November 29, 2020

ಮಹಿಳಾ ವಿಭಾಗ

ವೈರಲ್ ವೀಡಿಯೋದಲ್ಲಿ ಇದ್ದ ಮಹಿಳೆ ಯಾರು?

ತಿರುವನಂತಪುರ(10ಜು/2020): ಕೇರಳದಲ್ಲಿ ಮಹಿಳೆಯೊಬ್ಬರು ಅಂಧ ವೃದ್ಧರೊಬ್ಬರಿಗೆ ಬಸ್ಸು ಹತ್ತಲು ಸಹಾಯ ಮಾಡಿರುವ ವೀಡಿಯೋ ಇದೀಗ ಎಲ್ಲರ ಪ್ರಶಂಸೆಗೆ ಕಾರಣವಾಗಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸುಪ್ರಿಯಾ ಎಂಬ ಮಹಿಳೆ ಅಂಧ ವೃದ್ಧರೊಬ್ಬರಿಗೆ ಸಹಾಯ ಮಾಡಿದ್ದಾರೆ. ಮಹಿಳೆ ಜಾಲಿ ಸಿಲ್ಕ್ಸ್ ಎಂಬ ಟೆಕ್ಸ್ ಟೈಲ್ ನಲ್ಲಿ ಕಳೆದ ಮೂರು ವರ್ಷಗಳಿಂದ ಸೇಲ್ಸ್ ಗರ್ಲ್ ಕೆಲಸ ಮಾಡುತ್ತಿದ್ದಾರೆ.
ಅಜ್ಜ ಬಸ್ಸಿನಲ್ಲಿ ತೆರಳಬೇಕಿತ್ತು. ಈ ವಿಚಾರ ತಿಳಿದ ಮಹಿಳೆ ಬಸ್ಸಿನ ಹಿಂದೆ ಓಡೋಡಿ ಬಂದು ಬಸ್ಸು ನಿಲ್ಲಿಸಿದ್ದಾರೆ. ಈ ಎಲ್ಲಾ ದೃಶ್ಯಗಳನ್ನು ಅಲ್ಲೇ ಇದ್ದ ಕಟ್ಟಡದ ಮೇಲಿನಿಂದ ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಅಲ್ಲದೆ ಮಹಿಳೆಯ ಕಾರ್ಯಕ್ಕೆ ನಟ-ನಟಿಯರು ಸೇರಿದಂತೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಸರಕಾರಿ ಕಾಲೇಜಿನಲ್ಲಿ ಅರಳಿದ “ಪವರ್ ಲಿಪ್ಟರ್ ಕು.ಸುಮನಾ ಪೂಜಾರಿ”

ಉಡುಪಿ: ಕರಾವಳಿ ಕರ್ನಾಟಕದಲ್ಲಿ ಅಷ್ಟೇನೂ ಪ್ರೋತ್ಸಾಹ ಸಿಗದ ಕ್ರೀಡೆಗಳು ಪವರ್ ಲಿಪ್ಟಿಂಗ್, ಈ ಕ್ರೀಡಾ ಕ್ಷೇತ್ರದಲ್ಲಿ ಅಂತರ ಕಾಲೇಜು ಮಟ್ಟದಲ್ಲಿ ರಾಷ್ಟ್ರೀಯ ಮಟ್ಟದವರೆಗೆ ಸ್ಪರ್ದಿಸಿ ಚಿನ್ನದ ಪದಕ ಪಡೆದ ಕರಾವಳಿಯ ಹೆಮ್ಮೆಯ ಯುವ ಪ್ರತಿಭೆ ಕು.ಸುಮನಾ ಪೂಜಾರಿ.
ಮಣಿಪಾಲದ ಬಳಿಯ ಅಲೆವೂರು ಪ್ರಗತಿ ನಗರದ
ಮಾದವ ಪೂಜಾರಿ ಮತ್ತು ಸುಮಿತ್ರಾ ದಂಪತಿಗಳ ಪುತ್ರಿ,
ಕಾಲೇಜು ಸಹಪಾಠಿ ಅಕ್ಷಯ್ ಎಂಬುವರ ಪ್ರೋತ್ಸಾಹದಿಂದ ಪವರ್ ಲಿಪ್ಟಿಂಗ್ ಪ್ರಾಕ್ಟೀಸ್ ಮಾಡಲು ಶುರು ಮಾಡಿದ ಸುಮನಾ ಇಂದು ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟಿದ್ದಾರೆ.
ಸುಮನಾಳ ಹೆತ್ತವರಾದ ಮಾದವ ಪೂಜಾರಿಯವರದ್ದು ಅಟೋ ಚಾಲನೆಯ ಜೊತೆಗೆ ಸಣ್ಣ ಗೂಡಂಗಡಿಯ ದುಡಿಮೆ, ಬಡತನದ ನಡುವೆಯೂ ತಮ್ಮ ಮಗಳಿಗೆ ಪ್ರೋತ್ಸಾಹ ನೀಡಿರೂ ಖರ್ಚು ಭರಿಸಲು ಪರದಾಡಿದ್ದೂ ಇದೆ, ಆದರೆ ಸುಮನಾ ತನ್ನ ಕಾಲೇಜು ರಜಾ ದಿನಗಳಲ್ಲಿ ಕೆಲಸಕ್ಕೆ ಸೇರಿ ಸ್ಥಳೀಯ ಚೆಂಡೆ ತಂಡಕ್ಕೆ ಸೇರಿ ಒಂದಷ್ಟು ಸಂಪಾದಿಸಿ ತನ್ನ ಹೆತ್ತವರ ಭಾರ ಕಡಿಮೆ ಮಾಡಿರುವಳು.
ಕಾಪು ಶಾಸಕರಾದ ಲಾಲಾಜಿ ಮೆಂಡನ್ ತಮ್ಮ ವೈಯಕ್ತಿಕ ಸಹಾಯ ಮಾಡಿದ್ದಲ್ಲದೆ ಬೇರೆ ಯಾವ ಸಂಘಟನೆಯೂ ಈಕೆಯ ಸಾಧನೆಗಳನ್ನು ಗುರುತಿಸಿದ್ದೇ ಇಲ್ಲ.
ಉಡುಪಿಯ ಸರಕಾರಿ ಡಾ.ಜಿ.ಶಂಕರ್ ಮಹಿಳಾ ಕಾಲೇಜು ಅಜ್ಜರಕಾಡು ಇಲ್ಲಿ ದ್ವಿತೀಯ ವರ್ಷದ ಬಿ.ಕಂ ವಿದ್ಯಾರ್ಥಿನಿಯಾದ ಕು.ಸುಮನಾ ಪೂಜಾರಿ ಪಡೆದ ಪದಕಗಳ ಪಟ್ಟಿ ಹೀಗಿದೆ
ಜಿಲ್ಲಾ ಬೆಳ್ಳಿ ಪದಕ, ರಾಜ್ಯ ಮಟ್ಟದ ಜೂನಿಯರ್ಸ್ ಬೆಳ್ಳಿ, ಕೇರಳದಲ್ಲಿ ನಡೆದ ರಾಷ್ಟ್ರೀಯ ಸ್ಪರ್ಧೆಯಲ್ಲಿ 8ನೇ ಸ್ಥಾನ, ಭದ್ರಾವತಿಯಲ್ಲಿ ಜರುಗಿದ ಹಿರಿಯ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಚಿನ್ನದ ಪದಕ, ಪಶ್ಚಿಮ ಬಂಗಾಳದಲ್ಲಿ ಜರಗಲಿರುವ ರಾಷ್ಟ್ರೀಯ ಕ್ರೀಡಾಕೂಟಕ್ಕೆ ಆಯ್ಕೆ, ಮಂಗಳೂರು ಅಂತರ್ ಕಾಲೇಜು ಸ್ಪರ್ಧೆಯಲ್ಲಿ ಕಂಚು,ತೆಲಂಗಾಣದಲ್ಲಿ ಜರುಗಿದ ದಕ್ಷಿಣ ಭಾರತ ರಾಷ್ಟ್ರೀಯ ಸ್ಪರ್ಧೆಯಲ್ಲಿ ಜೂನಿಯರ್ ಬೆಳ್ಳಿ ಸೀನಿಯರ್ಸ್ ಚಿನ್ನ, ಮಂಗಳೂರು ವಿಶ್ವವಿದ್ಯಾನಿಲಯ ಅಂತರ್ ಕಾಲೇಜು ಸ್ಪರ್ಧೆಯಲ್ಲಿ ಚಿನ್ನ, ಮುಂಬಯಿಯಲ್ಲಿ ನಡೆದ ರಾಷ್ಟ್ರೀಯ ಅಂತರ್ ಕಾಲೇಜು ಸ್ಪರ್ಧೆಯಲ್ಲಿ 4ನೇ ಸ್ಥಾನ, ಮಂಗಳೂರಿನಲ್ಲಿ ಜರುಗಿದ ರಾಜ್ಯ ಮಟ್ಟದ ಬೆಂಚ್ ಪ್ರೆಸ್ ಸ್ಪರ್ಧೆಯಲ್ಲಿ ಕಂಚು ಪಡೆದಿದ್ದಾರೆ.
ಉಡುಪಿ ಸಾಲಿಗ್ರಾಮದ ವೀರ ಮಾರುತಿ ಜಿಮ್ ಮತ್ತು ಪಿಟ್ನೆಸ್ ಸೆಂಟರ್‌ನ ಕೋಚ್ ರಾಜೇಂದ್ರ ಗಾಣಿಗ ಇವರ ಮುತುವರ್ಜಿಯಿಂದ ಮುಂದಿನ ಸ್ಪರ್ಧೆಗಳಿಗೆ ಸಿದ್ದಳಾಗುತ್ತಿರುವ ಕು.ಸುಮನಾ ಪೂಜಾರಿ ಎಲ್ಲಾ ಕ್ರೀಡಾ ಪ್ರೇಮಿಗಳ ಸಹಕಾರವನ್ನು ಬಯಸುತ್ತಾರೆ.

ಅಜಪುರ ಕರ್ನಾಟಕ ಸಂಘ:ಖ್ಯಾತ ಹಾಸ್ಯ ಸಾಹಿತಿ ಭುವನೇಶ್ವರಿ ಹೆಗಡೆಯವರಿಗೆ ಸನ್ಮಾನ

ಉಡುಪಿ(10ಅ/2019): ಉಡುಪಿಯ ಬ್ರಹ್ಮಾವರದ ಅಜಪುರ ಕರ್ನಾಟಕ ಸಂಘದಲ್ಲಿ ಖ್ಯಾತ ಹಾಸ್ಯ ಸಾಹಿತಿ,ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ವಿಶ್ರಾಂತ ಅರ್ಥಶಾಸ್ತ್ರ ಪ್ರಾಧ್ಯಾಪಕಿ ಭುವನೇಶ್ವರಿ…

ಚಂದನವನದೆಡೆಗೆ ಸುಮಿತ್ರ ನಡಿಗೆ…

ಅಬ್ಬಕ್ಕ ನ್ಯೂಸ್(16-9-2019)ಮಂಗಳೂರು: ಚಂದನವನದಲ್ಲಿ ಅನೇಕ ರಾಜ್ಯಗಳ ಚೆಂದುಳ್ಳಿ ಚೆಲುವೆಯರು ತನ್ನ ನಟನೆಯ ಮೂಲಕ ನಿರಂತರ ಚಿತ್ತಾರ ಮೂಡಿಸುತ್ತಿದ್ದಾರೆ. ಇದೀಗ ಮುಂಬೈ…

ಡಾ.ತಮಿಳಿಸಾಯಿ ಸೌಂದರರಾಜನ್ ತೆಲಂಗಾಣ ರಾಜ್ಯದ ಪ್ರಥಮ ರಾಜ್ಯಪಾಲೆ

ನವದೆಹಲಿ(1ಸೆ/2019): ತಮಿಳುನಾಡು ಬಿಜೆಪಿ ಮುಖ್ಯಸ್ಥೆ ಡಾ.ತಮಿಳಿಸಾಯಿ ಸೌಂದರರಾಜನ್ ಹಾಗೂ ಮಾಜಿ ಕೇಂದ್ರ ಸಚಿವ ಬಂಡಾರು ದತ್ತಾತ್ರೇಯ ಸೇರಿದಂತೆ ಐದು ರಾಜ್ಯಗಳಿಗೆ…

ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಪಿ.ವಿ ಸಿಂಧು ಪ್ರಧಾನಿ ಬೇಟಿ

ನವದೆಹಲಿ(27ಆ/2019): ಸ್ವಿಝರ್ ಲ್ಯಾಂಡ್ ನ ಬಾಸೆಲ್ ನಲ್ಲಿ ನಡೆದ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ಕೂಟದಲ್ಲಿ ಭಾರತಕ್ಕೆ ಪ್ರಪ್ರಥಮ ಚಿನ್ನ…

ಪಿ.ವಿ.ಸಿಂಧು ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌

ಬಾಸೆಲ್(25ಆ/2019) : ಭಾರತದ ಅಗ್ರಮಾನ್ಯ ಷಟ್ಲರ್ ಪಿ.ವಿ.ಸಿಂಧು ಅವರು ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್​ಷಿಪ್​ ಫೈನಲ್​ನಲ್ಲಿ ಗೆಲುವು ದಾಖಲಿಸುವ ಮೂಲಕ ಚಿನ್ನದ…

ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಹಿಳೆಯರಿಗೆ ಮಹಿಳಾ ವಿಶ್ರಾಂತಿ ಕೊಠಡಿ

ಉಡುಪಿ(ಅ21/2019): ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಹಿಳಾ ನೌಕರರಿಗೆ ಮತ್ತು ಕಚೇರಿಗೆ ಆಗಮಿಸುವ ಮಹಿಳೆಯರಿಗೆ ಇನ್ನು ಮುಂದೆ ಸುಸುಜ್ಜಿತ…

ವರಮಹಾಲಕ್ಷ್ಮೀ ಪೂಜೆ ಆಡಂಬರದ ಪೂಜೆಯಲ್ಲ: ಗುರೂಜಿ ಸಾಯಿ ಈಶ್ವರ್

ಬೆಂಗಳೂರು (8ಆ/2019): ಶಂಕರಪುರದ ಸಾಯಿ ಸಾಂತ್ವನ ಮಂದಿರದ ಗುರೂಜಿ ಸಾಯಿ ಈಶ್ವರ್ ವರಮಹಾಲಕ್ಷ್ಮೀ ಪೂಜೆಯ ಬಗ್ಗೆ ಹೀಗೆ ವಿವರಿಸುತ್ತಾರೆ. ವರಮಹಾಲಕ್ಷ್ಮೀ…

ರೈತರನ್ನು ಗೌರವಿಸಿ ಭಾರತಾಂಬೆಯ ಋಣ ತೀರಿಸುವ: ಅಕ್ಷತಾ ಬಜಪೆ

ಹೆಬ್ಬಾಳ(2ಆ/2019): ವಾಯ್ಸ್ ಆಪ್ ನೇಷನ್ ಸಂಸ್ಥೆಯ ವತಿಯಿಂದ ಕಾರ್ಗಿಲ್ ವಿಜಯೋತ್ಸವ ಹಾಗೂ ರಾಷ್ಟ್ರೀಯತೆ ಕಾರ್ಯಕ್ರಮವು ನಾಗಶೆಟ್ಟಿಹಳ್ಳಿಯ ರಾಧಾಕೃಷ್ಣ ಶಾಲೆಯಲ್ಲಿ ಜರಗಿತು….

Related Post