July 11, 2020

ಕರ್ನಾಟಕ

ಡಾ.ಎಂ ಅಣ್ಣಯ್ಯ ಕುಲಾಲ್ ಉಳ್ತೂರು ಇವರಿಗೆ ಶ್ರೇಷ್ಠ ಸಮಾಜಮುಖೀ ರಾಜ್ಯ ವೈದ್ಯ ಪ್ರಶಸ್ತಿ

ಬೆಂಗಳೂರು(27ಜೂ/2020): ಡಾ.ಎಂ.ಅಣ್ಣಯ್ಯ ಕುಲಾಲ್ ಉಳ್ತೂರು ಇವರಿಗೆ ರಾಜ್ಯ ಭಾರತೀಯ ವೈದ್ಯಕೀಯ ಸಂಘ ಬೆಂಗಳೂರು ಇವರು ವೈದ್ಯರ ದಿನಾಚರಣೆಯ ಅಂಗವಾಗಿ( ಡಾ ಬಿ ಸಿ ರಾಯ್ ಸ್ಮರಣಾರ್ಥ ) ಕೊಡಮಾಡುವ ಶ್ರೇಷ್ಠ ಸಮಾಜಮುಖೀ ರಾಜ್ಯ ವೈದ್ಯ ಪ್ರಶಸ್ತಿ ಸ್ವೀಕರಿಸಲಿರುವರು.
ಭಾರತದಲ್ಲಿ ಆಧುನಿಕ ವೈದ್ಯ ಪದ್ದತಿಯ ಹರಿಕಾರ ನೆಂದೇ ಖ್ಯಾತಿ ಆಗಿರುವ ಬಂಗಾಳದ ಮಾಜಿ ಮುಖ್ಯಮಂತ್ರಿ ದಿ. ಡಾ.ಬಿ.ಸಿ.ರಾಯ್ ಅವರ ಸವಿ ನೆನಪಿನಲ್ಲಿ ” ಭಾರತೀಯ ವೈದ್ಯ ಸಂಘ,ಕರ್ನಾಟಕ ರಾಜ್ಯ ಶಾಖೆಯು ವೈದ್ಯದಿನಾಚರಣೆಯ ಅಂಗವಾಗಿ ಕೊಡಮಾಡುವ ಈ ಪ್ರಶಸ್ತಿ ಗೆ ಕರಾವಳಿ ಕರ್ನಾಟಕದ ಸಮಾಜಮುಖೀ ವೈದ್ಯ ಡಾ ಎಂ ಅಣ್ಣಯ್ಯ ಕುಲಾಲ್ ಉಳ್ತೂರು ಆಯ್ಕೆ ಆಗಿರುತ್ತಾರೆ. ಪ್ರತೀ ವರ್ಷ ಈ ಪ್ರಶಸ್ತಿಯನ್ನು ಕೊಡುವಾಗ ವೈದ್ಯಕೀಯ ಸೇವೆಯ ಮೂಲಕ ಸಮಾಜಕ್ಕೆ ಕೊಟ್ಟ ಕೊಡುಗೆಯ ಜೊತೆಗೆ, ವೈದ್ಯಕೀಯ ಸಂಘಟನೆಗೆ ಕೊಟ್ಟ ಸೇವೆ ಮತ್ತು ನಾಯಕತ್ವ, ಹಾಗು ಸಮಾಜ ಮುಖೀ ಸೇವೆ ಗಳಾದ ನಾಡು ನುಡಿ ನೆಲ ಜಲ ಸಾಹಿತ್ಯ ಸಂಘಟನೆ ಸಾಮಾಜಿಕ ಸಾಂಸ್ಕೃತಿಕ, ರಾಜಕೀಯ ನಾಯಕತ್ವ ಗಳನ್ನ ಪರಿಗಣಿಸಲಾಗುತ್ತದೆ.
ನಾಡಿನ ಖ್ಯಾತ ಶಿಕ್ಷಣ ಸಂಸ್ಥೆ ಯಾದ ಶ್ರೀನಿವಾಸ್ ಯೂನಿವರ್ಸಿಟಿ ಯ ಮುಖ್ಯ ವೈದ್ಯಾಧಿಕಾರಿ ಹಾಗು ಪ್ರಾಧ್ಯಾಪಕರಾಗಿ ಕಳೆದ 2 ದಶಕ ಗಳಿಂದ ಸೇವೆ ಸಲ್ಲಿಸುತ್ತಿರುವ ಡಾ ಅಣ್ಣಯ್ಯ ಕುಲಾಲ್ ಉಳ್ತೂರು ಅಷ್ಟೇ ವರ್ಷಗಳಿಂದ ಕುಟುಂಬ ವೈದ್ಯ ಮತ್ತು ಅರೋಗ್ಯ ಸಲಹಾ ತಜ್ಞರಾಗಿ ಮಂಗಳೂರಿನ ಕುಲಾಲ್ ಹೆಲ್ತ್ ಸೆಂಟರ್ ಮೂಲಕ ಸಮಾಜಮುಖೀ ವೈದ್ಯಕೀಯ ಸೇವೆ ಸಲ್ಲಿಸುತ್ತಿದ್ದಾರೆ.
ಹಳ್ಳಿ ಗಳಲ್ಲಿ ವೈದ್ಯಕೀಯ ಸೇವೆ, ವೈದ್ಯಕೀಯ ಶಿಕ್ಷಣ, ವೈದ್ಯಕೀಯ ಸಂಘಟನೆ, ವೈದ್ಯಕೀಯ ಸಾಹಿತ್ಯ, ಕನ್ನಡ ನಾಡು, ನುಡಿ ,ನೆಲ ,ಜಲ ,ಪರಿಸರ ,ಕೆರೆ ರಸ್ತೆ, ರೈಲ್ವೆ ಮುಂತಾದ ಹೋರಾಟಗಳಲ್ಲಿ ಕರಾವಳಿ ಭಾಗದಲ್ಲಿ ಮುಂಚೂಣಿಯ ನಾಯಕತ್ವ ನೀಡಿದವರು.
ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನ, ಸರ್ವಜ್ಞ ಸೆಕೆಂಡ್ ಒಪೀನಿಯನ್ ಸೆಂಟರ್ , ಕನ್ನಡಕಟ್ಟೆ ಗಳ ಮೂಲಕ ಅರೋಗ್ಯ, ಸಾಮಾಜಿಕ, ಶೈಕ್ಷಣಿಕ , ಸಾಂಸ್ಕೃತಿಕ ಜನಜಾಗೃತಿಯನ್ನ 2 ದಶಕಗಳಿಂದ ನೀಡಿ ಜನಮನದಲ್ಲಿ ಹೆಸರಾದವರು. ಐಎಂಎ ಬರಹಗಾರರ ಬಳಗವನ್ನ ಹುಟ್ಟುಹಾಕಿ ಪ್ರಪ್ರಥಮ ವೈದ್ಯ ಬರಹಗಾರರ ರಾಜ್ಯ ಸಮ್ಮೇಳನವನ್ನ ಮಂಗಳೂರಲ್ಲಿ ಯಶಶ್ವಿ ಯಾಗಿ ಸಂಘಟಿಸಿದವರು. ಐಎಂಎ ಯ ಜಿಲ್ಲೆ , ರಾಜ್ಯ , ಮತ್ತು ರಾಷ್ಟ್ರ ಮಟ್ಟದ ಸಂಘಟನೆಗಳಲ್ಲಿ ಸಕ್ರೀಯರಾಗಿರುವ ಇವರು ಹತ್ತಾರು ವೈದ್ಯ ಸಮ್ಮೇಳನಗಳ ಯಶಸ್ಸಿಗೆ ದುಡಿದವರು, ಪ್ರಸ್ತುತ ಮಂಗಳೂರು ಐಎಂಎ ಯ ಅಧ್ಯಕ್ಷರಾಗಿರುವ ಇವರು ಈ ಪ್ರಶಸ್ತಿಯನ್ನ ಪಡೆಯುತ್ತಿರುವ ಅತೀ ಕಿರಿಯ ವಯಸ್ಸಿನ ವೈದ್ಯರು ಎಂಬ ಖ್ಯಾತಿಗೂ ಭಾಜನ ರಾಗಿದ್ದಾರೆ.
ಭಾರತೀಯ ಜನತಾಪಕ್ಷದ ವೈದ್ಯಕೀಯ ಪ್ರಕೋಷ್ಠ ಮತ್ತು ಶಿಕ್ಷಕ ಶಿಕ್ಷಣ ಪ್ರಕೋಷ್ಠಗಳಲ್ಲಿ ಜಿಲ್ಲೆ ಮತ್ತು ರಾಜ್ಯ ಸಂಚಾಲಕನಾಗಿ ಸಂಘಟನಾತ್ಮಕ ವಾಗಿ ತೊಡಗಿಸಿ ಕೊಂಡಿರುವ ಇವರು , ತನ್ನ ಸಮಾಜ ಮುಖೀ ವೈದ್ಯಕೀಯ ಸೇವೆಯ ಜೊತೆಗೆ ಬರಹ , ಭಾಷಣ ಮತ್ತು ಸಂಘಟನಾಚಾತುರ್ಯ ದಿಂದ ಜನಮನ ಗೆದ್ದು , ಸಾಮಾಜದ ಪ್ರೀತಿ ಗಳಿಸಿದವರು.

ರಾಜ್ಯದಲ್ಲಿ ಭಾನುವಾರ ಲಾಕ್‍ಡೌನ್,ರಾತ್ರಿ ಕರ್ಪ್ಯು ವಿಸ್ತಾರಣೆ

ಬೆಂಗಳೂರು(27ಜೂ/2020):  ಕೊರೊನಾ ವೈರಸ್‌ ನಿಯಂತ್ರಣದ ಕುರಿತು ಚರ್ಚಿಸಲು ಇಂದು ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಹಲವು ಮಹತ್ತರ ತೀರ್ಮಾನಗಳನ್ನು ಕೈಗೊಳ್ಳಲಾಗಿದೆ. ಜುಲೈ 5ರಿಂದ ಭಾನುವಾರ ಲಾಕ್‌ಡೌನ್‌, ಕರ್ಫ್ಯೂ ಅವಧಿ ವಿಸ್ತರಣೆ ಸೇರಿದಂತೆ ಹಲವು ಕ್ರಮಗಳಿಗೆ ಸರ್ಕಾರ ಮುಂದಾಗಿದೆ. 
ಜುಲೈ 5ರಿಂದ ಮುಂದಿನ ಆದೇಶದವರೆಗೆ ಪ್ರತಿ ಭಾನುವಾರ ರಾಜ್ಯಾದ್ಯಂತ ಲಾಕ್‍ಡೌನ್ ಮಾಡಲಾಗುವುದು.ವಸ್ತುಗಳ ಸಾಗಾಣಿಕೆಗೆ ನಿರ್ಬಂದವಿಲ್ಲ.
ಜುಲೈ 10ನೇ ತಾರಿಖಿನಿಂದ ಒಂದು ತಿಂಗಳ ಕಾಲ ಈಗಾಗಲೇ ರಜೆಯಿರುವ 2ನೇ ಹಾಗೂ 4ನೇ ಶನಿವಾರದ ಜೊತೆಗೆ ಉಳಿದ ಶನಿವಾರದಂದು ಎಲ್ಲಾ ಸರ್ಕಾರಿ ಹಾಗೂ ಸರ್ಕಾರಿ ಸ್ವಾಮ್ಯಕ್ಕೊಳಪಡುವ ಎಲ್ಲಾ ಕಚೇರಿಗಳಿಗೆ ರಜೆ ಘೋಷಿಸಲು ತೀರ್ಮಾನಿಸಲಾಯಿತು. 
ರಾತ್ರಿ 9.00 ಗಂಟೆಯಿಂದ ಬೆಳಿಗ್ಗೆ 5.00 ಗಂಟೆಯವರೆಗೆ ಈಗಾಗಲೇ ಇರುವ ಕರ್ಫ್ಯೂ ಅವಧಿಯ ಬದಲಾಗಿ ರಾತ್ರಿ 8.00 ಗಂಟೆಯಿಂದ ಬೆಳಿಗ್ಗೆ 5.00 ಗಂಟೆಯವರೆಗೆ ಕರ್ಫ್ಯೂ ಅವಧಿಯನ್ನು ಬದಲಾಯಿಸಲು ತೀರ್ಮಾನಿಸಲಾಯಿತು.
ಕೊರೊನಾ ತಡೆಗಾಗಿ ಸರ್ಕಾರ ಪ್ರತಿ ಭಾನುವಾರ ಲಾಕ್‍ಡೌನ್ ಮಾಡಲು ಸರ್ಕಾರ ನಿರ್ಧರಿಸಿದೆ. ಹಾಗೆಯೇ ನೈಟ್ ಕರ್ಫ್ಯೂ ಅವಧಿಯನ್ನು ವಿಸ್ತರಣೆ ಮಾಡಲಾಗುತ್ತಿದೆ. ರಾತ್ರಿ 8 ಗಂಟೆಯಿಂದಲೇ ಕರ್ಫ್ಯೂ ಜಾರಿಯಾಗಲಿದ್ದು, ಅನಾವಶ್ಯಕವಾಗಿ ಹೊರ ಬರೋರ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ಸರ್ಕಾರ ನಿರ್ಧರಿಸಿದೆ.
ಈಗಾಗಲೇ ಸರ್ಕಾರಿ ನೌಕರರಿಗೆ ವಾರದಲ್ಲಿ ಐದು ದಿನ ಕೆಲಸ ಮಾಡುವಂತೆ ನಿರ್ದೇಶನ ಸಹ ನೀಡಲಾಗಿದೆ. ಮುಂದಿನ ಭಾನುವಾರದಿಂದ ಲಾಕ್‍ಡೌನ್ ಜಾರಿಯಾಗಲಿದ್ದು, ಹಂತ ಹಂತವಾಗಿ ಕಠಿಣ ಕ್ರಮಗಳನ್ನು ಜಾರಿಗೆ ತರಲಾಗುವುದು. ಎಸ್‍ಎಸ್‍ಎಲ್‍ಸಿ ಪರೀಕ್ಷೆಗಳು ಆರಂಭಗೊಂಡಿದ್ದು, ವಿದ್ಯಾರ್ಥಿಗಳ ಭವಿಷ್ಯದ ಪ್ರಶ್ನೆ ಇದಾಗಿದೆ. ಪರೀಕ್ಷೆ ಮುಗಿದ ಬಳಿಕ ಸರ್ಕಾರ ತನ್ನ ಕಠಿಣ ನಿರ್ಧಾರಗಳನ್ನು ಪ್ರಕಟಿಸಲಿದೆ. ಮುಖ್ಯಮಂತ್ರಿಗಳು ತಜ್ಞರ ಜೊತೆ ಸಭೆ ನಡೆಸುತ್ತಿದ್ದು, ಸೋಮವಾರ ಅವರೇ ಅಧಿಕೃತವಾಗಿ ಪ್ರಕಟಿಸಲಿದ್ದಾರೆ ಎಂದು ವರದಿಯಾಗಿದೆ.

ಮೀನು ಉಪ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದ ಯಡಿಯೂರಪ್ಪ

ಬೆಂಗಳೂರು(19ಜೂ/2020): ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು, ಮೀನುಗಾರಿಕೆ ಅಭಿವೃದ್ಧಿ ನಿಗಮದ ವತಿಯಿಂದ ಹೊರತಂದಿರುವ ಮೀನು ಉಪ ಉತ್ಪನ್ನಗಳನ್ನು ಬಿಡುಗಡೆ ಮಾಡಿದರು.
ಮುಜರಾಯಿ ಹಾಗೂ ಮೀನುಗಾರಿಕೆ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಮೀನುಗಾರಿಕೆ ಅಭಿವೃದ್ಧಿ ನಿಗಮದ ವತಿಯಿಂದ ಹೊರತಂದಿರುವ ಮೀನು ಉಪ ಉತ್ಪನ್ನಗಳು ಮಾರುಕಟ್ಟೆಗೆ ಬಿಡುಗಡೆ ಆಗಿರುತ್ತದೆ.

ಪ್ರತಾಪಸಿಂಹ ನಾಯಕ್ ವಿಧಾನಪರಿಷತ್ ಚುನಾವಣೆಗೆ ನಾಮಪತ್ರ ಸಲ್ಲಿಕೆ

ಬೆಂಗಳೂರು(19ಜೂ/2020): ವಿಧಾನಸಭೆಯಿಂದ ವಿಧಾನಪರಿಷತ್ ಗೆ ನಡೆಯುವ ಚುನಾವಣೆಗೆ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಗಳಾಗಿ ಆಯ್ಕೆಯಾದ ಪ್ರತಾಪಸಿಂಹ ನಾಯಕ್ ನಾಮಪತ್ರ ಸಲ್ಲಿಸಿದರು.
ಪ್ರತಾಪಸಿಂಹ ನಾಯಕ್ ಜೊತೆಗೆ ಸುನಿಲ್ ವಲ್ಯಾಪುರೆ, ಎಂ. ಟಿ. ಬಿ.‌ ನಾಗರಾಜ್ ಹಾಗೂ ಆರ್. ಶಂಕರ್ ಅವರೂ ನಾಮಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲು, ಉಪಮುಖ್ಯಮಂತ್ರಿಗಳಾದ ಅಶ್ವಥ್ ನಾರಾಯಣ, ಅರವಿಂದ ಲಿಂಬಾವಳಿ ಹಾಗೂ ಸಚಿವರು ಉಪಸ್ಥಿತರಿದ್ದರು.

ರಾಜ್ಯ ಕಾಂಗ್ರೆಸಿಗೆ ಜೂ14ರಂದು ಡಿ.ಕೆ.ಶಿವಕುಮಾರ್ ಪದಗ್ರಹಣ ಸಾಧ್ಯತೆ

ಬೆಂಗಳೂರು(7ಜೂ/2020): ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ. ಶಿವಕುಮಾರ್ ಅವರು ಜೂನ್ 14ರಂದು ಪದಗ್ರಹಣ ಮಾಡುವ ಸಾಧ್ಯತೆ ಇದೆ.
‘ಲಾಕ್‌ಡೌನ್ ಅವಧಿ ಜಾರಿಯಲ್ಲಿದ್ದರೂ ಅದರ ಎಲ್ಲ ನಿಯಮಗಳನ್ನು ಪಾಲಿಸಿ ಕಾರ್ಯಕ್ರಮ ನಡೆಸಲು ಉದ್ದೇಶಿಸಲಾಗಿದೆ. ಪಕ್ಷದ 150 ಪ್ರಮುಖ ನಾಯಕರು ಮಾತ್ರ ಕಾರ್ಯಕ್ರಮದಲ್ಲಿ ನೇರ ಪಾಲ್ಗೊಳ್ಳಲಿದ್ದಾರೆ. ಜಿಲ್ಲಾ, ತಾಲ್ಲೂಕು ಹಾಗೂ ಪಂಚಾಯಿತಿ ಮಟ್ಟದ ಸ್ಥಳೀಯ ಕಾರ್ಯಕರ್ತರು ನೇರ ಪ್ರಸಾರದ ಮೂಲಕ ಸ್ವ ಸ್ಥಳದಿಂದಲೇ ಕಾರ್ಯಕ್ರಮ ವೀಕ್ಷಿಸಲಿದ್ದಾರೆ.
ಸರಳವಾಗಿ ನಡೆಯಲಿರುವ ಕಾರ್ಯಕ್ರಮಕ್ಕೆ ಅನುಮತಿ ನೀಡಬೇಕು’ ಎಂದು ಕೋರಿ ಶಿವಕುಮಾರ್ ಅವರು ಮುಖ್ಯಮಂತ್ರಿ ಹಾಗೂ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.ಇದರ ಬಗ್ಗೆ ಇನ್ನೂ ರಾಜ್ಯ ಸರ್ಕಾರದಿಂದ ಅಧಿಕೃತ ಉತ್ತರ ಬಂದಿಲ್ಲ.

ಜೂನ್ 8ರಿಂದ ಮಸೀದಿಗಳು ಗ್ರಾಮಸ್ಥರಿಗೆ ತೆರೆದಿರುತ್ತದೆ

ಮಂಗಳೂರು(ಜೂ7/2020):  ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಲು ಹಲವು ನಿಯಮಗಳಿವೆ
ಜೂನ್‌‌ 8ರಿಂದ ಮಸೀದಿಯೂ ಕಾರ್ಯಾರಂಭವಾಗಲಿದೆ ಎಂದು ದ.ಕ ಖಾಝಿ ಪಿ.ಎಮ್‌. ಇಬ್ರಾಹಿಂ ಮುಸ್ಲಿಯಾರ್‌‌‌‌‌‌‌ ಪ್ರಕಟಿಸಿದಾರೆ.
ಈ ಬಗ್ಗೆ ಮಾಹಿತಿ ನೀಡಿದ ಅವರು, ಶೀತ, ಕೆಮ್ಮು ಇದ್ದವರಿಗೆ ನಮಾಝ್‌‌ಗೆ ಪ್ರವೇಶವಿಲ್ಲ. ಸಾಬೂನಿನಿಂದ ಕೈತೊಳೆದು ಮಸೀದಿ ಪ್ರವೇಶಿಸಬೇಕು. ಅಲ್ಲದೇ, ನಮಾಝ್‌‌ನ ಸಂದರ್ಭ ಸಾಮಾಜಿಕ ಅಂತರ ಕಡ್ಡಾಯ ಎಂದು ತಿಳಿಸಿದ್ದಾರೆ.
ನಮಾಝ್‌‌‌‌‌‌‌ಗೆ ಬೇಕಾದ ಛಾಪೆ ಮನೆಯಿಂದಲೇ ತರಬೇಕು.ಸ್ವಗ್ರಾಮದವರಿಗೆ ಮಾತ್ರ ಆಯಾ ಮಸೀದಿಯಲ್ಲಿ ಪ್ರಾರ್ಥನೆಗೆ ಅವಕಾಶ. ಪ್ರಾರ್ಥನೆ ಸಂದರ್ಭದಲ್ಲಿ ಮಾತ್ರ ಮಸೀದಿಯನ್ನು ತೆರೆಯಬೇಕು ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಬಿ.ಎಸ್.ಯಡಿಯೂರಪ್ಪ ರಾಜಕೀಯ ಕಾರ್ಯದರ್ಶಿಯಾಗಿ ಎನ್.ಆರ್.ಸಂತೋಷ್

ಬೆಂಗಳೂರು(30ಮೇ/2020): ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿಯಾಗಿ ಎನ್.ಆರ್.ಸಂತೋಷ್ ಅವರನ್ನು ನೇಮಕ ಸಂಬಂಧವಾಗಿ ರಾಜ್ಯ ಸರ್ಕಾರದದಿಂದ ಅಧಿಕೃತ ಆದೇಶ ಹೊರಡಿಸಲಾಗಿದೆ.
ಎನ್.ಆರ್.ಸಂತೋಷ್ ಸಿಎಂ ಯಡಿಯೂರಪ್ಪ ಅವರ ಆಪ್ತರಾಗಿದ್ದಾರೆ. ಅದರಲ್ಲೂ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವನ್ನು ಬಿಳಿಸುವಲ್ಲಿ ಸಂತೋಷ್ ಪ್ರಮುಖ ಪಾತ್ರವಹಿಸಿದ್ದರು.
16 ಅತೃಪ್ತ ಕಾಂಗ್ರೆಸ್ ಜೆಡಿಎಸ್ ಶಾಸಕರನ್ನು ಸೆಳೆದು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಿಸುವಲ್ಲಿ ಸಫಲರಾಗಿದ್ದ ಸಂತೋಷ್ ಬಳಿಕ ಅವರನ್ನು ಬಿಜೆಪಿ ಹೈಕಮಾಂಡ್ ಸಲಹೆಯಂತೆ ರಾಜ್ಯದಿಂದ ಹೊರಗೆ ಕರೆದುಕೊಂಡು ಹೋಗಿದ್ದರು.
ಆಗ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರು ಸಂತೋಷ್ ಅವರ ವಿರುದ್ಧ ಹರಿಹಾಯ್ದು ಹೇಳಿಕೆಯನ್ನೂ ಕೊಟ್ಟಿದ್ದರು.
ಯಡಿಯೂರಪ್ಪ ಅವರಿಗೆ 4ನೇ ರಾಜಕೀಯ ಕಾರ್ಯದರ್ಶಿಯಾಗಿ ಎನ್.ಆರ್.ಸಂತೋಷ್ ಅವರು ನೇಮಕರಾಗಿದ್ದಾರೆ

ಭಾನುವಾರ ಸಂಪೂರ್ಣ ಲಾಕ್‌ಡೌನ್ ಇಲ್ಲ

ಬೆಂಗಳೂರು(30ಮೇ/2020): ಜನರ ಬೇಡಿಕೆ ಹಿನ್ನೆಲೆಯಲ್ಲಿ ಹಾಗೂ ರಾಜ್ಯದ ಜನತೆಯ ಹಿತದೃಷ್ಟಿಯಿಂದ ಭಾನುವಾರದಂದು ಸಂಪೂರ್ಣ ಲಾಕ್‌ಡೌನ್ ಇರುವುದಿಲ್ಲ. ಹೀಗಾಗಿ ಎಲ್ಲ ದೈನಂದಿನ ಚಟುವಟಿಕೆಗಳು ಎಂದಿನಂತೆ ನಡೆಯಲಿವೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಕೊರೊನಾ ವೈರಸ್‌ ಸಾಂಕ್ರಾಮಿಕ ಹರಡುವಿಕೆ ತಡೆಯುವ ಉದ್ದೇಶದಿಂದ ದೇಶದಾದ್ಯಂತ ನಾಲ್ಕನೇ ಹಂತದ ಲಾಕ್‌ಡೌನ್ ಜಾರಿಯಲ್ಲಿದೆ. ಈ ಹಂತದಲ್ಲಿ ಅನೇಕ ಚಟುವಟಿಕೆಗಳಿಗೆ ವಿನಾಯಿತಿ ನೀಡಲಾಗಿದೆ. ಆದರೆ, ಭಾನುವಾರದಂದು ಮಾತ್ರ ಸಂಪೂರ್ಣ ಲಾಕ್‌ಡೌನ್ ಇರಬೇಕು. ಅಗತ್ಯ ಸೇವೆ ಹೊರತುಪಡಿಸಿ ಯಾವುದೇ ಚಟುವಟಿಕೆ ನಡೆಸಬಾರದು ಎಂದು ರಾಜ್ಯ ಸರ್ಕಾರ ಈ ಹಿಂದೆ ಆದೇಶಿಸಿತ್ತು. ಅದರಂತೆ ಕಳೆದ ಭಾನುವಾರ ರಾಜ್ಯದಾದ್ಯಂತ ಸಂಪೂರ್ಣ ಲಾಕ್‌ಡೌನ್ ಆಗಿತ್ತು

ಶಿಕ್ಷಣ ಸಚಿವರಿಗೆ ಹೋಳಿಗೆ ತಂದು ಕೊಡಲು ಮರೆತ ಬಾಲಕಿ

ಬೆಂಗಳೂರು(27ಮೇ/2020): ಸಾಮಾನ್ಯರಲ್ಲಿ ಸಾಮಾನ್ಯರಂತೆ ಬೆರೆಯುವ ರಾಜ್ಯ ಶಿಕ್ಷಣ ಸಚಿವರ ಜೊತೆ ನಡೆದ ಈ ರೀತಿಯ ಸನ್ನಿವೇಶಗಳು ಖುಷಿ ಕೊಡುತ್ತವೆ.‌ಎನ್ ಆರ್ ಕಾಲೋನಿಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ರವರು ಸೋದರಮಾವನ ಮನೆಗೆ ಬಂದಿದ್ದು.
ವಾಪಾಸು ಹೊರಡುವಾಗ ಒಡಿ ಬಂದ ಬಾಲಕಿಯನ್ನು ಹತ್ತಿರ ಕರೆದು ಮಾತಾಡಿಸಿದರು.
ಸ್ಥಳೀಯ ಮಹಿಳಾ ಮಂಡಳಿ ಶಾಲೆಯಲ್ಲಿ ಏಳನೇ ತರಗತಿಯಲ್ಲಿ ಓದುತ್ತಿರುವ ಪ್ರಾರ್ಥನ ಎಂಬ ಬಾಲಕಿಯನ್ನು ಪ್ರೀತಿಯಿಂದ ಮಾತಾಡಿಸಿದ ಸಚಿವರು, ಕಾರು ಹತ್ತಿ ಹೋರಟರು.
ಸಚಿವರಿಗೆ ನಂತರ ತಿಳಿದ ವಿಷಯವನ್ನು ಹೀಗೆ ವಿವರಿಸಿದರು
“ಆ ಮಗು ಪ್ರಾರ್ಥನ ನನಗಾಗಿ ಹೋಳಿಗೆಯನ್ನು ಬ್ಯಾಗ್ ನಲ್ಲಿ ತಂದಿದ್ದಳಂತೆ.‌
ಹೇಳಲು ಗಾಭರಿಯಾಗಿ ಕೊಡಲು ಹಿಂಜರಿದ್ದಾಳೆ ಈಗ ಆಗಿರುವುದು ನಷ್ಟ ನನಗೆ”
ಹೀಗೆ ಬಾಲಕಿಯ ಮರೆವಿನಿಂದ ತಾನು ಕಳೆದುಕೊಂಡ ಹೋಳಿಗೆಯ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ವಿವರಿಸಿದ್ದಾರೆ.