December 5, 2020

ರಾಷ್ಟ್ರೀಯ

ಪಬ್-ಜಿ ಜೊತೆ 118 ವಿದೇಶಿ ಆಪ್ ನಿಷೇಧ

ದೆಹಲಿ(2ಸೆಪ್ಟಂಬರ್/2020): ಪಬ್ಜಿ, ಪಬ್ಜಿ ಮೊಬೈಲ್ ಲೈಟ್, ವಿಚಾಟ್ ವರ್ಕ್‌, ವಿಚಾಟ್ ರೀಡಿಂಗ್ ಸೇರಿದಂತೆ 118 ಆ್ಯಪ್‌ಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ. ಈ ಹಿಂದೆ ಎರಡು ಬಾರಿ ಒಟ್ಟು ಚೀನಾದ ನೂರಕ್ಕೂ ಹೆಚ್ಚು ಆ್ಯಪ್‌ಗಳ ಮೇಲೆ ನಿಷೇಧ ಹೇರಲಾಗಿತ್ತು.
ದೇಶದ ರಕ್ಷಣೆ, ಸಾರ್ವಭೌಮತ್ವ, ಸಮಗ್ರತೆ, ಭದ್ರತೆ ಮತ್ತು ಸಾರ್ವಜನಿಕ ಸುವ್ಯವಸ್ಥೆ ಗಮನದಲ್ಲಿಟ್ಟು ಕೊಂಡು 118 ಆ್ಯಪ್‌ಗಳನ್ನು ನಿಷೇಧಿಸಲಾಗಿದೆ ಎಂದು ಸರ್ಕಾರದ ಪ್ರಕಟಣೆ ತಿಳಿಸಿದೆ.
ಟಿಕ್‌ಟಾಕ್, ಶೇರ್‌ಇಟ್, ಹೆಲೊ, ಲೀಕೀ, ಯುಸಿ ಬ್ರೌಸರ್‌‌ ಮತ್ತು ವಿ–ಚಾಟ್ ಸೇರಿದಂತೆ 59 ಮೊಬೈಲ್‌ ಆ್ಯಪ್‌ಗಳನ್ನು ಕೇಂದ್ರ ಸರ್ಕಾರ ಜೂನ್‌ನಲ್ಲಿ ನಿಷೇಧಿಸಿತ್ತು. ಬಳಿಕ ಎರಡನೇ ಹಂತದಲ್ಲಿ ಜುಲೈನಲ್ಲಿ ಟಿಕ್‌ಟಾಕ್ ಲೈಟ್, ಹೆಲೊ ಲೈಟ್, ಶೇರ್‌ಇಟ್ ಲೈಟ್, ಬಿಗೊ ಲೈವ್ ಲೈಟ್, ವಿಎಫ್‌ವೈ ಲೈಟ್ ಸೇರಿದಂತೆ ಚೀನಾದ 47 ಆ್ಯಪ್‌ಗಳನ್ನು ನಿಷೇಧಿಸಿತ್ತು. ಇದೀಗ ಮೂರನೇ ಬಾರಿಗೆ ಕ್ರಮ ಕೈಗೊಂಡಿದೆ.
ಭಾರತವೊಂದರಲ್ಲಿ ಈ ಗೇಮ್‌ನ ಅಪ್ಲಿಕೇಷನ್‌ ಅನ್ನು 1.75 ಕೋಟಿ ಮಂದಿ ಮೊಬೈಲ್‌ಗಳಲ್ಲಿ ಡೌನ್‌ಲೋಡ್ ಆಗಿದೆ.

ಅಯೋಧ್ಯೆ ಶಿಲಾನ್ಯಾಸ ಭಾರತೀಯರಿಗೆ ಶುಭ ಸುದ್ದಿ: ಡಾ.ಡಿ ವೀರೇಂದ್ರ ಹೆಗ್ಗಡೆ

ಮಂಗಳೂರು(4ಆಗಸ್ಟ/2020): ಅಯೋಧ್ಯೆಯಲ್ಲಿ ಶ್ರೀರಾಮಚಂದ್ರನ ಮಂದಿರದ ಶಿಲಾನ್ಯಾಸ ಕಾರ್ಯಕ್ರಮ ನೆರವೇರಲಿರುವುದು ಭಾರತೀಯರೆಲ್ಲರಿಗೂ ಶುಭ ಸುದ್ದಿ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ‌ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅಭಿಪ್ರಾಯಪಟ್ಟಿದ್ದಾರೆ.
ಶ್ರೀರಾಮ ಭಗವಂತನ ಅವತಾರವೆಂದು ಭಾರತೀಯರ ನಂಬಿಕೆ,ಶ್ರದ್ಧೆ.ಆತ ಭೂಮಿಯಲ್ಲಿ ಅವತರಿಸಿದ ಬಳಿಕ ತನ್ನ ಸದ್ಗುಣಗಳಿಂದ ಆದರ್ಶಮೂರ್ತಿ ಎನಿಸಿದ.ಸಹಸ್ರಾರು ವರ್ಷಗಳಿಂದ ಮರ್ಯಾದ ಪುರುಷೋತ್ತಮನೆನಿಸಿ ತನ್ನ ವ್ಯಕ್ತಿತ್ವ,ದೃಢ ನಿರ್ಧಾರಗಳಿಂದಾಗಿ ಜನಮಾನಸದಲ್ಲಿ ನೆಲೆಯಾದ.ತನ್ನ ಆದರ್ಶಗಳಿಂದ ವಿಶ್ವವ್ಯಾಪಿಯಾದ. ಶ್ರೀರಾಮ ಸ್ಮರಣೆ ಇನ್ನೂ ಸಹಸ್ರ ವರ್ಷಗಳವರೆಗೆ ಈ ನೆಲದಲ್ಲಿ ಉಳಿಯಲಿ ಮತ್ತು ಬೆಳೆಯಲಿ ಎಂದು ಹಾರೈಸಿದರು.

ನೂರನೇ ದಿನದ ಸೇವೆ: ಗುರೂಜಿ ಸಾಯಿಈಶ್ವರ್ ಆಶಿರ್ವಾದ ಪಡೆದ ಬಿವಂಡಿ ಸಾಯಿ ಫೌಂಡೇಷನ್ ಅಧ್ಯಕ್ಷ ಪ್ರದೀಪ್ ವಾಸು ಶೆಟ್ಟಿ

ಮುಂಬಾಯಿ/ಉಡುಪಿ(30ಜೂ/2020): 24 ಮಾರ್ಚ್ 2020ರಿಂದ ಕೋವಿಡ್ 19ರ ಕಾರಣ ಭಾರತದಾದ್ಯಂತ ಲಾಕ್‌ಡೌನ್ ಆದ ನಂತರ ಮುಂಬೈಯ ಬಿವಂಡಿಯ
ಸಾಯಿ ಫೌಂಡೇಶನ್ ಮಹಾರಾಷ್ಟ್ರದಾದ್ಯಂತದ ಬಡ ಮತ್ತು ನಿರ್ಗತಿಕ ಜನರಿಗೆ ಈ ಕೆಳಗಿನ ಸೇವೆಗಳನ್ನು ಒದಗಿಸುತ್ತಿದೆ ಇಂದಿಗೆ ಸೇವೆಯ ನೂರನೇ ದಿನ.
ಬಿವಂಡಿಯ ಸಾಯಿ ಫೌಂಡೇಶನ್ ಇದರ ಅಧ್ಯಕ್ಷ ಪ್ರದೀಪ್ ವಾಸು ಶೆಟ್ಟಿ ಇಂದು ಗುರೂಜಿ ಸಾಯಿಈಶ್ವರ್ ಇವರನ್ನು ಉಡುಪಿ ಬಳಿಯ ಶಂಕರಪುರದ ಶ್ರೀ ಸಾಯಿ ಬಾಬಾ ಮಂದಿರದಲ್ಲಿ ಬೇಟಿಯಾಗಿ ಆಶಿರ್ವಾದ ಪಡೆದರು.
ಬಿವಂಡಿಯ ಸಾಯಿ ಫೌಂಡೇಶನ್ 24ಮಾರ್ಚ್ ನಿಂದ ಇಂದಿನ ವರೆಗೆ ನೀಡಿರುವ ಸೇವೆಗಳು ಹೇಗಿವೆ.
32,000 ಕುಟುಂಬಗಳಿಗೆ ಅಗತ್ಯವಾದ ಅಗತ್ಯ ದಿನಸಿ ಸಾಮಗ್ರಿಗಳನ್ನು ಒದಗಿಸಲಾಗಿದೆ ಇದರಿಂದ ಸುಮಾರು 1,22,000 ಜನರಿಗೆ ಸಹಾಯವಾಯಿತು.
ಭಿವಾಂಡಿ, ಥಾಣೆ, ಮುಂಬೈ ಮತ್ತು ಇತರ ನಗರಗಳಿಂದ ತಮ್ಮ ಸ್ವಂತ ರಾಜ್ಯಗಳಾದ ಯುಪಿ, ಬಿಹಾರ, ಒರಿಸ್ಸಾ ಮತ್ತು ಕೋಲ್ಕತಾ ಇತ್ಯಾದಿಗಳಿಗೆ ನಾಸಿಕ್ ಹೆದ್ದಾರಿಯ ಮೂಲಕ ಹೋಗುತ್ತಿರುವ ಸುಮಾರು 2,00,000 ವಲಸಿಗರಿಗೆ ಉಚಿತ ಸೇವೆಗಳನ್ನು ಎಸ್‌ಎಐ ಧಾಬಾನಲ್ಲಿ ಒದಗಿಸಲಾಗಿದೆ
ಇಲ್ಲಿ ಮದ್ಯಹ್ನದ ಹಾಗು ರಾತ್ರಿಯ ಊಟ, ಸ್ನಾನಗೃಹಗಳು, ವಿಶ್ರಾಂತಿಗಾಗಿ ಸೌಲಭ್ಯಗಳು, ಚಹಾ ಮತ್ತು ತಿಂಡಿಗಳು, ಬೇಬಿ ಫೀಡಿಂಗ್ ಸೌಲಭ್ಯಗಳು, ಮುಸ್ಲಿಮರರ ಪ್ರಾರ್ಥನೆಗಾಗಿ ಪ್ರತ್ಯೇಕ ಪ್ರದೇಶವನ್ನು ಏರ್ಪಡಿಸಲಾಗಿದೆ. ಪವಿತ್ರ ರಂಜಾನ್ ತಿಂಗಳಲ್ಲಿ ಮುಸ್ಲಿಮರಿಗಾಗಿ ಇಫ್ತಾರ್ ವಸ್ತುಗಳನ್ನು ವ್ಯವಸ್ಥೆ ಮಾಡಲಾಗಿತ್ತು.ಪ್ರಥಮ ಚಿಕಿತ್ಸಾ ವ್ಯವಸ್ಥೆ, 1000 ವಲಸಿಗರಿಗೆ ತಮ್ಮ ಸ್ವಗ್ರಾಮಗಳಿಗೆ ತೆರಳಲು ಸಾಯಿ ಫೌಂಡೇಶನ್ ಎಲ್ಲಾ ವೆಚ್ಚಗಳು ಬಸ್ ಮತ್ತು ಟ್ರಕ್‌ಗಳನ್ನು ವ್ಯವಸ್ಥೆ ಮಾಡಲಾಗಿದೆ.
ಅನೇಕ ಸ್ವಂತ ವಾಹನವನ್ನು ತುರ್ತು ಆಂಬ್ಯುಲೆನ್ಸ್ ಆಗಿ ಪರಿವರ್ತಿಸಿ ಹತ್ತಿರದ ಆಸ್ಪತ್ರೆಗೆ ಅಗತ್ಯ ಇರುವವರನ್ನು ಕರೆದೊಯ್ಯಲಾಗಿದೆ ಮತ್ತು ಅವರಿಗೆ ಉಚಿತ ಚಿಕಿತ್ಸೆ ನೀಡಲಾಗಿದೆ.
ಕೆಲವು ಬಡ ಮತ್ತು ನಿರ್ಗತಿಕ ವೃದ್ಧರನ್ನು ದತ್ತು ತೆಗೆದುಕೊಂಡು ಅವರಿಗೆ ಜೀವಿತಾವಧಿಯ ಖರ್ಚನ್ನು ಭರಿಸುವ ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಂಡರು.16,000 ಜನರಿಗೆ ಸುಮಾರು 722 ಬಸ್ ಅನ್ನು ಉಚಿತವಾಗಿ ಒದಗಿಸಲಾಗಿದೆ.
1,50,000 ಜನರಿಗೆ ಸುಮಾರು 122 ರೈಲುಗಳ ಪ್ರಯಾಣಿಕರಿಗೆ ಉಚಿತ ಸಿದ್ಧ ಊಟ, ಹಣ್ಣುಗಳು, ಬಿಸ್ಕತ್ತುಗಳು ಮತ್ತು ಇತರ ವಸ್ತುಗಳನ್ನು ಒದಗಿಸಲಾಗಿದೆ.
ಗುರೂಜಿ ಸಾಯಿಈಶ್ವರ್ ಆಶಿರ್ವಾದಿಸಿ ಜನರ ಸೇವೆ ಹೀಗೆ ಮುಂದುವರಿಸಿ ಎಂದರು.

ಇಂದಿನಿಂದ ಲೇಡಿಗೋಷನ್ ಬಂದ್

ಮಂಗಳೂರು(30ಜೂ/2020): ಆರು ದಿನಗಳ ಕಾಲ ಮಂಗಳೂರಿನ ಜಿಲ್ಲಾ ಲೇಡಿಗೋಷನ್ ಹೆರಿಗೆ ಆಸ್ಪತ್ರೆ ಮುಚ್ಚುವ ನಿರ್ಧಾರ ಕೈಗೊಳ್ಳುವ ಬಗ್ಗೆ ವರದಿಯಾಗಿದೆ.
ಇಂದಿನಿಂದ ಜು.6ರವರೆಗೆ ಹೊರ ರೋಗಿ ಮತ್ತು ಒಳರೋಗಿ ಸೇವೆ ಸ್ಥಗಿತಗೊಳ್ಳಾಗುವುದು.
ಆಸ್ಪತ್ರೆಯ ಹೆಚ್ಚಿನ ವೈದ್ಯರು ಮತ್ತು ಸಿಬ್ಬಂದಿ ಕ್ವಾರೆಂಟೈನ್ ನಲ್ಲಿರೋ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.
ಆಸ್ಪತ್ರೆಯ ಎಲ್ಲಾ ವಿಭಾಗ ಸ್ಯಾನಿಟೈಝ್ ಮತ್ತು ಫ್ಯೂಮಿಗೇಷನ್ ಮಾಡಲಾಗುವುದು.
ಮಂಗಳೂರಿನ ಲೇಡಿಗೋಷನ್ ಸರ್ಕಾರಿ ಹೆರಿಗೆ ಆಸ್ಪತ್ರೆ ಅಧೀಕ್ಷಕಿಯವರು ಪ್ರಕಟಿಸಿದಾರೆ.

ಪಾಕಿಸ್ತಾನದಿಂದ ಡ್ರೋನ್ ಮೂಲಕ ಶಸ್ತ್ರ ಸಾಗಾಟದ ಯತ್ನ ವಿಫಲಗೊಳಿಸಿದ ಬಿಎಸ್‌ಫ್‌

ಜಮ್ಮುಕಾಶ್ಮೀರ(20/2020ಜೂ): ಜಮ್ಮು ಕಾಶ್ಮೀರದ ಅಂತರರಾಷ್ಟ್ರೀಯ ಗಡಿಗೆ ಹೊಂದಿಕೊಂಡಿರುವ ಕತುವಾ ಜಿಲ್ಲೆಯ ಪನ್ಸಾರ್‌ ಎಂಬಲ್ಲಿ ಹಾರಿ ಬರುತ್ತಿದ್ದ ಡ್ರೋನ್‌ ಅನ್ನು ಮುಂಜಾನೆ 5.10ರ ಸುಮಾರಿನಲ್ಲಿ ಗಸ್ತಿನಲ್ಲಿದ್ದ ಬಿಎಸ್‌ಫ್‌ ಯೋಧರು ಧ್ವಂಸಗೊಳಿಸಿದ್ದಾರೆ.  
ಶಸ್ತ್ರಾಸ್ತ್ರಗಳನ್ನು ಜೋಡಿಸಿ ಭಾರತಕ್ಕೆ ಕಳುಹಿಸಲಾಗಿದ್ದ ಪಾಕಿಸ್ತಾನದ ಡ್ರೋನ್‌‌ ಅನ್ನು ಗಡಿ ಭದ್ರತಾ ಪಡೆ (ಬಿಎಸ್‌ಎಫ್‌) ಶನಿವಾರ ಹೊಡೆದುರುಳಿಸಿದೆ.
ಡ್ರೋನ್‌‌ ಅನ್ನು ಪರಿಶೀಲಿಸಲಾಗಿದ್ದು, ಅದಕ್ಕೆ ಶಸ್ತ್ರಾಸ್ತ್ರಗಳನ್ನು ಜೋಡಿಸಿ ರವಾನಿಸಿರುವುದು ಖಚಿತವಾಗಿದೆ. ಅದರಲ್ಲಿ ಬಂದೂಕುಗಳು ಪತ್ತೆಯಾಗಿವೆ.ಡ್ರೋನ್‌‌ ಕುರಿತು ತನಿಖೆ ನಡೆಯುತ್ತಿದೆ.ಬಿಎಸ್‌ಎಫ್‌ ಸಿಬ್ಬಂದಿ ಡ್ರೋನ್‌‌ ಕಡೆಗೆ 9 ಸುತ್ತಿನ ಗುಂಡು ಹಾರಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ವಲಸೆ ಕಾರ್ಮಿಕರಿಗೆ 15 ದಿನದಲ್ಲಿ ಪ್ರಯಾಣಕ್ಕೆ ವ್ಯವಸ್ಥೆ: ಸುಪ್ರೀಂ ಕೋರ್ಟ್

ದೆಹಲಿ(6ಜೂ/2020): ವಲಸೆ ಕಾರ್ಮಿಕರನ್ನು 15 ದಿನದೊಳಗೆ ಅವರ ಊರಿಗೆ ವಾಪಸ್ ಕಳುಹಿಸಲು ಎಲ್ಲ ರಾಜ್ಯ ಸರ್ಕಾರಗಳು ವ್ಯವಸ್ಥೆ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಸೂಚನೆ ನೀಡಿತು. ತಮ್ಮ ತವರು ರಾಜ್ಯಗಳಿಗೆ ಹಿಂದಿರುಗಿದ ಕಾರ್ಮಿಕರಿಗೆ ಅಲ್ಲಿಯೇ ಉದ್ಯೋಗದ ಅವಕಾಶಗಳನ್ನು ಸರ್ಕಾರಗಳು ಸೃಷ್ಟಿಸಬೇಕು ಎಂದೂ ಸೂಚಿಸಿತು.
ಕರ್ನಾಟಕ ಸರ್ಕಾರವು ಮೇ 3ರಿಂದ ಈವರೆಗೆ ಒಟ್ಟು 3 ಲಕ್ಷ ಕಾರ್ಮಿಕರ ಪ್ರಯಾಣಕ್ಕೆ ವ್ಯವಸ್ಥೆ ಕಲ್ಪಿಸಿದೆ. ಹೀಗಿದ್ದರೂ ಲಕ್ಷಾಂತರ ಕಾರ್ಮಿಕರು ರಾಜ್ಯದಲ್ಲಿ ಇದ್ದಾರೆ. ಅವರನ್ನು ವಾಪಸ್ ಕಳುಹಿಸಲು ಇನ್ನೂ 15 ದಿನ ಕಾಲಾವಕಾಶ ಬೇಕು ಎಂದು ಕರ್ನಾಟಕ ಸರ್ಕಾರ ತಿಳಿಸಿತು.
ವಲಸೆ ಕಾರ್ಮಿಕರು ಊರಿಗೆ ಹಿಂದಿರುಗುವುದು ಒಂದು ಅನಿರ್ದಿಷ್ಟಾವಧಿ ಪ್ರಕ್ರಿಯೆ ಆಗಬಾರದು ಎಂದು ನ್ಯಾಯಮೂರ್ತಿ ಅಶೋಕ್ ಭೂಷಣ್ ನೇತೃತ್ವದ ಪೀಠ ಸ್ಪಷ್ಟವಾಗಿ ಹೇಳಿತು.
ಎಷ್ಟು ಸಂಖ್ಯೆಯ ಕಾರ್ಮಿಕರು ರಾಜ್ಯಕ್ಕೆ ವಾಪಸಾಗಿದ್ದಾರೆ ಎಂದು ತಿಳಿಯುವ ನೋಂದಣಿ ವ್ಯವಸ್ಥೆಯನ್ನು ರೂಪಿಸಿಕೊಳ್ಳಲು ಸೂಚಿಸಿತು. ವಿವರವಾದ ಆದೇಶವನ್ನು ಮಂಗಳವಾರ ಪ್ರಕಟಿಸುವುದಾಗಿ ಕೋರ್ಟ್ ತಿಳಿಸಿತು. 

ಮೀನುಗಾರಿಕೆಗೆ ವಿಶೇಷ ಪ್ಯಾಕೇಜ್ “ಮತ್ಸ್ಯ ಸಂಪದ” ಯೋಜನೆ: ನಿರ್ಮಲಾ ಸೀತಾರಾಮನ್

ನವದೆಹಲಿ(15ಮೇ/2020): ಮೊದಲ ದಿನ ಉದ್ಯಮಗಳಿಗೆ, ಎರಡನೇ ದಿನ ಕಾರ್ಮಿಕರಿಗೆ ಪ್ಯಾಕೇಜ್ ಪ್ರಕಟಿಸಿದ್ದ ಕೇಂದ್ರ ಸರ್ಕಾರ ಇಂದು ಕೃಷಿ ಮತ್ತು ಅದಕ್ಕೆ ಸಂಬಂಧಿಸಿದ ಪೂರಕ ಚಟುವಟಿಕೆಗಳನ್ನು ಮೇಲಕ್ಕೆ ಎತ್ತಲು ವಿಶೇಷ ಪ್ಯಾಕೇಜ್ ಜೊತೆಗೆ ಮೀನುಗಾರಿಕೆಗೆ 20 ಸಾವಿರ ಕೋಟಿ ಪ್ಯಾಕೇಜ್ ಮತ್ಸ್ಯ ಸಂಪದ ಯೋಜನೆಯನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರಕಟಿಸಿದರು.
ಮೀನುಗಾರರಿಗೆ ನೆರವು ನೀಡಲು ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯನ್ನು ಆರಂಭಿಸಲಾಗುವುದು. ಈ ಯೋಜನೆಗೆ 20 ಸಾವಿರ ಕೋಟಿ ರೂ. ನಿಗದಿ ಮಾಡಲಾಗಿದೆ.
ಸಮುದ್ರ, ದೇಶದ ಒಳಗಿನ ಮೀನುಗಾರಿಕೆ ಮತ್ತು ಜಲಚರ ಸಾಕಾಣಿಕೆಗೆ 11 ಸಾವಿರ ಕೋಟಿ ರೂ. ಪ್ಯಾಕೇಜ್. ಕೋಲ್ಡ್ ಚೈನ್, ಮಾರುಕಟ್ಟೆ, ಮೀನುಗಾರಿಕಾ ಬಂದರುಗಳಿಗೆ ಒಟ್ಟು 9 ಸಾವಿರ ಕೋಟಿ ರೂ. ಅನುದಾನ.
ಮೀನುಗಾರಿಕೆಗೆ ನಿಷೇಧ ಹೇರಿದ ಸಮಯದಲ್ಲಿ ಮೀನುಗಾರರ ವೈಯಕ್ತಿಕ ಮತ್ತು ದೋಣಿಗಳಿಗೆ ವಿಮೆ. ಈ ಉತ್ತೇಜನ ಕ್ರಮಗಳಿಂದ ಮುಂದಿನ 5 ವರ್ಷದಲ್ಲಿ 70 ಲಕ್ಷ ಟನ್ ಗಳಿಗೆ ಮೀನು ಉತ್ಪಾದನೆ ಏರಿಕೆಯಾಗಲಿದೆ. ಒಟ್ಟು 55 ಲಕ್ಷ ಜನರಿಗೆ ಉದ್ಯೋಗ, 1 ಲಕ್ಷ ಕೋಟಿ ರೂ. ಮೌಲ್ಯ ರಫ್ತು ಆಗಲಿದೆ ಎಂದು ಅಂದಾಜಿಸಲಾಗಿದೆ.

ಸಂಜೆ 4 ಗಂಟೆಗೆ ₹20 ಲಕ್ಷ ಕೋಟಿ ಪ್ಯಾಕೇಜ್ ಬಗ್ಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್’ರಿಂದ ಮಾಹಿತಿ

ನವದೆಹಲಿ(13ಮೇ/2020): ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಸಂಜೆ 4 ಗಂಟೆಗೆ ಪತ್ರಿಕಾಗೋಷ್ಠಿ ನಡೆಸಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ನಿನ್ನೆ ಘೋಷಿಸಿದ್ದ ₹ 20 ಲಕ್ಷ ಕೋಟಿ ಮೊತ್ತದ ಆರ್ಥಿಕ ಪ್ಯಾಕೇಜ್‌ನ ವಿವರ ಹಂಚಿಕೊಳ್ಳಲಿದ್ದಾರೆ.
ಮುಂದಿನ ದಿನಗಳಲ್ಲಿ ಹಣಕಾಸು ಇಲಾಖೆ ನಡೆಸಲಿರುವ ಸರಣಿ ಪತ್ರಿಕಾಗೋಷ್ಠಿಗಳಲ್ಲಿ ಪೈಕಿ ಇದು ಮೊದಲನೆಯದು.
ದೇಶವನ್ನು ಉದ್ದೇಶಿಸಿ ಮಂಗಳವಾರ ಮಾತನಾಡಿದ್ದ  ಪ್ರಧಾನಿ ನರೇಂದ್ರ ಮೋದಿ, ಕೊರೊನಾ ಪಿಡುಗು ಹರಡುವನ್ನು ತಡೆಯಲು ಘೋಷಿಸಿದ್ದ ಲಾಕ್‌ಡೌನ್‌ನಿಂದ ಸಂಕಷ್ಟಕ್ಕೀಡಾದ ಉದ್ಯಮಗಳ ಪುನಶ್ಚೇತನ ಮತ್ತು ಬಡವರಿಗೆ ನೆರವಾಗಲೆಂದು ₹ 20 ಲಕ್ಷ ಕೋಟಿ ಮೊತ್ತದ ಪ್ಯಾಕೇಜ್ ಘೋಷಿಸಿದ್ದರು. ತಮ್ಮ ಭಾಷಣದಲ್ಲಿಯೇ ಪ್ಯಾಕೇಜ್ ವಿವರಗಳನ್ನು ಹಣಕಾಸು ಸಚಿವರು ಹಂಚಿಕೊಳ್ಳಲಿದ್ದಾರೆ ಎಂದು ಹೇಳಿದ್ದರು.

ಲಾಕ್‌ಡೌನ್‌ 3.0: ಇಂದು ಮೋದಿ ಮಾತುಕತೆ

ನವದೆಹಲಿ(ಮೇ11/2020): ‘ಲಾಕ್‌ಡೌನ್‌ 3.0’ ಮುಕ್ತಾಯಕ್ಕೆ  ಆರು ದಿನಗಳು ಉಳಿದಿದ್ದು ಮುಂದಿನ ಕಾರ್ಯಯೋಜನೆಯ ಬಗ್ಗೆ ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಅವರು ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳ ಜತೆಗೆ ಸೋಮವಾರ ಮಧ್ಯಾಹ್ನ 3 ಗಂಟೆಗೆ ವಿಡಿಯೊ ಸಂವಾದ ನಡೆಸಲಿದ್ದಾರೆ.
ಕುಸಿದಿರುವ ಆರ್ಥಿಕತೆಗೆ ಚೇತರಿಕೆ ನೀಡುವ ಸಲುವಾಗಿ ಲಾಕ್‌ಡೌನ್‌ ಅನ್ನು ಇನ್ನಷ್ಟು ಸಡಿಲಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಒಲವು ತೋರುವ ಸಾಧ್ಯತೆ ಇದೆ ಎಂದು ನಿರೀಕ್ಷಿಸಲಾಗಿದೆ.
‘ಕೋವಿಡ್‌–19 ಕುರಿತು ಮೋದಿ ಅವರು ಐದನೇ ಬಾರಿಗೆ ಮುಖ್ಯಮಂತ್ರಿ ಗಳ ಜತೆ ಸಂವಾದ ನಡೆಸಲಿದ್ದಾರೆ. ಲಾಕ್‌ಡೌನ್‌ ಅನ್ನು ಹಂತಹಂತವಾಗಿ ಹಿಂತೆಗೆದುಕೊಳ್ಳುವ ಬಗ್ಗೆ ಈ ಸಂದರ್ಭದಲ್ಲಿ ಚರ್ಚಿಸಲಾಗುವುದು’ ಎಂದು ಪ್ರಧಾನಿ ಕಚೇರಿಯು ಭಾನುವಾರ ಟ್ವೀಟ್‌ ಮಾಡಿದೆ.
ಏಪ್ರಿಲ್‌ 27ರಂದು ಪ್ರಧಾನಿ ಅವರು ಮುಖ್ಯಮಂತ್ರಿಗಳ ಜತೆ ವಿಡಿಯೊ ಸಂವಾದ ನಡೆಸಿದ್ದರು. ಆಗ ದೇಶದಲ್ಲಿ ಒಟ್ಟಾರೆ 28,000 ಕೋವಿಡ್‌ ದೃಢಪಟ್ಟ ಪ್ರಕರಣಗಳಿದ್ದವು. ಈಗ ಆ ಸಂಖ್ಯೆಯು 63,000 ದಾಟಿದೆ. ಆದ್ದರಿಂದ ಲಾಕ್‌ಡೌನ್‌ ಅನ್ನು ಸಂಪೂರ್ಣವಾಗಿ ಹಿಂಪಡೆಯುವ ಸಾಧ್ಯತೆ ಇಲ್ಲ ಎನ್ನಲಾಗಿದೆ.

ವಿಶಾಖಪಟ್ಟಣ: ರಾಸಾಯನಿಕ ಅನಿಲ ಸೋರಿಕೆ ಎಂಟು ಸಾವು

ಹೈದರಾಬಾದ್(7ಮೇ/2020): ಆಂಧ್ರ ಪ್ರದೇಶದ ವಿಶಾಖಪಟ್ಟಣದ ಬಹುರಾಷ್ಟ್ರೀಯ ಸಂಸ್ಥೆಯ ರಾಸಾಯನಿಕ ಕಾರ್ಖಾನೆಯಲ್ಲಿ ವಿಷಕಾರಿ ಅನಿಲ ಸೋರಿಕೆಯಾದ ಪರಿಣಾಮ ಮಗು ಸೇರಿದಂತೆ 8 ಮಂದಿ ಸಾವನ್ನಪ್ಪಿದ್ದಾರೆ. ಅಲ್ಲದೇ 200ಕ್ಕೂ ಅಧಿಕ ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಇಂದು ಮುಂಜಾನೆ ಜಿಲ್ಲೆಯ ಆರ್. ಆರ್. ವೆಂಕಟಪುರಂನ ಎಲ್ .ಜಿ. ಪಾಲಿಮರ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‍ನ ರಾಸಾಯನಿಕ ಅನಿಲ ಕಾರ್ಖಾನೆಯಲ್ಲಿ ವಿಷಾನಿಲ ಸೋರಿಕೆಯಾಗಿದ್ದು, ಗಾಳಿಯಲ್ಲಿ ವಿಷಾನಿಲ ಸುತ್ತಮುತ್ತಲಿನ ಪ್ರದೇಶಗಳಿಗೆ ಹರಡಿದೆ. ಪರಿಣಾಮ ಬೆಳಗ್ಗೆ ವಾಕಿಂಗ್ ಮತ್ತು ಇತರೆ ಕೆಲಸಗಳಿಗೆ ಬಂದಿದ್ದ ಜನರು ವಿಷಾನಿಲ ಸೇವಿಸಿ ಕೂಡಲೇ ಅಸ್ವಸ್ಥರಾಗಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Related Post