September 23, 2020

ಕಾಸರಗೋಡು

ಕಾಸರಗೋಡು ಜಿಲ್ಲೆಯಿಂದ ಉದ್ಯೋಗಿಗಳಿಗೆ ಮಾತ್ರ ಕರ್ನಾಟಕಕ್ಕೆ ನಿತ್ಯ ಸಂಚಾರ

ಮಂಗಳೂರು(3ಜೂನ್/2020): ಮಂಗಳೂರು-ಕಾಸರಗೋಡು ಮಧ್ಯೆ ಉದ್ಯೋಗಿಗಳ ನಿತ್ಯ ಸಂಚಾರಕ್ಕೆದ.ಕ ಜಿಲ್ಲಾಧಿಕಾರಿ ಒಪ್ಪಿಗೆ.
ದ.ಕ ಜಿಲ್ಲಾಧಿಕಾರಿ ಸಿಂಧೂ.ಬಿ.ರೂಪೇಶ್ ನೀಡಿದ ಆದೇಶದಂತೆ ಪಾಸ್ ಬಳಸಿ ನಿತ್ಯ ಸಂಚರಿಸಲು ಅವಕಾಶ ಕಲ್ಪಿಸಿದ ದ.ಕ ಜಿಲ್ಲಾಡಳಿತ ಉದ್ಯೋಗಿಗಳು, ವಿದ್ಯಾರ್ಥಿಗಳು, ಆರೋಗ್ಯ ಸೇವಕರು ಮತ್ತು ಸರ್ಕಾರಿ ನೌಕರರಿಗಷ್ಟೇ ಅವಕಾಶ ನೀಡಿದೆ.
ಕಾಸರಗೋಡಿನಲ್ಲಿರುವ ಗಡಿನಾಡ ಕನ್ನಡಿಗರಿಗೆ ಉದ್ಯೋಗ ನಿಮಿತ್ತ ಸಂಚಾರಕ್ಕೆ ಅವಕಾಶ,
ಮಂಗಳೂರಿನಲ್ಲಿ ಉದ್ಯೋಗ ಮಾಡುವ ಹಿನ್ನೆಲೆ ಉಭಯ ಜಿಲ್ಲೆಗಳ ಮಧ್ಯೆ ಒಪ್ಪಂದದಂತೆ Dkdpermit ವೆಬ್ ಸೈಟ್ ನಲ್ಲಿ ರಿಜಿಸ್ಟರ್ ಮಾಡಿ ಪಾಸ್ ಪಡೆಯಲು ಸೂಚನೆ ನೀಡಿದೆ.
ಉದ್ಯೋಗ ಹೊರತು ಅನ್ಯ ಕಾರ್ಯಕ್ಕೆ ಪಾಸ್ ಬಳಸಿದರೆ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ.
ನಿತ್ಯ ಥರ್ಮಲ್ ಸ್ಕ್ಯಾನ್ ಮತ್ತು ಆರೋಗ್ಯ ತಪಾಸಣೆ ಕಡ್ಡಾಯ,ಪಾಸ್ ಗೆ ಅರ್ಜಿ ಸಲ್ಲಿಸಲು ಆಧಾರ್, ಉದ್ಯೋಗ ವಿಳಾಸ, ಮಾಹಿತಿ ಸಲ್ಲಿಸುವುದು ಕಡ್ಡಾಯ ಎಂತು ಪ್ರಕಟಿಸಿದ್ದಾರೆ.

ಯೆನೆಪೋಯಾದಲ್ಲಿ ಹರೇಕಳ ಹಾಜಬ್ಬ ಹಾಗೂ ಡಾ.ಹಬೀಬ್ ರಹಮಾನ್ ಗೆ ಅಭಿನಂದನೆ ಕಾರ್ಯಕ್ರಮ

ಅಬ್ಬಕ್ಕ ನ್ಯೂಸ್ (28.01.2020)ಕೊಣಾಜೆ: ಯಾವುದೇ ಫಲಾಪೇಕ್ಷೆ ಇಲ್ಲದೆ ಪ್ರಾಮಾಣಿಕತೆಯೊಂದಿಗೆ ನಿಸ್ವಾರ್ಥವಾಗಿ ಸಮಾಜಕ್ಕೆ ಕೊಡುಗೆ ನೀಡಿದರೆ ಒಂದಲ್ಲ ಒಂದು ದಿನ ಅವರನ್ನು…

ಅಂತಾರಾಷ್ಟ್ರೀಯ ಮಾಸ್ಟರ್ ಅಥ್ಲೆಟಿಕ್ಸ್ ಗೆ ತಲಪಾಡಿ ನಾರ್ಲದ ಶ್ರೀಮತಿ ಭವ್ಯಾ ಸಂದೀಪ್ ಶೆಟ್ಟಿ ಅಯ್ಕೆ

ಮಂಗಳೂರು(15ಜನವರಿ/20): ಕೇರಳ ಕೊಝಿಕೋಡ್ ನಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಮಾಸ್ಟರ್ ಅಥ್ಲೆಟಿಕ್ಸ್ ಚಾಂಪಿಯನ್ ಶಿಫ್-2020 ರಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ ಭಾಗವಹಿಸಿದ ತಲಪಾಡಿ ನಾರ್ಲದ ಶ್ರೀಮತಿ ಭವ್ಯಾ ಸಂದೀಪ್ ಶೆಟ್ಟಿ ಅವರು 400 ಹರ್ಡಲ್ ನಲ್ಲಿ ಚಿನ್ನದ ಪದಕ ,4×100 ರಿಲೇ ಯಲ್ಲಿ ಬೆಳ್ಳಿಯ ಪದಕ,4×400ರಲ್ಲಿ ಬೆಳ್ಳಿಯ ಪದಕ ಗಳಿಸಿದ ಇವರು ಇಂಡೋನೇಷ್ಯಾ ದಲ್ಲಿ ಜರಗುವ ಅಂತಾರಾಷ್ಟ್ರೀಯ ಮಾಸ್ಟರ್ ಅಥ್ಲೆಟಿಕ್ಸ್ ಗೆ ಅಯ್ಕೆಯಾಗಿದ್ದಾರೆ.

ಮಾಣಿ: ಅಪಘಾತಕ್ಕೆ ತಲಪಾಡಿ ನಿವಾಸಿ ಸಾವು

ವಿಟ್ಲ(18ಡಿ/2019): ಮಂಗಳವಾರ ರಾತ್ರಿ ಮಾಣಿ ಸಮೀಪ ಕೊಡಾಜೆಯಲ್ಲಿ ಸಂಭವಿಸಿದ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಯುವಕ ಸಿರಾಜ್ (25) ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಬಿ.ಮೂಡ ಗ್ರಾಮದ ತಲಪಾಡಿ ನಿವಾಸಿ, ದಿ.ಹಸನಬ್ಬ ಅವರ ಪುತ್ರ ಸಿರಾಜ್ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿರುವುದಾಗಿ ಆಸ್ಪತ್ರೆ ಮೂಲಗಳು ತಿಳಿಸಿವೆ.ಸಮಸ್ತ ಸಮ್ಮೇಳನಕ್ಕೆಂದು ಬಿ.ಮೂಡ ಗ್ರಾಮದ ತಲಪಾಡಿ ನಿವಾಸಿಗಳಾದ ಝುಬೈರ್, ಶರೀಫ್, ಸಿರಾಜ್, ವಳವೂರಿನ ಅರಬನಗುಡ್ಡೆಯ ನಿವಾಸಿಗಳಾದ ಮುಸ್ತಫಾ, ಆಸಿಫ್ ಕಾರೊಂದರಲ್ಲಿ ಮಂಗಳವಾರ ಮಡಿಕೇರಿಗೆ ತೆರಳಿದ್ದರು. ಕಾರ್ಯಕ್ರಮ ಮುಗಿಸಿ ರಾತ್ರಿ ಹಿಂದಿರುಗುವ ವೇಳೆ ಮಾಣಿ ಸಮೀಪದ ಕೊಡಾಜೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕಾರು ಇಲ್ಲಿನ ಮೈಲುಗಲ್ಲಿಗೆ ಢಿಕ್ಕಿ ಹೊಡೆದು, ಉರುಳಿದೆ.ಅಪಘಾತದ ತೀವ್ರತೆಗೆ ಸಿರಾಜ್ ಅವರು ರಸ್ತೆಗೆ ಎಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದರು. ಇವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಚಿಕಿತ್ಸೆಗೆ ಸ್ಪಂದಿಸದೆ ಬುಧವಾರ ಸಾವನ್ನಪ್ಪಿದ್ದಾನೆ. ಉಳಿದ ಪ್ರಯಾಣಿಕರನ್ನು ತುಂಬೆ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಪ್ರಥಮ ಪ್ರದರ್ಶನದಲ್ಲೇ ಭೇಶ್ ಎನಿಸಿಕೊಂಡ ಬಚ್ಚಾಲಿ

ಅಬ್ಬಕ್ಕ ನ್ಯೂಸ್ (2.012.2019)ಮಂಜೇಶ್ವರ:ಭ್ರಾಮರಿ ಕಲಾವಿದರು ಉಪ್ಪಳ ತಂಡವು ಒಂದರ ಮೇಲೊಂದು ಸಮಾಜಸುಧಾರಕ ನಾಟಕಗಳನ್ನು ನೀಡುತ್ತಲಿದೆ. ಮುರಳಿ ಪಾತ್ರ ಸಮಾಜದಲ್ಲಿನೆಲೆಯೂರೋ ವೇಳೆಗೆ…

ಕಣಂತೂರು: 1428ನೇ ಮದ್ಯವರ್ಜನಾ ಶಿಬಿರ ಉದ್ಘಾಟನೆ

ಕಣಂತೂರು(6ನ/2019): ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಮದ್ಯವರ್ಜನಾ ಶಿಬಿರ ವ್ಯವಸ್ಥಾಪನಾ ಸಮಿತಿ, ಬಂಟ್ವಾಳ ತಾಲೂಕು ಜನಜಾಗೃತಿ ವೇದಿಕೆ, ಮುಡಿಪು…

ಅಡ್ಕ ಶ್ರೀ ಬೀರಮಾರ್ಲರ ಉಳ್ಳಾಕ್ಲು ಮಾಡ: ವಿಜ್ಞಾಪನ ಪತ್ರ ಬಿಡುಗಡೆ

ಕಾಸರಗೋಡು(3ನ2019): ಕಾಸರಗೋಡು ಜಿಲ್ಲೆಯ ಬಂದ್ಯೋಡ್ ಸೀರೆ ಗ್ರಾಮದ ಅಡ್ಕ ಶ್ರೀ ಬೀರಮಾರ್ಲರ ಉಳ್ಳಾಕ್ಲು ಮಾಡ ನಿರ್ಮಾಣದ ವಿಜ್ಞಾಪನ ಪತ್ರದ ಬಿಡುಗಡೆ…

ಯಕ್ಷಗಾನ ಕಲಾವಿದ ಬಳ್ಳಮೂಲೆ ಈಶ್ವರ ಭಟ್ ಅಪಘಾತಕ್ಕೆ ಬಲಿ

ಮುಳ್ಳೇರಿಯ(2ನ/2019): ಸಿಮೆಂಟ್ ಸಾಗಾಟ ಮಾಡುತ್ತಿದ್ದ ಲಾರಿ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಗಂಭೀರ ಗಾಯಗೊಂಡು ಯಕ್ಷಗಾನ ಕಲಾವಿದ ಮೃತಪಟ್ಟ…

ಕಾಸರಗೋಡು ಜಿಲ್ಲೆಯ ಶಾಲಾ ಕಾಲೇಜುಗಳಿಗೆ ನಾಳೆ ರಜೆ

ಕಾಸರಗೋಡು(31ಅ/2019): ಕಾಸರಗೋಡು ಜಿಲ್ಲೆಯ ಎಲ್ಲಾ ಶಾಲಾ-ಕಾಲೇಜುಗಳು ನವೆಂಬರ್ ಒಂದರಂದು ರಜೆ ಘೋಷಿಸಿ ಜಿಲ್ಲಾಧಿಕಾರಿ ಡಿ. ಸಜಿತ್ ಬಾಬು ಆದೇಶ ನೀಡಿದ್ದಾರೆ….

ಚಪ್ಪರ ಕುಸಿತ: ನೂರಾರು ವಿದ್ಯಾರ್ಥಿಗಳು ಪಾರು

ಕಾಸರಗೋಡು(25ಅ/2019):ಕಾಸರಗೋಡು ಉಪಜಿಲ್ಲಾ ಶಾಲಾ ಕಲೋತ್ಸವ ನಡೆಯುತ್ತಿರುವ ಬೇಡಗ ಗ್ರಾಮ ಪಂಚಾಯತ್‌ನ ಕೊಳತ್ತೂರು ಶಾಲೆಯಲ್ಲಿ ಹಾಕಲಾಗಿದ್ದ ಚಪ್ಪರ ಮಳೆ ಗಾಳಿಗೆ ಕುಸಿದು…

Related Post