November 1, 2020

ರಾಜ್ಯ

ಲಾಲಾಜಿ ಆರ್.ಮೆಂಡನ್ಗೆ ನೀಡಿದ ನಿಗಮ ಅಧ್ಯಕ್ಷರ ನೇಮಕ ಹಿಂಪಡೆದ ಯಡಿಯೂರಪ್ಪ

ಬೆಂಗಳೂರು(27ಜುಲೈ/2020): ನಾಲ್ಕು ನಿಗಮ ಮಂಡಳಿಗಳ ಅಧ್ಯಕ್ಷರ ನೇಮಕಾತಿಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಿಂಪಡೆಯಲು ಸೂಚಿಸಿದ್ದಾರೆ.
ಡಿ.ದೇವರಾಜ ಅರಸ್ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ನೇಮಕಗೊಂಡಿದ್ದ ಜಿ.ಎಚ್.ತಿಪ್ಪಾರೆಡ್ಡಿ, ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ ಅಧ್ಯಕ್ಷರಾಗಿ ನೇಮಕಗೊಂಡಿದ್ದ ಪರಣ್ಣ ಈಶ್ವರಪ್ಪ ಮುನವಳ್ಳಿ, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿ ನೇಮಕಗೊಂಡಿದ್ದ ಲಾಲಾಜಿ ಆರ್.ಮೆಂಡನ್ ಮತ್ತು ಸಮಾಜ ಕಲ್ಯಾಣ ಮಂಡಳಿ ಅಧ್ಯಕ್ಷರಾಗಿ ನೇಮಕಗೊಂಡಿದ್ದ ಬಸವರಾಜ್ ದಢೇಸೂರ್ ಅವರ ನೇಮಕವನ್ನು ಮುಖ್ಯಮಂತ್ರಿ ಹಿಂಪಡೆದಿದ್ದಾರೆ.
ರಾಜ್ಯದ ವಿವಿಧ ನಿಗಮ ಮಂಡಳಿಗಳಿಗೆ 24 ಶಾಸಕರುಗಳನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಸೋಮವಾರ ಆದೇಶ ಹೊರಡಿಸಿತ್ತು.

ಗುರೂಜಿ ಕನಸಿನಲ್ಲಿ ಕೂಡಿಟ್ಟ ಹಣದ ರಹಸ್ಯ ತಿಳಿಸಿದ ಬಿಕ್ಷುಕಿ ಅಜ್ಜಿ

ಬೆಂಗಳೂರು(11ಜು/2020): ಎರಡು ವರ್ಷದ ಹಿಂದೆ ಒಂದು ದಿನ ರಾತ್ರಿ ಕನಸಿನಲ್ಲಿ ಬಂದ ಅಜ್ಜಿ “ನನಗೆ ಮತ್ತು ನನ್ನ ಹಾಗೆ ಅನಾಥರಾಗಿ ಸತ್ತವರಿಗೂ ಮೋಕ್ಷ ಮಾಡಬೇಕು, ನೀನು ಪ್ರಾಣಿ ಪಕ್ಷಿಗಳಿಗೆ ಮಾತ್ರ ಮೋಕ್ಷ ಯಾಕೆ ಮಾಡುತ್ತಿ ನಮಗೂ ಮಾಡಬೇಕು” ಎಂದು ಹೇಳಿದರು ಗುರೂಜಿಯವರು ಉತ್ತರಿಸುತ್ತಾ “ಈಗಾಗಲೇ ಪ್ರಾಣಿ ಪಕ್ಷಿಗಳಿಗೆ ಮೋಕ್ಷ ಮಾಡುವುದನ್ನು ನೋಡಿ ಹುಚ್ಚನೆಂದು ಹೇಳುತ್ತಿದ್ದಾರೆ, ಇನ್ನು ನಿಮಗೆ ಮೋಕ್ಷ ಮಾಡಿದರೆ ನನ ಬಗ್ಗೆ ಜನ ಏನು ಹೇಳಬಹುದು” ಎಂದಾಗ ಅಜ್ಜಿ “ನೀನು ಜನರಿಗೆ ಹೆದರಬೇಡ,ನಿನ್ನಲ್ಲಿ ದುಡ್ಡಿಲ್ಲವಾ”.
ಗುರೂಜಿಯವರು “ಹೌದು,ನನ್ನಲ್ಲಿ ದುಡ್ಡು ಇಲ್ಲ” ಎಂದು ಪ್ರತ್ಯುತ್ತರ ನೀಡಿದರು .
ತಕ್ಷಣ ಅಜ್ಜಿ “ಉಡುಪಿಯ ಅಂಗಡಿಯಲ್ಲಿ ನಾನು ( ತಾನು ಇಟ್ಟ ಹಣದ ಮೊತ್ತ ಹೇಳಿದರು ) ದುಡ್ಡು ಇಟ್ಟಿದ್ದೇನೆ ಹೋಗಿ ತೆಗೆದುಕೋ ಮತ್ತು ಧರ್ಮಸ್ಥಳ ಸುಬ್ರಹ್ಮಣ್ಯ ಕ್ಷೇತ್ರಗಳ ಕೆಲ ಅಂಗಡಿಗಳಲ್ಲಿ ನಾನು ಭಿಕ್ಷೆ ಬೇಡಿದ ದುಡ್ಡಿದೆ . ಈ ದುಡ್ಡಿನಿಂದ ನನಗೂ ಹಾಗೂ ನನ್ನ ಹಾಗೆ ಅನಾಥರಿಗೆ ಮೋಕ್ಷ ಮಾಡು” ಎಂದು ಅಜ್ಜಿ ತಿಳಿಸಿತ್ತು .
ಈ ಕನಸಿನಿಂದ ಎಚ್ಚರಗೊಂಡ ಗುರೂಜಿಗೆ ಬೆಳಗಿನ ತನಕ ನಿದ್ದೆನೇ ಬರಲಿಲ್ಲ ಯಾರಿಗೆ ಈ ವಿಚಾರವನ್ನು ಹೇಳುವುದು?ಹೇಗೆ ಹೇಳುವುದು? ಎಂದು ಯೋಚನೆ ಮಾಡಿದ ಗುರೂಜಿಯವರು, ತಮ್ಮ ಆತ್ಮೀಯರೊಬ್ಬರ ಬಳಿ ತಿಳಿಸಿದರು,ಅವರು ಗುರೂಜಿ ಹೇಳಿದ ಉಡುಪಿಯ ಅಂಗಡಿಯನ್ನು ಹುಡುಕಿಕೊಂಡು ಹೋಗಿ ಅವರನ್ನು ವಿಚಾರಿಸಿದಾಗ ಕನಸಿನಲ್ಲಿ ಬಂದ ಅಷ್ಟೇ ಮೊತ್ತವನ್ನು ಅಲ್ಲಿ ಇಟ್ಟಿದ್ದು ಹೌದು ಎಂಬ ವಿಷಯ ಬೆಳಕಿಗೆ ಬಂತು . ಅಂಗಡಿಯವರ ಪ್ರಕಾರ “ಅಜ್ಜಿ ಬಹಳ ವರ್ಷಗಳಿಂದ ತನ್ನಲ್ಲಿ ದುಡ್ಡು ಕೊಡುವುದು ಯಾರಿಗೂ ತಿಳಿದಿಲ್ಲ ಮತ್ತು ಅಜ್ಜಿಗೆ ಆಂಧ್ರದಲ್ಲಿ SBIಬ್ಯಾಂಕ್ ಖಾತೆ ಇದೆ, ಆ ಅಜ್ಜಿ ಸುಮಾರು ಸಮಯದಿಂದ ನನ್ನ ಸಂಪರ್ಕಕ್ಕೆ ಬರದ ಕಾರಣ
ಅವರ ದುಡ್ಡನ್ನು ಅವರ ಅಕೌಂಟಿಗೆ ಜಮಾ ಮಾಡಿದ್ದೇನೆ ” ಎಂದರು,
ಆ ಅಂಗಡಿಯವರು ಗುರೂಜಿಯವರ ಕನಸಿನ ಬಗ್ಗೆ ತಿಳಿದು ಅಜ್ಜಿ ಮೋಕ್ಷಕ್ಕೆ ಕಿಂಚಿತ್ತು ಕಾಣಿಕೆ ನೀಡುತ್ತೇನೆ ಎಂದು ತಿಳಿಸಿದ್ದರು ಮತ್ತು ಕನಸಿನ ಬಗ್ಗೆ ತುಂಬಾ ಆಶ್ಚರ್ಯ ವ್ಯಕ್ತಪಡಿಸಿದರು.
ಗುರೂಜಿಯವರು ಒಂದು ವರ್ಷ ಕಾಲಾವಕಾಶವನ್ನು ತೆಗೆದುಕೊಂಡು ಒಂದು ವರ್ಷದ ನಂತರ ಅಜ್ಜಿಗೆ ಮೋಕ್ಷ ಮಾಡುತ್ತೇನೆ ಎಂದು ಸಂಕಲ್ಪ ಮಾಡಿದ್ದರು . ಗುರೂಜಿ ಅವರಿಗೂ ನಿಧಾನವಾಗಿ ಈ ಘಟನೆ ಮನಸ್ಸಿನಿಂದ ದೂರವಾಗಿತ್ತು .
ಈಗ ಮತ್ತೆ ಕೆಲ ದಿನಗಳಿಂದ ಅಜ್ಜಿ ಕನಸಿನಲ್ಲಿ ಬಂದು ಗುರೂಜಿಯವರಲ್ಲಿ ಮೋಕ್ಷಕ್ಕಾಗಿ ಪ್ರಾರ್ಥಿಸುವುದು ಕುತೂಹಲಕ್ಕೆ ಕಾರಣವಾಗಿದೆ.
ಈಗಾಗಲೇ ತನ್ನ ವಿಶಿಷ್ಟವಾದ ಪ್ರಾಣಿ ಪಕ್ಷಿಗಳ ಮೋಕ್ಷ (ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಯುವ ಪ್ರಾಣಿ ಪಕ್ಷಿಗಳನ್ನು ಮಣ್ಣು ಮಾಡುವ) ಸೇವೆಯಿಂದ ಮನೆಮಾತಾಗಿರುವ ಉಡುಪಿ ಜಿಲ್ಲೆ ಶಂಕರಪುರದ ದ್ವಾರಕಾಮಾಹಿ ಶ್ರೀ ಸಾಯಿಬಾಬಾ ಮಂದಿರದ ಗುರೂಜಿ ಸಾಯಿ ಈಶ್ವರ್ ರಿಗೆ ಈ ಅಜ್ಜಿ ಕನಸಿನಲ್ಲಿ ಬರುತ್ತಿದ್ದಾರೆ.ಗುರೂಜಿಯವರು ಕೆಲ ವರ್ಷಗಳ ಹಿಂದೆ ಉಡುಪಿಯಲ್ಲಿ ಬಿಕ್ಷೆ ಬೇಡುತ್ತಿದ್ದ ಅಜ್ಜಿಗೆ ನೀರು ತಿಂಡಿ ನೀಡಿದ್ದರು ಮತ್ತು ಅರ್ಜಿಯಲ್ಲಿ ಮಾತಾಡಿದ್ದರು” ತಮ್ಮ ಮೊಬೈಲ್’ನಲ್ಲಿ ಅಜ್ಜಿಯ ಪೋಟೋ ತೆಗೆದಿದ್ದರು.ಈಗ ಅದೇ ಅಜ್ಜಿ ಆಗಾಗ ಕನಸಿನಲ್ಲಿ ಬಂದು ಮೋಕ್ಷ ನೀಡು ಎಂದು ಕಾಡುತ್ತಿದೆ.
ಈ ಅಜ್ಜಿಯ ಮಾಹಿತಿ ನಿಮಗೇನಾದರೂ ತಿಳಿದಿದ್ದರೆ ನಮ್ಮನ್ನು ಸಂಪರ್ಕಿಸಿ(7026293111)ಎಂದು ಗುರೂಜಿ ಸಾರ್ವಜನಿಕರಲ್ಲಿ ಮನವಿ ಮಾಡಿರುವರು.

ರಾಜ್ಯದಲ್ಲಿ ಭಾನುವಾರ ಲಾಕ್‍ಡೌನ್,ರಾತ್ರಿ ಕರ್ಪ್ಯು ವಿಸ್ತಾರಣೆ

ಬೆಂಗಳೂರು(27ಜೂ/2020):  ಕೊರೊನಾ ವೈರಸ್‌ ನಿಯಂತ್ರಣದ ಕುರಿತು ಚರ್ಚಿಸಲು ಇಂದು ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಹಲವು ಮಹತ್ತರ ತೀರ್ಮಾನಗಳನ್ನು ಕೈಗೊಳ್ಳಲಾಗಿದೆ. ಜುಲೈ 5ರಿಂದ ಭಾನುವಾರ ಲಾಕ್‌ಡೌನ್‌, ಕರ್ಫ್ಯೂ ಅವಧಿ ವಿಸ್ತರಣೆ ಸೇರಿದಂತೆ ಹಲವು ಕ್ರಮಗಳಿಗೆ ಸರ್ಕಾರ ಮುಂದಾಗಿದೆ. 
ಜುಲೈ 5ರಿಂದ ಮುಂದಿನ ಆದೇಶದವರೆಗೆ ಪ್ರತಿ ಭಾನುವಾರ ರಾಜ್ಯಾದ್ಯಂತ ಲಾಕ್‍ಡೌನ್ ಮಾಡಲಾಗುವುದು.ವಸ್ತುಗಳ ಸಾಗಾಣಿಕೆಗೆ ನಿರ್ಬಂದವಿಲ್ಲ.
ಜುಲೈ 10ನೇ ತಾರಿಖಿನಿಂದ ಒಂದು ತಿಂಗಳ ಕಾಲ ಈಗಾಗಲೇ ರಜೆಯಿರುವ 2ನೇ ಹಾಗೂ 4ನೇ ಶನಿವಾರದ ಜೊತೆಗೆ ಉಳಿದ ಶನಿವಾರದಂದು ಎಲ್ಲಾ ಸರ್ಕಾರಿ ಹಾಗೂ ಸರ್ಕಾರಿ ಸ್ವಾಮ್ಯಕ್ಕೊಳಪಡುವ ಎಲ್ಲಾ ಕಚೇರಿಗಳಿಗೆ ರಜೆ ಘೋಷಿಸಲು ತೀರ್ಮಾನಿಸಲಾಯಿತು. 
ರಾತ್ರಿ 9.00 ಗಂಟೆಯಿಂದ ಬೆಳಿಗ್ಗೆ 5.00 ಗಂಟೆಯವರೆಗೆ ಈಗಾಗಲೇ ಇರುವ ಕರ್ಫ್ಯೂ ಅವಧಿಯ ಬದಲಾಗಿ ರಾತ್ರಿ 8.00 ಗಂಟೆಯಿಂದ ಬೆಳಿಗ್ಗೆ 5.00 ಗಂಟೆಯವರೆಗೆ ಕರ್ಫ್ಯೂ ಅವಧಿಯನ್ನು ಬದಲಾಯಿಸಲು ತೀರ್ಮಾನಿಸಲಾಯಿತು.
ಕೊರೊನಾ ತಡೆಗಾಗಿ ಸರ್ಕಾರ ಪ್ರತಿ ಭಾನುವಾರ ಲಾಕ್‍ಡೌನ್ ಮಾಡಲು ಸರ್ಕಾರ ನಿರ್ಧರಿಸಿದೆ. ಹಾಗೆಯೇ ನೈಟ್ ಕರ್ಫ್ಯೂ ಅವಧಿಯನ್ನು ವಿಸ್ತರಣೆ ಮಾಡಲಾಗುತ್ತಿದೆ. ರಾತ್ರಿ 8 ಗಂಟೆಯಿಂದಲೇ ಕರ್ಫ್ಯೂ ಜಾರಿಯಾಗಲಿದ್ದು, ಅನಾವಶ್ಯಕವಾಗಿ ಹೊರ ಬರೋರ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ಸರ್ಕಾರ ನಿರ್ಧರಿಸಿದೆ.
ಈಗಾಗಲೇ ಸರ್ಕಾರಿ ನೌಕರರಿಗೆ ವಾರದಲ್ಲಿ ಐದು ದಿನ ಕೆಲಸ ಮಾಡುವಂತೆ ನಿರ್ದೇಶನ ಸಹ ನೀಡಲಾಗಿದೆ. ಮುಂದಿನ ಭಾನುವಾರದಿಂದ ಲಾಕ್‍ಡೌನ್ ಜಾರಿಯಾಗಲಿದ್ದು, ಹಂತ ಹಂತವಾಗಿ ಕಠಿಣ ಕ್ರಮಗಳನ್ನು ಜಾರಿಗೆ ತರಲಾಗುವುದು. ಎಸ್‍ಎಸ್‍ಎಲ್‍ಸಿ ಪರೀಕ್ಷೆಗಳು ಆರಂಭಗೊಂಡಿದ್ದು, ವಿದ್ಯಾರ್ಥಿಗಳ ಭವಿಷ್ಯದ ಪ್ರಶ್ನೆ ಇದಾಗಿದೆ. ಪರೀಕ್ಷೆ ಮುಗಿದ ಬಳಿಕ ಸರ್ಕಾರ ತನ್ನ ಕಠಿಣ ನಿರ್ಧಾರಗಳನ್ನು ಪ್ರಕಟಿಸಲಿದೆ. ಮುಖ್ಯಮಂತ್ರಿಗಳು ತಜ್ಞರ ಜೊತೆ ಸಭೆ ನಡೆಸುತ್ತಿದ್ದು, ಸೋಮವಾರ ಅವರೇ ಅಧಿಕೃತವಾಗಿ ಪ್ರಕಟಿಸಲಿದ್ದಾರೆ ಎಂದು ವರದಿಯಾಗಿದೆ.

ಭಾನುವಾರ ಸಂಪೂರ್ಣ ಲಾಕ್‌ಡೌನ್ ಇಲ್ಲ

ಬೆಂಗಳೂರು(30ಮೇ/2020): ಜನರ ಬೇಡಿಕೆ ಹಿನ್ನೆಲೆಯಲ್ಲಿ ಹಾಗೂ ರಾಜ್ಯದ ಜನತೆಯ ಹಿತದೃಷ್ಟಿಯಿಂದ ಭಾನುವಾರದಂದು ಸಂಪೂರ್ಣ ಲಾಕ್‌ಡೌನ್ ಇರುವುದಿಲ್ಲ. ಹೀಗಾಗಿ ಎಲ್ಲ ದೈನಂದಿನ ಚಟುವಟಿಕೆಗಳು ಎಂದಿನಂತೆ ನಡೆಯಲಿವೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಕೊರೊನಾ ವೈರಸ್‌ ಸಾಂಕ್ರಾಮಿಕ ಹರಡುವಿಕೆ ತಡೆಯುವ ಉದ್ದೇಶದಿಂದ ದೇಶದಾದ್ಯಂತ ನಾಲ್ಕನೇ ಹಂತದ ಲಾಕ್‌ಡೌನ್ ಜಾರಿಯಲ್ಲಿದೆ. ಈ ಹಂತದಲ್ಲಿ ಅನೇಕ ಚಟುವಟಿಕೆಗಳಿಗೆ ವಿನಾಯಿತಿ ನೀಡಲಾಗಿದೆ. ಆದರೆ, ಭಾನುವಾರದಂದು ಮಾತ್ರ ಸಂಪೂರ್ಣ ಲಾಕ್‌ಡೌನ್ ಇರಬೇಕು. ಅಗತ್ಯ ಸೇವೆ ಹೊರತುಪಡಿಸಿ ಯಾವುದೇ ಚಟುವಟಿಕೆ ನಡೆಸಬಾರದು ಎಂದು ರಾಜ್ಯ ಸರ್ಕಾರ ಈ ಹಿಂದೆ ಆದೇಶಿಸಿತ್ತು. ಅದರಂತೆ ಕಳೆದ ಭಾನುವಾರ ರಾಜ್ಯದಾದ್ಯಂತ ಸಂಪೂರ್ಣ ಲಾಕ್‌ಡೌನ್ ಆಗಿತ್ತು

ಶಿಕ್ಷಣ ಸಚಿವರಿಗೆ ಹೋಳಿಗೆ ತಂದು ಕೊಡಲು ಮರೆತ ಬಾಲಕಿ

ಬೆಂಗಳೂರು(27ಮೇ/2020): ಸಾಮಾನ್ಯರಲ್ಲಿ ಸಾಮಾನ್ಯರಂತೆ ಬೆರೆಯುವ ರಾಜ್ಯ ಶಿಕ್ಷಣ ಸಚಿವರ ಜೊತೆ ನಡೆದ ಈ ರೀತಿಯ ಸನ್ನಿವೇಶಗಳು ಖುಷಿ ಕೊಡುತ್ತವೆ.‌ಎನ್ ಆರ್ ಕಾಲೋನಿಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ರವರು ಸೋದರಮಾವನ ಮನೆಗೆ ಬಂದಿದ್ದು.
ವಾಪಾಸು ಹೊರಡುವಾಗ ಒಡಿ ಬಂದ ಬಾಲಕಿಯನ್ನು ಹತ್ತಿರ ಕರೆದು ಮಾತಾಡಿಸಿದರು.
ಸ್ಥಳೀಯ ಮಹಿಳಾ ಮಂಡಳಿ ಶಾಲೆಯಲ್ಲಿ ಏಳನೇ ತರಗತಿಯಲ್ಲಿ ಓದುತ್ತಿರುವ ಪ್ರಾರ್ಥನ ಎಂಬ ಬಾಲಕಿಯನ್ನು ಪ್ರೀತಿಯಿಂದ ಮಾತಾಡಿಸಿದ ಸಚಿವರು, ಕಾರು ಹತ್ತಿ ಹೋರಟರು.
ಸಚಿವರಿಗೆ ನಂತರ ತಿಳಿದ ವಿಷಯವನ್ನು ಹೀಗೆ ವಿವರಿಸಿದರು
“ಆ ಮಗು ಪ್ರಾರ್ಥನ ನನಗಾಗಿ ಹೋಳಿಗೆಯನ್ನು ಬ್ಯಾಗ್ ನಲ್ಲಿ ತಂದಿದ್ದಳಂತೆ.‌
ಹೇಳಲು ಗಾಭರಿಯಾಗಿ ಕೊಡಲು ಹಿಂಜರಿದ್ದಾಳೆ ಈಗ ಆಗಿರುವುದು ನಷ್ಟ ನನಗೆ”
ಹೀಗೆ ಬಾಲಕಿಯ ಮರೆವಿನಿಂದ ತಾನು ಕಳೆದುಕೊಂಡ ಹೋಳಿಗೆಯ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ವಿವರಿಸಿದ್ದಾರೆ.

ರಾಜ್ಯದಲ್ಲಿ ಒಂದೇ ದಿನದಲ್ಲಿ ದಾಖಲೆಯ 109 ಕರೋನಾ ಶಂಕಿತರು,ದ.ಕ 2,ಉಡುಪಿ ಕೊಡಗು ತಲಾ ಒಂದು

ಬೆಂಗಳೂರು(19ಮೇ/2020): ರಾಜ್ಯದಲ್ಲಿ ಕೊರೊನಾ ವಿಜೃಂಭಿಸುತ್ತಲೇ ಇದ್ದು, ಒಂದೇ ದಿನ ಇಂದು ರಾಜ್ಯದಲ್ಲಿ ದಾಖಲೆಯ ಪ್ರಮಾಣದಲ್ಲಿ 109 ಪ್ರಕರಣಗಳು ಬೆಳಕಿಗೆ ಬಂದಿದೆ.
ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1,256 ಏರಿದ್ದು, ಬೆಂಗಳೂರು, ಮಂಡ್ಯ, ಕಲಬುರಗಿಯಲ್ಲಿ ಇಂದು ಸೋಂಕು ಪೀಡಿತರ ಸಂಖ್ಯೆ ಎರಡಂಕಿಯಲ್ಲಿ ಇದೆ. ವಿಪರ್ಯಾಸ ಎಂದರೇ ಗ್ರೀನ್ ಝೋನ್‍ನಲ್ಲಿದ್ದ ಹಲವರು ಜಿಲ್ಲೆಗಳಿಗೂ ಕೊರೋನಾ ವ್ಯಾಪಿಸಿದೆ. ಕೊಪ್ಪಳ, ರಾಯಚೂರು ಜಿಲ್ಲೆಗಳಿಗೆ ಕೊರೋನಾ ವಕ್ಕರಿಸಿದೆ. ಮೈಸೂರು ಜಿಲ್ಲೆ ಸಂಪೂರ್ಣ ಕೊರೋನಾ ಮುಕ್ತ ಆಗಿ ಎರಡು ದಿನ ಕಳೆಯುವುದರೊಳಗೆ ಮತ್ತೆ ಸೋಂಕು ಕಾಣಿಸಿಕೊಂಡಿದೆ. ಮಡಿಕೇರಿಯಲ್ಲಿ ಕೊರೋನಾ ಪಾಸಿಟೀವ್ ಕೇಸ್ ಕಂಡುಬಂದಿದೆ.
ಇಂದು ಪತ್ತೆಯಾದ ಪ್ರಕರಣಗಳ ಪೈಕಿ 64 ಕೇಸ್‍ಗಳು ಮಹಾರಾಷ್ಟ್ರ ಸೇರಿ ಅಂತರ್ ರಾಜ್ಯ ಪ್ರಯಾಣ ಮಾಡಿ ಬಂದವರಿಗೆ ಸಂಬಂಧಿಸಿದ್ದಾಗಿದೆ. ಉಳಿದ ಪ್ರಕರಣಗಳು ಚೆನ್ನೈ ಲಿಂಕ್ ಹಾಗೂ ಸೋಂಕಿತರ ಪ್ರಾಥಮಿಕ, ದ್ವಿತೀಯ ಸಂಪರ್ಕದಿಂದ ಬಂದಿವೆ.
ರಾಜ್ಯದಲ್ಲಿ ಇಂದು ಬೆಂಗಳೂರಲ್ಲಿ 24, ಮಂಡ್ಯ 17, ಕಲಬುರಗಿ 10, ಶಿವಮೊಗ್ಗ 10, ಉತ್ತರ ಕನ್ನಡ 9, ರಾಯಚೂರು 6, ವಿಜಯಪುರ, ಯಾದಗಿರಿ, ಗದಗದಲ್ಲಿ ತಲಾ 5, ಹಾಸನ 4, ಕೊಪ್ಪಳ 3, ಬೆಳಗಾವಿ, ದಕ್ಷಿಣ ಕನ್ನಡದಲ್ಲಿ ತಲಾ 2, ಮೈಸೂರು, ಕೊಡಗು, ದಾವಣಗೆರೆ, ಬಳ್ಳಾರಿ, ಉಡುಪಿ, ಬೀದರ್ ಜಿಲ್ಲೆಗಳಲ್ಲಿ ತಲಾ 1 ಕೊರೊನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿದೆ.

ಸಂಜೆ 4 ಗಂಟೆಗೆ ₹20 ಲಕ್ಷ ಕೋಟಿ ಪ್ಯಾಕೇಜ್ ಬಗ್ಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್’ರಿಂದ ಮಾಹಿತಿ

ನವದೆಹಲಿ(13ಮೇ/2020): ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಸಂಜೆ 4 ಗಂಟೆಗೆ ಪತ್ರಿಕಾಗೋಷ್ಠಿ ನಡೆಸಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ನಿನ್ನೆ ಘೋಷಿಸಿದ್ದ ₹ 20 ಲಕ್ಷ ಕೋಟಿ ಮೊತ್ತದ ಆರ್ಥಿಕ ಪ್ಯಾಕೇಜ್‌ನ ವಿವರ ಹಂಚಿಕೊಳ್ಳಲಿದ್ದಾರೆ.
ಮುಂದಿನ ದಿನಗಳಲ್ಲಿ ಹಣಕಾಸು ಇಲಾಖೆ ನಡೆಸಲಿರುವ ಸರಣಿ ಪತ್ರಿಕಾಗೋಷ್ಠಿಗಳಲ್ಲಿ ಪೈಕಿ ಇದು ಮೊದಲನೆಯದು.
ದೇಶವನ್ನು ಉದ್ದೇಶಿಸಿ ಮಂಗಳವಾರ ಮಾತನಾಡಿದ್ದ  ಪ್ರಧಾನಿ ನರೇಂದ್ರ ಮೋದಿ, ಕೊರೊನಾ ಪಿಡುಗು ಹರಡುವನ್ನು ತಡೆಯಲು ಘೋಷಿಸಿದ್ದ ಲಾಕ್‌ಡೌನ್‌ನಿಂದ ಸಂಕಷ್ಟಕ್ಕೀಡಾದ ಉದ್ಯಮಗಳ ಪುನಶ್ಚೇತನ ಮತ್ತು ಬಡವರಿಗೆ ನೆರವಾಗಲೆಂದು ₹ 20 ಲಕ್ಷ ಕೋಟಿ ಮೊತ್ತದ ಪ್ಯಾಕೇಜ್ ಘೋಷಿಸಿದ್ದರು. ತಮ್ಮ ಭಾಷಣದಲ್ಲಿಯೇ ಪ್ಯಾಕೇಜ್ ವಿವರಗಳನ್ನು ಹಣಕಾಸು ಸಚಿವರು ಹಂಚಿಕೊಳ್ಳಲಿದ್ದಾರೆ ಎಂದು ಹೇಳಿದ್ದರು.

ಲಾಕ್‌ಡೌನ್‌ 3.0: ಇಂದು ಮೋದಿ ಮಾತುಕತೆ

ನವದೆಹಲಿ(ಮೇ11/2020): ‘ಲಾಕ್‌ಡೌನ್‌ 3.0’ ಮುಕ್ತಾಯಕ್ಕೆ  ಆರು ದಿನಗಳು ಉಳಿದಿದ್ದು ಮುಂದಿನ ಕಾರ್ಯಯೋಜನೆಯ ಬಗ್ಗೆ ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಅವರು ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳ ಜತೆಗೆ ಸೋಮವಾರ ಮಧ್ಯಾಹ್ನ 3 ಗಂಟೆಗೆ ವಿಡಿಯೊ ಸಂವಾದ ನಡೆಸಲಿದ್ದಾರೆ.
ಕುಸಿದಿರುವ ಆರ್ಥಿಕತೆಗೆ ಚೇತರಿಕೆ ನೀಡುವ ಸಲುವಾಗಿ ಲಾಕ್‌ಡೌನ್‌ ಅನ್ನು ಇನ್ನಷ್ಟು ಸಡಿಲಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಒಲವು ತೋರುವ ಸಾಧ್ಯತೆ ಇದೆ ಎಂದು ನಿರೀಕ್ಷಿಸಲಾಗಿದೆ.
‘ಕೋವಿಡ್‌–19 ಕುರಿತು ಮೋದಿ ಅವರು ಐದನೇ ಬಾರಿಗೆ ಮುಖ್ಯಮಂತ್ರಿ ಗಳ ಜತೆ ಸಂವಾದ ನಡೆಸಲಿದ್ದಾರೆ. ಲಾಕ್‌ಡೌನ್‌ ಅನ್ನು ಹಂತಹಂತವಾಗಿ ಹಿಂತೆಗೆದುಕೊಳ್ಳುವ ಬಗ್ಗೆ ಈ ಸಂದರ್ಭದಲ್ಲಿ ಚರ್ಚಿಸಲಾಗುವುದು’ ಎಂದು ಪ್ರಧಾನಿ ಕಚೇರಿಯು ಭಾನುವಾರ ಟ್ವೀಟ್‌ ಮಾಡಿದೆ.
ಏಪ್ರಿಲ್‌ 27ರಂದು ಪ್ರಧಾನಿ ಅವರು ಮುಖ್ಯಮಂತ್ರಿಗಳ ಜತೆ ವಿಡಿಯೊ ಸಂವಾದ ನಡೆಸಿದ್ದರು. ಆಗ ದೇಶದಲ್ಲಿ ಒಟ್ಟಾರೆ 28,000 ಕೋವಿಡ್‌ ದೃಢಪಟ್ಟ ಪ್ರಕರಣಗಳಿದ್ದವು. ಈಗ ಆ ಸಂಖ್ಯೆಯು 63,000 ದಾಟಿದೆ. ಆದ್ದರಿಂದ ಲಾಕ್‌ಡೌನ್‌ ಅನ್ನು ಸಂಪೂರ್ಣವಾಗಿ ಹಿಂಪಡೆಯುವ ಸಾಧ್ಯತೆ ಇಲ್ಲ ಎನ್ನಲಾಗಿದೆ.

ಅಟೋ ಚಾಲಕರೇ ಸೇವಾಸಿಂಧು ಮೂಲಕ ಅರ್ಜಿ ಸಲ್ಲಿಸಿ

ಬೆಂಗಳೂರು(8ಮೇ/2020): ಕೊರೋನಾ ವೈರಸ್ ಲಾಕ್ ಡೌನ್ ಹಿನ್ನಲೆಯಲ್ಲಿ ಕೆಲಸವಿಲ್ಲದೆ ಸಂಕಷ್ಟಕ್ಕೀಡಾಗಿರುವ ಆಟೋ, ಟ್ಯಾಕ್ಸಿ ಚಾಲಕರು ಮುಖ್ಯಮಂತ್ರಿಗಳು ಘೋಷಿಸಿರುವ ಪರಿಹಾರ ಹಣ ಸ್ವೀಕರಿಸಲು ಸೇವಾಸಿಂಧು ಪೋರ್ಟಲ್‌ಗಳ ಮೂಲಕ ಅರ್ಜಿ ಸಲ್ಲಿಸಬಹುದು.

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ಒಂದು ಬಾರಿ ಘೋಷಿಸಿರುವ 5000 ರೂ.ಪರಿಹಾರಕ್ಕಾಗಿ ಯಾರೂ ಅಂಚೆ ಕಚೇರಿಗಳ ಮುಂದೆ ಸರತಿ ಸಾಲಿನಲ್ಲಿ ನಿಲ್ಲುವ ಅಗತ್ಯವಿಲ್ಲ. ಪರಿಹಾರ ಧನ ನೀಡಲು ಅರ್ಜಿಗಳನ್ನು ಆನ್‌ಲೈನ್‌ಗಳಲ್ಲಿ ಸೇವಾಸಿಂಧು ಪೋರ್ಟಲ್‌ಗಳ ಮೂಲಕ ಸ್ವೀಕರಿಸುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಎಂದು ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತರು ತಿಳಿಸಿದ್ದಾರೆ.

ಕೋವಿಡ್‌ 19 ಸಂಬಂಧ ಮುಖ್ಯಮಂತ್ರಿಗಳು ಮೇ 6ರಂದು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಆಟೋ ಹಾಗೂ ಟ್ಯಾಕ್ಸಿ ಚಾಲಕರು ಒಂದು ಬಾರಿ ಪರಿಹಾರವಾಗಿ 5000 ರೂ.ಗಳನ್ನು ನೀಡಲು ನಿರ್ಧರಿಸಿರುವುದಾಗಿ ಘೋಷಿಸಿದ್ದಾರೆ. ಈ ಪರಿಹಾರ ಧನವನ್ನು ಪಡೆಯಲು ಆಟೋ ರಿಕ್ಷಾ , ಟ್ಯಾಕ್ಸಿ ಚಾಲಕರು ಅಂಚೆ ಕಚೇರಿಗಳ ಎದುರಿಗೆ ಸರತಿ ಸಾಲಿನಲ್ಲಿ ನಿಂತು ಅರ್ಜಿಗಳನ್ನು ಕಳುಹಿಸಲು ಪ್ರಯತ್ನಿಸುತ್ತಿರುವುದು ಗಮನಕ್ಕೆ ಬಂದಿದೆ.

ಪರಿಹಾರ ಧನ ನೀಡಲು ಅರ್ಜಿಗಳನ್ನು ಆನ್‌ಲೈನ್‌ಗಳಲ್ಲಿ ಸೇವಾಸಿಂಧು ಪೋರ್ಟಲ್‌ಗಳ ಮೂಲಕ ಸ್ವೀಕರಿಸುವ ವ್ಯವಸ್ಥೆ ಮಾಡಲಾಗುತ್ತಿದೆ. ಆದ್ದರಿಂದ ಆಟೋ ರಿಕ್ಷಾ ಚಾಲಕರು ಅರ್ಜಿಗಳನ್ನು ಸಲ್ಲಿಸಲು ಅನವಶ್ಯಕವಾಗಿ ಪರಿಶ್ರಮ ಪಡುವ ಅಗತ್ಯವಿಲ್ಲ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಎಲ್ಲಾ ಅರ್ಹ ಆಟೋ ರಿಕ್ಷಾ, ಟ್ಯಾಕ್ಸಿ ಚಾಲಕರಿಗೆ ಪರಿಹಾರ ಧನವನ್ನು ಅವರ ಖಾತೆಗೆ ನೇರವಾಗಿ ವರ್ಗಾಯಿಸಲಾಗುವುದು ಆದ್ದರಿಂದ ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Post