July 10, 2020

ಮಂಗಳೂರು

ಅಕ್ರಮ ಜಾನುವಾರು ಸಾಗಾಟ ಪತ್ತೆ: ವ್ಯಕ್ತಿಯ ಬಂಧನ

ಮಂಗಳೂರು(14ಜೂ/2020): ಅಕ್ರಮ ಜಾನುವಾರು ಸಾಗಾಟ ನಡೆಯುತ್ತಿದ್ದುದನ್ನು ಪತ್ತೆ ಹಚ್ಚಿ ಕೊಟ್ಟಾರದ ಬಳಿ ತಡೆದ ಮಂಗಳೂರು ಬಜರಂಗದಳ ಇಂದು ನಸುಕಿನ ಜಾವ ಕಾರ್ಯಾಚರಣೆ ನಡೆಸಿ ಜಾನುವಾರುಗಳನ್ನು ರಕ್ಷಿಸಿದ ಘಟನೆ ನಡೆದಿದೆ.
ಮಿನಿ ಟೆಂಪೋವನ್ನು ತಡೆದು ನಾಲ್ಕು ಕೋಣಗಳನ್ನು ರಕ್ಷಣೆ ಮಾಡಲಾಗಿದೆ. ಒಬ್ಬ ಆರೋಪಿಯನ್ನು ಹಿಡಿದು ಪೊಲೀಸ್ ವಶಕ್ಕೆ ಒಪ್ಪಿಸಿದ ಘಟನೆ ನಡೆದಿದೆ.
ಈತ ಉಡುಪಿಯಿಂದ ಮಂಗಳೂರು ಕಸಾಯಿಖಾನೆಗೆ ಅಕ್ರಮವಾಗಿ ಸಾಗಿಸುತ್ತಿದ್ದ ಎನ್ನಲಾಗಿದೆ. ಅಕ್ರಮವಾಗಿ ಸಾಗಿಸಲಾಗುತ್ತಿದ್ದ ನಾಲ್ಕು ಕೋಣಗಳ ರಕ್ಷಣೆ ಮಾಡಲಾಗಿದೆ.
ಉರ್ವ ಪೊಲೀಸರು ಸ್ಥಳಕ್ಕೆ ಧಾವಿಸಿ ಕೋಣಗಳು ಹಾಗೂ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ಕ್ವಾರಂಟೈನ್ ಕೇಂದ್ರದಲ್ಲಿ ಇದ್ದ ಬೆಳ್ತಂಗಡಿಯ ಸೈನಿಕ ಸಾವು

ಬೆಳ್ತಂಗಡಿ(13ಜೂನ್/2020): ಉತ್ತರ ಪ್ರದೇಶದ ಮಥುರಾದ ಕ್ವಾರೆಂಟೈನ್ ಕೇಂದ್ರದಲ್ಲಿದ್ದ ಜಿಲ್ಲೆಯ ಬೆಳ್ತಂಗಡಿಯ ಯೋಧ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಬೆಳ್ತಂಗಡಿ ತಾಲೂಕಿನ ಬಾರ್ಯ ಗ್ರಾಮದ ಸಂದೇಶ್ ಶೆಟ್ಟಿ (34) ಸಾವನ್ನಪ್ಪಿದ ಯೋಧ. ಸಂದೇಶ್ ರಜೆ ಪಡೆದು ಸ್ವಗ್ರಾಮಕ್ಕೆ ಬಂದಿದ್ದರು. ಸಂದೇಶ್ ಶೆಟ್ಟಿ ಅವರು ಭಾರತೀಯ ಸೇನೆಯಲ್ಲಿ 14 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರು.
ಕೊರೊನಾ ಲಾಕ್‍ಡೌನ್‍ನಿಂದಾಗಿ ವಾಪಸ್ ಹೋಗಲು ಸಾಧ್ಯವಿರಲಿಲ್ಲ. ಸದ್ಯ ಲಾಕ್‍ಡೌನ್ ಸಡಿಲೆಕೆ ಹಿನ್ನೆಲೆಯಲ್ಲಿ ಅವರು ಸೋಮವಾರ ಕರ್ತವ್ಯಕ್ಕೆ ಹಾಜರಾಗಿದ್ದರು.
ನಿಯಮದ ಪ್ರಕಾರ 14 ದಿನಗಳ ಕಾಲ ಕ್ವಾರಂಟೈನ್ ಕೇಂದ್ರದಲ್ಲಿ ಇದ್ದ ಸಂದೇಶ್ ಅವರು ಮಥುರಾದ ಕ್ವಾರಂಟೈನ್ ಕೇಂದ್ರದಲ್ಲಿ ಉಳಿದಿದ್ದರು. ಆದರೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಮಂಗಳೂರು: ದೇವಸ್ಥಾನಗಳಿಗೆ ವ್ಯವಸ್ಥಾಪನಾ ಸಮಿತಿಯಲ್ಲಿ ಸದಸ್ಯರಾಗಲು ಅರ್ಜಿ ಆಹ್ವಾನ

ಮಂಗಳೂರು(ಜೂನ್13/2020): ದ.ಕ ಜಿಲ್ಲೆಯ ಪ್ರವರ್ಗ ‘ಬಿ’ ಮತ್ತು ‘ಸಿ’ ಗೆ ಸೇರಿದ ದೇವಸ್ಥಾನಗಳಿಗೆ ಹೊಸದಾಗಿ ವ್ಯವಸ್ಥಾಪನಾ ಸಮಿತಿ ರಚಿಸುವ ಸಲುವಾಗಿ ವ್ಯವಸ್ಥಾಪನಾ ಸಮಿತಿಯಲ್ಲಿ ಸದಸ್ಯರಾಗ ಬಯಸುವ ಆಸಕ್ತ ಸಾರ್ವಜನಿಕರಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಅರ್ಜಿಗಳನ್ನು ನಿಗಧಿತ ನಮೂನೆಯಲ್ಲಿ ಭರ್ತಿ ಮಾಡಿ ಜೂನ್ 30 ರಂದು ಸಂಜೆ 5.30ಗಂಟೆಯೊಳಗೆ ಸಹಾಯಕ ಆಯುಕ್ತರು ಧಾರ್ಮಿಕ ದತ್ತಿ ಇಲಾಖೆ ಮಂಗಳೂರು ಇವರಿಗೆ ಸಲ್ಲಿಸಬೇಕು. ನಿಗಧಿತ ದಿನಾಂಕದ ನಂತರ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ನಿಗಧಿತ ಅರ್ಜಿ ನಮೂನೆಯು ಸಹಾಯಕ ಆಯುಕ್ತರು ಧಾರ್ಮಿಕ ದತ್ತಿ ಇಲಾಖೆ ಮಂಗಳೂರು ಮತ್ತು ಜಿಲ್ಲಾಧಿಕಾರಿಗಳ ಕಚೇರಿಯ ಧಾರ್ಮಿಕ ದತ್ತಿ ಶಾಖೆಯಲ್ಲಿ ಲಭ್ಯವಿರುತ್ತದೆ.

ಮಂಗಳೂರು ತಾಲೂಕು: ಪ್ರವರ್ಗ ‘ಬಿ’ ಗೆ ಸಂಬಂಧಪಟ್ಟ ದೇವಸ್ಥಾನಗಳ ವಿವರ:- ಪಾವಂಜೆ ಗ್ರಾಮದ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಹಳೆಯಂಗಡಿ ಮಂಗಳೂರು, ಶಿಮಂತೂರು ಗ್ರಾಮದ ಶ್ರೀ ಆದಿಜನಾರ್ಧನ ದೇವಸ್ಥಾನ, ಮಂಗಳೂರು ತಾಲೂಕು, ಉಳ್ಳಾಲ ಗ್ರಾಮದ ಶ್ರೀ ಉಳಿಯತ್ತಾಯ ದೈವಸ್ಥಾನ ಮಂಗಳೂರು ತಾಲೂಕು, ಇರುವೈಲು ಗ್ರಾಮದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಕಳವಾರು ಗ್ರಾಮದ ಶ್ರೀ ಬೆಂಕಿನಾಥೇಶ್ವರ ದೇವಸ್ಥಾನ, ಕೋಟೆಕಾರು ಗ್ರಾಮದ ಶ್ರೀ ಕೊಂಡಾಣ ಪಿಲಿಚಾಮುಂಡಿ ದೈವಸ್ಥಾನ, ಬಡಗಎಡಪದವು ಗ್ರಾಮದ ಶ್ರೀ ಕಾಂಬೆಟ್ಟು ಸೋಮನಾಥ ದೇವಸ್ಥಾನ, ಅತ್ತಾವರ ಗ್ರಾಮದ ಶ್ರೀ ಚಕ್ರಪಾಣಿ ಗೋಪಿನಾಥ ದೇವಸ್ಥಾನ, ಸೂರಿಂಜೆ ಗ್ರಾಮದ ಪೊನ್ನಗಿರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಕೆಂಜಾರು, ಪೋರ್ಕೊಡಿ ಗ್ರಾಮದ ಶ್ರೀ ಪೊರ್ಕೋಡಿ ಸೋಮನಾಥೇಶ್ವರ ದೇವಸ್ಥಾನ, ತಡಂಬೈಲು ಗ್ರಾಮದ ಶ್ರೀ ದುರ್ಗಾಂಬಾ ದೇವಸ್ಥಾನ, ಕೋಟೆಕಾರು ಗ್ರಾಮದ ಶ್ರೀ ಮಲಿಯಾಳಿ ಚಾಮುಂಡಿ ದೆ ೈವಸ್ಥಾನ.

ಮಂಗಳೂರು ತಾಲೂಕಿನ ಪ್ರವರ್ಗ ‘ಸಿ’ಗೆ ಸಂಬಂಧಪಟ್ಟ ದೇವಸ್ಥಾನಗಳ ವಿವರ:- ಕಾಟಿಪಳ್ಳ ಗ್ರಾಮದ ಶ್ರೀ ವಿಶ್ವನಾಥ ದೇವಸ್ಥಾನ, ಪ್ರಾಂತ್ಯ ಮೂಡಬಿದ್ರಿ ಗ್ರಾಮದ ಶ್ರೀ ನಾಗಬ್ರಹ್ಮ ದೇವಸ್ಥಾನ, ಕೊಳಂಬೆ ಗ್ರಾಮದ ಶ್ರೀ ಅಳಕಳ ವಿಶ್ವನಾಥ ದೇವಸ್ಥಾನ, ಮಾಂಟ್ರಾಡಿ ಗ್ರಾಮದ ಶ್ರೀ ಪಡುಮಲೆ ದುರ್ಗಾಪರಮೇಶ್ವರಿ ದೇವಸ್ಥಾನ, ಬಡಗಎಕ್ಕಾರು ಗ್ರಾಮದ ಮತ್ತಾರು ಗುಳಿಗ ಪಂಜುರ್ಲಿ ದೈವಸ್ಥಾನ, ಕರ್ನಿರೆ ಗ್ರಾಮದ ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ಜಪ್ಪಿನಮೊಗರು ಗ್ರಾಮದ ಶ್ರೀ ಕರಿಂಬಸ್ಥಾನ ಭೂತಸ್ಥಾನ, ಕವತ್ತಾರು ಗ್ರಾಮದ ಶ್ರೀ ಸಾವಿರಾಳು ಧೂಮಾವತಿ ದೈವಸ್ಥಾನ, ತಲಪಾಡಿ ಗ್ರಾಮದ ಶ್ರೀ ಅಲಂಕಾರುಗುಡ್ಡೆ ಮಲರಾಯ ಧೂಮಾವತಿ ದೇವಸ್ಥಾನ, ಕೊಂಪದವು ಗ್ರಾಮದ ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ನೀರುಮಾರ್ಗ ಗ್ರಾಮದ ಶ್ರೀ ಅನಂತಪದ್ಮನಾಭ ದೇವಸ್ಥಾನ ಮಾಣೂರು, ನೀರುಡೆ ಗ್ರಾಮದ ಶ್ರೀ ನೆಲ್ಲಿತೀರ್ಥ ಸೋಮನಾಥೇಶ್ವರ ದೇವಸ್ಥಾನ, ಉಳಾಯಿಬೆಟ್ಟು ಗ್ರಾಮದ ಶ್ರೀ ವಿಶ್ವನಾಥೇಶ್ವರ ದೇವಸ್ಥಾನ, ಮೂಡುಶೆಡ್ಡೆ ಗ್ರಾಮದ ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ಕೆಳಡ್ಕ, ಬೊಂಡಂತಿಲ ಗ್ರಾಮದ (ಕಲ್ಲುಡೇಲು) ಶ್ರೀ ಸದಾಶಿವ ದೇವಸ್ಥಾನ, ಕಂದಾವರ ಗ್ರಾಮದ ಶ್ರೀ ನೀಲಕಂಠ ದೇವಸ್ಥಾನ, ಉಳಾಯಿಬೆಟ್ಟು ಗ್ರಾಮದ ಶ್ರೀ ಪೆರ್ಮಂಕಿ ಸದಾಶಿವ ದೇವಸ್ಥಾನ, ಬಡಗಎಡಪದವು ಗ್ರಾಮದ ಶ್ರೀ ಗೋಪಾಲಕೃಷ್ಣ ದೇವಸ್ಥಾನ, ಕಂದಾವರ ಗ್ರಾಮದ ಶ್ರೀ ಮೂಡಕೇರಿ ಧೂಮಾವತಿ ದೈವಸ್ಥಾನ, ಕೊಣಾಜೆ ಗ್ರಾಮದ ಶ್ರೀ ಮುಂಡಿತ್ತಾಯ ದೈವಸ್ಥಾನ, ಮೂಳೂರು ಗ್ರಾಮದ ಪಂಜನ್‍ತ್ತಾಯ ದೈವಸ್ಥಾನ, ಪಡುಶೆಡ್ಡೆ ಗ್ರಾಮದ ಶ್ರೀ ವಿಜಿಲ್ನಾಯ ಭೂತಸ್ಥಾನ, ಅಡ್ಯಾರು ಗ್ರಾಮದ ಶ್ರೀ ಮುಂಡಿತ್ತಾಯ ದೈವಸ್ಥಾನ, ಕೊಲ್ಲೂರು ಏಳಿಂಜೆ ಗ್ರಾಮದ ಶ್ರೀ ಮೂಕಾಂಬಿಕಾ ದೇವಸ್ಥಾನ, ಪ್ರಾಂತ್ಯ ಗ್ರಾಮದ ಶ್ರೀ ಚಂದ್ರ ಶೇಖರ ದೇವಸ್ಥಾನ, ಪ್ರಾಂತ್ಯ ಗ್ರಾಮದ ಶ್ರೀ ಗೌರಿ ದೇವಿ ದೇವಸ್ಥಾನ, ಕಿನ್ನಿಗೋಳಿ ಗ್ರಾಮದ ಶ್ರೀ ವೈದ್ಯನಾಥ ದೇವಸ್ಥಾನ, ಮೂಲ್ಕಿ ಗ್ರಾಮದ ವಡೇರಬೆಟ್ಟು, ಶ್ರೀ ಬೊಬ್ಬರ್ಯ ದೈವಸ್ಥಾನ, ಬಡಗ ಎಡಪದವು ಗ್ರಾಮದ ಶ್ರೀ ಕಮಲೇಶ ಸೋಮನಾಥ ದೇವಸ್ಥಾನ, ಬಪ್ಪನಾಡು ಗ್ರಾಮದ ಶ್ರೀ ಪಂಚಮಹಲ್ ಸದಾಶಿವ ದೇವಸ್ಥಾನ, ಕುಂಜತ್‍ಬೈಲ್ ಗ್ರಾಮದ ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ಮಾನಂಪಾಡಿ ಗ್ರಾಮದ ಶ್ರೀ ಶಂಕರನಾರಾಯಣ ದೇವಸ್ಥಾನ, ಮೊರ್ಕೋಡಿ, ಪೇಜಾವಡಿ ಗ್ರಾಮದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಕೆಂಜಾರು ಗ್ರಾಮದ ಶ್ರೀ ಮುಖ್ಯಪ್ರಾಣ ದೇವಸ್ಥಾನ, ಕೆಲೆಂಜಾರು ಗ್ರಾಮದ ಶ್ರೀ ಗೋಪಾಲಕೃಷ್ಣ ದೇವಸ್ಥಾನ, ಉಳಾಯಿಬೆಟ್ಟು ಗ್ರಾಮದ ಶ್ರೀ ಸದಾಶಿವ ದೇವಸ್ಥಾನ, ಕೊಳಂಬೆ ಗ್ರಾಮದ ಶ್ರೀ ನಾಗಬ್ರಹ್ಮ ದೇವಸ್ಥಾನ, ಗುರುಪುರ ಗ್ರಾಮದ ಶ್ರೀ ದುರ್ಗಾಂಬಾ ದೇವಸ್ಥಾನ, ಐಕಳ ಗ್ರಾಮದ ಶ್ರೀ ಕೊಡಮಂತಾಯ ದೈವಸ್ಥಾನ, ಮೆನ್ನಬೆಟ್ಟು ಗ್ರಾಮದ ಶ್ರೀ ಮೂರುಕಾವೇರಿ ಮಹಾಮ್ಮಾಯಿ ದೇವಿ ದೇವಸ್ಥಾನ, ಬಪ್ಪನಾಡು ಗ್ರಾಮದ ಶ್ರೀ ಹಳೆಕೋಟೆ ಹನುಮಂತ ದೇವಸ್ಥಾನ, ಕಾರ್ನಾಡು ಗ್ರಾಮದ ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ಪಡುಪಣಂಬೂರು ಗ್ರಾಮದ ಶ್ರೀ ಅನಂತ ದೇವಸ್ಥಾನ, ಸಸಿಹಿತ್ಲು ಗ್ರಾಮದ ಶ್ರೀ ರಕ್ತೇಶ್ವರಿ ದೇವಿ ದೇವಸ್ಥಾನ, ಕಿಲ್ಪಾಡಿ ಗ್ರಾಮದ ಶ್ರೀ ಪುನರೂರು ವಿಶ್ವನಾಥ ದೇವಸ್ಥಾನ, ಶೀಮಂತೂರು ಗ್ರಾಮದ ಶ್ರೀ ಬ್ರಹ್ಮಸ್ಥಾನ, ಶೀಮಂತೂರು ಗ್ರಾಮದ ಶ್ರೀ ಹನುಮಂತ ದೇವಸ್ಥಾನ, ಅತಿಕಾರಿಬೆಟ್ಟು ಗ್ರಾಮದ ಶ್ರೀ ಕರ್ನಿರೆ ಜನಾರ್ಧನ ದೇವಸ್ಥಾನ, ಅತಿಕಾರಿಬೆಟ್ಟು ಗ್ರಾಮದ ಶ್ರೀ ಕೊಲೆಕಾಡಿ ಶಾಸ್ತಾವೇಶ್ವರ ದೇವಸ್ಥಾನ, ಅತಿಕಾರಿಬೆಟ್ಟು ಗ್ರಾಮದ ಶ್ರೀ ಧೂಮಾವತಿ ದೇವಿ ದೈವಸ್ಥಾನ, ಸುರತ್ಕಲ್ ಗ್ರಾಮದ ಶ್ರೀ ಹನುಮಂತ ದೇವಸ್ಥಾನ, ಇಡ್ಯಾ ಗ್ರಾಮದ ಶ್ರೀ ಅಬ್ಬಗ ದೈವ ಭೂತ, ಪೆರ್ಮುದೆ ಗ್ರಾಮದ ಶ್ರೀ ವೆಂಕಟೇಶ್ವರ ದೇವಸ್ಥಾನ, ಪಣಂಬೂರು ಗ್ರಾಮದ ಶ್ರೀ ಬಲವೀಡು ವಿಷ್ಣುಮೂರ್ತಿ ದೇವಸ್ಥಾನ, ಪಣಂಬೂರು ಗ್ರಾಮದ ಶ್ರೀ ಬಲವೀಡು ಮಲ್ಲಿಗೆ ಭೂತ, ಕೆಂಜಾರು ಗ್ರಾಮದ ಶ್ರೀ ಗೋಪಾಲಕೃಷ್ಣ ದೇವಸ್ಥಾನ, ಕುತ್ತೆತ್ತೂರು ಗ್ರಾಮದ ಶ್ರೀ ಕಂಡಿಗೆ ಧರ್ಮಭೂತ ದೇವಸ್ಥಾನ, ಕಾವೂರು ಗ್ರಾಮದ ಶ್ರೀ ಪಡುಕೋಡಿ ಧೂಮಾವತಿ ದೇವಿ ದೇವಸ್ಥಾನ, ಕಾವೂರು ಗ್ರಾಮದ ಅರ್ತಿವಡಲು ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ಕಾವೂರು ಗ್ರಾಮದ ಶ್ರೀ ಇಷ್ಟದೇವತಾ ಭೂತ ದೇವಸ್ಥಾನ, ತೋಕೂರು ಗ್ರಾಮದ ಶ್ರೀ ಮಹಾದೇವತಾ ದೇವಸ್ಥಾನ, ಮುಚ್ಚೂರು/ಮಚ್ಚಿನ ಗ್ರಾಮದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಪಡುಪೆರಾರ್ ಗ್ರಾಮದ ಶ್ರೀ ಹೆಂಜಾಡಿ ದೈವ ದೇವಸ್ಥಾನ, ಮೂಳೂರು ಗ್ರಾಮದ ಶ್ರೀ ಜ್ಯಾರಿ ಬ್ರಹ್ಮದಾಯ ದೈವಸ್ಥಾನ, ಅರ್ಕುಳ ಗ್ರಾಮದ ಶ್ರೀ ಮೊಗರಂತಾಯ ಭೂತ ದೇವಸ್ಥಾನ, ಮಂಗಳೂರು ಕಸಾಬ ಗ್ರಾಮದ ಶ್ರೀ ತ್ರಿಶೂಲೇಶ್ವರ ದೇವಸ್ಥಾನ, ಮಂಗಳೂರು ಕಸಾಬ ಗ್ರಾಮದ ಶ್ರೀ ವಾದಿರಾಜ ಗೋಪಾಲಕೃಷ್ಣ ದೇವಸ್ಥಾನ, ಮಂಗಳೂರು ಕಸಾಬಾ ಗ್ರಾಮದ ಶ್ರೀ ಕೆರೆಕಟ್ಟೆ ಹನುಮಂತ ದೇವಸ್ಥಾನ, ಮಂಗಳೂರು ಕಸಾಬಾ ಗ್ರಾಮದ ಶ್ರೀ ಶಾಂತೇಶ್ವರ ಸ್ವಾಮಿ ದೇವಸ್ಥಾನ, ಮಂಗಳೂರು ಕಸಾಬಾ ಬಜಾರ್ ಗ್ರಾಮದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನ, ಕದ್ರಿ, ಮಂಗಳೂರು ಗ್ರಾಮದ ಶ್ರೀ ಚಂದ್ರಮೌಳೇಶ್ವರ ದೇವಸ್ಥಾನ, ಕರಂಗಲಪಾಡಿ, ಕಣ್ಣೂರು ಗ್ರಾಮದ ಶ್ರೀ ಮಂತ್ರದೈವ ದೈವಸ್ಥಾನ, ದೇಲಂತಬೆಟ್ಟು ಗ್ರಾಮದ ಶ್ರೀ ಜನಾರ್ಧನ ದೇವಸ್ಥಾನ, ಅದ್ಯಪಾಡಿ ಗ್ರಾಮದ ಶ್ರೀ ಧೂಮಾವತಿ ದೇವಸ್ಥಾನ, ಕುಂಜತ್‍ಬೈಲ್ ಗ್ರಾಮದ ಶ್ರೀ ಜನಾರ್ಧನ ದೇವಸ್ಥಾನ, ಅದ್ಯಪಾಡಿ ಗ್ರಾಮದ ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನ, ತಿರುವೈಲು ಗ್ರಾಮದ ಶ್ರೀ ಪಡುಮುಂಡಿತ್ತಾಯ ದೇವಸ್ಥಾನ ತಿರುವೈಲು ಗ್ರಾಮದ ಶ್ರೀ ಪೆಮರ್ಂಕಿ ಮೈಲಾರ ದೇವಸ್ಥಾನ, ಉಳ್ಳಾಲ ಗ್ರಾಮದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ, ಪಚ್ಚನಾಡಿ ಗ್ರಾಮದ ಶ್ರೀ ಬನಂದಲೆ ವಿಷ್ಣುಮೂರ್ತಿ ದೇವಸ್ಥಾನ, ಬೈಕಂಪಾಡಿ ಗ್ರಾಮದ ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ಮಂಗಳೂರು ಟೌನ್ ಗ್ರಾಮದ ಶ್ರೀ ಕಲ್ಯಾಣಿ ಹನುಮಂತ ದೇವಸ್ಥಾನ ಉಳಿಪಾಡಿ ಗ್ರಾಮದ ಶ್ರೀ ಉಮಾಮಹೇಶ್ವರ ದೇವಸ್ಥಾನ, ಬಳ್ಳುಂಜೆ ಗ್ರಾಮದ ಶ್ರೀ ರಾಜನ್ ದೈವ ಧೂಮಾವತಿ ದೇವಿ ದೈವಸ್ಥಾನ, ದೇಲಂತಬೆಟ್ಟು ಗ್ರಾಮದ ಶ್ರೀ ಕಯ್ಯಾರು ಬ್ರಹ್ಮ ದೇವಸ್ಥಾನ, ಮೂಳೂರು ಗ್ರಾಮದ ಶ್ರೀ ಸೋಮನಾಥ ದೇವಸ್ಥಾನ, ಹರೇಕಳ ಗ್ರಾಮದ ಶ್ರೀ ಧೂಮಾವತಿ ದೇವಿ ದೈವಸ್ಥಾನ, ಹರೇಕಳ ಗ್ರಾಮದ ಶ್ರೀ ಮುಂಡಿತ್ತಾಯ ದೈವಸ್ಥಾನ, ಹರೇಕಳ ಗ್ರಾಮದ ಶ್ರೀ ಕೊಡಮಂತ್ತಾಯ ದೈವಸ್ಥಾನ, ಹೊಸಬೆಟ್ಟು ಗ್ರಾಮದ ಶ್ರೀ ಕೊಡಮಂತ್ತಾಯ ದೈವಸ್ಥಾನ, ಇರ್ವತ್ತೂರು ಗ್ರಾಮದ ಶ್ರೀ ದುರ್ಗಾಪರಮೇಶ್ವರಿ ದೇವಿ ದೇವಸ್ಥಾನ, ಕಣ್ಣೂರು ಗ್ರಾಮದ ಶ್ರೀ ಮಂಚಿ ದೇವತಾ ದೇವಸ್ಥಾನ, ಕಿಲ್ಪಾಡಿ ಗ್ರಾಮದ ಶ್ರೀ ವಿಶ್ವನಾಥ ದೇವಸ್ಥಾನ, ಕಿಲ್ಪಾಡಿ ಗ್ರಾಮದ ಶ್ರೀ ಕುಮಾರ ಮಂಗಿಲ ಸುಬ್ರಾಯ ದೇವಸ್ಥಾನ, ಕಿಲ್ಪಾಡಿ ಗ್ರಾಮದ ಶ್ರೀ ಹನುಮಂತ ದೇವಸ್ಥಾನ, ಕೊಡಿಯಾಲ್ ಬೈಲ್ ಗ್ರಾಮದ ಶ್ರೀ ನೆಲ್ಲಿಕಾಯಿ ಹನುಮಂತ ದೇವಸ್ಥಾನ, ಪಾಲಡ್ಕ ಗ್ರಾಮದ ಶ್ರೀ ದತ್ತಾತ್ರೇಯ ದೇವಸ್ಥಾನ , ಧರೆಗುಡ್ಡೆ ಗ್ರಾಮದ ಶ್ರೀ ಮಹಾಗಣಪತಿ ದೇವಸ್ಥಾನ, ಧರೆಗುಡ್ಡೆ ಗ್ರಾಮದ ಶ್ರೀ ಸೂರ್ಯನಾರಾಯಣ ದೇವಸ್ಥಾನ, ಪುತ್ತಿಗೆ ಗ್ರಾಮದ ಶ್ರೀ ರಾಮಚಂದ್ರ ದೇವಸ್ಥಾನ, ಕಲ್ಲಮುಂಡ್ಕೂರು ಗ್ರಾಮದ ಶ್ರೀ ಕೊಂತ್ರಪಾಡಿ ಬ್ರಹ್ಮ ದೇವಸ್ಥಾನ, ಪುಚ್ಚೆಮುಗೇರು ಗ್ರಾಮದ ಶ್ರೀ ಇಷ್ಟದೇವತಾ ದೇವಸ್ಥಾನ, ಪಡುಮೂರ್ನಾಡು ಗ್ರಾಮದ ಶ್ರೀ ಬಸ್ತಿ ಗೋಪಾಲಕೃಷ್ಣ ದೇವಸ್ಥಾನ, ಧರೆಗುಡ್ಡೆ ಗ್ರಾಮದ ಶ್ರೀ ಕಲ್ಲಪುತ್ತಿಗೆ ಸೂರ್ಯನಾರಾಯಣ ದೇವಸ್ಥಾನ, ಧರೆಗುಡ್ಡೆ ಗ್ರಾಮದ ಶ್ರೀ ವಿನಾಯಕ ದೇವಸ್ಥಾನ, ಧರೆಗುಡ್ಡೆ ಗ್ರಾಮದ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ, ಧರೆಗುಡ್ಡೆ ಮೂಡುಗುಡ್ಡೆ ಗ್ರಾಮದ ಶ್ರೀ ಸೋಮನಾಥ ದೇವಸ್ಥಾನ, ಪಡುಮೂರ್ನಾಡು ಗ್ರಾಮದ ಶ್ರೀ ಚಂದ್ರಶೇಖರ ದೇವಸ್ಥಾನ, ಪುತ್ತಿಗೆ ಗ್ರಾಮದ ಶ್ರೀ ದೈವಂತಿ ದೇವಸ್ಥಾನ, ಪಡುಮೂರ್ನಾಡು ಗ್ರಾಮದ ಶ್ರೀ ಕೊಡಮಂತ್ತಾಯ ದೇವಸ್ಥಾನ, ಶಿರ್ತಾಡಿ ಗ್ರಾಮದ ಶ್ರೀ ಕದಿರು ದೈವಸ್ಥಾನ, ಸೋಮೇಶ್ವರ ಗ್ರಾಮದ ಉಳ್ಳಾಲ ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ಬಪ್ಪನಾಡು ಗ್ರಾಮದ ಶ್ರೀ ಕೋಟೆಕೇರಿ ಅನಂತೇಶ್ವರ ದೇವಸ್ಥಾನ, ಕುತೆತ್ತೂರು ಗ್ರಾಮದ ಶ್ರೀ ಜಾರಂದಬೀಡು ಧೂಮಾವತಿ ದೇವಿ ದೇವಸ್ಥಾನ.

ಬಂಟ್ವಾಳ ತಾಲೂಕು: ಬಂಟ್ವಾಳ ತಾಲೂಕಿಗೆ ಸಂಬಂಧಪಟ್ಟ ಪ್ರವರ್ಗ ‘ಬಿ’ ಪಟ್ಟಿಯ ದೇವಸ್ಥಾನಗಳ ವಿವರ ಇಂತಿವೆ:- ಬಂಟ್ವಾಳ ತಾಲೂಕಿನ ಕಡೇಶ್ವಾಲ್ಯ ಗ್ರಾಮದ ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನ, ಇರಾ ಗ್ರಾಮದ ಶ್ರೀ ಸೋಮನಾಥ ದೇವಸ್ಥಾನ ಕುಂಡಾವು, ಅಮ್ಟೂರು ಗ್ರಾಮದ ಶ್ರೀ ನರಹರಿ ಪರ್ವತ ಸದಾಶಿವ ದೇವಸ್ಥಾನ, ದೇಲಂತಬೆಟ್ಟು ಗ್ರಾಮದ ಶ್ರೀ ಲಕ್ಷ್ಮೀ ವಿಷ್ಣುಮೂರ್ತಿ ದೇವಸ್ಥಾನ.
ಬಂಟ್ವಾಳ ತಾಲೂಕಿಗೆ ಸಂಬಂಧಪಟ್ಟ ಪ್ರವರ್ಗ ‘ಸಿ’ ಪಟ್ಟಿಯ ದೇವಸ್ಥಾನಗಳ ವಿವರ ಇಂತಿವೆ:- ಅಜ್ಜಿಬೆಟ್ಟು ಗ್ರಾಮದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ , ಬರಿಮಾರು ಗ್ರಾಮದ ಶ್ರೀ ಕಾನಲ್ತಾಯ ದೈವಸ್ಥಾನ, ಕಳ್ಳಿಗೆ ಗ್ರಾಮದ ಶ್ರೀ ಕನಪಾಡಿತ್ತಾಯ ದೈವಸ್ಥಾನ, ಕನ್ಯಾನ ಗ್ರಾಮದ ಶ್ರೀ ಮಲರಾಯ ದೈವಸ್ಥಾನ, ಪಂಜಿಕಲ್ಲು ಗ್ರಾಮದ ಶ್ರೀ ಕೊಡಮಂತ್ತಾಯ ದೈವಸ್ಥಾನ, ವೀರಕಂಬ ಗ್ರಾಮದ ಶ್ರೀ ಉಳ್ಳಾಲ್ತಿ ದೈವಸ್ಥಾನ, ವಕ್ಕೆತ್ತೂರು ಗ್ರಾಮದ ಶ್ರೀ ಮಲರಾಯ ದೈವಸ್ಥಾನ, ಚೆನ್ನೈತೋಡಿ ಗ್ರಾಮದ ಶ್ರೀ ಕರಿಮಲೆ ಧೂಮಾವತಿ ದೈವಸ್ಥಾನ, ಅಜ್ಜಿಬೆಟ್ಟು ಗ್ರಾಮದ ಶ್ರೀ ನೀಲಿಕೊಡಮಂತ್ತಾಯ ದೈವಸ್ಥಾನ , ಕನ್ಯಾನ ಗ್ರಾಮದ ದೇಲಂತಬೆಟ್ಟು ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ರಾಯಿ ಗ್ರಾಮದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಸಜೀಪನಡು ಗ್ರಾಮದ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ, ಶಂಬೂರು ಗ್ರಾಮದ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ ಶಂಬೂರು, ಅಜ್ಜಿಬೆಟ್ಟು ಗ್ರಾಮದ ಶ್ರೀ ವಿಶ್ವನಾಥ ದೇವಸ್ಥಾನ, ನಾವೂರು ಗ್ರಾಮದ ಶ್ರೀ ಸೋಮನಾಥ ದೇವಸ್ಥಾನ, ಅಗ್ರಹಾರ ನಾವೂರು ಗ್ರಾಮದ ಶ್ರೀ ಗೋಪಾಲಕೃಷ್ಣ ದೇವಸ್ಥಾನ, ಅಮ್ಮುಂಜೆ ಗ್ರಾಮದ ಶ್ರೀ ವಿನಾಯಕ ದೇವಸ್ಥಾನ, ನರಿಕೊಂಬು ಗ್ರಾಮದ ಶ್ರೀ ಕೋದಂಡ ರಾಮಚಂದ್ರ ದೇವಸ್ಥಾನ, ಪೆರಾಜೆ ಗ್ರಾಮದ ಶ್ರೀ ಗುಡ್ಡೆಚಾಮುಂಡಿ ದೇವರ ದೇವಸ್ಥಾನ, ಇಡ್ಕಿದು ಗ್ರಾಮದ ಶ್ರೀ ಕೊಲ್ಪೆ ಷಣ್ಮುಖ ಸುಬ್ರಾಯ ದೇವಸ್ಥಾನ, ಮಂಚಿ ಗ್ರಾಮದ ಶ್ರೀ ಮಹಾದೇವ ದೇವಸ್ಥಾನ, ನರಿಕೊಂಬು ಗ್ರಾಮದ ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ವಿಟ್ಲ ಗ್ರಾಮದ ಶ್ರೀ ಅರ್ಕುಳ ಗುಳಿಯಾಮ್ಮ ದೇವಿ ದೇವಸ್ಥಾನ, ಕಲ್ಲಬೆಟ್ಟು ಗ್ರಾಮದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಸಜಿಪ ಮೂಡ ಗ್ರಾಮದ ಶ್ರೀ ನಡುಬೈಲೂರು ಕೋಲಾರತಿ ಭೂತಲಾಯ, ಬೋಳಂತೂರು ಗ್ರಾಮದ ಶ್ರೀ ಕುರಿಯ ದಿನ್‍ತ್ತಾಯ ಮತ್ತು ಮೂವರು ದೈವಗಳು, ಚೆನೈತೋಡಿ ಗ್ರಾಮದ ಶ್ರೀ ಜುಮಾದಿ ದೈವಸ್ಥಾನ, ಕಳ್ಳಿಗೆ ಗ್ರಾಮದ ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ನರಿಕೊಂಬು ಗ್ರಾಮದ ಶ್ರೀ ಭಯಂಕೇಶ್ವರ ದೇವಸ್ಥಾನ, ಅಮ್ಟಾಡಿ ಗ್ರಾಮದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಕೊಲ್ನಾಡು ಗ್ರಾಮದ ಶ್ರೀ ನರಸಿಂಹ ದೇವಸ್ಥಾನ, ನೆಟ್ಲಮುಡ್ನೂರು ಗ್ರಾಮದ ಶ್ರೀ ಕರ್ನಿಕ ದೇವಸ್ಥಾನ, ಮಂಚಿ ಗ್ರಾಮದ ಶ್ರೀ ಸೀತಾ ಮಾಧವ ದೇವಸ್ಥಾನ, ಬದಿನಡಿ ರಾಯಿ ಗ್ರಾಮದ ಶ್ರೀ ನಾಗಬ್ರಹ್ಮ ಸುಬ್ರಹ್ಮಣ್ಯೇಶ್ವರ ದೇವಸ್ಥಾನ, ಬಂಟ್ವಾಳ ಗ್ರಾಮದ ಶ್ರೀ ಪಂಜುರ್ಲಿ ಮತ್ತು ಪಿಲಿಚಾಮುಂಡಿ ದೇವಿ ಗುಡ್ಡೆ ಚಾಮುಂಡಿ ದೇವಿ ಪೆರಾಜೆ, ಪೆದಮಲೆ ಗ್ರಾಮದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಅರಳ ಗ್ರಾಮದ ಶ್ರೀ ಗರುಡ ಮಹಾಲಕ್ಷ್ಮೀ ದೇವಸ್ಥಾನ, ಅರಳ ಗ್ರಾಮದ ಶ್ರೀ ಕೊಡಮಂತ್ತಾಯ ದೈವಸ್ಥಾನ, ಬಡ್ಡಕಟ್ಟೆ ಗ್ರಾಮದ ಶ್ರೀ ಕಲ್ಲುರ್ಟಿ ದೈವಸ್ಥಾನ, ಅಜ್ಜಿಬೆಟ್ಟು ಗ್ರಾಮದ ಶ್ರೀ ಮುಜಿಲ್ನಾಯ ದೇವಸ್ಥಾನ, ನಾವೂರು ಗ್ರಾಮದ ಶ್ರೀ ದುರ್ಗಾಪರಮೇಶ್ವರಿ ದೇವಿ, ಕಾವಳಕಟ್ಟೆ ಗ್ರಾಮದ ಶ್ರೀ ಕೊಡಮಂತ್ತಾಯ ದೈವಸ್ಥಾನ, ಕಾವಳಮುಡ್ನೂರು ಗ್ರಾಮದ ಶ್ರೀ ನರಿಕೊಂಬು ವಿಷ್ಣುಮೂರ್ತಿ ದೇವಸ್ಥಾನ, ಮದುನಬೀರು ಗ್ರಾಮದ ಶ್ರೀ ಮಂಗಳಾದೇವಿ ದೇವಸ್ಥಾನ, ಶಂಭೂರು ಗ್ರಾಮದ ಶ್ರೀ ಮಳಿಗೇರಿ ಇಷ್ಟದೇವತಾ ದೇವಸ್ಥಾನ, ಕೊಲ್ನಾಡು ಮಂಚಿ ಗ್ರಾಮದ ಶ್ರೀ ಗೋಪಾಲಕೃಷ್ಣ ದೇವಸ್ಥಾನ, ಈಶ್ವರಮಂಗಲ ಗ್ರಾಮದ ಶ್ರೀ ಸದಾಶಿವ ದೇವಸ್ಥಾನ, ತುಂಬೆ ಗ್ರಾಮದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಸಜಿಪ ಮುನ್ನೂರು ಗ್ರಾಮದ ಅನ್ನಂಪಾಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಸರಪಾಡಿ ಗ್ರಾಮದ ಶ್ರೀ ಶರಭೇಶ್ವರ ದೇವಸ್ಥಾನ , ವಿಟ್ಲ ಗ್ರಾಮದ ಶ್ರೀ ಪಂಚದುರ್ಗಾಪರಮೇಶ್ವರಿ ದೇವಸ್ಥಾನ, ಕೇಪು ಗ್ರಾಮದ ಶ್ರೀ ಸುಬ್ರಾಯ ದೇವಸ್ಥಾನ, ಕೇಪು ಗ್ರಾಮದ ಶ್ರೀ ಧೂಮಾವತಿ ದೈವಸ್ಥಾನ, ಕುಂಡಡ್ಕ ಗ್ರಾಮದ ಶ್ರೀ ವಿಷ್ಣುಮೂರ್ತಿ ದೇವಸ್ಥಾನ , ವಿಟ್ಲ ಗ್ರಾಮದ ಶ್ರೀ ವೆಂಕಟ್ರಮಣ ಮತ್ತು ಪಡ್ನೂರು ವೆಂಕಟ್ರಮಣ ದೇವಸ್ಥಾನ, ವಿಟ್ಲ ಗ್ರಾಮದ ಶ್ರೀ ಜಠಾಧಾರಿ ದೇವರು ದೇವಸ್ಥಾನ, ಕನ್ಯಾನ ಗ್ರಾಮದ ಶ್ರೀ ಬೈದ್ಯಾರಿ ಭಟ್ಟಾಣ್ಣಾಯ ದೇವಸ್ಥಾನ, ವಕ್ಕೆತ್ತೂರು ಗ್ರಾಮದ ಶ್ರೀ ಉಮಾಮಹೇಶ್ವರಿ ದೇವಸ್ಥಾನ, ವಿಟ್ಲ ಗ್ರಾಮದ ಶ್ರೀ ಕಾಶಿ ವಿಶ್ವೇಶ್ವರ ದೇವಸ್ಥಾನ, ಯೆರುಂಬ ಗ್ರಾಮದ ಶ್ರೀ ವಿಷ್ಣುಮಂಗಲ ವಿಷ್ಣುಮೂರ್ತಿ ದೇವಸ್ಥಾನ.

ಬೆಳ್ತಂಗಡಿ ತಾಲೂಕು: ಬೆಳ್ತಂಗಡಿ ತಾಲೂಕಿಗೆ ಸಂಬಂಧಪಟ್ಟ ಪ್ರವರ್ಗ ‘ಬಿ’ ಪಟ್ಟಿಯ ದೇವಸ್ಥಾನಗಳ ವಿವರ ಇಂತಿವೆ:- ಶಿಬಾಜೆ ಗ್ರಾಮದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಶಿಶಿಲ ಗ್ರಾಮದ ಶ್ರೀ ಶಿಶಿಲೇಶ್ವರ ದೇವಸ್ಥಾನ, ಶಿಶಿಲ ಗ್ರಾಮದ ಶ್ರೀ ಬೆಳ್ತಂಗಡಿ ನಾರಾವಿ ಸೂರ್ಯನಾರಾಯಣ ದೇವಸ್ಥಾನ, ಆರಂಬೋಡಿ ಗ್ರಾಮದ ಶ್ರೀ ಪಂಚದುರ್ಗಾಪರಮೇಶ್ವರಿ ದೇವಸ್ಥಾನ, ನಿಡಿಗಲ್ ಕನ್ಯಾಡಿ ಗ್ರಾಮದ ಶ್ರೀ ಲೋಕನಾಥೇಶ್ವರ ದೇವಸ್ಥಾನ.
ಬೆಳ್ತಂಗಡಿ ತಾಲೂಕಿಗೆ ಸಂಬಂಧಪಟ್ಟ ಪ್ರವರ್ಗ ‘ಸಿ’ ಪಟ್ಟಿಯ ದೇವಸ್ಥಾನಗಳ ವಿವರ ಇಂತಿವೆ:-ಪಜಿರಡ್ಕ ಗ್ರಾಮದ ಶ್ರೀ ಸದಾಶಿವ ದೇವಸ್ಥಾನ, ಬೆಟ್ಟು ಚಾರ್ಮಾಡಿ ಗ್ರಾಮದ ಶ್ರೀ ಕಕ್ಕಿಂಜೆ ಇಷ್ಟದೇವತಾ ದೇವಸ್ಥಾನ, ಮಾಣೂರು ಮಂಚಿ ಗ್ರಾಮದ ಶ್ರೀ ಧರ್ಮಾಶಾಸ್ತಾವು ದೇವಸ್ಥಾನ, ಮುಡ್ನೂರು ಗ್ರಾಮದ ಶ್ರೀ ದುರ್ಗಾದೇವಿ ದೇವಸ್ಥಾನ ಉಜಿರೆ, ಮುಂಡತ್ತೋಡಿ ಗ್ರಾಮದ ಶ್ರೀ ಗೋಪಾಲಕೃಷ್ಣ ದೇವಸ್ಥಾನ, ಮುಂಡಾಜೆ ಗ್ರಾಮದ ಶ್ರೀ ಮೂರ್ತಿಲ್ಲಾಯ ದೇವಸ್ಥಾನ, ಇಂದಬೆಟ್ಟು ಗ್ರಾಮದ ಶ್ರೀ ವೀರಭದ್ರ ದೇವಸ್ಥಾನ, ಇಂದಬೆಟ್ಟು ಗ್ರಾಮದ ಶ್ರೀ ಚಾರ್ಮಡಿ ಇಷ್ಟದೇವತಾ ದೇವಸ್ಥಾನ, ನಿಡ್ಲೆ ಗ್ರಾಮದ ಶ್ರೀ ಪಾತಾಳೋತ್ಸವ ಜಾತಾರು ಭೂತ, ಕೊಕ್ಕಡ ಗ್ರಾಮದ ಶ್ರೀ ಪುತ್ತಿಗೆ ವಿಷ್ಣುಮೂರ್ತಿ ದೇವಸ್ಥಾನ, ಪದಂಗಡಿ ಗ್ರಾಮದ ಶ್ರೀ ಒಡೀಲ್ ಮಹಾಲಿಂಗೇಶ್ವರ ದೇವಸ್ಥಾನ, ಮೇಲಂತಬೆಟ್ಟು ಗ್ರಾಮದ ಶ್ರೀ ಬ್ರಹ್ಮದೇವರು ದೇವಸ್ಥಾನ, ಮೇಲಂತಬೆಟ್ಟು ಗ್ರಾಮದ ಶ್ರೀ ನರಸಿಂಹ ದೇವಸ್ಥಾನ, ಗುಂಡೂರು ಗ್ರಾಮದ ಶ್ರೀ ಕುಂಜಾಡಿ ವಿಷ್ಣುಮೂರ್ತಿ ದೇವಸ್ಥಾನ, ಹೊಸಂಗಡಿ ಗ್ರಾಮದ ಶ್ರೀ ಕೋರಂಗಲ ಗೋಪಾಲಕೃಷ್ಣ ದೇವಸ್ಥಾನ, ದೇಲಂತಬೆಟ್ಟು ಗ್ರಾಮದ ಶ್ರೀ ಮುಂಡೂರು ದುರ್ಗಾದೇವಿ ದೇವಸ್ಥಾನ, ನಂದಿಬೆಟ್ಟು ಗ್ರಾಮದ ಶ್ರೀ ನಂದಿಕೇಶ್ವರ ದೇವಸ್ಥಾನ ಗರ್ಡಾಡಿ ಗ್ರಾಮದ ಶ್ರೀ ದುರ್ಗಾದೇವಿ ದೇವಸ್ಥಾನ ಮೂಂಡೂರು, ತೋಟತ್ತಡಿ ಗ್ರಾಮದ ಶ್ರೀ ಸೋಮನಾಥೇಶ್ವರ ದೇವಸ್ಥಾನ, ಮೇಲಂತಬೆಟ್ಟು ಗ್ರಾಮದ ಶ್ರೀ ನಾಗಬ್ರಹ್ಮ ದೇವಸ್ಥಾನ, ನ್ಯಾಯ (ನಾಳ) ಗ್ರಾಮದ ಶ್ರೀ ನಾಳ ದುರ್ಗಾಪರಮೇಶ್ವರಿ ದೇವಸ್ಥಾನ, ವೇಣೂರು ಗ್ರಾಮದ ಶ್ರೀ ಪ್ರಕಾರ ಜನಾರ್ಧನ ದೇವಸ್ಥಾನ, ಕಾಶಿಪಟ್ಣ ಗ್ರಾಮದ ಶ್ರೀ ನಿಡ್ಲಾ ಅನಂತೇಶ್ವರ ದೇವಸ್ಥಾನ, ಕಾಶಿಪಟ್ಣ ಗ್ರಾಮದ ಶ್ರೀ ಅನಂತೇಶ್ವರ ದೇವಸ್ಥಾನ, ಪುದುಬೆಟ್ಟು ಗ್ರಾಮದ ಶ್ರೀ ವನದುರ್ಗಾದೇವಿ ದೇವಸ್ಥಾನ, ನಾಡ ಗ್ರಾಮದ ಶ್ರೀ ಸೂರ್ಯ ದೇವಸ್ಥಾನ, ಲೈಲಾ ಗ್ರಾಮದ ಶ್ರೀ ದುರ್ಗಾಪರಮೇಶ್ವರಿ ದೇವಿ, ಇಂದಬೆಟ್ಟು ಗ್ರಾಮದ ಚಾರ್ಮಾಡಿ ಶ್ರೀ ಇಷ್ಟದೇವತಾ ದೇವಸ್ಥಾನ, ಅತ್ರಿಜಾರು ಗ್ರಾಮದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಕರಂಬಾರು ಗ್ರಾಮದ ಶ್ರೀ ಕೊರ್ಲಿ ಈಶ್ವರ ದೇವಸ್ಥಾನ, ಇಂದಬೆಟ್ಟು ಗ್ರಾಮದ ಶ್ರೀ ಬಂಗಾಡಿ ಹಾಡಿ ದೈವ ಕರಾಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಮಿತ್ತಬಾಗಿಲು ಗ್ರಾಮದ ಶ್ರೀ ಕೊಲ್ಲಿ ದುರ್ಗಾಪರಮೇಶ್ವರಿ ದೇವಸ್ಥಾನ, ನಾವರ ಗ್ರಾಮದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಅಳದಂಗಡಿ ಗ್ರಾಮದ ಶ್ರೀ ಬಡಗಕಾರಂದೂರು ಸೋಮನಾಥ ದೇವಸ್ಥಾನ, ಕೊೈಲ ಗ್ರಾಮದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಶಿರ್ಲಾಲು ಗ್ರಾಮದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ.

ಪುತ್ತೂರು ತಾಲೂಕು :ಪುತ್ತೂರು ತಾಲೂಕಿಗೆ ಸಂಬಂಧಪಟ್ಟ ಪ್ರವರ್ಗ ‘ಬಿ’ ಪಟ್ಟಿಯ ದೇವಸ್ಥಾನಗಳ ವಿವರ ಇಂತಿವೆ:- ಪುತ್ತೂರು ರಾಮಕುಂಜ ಗ್ರಾಮದ ಶ್ರೀ ರಾಮಕುಂಜೇಶ್ವರ ದೇವಸ್ಥಾನ, ಕಡಬ ಗ್ರಾಮದ ಶ್ರೀ ದುಗಾರ್ಂಬಾ ದೇವಸ್ಥಾನ, ಬಲ್ನಾಡು ಗ್ರಾಮದ ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನ, ಆರ್ಯಾಪು ಗ್ರಾಮದ ಶ್ರೀ ಕಾರ್ಪಾಡಿ ಸುಬ್ರಹ್ಮಣ್ಯ ದೇವಸ್ಥಾನ.
ಪುತ್ತೂರು ತಾಲೂಕಿಗೆ ಸಂಬಂಧಪಟ್ಟ ಪ್ರವರ್ಗ ‘ಸಿ’ ಪಟ್ಟಿಯ ದೇವಸ್ಥಾನಗಳ ವಿವರ ಇಂತಿವೆ:-ಕಾವು ಗ್ರಾಮದ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ, ಕುಂಜೂರು ಆರ್ಯಾಪು ಗ್ರಾಮದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಪುತ್ತೂರು ಗ್ರಾಮದ ಶ್ರೀ ಕಲ್ಲೇಗ ಕಲ್ಕುಡ ದೈವಸ್ಥಾನ, ಕೊಡಿಪಾಡಿ ಶ್ರೀ ಜನಾರ್ಧನ ದೇವಸ್ಥಾನ, ಇರ್ದೆ ಗ್ರಾಮದ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಮತ್ತು ಪೂಮಾಣಿ ಕಿನ್ನಿಮಾಣಿ ದೈವಗಳ ಕದಿಕೆ ಚಾವಡಿ ಶ್ರೀ ಶ್ರೀಕಂಠ ಸ್ವಾಮಿ ಮಹಾಗಣಪತಿ ದೇವಸ್ಥಾನ ಕಡಬ, ಬಡಗನೂರು ಪಡುಮಲೆ ಗ್ರಾಮದ ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ಕೆಮ್ಮಿಂಜೆ ಗ್ರಾಮದ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ, ಬಿಳಿನೆಲೆ ಗ್ರಾಮದ ಶ್ರೀ ಗೋಪಾಲಕೃಷ್ಣ ದೇವಸ್ಥಾನ, ಪಡ್ನೂರು ಗ್ರಾಮದ ಶ್ರೀ ಮದಗಜನಾರ್ಧನ ದೇವಸ್ಥಾನ, ಕೆಯ್ಯೂರು ಗ್ರಾಮದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಇಚ್ಲಂಪಾಡಿ ಗ್ರಾಮದ ಶ್ರೀ ಬೀಡಿನ ದೈವಗಳ ದೇವಸ್ಥಾನ, ಕುತ್ರುಪಾಡಿ ಗ್ರಾಮದ ಶ್ರೀ ತಲೇಕಿ ಶ್ರೀನಿವಾಸ ದೇವಸ್ಥಾನ, ಬಾಯಂಪಾಡಿ ಗ್ರಾಮದ ಶ್ರೀ ಷಣ್ಮುಖ ದೇವಸ್ಥಾನ, ಶಿರಾಡಿ ಗ್ರಾಮದ ಶ್ರೀ ಅಮ್ಮಾಜೆ ದುರ್ಗಾಪರಮೇಶ್ವರಿ ದೇವಸ್ಥಾನ, ನಾಲ್ಕೂರು ಗ್ರಾಮದ ಶ್ರೀ ದುರ್ಗಾಪರಮೇಶ್ವರಿ ದೇವಿ ದೇವಸ್ಥಾನ, ಬೆಳ್ಳಿಪ್ಪಾಡಿ ಮರಕತ ಗ್ರಾಮದ ಶ್ರೀ ಮಠದ ಬೆಟ್ಟು ದುರ್ಗಾಪರಮೇಶ್ವರಿ ದೇವಿ ದೇವಸ್ಥಾನ, ಶಾಂತಿಗೋಡು ಗ್ರಾಮದ ಶ್ರೀ ವೀರಮಂಗಲ ವಿಷ್ಣುಮೂರ್ತಿ ದೇವಸ್ಥಾನ, ಕುದ್ಮಾರು ಗ್ರಾಮದ ಶ್ರೀ ಬರೆಪ್ಪಾಡಿ ಪಂಚಲಿಂಗೇಶ್ವರ ದೇವಸ್ಥಾನ, ಕೊೈಲ ಗ್ರಾಮದ ಶ್ರೀ ಆತೂರು ಸದಾಶಿವ ದೇವಸ್ಥಾನ, ಬಜತ್ತೂರು ಗ್ರಾಮದ ಶ್ರೀ ವೊಳಲು ಪಂಚಲಿಂಗೇಶ್ವರ ದೇವಸ್ಥಾನ, ರಾಮಕುಂಜ ಗ್ರಾಮದ ಶ್ರೀ ದಂಡತೀರ್ಥ ಹನುಮಂತ ದೇವಸ್ಥಾನ, ಅಲಂತಾಯ ಗ್ರಾಮದ ಶ್ರೀ ಪೆರ್ಲ ಷಣ್ಮುಖ ಹನುಮಂತ ದೇವಸ್ಥಾನ, ನೂಜಿ ಬಾಳ್ತಿಲ ಗ್ರಾಮದ ಶ್ರೀ ಸುಬ್ರಹ್ಮಣ್ಯ ಸುಬ್ರಾಯ ದೇವಸ್ಥಾನ, ಕುಟ್ರುಪಾಡಿ ಗ್ರಾಮದ ಶ್ರೀ ಸುಬ್ರಹ್ಮಣ್ಯ ಸುಬ್ರಾಯ ದೇವಸ್ಥಾನ, ಕೊಂಬಾರು ಗ್ರಾಮದ ಶ್ರೀ ಸುಬ್ರಹ್ಮಣ್ಯ ಷಣ್ಮುಖ ನರಸಿಂಹ ದೇವಸ್ಥಾನ, ಬಿಳಿನೆಲೆ ಗ್ರಾಮದ ಶ್ರೀ ಸುಬ್ರಹ್ಮಣ್ಯ ಸುಬ್ರಾಯ ದೇವಸ್ಥಾನ, ಐತೂರು ಗ್ರಾಮದ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ, ಐತೂರು ಗ್ರಾಮದ ಶ್ರೀ ಸುಬ್ರಹ್ಮಣ್ಯ ಸುಬ್ರಾಯ ದೇವಸ್ಥಾನ, ಕೋಡಿಂಬಾಳ ಗ್ರಾಮದ ಶ್ರೀ ಸುಬ್ರಹ್ಮಣ್ಯ ಸುಬ್ರಾಯ ದೇವಸ್ಥಾನ, ಕಡಬ ಗ್ರಾಮದ ಶ್ರೀ ಸುಬ್ರಹ್ಮಣ್ಯ ಸುಬ್ರಾಯ ದೇವಸ್ಥಾನ, ಪಡುವನ್ನೂರು ಗ್ರಾಮದ ಶ್ರೀ ಪಡುಮಲೆ ಶಾಸ್ತಾವು ದೇವಸ್ಥಾನ, ನೆಟ್ಟಣಿಗೆ ಗ್ರಾಮದ ಶ್ರೀ ಮೂಡ್ನೂರು ಮಂಡ್ಯ ಶಾಸ್ತರ ದೇವಸ್ಥಾನ, ಚಾರ್ವಾಕ ಗ್ರಾಮದ ಶ್ರೀ ಕಸ್ಪಾಡಿ ಕಪಿಲೇಶ್ವರ ದೇವಸ್ಥಾನ, ನೆಟ್ಟಣಿಗೆ ಗ್ರಾಮದ ಶ್ರೀ ಮುಡ್ನೂರು ಪಂಚಲಿಂಗೇಶ್ವರ ದೇವಸ್ಥಾನ, ಐರ್ವನಾಡು ಗ್ರಾಮದ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ, ಬಳ್ಪ ಗ್ರಾಮದ ಶ್ರೀ ಸಂಪುಟ ನರಸಿಂಹ ದೇವ ದೇವಸ್ಥಾನ ಮತ್ತು ಯಜ್ಞಮೂರ್ತಿ ದೇವಸ್ಥಾನ, ಚಾರ್ವಾಕ ಗ್ರಾಮದ ಶ್ರೀ ಸದಾಶಿವ ಜೋಡು ದೇವರು ದೇವಸ್ಥಾನ ಸರವು ಗ್ರಾಮದ ಸುಬ್ರಹ್ಮಣ್ಯ ದೇವಸ್ಥಾನ, ಪುತ್ತೂರು ಗ್ರಾಮದ ಶಾಸ್ತವು ಸುಬ್ರಾಯ ದೇವಸ್ಥಾನ, ಮರ್ದಾಳ ಬಂಟ್ರ ಗ್ರಾಮದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಮುನ್ನೂರು ಗ್ರಾಮದ ಶ್ರೀ ಶಾಸ್ತವು ದೇವಸ್ಥಾನ, ಬಲ್ನಾಡು ಗ್ರಾಮದ ಶ್ರೀ ಬಿಳಿಯೂರು ವೆಂಕಟ್ರಮಣ ದೇವಸ್ಥಾನ, ಎಲಿಯ ಗ್ರಾಮದ ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ಮುಂಡೂರು ಗ್ರಾಮದ ಶ್ರೀ ಸದಾಶಿವ ದೇವಸ್ಥಾನ, ಪಡುಮಲೆ ಗ್ರಾಮದ ಶ್ರೀ ಕೂವೆ ವಿಷ್ಣುಮೂರ್ತಿ ದೇವಸ್ಥಾನ, ಪಿಜಕಳ ಗ್ರಾಮದ ಶ್ರೀ ಸದಾಶಿವ ದೇವಸ್ಥಾನ.

ಸುಳ್ಯ ತಾಲೂಕು: ಸುಳ್ಯ ತಾಲೂಕಿಗೆ ಸಂಬಂಧಪಟ್ಟ ಪ್ರವರ್ಗ ‘ಬಿ’ ಪಟ್ಟಿಯ ದೇವಸ್ಥಾನಗಳ ವಿವರ ಇಂತಿವೆ:-ಹರಿಹರ ಗ್ರಾಮದ ಶ್ರೀ ಹರಿಹರೇಶ್ವರ ದೇವಸ್ಥಾನ ಹರಿಹರ ಪಲ್ಲತಡ್ಕ.
ಸುಳ್ಯ ತಾಲೂಕಿಗೆ ಸಂಬಂಧಪಟ್ಟ ಪ್ರವರ್ಗ ‘ಸಿ’ ಪಟ್ಟಿಯ ದೇವಸ್ಥಾನಗಳ ವಿವರ ಇಂತಿವೆ:- ಎಡಮಂಡಲ ಗ್ರಾಮದ ಶ್ರೀ ದುರ್ಗಪರಮೇಶ್ವರಿ ದೇವಸ್ಥಾನ, ಕುಕ್ಕನ್ನೂರು, ಜಾಲ್ಸೂರು ಗ್ರಾಮದ ಶ್ರೀ ಕಿನ್ನಿಮಾಣಿ ಪೂಮಾಣಿ ದೇವಸ್ಥಾನ, ಮರ್ಕಂಜ ಗ್ರಾಮದ ಶ್ರೀ ಕಾವೂರು ವಿಷ್ಣುಮೂರ್ತಿ ದೇವಸ್ಥಾನ, ವಳಂಬೆ ಗುತ್ತಿಗಾರು ಗ್ರಾಮದ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನ, ದೇವಂಚಲ್ಲ ಗ್ರಾಮದ ಶಂಖಪಾಲ ಕಂದ್ರಪಾಡಿ ರಾಜದೈವ ಪುರುಷಭೂತ ದೇವಸ್ಥಾನ, ಏಣೆಕಲ್ಲು ಗ್ರಾಮದ ಶ್ರೀ ಬಚ್ಚನಾಯಕ ದೇವಸ್ಥಾನ, ಬೆಳ್ಳಾರೆ ಗ್ರಾಮದ ಶ್ರೀ ಜಲದುರ್ಗಾದೇವಿ ದೇವಸ್ಥಾನ, ಅಮರ ಪಡ್ನೂರು ಗ್ರಾಮದ ಶ್ರೀ ಚೊಕ್ಕಾಡಿ ಉಳ್ಳಾಕ್ಲು ಯಾನೆ ನಾಯರ್ ಭೂತ ದೇವಸ್ಥಾನ, ಸುಳ್ಯ ಕಸಬಾ ಗ್ರಾಮದ ಶ್ರೀ ಕಾಯರ್ತೋಡಿ ಮಹಾವಿಷ್ಣುಮೂರ್ತಿ ದೇವಸ್ಥಾನ, ಎಡಮಂಗಲ ಗ್ರಾಮದ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ, ಮಂಡೆಕೋಲು ಗ್ರಾಮದ ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ಉಬರಡ್ಕ ಮಿತ್ತೂರು ಗ್ರಾಮದ ಶ್ರೀ ನರಸಿಂಹ ಶಾಸ್ತಾವು ದೇವಸ್ಥಾನ, ಬೆಳ್ಳಾರೆ ಗ್ರಾಮದ ಶ್ರೀ ಪನ್ನೆಭೂತ ದೇವಸ್ಥಾನ, ಏಣೆಕಲ್ಲು ಗ್ರಾಮದ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಮತ್ತು ಬಚ್ಚನಾಯಕ ದೇವಸ್ಥಾನ, ಬಳ್ಪ ಗ್ರಾಮದ ಶ್ರೀ ಸದಾಶಿವ ದೇವಸ್ಥಾನ, ಹರಿಹರ ಪಲ್ಲತಡ್ಕ ಗ್ರಾಮದ ಶ್ರೀ ಗಣಪತಿ ದೇವರು ದೇವಸ್ಥಾನ, ಆರಂತೋಡು ಗ್ರಾಮದ ಶ್ರೀ ತೋಡಿಕಾನ ಮಲ್ಲಿಕಾರ್ಜುನ ದೇವಸ್ಥಾನ, ಆಲೆಟ್ಟಿ ಗ್ರಾಮದ ಶ್ರೀ ಇಡ್ಯಡ್ಕ ಕ್ಷೇತ್ರಪಾಲ ದೇವರು, ಜಾಲ್ಸೂರು ಗ್ರಾಮದ ಶ್ರೀ ಅಡ್ಕಾರು ಸುಬ್ರಹ್ಮಣ್ಯ ದೇವರು, ಅಜ್ಜವಾರ ಗ್ರಾಮದ ಶ್ರೀ ಮುಳ್ಯ ವಿನಾಯಕ ದೇವಸ್ಥಾನ, ಅಜ್ಜಾವರ ಗ್ರಾಮದ ಶ್ರೀ ತುದಿಯಡ್ಕ ಸದಾಶಿವ ದೇವರು, ಮಂಡೆಕೋಲು ಗ್ರಾಮದ ಶ್ರೀ ಅಲೆಟ್ಟಿ ವಿಷ್ಣುಮೂರ್ತಿ ದೇವಸ್ಥಾನ, ಸುಬ್ರಹ್ಮಣ್ಯ ಗ್ರಾಮದ ಶ್ರೀ ಜಾರಿ ಬ್ರಹ್ಮದಾಯ ಸುಬ್ರಹ್ಮಣ್ಯ ದೇವರು, ಅಜ್ಜಾವರ ಗ್ರಾಮದ ಶ್ರೀ ಬೆಟ್ಟಮಾನ್ಯ ಉಳಿಯಾ ಬೈಪಾಡಿತ್ತಾಯ ದೇವರು, ಐವತೋಕ್ಲು ಗ್ರಾಮದ ಶ್ರೀ ಪೈಂದೋಡಿ ಸುಬ್ರಾಯ ದೇವರು, ಎಡಮಂಗಲ ಗ್ರಾಮದ ನೂಜಿಲ ಗೋಪಾಲಕೃಷ್ಣ ದೇವಸ್ಥಾನ, ಎಡಮಂಗಲ ಗ್ರಾಮದ ನೂಜಿಲ ಬಾಲಚಂದ್ರ ದೇವಸ್ಥಾನ, ಪಂಬೆತ್ತಾಡಿ ಗ್ರಾಮದ ಶ್ರೀ ವಿನಾಯಕ ದೇವಸ್ಥಾನ ಗೋಳಿಕಟ್ಟೆ, ನಾಲ್ಕೂರು ಗ್ರಾಮದ ಶ್ರೀ ಕಾಳದುರ್ಗಾದೇವಿ ದೇವಸ್ಥಾನ, ಪಡ್ನೂರು ಗ್ರಾಮದ ಶ್ರೀ ಮಳಿಯಾಳಿ ಭೂತ, ಮುರಳ್ಯ ಗ್ರಾಮದ ಶ್ರೀ ಗಣಪತಿ ಮಲ್ಲಿಕಾರ್ಜುನ ದೇವಸ್ಥಾನ, ಬಜ್ಪೆ ಗ್ರಾಮದ ಶ್ರೀ ನೇರ್ಪು ರಾಜನ್ ದೇವಸ್ಥಾನ ಎಂದು ಹಿಂದೂ ಮತ್ತು ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾ ಧಾರ್ಮಿಕ ಪರಿಷತ್, ಮಂಗಳೂರು ಹಾಗೂ ಸಹಾಯಕ ಆಯುಕ್ತರು ಪದನಿಮಿತ್ತ ಕಾರ್ಯದಶಿಗಳ ಪ್ರಕಟಣೆ ತಿಳಿಸಿದೆ.

ಗುರುಪುರ ಸೇತುವೆ ಲೋಕಾರ್ಪಣೆ

ಮಂಗಳೂರು(ಜೂನ್12/2020): ಮಂಗಳೂರು ಮೂಡುಬಿದಿರೆ ಸೋಲಾಪುರ ರಾಷ್ಟ್ರೀಯ ಹೆದ್ದಾರಿ 169ರ ಗುರುಪುರ ಪಲ್ಗುಣಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ನೂತನ ಸೇತುವೆಯನ್ನು ದಕ್ಷಿಣಕನ್ನಡ ಸಂಸದರಾದ ನಳಿನ್ ಕುಮಾರ್ ಕಟೀಲು ಉದ್ಘಾಟಿಸಿದರು.
ಈ ಸಂದರ್ಭ ಮಾತನಾಡಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ ಗುರುಪುರ ಸೇತುವೆಯ ಕಾಮಗಾರಿ ಕಾಲಾವಧಿಗಿಂತ ಮೊದಲೇ ಒಂದೇ ವರ್ಷದಲ್ಲಿ ಪೂರ್ಣಗೊಂಡು ರಾಜ್ಯಕ್ಕೆ ಮಾದರಿಯಾಗಿದೆ ಎಂದು ತಿಳಿಸಿದರು. ಈ ರೀತಿಯ ಕೆಲಸ ಗ್ರಾಮಸ್ವರಾಜ್ಯದ ಕಲ್ಪನೆಗೆ, ರಾಮರಾಜ್ಯದ ಕಲ್ಪನೆಗೆ ಪೂರಕವಾಗಿದೆ ಎಂದು ಕಾಮಗಾರಿ ಪೂರ್ಣಗೊಳಿಸಲು ಕಾರಣರಾದ ಸಂಸದರು, ಸಚಿವರು, ಶಾಸಕರಿಗೆ ಅಭಿನಂದನೆ ಸಲ್ಲಿಸಿದರು.
ರಾಷ್ಟ್ರೀಯ ಹೆದ್ದಾರಿ 169ರಲ್ಲಿ ಗುರುಪುರ ಬಳಿ ಫಲ್ಗುಣಿ ನದಿಗೆ ಅಡ್ಡಲಾಗಿ ಸುಮಾರು 39.42 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾದ ನೂತನ ಸೇತುವೆಯ ಉದ್ಘಾಟನೆ ಕಾರ್ಯಕ್ರಮ ಇಂದು ನಡೆಯಿತು.

ಜೂನ್ 8ರಿಂದ ಮಸೀದಿಗಳು ಗ್ರಾಮಸ್ಥರಿಗೆ ತೆರೆದಿರುತ್ತದೆ

ಮಂಗಳೂರು(ಜೂ7/2020):  ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಲು ಹಲವು ನಿಯಮಗಳಿವೆ
ಜೂನ್‌‌ 8ರಿಂದ ಮಸೀದಿಯೂ ಕಾರ್ಯಾರಂಭವಾಗಲಿದೆ ಎಂದು ದ.ಕ ಖಾಝಿ ಪಿ.ಎಮ್‌. ಇಬ್ರಾಹಿಂ ಮುಸ್ಲಿಯಾರ್‌‌‌‌‌‌‌ ಪ್ರಕಟಿಸಿದಾರೆ.
ಈ ಬಗ್ಗೆ ಮಾಹಿತಿ ನೀಡಿದ ಅವರು, ಶೀತ, ಕೆಮ್ಮು ಇದ್ದವರಿಗೆ ನಮಾಝ್‌‌ಗೆ ಪ್ರವೇಶವಿಲ್ಲ. ಸಾಬೂನಿನಿಂದ ಕೈತೊಳೆದು ಮಸೀದಿ ಪ್ರವೇಶಿಸಬೇಕು. ಅಲ್ಲದೇ, ನಮಾಝ್‌‌ನ ಸಂದರ್ಭ ಸಾಮಾಜಿಕ ಅಂತರ ಕಡ್ಡಾಯ ಎಂದು ತಿಳಿಸಿದ್ದಾರೆ.
ನಮಾಝ್‌‌‌‌‌‌‌ಗೆ ಬೇಕಾದ ಛಾಪೆ ಮನೆಯಿಂದಲೇ ತರಬೇಕು.ಸ್ವಗ್ರಾಮದವರಿಗೆ ಮಾತ್ರ ಆಯಾ ಮಸೀದಿಯಲ್ಲಿ ಪ್ರಾರ್ಥನೆಗೆ ಅವಕಾಶ. ಪ್ರಾರ್ಥನೆ ಸಂದರ್ಭದಲ್ಲಿ ಮಾತ್ರ ಮಸೀದಿಯನ್ನು ತೆರೆಯಬೇಕು ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಆನ್ಲೈನ್ “ಆತ್ಮಶುದ್ದಿ ಕ್ರಿಯಾ-ಧ್ಯಾನ” ಜೂನ್ 6ರಿಂದ ಪ್ರಾರಂಭ

ಉಡುಪಿ(4ಜೂನ್/2020): ಶಂಕರಪುರ ದ್ವಾರಕಾಮಯಿ ಶ್ರೀ ಸಾಯಿಬಾಬಾ ಮಂದಿರದ ಧರ್ಮದರ್ಶಿಗಳಾದ ಗುರೂಜಿ ಸಾಯಿಈಶ್ವರ್ ಇವರು 11 ದಿನಗಳ ಆನ್ಲೈನ್ ಆತ್ಮಶುದ್ದಿ ಕ್ರಿಯಾ-ಧ್ಯಾನವನ್ನು ತಾರೀಖು 6ಜೂನ್ ನಿಂದ ಹನ್ನೊಂದು ದಿನಗಳವರೆಗೆ ಬೆಳ್ಳಿಗ್ಗೆ 6ರಿಂದ 6:30ರ ವರೆಗೆ ನಡೆಸಲ್ಲಿದ್ದು,ಈಗಾಗಲೇ ಅನೇಕರು ಹೆಸರು ನೋಂದಾಯಿಸಿರುತ್ತಾರೆ,
ಲಾಕ್ ಡೌನ್ ಹಿನ್ನೆಲೆಯಲ್ಲಿ ಸಾಧಕರು ತಮ್ಮ ಮನೆಯಲ್ಲಿಯೇ ಇದ್ದು ಸಾಧನೆ ಮಾಡಲು ಆನ್ಲೈನ್ ಶಿಭಿರ ನಡೆಸಲಾಗುತ್ತಿದೆ.
ಈ ಹಿಂದೆ ವಿಧ್ಯಾರ್ಥಿಗಳಿಗಾಗಿ “ನಮ್ಮ ಮನೆ,ನನ್ನ ಗುರುಕುಲ” ಆನ್ಲೈನ್ ಮುಖಾಂತರ ವಿಧ್ಯಾರ್ಥಿಗಳಿಗೆ ಲಾಕ್ ಡೌನ್ ಸಂದರ್ಭದಲ್ಲಿ ವಿಶೇಷ ಶಿಭಿರ ನಡೆಸಿ ಯಶಸ್ವಿ ಆಗಿರುತ್ತದೆ.
ಇದೇ ಜೂನ್ ಆರರಂದು ಪ್ರಾರಂಭ ಆಗಲಿರುವ ಆತ್ಮಶುದ್ದಿ ಕ್ರಿಯಾ-ಧ್ಯಾನ ದಿಂದ ಆಯುರಾರೋಗ್ಯ ವೃದ್ಧಿ, ದೇಹ ಪ್ರಭಾವಳಿ ವಿಸ್ತರಣೆ, ದೇಹ ದೃಷ್ಟಿ ನಿವಾರಣೆ,ಮಾನಸಿಕ ಶಾಂತಿ,ಜ್ಞಾನ ವೃದ್ಧಿ,
ಆಧ್ಯಾತ್ಮ ಶಕ್ತಿ ಜಾಗರಣೆ ಮುಂತಾದ ಪ್ರಯೋಜನಗಳನ್ನು ಆನ್ಲೈನ್ ಶಿಭಿರಾರ್ತಿಗಳು ಪಡೆಯುವರು ಎಂದು ಗುರೂಜಿ ಸಾಯಿಈಶ್ವರ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಮಂಗಳೂರು ದಕ್ಷಿಣ: ಕಾಂಗ್ರೆಸ್ ಅಧ್ಯಕ್ಷರ ಪದಗ್ರಹಣ ಪೂರ್ವಭಾವಿ ಸಭೆ

ಮಂಗಳೂರು(3ಜೂನ್/2020): ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಮಂಗಳೂರು ನಗರ ಬ್ಲಾಕ್ ಹಾಗೂ ದಕ್ಷಿಣ ಬ್ಲಾಕ್ ಕಾಂಗ್ರೆಸ್ ಸಮಿತಿಯ ಸಭೆಯೂ ಮಲ್ಲಿಕಟ್ಟೆಯ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಬುಧವಾರ ಸಂಜೆ ಕೆಪಿಸಿಸಿ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರದ ಕುರಿತು ಪೂರ್ವಭಾವಿ ಸಭೆ ನಡೆಯಿತು.
ಸಭೆಯಲ್ಲಿ ಮಾಜಿ ಸಚಿವರಾದ ಬಿ ರಮಾನಾಥ ರೈ ಯವರು ಮಾತನಾಡಿ ಕೆ ಪಿ ಸಿ ಸಿ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದ ರೂಪ್ ರೇಷಗಳ ವಿವರಣೆ ನೀಡಿ ಕಾರ್ಯಕ್ರಮ ಯಶಶ್ವಿಯಾಗಿ ನಡೆಯುವಂತೆ ಕಾರ್ಯಕರ್ತರಿಗೆ ಕರೆ ನೀಡಿದರು,
ಸಭೆಯಲ್ಲಿ ಕೆ ಪಿ ಸಿ ಸಿ ವೀಕ್ಷಕರಾದ ಮುರಳಿ ಶೆಟ್ಟಿ, ಅಬ್ದುಲ್ ಅಝೀಜ್, ದಿನೇಶ್ ಪುತ್ರನ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ಮಿಥುನ್ ರೈ, ಬ್ಲಾಕ್ ಅಧ್ಯಕ್ಷಗಳಾದ ವಿಶ್ವಾಸ್ ಕುಮಾರ್ ದಾಸ್, ಅಬ್ದುಲ್ ಸಲೀಂ, ಜಿಲ್ಲಾ ವೀಕ್ಷಕರಾದ ಸದಾಶಿವ ಉಳ್ಳಾಲ್, ದಿನೇಶ್ ರೈ, ಮ ನ ಪಾ ವಿರೋಧ ಪಕ್ಷದ ನಾಯಕರಾದ ಅಬ್ದುಲ್ ರವೂಫ್, ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಶುಭೋದಯ ಅಲ್ವಾ, ಹಾಗೂ ಪಕ್ಷದ ಮುಖಂಡರು ಉಪಸ್ಥಿತರಿದ್ದರು.

ತೊಕ್ಕೊಟ್ಟು ಮೇಲ್ಸೇತುವೆಗೆ ರಾಣಿ ಅಬ್ಬಕ್ಕ, ನೆಹರೂ ಮೈದಾನಕ್ಕೆ ಕೋಟಿ ಚನ್ನಯ್ಯ ಹೆಸರು

ಮಂಗಳೂರು(3ಜೂ/2020): ರಾಜ್ಯದಲ್ಲಿ ಸಾವರ್ಕರ ಹೆಸರು ಪ್ರಸ್ತಾಪದಲ್ಲಿರುವಾಗಲೇ
ನಿನ್ನೆ ಪಂಪ್ವೆಲ್ ಮೇಲು ಸೇತುವೆಗೆ ಸಾವರ್ಕರ್ ಹೆಸರಿನ ಅಳವಡಿಸಿದ ಫಲಕ ಕಿತ್ತ ಒಂದೇ ದಿನದಲ್ಲಿ ಮತ್ತೆ ಮೂರು ಕಡೆ ಫಲಕ ಹಾಕಲಾಗಿರುವ ಘಟನೆ ನಡೆಯಿತು.
ಇಂದು ಮತ್ತೆ ಪಂಪ್ ವೆಲ್ ಮೇಲ್ಸೇತುವೆಗೆ ಅಪರಿಚಿತರು “ವೀರ ಸಾವರ್ಕರ್” ಹೆಸರಿನ ಫಲಕ ಅಳವಡಿಸಿದ್ದಾರೆ,
ತೊಕ್ಕೊಟ್ಟು ಮೇಲ್ಸೇತುವೆಗೆ “ವೀರ ರಾಣಿ ಅಬ್ಬಕ್ಕ” ಎಂದು ಫಲಕ ಹಾಕಲಾಗಿದೆ.
ಮಂಗಳೂರಿನ ನೆಹರು ಮೈದಾನಕ್ಕೆ “ಕೋಟಿ ಚನ್ನಯ್ಯ ಕೇಂದ್ರ ಮೈದಾನ” ಎಂದು ಫಲಕಗಳನ್ನು ಏಕ ಕಾಲಕ್ಕೆ ಅಳವಡಿಸಲಾಗಿದೆ.
ದಿಢೀರ್ ಆಗಿ ಬ್ಯಾನರ್ ಮೂಲಕ ಯಾರೋ ವೀರ ಸಾವರ್ಕರ್ ,ಅಬ್ಬಕ್ಕ, ಕೋಟಿ ಚನ್ನಯ್ಯ ಹೆಸರನ್ನಿರುವ ಬ್ಯಾನರ್ ಅಂಟಿಸಿ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದ್ದು.
ಸಾಮಾಜಿಕ ಜಾಲತಾಣದಲ್ಲಿ ಅನೇಕರಿಗೆ ಇದು ಇದೀಗ ಚರ್ಚೆಗೆ ಕಾರಣವಾಗಿದೆ.

ಕಾಸರಗೋಡು ಜಿಲ್ಲೆಯಿಂದ ಉದ್ಯೋಗಿಗಳಿಗೆ ಮಾತ್ರ ಕರ್ನಾಟಕಕ್ಕೆ ನಿತ್ಯ ಸಂಚಾರ

ಮಂಗಳೂರು(3ಜೂನ್/2020): ಮಂಗಳೂರು-ಕಾಸರಗೋಡು ಮಧ್ಯೆ ಉದ್ಯೋಗಿಗಳ ನಿತ್ಯ ಸಂಚಾರಕ್ಕೆದ.ಕ ಜಿಲ್ಲಾಧಿಕಾರಿ ಒಪ್ಪಿಗೆ.
ದ.ಕ ಜಿಲ್ಲಾಧಿಕಾರಿ ಸಿಂಧೂ.ಬಿ.ರೂಪೇಶ್ ನೀಡಿದ ಆದೇಶದಂತೆ ಪಾಸ್ ಬಳಸಿ ನಿತ್ಯ ಸಂಚರಿಸಲು ಅವಕಾಶ ಕಲ್ಪಿಸಿದ ದ.ಕ ಜಿಲ್ಲಾಡಳಿತ ಉದ್ಯೋಗಿಗಳು, ವಿದ್ಯಾರ್ಥಿಗಳು, ಆರೋಗ್ಯ ಸೇವಕರು ಮತ್ತು ಸರ್ಕಾರಿ ನೌಕರರಿಗಷ್ಟೇ ಅವಕಾಶ ನೀಡಿದೆ.
ಕಾಸರಗೋಡಿನಲ್ಲಿರುವ ಗಡಿನಾಡ ಕನ್ನಡಿಗರಿಗೆ ಉದ್ಯೋಗ ನಿಮಿತ್ತ ಸಂಚಾರಕ್ಕೆ ಅವಕಾಶ,
ಮಂಗಳೂರಿನಲ್ಲಿ ಉದ್ಯೋಗ ಮಾಡುವ ಹಿನ್ನೆಲೆ ಉಭಯ ಜಿಲ್ಲೆಗಳ ಮಧ್ಯೆ ಒಪ್ಪಂದದಂತೆ Dkdpermit ವೆಬ್ ಸೈಟ್ ನಲ್ಲಿ ರಿಜಿಸ್ಟರ್ ಮಾಡಿ ಪಾಸ್ ಪಡೆಯಲು ಸೂಚನೆ ನೀಡಿದೆ.
ಉದ್ಯೋಗ ಹೊರತು ಅನ್ಯ ಕಾರ್ಯಕ್ಕೆ ಪಾಸ್ ಬಳಸಿದರೆ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ.
ನಿತ್ಯ ಥರ್ಮಲ್ ಸ್ಕ್ಯಾನ್ ಮತ್ತು ಆರೋಗ್ಯ ತಪಾಸಣೆ ಕಡ್ಡಾಯ,ಪಾಸ್ ಗೆ ಅರ್ಜಿ ಸಲ್ಲಿಸಲು ಆಧಾರ್, ಉದ್ಯೋಗ ವಿಳಾಸ, ಮಾಹಿತಿ ಸಲ್ಲಿಸುವುದು ಕಡ್ಡಾಯ ಎಂತು ಪ್ರಕಟಿಸಿದ್ದಾರೆ.

ಪಂಪ್ ವೆಲ್ ಮೇಲ್ಸೇತುವೆಗೆ ಅಪರಿಚಿತರಿಂದ ವೀರ ಸಾವರ್ಕರ್ ಹೆಸರು

ಮಂಗಳೂರು(2ಜೂ/2020): ರಾಜ್ಯದಲ್ಲಿ ಸಾವರ್ಕರ ಹೆಸರು ಪ್ರಸ್ತಾಪದಲ್ಲಿರುವಾಗಲೇ ಪಂಪ್ ವೆಲ್ ಮೇಲ್ಸೇತುವೆಗೆ ಅಪರಿಚಿತರಿಂದ ವೀರ ಸಾವರ್ಕರ್ ಹೆಸರು.
ಪಂಪ್ ವೆಲ್ ಸೇತುವೆಗೆ ದಿಢೀರ್ ಆಗಿ ಬ್ಯಾನರ್ ಮೂಲಕ ಯಾರೋ ವೀರ ಸಾವರ್ಕರ್ ಹೆಸರನ್ನಿರುವ ಬ್ಯಾನರ್ ಅಂಟಿಸಿ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದ್ದು.
ಸಾಮಾಜಿಕ ಜಾಲತಾಣದಲ್ಲಿ ಅನೇಕರು ಇದರ ಬಗ್ಗೆ ಸಂತಸ ವ್ಯಕ್ತಪಡಿಸಿರುತ್ತಾರೆ. ಇದೀಗ ಚರ್ಚೆಗೆ ಕಾರಣವಾಗಿದೆ