December 5, 2020

ಬಂಟ್ವಾಳ

ಬಂಟ್ವಾಳ: ಬಾಳೆಪುಣೆಯಲ್ಲಿ ಒಂಟಿ ಮಹಿಳೆಯ ಕೊಲೆ ಶಂಕೆ ನಗ್ನ ದೇಹ ಪತ್ತೆ

ಬಂಟ್ವಾಳ(26ಸೆ/2020): ಬಾಳೆಪುಣಿ ಗ್ರಾಮದ ಹೂ ಹಾಕುವ ಕಲ್ಲು ಸಮೀಪದ ಬೆಳ್ಳೇರಿ ಎಂಬಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿದ್ದ ಅವಿವಾಹಿತ ಮಹಿಳೆಯ ಶವ ನಗ್ನ ಸ್ಥಿತಿಯಲ್ಲಿ ಪತ್ತೆಯಾಗಿದ್ದು ದುಷ್ಕರ್ಮಿಗಳು ಅತ್ಯಾಚಾರವೆಸಗಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಬೆಳ್ಳೇರಿ ನಿವಾಸಿ ಕುಸುಮ(50) ಮೃತ ಮಹಿಳೆ. ಅಡಕೆ ತೋಟ ಹೊಂದಿರುವ ಮಹಿಳೆ ಆರ್ಥಿಕವಾಗಿ ಸುಸ್ಥಿತಿಯಲ್ಲಿದ್ದು ಅವಿವಾಹಿತೆಯಾಗಿದ್ದ ಅವರು ಮನೆಯಲ್ಲಿ ಒಂಟಿಯಾಗಿ ವಾಸಿಸುತ್ತಿದ್ದರು. ಹೆಚ್ಚಾಗಿ ಯಾರೊಂದಿಗೂ ಬೆರೆಯುತ್ತಿರಲಿಲ್ಲ ಎನ್ನಲಾಗಿದೆ.yan
ಶುಕ್ರವಾರ ಮಹಿಳೆಯ ಸಹೋದರ ಕರೆ ಮಾಡಿದಾಗ ಸ್ವೀಕರಿಸದ ಹಿನ್ನೆಲೆಯಲ್ಲಿ ಕೆಲಸದ ಮಹಿಳೆ ಮತ್ತು ಸ್ಥಳೀಯರಿಗೆ ಮಾಹಿತಿ ನೀಡಿದ್ದರೆನ್ನಲಾಗಿದೆ. ಆ ವೇಳೆ ಕೃತ್ಯ ಬೆಳಕಿಗೆ ಬಂದಿದೆ.
ಮಹಿಳೆಯ ಮೃತದೇಹ ಸಂಪೂರ್ಣ ನಗ್ನರಾಗಿದ್ದು ಶರೀರದಲ್ಲಿ ಸುಟ್ಟ ಮಾದರಿಯ ಗಾಯಗಳಿವೆ. ಮನೆಯ ಸಿಟ್ ಔಟ್ ನಲ್ಲಿ ಮೊಬೈಲ್ ಮತ್ತು ಕನ್ನಡಕ ಬಿದ್ದಿತ್ತು. ಕಿಟಕಿ ಬಾಗಿಲು ತೆರೆದಿದ್ದು ಅಡುಗೆ ಕೋಣೆಯ ಬಾಗಿಲು ಒಳಗಡೆಯಿಂದಲೇ ಮುಚ್ಚಲಾಗಿತ್ತು ಎನ್ನಲಾಗಿದೆ. ಗ್ಯಾಸ್ ಪೈಪ್ ಎಳೆದು ಹಾಕಿದಂತಿದ್ದು, ಅಡುಗೆ ಒಲೆಯ ಪಕ್ಕ ಪಾತ್ರೆ, ಕರ್ಟನ್, ನೆಲದಲ್ಲಿ ಯಾವುದೋ ವಸ್ತು ಬಟ್ಟೆ ಸುಟ್ಟದ್ದು ಕಂಡು ಬಂದಿದೆ. ಗ್ಯಾಸ್ ಸ್ಫೋಟಗೊಂಡಿಲ್ಲ. ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು ಮನೆ ಕೆಲಸದ‌ ಮಹಿಳೆಯ ಹೇಳಿಕೆಯನ್ನಾಧರಿಸಿ ತನಿಖೆ ಮುಂದುವರಿಸಲಾಗಿದೆ. ಒಂಟಿ ಮಹಿಳೆಯ ಬಗ್ಗೆ ಮಾಹಿತಿ ಇರುವವರೇ ಮನೆಯಲ್ಲಿ ಕಳ್ಳತನಕ್ಕೆಂದು ಬಂದು ದುಷ್ಕೃತ್ಯ ನಡೆಸಿರುವ ಸಾಧ್ಯತೆ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ. ಸ್ಥಳೀಯರು, ಅಡಕೆ ಕೊಂಡೊಯ್ಯುವ ಆಟೋ ಚಾಲಕ ಸೇರಿದಂತೆ ಹಲವರನ್ನು ವಿಚಾರಣೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ .

ಪೊಳಲಿ ಕ್ಷೇತ್ರಕ್ಕೆ ಬೇಟಿ ನೀಡಿದ ಶಿಕ್ಷಣ ಸಚಿವರು

ಬಂಟ್ವಾಳ(10ಜು/2020): ಎಸ್ಸೆಸ್ಸೆಲ್ಸಿ ಪರೀಕ್ಷೆ ಯಶಸ್ವಿಯಾಗಿ ಮುಗಿದ ಹಿನ್ನೆಲೆ ರಾಜ್ಯ ಶಿಕ್ಷಣ ಸಚಿವ ಎಸ್‌‌.ಸುರೇಶ್‌ ಕುಮಾರ್‌ ಅವರು ಪೊಳಲಿ ರಾಜರಾಜೇಶ್ವರಿ ದೇವಸ್ಥಾನಕ್ಕೆ ಇಂದು ಭೇಟಿ ನೀಡಿದರು.
ಈ ಸಂದರ್ಭ ದೇವಸ್ಥಾನದಲ್ಲಿ ಕಾಲಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದಿದ್ದ ಕೌಶಿಕ್‌‌‌ ನನ್ನು ಮತ್ತು ಆತನ ತಾಯಿಯ ಜೊತೆಗೆ ಭೇಟಿ ಮಾಡಿ ಮಾತನಾಡಿದ್ದು, ಆತನ ಪಠ್ಯೇತರ ಚಟುವಟಿಕೆಗಳ ಬಗ್ಗೆ ವಿಚಾರಿಸಿದರು. ಸಾಮಾಜಿಕ ಜಾಲತಾಣದಲ್ಲಿ ನಿನ್ನ ಸಾಧನೆಯ ಬಗ್ಗೆ ಬರೆದುಕೊಂಡಿದ್ದೆ ಎಂದು ತಿಳಿಸಿದರು. ಬಳಿಕ ಶಿಕ್ಷಣ ಸಚಿವರು ಆಪ್ತ ಸಹಾಯಕನನ್ನು ಕರೆದು ಫೋಟೊ ತೆಗೆಸಿಕೊಂಡರು.ವಿದ್ಯಾರ್ಥಿನಿಯೊಬ್ಬಳು ಸಚಿವ ಚಿತ್ರವನ್ನು ಬರೆದು ಉಡುಗೊರೆಯಾಗಿ ಸಚಿವರಿಗೆ ನೀಡಿದಳು.
ಶಿಕ್ಷಣ ಸಚಿವರು ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡುವ ದಾರಿ ನಡುವೆ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರಕ್ಕೆ ಭೇಟಿ ನೀಡಿದ್ದು, ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಡಾ.ಕಲ್ಲಡ್ಕ ಪ್ರಭಾಕರ್‌‌‌‌ ಭಟ್‌ ಅವರೊಂದಿಗೆ ಮಾತುಕತೆ ನಡೆಸಿದರು. ಈ ಬಾರಿ ಕೊರೊನಾದಿಂದಾಗಿ ಶಿಕ್ಷಣಕ್ಕೆ ಅಡ್ಡಿಯಾಗಿದ್ದು, ಈ ವಿಚಾರವಾಗಿ ಶೈಕ್ಷಣಿಕ ಚಟುವಟಿಕೆಯ ಬಗ್ಗೆ ಮಾಹಿತಿ ಹಾಗೂ ಚರ್ಚೆ ನಡೆಸಿದ್ದಾರೆ.

ಕಲ್ಲಡ್ಕದ ನಿವಾಸಿ ಕರೋನಗೆ ಬಲಿ

ಮಂಗಳೂರು(2ಜು/2020): ದ.ಕ ಜಿಲ್ಲೆಯಲ್ಲಿ ಮಾರಕ ಕೊರೋನಾಗೆ ಮತ್ತೊಂದು ಬಲಿಯಾಗಿದೆ.
ಬಂಟ್ವಾಳ ತಾಲೂಕಿನ ಕಲ್ಲಡ್ಕ ನಿವಾಸಿ 49 ವರ್ಷದ ವ್ಯಕ್ತಿಯ ಸಾವು ಸಂಭವಿಸಿದೆ.
ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಈ ವ್ಯಕ್ತಿ,ಶನಿವಾರ ಮಂಗಳೂರು ಖಾಸಗಿ ಆಸ್ಪತ್ರೆಗೆ ಕಿಡ್ನಿ ಸಮಸ್ಯೆಯ ಚಿಕಿತ್ಸೆಗಾಗಿ ದಾಖಲಾಗಿದ್ದರು.
ಕಳೆದ 20 ದಿನಗಳಿಂದ ಮನೆಯಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದರು.
ಕಿಡ್ನಿ, ಟಿ.ಬಿ.ಹಾಗೂ ಲಿವರ್ ನ ಸಮಸ್ಯೆಯದ ಬಳಲುತ್ತಿದ್ದ ರೋಗಿಯು ನಿಧನ ಹೊಂದಿದರು, ಇವರ ಜೊತೆಗೆ ದ.ಕ ಜಿಲ್ಲೆಯಲ್ಲಿ ಕೊರೋನಾಗೆ ಬಲಿಯಾದವರ ಸಂಖ್ಯೆ 18ಕ್ಕೆ ಏರಿಕೆಯಾಗಿದೆ.

ಹಿಂದೂ ರುದ್ರ ಭೂಮಿಯಲ್ಲಿ ಟಿಕ್ ಟಾಕ್ ವೀಡಿಯೋ ನಾಲ್ವರ ಬಂಧನ

ಮಂಗಳೂರು(14ಜು/2020): ಶಿವನ ವಿಗ್ರಹದ ಪೀಠದ ಮೇಲೆ ಶೂ ಧರಿಸಿ ಟಿಕ್‍ಟಾಕ್ ಮಾಡಿದ ನಾಲ್ವರನ್ನು ಪೊಲೀಸರು ಬಂಧಿಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನಲ್ಲಿ ನಡೆದಿದೆ.
ಆರೋಪಿಗಳು ಕಂಚಿನಡ್ಕದ ರುದ್ರಭೂಮಿಯ ಶಿವನ ವಿಗ್ರಹದ ಪೀಠದ ಮೇಲೆ ಶೂ ಧರಿಸಿ ಟಿಕ್‍ಟಾಕ್ ಮಾಡಿದ್ದರು. ಇದನ್ನು ನೋಡಿದ ರುದ್ರಭೂಮಿ ಅಧ್ಯಕ್ಷ ಹಿಂದು ಧಾರ್ಮಿಕ ಶೃದ್ಧಾ ಕೇಂದ್ರಕ್ಕೆ ಧಕ್ಕೆಯಾಗಿದೆ ಎಂದು ಪೊಲೀಸರಿಗೆ ದೂರು ನೀಡಿದ್ದರು.
ಈ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕಂಚಿನಡ್ಕ ಗ್ರಾಮದಲ್ಲಿ ನಡೆದಿದೆ. ಬಂಧಿತರನ್ನು ಸಜೀಪ ನಿವಾಸಿಗಳಾದ ಮಸೂದ್, ಅಜೀಮ್, ಅಬ್ದುಲ್ ಲತೀಫ್ ಹಾಗೂ ಅರ್ಫಾಜ್ ಎಂದು ಗುರುತಿಸಲಾಗಿದೆ. ಈ ನಾಲ್ವರು ಕಂಚಿನಡ್ಕ ಹಿಂದೂ ರುದ್ರಭೂಮಿಯಲ್ಲಿ ಟಿಕ್‍ಟಾಕ್ ಮಾಡಿದ್ದರು.
ಈ ಸಂಬಂಧ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈಗ ವಿಡಿಯೋ ಆಧರಿಸಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ವಿಟ್ಲ ವಿ.ಹಿಂ.ಪ ನಾಯಕ ಆನಂದ ಕಲ್ಲಕಟ್ಟ ನಿಧನ

ವಿಟ್ಲ(4ಜೂನ್/2020):ವಿಟ್ಲ ವಿಶ್ವ ಹಿಂದೂ ಪರಿಷದ್ ನ ಮುಖಂಡರಾದ ಶ್ರೀ ಆನಂದ ಕಲ್ಲಕಟ್ಟ ಇವರು ಇಂದು ಬೆಳಗ್ಗೆ ಹೃದಯಾಘಾತದಿಂದ ನಿಧನರಾದರು.
ಬೋಳ್ನಾಡು ಭಗವತೀ ಕ್ಷೇತ್ರದ ಅಭಿವೃದ್ಧಿಯಲ್ಲಿ ಪ್ರಮುಖರಾಗಿದ್ದ ಆನಂದ ಕಲ್ಲಕಟ್ಟ, ಅನೇಕ ವರ್ಷಗಳಿಂದ ವಿಟ್ಲದ ಹಿಂದೂ ಮುಖಂಡರಾಗಿ ಎಲ್ಲಾ ಧಾರ್ಮಿಕ ಸಾಮಾಜಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿದ್ದರು.

ವಿಟ್ಲ ಠಾಣಾ ಸಿಬಂದಿಗೆ ಕೊರೊನಾ ಬಂದಿದ್ದು ಹೇಗೆ?

ವಿಟ್ಲ(24ಮೇ/2020): ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ ಠಾಣೆಯ ಪೇದೆಗೆ ಕೊರೊನಾ ಸೋಂಕು ಬಂದಿದೆ.
ವಿಟ್ಲ ಠಾಣೆಯ ಸೋಂಕಿತ ಪೇದೆ ಮುಂಬೈಯಿಂದ ಬಂದ ವ್ಯಕ್ತಿಯ ಜೊತೆ ನೇರ ಸಂಪರ್ಕ ಹೊಂದಿರಲಿಲ್ಲ. ಮೇ 14 ರಂದು ಮುಂಬೈಯ ವ್ಯಕ್ತಿ ಠಾಣೆಗೆ ಬಂದಾಗ ಪೇದೆಯೊಬ್ಬರು ಆಧಾರ್ ಕಾರ್ಡ್ ಮತ್ತು ಮೊಬೈಲ್ ಪಡೆದುಕೊಂಡಿದ್ದಾರೆ. ನಂತರ ಈ ಪೇದೆ ಮೊಬೈಲ್ ಅನ್ನು ಹೆಡ್ ಕಾನ್‍ಸ್ಟೇಬಲ್ ಅವರಿಗೆ ನೀಡಿದ್ದಾರೆ. ಆ ಮೊಬೈಲನ್ನು ಹೆಡ್ ಕಾನ್ ಸ್ಟೇಬಲ್ ಕೈಯಲ್ಲಿ ಹಿಡಿದುಕೊಂಡಿದ್ದರು. ಅಚ್ಚರಿಯ ಸಂಗತಿ ಏನೆಂದರೆ ಸೋಂಕಿತನಿಂದ ನೇರವಾಗಿ ಮೊಬೈಲ್ ಮತ್ತು ಆಧಾರ್ ಕಾರ್ಡ್ ಪಡೆದಿದ್ದ ಪೇದೆಯ ಫಲಿತಾಂಶ ನೆಗೆಟಿವ್ ಬಂದಿದೆ.
ಪೇದೆಗೆ ಸೋಂಕು ಬಂದ ಹಿನ್ನೆಲೆಯಲ್ಲಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನೇತೃತ್ವದಲ್ಲಿ ವಿಟ್ಲ ಪೊಲೀಸ್ ಠಾಣೆಗೆ ಸ್ಯಾನಿಟೈಸರ್ ಸಿಂಪಡಣೆ ಮಾಡಲಾಗಿದೆ.
ಮೇ 14ರಂದು ಮಹಾರಾಷ್ಟ್ರದ ರಾಯಗಡದಿಂದ ಬಂದಿದ್ದ ವ್ಯಕ್ತಿಗೆ ಕೊರೊನಾ ಪಾಸಿಟಿವ್ ಆಗಿತ್ತು. ಕ್ವಾರಂಟೈನ್ ಬಗ್ಗೆ ಸರಿಯಾದ ಮಾಹಿತಿ ನೀಡದ ಕಾರಣ ಸೋಂಕಿತ ಠಾಣೆಗೆ ಹೋಗಿದ್ದ. ಆತನ ದ್ವಿತೀಯ ಸಂಪರ್ಕಕ್ಕೆ ಬಂದ ಹಿನ್ನೆಲೆಯಲ್ಲಿ ಇಂದು 42 ವರ್ಷದ ಹೆಡ್ ಕಾನ್‍ಸ್ಟೇಬಲ್ ಅವರಿಗೆ ಪಾಸಿಟಿವ್ ಬಂದಿದೆ.
ಮಹಾರಾಷ್ಟ್ರದಿಂದ ಬಂದಿದ್ದ ವ್ಯಕ್ತಿ ಕ್ವಾರಂಟೈನ್ ನಲ್ಲಿದ್ದು ಮೇ 18 ರಂದು ಪಾಸಿಟಿವ್ ಬಂದಿತ್ತು. ಕ್ವಾರಂಟೈನ್ ಆಗುವುದಕ್ಕೆ ಮೊದಲು ಠಾಣೆಗೆ ಹೋಗಿದ್ದರಿಂದ ಪೋಲಿಸ್ ಸಿಬ್ಬಂದಿಗಳಿಗೂ ಸೋಂಕು ಬಂದಿದೆ. ಮುಂಬೈ ವ್ಯಕ್ತಿಗೆ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಆತನ ಸಂಪರ್ಕಕ್ಕೆ ಬಂದಿದ್ದರಿಂದ ಮೂರು ಮಂದಿ ಪೇದೆಯನ್ನು ಕ್ವಾರಂಟೈನ್ ಮಾಡಲಾಗಿತ್ತು. ಈ ಪೈಕಿ ಓರ್ವ ಪೇದೆಗೆ ಸೋಂಕು ಇರುವುದು ದೃಢಪಟ್ಟಿದೆ.

ರಾತ್ರಿ ಎರಡು ಗಂಟೆಗೆ 1200 ಕಾರ್ಮಿಕರನ್ನು ತಡೆದ ಶಾಸಕ ರಾಜೇಶ್ ನಾಯ್ಕ್

ಬಂಟ್ವಾಳ(13ಮೇ/2020): ಬೆಂಗಳೂರಿಗೆ ಕಾಲ್ನಡಿಗೆಯಲ್ಲಿ ಹೊರಟ ಝರ್ಖಂಡ್ ರಾಜ್ಯದ 1200 ಕೂಲಿ ಕಾರ್ಮಿಕರನ್ನು ಶಾಸಕ ರಾಜೇಶ್ ನಾಯ್ಕ್ ಬಂಟ್ವಾಳ ಬಂಟರ ಸಂಘದ ಬಳಿ ತಡೆ ಹಿಡಿದರು.
ಬೆಂಗಳೂರು ಮುಖಾಂತರ ಝರ್ಖಂಡ್ ರಾಜ್ಯಕ್ಕೆ ಕಾಲ್ನಡಿಗೆಯಲ್ಲಿ ಹೊರಟವರ ಮನ ಪರಿವರ್ತನೆ ಮಾಡಿ ಅವರನ್ನು ಒಪ್ಪಿಸಿ ತಡೆಯುವಲ್ಲಿ ಯಶಸ್ವಿಯಾದರು, ಝಾರ್ಖಂಡ್ ನ 1200 ವಲಸೆ ಕಾರ್ಮಿಕರಿಗೆ ಊರಿಗೆ ತೆರಳಲು ಕೇಂದ್ರ ಸರಕಾರ ಮಂಗಳೂರಿನಿಂದ ರೈಲಿನ ವ್ಯವಸ್ಥೆ ಮಾಡಿದ್ದು, ಮಾಹಿತಿ ತಿಳಿಯದೆ, ಬೆಂಗಳೂರಿನಿಂದ ರೈಲಿನಲ್ಲಿ ಹೊರಡಲು ನಿನ್ನೆ ರಾತ್ರಿಯಿಂದ ಮಂಗಳೂರಿನಿಂದ ಬೆಂಗಳೂರಿಗೆ ಪಾದಯಾತ್ರೆ ಮೂಲಕ ಹೊರಟ ವಲಸೆ ಕಾರ್ಮಿಕರನ್ನು ರಾತ್ರಿ 2 ಗಂಟೆಗೆ ಮನವೊಲಿಸಿ ಬಂಟ್ವಾಳದ ಬಂಟರ ಸಂಘದ ಹಾಲ್ ನಲ್ಲಿ ಕಾರ್ಮಿಕರಿಗೆ ಊಟೋಪಚಾರದ ವ್ಯವಸ್ಥೆ ಮಾಡಿ ಊರಿಗೆ ತೆರಳುವವರೆಗೆ ವಾಸ್ತವ್ಯದ ವ್ಯವಸ್ಥೆಯನ್ನು ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ವೈಯುಕ್ತಿಕ ನೆಲೆಯಲ್ಲಿ ಮಾಡಿಕೊಡುವ ವಾಗ್ದಾನವನ್ನು ಕಾರ್ಮಿಕರಲ್ಲಿ ಮಾಡಿರುತ್ತಾರೆ.
ಇಂದು ಝಾರ್ಖಂಡ್ ನ ಕಾರ್ಮಿಕರು ವಾಸ್ತವ್ಯ ಇರುವ ಬಂಟ್ವಾಳದ ಬಂಟರ ಭವನಕ್ಕೆ ಸಂಸದ ಬಿಜೆಪಿ ರಾಜ್ಯಾಧ್ಯಕ್ಷರಾದ ಶ್ರೀ ನಳಿನ್ ಕುಮಾರ್ ಕಟೀಲುರವರು ಭೇಟಿ ನೀಡಿ ವ್ಯವಸ್ಥೆಯನ್ನು ಪರಿಶೀಲಿಸಿದರು.

ಬಂಟ್ವಾಳ: ಆಶಾ ಕಾರ್ಯಕರ್ತೆಗೆ ಪೊರಕೆಯಿಂದ ಹಲ್ಲೆ ಯತ್ನ

ಮಂಗಳೂರು(11ಮೇ/2020): ಜಿಲ್ಲೆಯ ಬಂಟ್ವಾಳ ತಾಲೂಕಿನ ಕುಕ್ಕಿಪಾಡಿಯಲ್ಲಿ ಆಶಾ ಕಾರ್ಯಕರ್ತೆಗೆ ಪೋರಕೆಯಿಂದ ಹಲ್ಲೆ ಯತ್ನ.
ಮನೆಯ ಮುಂದೆ ಜನ ಸೇರಿದ್ದನ್ನ ಪ್ರಶ್ನಿಸಿದ್ದಕ್ಕೆ ಪೊರಕೆಯಲ್ಲಿ ಆಶಾ ಕಾರ್ಯಕರ್ತೆಗೆ ಹಲ್ಲೆ ಯತ್ನ ನಡೆದಿದೆ.
ಕುಕ್ಕಿಪಾಡಿಯ ಶ್ರೀಮತಿ ಎಂಬ ಮಹಿಳೆಯಿಂದ ಆಶಾ ಕಾರ್ಯಕರ್ತೆಗೆ ಹಲ್ಲೆ ಯತ್ನ ನಡೆದಿದೆ ಎಂದು ಹೇಳಾಗಿದೆ.
ಶ್ರೀಮತಿಯವರ ಪತಿ ವಿಶ್ವನಾಥ ಎಂಬಾತ ಮನೆಯಲ್ಲಿ ಮಂತ್ರವಾದಿ ಕಾರ್ಯ ನಡೆಸುತ್ತಿದ್ದು, ಹೀಗಾಗಿ ಇವರ ಮನೆಗೆ ಬರುತ್ತಿದ್ದ ಹತ್ತಾರು ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಜನ ಸೇರಿದ್ದನ್ನ ಪ್ರಶ್ನಿಸಿದ ಆಶಾ ಕಾರ್ಯಕರ್ತೆ ಪುಷ್ಪಲತಾ ಇವರಿಗೆ ಹಲ್ಲೆ ನಡೆದಿದೆ.
ಬಳಿಕ ಕುಕ್ಕಿಪಾಡಿ ಪಂಚಾಯತ್ ಸದಸ್ಯರಾದ ಯೋಗೀಶ್ ಆಚಾರ್ಯ ಎಂಬವರಿಗೆ ಮಾಹಿತಿ
ತಿಳಿದು ಸ್ಥಾನಕ್ಕೆ ಆಗಮಿಸಿದರು.
ಸ್ಥಳಕ್ಕೆ ಆಗಮಿಸಿದ ಪಂಚಾಯತ್ ಸದಸ್ಯನ ಮೇಲೂ ಹಲ್ಲೆ ಯತ್ನ ನಡೆಯಿತು.ಮತ್ತೆ ಆಶಾ ಕಾರ್ಯಕರ್ತೆಗೂ ಅವಾಚ್ಯವಾಗಿ ನಿಂದಿಸಿ ಹಲ್ಲೆಗೆ ಮುಂದಾದ ‌ಮಹಿಳೆ.
ಪುಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ

ಮೂರನೇ ಬಲಿ: ಅಂತಿಮ ವಿಧಿ ಬೋಳೂರು ಹಿಂದೂ ರುಧ್ರಭೂಮಿಯಲ್ಲಿ

ಮಂಗಳೂರು(30ಎ/2020): ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ಮಹಾಮಾರಿ ಸೋಂಕಿಗೆ ಇಂದು ಇನ್ನೊಂದು ಬಲಿಯಾಗಿದೆ.ಬಂಟ್ವಾಳ ತಾಲೂಕಿನ ಕಸಬಾ ಮೂಲದ ರೋಗಿ ಸಂಖ್ಯೆ ಪಿ-409 ಆಗಿದ್ದ  67 ವರ್ಷ ಪ್ರಾಯದ ವೃದ್ಧೆ ಕೋವಿಡ್ ಸೋಂಕಿಗೆ ಇಂದು ಬಲಿಯಾಗಿರುವ ಮಹಿಳೆಯಾಗಿದ್ದಾರೆ.ಏಪ್ರಿಲ್ 18ರಂದು ಉಸಿರಾಟದ ತೊಂದರೆಯಿಂದ ಇವರನ್ನು ನಗರದ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಇದರೊಂದಿಗೆ ಬಂಟ್ವಾಳ ಪೇಟೆಯಿಂದಲೇ ಮೂರನೇ ಮಹಿಳೆ ಕೊರೊನಾ ಸೋಂಕಿಗೆ ಬಲಿಯಾಗಿದ್ದು, ಮೃತ ಮಹಿಳೆಯ ಶವ ಸಂಸ್ಕಾರ ಬೋಳೂರಿನ ಹಿಂದೂ ರುಧ್ರ ಭೂಮಿಯಲ್ಲೇ ನಡೆಸಲು ನಿರ್ಧರಿಸಲಾಗಿದೆ.ಈ ಬಗ್ಗೆ ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಸಭೆ ನಡೆಸಿ ನಿರ್ಧಾರವನ್ನು ಕೈಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಬೋಳೂರು ಹಿಂದೂ ರುಧ್ರಭೂಮಿಯಲ್ಲೇ ಶವ ಸಂಸ್ಕಾರ ನಡೆಸಲು ತೀರ್ಮಾನಿಸಲಾಗಿದೆ. ಈ ಹಿನ್ನೆಲೆ ಜಿಲ್ಲಾಡಳಿತ ಎಲ್ಲಾ ಸಿದ್ಧತೆಗಳನ್ನು ನಡೆಸಲಾಗಿದೆ.ಆಸ್ಪತ್ರೆಯ ಎಲ್ಲಾ ಕಾರ್ಯಗಳು ಮುಗಿದ ಬಳಿಕ ಮೃತದೇಹದ ಹಸ್ತಾಂತರ ಕಾರ್ಯ ನಡೆಯಲಿದೆ. ಬಳಿಕ ಜಿಲ್ಲಾಡಳಿತ ಎಲ್ಲಾ ರೀತಿಯ ಭದ್ರತಾ ಕ್ರಮ ಕೈಗೊಂಡು ಅಂತ್ಯ ಸಂಸ್ಕಾರವನ್ನು ನೆರವೇರಿಸಲಿದೆ.

ಬಂಟ್ವಾಳ: ಸೀಲ್ ಡೌನ್ ಉಲ್ಲಂಘನೆ,ಬಂಧನ

ಬಂಟ್ವಾಳ (26/2020ಏ): ಸೀಲ್ ಡೌನ್ ವಲಯದಿಂದ ಹೊರಬಂದ ವ್ಯಕ್ತಿಯ ವಿರುದ್ದ ಎಫ್ ಐಆರ್ ದಾಖಲಾಗಿದೆ.
ದ.ಕ ಜಿಲ್ಲೆಯ ಬಂಟ್ವಾಳದ ಸೀಲ್ ಡೌನ್ ಪ್ರದೇಶ ದಿಂದ ಕಾಲ್ನಡಿಗೆಯಲ್ಲಿ ಬಂದ ವ್ಯಕ್ತಿ ಯನ್ನು ಪೋಲಿಸರು ಬಂಧಿಸಿದರು.
ಬಂಟ್ವಾಳ ಎಸ್.ವಿ.ಎಸ್.ಶಾಲಾ ಬಳಿ ನಿವಾಸಿ ವಿಜಯಾನಂದ ಮೇಲೆ ಪ್ರಕರಣ ದಾಖಲಾಗಿದೆ.
ಕೊರೋನಾದಿಂದ ಇಬ್ಬರು ಮೃತಪಟ್ಟ ಹಿನ್ನೆಲೆ ಬಂಟ್ವಾಳದ ಕೆಲ ಪ್ರದೇಶಗಳನ್ನು ಸೀಲ್ ಡೌನ್ ಮಾಡಲಾಗಿದೆ.
ಆದರೆ ಸೀಲ್ ಡೌನ್ ಉಲ್ಲಂಘಿಸಿ ವಿಜಯನಂದ ಕಾಲ್ನಡಿಗೆಯಲ್ಲಿ ಹೊರ ಬಂದಿದ್ದರು.
ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

Related Post