November 29, 2020

ಕ್ರೀಡೆ

ಎಲ್ಲಾ ಕ್ರೀಡೆಯನ್ನು ಗೌರವಿಸಿ ಅಪ್ಪಿಕೊಂಡು ಕೊಂಡಾಡೋಣ: ಸುಜಾತ ಗಜೇಂದ್ರ ಜೈನ್ ಸಾಗರ

ಲೇಖನ:ಸುಜಾತ ಗಜೇಂದ್ರ ಜೈನ್ ಸಾಗರ
ಸಾಧನೆ ಮಾಡಿದಿನಿ ಅನ್ನೋದು ಅಷ್ಟು ಸುಲಭದ ಮಾತಲ್ಲ….! ಅದರ ಹಿಂದಿನ ನೋವು ಪ್ರೀತಿಪಾತ್ರರಿಗಷ್ಟೇ ಗೊತ್ತಾಗುತ್ತೆ ಅಥವಾ ಆ ಕ್ರೀಡೆಯನ್ನು ಮೆಚ್ಚಿಕೊಂಡು ಹುಚ್ಚನಂತೆ ಗೆದ್ದಾಗ ಬೀಗೂತ್ತ….., ಸೋತಾಗ ಅಳುತ್ತಾ ಕುಳಿತುಕೊಳ್ಳುವ ನಮ್ಮಂತಹ ಮನಸ್ಸಿಗೆ ಮಾತ್ರ ಕಾಣುತ್ತೆ ಅನಿಸುತ್ತೆ

ಹೌದು ನನಗೆ ಈ ಕ್ರೀಡಾ ಲೋಕದ ಸವಿಯುಣಿಸಿದ ಮೊದಲಿಗರು ಮಾದೇವಣ್ಣ ಅವರ ಕಸುಬು ಕಂಡಕ್ಟರ್ ಆಗಿದ್ದರು ಕ್ರೀಕೆಟ್ ಹುಚ್ಚು ಹಿಡಿಸಿ ಟಿವಿ ಮುಂದೆ ಕುಳಿತ ನಾವು *ಸಿಕ್ಸ್* ಹೊಡೆದಂತೆ ಕೂಗೂವುದು,ಎದ್ದು ಅಣ್ಣಮ್ಮನ ಸ್ವೇಪ್ ಹಾಕೋದು, ಸೋತಾಗ ನಿಧಾನವಾಗಿ ಜಾರಿಕೊಳ್ಳೋದು ಕಾರಣ ಮಾದೇವಣ್ಣನ ಏಟು ಯಾರು ತಿಂತಾರೇ ಹೇಳಿ……! ಪಕ್ಕದಲ್ಲಿ ಕುಳಿತು ಟಿವಿ ನೋಡುತ್ತಿರುವವರ ನಮ್ಮ ತೊಡೆ ಕೆಂಪಾಗಿ ಹೋಗಿರುತ್ತಿತ್ತು ಅಂತಹ ಏಟು…..! ನಾನು ಮತ್ತೆ ಅವರ ಮಗ ರಾಕೇಶ್ ಬಹಳ ಚುರುಕು ಅವರಿಂದ ಯಾವಾಗಲೂ ಒಂದೆರಡು ಅಡಿ ದೂರದಲ್ಲಿ ಕುಳಿತಿದ್ದರೆ, ಅವರ ಮಗಳು(ನನ್ನ ತಂಗಿ)ಶುಶ್ಮಿತ ಮತ್ತು ನನ್ನ ತಮ್ಮ ಸುಕು ಕಿಲಾಡಿಗಳು,ಪೆದ್ದರು ಈ ಏಟು ಉಚಿತವಾಗಿ ಸಿಗುತ್ತಿತ್ತು ಆ ದಿನಗಳಲ್ಲಿ ಬಾಲ್ಯದ ಸವಿತುಂಬಿಕೊಟ್ಟ ಅವರಿಗೆ ನಾನಿಂದಿಗೂ ಋಣಿ….!
ನಮ್ಮನೆಯಲ್ಲಿ ಬಾಡಿಗೆಗೆ ಬಂದಿದ್ದ ಇವರು ಎಂದು ಹೊರಗಿನವರಂತೆ ಅನಿಸಿರಲಿಲ್ಲ ಈಗ ಕೂಡ ಜಾತಿಯ ಪಾವಿತ್ರ್ಯತೆ ಮೀರಿ ಬೆಳೆದ ಬಂಧ ಮತ್ತು ಬಂಧುಗಳು ಇಂದಿಗೂ ಎಂದೆಂದಿಗೂ…….! ಇದು ಕ್ರೀಡೆ ನಮ್ಮೊಳಗೆ ಹೇಗೆ ಹೋಕ್ಕಿದ್ದು ಎಂಬುದಕ್ಕೆ ಉದಾಹರಣೆ ಅಷ್ಟೇ.

ನಂತರ ಹೈಸ್ಕೂಲ್ ಗಟ್ಟಿ ಮೇಸ್ಟ್ರು ನಟರಾಜ್ ಸರ್ ನಾವು ಮೂರು ವರ್ಷ ಕೊಚ್ಚೆಯಲ್ಲಿ ಬಿದ್ದು ಎದ್ದು ಆಡಿದ್ದೆ ಜಾಸ್ತಿ ಇಂದಿಗೂ ನಾವು ಅವರೆದುರು ನಿಂತು ಮಾತನಾಡುವ ಧೈರ್ಯ ಮಾಡಲು ಸಾಧ್ಯವಿಲ್ಲ ಅಂತಹ ಗುರುಗಳು ನಮಗೆ…. ಅಲ್ಲಿ ಆಡುವುದರೊದಿಗೆ ಆಟಗಾರರ ಪರಿಚಯ ಮತ್ತು ಎಲ್ಲಾ ಆಟಗಳು ಹೀಗೆ ಆಗಬೇಕು ಎಂದು ತಿದ್ದಿ ಹೇಳಿ ಕಳಿಸಿದ ದೇವರು ಅವರು….. ಆ ಸವಿ ಬೆಳೆದದ್ದು ಶಾಲಾ ದಿನಗಳಿಂದಲೂ ಪೇಪರ್ ಕಟಿಂಗ್ ಇಂದ….!

ಕದ್ದು ಕಟ್ ಮಾಡಿ ಇಟ್ಟುಕೊಳ್ಳುವುದರಲ್ಲಿನ ಸವಿ ಯಾವುದರಲ್ಲೂ ಇರಲು ಸಾಧ್ಯವಿಲ್ಲ ಅನಿಸುತ್ತೆ…..
ಹಾಗೇಯೆ ನಾನು ನೆಚ್ಚಿಕೊಂಡ ಆಟಗಾರರು ಬಹಳ ಇದ್ದಾರೆ ಅದರಲ್ಲಿ ಅಕ್ಷತಕ್ಕ ಕೂಡ ಒಬ್ಬರು ಎನ್ನುವುದಕ್ಕೆ ಬಹಳ ಖುಷಿ ಆಗುತ್ತೆ…..

ನಾನು ಆಗಷ್ಟೇ ಡಿಗ್ರಿ….! ದಿನದ ಬೆಳಗು ನಮ್ಮದು ಪೇಪರ್ ಓದೋದರಿಂದ ಶುರು, ಆಗ ನನಗೆ ಕಂಡ ಚಿತ್ರ ಇವರದು ಕರ್ನಾಟಕ ಪ್ರತಿನಿಧಿಸಿದವರು ಎಂದು …! ಎಷ್ಟು ಖುಷಿ ಆಯ್ತು ಎಂದರೆ, ಅಂದಿನ ಖುಷಿ ಇವತ್ತಿಗೂ ನೆನಪಿದೆ…! ಇವರನ್ನು ನಾವೆಲ್ಲಾ ಹೇಗೆ ನೋಡೋದು ಅಂತ ಫ್ರೇಂಡ್ಸ ಜೊತೆ ಕೇಳಿದ್ದೆ, ಇಲ್ಲಿ ಕುಳಿತು ಕನಸು ಕಾಣು ಎಂದಿದ್ದರು…!
ಎದುರು ನೋಡಲು ಅಸಾಧ್ಯ ಎಂಬ ಮನಸ್ಥಿತಿ ನನಗಾಗ…. !

ಅಚ್ಚರಿ ಎಂದರೆ ಯಾರೇ ಕೇಳಿದರು ಅಕ್ಷತ ಪೂಜಾರಿ ಇಷ್ಟ, ಕ್ರಿಕೇಟ್ ಅಂದ್ರೆ ಧೋನಿ,ಸಚಿನ್,ಶಿಖರ್ ಧವನ್ ಇಷ್ಟ ಅಂತ ಹೇಳುವಾಗಲೆಲ್ಲಾ ಇವರನ್ನು ಭೇಟಿಯಾಗೋಕೆ ಅಸಾಧ್ಯ ಎಂಬ ಮಾತು ಹೇಳಿನೇ ಮಾತು ಮುಗಿಸುತ್ತಿದ್ದೆ ಆದರೆ ಅಕ್ಷತಕ್ಕ ಅಚಾನಕ್ಕಾಗಿ ಮಕ್ಕಿಮನೆ ಕಲಾವೃಂದ ಮಂಗಳೂರು ೨೦೧೯ ಸಂಭ್ರಮದಲ್ಲಿ ಸಿಕ್ಕಿದ್ದರು ನನಗೆ ಮಾತಾಡಿಸೋದು ಹೇಗೆ….? ಇಷ್ಟು ಜನರ ಮಧ್ಯೆ ನಿನ್ಯಾರು ಎಂದು ಕೇಳಿದರೆ ಭಯ…! ಏನೆಲ್ಲಾ ಯೋಚನೆಯಲ್ಲಿ ಆ ದಿನ ಮುಗಿಯಿತು…… ಆ ನೋಡಿದ ಕ್ಷಣ ಎಂದಿಗೂ ಜೀವಂತ… ಆದರೆ ನನಗೆ ಹೇಗಾದರು ಮಾತಾಡಿಸಬೇಕು ಅಂತ ತುಡಿತ…! ಸುದೇಶ್ ಸರ್ ಜೊತೆ ಹೇಗೋ ಧೈರ್ಯ ಮಾಡಿ ಕೇಳಿದೆ ನನ್ನ ಅದೃಷ್ಟ ಅವರಹುಟ್ಟಿದ ಹಬ್ಬ ಒಂದೆರಡು ದಿನ ಬಾಕಿ ಇದೆ ವಿಶ್ ಮಾಡಿ ಅಂದ್ರು ಹೇಗೋ ಅವರ ನಂಬರ್ ತಗೊಂಡು ವಿಶ್ ಮಾಡಿದೆ ಅದು ಮೆಸೆಜ್ ಅಲ್ಲಿ……!

ಥ್ಯಾಂಕ್ಯೂ…..

ಎಂದು ಕಳಿಸಿದ್ದೆ ನನಗೊಂದು ಸಂಭ್ರಮ. ಆ ಸಂಭ್ರಮ ಈ ವರ್ಷ ಹುಟ್ಟಿದ ದಿನ ಮತ್ತದೆ ಸಂದೇಶ ಕಳಿಸಿದೆ ಆಗ ಭೇಟಿಯಾಗೊಣ ಯಾವಾಗಲಾದರೂ ತುಂಬಾ ಖುಷಿ ಆಯ್ತು ಅಂತ ಉತ್ತರ ಬಂತು… ! ಅಂದ್ರೆ ಯಾರಿಗಾದರೂ ಅಷ್ಟೇ ಅಪ್ಪಿಕೊಂಡವರು ಒಂದು ಮಾತನಾಡಿದರೆ ಆಗುವ ಖುಷಿಗೆ ಪಾರವೇ ಇರಲಿಲ್ಲ ಆಟದಲ್ಲಿ ಭಿನ್ನತೆ ಇರಬಹುದು ಅದರೆ ವ್ಯಕ್ತಿ ಇಷ್ಟ ಆದರೆ ಅವರ ಎಲ್ಲಾ ಕಾರ್ಯಗಳು ಬಹಳ ಬೇಗ ಹೃದಯದ ಮೂಲೆಯಲ್ಲಿ ಅವಿತು ಬಿಡುತ್ತವೆ…ಜೊತೆಗೆ ಅವರ ಸರಳತೆ ನನಗೆ ಅವರ ಮೇಲಿರುವ ಪ್ರೀತಿಯನ್ನು ದುಪ್ಪಟ್ಟು ಮಾಡಿದ್ದು ನಿಜ.

ಹೀಗೆ ಯಾಕೆ ಬಂತು ಈ ಮಾತು ಎಂದರೆ ನಾವು ಒಂದಷ್ಟು ಸೀಮಿತ ಗಡಿಯನ್ನು ಹಾಕಿಕೊಂಡು ಬಿಟ್ಟಿದ್ದೇವೆ ಕ್ರಿಕ್ರೇಟ್ ಅಂದ್ರೆ ಮಾತ್ರ ಒಂದು ಶ್ರೇಷ್ಠ ಆಟಗಳಲ್ಲಿ ಒಂದು ಎಂದು ಎಲ್ಲಾ ಕ್ರೀಡೆಗಳು ಕೂಡ ಶ್ರೇಷ್ಟವೆ ಆಗಬೇಕು…..!

ಸಾಧಕನ ಹಿಂದಿನ ಪರಿಶ್ರಮ,ಏಕಾಗ್ರತೆ, ಆಟದ ಮೇಲಿನ ಪ್ರೀತಿಯನ್ನು ಯಾವ ಮಾರ್ಕೇಟ್ನಲ್ಲೂ ಖರೀದಿಸಲು ಸಾಧ್ಯವಿಲ್ಲ…. ನಿನ್ನೆ ಈ ಮುದ್ದಾದ ಕೈಯಲ್ಲಿ ಆದ ಗಾಯವನ್ನು ನೋಡಿ ತುಂಬಾ ಬೇಸರವಾಗುತ್ತದೆ ಅಕ್ಕ ಎಂದಿದ್ದೇ, ಆದರೀಗ ಇಂದಿನ ನಮ್ಮಗಳ ಸಂಭ್ರಮಕ್ಕೆ ಇಂತಹ ಅದೇಷ್ಟೋ ಆಟಗಾರರು ತಮ್ಮ ಜೀವವನ್ನೇ ಮುಡುಪಾಗಿಟ್ಟಿದ್ದಾರೆ..ಸಂಬಳವಿಲ್ಲದ ಚಾಕರಿಯ ರೀತಿ ಅದೇಷ್ಟೋ ಮಂದಿಯ ಬದುಕು ಕೂಡ ಏನು ಇಲ್ಲದೆ ಪದಕಗಳನ್ನು ಮಾರಿ ಜೀವಿಸುವ ಪರಿಸ್ಥಿತಿ ಇಂದು ಎದುರಾಗಿದೆ…..

ಸರ್ಕಾರ ಇನ್ನಾದರೂ ಈ ದಿನವನ್ನು ಅರ್ಥಪೂರ್ಣವಾಗಿ ಆಚರಿಸುವ ಮನಸು ಮಾಡಲಿ ಎಂಬುದು ನನ್ನ ಆಶಯ…! ಕನಸು ಕಾಣುವುದರಲ್ಲಿ ಯಾವ ತಪ್ಪು ಇಲ್ಲ ಎಂದು ಅಂದುಕೊಳ್ಳುತ್ತೇನೆ ಪ್ರತಿಭೆ ಹುಟ್ಟುವುದು ಗುಡಿಸಲಲ್ಲಿ ಬೆಳೆದು ಸಿಂಗರಿಸಕೊಳ್ಳುವುದು ಅರಮನೆಯಲ್ಲಿ ಎಂಬ ಮಾತಿದೆ, ಆದರೆ ಕ್ರೀಡಾ ಲೋಕದ ಕೆಲವು ಆಟಗಾರರು ಇದಕ್ಕೆ ಪಾತ್ರರಾಗುತ್ತಾರೆ‌ ಅಷ್ಟೇ…!
ಪ್ರೋತ್ಸಾಹ ಸಿಕ್ಕರೆ ಎಲ್ಲಾ ರೀತಿಯ ಆಟಗಾರರು ಕೂಡ ನಮ್ಮ ನಾಡಿನ ಹಿರಿಮೆ ಎತ್ತರಿಸುತ್ತಾರಲ್ಲವೇ ಅದಕ್ಕೊಳ್ಳೆ ವೇದಿಕೆ ನಾವೇ ಸೃಷ್ಟಿಸಿ ಕೊಳ್ಳಬೇಕಾಗಿದೆ…… ನಮ್ಮ ನಾಡು ನಮ್ಮ ಹೆಮ್ಮೆ ಎಲ್ಲಾ ಕ್ರೀಡೆಯನ್ನು ಗೌರವಿಸಿ ಅಪ್ಪಿಕೊಂಡು ಕೊಂಡಾಡೋಣ ಏನಂತೀರಾ……?

ಅದೇನೇ ಇರಲಿ ಆಟದ ಜಗತ್ತಿನ ಎಲ್ಲಾ ಸಾಧಕರಿಗೂ ಹಾಗೂ ಸಾಧಿಸುವ ಮನಗಳಿಗೂ ಕ್ರೀಡಾಸಕ್ತರಗೂ ಈ ದಿನದ ಶುಭಾಶಯಗಳು.

ಸರಕಾರಿ ಕಾಲೇಜಿನಲ್ಲಿ ಅರಳಿದ “ಪವರ್ ಲಿಪ್ಟರ್ ಕು.ಸುಮನಾ ಪೂಜಾರಿ”

ಉಡುಪಿ: ಕರಾವಳಿ ಕರ್ನಾಟಕದಲ್ಲಿ ಅಷ್ಟೇನೂ ಪ್ರೋತ್ಸಾಹ ಸಿಗದ ಕ್ರೀಡೆಗಳು ಪವರ್ ಲಿಪ್ಟಿಂಗ್, ಈ ಕ್ರೀಡಾ ಕ್ಷೇತ್ರದಲ್ಲಿ ಅಂತರ ಕಾಲೇಜು ಮಟ್ಟದಲ್ಲಿ ರಾಷ್ಟ್ರೀಯ ಮಟ್ಟದವರೆಗೆ ಸ್ಪರ್ದಿಸಿ ಚಿನ್ನದ ಪದಕ ಪಡೆದ ಕರಾವಳಿಯ ಹೆಮ್ಮೆಯ ಯುವ ಪ್ರತಿಭೆ ಕು.ಸುಮನಾ ಪೂಜಾರಿ.
ಮಣಿಪಾಲದ ಬಳಿಯ ಅಲೆವೂರು ಪ್ರಗತಿ ನಗರದ
ಮಾದವ ಪೂಜಾರಿ ಮತ್ತು ಸುಮಿತ್ರಾ ದಂಪತಿಗಳ ಪುತ್ರಿ,
ಕಾಲೇಜು ಸಹಪಾಠಿ ಅಕ್ಷಯ್ ಎಂಬುವರ ಪ್ರೋತ್ಸಾಹದಿಂದ ಪವರ್ ಲಿಪ್ಟಿಂಗ್ ಪ್ರಾಕ್ಟೀಸ್ ಮಾಡಲು ಶುರು ಮಾಡಿದ ಸುಮನಾ ಇಂದು ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟಿದ್ದಾರೆ.
ಸುಮನಾಳ ಹೆತ್ತವರಾದ ಮಾದವ ಪೂಜಾರಿಯವರದ್ದು ಅಟೋ ಚಾಲನೆಯ ಜೊತೆಗೆ ಸಣ್ಣ ಗೂಡಂಗಡಿಯ ದುಡಿಮೆ, ಬಡತನದ ನಡುವೆಯೂ ತಮ್ಮ ಮಗಳಿಗೆ ಪ್ರೋತ್ಸಾಹ ನೀಡಿರೂ ಖರ್ಚು ಭರಿಸಲು ಪರದಾಡಿದ್ದೂ ಇದೆ, ಆದರೆ ಸುಮನಾ ತನ್ನ ಕಾಲೇಜು ರಜಾ ದಿನಗಳಲ್ಲಿ ಕೆಲಸಕ್ಕೆ ಸೇರಿ ಸ್ಥಳೀಯ ಚೆಂಡೆ ತಂಡಕ್ಕೆ ಸೇರಿ ಒಂದಷ್ಟು ಸಂಪಾದಿಸಿ ತನ್ನ ಹೆತ್ತವರ ಭಾರ ಕಡಿಮೆ ಮಾಡಿರುವಳು.
ಕಾಪು ಶಾಸಕರಾದ ಲಾಲಾಜಿ ಮೆಂಡನ್ ತಮ್ಮ ವೈಯಕ್ತಿಕ ಸಹಾಯ ಮಾಡಿದ್ದಲ್ಲದೆ ಬೇರೆ ಯಾವ ಸಂಘಟನೆಯೂ ಈಕೆಯ ಸಾಧನೆಗಳನ್ನು ಗುರುತಿಸಿದ್ದೇ ಇಲ್ಲ.
ಉಡುಪಿಯ ಸರಕಾರಿ ಡಾ.ಜಿ.ಶಂಕರ್ ಮಹಿಳಾ ಕಾಲೇಜು ಅಜ್ಜರಕಾಡು ಇಲ್ಲಿ ದ್ವಿತೀಯ ವರ್ಷದ ಬಿ.ಕಂ ವಿದ್ಯಾರ್ಥಿನಿಯಾದ ಕು.ಸುಮನಾ ಪೂಜಾರಿ ಪಡೆದ ಪದಕಗಳ ಪಟ್ಟಿ ಹೀಗಿದೆ
ಜಿಲ್ಲಾ ಬೆಳ್ಳಿ ಪದಕ, ರಾಜ್ಯ ಮಟ್ಟದ ಜೂನಿಯರ್ಸ್ ಬೆಳ್ಳಿ, ಕೇರಳದಲ್ಲಿ ನಡೆದ ರಾಷ್ಟ್ರೀಯ ಸ್ಪರ್ಧೆಯಲ್ಲಿ 8ನೇ ಸ್ಥಾನ, ಭದ್ರಾವತಿಯಲ್ಲಿ ಜರುಗಿದ ಹಿರಿಯ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಚಿನ್ನದ ಪದಕ, ಪಶ್ಚಿಮ ಬಂಗಾಳದಲ್ಲಿ ಜರಗಲಿರುವ ರಾಷ್ಟ್ರೀಯ ಕ್ರೀಡಾಕೂಟಕ್ಕೆ ಆಯ್ಕೆ, ಮಂಗಳೂರು ಅಂತರ್ ಕಾಲೇಜು ಸ್ಪರ್ಧೆಯಲ್ಲಿ ಕಂಚು,ತೆಲಂಗಾಣದಲ್ಲಿ ಜರುಗಿದ ದಕ್ಷಿಣ ಭಾರತ ರಾಷ್ಟ್ರೀಯ ಸ್ಪರ್ಧೆಯಲ್ಲಿ ಜೂನಿಯರ್ ಬೆಳ್ಳಿ ಸೀನಿಯರ್ಸ್ ಚಿನ್ನ, ಮಂಗಳೂರು ವಿಶ್ವವಿದ್ಯಾನಿಲಯ ಅಂತರ್ ಕಾಲೇಜು ಸ್ಪರ್ಧೆಯಲ್ಲಿ ಚಿನ್ನ, ಮುಂಬಯಿಯಲ್ಲಿ ನಡೆದ ರಾಷ್ಟ್ರೀಯ ಅಂತರ್ ಕಾಲೇಜು ಸ್ಪರ್ಧೆಯಲ್ಲಿ 4ನೇ ಸ್ಥಾನ, ಮಂಗಳೂರಿನಲ್ಲಿ ಜರುಗಿದ ರಾಜ್ಯ ಮಟ್ಟದ ಬೆಂಚ್ ಪ್ರೆಸ್ ಸ್ಪರ್ಧೆಯಲ್ಲಿ ಕಂಚು ಪಡೆದಿದ್ದಾರೆ.
ಉಡುಪಿ ಸಾಲಿಗ್ರಾಮದ ವೀರ ಮಾರುತಿ ಜಿಮ್ ಮತ್ತು ಪಿಟ್ನೆಸ್ ಸೆಂಟರ್‌ನ ಕೋಚ್ ರಾಜೇಂದ್ರ ಗಾಣಿಗ ಇವರ ಮುತುವರ್ಜಿಯಿಂದ ಮುಂದಿನ ಸ್ಪರ್ಧೆಗಳಿಗೆ ಸಿದ್ದಳಾಗುತ್ತಿರುವ ಕು.ಸುಮನಾ ಪೂಜಾರಿ ಎಲ್ಲಾ ಕ್ರೀಡಾ ಪ್ರೇಮಿಗಳ ಸಹಕಾರವನ್ನು ಬಯಸುತ್ತಾರೆ.

ಪತ್ರಕರ್ತರ ವಾರ್ಷಿಕ ಕ್ರೀಡಾಕೂಟ ಉದ್ಘಾಟನೆ

ಮಂಗಳೂರು(2ಡಿ/2019): ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ
ಪತ್ರಕರ್ತರ ವಾರ್ಷಿಕ ಕ್ರೀಡಾಕೂಟ-2019ಕ್ಕೆ ರಾಷ್ಟ್ರೀಯ ಬಾಸ್ಕೆಟ್‍ಬಾಲ್ ಆಟಗಾರ
ಸೌಕಿನ್ ಶೆಟ್ಟಿ ಭಾನುವಾರ ನಗರದ ಫುಟ್‍ಬಾಲ್ ಮೈದಾನದಲ್ಲಿ ಚಾಲನೆ ನೀಡಿದರು.
ಈ ಸಂದರ್ಭ ಕರಾವಳಿಯಿಂದಲೇ ತನ್ನ ಕ್ರೀಡಾ ಬೆಳವಣಿಗೆಯನ್ನು ಸ್ಮರಿಸಿದ
ಅವರು, ಕ್ರೀಡೆಯಿಂದ ದೈಹಿಕ ಹಾಗೂ ಮಾನಸಿಕ ಸಾಮರ್ಥ್ಯ ವೃದ್ಧಿಯಾಗಲು
ಸಾಧ್ಯ. ಕರಾವಳಿಯ ಕ್ರೀಡಾಪಟುಗಳು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ
ಮಟ್ಟದಲ್ಲಿ ಕೀರ್ತಿಯನ್ನು ತರುತ್ತಿದ್ದಾರೆ ಎಂದು ಹೇಳಿದರು.
ಮಹಾನಗರ ಪಾಲಿಕೆ ಆಯುಕ್ತ ಅಜಿತ್ ಕುಮಾರ್ ಹೆಗ್ಡೆ ಮಾತನಾಡಿ,
ಪತ್ರಕರ್ತರದ್ದು ದಿನದ 24 ಗಂಟೆಯೂ ಬಿಡುವಿಲ್ಲದ ಕೆಲಸ. ಇದರ ಮಧ್ಯೆ
ಕ್ರೀಡೆಯಲ್ಲಿ ಪಾಲ್ಗೊಳ್ಳುವ ಮೂಲಕ ಇನ್ನಷ್ಟು ಹುಮ್ಮಸ್ಸು ಹೆಚ್ಚಿಸುವುದು
ಒಳ್ಳೆಯ ಕೆಲಸ. ಮಂಗಳೂರಿನ ಪತ್ರಕರ್ತರು ಜಂಟಲ್‍ಮೆನ್‍ಗಳಾಗಿದ್ದು, ಇಲ್ಲಿ
ಪೀತ ಪತ್ರಿಕೋದ್ಯಮ ಇಲ್ಲ. ಅಧಿಕಾರಿಗಳು ಮತ್ತು ಪತ್ರಕರ್ತರ ನಡುವಿನ
ಬಾಂಧವ್ಯ ಇಲ್ಲಿ ಚೆನ್ನಾಗಿದ್ದು, ಇದು ಅಭಿವೃದ್ಧಿ ಕಾರ್ಯಗಳಿಗೆ ಹಾಗೂ ಸಮಾಜದ
ಏಳಿಗೆಗೆ ನೆರವಾಗುತ್ತದೆ ಎಂದು ಹೇಳಿದರು.
ಜಿಲ್ಲಾ ವಾರ್ತಾಧಿಕಾರಿ ಖಾದರ್ ಷಾ ಮಾತನಾಡಿ, ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ
ಚಟುವಟಿಕೆಗಳಿಂದ ಪತ್ರಕರ್ತರು ಯಾವಾಗಲೂ ಕ್ರಿಯಾಶೀಲರಾಗಿ ಇರಲು
ಸಾಧ್ಯವಿದೆ ಎಂದರು.
ಪತ್ರಕರ್ತರ ಸಂಘದ ರಾಜ್ಯಕಾರ್ಯಕಾರಿಣಿ ಸದಸ್ಯ ಜಗನ್ನಾಥ ಶೆಟ್ಟಿ ಬಾಳ
ಶುಭ ಹಾರೈಸಿದರು.
ಪತ್ರಕರ್ತ ಜಿತೇಂದ್ರ ಕುಂದೇಶ್ವರ ಸ್ವಾಗತಿಸಿದರು. ದ.ಕ.ಜಿಲ್ಲಾ ಕಾರ್ಯನಿರತ
ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಪ್ರಾಸ್ತಾವಿಕವಾಗಿ
ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ವಂದಿಸಿದರು.
ಪತ್ರಕರ್ತರಾದ ಆತ್ಮಭೂಷಣ್, ಭಾಸ್ಕರ ರೈ ಕಟ್ಟ, ವಿಜಯ ಕೋಟ್ಯಾನ್ ಪಡು
ವಿವಿಧ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಪತ್ರಕರ್ತರಿಗಾಗಿ ವಿವಿಧ ಸ್ಪರ್ಧೆಗಳು ನಡೆಯಿತು.

ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಪಿ.ವಿ ಸಿಂಧು ಪ್ರಧಾನಿ ಬೇಟಿ

ನವದೆಹಲಿ(27ಆ/2019): ಸ್ವಿಝರ್ ಲ್ಯಾಂಡ್ ನ ಬಾಸೆಲ್ ನಲ್ಲಿ ನಡೆದ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ಕೂಟದಲ್ಲಿ ಭಾರತಕ್ಕೆ ಪ್ರಪ್ರಥಮ ಚಿನ್ನ…

ಪಿ.ವಿ.ಸಿಂಧು ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌

ಬಾಸೆಲ್(25ಆ/2019) : ಭಾರತದ ಅಗ್ರಮಾನ್ಯ ಷಟ್ಲರ್ ಪಿ.ವಿ.ಸಿಂಧು ಅವರು ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್​ಷಿಪ್​ ಫೈನಲ್​ನಲ್ಲಿ ಗೆಲುವು ದಾಖಲಿಸುವ ಮೂಲಕ ಚಿನ್ನದ…

ಇಂಗ್ಲೆಂಡ್ ಕ್ರಿಕೆಟ್‌ನ ವಿಶ್ವ ಚಾಂಪಿಯನ್

ಲಾರ್ಡ್ಸ್(15ಜು/2019): ಕ್ರಿಕೆಟ್​ನ ಬಲಿಷ್ಠ ಶಕ್ತಿಯಾಗಿದ್ದರೂ, ವಿಶ್ವಕಪ್ ಟ್ರೋಫಿಯ ಅಧಿಕಾರದಿಂದ ದೂರವೇ ಉಳಿದಿದ್ದ ಇಂಗ್ಲೆಂಡ್ ತಂಡ, ಕೊನೆಗೂ ಏಕದಿನ ಕ್ರಿಕೆಟ್ ಮಾದರಿಯಲ್ಲಿ…

ಟೀಂ ಇಂಡಿಯಾ ಆಟಗಾರರಿಗೆ ನರೇಂದ್ರ ಮೋದಿ ಸಂದೇಶ

ನವದೆಹಲಿ(11ಜು/2019): 2019ರ ವಿಶ್ವಕಪ್ ಕ್ರಿಕೆಟ್ ಸೆಮಿ ಫೈನಲ್ ಪಂದ್ಯದಲ್ಲಿ ಸೋಲುಂಡು ಟೂರ್ನಿಯಿಂದ ಹೊರ ನಡೆದಿರುವ ಟೀಂ ಇಂಡಿಯಾ ಆಟಗಾರರಿಗೆ ಪ್ರಧಾನಿ…

ಮಂಗಳೂರು:ರೋಲರ್ ಸ್ಕೇಟಿಂಗ್ ರೋಡ್ ರೇಸ್ ವಿಭಾಗದಲ್ಲಿ ಮಹಮ್ಮದ್ ಫರಾಝ್ ಅಲಿಗೆ ಬೆಳ್ಳಿ ಪದಕ

ಅಬ್ಬಕ್ಕ ನ್ಯೂಸ್ (25-6-2019)ಮಂಗಳೂರು:ಕರ್ನಾಟಕ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ ವತಿಯಿಂದ ಮೈಸೂರಿನಲ್ಲಿ ಜೂನ್ 21 ರಿಂದ 23 ರವರೆಗೆ ಜರುಗಿದ ರಾಜ್ಯಮಟ್ಟದ…

ಫಿಫಾ ಕ್ರಮಾಂಕದಲ್ಲಿ 101ನೇ ಸ್ಥಾನದಲ್ಲಿ ಮುಂದುವರಿದ ಭಾರತ ಫುಟ್‌ಬಾಲ್‌ ತಂಡ

ಅಬ್ಬಕ್ಕ ನ್ಯೂಸ್ (15-6-2ನವದೆಹಲಿ: ಮಾನವ ಸಂಪನ್ಮೂಲದಲ್ಲಿ ಜಗತ್ತಿಗೇ ಎರಡನೇ ಸ್ಥಾನದಲ್ಲಿರುವ ಭಾರತಕ್ಕೆ ಪುಟ್ಬಾಲ್ ಆಟದಲ್ಲಿ ಮಾತ್ರ ಭಾರತ ಫುಟ್‌ಬಾಲ್‌ ತಂಡ ಫಿಫಾ…

ಧೋನಿ ಗ್ಲೌಸ್ ರದ್ಧಾಂತ: ಪಟ್ಟು ಬಿಡದ ಐಸಿಸಿ: ಬೆಂಬಲಕ್ಕೆ ನಿಂತ ಅಭಿಮಾನಿ ಬಳಗ

ಅಬ್ಬಕ್ಕ ನ್ಯೂಸ್ (8-5-2019)ಲಂಡನ್: ಭಾರತ ಕ್ರಿಕೆಟ್ ತಂಡದ ವಿಕೆಟ್‌ಕೀಪರ್ ಮಹೇಂದ್ರಸಿಂಗ್ ಧೋನಿ ಅವರು ತಮ್ಮ ಕೈಗವಸಿನ ಮೇಲೆ ಹಾಕಿಸಿಕೊಂಡಿರುವ ‘ಕಠಾರಿ…

Related Post