July 10, 2020

ಮಂಗಳೂರು

ಧನಲಕ್ಷ್ಮಿ ಗಟ್ಟಿ ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾ ಅಧ್ಯಕ್ಷರಾಗಿ ಆಯ್ಕೆ

ಮಂಗಳೂರು(29ಜೂ/2020): ಧನಲಕ್ಷ್ಮಿ ಗಟ್ಟಿ ಅವರನ್ನು
ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾ ಅಧ್ಯಕ್ಷರಾಗಿ
ಸಂಸದರು ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ರವರು ಆಯ್ಕೆ ಮಾಡಿದರು.
ಇವರು ಯುವ ವಾಗ್ಮಿ ಸಂಘಟನಾ ಕಾರ್ಯದ ಮೂಲಕ ಜನಸಾಮಾನ್ಯರ ಮನ ಗೆದ್ದ ಯುವ ನಾಯಕಿಯಾಗಿ ಪಕ್ಷದ ಅನೇಕ ಜವಾಬ್ದಾರಿಯನ್ನು ಅತ್ಯಂತ ನಿಷ್ಠೆ ಪ್ರಾಮಾಣಿಕ ದಿಂದ ನಿರ್ವಹಿಸಿರುವರು.
ವಿವಿಧ ಸಮಾಜ ಸೇವಾ ಸಂಘಟನೆಯಲ್ಲಿ ತನ್ನನ್ನು ತಾನು ಗುರುತಿಸಿಕೊಂಡು. ಜಿಲ್ಲಾ ಪಂಚಾಯತ್ ಸದಸ್ಯೆಯಾಗಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆಯಾಗಿ ಅತ್ಯಂತ ನಿಷ್ಠೆ ಪ್ರಾಮಾಣಿಕದಿಂದ ಸೇವೆ ಸಲ್ಲಿಸಿರುವ ಧನಲಕ್ಷ್ಮಿ ಗಟ್ಟಿ.
ಅವರನ್ನು ಸಂಸದರು ಬಿಜೆಪಿ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ರವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷರಾದ ಸುದರ್ಶನ್ ಮೂಡಬಿದ್ರೆರವರು ಹಾಗೂ ಜಿಲ್ಲೆಯ ಎಲ್ಲ ಶಾಸಕರು ಹಿರಿಯರು ಜಿಲ್ಲಾ ಮುಖಂಡರು ಹಾಗೂ ಬಿಜೆಪಿ ಮಂಗಳೂರು ವಿಧಾನಸಭಾ ಕ್ಷೇತ್ರದ ಎಲ್ಲ ನಾಯಕರು ಒಮ್ಮತದಿಂದ ಭಾರತೀಯ ಜನತಾ ಪಾರ್ಟಿ ಜಿಲ್ಲಾ ಮಹಿಳಾ ಮೋರ್ಚಾದ ಅಧ್ಯಕ್ಷರಾಗಿ ನೇಮಕ ಮಾಡಿದ್ದಾರೆ.

ಉಳ್ಳಾಲದ ಮಹಿಳೆ ಕರೋನಾಗೆ ಬಲಿ

ಮಂಗಳೂರು(29ಜೂ/2020): ಮಂಗಳೂರಿನಲ್ಲಿ ಕೊರೋನಾಗೆ ಮತ್ತೊಂದು ಬಲಿ ಆಗಿದೆ.ಮಂಗಳೂರಿನ ಉಳ್ಳಾಲ ಮೂಲದ 60 ವರ್ಷದ ಮಹಿಳೆಯ ಸಾವು ಕರೋನಾದಿಂದ ಸಂಭವಿಸಿದೆ.ಮಂಗಳೂರಿನ ಕೋವಿಡ್ ಆಸ್ಪತ್ರೆಯಲ್ಲಿ ಮಹಿಳೆಯ ಸಾವು ಸಂಭವಿಸಿದೆ.
ಲಿವರ್, ಡಯಾಬಿಟಿಸ್ ಮತ್ತು ಹೃದಯ ಖಾಯಿಲೆಯಿಂದ ಬಳಸಲುತ್ತಿದ್ದ ವೃದ್ಧೆ.
ಮಂಗಳೂರಿ‌ನ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಳಿಕ ಕೋವಿಡ್ ಆಸ್ಪತ್ರೆಗೆ ಬಂದಿದ್ದ ಮಹಿಳೆ,ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ಸಾವಿನ ಸಂಖ್ಯೆ 14ಕ್ಕೆ ಏರಿಕೆಯಾಗಿದೆ.ನಿನ್ನೆ ಒಂದೇ ದಿನ ಮೂವರನ್ನು ಬಲಿ ಪಡೆದಿದ್ದ ಕೊರೋನಾ.

ಪುತ್ತೂರಿನ ಪ್ರವಾಸಿ ಸಮುದ್ರಪಾಲು,ಜೀವ ಉಳಿಸಿದ ಮೊಗವೀರ ಯುವಕರು

ಸುರತ್ಕಲ್(29ಜೂ/2020): ಸುರತ್ಕಲ್ ಸಮೀಪದ ಗುಡ್ಡೆಕೊಪ್ಪ ಎಂಬಲ್ಲಿ ಪುತ್ತೂರಿನಿಂದ
ಬಂದವರೆನ್ನಲಾಗಿದ್ದ ಯುವಕ ಯುವತಿಯರ ಗುಂಪಿನಲ್ಲಿದ್ದ ಕೆಲವರು ಸ್ಥಳೀಯ ಮೀನುಗಾರರ ಎಚ್ಚರಿಕೆಯನ್ನೂ ನಿರ್ಲಕ್ಷಿಸಿ ಸಮುದ್ರಕ್ಕೆ ಇಳಿದಿದ್ದು. ಇವರಲ್ಲಿ ಯುವಕನೊಬ್ಬ ಈಜಾಡುತ್ತಾ ಹಳೆಯ ನೌಕೆಯ ಹತ್ತಿರ ಹೋದವ ಅಲೆಗಳ ರೌದ್ರತೆಗೆ ಭಯಗೊಂಡು ನೌಕೆಯ ಲ್ಯಾಡರ್ ಏರಿನಿಂತು ಸಹಾಯಕ್ಕಾಗಿ ಅಂಗಲಾಚಿದ್ದಾನೆ.
ಈ ಸಂದರ್ಭದಲ್ಲಿ ಗುಡ್ಡೆಕೊಪ್ಪ ನಿವಾಸಿಗಳಾದ ಯಾದವ ಶ್ರೀಯಾನ್ ಹಾಗೂ ಸುಮನ್ ಕೋಟ್ಯಾನ್ ಅವರ ತಂಡ ತಮ್ಮ ಪ್ರಾಣವನ್ನೂ ಲೆಕ್ಕಿಸದೇ ಭೋರ್ಗರೆಯಿತ್ತಿದ್ದ ಅಲೆಗಳ ನಡುವೆ ಈಜಾಡಿ ಆ ಯುವಕನನ್ನು ಸುರಕ್ಷಿತವಾಗಿ ದಡಕ್ಕೆ ಕರೆದುಕೊಂಡುಬಂದಿದ್ದಾರೆ.
ಇದೀಗ ಶ್ರೀಯಾನ್ ಹಾಗೂ ಸುಮನ್ ಅವರ ಸಾಹಸ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ ಮತ್ತು ಇಲ್ಲಿಗೆ ಬರುವ ಪ್ರವಾಸಿಗರು ಸ್ಥಳೀಯರ ಸಲಹೆಗೆ ಕಿವಿಕೊಡಬೇಕೆಂಬ ಆಗ್ರಹವೂ ಕೇಳಿಬಂದಿದೆ.
ಸುರತ್ಕಲ್ ಸಮೀಪದ ಗುಡ್ಡೆಕೊಪ್ಪ ಎಂಬಲ್ಲಿ ಸಮುದ್ರದಲ್ಲಿ ಲಂಗರು ಹಾಕಿ ನಿಂತಿರುವ ಭಗವತೀ ಪ್ರೇಂ ಎಂಬ ಬೃಹತ್ ನೌಕೆಯನ್ನು ನೋಡಲು ಜನ ಬರುತ್ತಿದ್ದಾರೆ. ಅದರಲ್ಲೂ ರಜಾ ದಿನವಾಗಿದ್ದ ನಿನ್ನೆ ಜನ ಸ್ವಲ್ಪ ಹೆಚ್ಚೇ ಇದ್ದರು.

ಸ್ಥಳೀಯರ ಕಾಡಿಬೇಡಿ ಅಂತ್ಯಸಂಸ್ಕಾರ ನೇರವೇರಿಸಿದ ಅಧಿಕಾರಿಗಳು

ಮಂಗಳೂರು(28ಜೂ/2020): ಕೊನೆಗೂ ನಡೆದ ಮೃತ ಕೊರೋನಾ ಸೋಂಕಿತನ ಅಂತ್ಯಕ್ರಿಯೆ,ಸ್ಥಳೀಯರ ಮನವೊಲಿಸಿ ಅಂತ್ಯಕ್ರಿಯೆ ನಡೆಸಿದ ಅಧಿಕಾರಿಗಳು.
ಮಂಗಳೂರಿನ ಬೋಳಾರದಲ್ಲಿರುವ ದಫನ ಭೂಮಿಯಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು.ಕೊರೋನಾದಿಂದ ಇಂದು ಸಾವನ್ನಪ್ಪಿದ್ದ ಸುರತ್ಕಲ್ ನ ಇಡ್ಯಾ ನಿವಾಸಿ.
31 ವರ್ಷದ ಯುವಕ ಕೊರೋನಾ ಗೆ ಬಲಿಯಾಗಿದ್ದ,
ಸತತ 4 ಗಂಟೆಗಳ ಕಾಲ ಅಂಬುಲೆನ್ಸ್ ನಲ್ಲೇ ಇದ್ದ ಮೃತದೇಹ,ಅಂತ್ಯಕ್ರಿಯೆಗೆ ಸ್ಥಳೀಯರು ಒಪ್ಪದ ಕಾರಣ ಕಗ್ಗಂಟಾಗಿದ್ದ ಅಂತಿಮ ವಿಧಿವಿಧಾನ,ಸ್ಥಳೀಯರನ್ನು ಕಾಡಿಬೇಡಿ ಅಂತ್ಯಕ್ರಿಯೆ ಮಾಡಿದ ಅಧಿಕಾರಿಗಳು.
ಸ್ಥಳೀಯರು ಹೊರತು ಪಡಿಸಿ ಹೊರಗಿನವರ ಅಂತ್ಯಕ್ರಿಯೆ ಮಾಡದಂತೆ ಸ್ಥಳೀಯರ ಎಚ್ಚರಿಕೆಯನ್ನು ನಿವಾಸಿಗಳು ನೀಡಿದ್ದಾರೆ.

ಮ್ಯಾನ್ ಹೋಲ್ ಒಳಗೆ ಇಳಿದು ಬ್ಲೋಕ್ ತೆಗೆದ ಕದ್ರಿಯ ಕಾರ್ಪೋರೆಟರ್

ಮಂಗಳೂರು(24ಜೂನ್/2020): ಮ್ಯಾನ್ ಹೋಲ್ ಚೇಂಬರ್ ಒಳಗೆ ಇಳಿದ ಕದ್ರಿಯ ಕಾರ್ಪೊರೇಟರ್ ಕದ್ರಿ ಮನೋಹರ್ ಶೆಟ್ಟಿ.
ಇವರ ಕಾರ್ಯವನ್ನು ಶ್ಲಾಘಿಸಲೇ ಬೇಕು ಮಂಗಳೂರಿನ ಕದ್ರಿ ಕಂಬಳ ರಸ್ತೆಯಲ್ಲಿನ ಚರಂಡಿಯಲ್ಲಿ ಮಳೆ ನೀರಿನ ಹರಿವಿನ ಸಮಸ್ಯೆಯಾಗಿ ತಡೆಯುಂಟಾದಾಗ ಸಮಸ್ಯೆ ಏನೆಂಬುದು ತಿಳಿಯಲು ಪಕ್ಕದಲ್ಲಿ ಮ್ಯಾನ್ವಲ್ ಚೇಂಬರ್ ಇದ್ದರೂ ಕಾರ್ಮಿಕರು ಅದರೊಳಗೆ ಇಳಿದು ಸಮಸ್ಯೆ ಬಗೆಹರಿಸಲು ಒಪ್ಪದೆ ಇದ್ದಾಗ ಸತಃ ಕದ್ರಿಯ ಕಾರ್ಪೊರೇಟರ್ ಕದ್ರಿ ಮನೋಹರ್ ಶೆಟ್ಟಿಯವರು ಚೇಂಬರ್ ಒಳಗಡೆ ಇಳಿದು ಸಮಸ್ಯೆ ಸಮಸ್ಯೆ ಏನೆಂದು ತಿಳಿದು ಕಾರ್ಮಿಕರಿಗೆ ತಿಳಿಸಿದ ಮೇಲೂ ಸಹ ಅವರು ತೊಡಕನ್ನು ಸರಿಪಡಿಸಲು ಚೇಂಬರ್ ಒಳಗಡೆ ಇಳಿಯದಿದ್ದಾಗ ಕೂಡಲೇ ಕಾರ್ಪೊರೇಟರ್ ಒಂದು ಬದಲಿ ಬಟ್ಟೆಯನ್ನು ತರಿಸಿ ಧರಿಸಿ ಚೇಂಬರ್ ಒಳಗಡೆ ಇಳಿದು ಸಮಸ್ಯೆಯನ್ನು ಸರಿಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಜಪೆ ಬಿಜೆಪಿ ಶಕ್ತಿ ಕೇಂದ್ರಕ್ಕೆ ನೂತನ ಅಧ್ಯಕ್ಷ , ಪ್ರಧಾನ ಕಾರ್ಯದರ್ಶಿ

ಬಜಪೆ(23ಜೂ/2020): ಬಿಜೆಪಿ ಮಹಾ-ಶಕ್ತಿಕೇಂದ್ರ ಮತ್ತು ಶಕ್ತಿಕೇಂದ್ರದ ನೂತನ ಪದಾಧಿಕಾರಿಗಳ ಜವಾಬ್ಧಾರಿ ಹಸ್ತಾಂತರ ಕಾರ್ಯಕ್ರಮವು ಮುಲ್ಕಿ-ಮೂಡಬಿದ್ರೆ ಕ್ಷೇತ್ರದ ಶಾಸಕರಾದ ಉಮಾನಾಥ್ ಕೊಟ್ಯಾನ್ ಇವರ ಸಮ್ಮುಖದಲ್ಲಿ ಬಜಪೆ ವಿಜಯ ವಿಠಲ ಭಜನಾ ಮಂದಿರದಲ್ಲಿ ನೆರವೇರಿತು.
ಮಹಾ ಶಕ್ತಿಕೇಂದ್ರದ ಪ್ರಮುಖರ ಜವಾಬ್ದಾರಿಗಳು ಹೀಗಿವೆ ಅಧ್ಯಕ್ಷರು ಸುಧಾಕರ ಕಾಮತ್ ಬಜಪೆ,ಪ್ರಧಾನಾ ಕಾರ್ಯದರ್ಶಿ ಪ್ರದೀಪ್ ಸುವರ್ಣ ಬಜಪೆ,ಜಿಲ್ಲಾ ಪಂಚಾಯತ್ ಸದಸ್ಯರು ವಸಂತಿ ಕಿಶೋರ್ ಪೆರ್ಮುದೆ, ಸದಸ್ಯರು ಕವಿತಾ ದಿನೇಶ್ ಮತ್ತು ಮಂಜು ಪ್ರಸಾದ್ ಶೆಟ್ಟಿ
ಶಕ್ತಿಕೇಂದ್ರ ಪ್ರಮುಖರು ಬಜಪೆ ನಗರಕ್ಕೆ ಚಿತ್ರೆಶ್ ಶೆಟ್ಟಿ, ಬಜಪೆ ಗ್ರಾಮಾಂತರಕ್ಕೆ ದುರ್ಗಾಪ್ರಸಾದ್ ಮಡಿವಾಳ, ಕುತ್ತೆತ್ತುರಿಗೆ ಕಿಶೋರ್ ಕೊಟ್ಯಾನ್
ಕಳವಾರಿಗೆ ಭಾಸ್ಕರ್ ರಾವ್,
೬ನೇ ತೋಕೂರಿಗೆ ಜಯಂತ್ ಸಾಲಿಯಾನ್,
ಕರಂಬಾರಿಗೆ ಸತೀಶ್ ದೇವಾಡಿಗ,
ಕೆಂಜಾರಿಗೆ ವಿಜಯ ಕುಮಾರ್ ,
ಜಾರಕ್ಕೆ ಉಮೇಶ್ ಮೂಡಶೆಡ್ಡೆ , ಪಿಲಿಕುಳಕ್ಕೆ ಹರಿಪ್ರಸಾದ್ ಶೆಟ್ಟಿ ಆಯ್ಕೆಯಾದರು.

ಮೀನು ವ್ಯಾಪಾರಿಗೆ ಕರೋನಾ ದೃಢ

ಮಂಗಳೂರು(ಜೂನ್23/2020): ಮೀನು ವ್ಯಾಪಾರಿಗೆ ಕೋವಿಡ್-19 ಸೋಂಕು ದೃಢವಾಗಿದೆ. ಮಂಗಳೂರಿನ ಎಕ್ಕೂರು ನಿವಾಸಿಗೆ ಕೋವಿಡ್-19 ಸೋಂಕು ತಾಗಿರುವುದು ಪರೀಕ್ಷೆಯಲ್ಲಿ ದೃಢವಾಗಿದೆ.
ಈತ ಮಂಗಳೂರು ಬಂದರಿಗೆ ತೆರಳಿ ಅಲ್ಲಿಂದ ಮೀನು ತಂದು, ದ್ವಿಚಕ್ರ ವಾಹನದಲ್ಲಿ ಮನೆಮನೆಗೆ ಮೀನು ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ. ಹೀಗಾಗಿ ಈತನ ಪ್ರಾಥಮಿಕ ಸಂಪರ್ಕಿತರನ್ನು ಪತ್ತೆ ಮಾಡುವ ಕಾರ್ಯ ಜಿಲ್ಲಾಡಳಿತ ಮಾಡುತ್ತಿದೆ.‌
ಎಕ್ಕೂರಿನ 27 ವರ್ಷದ ಯುವಕ ಶೀತದ ಸಮಸ್ಯೆ ಇದ್ದು ಸ್ವತಹ ಆನುಮಾನದಿಂದ ಸ್ಥಳೀಯ ಆಸ್ಪತ್ರೆಯಲ್ಲಿ ಸ್ವಯಂ ಪರೀಕ್ಷೆಗೊಳಪಟ್ಟಿದ್ದ. ಈ ವೇಳೆ ಆತನ ಗಂಟಲು ದ್ರವ ಮಾದರಿ ಪರೀಕ್ಷೆಗೊಳಪಡಿಸಿದ್ದು, ಸದ್ಯ ಆತನಿಗೆ ಕೋವಿಡ್-19 ಸೋಂಕು ತಾಗಿರುವುದು ಖಚಿತವಾಗಿದೆ.

ಆರು ಬಾರಿ ಟೆಸ್ಟ್ ಮಾಡಿಸಿದರೂ ಕೊರೋನಾದಿಂದ ಬಿಡುಗಡೆ ಇಲ್ಲ

ಮಂಗಳೂರು(15ಜೂ/2020): ಮಂಗಳೂರು ವೈದ್ಯರಿಗೆ ಸವಾಲಾದ ಇಬ್ಬರು ವೃದ್ದರ ಕೋವಿಡ್ ಕೇಸ್,ಕಳೆದೊಂದು ತಿಂಗಳಿನಿಂದ ಆಸ್ಪತ್ರೆಯಲ್ಲೇ ಇದ್ದರೂ ಡಿಸ್ವಾರ್ಜ್ ಭಾಗ್ಯವಿಲ್ಲ ಇವರಿಬ್ಬರಿಗೆ,
ದುಬೈನಿಂದ ಬಂದ ಇಬ್ಬರು ವೃದ್ದರ ಕೋವಿಡ್ ಪ್ರಕರಣ ವೈದ್ಯರಿಗೆ ಸವಾಲಾಗಿದೆ.
ಮೇ.12ರಂದು ದುಬೈನಿಂದ ಬಂದಿದ್ದ 81 ವರ್ಷದ ವೃದ್ಧ ಮತ್ತೊಬ್ಬರು ಮೇ.18ರಂದು ದುಬೈನಿಂದ ಬಂದಿದ್ದ 76 ವರ್ಷದವರು.
ಇಬ್ಬರಲ್ಲೂ ರೋಗ ಲಕ್ಷಣವಿಲ್ಲದೇ ಆರೋಗ್ಯವಾಗಿದ್ದರೂ ಕೊರೋನಾ ವೈರಾಣು ಬಿಟ್ಟು ಹೋಗ್ತಿಲ್ಲ.
ಆಸ್ಪತ್ರೆಯಲ್ಲಿ ಆರು ಬಾರಿ ಟೆಸ್ಟ್ ನಡೆಸಿದರೂ ವರದಿ ಪಾಸಿಟಿವ್ ಬಂದಿರುತ್ತದೆ.
ವರದಿ ನೆಗೆಟಿವ್ ಬಾರದೇ ಡಿಸ್ವಾರ್ಜ್ ಆಗದೇ ಆಸ್ಪತ್ರೆಯಲ್ಲೇ ಇರುವ ವೃದ್ದರು.
ಕಳೆದೊಂದು ತಿಂಗಳಿನಿಂದ ಆಸ್ಪತ್ರೆಯಲ್ಲೇ ಇದ್ದು ಒತ್ತಡಕ್ಕೆ ಒಳಗಾಗಿರೋ ವೃದ್ದರು.
ಇವರ ಜೊತೆಗೆ ಪ್ರಯಾಣಿಸಿದ ಪತ್ನಿ, ಮಗಳು ಪಾಸಿಟಿವ್ ಆಗಿದ್ದರೂ ಗುಣಮುಖರಾಗಿ ಡಿಸ್ವಾರ್ಜ್ ಆಗಿರುತ್ತಾರೆ.

ಜಾನುವಾರು ವ್ಯಾಪಾರಿಗೆ ಹಲ್ಲೆ: ದ.ಕ ಮುಸ್ಲಿಂ ಒಕ್ಕೂಟದ ಖಂಡನೆ

ಮಂಗಳೂರು(14ಜೂ/2020): ಮಂಗಳೂರಿನಲ್ಲಿ ಜಾನುವಾರು ವ್ಯಾಪಾರಿಗೆ ಹಲ್ಲೆ ಮಾಡಿ ಹಗ್ಗದಿಂದ ಟೆಂಪೋಗೆ ಕಟ್ಟಿ ಹಾಕಿದ ಘಟನೆಯನ್ನು ದ.ಕ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಮಾಜೀ ಮೆಯರ್ ಕೆ ಅಶ್ರಪ್ ಖಂಡಿಸಿ ರಾಜ್ಯದ ಮುಖ್ಯ ಮಂತ್ರಿಗಳಿಗೆ ಹಾಗು ಗೃಹ ಸಚಿವರಿಗೆ ದೂರು ನೀಡಿದ್ದಾರೆ.
ಅಬ್ದುಲ್‌ ರಹ್ಮಾನ್‌‌‌ ಭಾನುವಾರ ಮುಂಜಾನೆ ತನ್ನ ಮನೆಯಲ್ಲಿದ್ದ ನಾಲ್ಕು ಎಮ್ಮೆಗಳನ್ನು ತುಂಬಿಕೊಂಡು ಮಂಗಳೂರಿಗೆ ಬರುತ್ತಿದ್ದರು. ಈ ನಡುವೆ, ಸಂಘಪರಿವಾರದ ಕಾರ್ಯಕರ್ತರು ನಗರದ ಉರ್ವದಲ್ಲಿನ ಇನ್ಫೋಸಿಸ್‌‌‌‌ ಕಚೇರಿಯ ಸಮೀಪ ವಾಹನವನ್ನು ತಡೆದು ನಿಲ್ಲಿಸಿದ್ದು, ವಾಹನದಿಂದ ರಹ್ಮಾನ್‌ ಅವರನ್ನು ಕೆಳಗೆ ಇಳಿಸಿ ವಾಹನಕ್ಕೆ ಕಟ್ಟಿ ಥಳಿಸಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ವ್ಯಾಪಾರಿ ಹಾಗೂ ಎಮ್ಮೆಗಳನ್ನು ವಶಪಡಿಸಿಕೊಂಡಿದ್ದಾರೆ. ಬಳಿಕ ಪೊಲೀಸರು, ರಹ್ಮಾನ್‌ ಅವರನ್ನು ಆಸ್ಪತ್ರೆಗೆ ಕರೆದೊಯ್ದು ಆರೋಗ್ಯ ಹಾಗೂ ಕೊರೊನಾ ಪರೀಕ್ಷೆಗೆ ಒಳಪಡಿಸಿದ್ದಾರೆ. ನಂತರ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಉರ್ವ ಪೊಲೀಸ್‌‌ ಠಾಣೆಯಲ್ಲಿ ಈ ಬಗ್ಗೆ ದೂರು-ಪ್ರತಿ ದೂರು ದಾಖಲಾಗಿದೆ.
ಪೊಲೀಸರು ವಶಕ್ಕೆ ಪಡೆಯಲಾದ ಎಮ್ಮೆಗಳ ಸಹಿತ ಒಟ್ಟು ಹತ್ತು ಜಾನುವಾರುಗಳನ್ನು ರಹ್ಮಾನ್‌‌‌‌ ಅವರು ಇತ್ತೀಚೆಗೆ ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನ ಕೃಷಿ ಮಾರುಕಟ್ಟೆಯಿಂದ ಖರೀದಿ ಮಾಡಿದ್ದರು. ಹತ್ತು ಜಾನುವಾರಗಳಲ್ಲಿ ಈಗಾಗಲೇ ಆರನ್ನು ಮಾರಾಟ ಮಾಡಿದ್ದು, ಉಳಿದ ನಾಲ್ಕು ಎಮ್ಮೆಗಳನ್ನು ತಮ್ಮ ಮನೆಯಲ್ಲಿ ಉಳಿಸಿಕೊಂಡಿದ್ದರು. ಭಾನುವಾರ ಜೋಕಟ್ಟೆಯ ತನ್ನ ಮನೆಯಿಂದ ಕುದ್ರೋಳಿಗೆ ಸಾಗಾಟ ಮಾಡುವಾಗ ಈ ಘಟನೆ ನಡೆದಿದೆ.
ಅಬ್ದುಲ್‌‌‌‌‌‌‌‌‌ ರಹ್ಮಾನ್‌ ಅವರು ಎಮ್ಮೆಗಳನ್ನು ಸಾಗಿಸುತ್ತಿದ್ದರು. ಅವರು ಸಾಗಿಸುತ್ತಿದ್ದ ವಾಹನದಲ್ಲಿ ದನಗಳು ಇರಲಿಲ್ಲ ಎಮ್ಮೆಗಳು ಮಾತ್ರ ಇತ್ತು, ಅವರು ಜಾನುವಾರುಗಳನ್ನು ಖರೀದಿ ಮಾಡಿದ್ದ ಎಲ್ಲಾ ದಾಖಲೆಗಳನ್ನು ಪೊಲೀಸರಿಗೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಕೆ.ಅಶ್ರಪ್ ರವರು ಮುಖ್ಯ ಮಂತ್ರಿಗಳಿಗೆ ನೀಡಿದ ದೂರಿನಲ್ಲಿ ಮಂಗಳೂರಿನಲ್ಲಿ ಕೋಮು ಗಲಭೆಗೆ ಕುಮ್ಮಕ್ಕು ನೀಡುತ್ತಿರುವ ಹಲ್ಲೆಕೋರರಿಗೆ ಗೂಂಡಾ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲು ಒತ್ತಾಯ ಮಾಡಿದಾರೆ.