September 23, 2020

ಮಂಗಳೂರು

ಅಯೋಧ್ಯೆ ಶಿಲಾನ್ಯಾಸ ಭಾರತೀಯರಿಗೆ ಶುಭ ಸುದ್ದಿ: ಡಾ.ಡಿ ವೀರೇಂದ್ರ ಹೆಗ್ಗಡೆ

ಮಂಗಳೂರು(4ಆಗಸ್ಟ/2020): ಅಯೋಧ್ಯೆಯಲ್ಲಿ ಶ್ರೀರಾಮಚಂದ್ರನ ಮಂದಿರದ ಶಿಲಾನ್ಯಾಸ ಕಾರ್ಯಕ್ರಮ ನೆರವೇರಲಿರುವುದು ಭಾರತೀಯರೆಲ್ಲರಿಗೂ ಶುಭ ಸುದ್ದಿ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ‌ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅಭಿಪ್ರಾಯಪಟ್ಟಿದ್ದಾರೆ.
ಶ್ರೀರಾಮ ಭಗವಂತನ ಅವತಾರವೆಂದು ಭಾರತೀಯರ ನಂಬಿಕೆ,ಶ್ರದ್ಧೆ.ಆತ ಭೂಮಿಯಲ್ಲಿ ಅವತರಿಸಿದ ಬಳಿಕ ತನ್ನ ಸದ್ಗುಣಗಳಿಂದ ಆದರ್ಶಮೂರ್ತಿ ಎನಿಸಿದ.ಸಹಸ್ರಾರು ವರ್ಷಗಳಿಂದ ಮರ್ಯಾದ ಪುರುಷೋತ್ತಮನೆನಿಸಿ ತನ್ನ ವ್ಯಕ್ತಿತ್ವ,ದೃಢ ನಿರ್ಧಾರಗಳಿಂದಾಗಿ ಜನಮಾನಸದಲ್ಲಿ ನೆಲೆಯಾದ.ತನ್ನ ಆದರ್ಶಗಳಿಂದ ವಿಶ್ವವ್ಯಾಪಿಯಾದ. ಶ್ರೀರಾಮ ಸ್ಮರಣೆ ಇನ್ನೂ ಸಹಸ್ರ ವರ್ಷಗಳವರೆಗೆ ಈ ನೆಲದಲ್ಲಿ ಉಳಿಯಲಿ ಮತ್ತು ಬೆಳೆಯಲಿ ಎಂದು ಹಾರೈಸಿದರು.

ಮೂಡಬಿದರೆ: ಆಯೋಧ್ಯೆ ಭೂಮಿ ಪೂಜೆಗೆ ಜೈನ ಆಧ್ಯಾತ್ಮ ಕೇಂದ್ರಗಳ ಮೃತ್ತಿಕೆ ಹಸ್ತಾಂತರ

ಮೂಡುಬಿದಿರೆ(1 ಆಗಸ್ಟ್/2020) :ಅಯೋಧ್ಯೆಯ ಶ್ರೀ ರಾಮ ಮಂದಿರ ಭೂಮಿ ಪೂಜೆಗಾಗಿ ಜೈನ ಅಧ್ಯಾತ್ಮ ಕೇಂದ್ರಗಳ ಪವಿತ್ರ ಮೃತ್ತಿಕೆಗಳನ್ನು ಹಸ್ತಾಂತರಿಸಲಾಯಿತು.
ಮೂಡುಬಿದಿರೆ ಜೈನಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಸ್ವಾಮೀಜಿ ಅವರು ಮೃತ್ತಿಕೆಯನ್ನು ಬಿ.ಜೆ.ಪಿ ಜಿಲ್ಲಾಧ್ಯಕ್ಷ ಸುದರ್ಶನ್ ಎಂ. ಅವರಿಗೆ ಹಸ್ತಾಂತರಿಸಿದರು. ಮೊದಲು ಜೈನ ಸಿದ್ದಕ್ಷೇತ್ರ ಕೈಲಾಸಗಿರಿ ಸಮ್ಮೇದ ಶಿಖರ್ಜಿ, ಗಿರಿನಾರ್, ಚಂಪಾಪುರಿ, ಪಾವಪುರಿ ಹಾಗೂ ಮೂಡುಬಿದಿರೆ ಅತಿಶಯ ಕ್ಷೇತ್ರ ಬಸದಿ ಸ್ಥಳದ ಪವಿತ್ರ ಮೃತ್ತಿಕೆಯನ್ನು ದೇವರ ಬಳಿ ಕಲಶದಲ್ಲಿಟ್ಟು ಸಂಕಲ್ಪ ಪ್ರಾರ್ಥನೆ ನೆರವೇರಿಸಲಾಯಿತು.
ಧಾರ್ಮಿಕ ಸಭೆಯಲ್ಲಿ ಧಾರ್ಮಿಕ ಸಂದೇಶ ನೀಡಿದ ಭಟ್ಟಾರಕ ಸ್ವಾಮೀಜಿ ಅವರು, ಅಯೋಧ್ಯೆ ರಾಮಮಂದಿರಕ್ಕೆ ನಡೆಯುವ ಭೂಮಿಪೂಜೆಯು ನಿರ್ವಿಘ್ನವಾಗಿ ನಡೆಯಲಿ. ಭೂಮಿಪೂಜೆಯ ದಿನ ಶಾಂತಿ ಸೌಹಾರ್ದ ಹಾಗೂ ಶ್ರೀ ದೇವರ ಅನುಗ್ರಹ ಕ್ಕಾಗಿ ಮನೆಯ ಹೊಸ್ತಿಲಿನಲ್ಲಿ ದೀಪ ಬೆಳಗಿ ಪ್ರಾರ್ಥನೆಯನ್ನು ಎಲ್ಲರು ಮಾಡಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಬಸದಿಗಳ ಮೊಕ್ತೇಸರರಾದ ಪಟ್ಣ ಶೆಟ್ಟಿ ಸುದೇಶ್ ಕುಮಾರ್, ದಿನೇಶ್ ಕುಮಾರ್, ಬಿಜೆಪಿ ಮುಖಂಡ ಕೆ.ಪಿ ಜಗದೀಶ್ ಅಧಿಕಾರಿ, ದ.ಕ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಗೋಪಾಲ್ ಕುತ್ತಾರ್, ಮುಖಂಡರಾದ ಶರಣ್ ಪಂಪ್‌ವೆಲ್, ಎಂಸಿಎಸ್ ಬ್ಯಾಂಕ್‌ನ ಅಧ್ಯಕ್ಷ ಎಂ.ಬಾಹುಬಲಿ ಪ್ರಸಾದ್, ಬಿಜೆಪಿಯ ಪ್ರಮುಖರಾದ ಪ್ರಸಾದ್ ಕುಮಾರ್, ಲಕ್ಷ್ಮಣ ಪೂಜಾರಿ, ಸುಕೇಶ್ ಶೆಟ್ಟಿ, ದೇವಿ ಪ್ರಸಾದ್ ಶೆಟ್ಟಿ, ಸೂರಜ್ ಜೈನ್ ಮಾರ್ನಾಡ್ ಸಂಘದ ಪ್ರಮುಖರಾದ ಮಂಜುನಾಥ ಶೆಟ್ಟಿ, ರೋಹನ್ ಕಲ್ಲಬೆಟ್ಟು ಮತ್ತಿತರರು ಉಪಸ್ಥಿತರಿದ್ದರು.
ಶ್ರೀ ರಾಮ ಮಂದಿರ ನಿರ್ಮಾಣ ಕಾರ್ಯ ಕ್ಕೆ 1991 ರಲ್ಲಿ ಇಟ್ಟಿಗೆಯನ್ನು ದೇಶದ ನಾನಾ ಭಾಗಗಳಿಂದ ಕಳುಹಿಸಿದ ಸಂದರ್ಭದಲ್ಲಿ ಹಿಂದಿನ ಜ್ಞಾನ ಯೋಗಿ ಭಟ್ಟಾರಕರ ಉಪಸ್ಥಿತಿಯಲ್ಲಿ ಮೂಡುಬಿದಿರೆ ಸಾವಿರ ಕಂಬದ ಬಸದಿಯ ಮೂಲಕ ಕಳುಹಿಸಿ ಕೊಡಲಾಗಿತ್ತು ಎಂದು ಅಂದು ಜವಾಬ್ದಾರಿ ವಹಿಸಿದ್ದ ವೆಂಕಟೇಶ್ ಕಿಣಿ, ಬಾಹುಬಲಿ ಪ್ರಸಾದ್ ಉಪಸ್ಥಿತರಿದ್ದು ಸ್ಮರಿಸಿದರು.

ತುಳುನಾಡ ಪೊರ್ಲು ಸೇವಾ ಟ್ರಸ್ಟ್(ರಿ.)ವತಿಯಿಂದ ಧನ ಸಹಾಯ ಹಸ್ತಾಂತರ

ಮಂಗಳೂರು(30ಜುಲೈ/2020): ಕ್ಯಾನ್ಸರ್ ಪೀಡಿತ ಬಾಲಕನ ಚಿಕಿತ್ಸೆಗೆ ಮತ್ತು ಬಡ ಕುಟುಂಬದ ಇಬ್ಬರು ಹೆಣ್ಣು ಮಕ್ಕಳ ಮದುವೆ ಮಂಗಳ ಕಾರ್ಯಕ್ಕೆ ತುಳುನಾಡ ಪೊರ್ಲು ಸೇವಾ ಟ್ರಸ್ಟ್(ರಿ.) ವತಿಯಿಂದ ಧನ ಸಹಾಯ ಹಸ್ತಾಂತರ.
ಕಳೆದ 47 ತಿಂಗಳ ಹಿಂದೆ ಸಾಮಾಜಿಕ ಜಾಲತಾಣಗಳನ್ನು ಅಸ್ತ್ರವಾನ್ನಾಗಿಸಿಕೊಂಡು ರಚನೆಗೊಂಡ ತುಳುನಾಡ ಪೊರ್ಲು ಸೇವಾ ಟ್ರಸ್ಟ್ ಇಂದು ಸಮಾಜದ ಆಯ್ದ 3 ಕುಟುಂಬಗಳಿಗೆ ನೆರವನ್ನು ನೀಡುವುದರ ಮೂಲಕ ಸೇವಾ ಪಯಣವನ್ನು ಮುಂದುವರಿಸಿದೆ.
ಎಲುಬು ಕ್ಯಾನ್ಸರ್ ಗೆ ಒಳಗಾಗಿ ಮಂಗಳೂರಿನ ಅತ್ತಾವರದ ಕೆ.ಎಂ.ಸಿ ಆಸ್ವತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬೆಳ್ತಂಗಡಿ ತಾಲೂಕಿನ ಕಾಶಿಪಟ್ನ ಕುಮೇರು ದಿವಾಂಗತ ಸುಂದರ ಪೂಜಾರಿ ಚಂಪ ದಂಪತಿಗಳ ಪುತ್ರ ಸುಶಾಂತ್ ಇವರ ಚಿಕಿತ್ಸೆಗೆ ರೂ. 15,000 ಮತ್ತು ತಂದೆ,ಅಣ್ಣನನ್ನು ಕಳೆದುಕೊಂಡು ತನ್ನ ತಾಯಿಯ ಜೊತೆ ವಾಸಿಸುತ್ತಿರುವ ಬೆಳ್ತಂಗಡಿ ತಾಲೂಕು ಶಿರ್ಲಾಲು ದಿವಾಂಗತ ತಿಮ್ಮಪ್ಪ ಮತ್ತು ಜಾನಕಿ ದಂಪತಿಗಳ ಪುತ್ರಿ ರೇವತಿ ಅವರ ಮದುವೆ ಮಂಗಳ ಕಾರ್ಯಕ್ಕೆ ಹಾಗೂ ಮಂಗಳೂರು ತಾಲೂಕಿನ ಸೋಮೇಶ್ವರ ಸಮೀಪದ ಕುಂಪಲದ ಬಡ ಕುಟುಂಬವಾದ ಭಾಸ್ಕರ ಮತ್ತು ಪದ್ಮಾವತಿ ದಂಪತಿಗಳ ಪುತ್ರಿ ಕುಮಾರಿ ಪ್ರಜ್ಞಾ ಇವರ ಮದುವೆ ಮಂಗಳ ಕಾರ್ಯಕ್ಕೆ ತಲಾ ರೂ. 10,000 ಧನ ಸಹಾಯವನ್ನು ಶ್ರೀ ರಕ್ತೇಶ್ವರಿ ದೇವಿ ಸನ್ನಿಧಿ ಬಿ.ಸಿ ರೋಡ್ ಇಲ್ಲಿ ಹಸ್ತಾಂತರಿಸಲಾಯಿತು. ಈ ಸಮಯದಲ್ಲಿ ಸಂಸ್ಥೆಯ ಸೇವಾ ಮಾಣಿಕ್ಯರು ಉಪಸ್ಥಿತರಿದ್ದರು.
ಕೊರೊನ ಮಹಾಮಾರಿಯಿಂದ ಇಡೀ ಜಗತ್ತೇ ಕಂಗೆಟ್ಟರು ಈ ಸಂಸ್ಥೆಯು ತನ್ನ ಸೇವಾ ಪಯಣವನ್ನು ಮುಂದುವರಿಸಿ ಪರರ ಕಷ್ಟದಲ್ಲಿ ನೆರವಾಗುವುದರ ಮೂಲಕ ಸಮಾಜಕ್ಕೆ ಮಾದರಿ ಸಂಸ್ಥೆಯಾಗಿದೆ.

ದ.ಕನ್ನಡಕ್ಕೆ ನೂತನ ಡಿ.ಸಿ ಡಾ.ರಾಜೇಂದ್ರ ಕೆ.ವಿ

ಮಂಗಳೂರು(28ಜುಲೈ/2020): ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿದ್ದ‌ ಸಿಂಧೂ ಬಿ. ರೂಪೇಶ್ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶಿಸಿದೆ. ದ.ಕನ್ನಡ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಡಾ.ರಾಜೇಂದ್ರ ಕೆ.ವಿ ಅವರನ್ನು ನೇಮಕ ಮಾಡಲಾಗಿದೆ.ಡಾ.ರಾಜೇಂದ್ರ ಕೆ.ವಿ ಅವರು ಬೆಳಗಾವಿ ಜಿಲ್ಲಾ ಪಂಚಾಯತ್ ಸಿಇಓ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಅವರನ್ನು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯನ್ನಾಗಿ ಸರ್ಕಾರ ನಿಯೋಜಿಸಿದೆ.

ಜೈ ಜೈ ವಿವೇಕಾನಂದ ಮ್ಯೂಸಿಕ್ ಅಲ್ಬಂನ ಪೋಸ್ಟರ್ ಬಿಡುಗಡೆ

ಮಂಗಳೂರು(25ಜುಲೈ/2020): ಸೋಲ್ಸ್ ರಿದಂ ತಂಡದ ಮತ್ತೊಂದು ಪ್ರಯತ್ನ. ದೇಶಕಂಡ ಮಹಾನ್ ಸಂತ ಶ್ರೀ ವಿವೇಕಾನಂದ ಸ್ವಾಮಿಗಳ ಕುರಿತಾಗಿ ಯುವಜನತೆಗೆ ಪ್ರೇರಣೆ ಯಾಗುವಂತಹ ಜೈ ಜೈ ಸ್ವಾಮಿ ವಿವೇಕಾನಂದ ಎಂಬ ಮ್ಯೂಸಿಕ್ ಆಲ್ಬಮ್ನ ಪೋಸ್ಟರ್ ಮಂಗಳೂರು ರಾಮಕೃಷ್ಣ ಮಠದ ಶ್ರೀ ಏಕಗಾಮ್ಯನಂದ ಸ್ವಾಮಿಗಳ ದಿವ್ಯ ಹಸ್ತದಲ್ಲಿ ಬಿಡುಗಡೆ ಗೊಂಡಿತು.

ವಿಶೇಷವಾಗಿ ಕನ್ನಡ, ತುಳು, ಹಿಂದಿ, ಇಂಗ್ಲೀಷ್ ನಾಲ್ಕು ಬಾಷೆಗಳಲ್ಲಿ ಈ ಆಲ್ಬಮ್ ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯಂದು ಸೋಲ್ಸ್ ರಿದಂ ಯೂಟ್ಯೂಬ್ ಚಾನಲ್ನಲ್ಲಿ ಬಿಡುಗಡೆ ಗೊಳ್ಳಲಿದೆ. ಪ್ರತಿಭಾವಂತ ಸಂಗೀತ ನಿರ್ದೇಶಕ ಸಂದೇಶ್ ಬಾಬು ಸಂಗೀತಕ್ಕೆ ವಿಜೇಶ್ ದೇವಾಡಿಗ ಮಂಗಳಾದೇವಿ ಕನ್ನಡ ಹಾಗೂ ತುಳು ಸಾಹಿತ್ಯ ನೀಡಿದ್ದು ಹಿಂದಿ ಹಾಡಿಗೆ ಮೇಲ್ವಿನ್ ಆಂಟೋನಿ ಡಿಸೋಜಾ ,ಹಾಗೂ ಇಂಗ್ಲೀಷ್ ನಲ್ಲಿ ಜಯಪ್ರಕಾಶ್ ಸಿ ಎಸ್ ಸಾಹಿತ್ಯ ಬರೆದಿದ್ದು ಸಂಪೂರ್ಣ ನಿರ್ದೇಶನದ ಜವಾಬ್ದಾರಿಯನ್ನು ನಿರ್ವಹಿಸಿದ್ದಾರೆ. ದೇರಳಕಟ್ಟೆ ಸುರೇಶ್ ಕ್ಯಾಮೆರಾ ಹಾಗೂ ಸುಹಾಸ್ ಸಂಕಲನ ಮತ್ತು ಪ್ರಚಾರಕಲೆಯಲ್ಲಿ ಸಹಕರಿಸಿದ್ದಾರೆ . ನಾಲ್ಕು ಬಾಷೆಗಳಲ್ಲಿಯೂ ಕನ್ನಡದ ಯುವ ಗಾಯಕಿ ಕೆಜಿಎಫ್ ಖ್ಯಾತಿಯ ಐರಾ ಉಡುಪಿ ದ್ವನಿಯಾಗಿದ್ದಾರೆ.

ಇದರ ಪೋಸ್ಟರ್ ಮಂಗಳೂರು ರಾಮಕೃಷ್ಣ ಮಠದ ಶ್ರೀ ಏಕಗಾಮ್ಯನಂದ ಸ್ವಾಮಿ ಬಿಡುಗಡೆ ಗೊಳಿಸಿ ಶುಭಹಾರೈಸಿದರು

ಈ ಸಂದರ್ಭದಲ್ಲಿ ನಿರ್ದೇಶಕ ಜಯಪ್ರಕಾಶ್ ಸಿ ಎಸ್, ಸಂಗೀತ ನಿರ್ದೇಶಕ ಸಂದೇಶ್ ಬಾಬು ಸಾಹಿತಿ ವಿಜೇಶ್ ದೇವಾಡಿಗ ಮಂಗಳಾದೇವಿ, ಛಾಯಾಗ್ರಹಕ ದೇರಳಕಟ್ಟೆ ಸುರೇಶ್ ಹಾಗೂ ತಂಡದವರಾದ ನಿರ್ದೇಶಕ ಶಿವಪ್ರಸಾದ್, ಮನೀಷ್ ಕುಲಾಲ್, ರವಿಶಂಕರ್ ಉಪಸ್ಥಿತರಿದ್ದರು.

ನಾಳೆ ರಾಜ್ಯಾದ್ಯಂತ ‘ಸಂಡೇ ಲಾಕ್ ಡೌನ್’

ಮಂಗಳೂರು(25ಜು/2020): ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಪೂರ್ಣ ಲಾಕ್ ಡೌನ್ ನಾಳೆ ದಿನವಿಡೀ ಲಾಕ್ ಆಗಲಿದೆ ದಕ್ಷಿಣ ಕನ್ನಡ ಜಿಲ್ಲೆ.
ನಾಳೆ ಯಾವುದೇ ಅಂಗಡಿಗಳನ್ನು ತೆರೆಯುವಂತಿಲ್ಲ,ಎಲ್ಲಾ ರೀತಿಯ ವಾಹನ ಸಂಚಾರ ಬಂದ್,ಅಗತ್ಯ ಸಾಮಗ್ರಿಗಳ ಖರೀದಿಗೆ ಅವಕಾಶವಿರುವುದಿಲ್ಲ,
ಹಾಲು, ಔಷಧಿ, ಆಸ್ಪತ್ರೆಗೆ ಮಾತ್ರ ಅವಕಾಶ,ಇಂದು ರಾತ್ರಿ‌ 9ರಿಂದ ಸೋಮವಾರ ಬೆಳಗ್ಗೆ 5 ಗಂಟೆಯವರೆಗೂ ಸಂಪೂರ್ಣ ಲಾಕ್,
ಪ್ರತಿ ದಿನ ರಾತ್ರಿ 9 ರಿಂದ ಬೆಳಗ್ಗೆ 5 ರವರೆಗೂ ನೈಟ್ ಕರ್ಫ್ಯೂ, ಸಂಡೇ ಲಾಕ್ ಡೌನ್ ಹಾಗೂ ನೈಟ್ ಕರ್ಫ್ಯೂ ಜುಲಾಯಿ 31ರವರೆಗೆ ಅನ್ವಯ,ಎಂದು ದಕ್ಷಿಣ ಕನ್ನಡ ಜಿಲ್ಲಾಡಳಿತ ಸ್ಪಷ್ಟನೆ ನೀಡಿದೆ.

ತೆರೆಯಲಿದೆ ದಕ್ಷಿಣ ಕನ್ನಡದ ಲಾಕ್ ಡೌನ್

ಮಂಗಳೂರು(21ಜುಲೈ/2020): ಗುರುವಾರದಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಲಾಕ್ ಡೌನ್ ತೆರವು.
ಗುರುವಾರ ಬೆಳಗ್ಗೆ 5 ಗಂಟೆ ತನಕ ಮಾತ್ರ ಲಾಕ್ ಡೌನ್ ಇರಲಿದೆ.ಗುರುವಾರದಿಂದ ದ.ಕ‌ ಜಿಲ್ಲೆ ಸಂಪೂರ್ಣ ತೆರೆದಿರುತ್ತದೆ.ಸಾರ್ವಜನಿಕ ಎಲ್ಲಾ ಚಟುವಟಿಕೆಗಳಿಗೆ ಅವಕಾಶ ಮಾಡಿಕೊಟ್ಟ ಜಿಲ್ಲಾಡಳಿತ.ಈ ಹಿಂದೆ ಅವಕಾಶ ನೀಡಿದ್ದ ಎಲ್ಲಾ ಕ್ಷೇತ್ರಗಳೂ ತೆರೆಲಿದೆ.
ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿಕೆ ನೀಡಿರುವರು.

ದಕ್ಷಿಣ ಕನ್ನಡ ಜಿಲ್ಲೆ: ಇಂದು 6 ಬಲಿ, 238 ಪಾಸಿಟಿವ್

ಮಂಗಳೂರು(16ಜು/2020): ಇಂದು ಒಂದೇ ದಿನ
ಜಿಲ್ಲೆಯಲ್ಲಿ ಬರೋಬ್ಬರಿ 238 ಮಂದಿಗೆ ಕೊರೋನ
ಜೊತೆಗೆ ಆರು ಮಂದಿ ಕೊರೋನಾಗೆ ಬಲಿ.
ILI – 106 ಮಂದಿಗೆ ಕೊರೋನಾ ಪಾಸಿಟಿವ್,ಸಂಪರ್ಕವೇ ಪತ್ತೆಯಾಗದ 73 ಮಂದಿಗೆ ಕೊರೋನಾ ಪಾಸಿಟಿವ್,ಪ್ರಾಥಮಿಕ ಸಂಪರ್ಕದಿಂದ 23 ಮಂದಿಗೆ ಕೊರೋನಾ ಪಾಸಿಟಿವ್ ,ವಿದೇಶದಿಂದ ಬಂದ 19 ಜನರಿಗೆ ಕೊರೋನಾ ಸೋಂಕು ದೃಢ,SARI – 17 ಮಂದಿಗೆ ಕೊರೋನಾ ಪಾಸಿಟಿವ್,ದ.ಕ ಜಿಲ್ಲೆಯಲ್ಲಿ ಒಬ್ಬರಿಂದ ಒಬ್ಬರಿಗೆ ವೇಗವಾಗಿ ಹರಡುತ್ತಿರುವ ಕೊರೋನಾ ಸೋಂಕು,
ನಾಲ್ಕು ಮಂದಿ ಪುರುಷರು ಹಾಗೂ ಇಬ್ಬರು‌ ಮಹಿಳೆಯರು ಕೊರೋನಾದಿಂದ ಸಾವು ಸಂಭವಿಸಿದೆ.
44, 62, 66 ಹಾಗೂ 68 ವರ್ಷದ ನಾಲ್ವರು ಪುರುಷರು ಬಲಿ. 47ಹಾಗೂ 76 ವರ್ಷದ ಇಬ್ಬರು ಮಹಿಳೆಯರು ಸಾವು.ಜಿಲ್ಲೆಯಲ್ಲಿ ಕೊರೋನಾಗೆ ಬಲಿಯಾದವರ ಸಂಖ್ಯೆ 63 ಕ್ಕೆ ಏರಿಕೆ,ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಸಾವಿನ‌ ಸಂಖ್ಯೆ ಆತಂಕಕ್ಕೆ ಕಾರಣವಾಗಿದೆ.

ದಕ್ಷಿಣ ಕನ್ನಡ ಲಾಕ್ ಡೌನ್ ತೀರ್ಮಾನ ಆಗಿಲ್ಲ: ಕೋಟ

ಮಂಗಳೂರು(12ಜು/2020): ಜಿಲ್ಲೆಯ ಕೋವಿಡ್ ಪರಿಸ್ಥಿತಿ ಅಧ್ಯಯನ ಮಾಡಲು ಭಾನುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಲೋಕಸಭಾ ಸದಸ್ಯ ನಳಿನ್ ಕುಮಾರ್ ಹಾಗೂ ಜಿಲ್ಲಾಧಿಕಾರಿಗಳ ಜತೆ ಸಭೆ ನಡೆಸಿದ್ದಾರೆ.  ಸಭೆಯಲ್ಲಿ ಲಾಕ್‌ಡೌನ್ ಕುರಿತು ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸ್ಪಷ್ಟ ಪಡಿಸಿದ್ದಾರೆ..
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಲಾಕ್‌ಡೌನ್ ಜಾರಿಗೆ ತರುವ ಬಗ್ಗೆ ಯಾವುದೇ ನಿರ್ಧಾರ ಆಗಿಲ್ಲ .ಸೋಮವಾರ ಬೆಳಗ್ಗೆ 11 ಗಂಟೆಗೆ ಜಿಲ್ಲೆಯ ಪರಿಸ್ಥಿತಿ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ನಾನು, ಲೋಕಸಭಾ ಸದಸ್ಯರು ಹಾಗೂ ಜಿಲ್ಲಾಧಿಕಾರಿಗಳು ವಿಡಿಯೋ ಕಾನ್ಫರೆನ್ಸ್  ಸಭೆ ನಡೆಸಲಿದ್ದು, ಬಳಿಕ ಮುಂದಿನ ತೀರ್ಮಾನವನ್ನು ನಾಳೆಯ ಸಭೆಯಲ್ಲಿ ಮುಖ್ಯಮಂತ್ರಿಗಳ ಸಲಹೆ ಸೂಚನೆಯಂತೆ ಅನುಸರಿಸಲಾಗುವುದು ಎಂದು ಸಚಿವ ಶ್ರೀನಿವಾಸ ಪೂಜಾರಿ ಸ್ಪಷ್ಟಪಡಿಸಿದ್ದಾರೆ.

ದಕ್ಷಿಣ ಕನ್ನಡದಲ್ಲಿ ಇಂದು 186 ಪಾಸಿಟಿವ್

ಮಂಗಳೂರು(11ಜು/2020): ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಕೂಡ ಕೊರೋನಾ ಸ್ಪೋಟ.ಮಂಗಳೂರಿನಲ್ಲಿ ಇಂದು ಬರೋಬ್ಬರಿ 186 ಪಾಸಿಟಿವ್ ಪತ್ತೆ.ದಿನೇ ದಿನೇ ಕರಾವಳಿಯಲ್ಲಿ ಹೆಚ್ಚಾಗುತ್ತಿದೆ ಸೋಂಕಿತರ ಸಂಖ್ಯೆ.ILI – 64 ಮಂದಿಗೆ ಕೊರೋನಾ ಪಾಸಿಟಿವ್.ಪ್ರಾಥಮಿಕ ಸಂಪರ್ಕದಿಂದ 37 ಪಾಸಿಟಿವ್.ಸಂಪರ್ಕವೇ ಪತ್ತೆಯಾಗದ 32 ಮಂದಿಗೆ ಕೊರೋನಾ ಪಾಸಿಟಿವ್.SARI – 17 ಮಂದಿಗೆ ಕೊರೋನಾ ಪಾಸಿಟಿವ್.ರೆಂಡಮ್ ಟೆಸ್ಟ್ ನಿಂದ 13 ಮಂದಿಗೆ ಪಾಸಿಟಿವ್.ವಿದೇಶದಿಂದ ಬಂದ 10 ಮಂದಿಗೆ ಕೊರೋನಾ ಸೋಂಕು ದೃಢ.ಶಸ್ತ್ರಚಿಕಿತ್ಸೆಯ ಮೊದಲು ಮಾಡಿದ ಟೆಸ್ಟ್ ನಿಂದ 7 ಮಂದಿಗೆ ಕೊರೋನಾ ಪಾಸಿಟಿವ್.ಹೆರಿಗೆಗಿಂತ ಮೊದಲು ಮಾಡಿದ ಟೆಸ್ಟ್‌ ‌ನಲ್ಲಿ‌ 4 ಮಹಿಳೆಯರಿಗೆ ಕೊರೋನಾ ಸೋಂಕು.ಹೊರ‌ಜಿಲ್ಲೆಯಿಂದ ಬಂದ ಇಬ್ಬರಿಗೆ ಕೊರೋನಾ ಪಾಸಿಟಿವ್.ದ.ಕ ಜಿಲ್ಲೆಯಲ್ಲಿ ಒಬ್ಬರಿಂದ ಒಬ್ಬರಿಗೆ ವೇಗವಾಗಿ ಹರಡುತ್ತಿದೆ ಸೋಂಕು.ಪ್ರತಿದಿನ‌ 100 ಕ್ಕೂ ಹೆಚ್ಚು ಪಾಸಿಟಿವ್ ಕೇಸ್ ಗಳು ಪತ್ತೆ.

Related Post