July 10, 2020

ಕರಾವಳಿ

ಕಾಪು: ಎಸ್.ಎಸ್.ಎಲ್.ಸಿ ವಿಧ್ಯಾರ್ಥಿಗೆ ಸೋಂಕು ಧೃಡ

ಕಾಪು(ಜೂ 28/2020): ಕಾಪು ತಾಲೂಕಿನ ಎಸ್‌.ಎಸ್‌‌.ಎಲ್‌‌.ಸಿ ವಿದ್ಯಾರ್ಥಿನಿಗೆ ಕೊರೊನಾ ಸೋಂಕು ದೃಢಪಟ್ಟಿರುವುದಾಗಿ ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ಕೊರೊನಾ ಪರೀಕ್ಷಾ ವರದಿ ಜೂ 28ರಂದು ಬಂದಿದ್ದು, ವರದಿಯಲ್ಲಿ ಪಾಸಿಟಿವ್‌ ಎಂದು ಖಚಿತವಾಗಿತ್ತು. ಈ ಕಾರಣದಿಂದ ವಿದ್ಯಾರ್ಥಿನಿ ಜೂ29ರಂದು ನಡೆಯಲಿರುವ ಪರೀಕ್ಷೆಯ ಅವಕಾಶದಿಂದ ವಂಚಿತರಾಗಿದ್ದಾರೆ.ವಿದ್ಯಾರ್ಥಿನಿ ಜು.25ರ ಎಸ್‌.ಎಸ್‌.ಎಲ್‌.ಸಿಯ ಕನ್ನಡ ಹಾಗೂ ಜು.27ರಂದು ನಡೆದ ಗಣಿತ ಪರೀಕ್ಷೆ ಬರೆದಿದ್ದರು. ಜೂನ್‌‌ 27ರಂದು ಈಕೆಯ ತಂದೆಯ ಗಂಟಲು ದ್ರವದ ಮಾದರಿ ಪರೀಕ್ಷೆ ಬಂದ ಹಿನ್ನೆಲೆ ಈಕೆಯನ್ನು ಕೂಡಾ ಅದೇ ದಿನ ಕೊರೊನಾ ಪರೀಕ್ಷೆಗೊಳಪಡಿಸಲಾಗಿತ್ತು.ಈಕೆ ಪರೀಕ್ಷೆ ಬರೆದ ಕೇಂದ್ರದಲ್ಲಿ ಸ್ಯಾನಿಟೈಸ್‌‌‌‌‌‌‌ ಹಾಗೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದರಿಂದ ಉಳಿದ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಒಳಪಡಿಸುವ ಅವಶ್ಯಕತೆ ಇಲ್ಲ ಎಂಬುದಾಗಿ ಆರೋಗ್ಯ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.

ಸ್ಥಳೀಯರ ಕಾಡಿಬೇಡಿ ಅಂತ್ಯಸಂಸ್ಕಾರ ನೇರವೇರಿಸಿದ ಅಧಿಕಾರಿಗಳು

ಮಂಗಳೂರು(28ಜೂ/2020): ಕೊನೆಗೂ ನಡೆದ ಮೃತ ಕೊರೋನಾ ಸೋಂಕಿತನ ಅಂತ್ಯಕ್ರಿಯೆ,ಸ್ಥಳೀಯರ ಮನವೊಲಿಸಿ ಅಂತ್ಯಕ್ರಿಯೆ ನಡೆಸಿದ ಅಧಿಕಾರಿಗಳು.
ಮಂಗಳೂರಿನ ಬೋಳಾರದಲ್ಲಿರುವ ದಫನ ಭೂಮಿಯಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು.ಕೊರೋನಾದಿಂದ ಇಂದು ಸಾವನ್ನಪ್ಪಿದ್ದ ಸುರತ್ಕಲ್ ನ ಇಡ್ಯಾ ನಿವಾಸಿ.
31 ವರ್ಷದ ಯುವಕ ಕೊರೋನಾ ಗೆ ಬಲಿಯಾಗಿದ್ದ,
ಸತತ 4 ಗಂಟೆಗಳ ಕಾಲ ಅಂಬುಲೆನ್ಸ್ ನಲ್ಲೇ ಇದ್ದ ಮೃತದೇಹ,ಅಂತ್ಯಕ್ರಿಯೆಗೆ ಸ್ಥಳೀಯರು ಒಪ್ಪದ ಕಾರಣ ಕಗ್ಗಂಟಾಗಿದ್ದ ಅಂತಿಮ ವಿಧಿವಿಧಾನ,ಸ್ಥಳೀಯರನ್ನು ಕಾಡಿಬೇಡಿ ಅಂತ್ಯಕ್ರಿಯೆ ಮಾಡಿದ ಅಧಿಕಾರಿಗಳು.
ಸ್ಥಳೀಯರು ಹೊರತು ಪಡಿಸಿ ಹೊರಗಿನವರ ಅಂತ್ಯಕ್ರಿಯೆ ಮಾಡದಂತೆ ಸ್ಥಳೀಯರ ಎಚ್ಚರಿಕೆಯನ್ನು ನಿವಾಸಿಗಳು ನೀಡಿದ್ದಾರೆ.

ಡಾ.ಎಂ ಅಣ್ಣಯ್ಯ ಕುಲಾಲ್ ಉಳ್ತೂರು ಇವರಿಗೆ ಶ್ರೇಷ್ಠ ಸಮಾಜಮುಖೀ ರಾಜ್ಯ ವೈದ್ಯ ಪ್ರಶಸ್ತಿ

ಬೆಂಗಳೂರು(27ಜೂ/2020): ಡಾ.ಎಂ.ಅಣ್ಣಯ್ಯ ಕುಲಾಲ್ ಉಳ್ತೂರು ಇವರಿಗೆ ರಾಜ್ಯ ಭಾರತೀಯ ವೈದ್ಯಕೀಯ ಸಂಘ ಬೆಂಗಳೂರು ಇವರು ವೈದ್ಯರ ದಿನಾಚರಣೆಯ ಅಂಗವಾಗಿ( ಡಾ ಬಿ ಸಿ ರಾಯ್ ಸ್ಮರಣಾರ್ಥ ) ಕೊಡಮಾಡುವ ಶ್ರೇಷ್ಠ ಸಮಾಜಮುಖೀ ರಾಜ್ಯ ವೈದ್ಯ ಪ್ರಶಸ್ತಿ ಸ್ವೀಕರಿಸಲಿರುವರು.
ಭಾರತದಲ್ಲಿ ಆಧುನಿಕ ವೈದ್ಯ ಪದ್ದತಿಯ ಹರಿಕಾರ ನೆಂದೇ ಖ್ಯಾತಿ ಆಗಿರುವ ಬಂಗಾಳದ ಮಾಜಿ ಮುಖ್ಯಮಂತ್ರಿ ದಿ. ಡಾ.ಬಿ.ಸಿ.ರಾಯ್ ಅವರ ಸವಿ ನೆನಪಿನಲ್ಲಿ ” ಭಾರತೀಯ ವೈದ್ಯ ಸಂಘ,ಕರ್ನಾಟಕ ರಾಜ್ಯ ಶಾಖೆಯು ವೈದ್ಯದಿನಾಚರಣೆಯ ಅಂಗವಾಗಿ ಕೊಡಮಾಡುವ ಈ ಪ್ರಶಸ್ತಿ ಗೆ ಕರಾವಳಿ ಕರ್ನಾಟಕದ ಸಮಾಜಮುಖೀ ವೈದ್ಯ ಡಾ ಎಂ ಅಣ್ಣಯ್ಯ ಕುಲಾಲ್ ಉಳ್ತೂರು ಆಯ್ಕೆ ಆಗಿರುತ್ತಾರೆ. ಪ್ರತೀ ವರ್ಷ ಈ ಪ್ರಶಸ್ತಿಯನ್ನು ಕೊಡುವಾಗ ವೈದ್ಯಕೀಯ ಸೇವೆಯ ಮೂಲಕ ಸಮಾಜಕ್ಕೆ ಕೊಟ್ಟ ಕೊಡುಗೆಯ ಜೊತೆಗೆ, ವೈದ್ಯಕೀಯ ಸಂಘಟನೆಗೆ ಕೊಟ್ಟ ಸೇವೆ ಮತ್ತು ನಾಯಕತ್ವ, ಹಾಗು ಸಮಾಜ ಮುಖೀ ಸೇವೆ ಗಳಾದ ನಾಡು ನುಡಿ ನೆಲ ಜಲ ಸಾಹಿತ್ಯ ಸಂಘಟನೆ ಸಾಮಾಜಿಕ ಸಾಂಸ್ಕೃತಿಕ, ರಾಜಕೀಯ ನಾಯಕತ್ವ ಗಳನ್ನ ಪರಿಗಣಿಸಲಾಗುತ್ತದೆ.
ನಾಡಿನ ಖ್ಯಾತ ಶಿಕ್ಷಣ ಸಂಸ್ಥೆ ಯಾದ ಶ್ರೀನಿವಾಸ್ ಯೂನಿವರ್ಸಿಟಿ ಯ ಮುಖ್ಯ ವೈದ್ಯಾಧಿಕಾರಿ ಹಾಗು ಪ್ರಾಧ್ಯಾಪಕರಾಗಿ ಕಳೆದ 2 ದಶಕ ಗಳಿಂದ ಸೇವೆ ಸಲ್ಲಿಸುತ್ತಿರುವ ಡಾ ಅಣ್ಣಯ್ಯ ಕುಲಾಲ್ ಉಳ್ತೂರು ಅಷ್ಟೇ ವರ್ಷಗಳಿಂದ ಕುಟುಂಬ ವೈದ್ಯ ಮತ್ತು ಅರೋಗ್ಯ ಸಲಹಾ ತಜ್ಞರಾಗಿ ಮಂಗಳೂರಿನ ಕುಲಾಲ್ ಹೆಲ್ತ್ ಸೆಂಟರ್ ಮೂಲಕ ಸಮಾಜಮುಖೀ ವೈದ್ಯಕೀಯ ಸೇವೆ ಸಲ್ಲಿಸುತ್ತಿದ್ದಾರೆ.
ಹಳ್ಳಿ ಗಳಲ್ಲಿ ವೈದ್ಯಕೀಯ ಸೇವೆ, ವೈದ್ಯಕೀಯ ಶಿಕ್ಷಣ, ವೈದ್ಯಕೀಯ ಸಂಘಟನೆ, ವೈದ್ಯಕೀಯ ಸಾಹಿತ್ಯ, ಕನ್ನಡ ನಾಡು, ನುಡಿ ,ನೆಲ ,ಜಲ ,ಪರಿಸರ ,ಕೆರೆ ರಸ್ತೆ, ರೈಲ್ವೆ ಮುಂತಾದ ಹೋರಾಟಗಳಲ್ಲಿ ಕರಾವಳಿ ಭಾಗದಲ್ಲಿ ಮುಂಚೂಣಿಯ ನಾಯಕತ್ವ ನೀಡಿದವರು.
ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನ, ಸರ್ವಜ್ಞ ಸೆಕೆಂಡ್ ಒಪೀನಿಯನ್ ಸೆಂಟರ್ , ಕನ್ನಡಕಟ್ಟೆ ಗಳ ಮೂಲಕ ಅರೋಗ್ಯ, ಸಾಮಾಜಿಕ, ಶೈಕ್ಷಣಿಕ , ಸಾಂಸ್ಕೃತಿಕ ಜನಜಾಗೃತಿಯನ್ನ 2 ದಶಕಗಳಿಂದ ನೀಡಿ ಜನಮನದಲ್ಲಿ ಹೆಸರಾದವರು. ಐಎಂಎ ಬರಹಗಾರರ ಬಳಗವನ್ನ ಹುಟ್ಟುಹಾಕಿ ಪ್ರಪ್ರಥಮ ವೈದ್ಯ ಬರಹಗಾರರ ರಾಜ್ಯ ಸಮ್ಮೇಳನವನ್ನ ಮಂಗಳೂರಲ್ಲಿ ಯಶಶ್ವಿ ಯಾಗಿ ಸಂಘಟಿಸಿದವರು. ಐಎಂಎ ಯ ಜಿಲ್ಲೆ , ರಾಜ್ಯ , ಮತ್ತು ರಾಷ್ಟ್ರ ಮಟ್ಟದ ಸಂಘಟನೆಗಳಲ್ಲಿ ಸಕ್ರೀಯರಾಗಿರುವ ಇವರು ಹತ್ತಾರು ವೈದ್ಯ ಸಮ್ಮೇಳನಗಳ ಯಶಸ್ಸಿಗೆ ದುಡಿದವರು, ಪ್ರಸ್ತುತ ಮಂಗಳೂರು ಐಎಂಎ ಯ ಅಧ್ಯಕ್ಷರಾಗಿರುವ ಇವರು ಈ ಪ್ರಶಸ್ತಿಯನ್ನ ಪಡೆಯುತ್ತಿರುವ ಅತೀ ಕಿರಿಯ ವಯಸ್ಸಿನ ವೈದ್ಯರು ಎಂಬ ಖ್ಯಾತಿಗೂ ಭಾಜನ ರಾಗಿದ್ದಾರೆ.
ಭಾರತೀಯ ಜನತಾಪಕ್ಷದ ವೈದ್ಯಕೀಯ ಪ್ರಕೋಷ್ಠ ಮತ್ತು ಶಿಕ್ಷಕ ಶಿಕ್ಷಣ ಪ್ರಕೋಷ್ಠಗಳಲ್ಲಿ ಜಿಲ್ಲೆ ಮತ್ತು ರಾಜ್ಯ ಸಂಚಾಲಕನಾಗಿ ಸಂಘಟನಾತ್ಮಕ ವಾಗಿ ತೊಡಗಿಸಿ ಕೊಂಡಿರುವ ಇವರು , ತನ್ನ ಸಮಾಜ ಮುಖೀ ವೈದ್ಯಕೀಯ ಸೇವೆಯ ಜೊತೆಗೆ ಬರಹ , ಭಾಷಣ ಮತ್ತು ಸಂಘಟನಾಚಾತುರ್ಯ ದಿಂದ ಜನಮನ ಗೆದ್ದು , ಸಾಮಾಜದ ಪ್ರೀತಿ ಗಳಿಸಿದವರು.

ಉಳ್ಳಾಲ: ಒಂದೇ ಮನೆಯ 13 ಜನರಿಗೆ ಕರೋನಾ

ಉಳ್ಳಾಲ(27ಜೂ/2020): ಉಳ್ಳಾಲದ ಒಂದೇ ಮನೆಯ 12 ಜನರಿಗೆ ಇಂದು ಪಾಸಿಟಿವ್ ವರದಿ ಬಂದಿದೆ.
ಕೆಲ ದಿನಗಳ ಹಿಂದೆ ‌ಮನೆಯ ಓರ್ವ ಮಹಿಳೆಗೆ ಪಾಸಿಟಿವ್ ಆಗಿತ್ತು.ಹೀಗಾಗಿ ಇಡೀ ಮನೆಯನ್ನು ಸೀಲ್ ಡೌನ್ ಮಾಡಿ ಎಲ್ಲರನ್ನು ಕ್ವಾರೆಂಟೈನ್ ಮಾಡಲಾಗಿತ್ತು.
ಈಗ ಒಟ್ಟು 17 ಜನರಿದ್ದ ತುಂಬು ಕುಟುಂಬಕ್ಕೆ ವಕ್ಕರಿಸಿದ ಕೊರೋನಾ,ಮೊದಲು ಪಾಸಿಟಿವ್ ಆದ ಮಹಿಳೆ ಸೇರಿ ಒಂದೇ ಮನೆಯ 13 ಜನರಿಗೆ ಕೊರೋನಾ ಪಾಸಿಟಿವ್ ವರದಿಯಾಗಿದೆ.
ಉಳ್ಳಾಲದಲ್ಲಿ ಕೊರೋನಾ ವೈರಸ್ ಅಬ್ಬರಕ್ಕೆ ಜನರು ತತ್ತರ ಆಗಿದ್ದಾರೆ.ಜೊತೆಗೆ ಮತ್ತೆ ಇಬ್ಬರು ಪೊಲೀಸ್ ಸಿಬ್ಬಂದಿಗೆ ಪಾಸಿಟಿವ್ ಪತ್ತೆಯಾಗಿದೆ.

ಮ್ಯಾನ್ ಹೋಲ್ ಒಳಗೆ ಇಳಿದು ಬ್ಲೋಕ್ ತೆಗೆದ ಕದ್ರಿಯ ಕಾರ್ಪೋರೆಟರ್

ಮಂಗಳೂರು(24ಜೂನ್/2020): ಮ್ಯಾನ್ ಹೋಲ್ ಚೇಂಬರ್ ಒಳಗೆ ಇಳಿದ ಕದ್ರಿಯ ಕಾರ್ಪೊರೇಟರ್ ಕದ್ರಿ ಮನೋಹರ್ ಶೆಟ್ಟಿ.
ಇವರ ಕಾರ್ಯವನ್ನು ಶ್ಲಾಘಿಸಲೇ ಬೇಕು ಮಂಗಳೂರಿನ ಕದ್ರಿ ಕಂಬಳ ರಸ್ತೆಯಲ್ಲಿನ ಚರಂಡಿಯಲ್ಲಿ ಮಳೆ ನೀರಿನ ಹರಿವಿನ ಸಮಸ್ಯೆಯಾಗಿ ತಡೆಯುಂಟಾದಾಗ ಸಮಸ್ಯೆ ಏನೆಂಬುದು ತಿಳಿಯಲು ಪಕ್ಕದಲ್ಲಿ ಮ್ಯಾನ್ವಲ್ ಚೇಂಬರ್ ಇದ್ದರೂ ಕಾರ್ಮಿಕರು ಅದರೊಳಗೆ ಇಳಿದು ಸಮಸ್ಯೆ ಬಗೆಹರಿಸಲು ಒಪ್ಪದೆ ಇದ್ದಾಗ ಸತಃ ಕದ್ರಿಯ ಕಾರ್ಪೊರೇಟರ್ ಕದ್ರಿ ಮನೋಹರ್ ಶೆಟ್ಟಿಯವರು ಚೇಂಬರ್ ಒಳಗಡೆ ಇಳಿದು ಸಮಸ್ಯೆ ಸಮಸ್ಯೆ ಏನೆಂದು ತಿಳಿದು ಕಾರ್ಮಿಕರಿಗೆ ತಿಳಿಸಿದ ಮೇಲೂ ಸಹ ಅವರು ತೊಡಕನ್ನು ಸರಿಪಡಿಸಲು ಚೇಂಬರ್ ಒಳಗಡೆ ಇಳಿಯದಿದ್ದಾಗ ಕೂಡಲೇ ಕಾರ್ಪೊರೇಟರ್ ಒಂದು ಬದಲಿ ಬಟ್ಟೆಯನ್ನು ತರಿಸಿ ಧರಿಸಿ ಚೇಂಬರ್ ಒಳಗಡೆ ಇಳಿದು ಸಮಸ್ಯೆಯನ್ನು ಸರಿಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಜಪೆ ಬಿಜೆಪಿ ಶಕ್ತಿ ಕೇಂದ್ರಕ್ಕೆ ನೂತನ ಅಧ್ಯಕ್ಷ , ಪ್ರಧಾನ ಕಾರ್ಯದರ್ಶಿ

ಬಜಪೆ(23ಜೂ/2020): ಬಿಜೆಪಿ ಮಹಾ-ಶಕ್ತಿಕೇಂದ್ರ ಮತ್ತು ಶಕ್ತಿಕೇಂದ್ರದ ನೂತನ ಪದಾಧಿಕಾರಿಗಳ ಜವಾಬ್ಧಾರಿ ಹಸ್ತಾಂತರ ಕಾರ್ಯಕ್ರಮವು ಮುಲ್ಕಿ-ಮೂಡಬಿದ್ರೆ ಕ್ಷೇತ್ರದ ಶಾಸಕರಾದ ಉಮಾನಾಥ್ ಕೊಟ್ಯಾನ್ ಇವರ ಸಮ್ಮುಖದಲ್ಲಿ ಬಜಪೆ ವಿಜಯ ವಿಠಲ ಭಜನಾ ಮಂದಿರದಲ್ಲಿ ನೆರವೇರಿತು.
ಮಹಾ ಶಕ್ತಿಕೇಂದ್ರದ ಪ್ರಮುಖರ ಜವಾಬ್ದಾರಿಗಳು ಹೀಗಿವೆ ಅಧ್ಯಕ್ಷರು ಸುಧಾಕರ ಕಾಮತ್ ಬಜಪೆ,ಪ್ರಧಾನಾ ಕಾರ್ಯದರ್ಶಿ ಪ್ರದೀಪ್ ಸುವರ್ಣ ಬಜಪೆ,ಜಿಲ್ಲಾ ಪಂಚಾಯತ್ ಸದಸ್ಯರು ವಸಂತಿ ಕಿಶೋರ್ ಪೆರ್ಮುದೆ, ಸದಸ್ಯರು ಕವಿತಾ ದಿನೇಶ್ ಮತ್ತು ಮಂಜು ಪ್ರಸಾದ್ ಶೆಟ್ಟಿ
ಶಕ್ತಿಕೇಂದ್ರ ಪ್ರಮುಖರು ಬಜಪೆ ನಗರಕ್ಕೆ ಚಿತ್ರೆಶ್ ಶೆಟ್ಟಿ, ಬಜಪೆ ಗ್ರಾಮಾಂತರಕ್ಕೆ ದುರ್ಗಾಪ್ರಸಾದ್ ಮಡಿವಾಳ, ಕುತ್ತೆತ್ತುರಿಗೆ ಕಿಶೋರ್ ಕೊಟ್ಯಾನ್
ಕಳವಾರಿಗೆ ಭಾಸ್ಕರ್ ರಾವ್,
೬ನೇ ತೋಕೂರಿಗೆ ಜಯಂತ್ ಸಾಲಿಯಾನ್,
ಕರಂಬಾರಿಗೆ ಸತೀಶ್ ದೇವಾಡಿಗ,
ಕೆಂಜಾರಿಗೆ ವಿಜಯ ಕುಮಾರ್ ,
ಜಾರಕ್ಕೆ ಉಮೇಶ್ ಮೂಡಶೆಡ್ಡೆ , ಪಿಲಿಕುಳಕ್ಕೆ ಹರಿಪ್ರಸಾದ್ ಶೆಟ್ಟಿ ಆಯ್ಕೆಯಾದರು.

ಮೀನು ವ್ಯಾಪಾರಿಗೆ ಕರೋನಾ ದೃಢ

ಮಂಗಳೂರು(ಜೂನ್23/2020): ಮೀನು ವ್ಯಾಪಾರಿಗೆ ಕೋವಿಡ್-19 ಸೋಂಕು ದೃಢವಾಗಿದೆ. ಮಂಗಳೂರಿನ ಎಕ್ಕೂರು ನಿವಾಸಿಗೆ ಕೋವಿಡ್-19 ಸೋಂಕು ತಾಗಿರುವುದು ಪರೀಕ್ಷೆಯಲ್ಲಿ ದೃಢವಾಗಿದೆ.
ಈತ ಮಂಗಳೂರು ಬಂದರಿಗೆ ತೆರಳಿ ಅಲ್ಲಿಂದ ಮೀನು ತಂದು, ದ್ವಿಚಕ್ರ ವಾಹನದಲ್ಲಿ ಮನೆಮನೆಗೆ ಮೀನು ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ. ಹೀಗಾಗಿ ಈತನ ಪ್ರಾಥಮಿಕ ಸಂಪರ್ಕಿತರನ್ನು ಪತ್ತೆ ಮಾಡುವ ಕಾರ್ಯ ಜಿಲ್ಲಾಡಳಿತ ಮಾಡುತ್ತಿದೆ.‌
ಎಕ್ಕೂರಿನ 27 ವರ್ಷದ ಯುವಕ ಶೀತದ ಸಮಸ್ಯೆ ಇದ್ದು ಸ್ವತಹ ಆನುಮಾನದಿಂದ ಸ್ಥಳೀಯ ಆಸ್ಪತ್ರೆಯಲ್ಲಿ ಸ್ವಯಂ ಪರೀಕ್ಷೆಗೊಳಪಟ್ಟಿದ್ದ. ಈ ವೇಳೆ ಆತನ ಗಂಟಲು ದ್ರವ ಮಾದರಿ ಪರೀಕ್ಷೆಗೊಳಪಡಿಸಿದ್ದು, ಸದ್ಯ ಆತನಿಗೆ ಕೋವಿಡ್-19 ಸೋಂಕು ತಾಗಿರುವುದು ಖಚಿತವಾಗಿದೆ.

ತೊಕ್ಕೊಟ್ಟು ತಲವಾರು ದಾಳಿ,ಕೌಟುಂಬಿಕ ಕಲಹ ಕಾರಣ?

ಉಳ್ಳಾಲ(ಜೂ19/2020): ಮಾಂಸದಂಗಡಿ ಮಾಲಕನ ಮೇಲೆ ತಲವಾರು ದಾಳಿ ನಡೆದು ಹತ್ಯೆಗೆ ಯತ್ನಿಸಿದ ಘಟನೆ ಜೂ.18 ರ ಗುರುವಾರ ತಡರಾತ್ರಿ ಉಳ್ಳಾಲ ಠಾಣಾ ವ್ಯಾಪ್ತಿಯ ತೊಕ್ಕೊಟ್ಟು ಒಳಪೇಟೆಯಲ್ಲಿ ನಡೆದಿದೆ.
ಹಲ್ಲೆಗೆ ಒಳಗಾದವರನ್ನು ಹಳೆಕೋಟೆ ನಿವಾಸಿ ನಝೀರ್(47) ಎಂದು ಗುರುತಿಸಲಾಗಿದೆ.
ಇವರು ತೊಕ್ಕೊಟ್ಟು ಒಳಪೇಟೆಯತ್ತ ಬಂದಾಗ ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ಇವರ ಮೇಲೆ ತಲವಾರು ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಗಾಯಾಳುವನ್ನು ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ದಾಳಿ ನಡೆದಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಉಳ್ಳಾಲ ಠಾಣಾ ಪೊಲೀಸರು ಭೇಟಿ ಕೊಟ್ಟು ಪರಿಶೀಲನೆಯನ್ನು ನಡೆಸಿ ತನಿಖೆ ಕೈಗೆತ್ತಿಕೊಂಡಿದ್ದಾರೆ.

ಚೀನಾ ವಸ್ತುಗಳ ಬಳಕೆ,ಖರೀದಿ ಮಾಡಬೇಡಿ: ಗುರೂಜಿ ಸಾಯಿ ಈಶ್ವರ್

ಉಡುಪಿ(18ಜೂ/2020): ಭಾರತ ಚೀನಾ ಗಡಿಯ ಗಾಲ್ವಾನ್ ಪ್ರದೇಶದಲ್ಲಿ ಚೀನಾ ಸೈನಿಕರ ದಾಳಿಗೆ ತುತ್ತಾಗಿ ವೀರ ಮರಣವಪ್ಪಿದ ಭಾರತೀಯ ಸೇನೆಯ ಇಪ್ಪತ್ತು ಸೈನಿಕರ ಗೌರವಾರ್ಥವಾಗಿ ಗುರೂಜಿ ಸಾಯಿಈಶ್ವರ್ ಇಂದು ಉಡುಪಿಯ ಹುತಾತ್ಮ ಸೈನಿಕರ ಯುದ್ಧ ಸ್ಮಾರಕಕ್ಕೆ ಬೇಟಿ ನೀಡಿ ಗೌರವ
ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಗುರೂಜಿ ಸಾಯಿ ಈಶ್ವರ್ “ಗಡಿಯಲ್ಲಿ ವೀರ ಮರಣವನ್ನಪ್ಪಿದ ನಮ್ಮ ಸೈನಿಕರ ಸಾವು ವ್ಯರ್ಥವಾಗ ಬಾರದು.ನಮ್ಮಿಂದ ಯುದ್ದದಲ್ಲಿ ಭಾಗವಹಿಸಲು ಸಾಧ್ಯವಿಲ್ಲ ಆದರೆ ಇನ್ನು ಮುಂದೆ ಚೀನಾ ವಸ್ತುಗಳನ್ನು ಖರೀದಿಸುವುದನ್ನು ನಿಲ್ಲಿಸುವ, ಚೀನಾ ದೇಶಕ್ಕೆ ಆರ್ಥಿಕ ಹಿನ್ನಡೆ ತಂದು ಪರೋಕ್ಷವಾಗಿ ಆರ್ಥಿಕ ಯುದ್ಧ ಮಾಡಲು ಸಿದ್ದರಾಗಿ” ಎಂದು ಯುವ ಜನತೆಗೆ ಕರೆ ನೀಡಿದರು.
ಶಂಕರಪುರದ ದ್ವಾರಕಾಮಾಹಿ ಶ್ರೀ ಸಾಯಿ ಬಾಬಾ ಮಂದಿರದಲ್ಲಿ ಪ್ರತಿವರ್ಷ ಉಡುಪಿಯ ಹಾಲಿ ಹಾಗು ಮಾಜಿ ಸೈನಿಕರನ್ನು ಗುರುತಿಸಿ ಸೈನಿಕ ದಂಪತಿಗಳನ್ನು ಮಂದಿರಕ್ಕೆ ಕರೆಸಿ ಧುನಿ ಯಾಗ ಮಾಡುತ್ತಿದ್ದು ಈ ವರ್ಷ ಕರೋನಾ ಲಾಕ್ ಡೌನ್ ಕಾರಣ ಧುನಿ ಯಾಗ ಆಯೋಜನೆ ಮಾಡಿರುವುದಿಲ್ಲ.
ಉಡುಪಿ ಹಿಂದೂ ಸಂಘಟಕ ರಾಧಾಕೃಷ್ಣ ಮೆಂಡನ್ ಮಾತನಾಡಿ “ನಮ್ಮ ಸೈನಿಕರನ್ನು ಮೋಸದಿಂದ ಕೊಲ್ಲಲಾಯಿತು, ಆದರೆ ಪ್ರತ್ಯುತ್ತರವಾಗಿ ನಮ್ಮ ತಕ್ಕ ಉತ್ತರ ನೀಡಿದ್ದಾರೆ.ಮೃತ ಯೋಧರ ಕುಟುಂಬಕ್ಕೆ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತನು ನೀಡಲಿ” ಎಂದು ನುಡಿದರು.
ಈ ಸಂದರ್ಭದಲ್ಲಿ ಪರ್ಕಳದ ಲಯನ್ಸ್ ಕ್ಲಬಿನ ಅಧ್ಯಕ್ಷರಾದ ಜಯರಾಮ್ ಜಿ, ಮ್ಯಾಕ್ಸ್ ಸೌಂಡ್ಸ್ ಇದರ ಮಾಲಕರಾದ ಗಣೇಶ್ ಪಾಲನ್, ದ್ವಾರಕಾಮಾಹಿ ಶ್ರೀ ಸಾಯಿ ಬಾಬಾ ಮಂದಿರದ ಮೇಲ್ವಿಚಾರಕ ಸತೀಶ್ ದೇವಾಡಿಗ,ಅಮಿತ್ ಬಜಪೆ ಉಪಸ್ಥಿತರಿದ್ದರು.