾರ್ಮಿಕರನ್ನು ಕರೆಸಿಕೊಳ್ಳಲು ಸಿದ್ಧತೆ ಆಗುತ್ತಿದೆ.

ಮತ್ತೆ ಕರಾವಳಿಯಲ್ಲಿ ಕರೋನ ಸ್ಫೋಟ

ಮಂಗಳೂರು(7ಜುಲೈ/2020): ಕರಾವಳಿಯಲ್ಲಿ ಕೊರೋನಾ ಸ್ಪೋಟ‌,ಇಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 83 ಮಂದಿಗೆ ಕೊರೋನಾ ಪಾಸಿಟಿವ್,ದಕ್ಷಿಣ ಕನ್ನಡ ಜಿಲ್ಲಾಡಳಿತದಿಂದ ಹೆಲ್ತ್ ಬುಲೆಟಿನ್ ಬಿಡುಗಡೆ
ಪ್ರಾಥಮಿಕ ಸಂಪರ್ಕದಿಂದ 48 ಜನರಿಗೆ ಪಾಸಿಟಿವ್, ಸಂಪರ್ಕ‌ ಪತ್ತೆಯಾಗದ 3 ಮಂದಿಗೆ ಪಾಸಿಟಿವ್,
ಉಳ್ಳಾಲ ರಯ್ಯಂಡಮ್ ಟೆಸ್ಟ್ ನ 3 ಜನರಿಗೆ ಕೊರೋನಾ,ಶಸ್ತ್ರಚಿಕಿತ್ಸೆ ಮಾಡೋ ಮೊದಲು ಮೂವರಿಗೆ ಕೊರೋನಾ‌ ಪಾಸಿಟಿವ್,ಹೆರಿಗೆಯ ಮೊದಲು‌ ಮಾಡಿದ ಟೆಸ್ಟ್ ನಲ್ಲಿ ಓರ್ವ ಮಹಿಳೆಗೆ ಪಾಸಿಟಿವ್,ಸೆಕೆಂಡರಿ ಕಾಂಟಾಕ್ಟ್ ನಿಂದ 2 ಕೇಸ್,
ಹೊರ ಜಿಲ್ಲೆಯಿಂದ ಬಂದ ಇಬ್ಬರಿಗೆ ಕೊರೋನಾ ಪಾಸಿಟಿವ್ ವರದಿಯಾಗಿದೆ.

ಉಳ್ಳಾಲ: ಕರೋನ ಸೋಂಕಿಗೆ ಎರಡು ಬಲಿ

ಮಂಗಳೂರು(6ಜು/2020): ದ.ಕ ಜಿಲ್ಲೆಯಲ್ಲಿ ಕೊರೋನಾಗೆ ಎರಡು ಬಲಿ.ಮಂಗಳೂರಿನ ತೊಕ್ಕೊಟ್ಟು ಬಳಿ ಸಂತೋಷ್ ನಗರ ನಿವಾಸಿ ಸಾವು.
52 ವರ್ಷದ ಗಂಡಸು ಮಾರಕ ಕೊರೋನಾಗೆ ಬಲಿ.
ಹೃದಯರೋಗ ಮತ್ತು ನ್ಯುಮೋನಿಯಾದಿಂದ ಬಳಲುತ್ತಿದ್ದ ವ್ಯಕ್ತಿ.
52 ವರ್ಷದ ಕೊರೋನಾ ಸೋಂಕಿತ ಮಹಿಳೆ ಸಾವು
ಮಂಗಳೂರಿನ ವೆನ್ಲಾಕ್ ಕೋವಿಡ್ ಆಸ್ಪತ್ರೆಯಲ್ಲಿ ಸಾವು.ಉಳ್ಳಾಲ ಮೂಲದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಸಾವು.ಕೊರೋನಾಗೆ ಇಂದು ಎರಡನೇ ಬಲಿ.ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 24 ಕ್ಕೆ ಏರಿಕೆ‌.

ಗುರುಪುರ:69 ಮನೆಗಳು ಬೊಂಡಂತಿಲಕ್ಕೆ ಸ್ಥಳಾಂತರ

ಬೆಂಗಳೂರು: ಗುರುಪುರದ ಬಳಿ ಗುಡ್ಡ ಕುಸಿದು ಇಬ್ಬರು ಮಕ್ಕಳು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಂತಾಪ ಸೂಚಿಸಿದ್ದು, ಮಕ್ಕಳ ಕುಟುಂಬಗಳಿಗೆ ತಲಾ 5 ಲಕ್ಷ ರೂ.ಗಳ ಪರಿಹಾರ ಘೋಷಿಸಿದ್ದಾರೆ. ಮಂಗಳೂರು ಹೊರವಲಯದ ಗುರುಪುರ ಬಳಿ ಗುಡ್ಡ ಕುಸಿತದಿಂದಾಗಿ ಇಬ್ಬರು ಮಕ್ಕಳು ಮಣ್ಣಿನಡಿ ಸಿಲುಕಿದ್ದರು. ಸತತ ಐದು ಗಂಟೆಯಿಂದ ಎನ್‍ಡಿಆರ್‍ಎಫ್ ಸಿಬ್ಬಂದಿ ಹಾಗೂ ಪೊಲೀಸರು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದರು. 16 ವರ್ಷದ ಅಣ್ಣ ಸಫ್ವಾನ್ ಹಾಗೂ 10 ವರ್ಷದ ತಂಗಿ ಸಹಲಾ ಇಬ್ಬರ ಮೃತ ದೇಹವನ್ನು ಹೊರ ತೆಗೆಯಲಾಗಿದೆ.
ಈ ಮನೆಯಲ್ಲಿ ಸುಮಾರು 6 ಜನ ವಾಸವಿದ್ದರು. ಗುಡ್ಡ ಕುಸಿಯುತ್ತಿರುವುದು ತಿಳಿಯುತ್ತಿದ್ದಂತೆ ಮನೆಯವರು ಹೊರಗಡೆ ಓಡಿ ಬಂದಿದ್ದಾರೆ. ಆದರೆ ಇಬ್ಬರು ಮಕ್ಕಳು ಮನೆಯಲ್ಲಿ ಮಲಗಿದ್ದರು. ಹೀಗಾಗಿ ಮನೆಯಲ್ಲೇ ಮಣ್ಣಿನಡಿ ಸಿಲುಕಿ ಸಾವನ್ನಪ್ಪಿದ್ದಾರೆ
ಮುಖ್ಯಮಂತ್ರಿಗಳು ಸಂತಾಪ ಸೂಚಿಸಿ ಇಬ್ಬರು ಮಕ್ಕಳ ಕುಟುಂಬಕ್ಕೆ ತಲಾ 5 ಲಕ್ಷ ರೂ.ಪರಿಹಾರ ಘೋಷಿಸಿದ್ದಾರೆ. ಗುಡ್ಡ ಕುಸಿದು ಇಬ್ಬರು ಮಕ್ಕಳು ಸಾವನ್ನಪ್ಪಿರುವ ಘಟನೆ ದುಃಖಕರ. ರಕ್ಷಣಾ ಕಾರ್ಯದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್, ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಜಿಲ್ಲಾಧಿಕಾರಿಗಳು ಭಾಗಿಯಾಗಿದ್ದರು. ಜಿಲ್ಲಾಡಳಿತದ ಸಕಾಲಿಕ ಪ್ರಯತ್ನದ ಹೊರತಾಗಿಯೂ ಮಕ್ಕಳನ್ನು ಬದುಕಿಸಿಕೊಳ್ಳಲು ಸಾಧ್ಯವಾಗದಿರುವುದು ವಿಷಾದನೀಯ ಎಂದು ತಿಳಿಸಿದ್ದಾರೆ.
ಈಗಾಗಲೇ 19 ಮನೆಗಳಿಂದ 118 ಮಂದಿಯನ್ನು ತೆರವುಗೊಳಿಸಿ, ಸ್ಥಳಾಂತರಿಸಲಾಗಿದೆ. ಉಳಿದ 60 ಮನೆಗಳಿಂದ ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸುವ ಕಾರ್ಯ ನಡೆಯುತ್ತಿದೆ. ಬೊಂಡಂತಿಲ ಗ್ರಾಮದ ಬಳಿ ಗುರುತಿಸಿರುವ ಜಾಗದಲ್ಲಿ ಮನೆಗಳನ್ನು ನಿರ್ಮಿಸಿ ಎಲ್ಲ ಸಂತ್ರಸ್ತರನ್ನು ಸ್ಥಳಾಂತರಿಸಲು ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ ಎಂದು ಸಿಎಂ ತಿಳಿಸಿದ್ದಾರೆ.