July 10, 2020

ಮಂಗಳೂರು

ದಕ್ಷಿಣ.ಕನ್ನಡಕ್ಕೆ ಆಗಮಿಸಿದ ಎನ್.ಡಿ.ಆರ್.ಎಪ್ ಪಡೆ

ಮಂಗಳೂರು(2ಜೂ/2020):ಮಳೆಗಾಲದಲ್ಲಿ ಪ್ರಾಕೃತಿಕ ವಿಕೋಪ ಸನ್ನಿವೇಶ ಎದುರಿಸಲು ಜಿಲ್ಲಾಡಳಿತಕ್ಕೆ NDRF ಆಗಮನ ನೆರವಾಗಲಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಗಾಲದಲ್ಲಿ ಸಂಭವಿಸಬಹುದಾದ ದುರಂತ ಗಳನ್ನು ನಿರ್ವಹಿಸಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳ (NDRF) ತಂಡವು ಇಂದು ಮಂಗಳೂರಿಗೆ ಆಗಮಿಸಿತು. ಸುಮಾರು 25 ಸದಸ್ಯರ NDRF ತಂಡವು ಪಿಲಿಕುಲ ಸ್ಕೌಟ್ಸ್ ಭವನದಲ್ಲಿ ವಾಸ್ತವ್ಯ ಹೂಡಿದೆ. ಮಳೆಗಾಲದಲ್ಲಿ ಪ್ರಾಕೃತಿಕ ವಿಕೋಪ ಸನ್ನಿವೇಶ ಎದುರಿಸಲು ಜಿಲ್ಲಾಡಳಿತಕ್ಕೆ NDRF ಆಗಮನ ನೆರವಾಗಲಿದೆ.

ಉಡುಪಿ ಜಿಲ್ಲೆಯಲ್ಲಿ ಮೇ.31ರಿಂದ ಮೂರು ದಿನ ಭಾರೀ ಮಳೆ ಸಾಧ್ಯತೆ

ಉಡುಪಿ(ಮೇ30/2020): ಭಾರತೀಯ ಹವಾಮಾನ ಇಲಾಖೆ/ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ, ಬೆಂಗಳೂರು ಇವರ ಮುನ್ಸೂಚನೆಯಂತೆ ರಾಜ್ಯದ ಕರಾವಳಿ ಭಾಗದಲ್ಲಿ ಮೇ 31 ರಿಂದ ಮುಂದಿನ ಮೂರು ದಿನಗಳ ಕಾಲ ಹೆಚ್ಚಿನ ಮಳೆಯಾಗುವ ಸಾಧ್ಯತೆಯಿದೆಯೆಂದು ಸೂಚಿಸಿರುತ್ತಾರೆ,
ಪ್ರಸ್ತುತ ಉಡುಪಿ ಜಿಲ್ಲೆಯಲ್ಲಿ (ಮೇ 29 ರಮಧಾಹ್ನದ ವರದಿಯಂತೆ) ಹಳದಿ ಅಲರ್ಟ್ ಘೋಷಿಸಲಾಗಿದೆ,ಮೇ31ರಿಂದ ಸುಮಾರು 6.5 ಸೆಂ.ಮೀ ದಿಂದ 11.5 ಸೆಂ.ಮೀ ವರೆಗೆ ಮಳೆಯಾಗುವ ಸಾಧ್ಯತೆಯಿರುತ್ತದೆ, ಈ ಹಿನ್ನಲೆಯಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಮುಂಜಾಗ್ರತಾ ಕ್ರಮ ವಹಿಸಬೇಕಾಗಿರುವುದರಿಂದ ಸಾರ್ವಜನಿಕರಿಗೆ ಈ ಕೆಳಕಂಡoತೆ ಸೂಚನೆಗಳನ್ನು ನೀಡಲಾಗಿದೆ.
ಸಾರ್ವಜನಿಕರು ನದಿ/ಸಮುದ್ರಕ್ಕೆ ಇಳಿಯಬಾರದು, ಮಕ್ಕಳು ಸಾರ್ವಜನಿಕರು ಅಪಾಯಕಾರಿ ವಿದ್ಯುತ್ ಕಂಬ , ಕಟ್ಟಡ/ಮರಗಳ ಕೆಳಗೆ ನಿಲ್ಲದೆ , ಸುರಕ್ಷಿತ ಸ್ಥಳಗಳಲ್ಲಿ ಇರಬೇಕು. ತುರ್ತು ಸೇವೆಗಾಗಿ ಟೋಲ್ ಫ್ರೀ ಸಂಖ್ಯೆ.1077 , ದೂ.ಸಂ. 0820-2574802 ಸಂಪರ್ಕಿಸುವoತೆ ಹಾಗೂ ಜಿಲ್ಲಾ/ತಾಲೂಕು ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿ ಇರುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ಸೂಚಿಸಿದ್ದಾರೆ.

ಕೊರೋನಾ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ಗಂಭೀರತೆ ಇಲ್ಲ: ಯು.ಟಿ ಖಾದರ್

ಮಂಗಳೂರು(30ಮೇ/2020): ಡಾಕ್ಟರ್ ಮತ್ತು ನರ್ಸ್ ಗಳಿಗೆ ಎರಡು ತಿಂಗಳಿನಿಂದ ಸಂಬಳ ಆಗಿಲ್ಲ.ಕೊರೋನಾ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ಗಂಭೀರತೆ ಇಲ್ಲ ಎಂದು ಮಾಜಿ ಸಚಿವ ಯು.ಟಿ ಖಾದರ್ ಗಂಭೀರ ಆರೋಪ ಮಾಡಿದ್ದಾರೆ.
ಎಲ್ಲಾ ಕಡೆ ವೈದ್ಯರು,ನರ್ಸ್ ಗಳು ಕೆಲಸ ಮಾಡಿದ್ದಾರೆ.ಕೊರೋನಾ ಸಂಧರ್ಭದಲ್ಲೇ ವೇತನ ನೀಡದೆ ಸತಾಯಿಸಿದ್ದಾರೆ,ಕೊರೋನಾ ವಾರಿಯರ್ಸ್ ರನ್ನು ಸರ್ಕಾರ ನಿರ್ಲಕ್ಷ್ಯಿಸಿದೆ,ಅವರಿಗೆ ಸರ್ಕಾರ ತಕ್ಷಣ ಸಂಬಳ ಬಿಡುಗಡೆ ಮಾಡಬೇಕು,ಕೊರೋನಾ ವಾರಿಯರ್ಸ್‌ಗೆ ಸಂಬಳ ನೀಡದೆ ಸತಾಯಿಸಿದೆ,ಇನ್ನೂ ರಾಜ್ಯದಲ್ಲಿ ಕೊರೋನಾ ರೋಗಿಗಳ ಸ್ಥಿತಿ ಹೇಗಿರಬೇಡ,ಎಂದು ರಾಜ್ಯ ಸರ್ಕಾರದ ವಿರುದ್ಧ ಮಾಜಿ ಸಚಿವ ಯುಟಿ ಖಾದರ್ ಗಂಭೀರ ಆರೋಪ ಮಾಡಿದ್ದಾರೆ.

ಕದ್ರಿ ಕ್ರಿಕೆಟ್‍ರ್ಸ್ ಕ್ಲಬ್‌ನ ಅಂಗಸಂಸ್ಥೆ ಆಸರೆ ಫ್ರೆಂಡ್ಸ್ ಕದ್ರಿ ವತಿಯಿಂದ ಮನೆ ಹಸ್ತಾಂತರ

ಮಂಗಳೂರು(ಮೇ29/2020): ನಗರದ ಕದ್ರಿ ಕ್ರಿಕೆಟ್‌ರ್ಸ್ ಕ್ಲಬ್ (ರಿ) ನ ಅಂಗ ಸಂಸ್ಥೆಯಾದ ಆಸರೆ ಫ್ರೆಂಡ್ಸ್ ಕದ್ರಿ ವತಿಯಿಂದ ನಗರದ ಮಂಕಿಸ್ಟಾಂಡ್ ಬಳಿ ಬಡ ಕುಟುಂಬವೊಂದಕ್ಕೆ ಸುಮಾರು ರೂ. 2 ಲಕ್ಷ 75 ಸಾವಿರ ವೆಚ್ಚದಲ್ಲಿ ನಿರ್ಮಿಸಲಾದ “ಆಸರೆ ನಿಲಯ” ಮನೆಯ ಹಸ್ತಾಂತರ ಕಾರ್ಯಕ್ರಮ ಶುಕ್ರವಾರ ನಡೆಯಿತು.

ಆಸರೆ ಫ್ರೆಂಡ್ಸ್ ನ ಪರವಾಗಿ ಮಂಗಳೂರು ಮೇಯರ್ ದಿವಾಕರ್ ಪಾಂಡೇಶ್ವರ್ ಅವರು ನೂತನ ಮನೆಯ ಚಾವಿಯನ್ನು ಶ್ರೀಮತಿ ಮೀನಾಕ್ಷಿ ಬಂಗೇರ ಹಾಗೂ ಎ.ಉಮೇಶ್ ದಂಪತಿಗಳಿಗೆ ಹಸ್ತಾಂತರಿಸಿದರು. ಈ ಸಂದರ್ಭ ಮಾತನಾಡಿದ ಅವರು, ಆಸರೆ ಫ್ರೆಂಡ್ಸ್ ಹಲವಾರು ಸಮಾಜಮುಖಿ ಕೆಲಸಕಾರ್ಯಗಳನ್ನು ಮಾಡುವ ಮೂಲಕ ಬಡವರ್ಗದ ಜನತೆಗೆ ಆಸರೆಯಾಗಿದೆ. ಇವರ ಈ ಸೇವೆ ಎಲ್ಲರಿಗೂ ಮಾದರಿಯಾಗಲಿ. ಇವರು ಇನ್ನಷ್ಟು ಸಮಾಜಸೇವೆಯಲ್ಲಿ ತೊಡಗುವಂತಾಗಲು ದೇವರು ಇವರಿಗೆ ಶಕ್ತಿ ನೀಡಲಿ ಎಂದು ಹಾರೈಸಿದರು.

ವಿಶೇಷ ಅಥಿತಿಗಳಾಗಿ ಭಾಗವಹಿಸಿದ್ದ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮಾತ್ ಅವರು ಮಾತನಾಡಿ, ಕಳೆದ ಹಲವಾರು ಸಮಯಗಳಿಂದ ಹಲವಾರು ರೀತಿಯಲ್ಲಿ ಸಮಾಜ ಸೇವೆಯಲ್ಲಿ ತೊಡಗಿಕೊಂಡಿರುವ ಆಸರೆ ಫ್ರೆಂಡ್ಸ್ ಇಂದು ಒಂದು ಬಡ ಕುಟುಂಬದ ಕಣ್ಣೀರು ಒರೆಸುವ ಬಹುದೊಡ್ಡ ಕೆಲಸ ಮಾಡಿದೆ. ಮಾನವೀಯ ನೆಲೆಯಲ್ಲಿ ಇವರು ಮಾಡಿರುವ ಈ ಸೇವೆ ಪ್ರತಿಯೊಬ್ಬರ ಮನಸ್ಸಿಗೆ ಮುಟ್ಟುವಂತಾಗಲಿ. ಕದ್ರಿ ಕ್ರಿಕೆಟರ್‍ಸ್ ಕ್ಲಬ್ ಹಾಗೂ ಆಸರೆ ಫ್ರೆಂಡ್ಸ್ ನ ಈ ನಿರಂತರ ಸೇವೆ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸ್ಥಳೀಯ ಮನಪಾ ಸದಸ್ಯ ಪ್ರೇಮನಂದ ಶೆಟ್ಟಿ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ಬಿರುವೆರ್ ಕುಡ್ಲ ಅಧ್ಯಕ್ಷ ಉದಯ ಪೂಜಾರಿ ಬಳ್ಳಾಲ್ ಭಾಗ್, ಉದ್ಯಮಿಗಳಾದ ಲಕ್ಷ್ಮೀಶ ಭಂಡಾರಿ, ರತ್ನಾಕರ್ ಜೈನ್ ಚಿತ್ರ ನಿರ್ಮಾಪಕ ಕಿಶೋರ್‍ ಡಿ.ಶೆಟ್ಟಿ, ಪ್ರಮುಖರಾದ ಅಶೋಕ್ ಕುಮಾರ್ ಡಿ.ಕೆ, ದಿನೇಶ್ ದೇವಾಡಿಗ, ಗೋಕುಲ್ ಕದ್ರಿ, ಅಮೃತ,ವಿ,ಕದ್ರಿ ಮುಂತಾದವರು ಅಥಿತಿಗಳಾಗಿದ್ದರು.

ಕದ್ರಿ ಕ್ರಿಕೆಟರ್‍ಸ್ ಕ್ಲಬ್ ಅಧ್ಯಕ್ಷ ದೀಪಕ್ ಸಾಲಿಯಾನ್, ಉಪಾಧ್ಯಕ್ಷ ಗೌರವ ಕದ್ರಿ, ಕಾರ್ಯದರ್ಶಿ ಹರೀಶ್ ದೇವಾಡಿಗ, ಜೊತೆ ಕಾರ್ಯದರ್ಶಿ ದೀಪಕ್ ಶೆಟ್ಟಿ, ನಿಕಟಪೂರ್ವ ಅಧ್ಯಕ್ಷ ಧನರಾಜ್ ಎನ್.ಡಿ, ಆಸರೆ ಫ್ರೆಂಡ್ಸ್ ಅಧ್ಯಕ್ಷ ದಿನೇಶ್ ಕದ್ರಿ, ಕಾರ್ಯದರ್ಶಿ ಮಂಜುನಾಥ್ ದೇವಾಡಿಗ ಮುಂತಾದವರು ಉಪಸ್ಥಿತರಿದ್ದರು.

ಕದ್ರಿ ಕ್ರಿಕೆಟರ್‍ಸ ಕ್ಲಬ್ ಗೌರವ ಅಧ್ಯಕ್ಷ ಮೋಹನ್ ಕೊಪ್ಪಳ ಕದ್ರಿ ಸ್ವಾಗತಿಸಿದರು, ವಿ.ಜೆ. ಮಧುರಾಜ್ ಗುರುಪುರ ಕಾರ್ಯಕ್ರಮ ನಿರೂಪಿಸಿದರು.

ಸೋಂಕಿತ ತಾಂಗಾಡಿಯಲ್ಲಿ ಅಂತ್ಯ ಸಂಸ್ಕಾರದಲ್ಲಿ ಭಾಗಿ,ಮರವೂರು ಕಂಟೋನ್ಮೆಂಟ್ ಸಾಧ್ಯತೆ

ಮರವೂರು(27ಮೇ/2020): ಮುಂಬಾಯಿಂದ ಬಂದ ವ್ಯಕ್ತಿಯೊಬ್ಬ ಮರವೂರು ಸಮೀಪದ ತಾಂಗಡಿ ಎಂಬಲ್ಲಿ ಅಂತ್ಯಸಂಸ್ಕಾರ ಕಾರ್ಯಕ್ರಮ ನೆರವೇರಿಸಿದ್ದು,
ಇಂದು ಸ್ವಾಬ್ ಟೆಸ್ಟ್ ನಲ್ಲಿ ಸೋಂಕಿತ ಎಂದು ಗುರುತಿಸಲಾಗಿದೆ.
ಇದೀಗ ಆತಂಕದಲ್ಲಿ ಮರವೂರು ಪಂಚಾಯತ್ ವ್ಯಾಪ್ತಿಯ ತಾಂಗಡಿ ಪ್ರದೇಶ, ಅಂತ್ಯಸಂಸ್ಕಾರ ಕಾರ್ಯಕ್ರಮಕ್ಕೆ ತೆರಳಿ ನಂತರ ಕ್ವಾರೆಂಟೈನ್ ಆಗಿದ್ದ ಸೋಂಕಿತ ಮುಂಬೈನಿಂದ ಬಂದು ನೇರವಾಗಿ ಬಜಪೆಗೆ ಹೋಗಿದ್ದ ಈ ವ್ಯಕ್ತಿ ಬಜಪೆಯ ಸಮೀಪದ ಪೊರ್ಕೋಡಿಯ ತಾಂಗಡಿಯ ಆತನ ಮನೆಯ ಬಳಿಯ ಅಂತ್ಯಸಂಸ್ಕಾರ ಕಾರ್ಯಕ್ರಮಕ್ಕೆ ತೆರಳಿದ ಬಳಿಕ ಕ್ವಾರೆಂಟೈನ್ ಆಗಿದ್ದ,
ಇಂದು ಬಂದ ಸ್ವಾಬ್ ಟೆಸ್ಟ್ ನಲ್ಲಿ ಆ ವ್ಯಕ್ತಿಗೆ ಕೊರೋನಾ ಪಾಸಿಟಿವ್ ಧೃಡವಾಗಿದೆ. ಅಂತ್ಯಸಂಸ್ಕಾರದಲ್ಲಿ ಭಾಗವಹಿಸಿದವರ ಮಾಹಿತಿ ಕಲೆ ಹಾಕುತ್ತಿದೆ ಜಿಲ್ಲಾಡಳಿತ, ಮರವೂರಿನ ತಾಂಗಡಿ ಪ್ರದೇಶ ಕಂಟೋನ್ಮೆಂಟ್ ಝೋನ್ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗುತಿದೆ.

ದಕ್ಷಿಣ ಕನ್ನಡ ಕರೋನಾ ಸೋಂಕಿತರಿಗೆ ಹೊರ ರಾಜ್ಯದ ನಂಟು

ಮಂಗಳೂರು(27ಮೇ/2020):ಮುಂಬೈನಿಂದ ಬಂದ ಉಳ್ಳಾಲದ ಇಡೀ ಕುಟುಂಬಕ್ಕೆ ಕೊರೋನಾ ದೃಢ ವಾಗಿದೆ.
ಮುಂಬೈನಿಂದ ಒಟ್ಟಿಗೆ ಆಗಮಿಸಿದ್ದ ಅಜ್ಜಿ ಹಾಗೂ ತಂದೆ,ಇಬ್ಬರು ಮಕ್ಕಳಿಗೆ ಕೊರೋನಾ ಪಾಸಿಟಿವ್‌ ವರದಿ ಬಂದಿದೆ.
ಉಳ್ಳಾಲದ ಕ್ವಾರೆಂಟೈನ್ ಸೆಂಟರ್ ನಲ್ಲಿ ಕ್ವಾರಂಟೈನ್ ಆಗಿದ್ದ ಒಂದೇ ಕುಟುಂಬದ ನಾಲ್ವರು ಜೊತೆಗೆ ಮತ್ತೊಂದು ಕುಟುಂಬದ ಮೂವರಿಗೆ ಸೋಂಕು ದೃಢವಾಗಿದೆ.
ಪುತ್ತೂರಿನ ಕ್ವಾರಂಟೈನ್ ಸೆಂಟರ್ ನಲ್ಲಿದ್ದ ಗಂಡ,ಹೆಂಡತಿ ಮತ್ತು ಮಗು ಮತ್ತೊಂದು ದಂಪತಿಗೂ ಕೊರೋನಾ ಸೋಂಕು ದೃಡ ವಾಗಿದೆ.
ಉಳ್ಳಾಲದಲ್ಲಿ ಕ್ವಾರೆಂಟೈನ್ ಆಗಿದ್ದ ಗಂಡ ಮತ್ತು ಹೆಂಡತಿ ಹಾಗೂ ಇತರ ಇಬ್ಬರಿಗೆ ಕೊರೋನಾ ಸೋಂಕು ದೃಢವಾಗಿದೆ.
ಬೆಳ್ತಂಗಡಿ ಕ್ವಾರಂಟೈನ್ ಸೆಂಟರ್ ಮತ್ತು ಗುಜರಾತ್ ನಿಂದ ಆಗಮಿಸಿ ಓರ್ವನಿಗೆ ಮತ್ತು
ಉಳ್ಳಾಲದಲ್ಲಿ ಕ್ವಾರೆಂಟೈನ್ ಇದ್ದ ಮತ್ತೋರ್ವನಿಗೆ ಸೋಂಕು ದೃಢವಾಗಿದೆ.

ಇಂದಿನಿಂದ ಮಂಗಳೂರಿನಿಂದ ಆರು ವಿಮಾನಗಳ ಹಾರಾಟ

ಮಂಗಳೂರು(25ಮೇ/2020): ಇಂದಿನಿಂದ ದೇಶಿಯ ವಿಮಾನಗಳ ಹಾರಾಟ ಮರು ಆರಂಭವಾಗಲಿದೆ,ಮಂಗಳೂರಿನಿಂದ ಹೊರಡಲಿದೆ 6 ವಿಮಾನಗಳು,ಬೆಂಗಳೂರು, ಚೆನೈ, ಮುಂಬಯಿಗೆ ಹೊರಡಲಿರುವ ವಿಮಾನಗಳು,ಬೆಳಗ್ಗೆ 10.20ಕ್ಕೆ ಮೊದಲ ವಿಮಾನ ಹಾರಾಟ,ಮಂಗಳೂರಿನಿಂದ ಬೆಂಗಳೂರಿಗೆ ಸ್ಪೈಸ್ ಜೆಟ್ ಮೊದಲ ವಿಮಾನ ವಾಗಲಿದೆ,
ಸ್ಫೈಸ್ ಜೆಟ್,ಇಂಡಿಗೋ ವಿಮಾನಗಳ ಹಾರಾಟ
ಮೊದಲ ಹಂತದಲ್ಲಿ ಮೂರು ನಗರಗಳಿಗೆ 6 ವಿಮಾನಗಳ ಹಾರಾಟವಾಗಲಿದೆ.

ದಕ್ಷಿಣ ಕನ್ನಡ: ಇಂದು ಎರಡು ಕರೋನಾ ಪಾಸಿಟಿವ್

ಮಂಗಳೂರು(23ಮೇ/2020): ಇಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎರಡು ಕೊರೋನಾ ಪಾಸಿಟಿವ್ ವರದಿ ಬಂದಿದೆ.
ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ಮಹಿಳೆಗೆ ಕೊರೊನ ಪಾಸಿಟಿವ್ ಆಗಿದೆ.
ಬೆಳ್ತಂಗಡಿ ತಾಲೂಕಿನ ಶಿರ್ಲಾಲು ಗ್ರಾಮದ 34 ವರ್ಷದ ಮಹಿಳೆಗೆ ಕೊರೋನಾ‌ ಪಾಸಿಟಿವ್ ದೃಢ ಆಗಿರುವುದರಿಂದ ಶಿರ್ಲಾಲು ಗ್ರಾಮ ಸಿಲ್ ಡೌನ್ ಗೆ ಸಿದ್ದತೆ ಮಾಡಲಾಗಿದೆ.
ಮಹಿಳೆ ಇಂದು ಬೆಳಗ್ಗೆ ಕೋವಿಡ್ ಆಸ್ಪತ್ರೆಗೆ ಶಿಪ್ಟ್ ಆಗಿದ್ದು ಉಸಿರಾಟದ ತೊಂದರೆ ಇದ್ದದ್ದರಿಂದ ಗ್ರಾಮಸ್ಥರೆ ಒತ್ತಾಯ ಮಾಡಿ ಪರೀಕ್ಷೆ‌ ಮಾಡಿಸಿದ್ದರು,
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೋರ್ವನಿಗೆ ಮುಂಬೈ ನಂಟಿನಿಂದ ಕರೋನಾ ಸೋಂಕು ತಗುಲಿದೆ.
30 ವರ್ಷದ ಯುವಕನಿಗೆ ಕೊರೋನಾ ಪಾಸಿಟಿವ್‌ ಎಂದು ವರದಿಯಾಗಿದೆ.
ಮುಂಬೈನಿಂದ ಬಂದವನಿಗೆ ಕೊರೋನಾ ಪಾಸಿಟಿವ್‌ ಆಗಿರುತ್ತದೆ.
ಖಾಸಗಿ ಲ್ಯಾಬ್ ನಲ್ಲಿ ಟೆಸ್ಟ್ ಮಾಡಿಸಿದಾಗ ಕೊರೋನಾ ಪಾಸಿಟಿವ್ ವರದಿ ಬಂದಿದೆ.

ಕ್ವಾರಂಟೈನ್ ಮಾಡಲಾದ ಯುವಕ ಆತ್ಮಹತ್ಯೆ

ಮೂಡಬಿದಿರೆ(21ಮೇ/2020): ಕೊರೊನಾ ವೈರಸ್ ಭೀತಿಯಿಂದ ಯುವಕನೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ಮೂಡಬಿದಿರೆಯ ಕಡಂದಲೆಯಲ್ಲಿ ನಡೆದಿದೆ.
ಮುಂಬೈನಿಂದ ಬುಧವಾರ ಬಂದಿದ್ದ ಯುವಕನನ್ನು ಕ್ವಾರೆಂಟೈನ್ ಮಾಡಲಾಗಿತ್ತು. ಆದರೆ ಬೆಳಗ್ಗಿನ ಜಾವ 3 ಗಂಟೆ ಸುಮಾರಿಗೆ ಕ್ವಾರಂಟೈನ್ ಮಾಡಲಾಗಿದ್ದ ಕಡಂದಲೆ ಶಾಲೆಯಲ್ಲೇ ನೇಣಿಗೆ ಶರಣಾಗಿದ್ದಾನೆ.
ಆತ್ಮಹತ್ಯೆಗೆ ಶರಣಾದವರನ್ನು ಧನಂಜಯ್ ಪೂಜಾರಿ ಎಂದು ಗುರುತಿಸಲಾಗಿದೆ
ಕೊರೊನಾದಿಂದ ಮುಂದಿನ ಜೀವನೋಪಾಯದ ಬಗ್ಗೆ ಹೆದರಿ ಆತ್ಯಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಘಟನೆ ಸಂಬಂಧ ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ನಿಪ್ಪಾನಿ ಗಡಿಯಲ್ಲಿ ಬಾಕಿಯಾದವರಲ್ಲಿ ಕೆಲವರಿಗೆ ರಾಜ್ಯ ಪ್ರವೇಶಕ್ಕೆ ಅನುಮತಿ

ಉಡುಪಿ(20ಮೇ/2020): ಸೇವಾಸಿಂಧು ಆ್ಯಪ್ ಮೂಲಕ ನೋಂದಾಯಿಸದೆ ಮಹಾರಾಷ್ಟ್ರದಿಂದ ಹೊರಟು ಕಳೆದ ಮೂರು ದಿನಗಳಿಂದ ಕರ್ನಾಟಕದ ಗಡಿ ಭಾಗದಲ್ಲಿ ಸಿಕ್ಕಿಹಾಕಿಕೊಂಡಿದ್ದವವರ ಪೈಕಿ ಮಕ್ಕಳು, ಮಹಿಳೆಯರು ವೃದ್ಧರನ್ನ ರಾಜ್ಯದೊಳಗೆ ಬಿಡಲಾಗಿದೆ.
ಅಧಿಕೃತ ಪಾಸ್ ಇಲ್ಲದೆ ಮಹಾರಾಷ್ಟ್ರ ಸರ್ಕಾರದ ಪಾಸ್ ಪಡೆದು ಮೂವತ್ತು ಮಂದಿ ಕರಾವಳಿ ಕರ್ನಾಟಕಕ್ಕೆ ಹೊರಟಿದ್ದರು. ನಿಪ್ಪಾಣಿಯಲ್ಲಿ 54 ಮಂದಿಯನ್ನು ಪೊಲೀಸರು ತಡೆದು ನಿಲ್ಲಿಸಿದ್ದರು. ವಾಪಸ್ ಮಹಾರಾಷ್ಟ್ರಕ್ಕೂ ಹೋಗದ ಸ್ಥಿತಿ ನಿರ್ಮಾಣವಾಗಿತ್ತು. ಮೂರು ದಿನ ಬಸ್ಸಿನಲ್ಲೇ ಎಲ್ಲರೂ ಗಡಿಯಲ್ಲಿರುವ ಪೆಟ್ರೋಲ್ ಪಂಪ್‍ನಲ್ಲಿ ಕಾಲ ಕಳೆದಿದ್ದರು.ಕರಾವಳಿಯ ಎಲ್ಲಾ ಶಾಸಕರ ಜೊತೆಗೆ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ,ಸಂಸದರಾದ ನಳಿನ್ ಕುಮಾರ್ ಕಟೀಲು ಮತ್ತು ಶೋಭಾ ಕರಂದ್ಲಾಜೆ ಕಳೆದ ಎರಡು ದಿನಗಳಿಂದ ಕರಾವಳಿಗರನ್ನು ತವರಿಗೆ ಕರೆಸಿಕೊಳ್ಳಲು ಪ್ರಯತ್ನ ನಡೆಸಿದ್ದರು.
ದಕ್ಷಿಣ ಕನ್ನಡ ಜಿಲ್ಲೆ ಮತ್ತು ಉಡುಪಿ ಜಿಲ್ಲೆಯ ಜಿಲ್ಲಾಧಿಕಾರಿಗಳು ಕೂಡ ಆಯಾ ಜಿಲ್ಲೆಯ ಉಸ್ತುವಾರಿ ಸಚಿವರುಗಳಿಗೆ ಗರ್ಭಿಣಿ ಮಹಿಳೆ ಮತ್ತು ಜೊತೆಗಿರುವ ಮಹಿಳೆಯರನ್ನು ಜಿಲ್ಲೆಯೊಳಗೆ ಬಿಟ್ಟು ಕೊಳ್ಳುವಂತೆ ಮನವಿ ಮಾಡಿದ್ದರು. ಎಲ್ಲ ಕಡೆಯಿಂದ ಒತ್ತಡ, ಮನವಿ ಬಂದ ನಂತರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗಡಿಯಲ್ಲಿ ಸಿಲುಕಿದ್ದ ಗರ್ಭಿಣಿ, ಮಕ್ಕಳು ವೃದ್ಧರು ಮಹಿಳೆಯರು ಮಕ್ಕಳನ್ನು ಒಳಗೆ ಬಿಟ್ಟುಕೊಳ್ಳಲು ಅವಕಾಶ ಕಲ್ಪಿಸಿದ್ದಾರೆ. ಸಚಿವ ಕೋಟ ಶ್ರೀನಿವಾಸ ಪೂಜಾರಿ ಸಿಎಂಗೆ ಧನ್ಯವಾದ ಹೇಳಿದ್ದಾರೆ.