November 29, 2020

ಸಿನಿಮಾ

ಚಿರಂಜೀವಿ ಸರ್ಜ ನಿಧನ

ಬೆಂಗಳೂರು: ಕನ್ನಡದ ಯುವ ನಟ ಚಿರಂಜೀವಿ ಸರ್ಜ ನಿಧನ, ಚಿರಂಜೀವಿ ಸರ್ಜ(39) ಹೃದಯಾಘಾತ ದಿಂದ ನಿಧನರಾಗಿದ್ದಾರೆ.
ವಿವಾಹಿರಾಗಿ ಮೂರು ವರ್ಷಗಳು ಆಗಿತ್ತು. ವಾಯುಪುತ್ರ ಸಿನೇಮಾ ಮುಖಾಂತರ ಮನೆಮಾತಾಗಿದ್ದರು.

ಬಾಲಿವುಡ್ ನಟ ರಿಷಿ ಕಪೂರ್ ಇನ್ನಿಲ್ಲ

ಮುಂಬೈ: ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ಬಾಲಿವುಡ್‌ ಹಿರಿಯ ನಟ ರಿಷಿ ಕಪೂರ್ (67)‌ ಅವರು ಗುರುವಾರ ಬಳಗ್ಗೆ ಮೃತಪಟ್ಟಿದ್ದಾರೆ. ಅವರನ್ನು ಇಲ್ಲಿನ ಸರ್ ಎಚ್‌ಎನ್‌ ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಗೆ ಬುಧವಾರ ರಾತ್ರಿ ದಾಖಲಿಸಲಾಗಿತ್ತು.
2018ರಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಕಪೂರ್‌, ಅಮೆರಿಕದಲ್ಲಿ ಒಂದು ವರ್ಷಕಾಲ ಚಿಕಿತ್ಸೆ ಪಡದು ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಭಾರತಕ್ಕೆ ವಾಪಸ್‌ ಆಗಿದ್ದರು.
ಫೆಬ್ರವರಿಯಲ್ಲಿ ಅನಾರೋಗ್ಯಕ್ಕೆ ತುತ್ತಾಗಿದ್ದ ಅವರು ಎರಡು ಬಾರಿ ಆಸ್ಪತ್ರೆಗೆ ದಾಖಲಾಗಿ ಗುಣಮುಖರಾಗಿದ್ದರು.
ಅವರನ್ನು ಇಲ್ಲಿನ ಸರ್ ಎಚ್‌ಎನ್‌ ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಗೆ ಬುಧವಾರ ರಾತ್ರಿ ದಾಖಲಿಸಲಾಗಿತ್ತು.

ಇರ್ಫಾನ್ ಖಾನ್ ನಿಧನ

ಮುಂಬೈ(29ಎ/2020): ಅನಾರೋಗ್ಯದಿಂದ ಬಳಲುತ್ತಿದ್ದ ಹಿಂದಿ ಚಿತ್ರನಟ ಇರ್ಫಾನ್ ಖಾನ್ (53)ಬುಧವಾರ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ ಇರ್ಫಾನ್ ಆರೋಗ್ಯ ಕ್ಷೀಣಿಸಿದ ಹಿನ್ನೆಲೆಯಲ್ಲಿ ಮಂಗಳವಾರ ಮುಂಬೈನ ಕೋಕಿಲಾಬೆನ್ ಧೀರೂಬಾಯಿ ಅಂಬಾನಿ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ದಾಖಲಾಗಿದ್ದರು.ಖಾನ್ ಅವರು ಪತ್ನಿ ಸುತಾಪಾ ಸಿಕ್ದರ್ ಹಾಗೂ ಇಬ್ಬರು ಪುತ್ರರು ಸಹಿತ ಅಪಾರ ಬಂಧು ಬಳಗ, ಅಭಿಮಾನಿಗಳನ್ನು ಅಗಲಿದ್ದಾರೆ.
ಇರ್ಫಾನ್ ಖಾನ್ ತಾಯಿ ಶನಿವಾರ ರಾಜಸ್ಥಾನದ ಸ್ವಗೃಹದಲ್ಲಿ ಮೃತಪಟ್ಟರು. ಅವರಿಗೆ 95 ವರ್ಷ ವಯಸ್ಸಾಗಿತ್ತು. ಲಾಕ್‌ಡೌನ್‌ ಪರಿಣಾಮ ಅವರು ತಾಯಿಯ ಅಂತ್ಯ ಕ್ರಿಯೆಯಲ್ಲಿ ಪಾಲ್ಗೊಂಡಿರಲಿಲ್ಲ. ಮಂಗಳವಾರ ಇರ್ಫಾನ್‌ ತೀವ್ರ ಅನಾರೋಗ್ಯದಿಂದ ಮುಂಬೈನ ಆಸ್ಪತ್ರೆಗೆ ದಾಖಲಾಗಿದ್ದರು. 

ಕಾರಗೆಜ್ಜೆ ಬೆಡಗಿ ವೀಕ್ಷಾಪ್ರಕಾಶ್ ಗಟ್ಟಿ

ಮಂಗಳೂರು(27/2020ಏ): ಮಂಗಳೂರಿನಲ್ಲಿ ಅದೆಷ್ಟೋ ಬಾಲ ನಟ ನಟಿಯರು ಸಾಧನೆಯನ್ನ ಮಾಡಿದ್ದಾರೆ.ನಟನೆಯಲ್ಲಿ ಎಲ್ಲರ ಮನಸನ್ನೂ ಗೆಲ್ಲುತ್ತಾರೆ ಅಂತಹ ಪ್ರತಿಭೆಯಲ್ಲಿ ಈ ಬಾಲ ನಟಿಯು ಒಬ್ಬಳು.
ವೀಕ್ಷಾಪ್ರಕಾಶ್ ಗಟ್ಟಿ ಪಾಣೆಮಂಗಳೂರಿನ ನಂದಾವರದ ಆಶಾಪ್ರಕಾಶ್ ಗಟ್ಟಿ ದಂಪತಿಯ ಪುತ್ರಿ.ಎಸ್.ಎಲ್‌.ಎಂ.ಪಿ ವಿದ್ಯಾಲಯ ಪಾಣೆಮಂಗಳೂರಿನಲ್ಲಿ ನಾಲ್ಕನೇ ತರಗತಿಯಲ್ಲಿ ವಿದ್ಯಾಭ್ಯಾಸವನ್ನ ನಡೆಸುತ್ತಿದ್ದು,ಓದಿನ ಜೊತೆ ಜೊತೆಗೆ ಭರನಾಟ್ಯ ತರಗತಿಯನ್ನ ಪಡೆದುಕೊಂಡರು.ತನ್ನ ನಗುಮುಖದಲ್ಲೆ‌ ಎಲ್ಲರ ಮನಸನ್ನ ಗೆಲ್ಲುವ ಇವಳು ನಟನೆಯ ಕಡೆಗೆ ಹೆಜ್ಜೆ ಇಟ್ಟಳು.ಹರ್ಶಿತ್ ಸೋಮೇಶ್ವರ ಇವರ ನಿರ್ದೇಶನ ದಲ್ಲಿ ಮೋನಿಶ್ ಕುಮಾರ್ ಪಾವೂರು ಇವರ ಸಾಹಿತ್ಯದಲ್ಲಿ ತುಳುನಾಡ ಖ್ಯಾತ ಗಾಯಕ ಸಂತೋಷ್ ಬೇಂಕ್ಯ ಇವರ ಸ್ವರದಲ್ಲಿ ಮೂಡಿ ಬಂದ ಕಾರಗೆಜ್ಜೆ ಎಂಬ ತುಳು ಆಲ್ಬಮ್ ಸಾಂಗ್ ಗೆ ಬಾಲ ನಟ ಅಭಿಶೇಕ್ ಶೆಟ್ಟಿ ಯ ಜೊತೆ ನಾಯಕಿಯ ಪಾತ್ರವನ್ನ ಮಾಡಿ ಇಡೀ ಮಂಗಳೂರಿನಲ್ಲೇ ಮೆಚ್ಚುಗೆಯನ್ನ ಪಡೆದರು.ನಂತರ ಈ ಪುಟ್ಟ ಬಾಲಕಿಯ ನಟನೆಗೆ ಎಲ್ಲರೂ ಮನಸೋತು ಹಲವಾರು ಆಲ್ಬಮ್ ಸಾಂಗ್ ಗಳು ಇವರ ಕಡೆಗೆ ಬಂದವು.ರಚಿನ್ ಶೆಟ್ಟಿ ಹಾಗೂ ಅಭಿಶೇಕ್ ರಾವ್ ಇವರ ನಿರ್ದೇಶನದಲ್ಲಿ., ರಕ್ಷಣ್ ಮಾಡೂರು ಅವರ ಸಾಹಿತ್ಯದಲ್ಲಿ ,ಸಂತೋಷ್ ಬೇಂಕ್ಯ ಇವರ ಸ್ವರದಲ್ಲಿ ಮೂಡಿ ಬರಲಿರುವ ಪುಟ್ಟಕ್ಕ ಎಂಬ ಅದ್ಬುತ ಕಥೆಯುಳ್ಳ ಆಲ್ಬಮ್ ಸಾಂಗ್ ಗೆ ನಟನೆಯನ್ನ ಮಾಡಿದ್ದಾರೆ.
ಇದೇ ತಿಂಗಳ ಎಪ್ರಿಲ್ 27ಕ್ಕೆ ರಿಲೀಸ್ ಆಗಲಿದೆ.ನಿರ್ದೇಶಕ ಹರ್ಶಿತ್ ಸೋಮೇಶ್ವರ‌ ಇವರು ಕಾರಗೆಜ್ಜೆ-೨ ಮಾಡಲು ತಯಾರಿಯನ್ನ ನಡೆಸುತ್ತಿದ್ದಾರೆ.ಮುಂಬರುವ ತುಳು ಚಿತ್ರಗಳಲ್ಲಿ ಈ ಬಾಲ ನಟಿ ಬರಲಿದ್ದಾಳೆ ಎಂದು ಮಾತುಗಳೂ ಕೇಳಿ ಬರುತ್ತಿದೆ.
ಈ ಪುಟ್ಟ ವಯಸ್ಸಿನಲ್ಲಿಯೆ
ಅಭಿಮಾನಿಗಳನ್ನ ಸಂಪಾದಿಸುತ್ತಿದ್ದು‌ ಎಲ್ಲರ ಮನಸನ್ನ ಗೆದ್ದಿದ್ದಾಳೆ.

ನಟ ಬುಲೆಟ್ ಪ್ರಕಾಶ್ ನಿಧನ

ಬೆಂಗಳೂರು(6ಎ/2020): ಕನ್ನಡದ ಹಾಸ್ಯ ನಟ ಬುಲೇಟ್ ಪ್ರಕಾಶ್‌ ಅನಾರೋಗ್ಯದಿಂದ ಸೋಮವಾರ ನಿಧನರಾಗಿದ್ದಾರೆ.
ಕೆಲವು ದಿನಗಳಿಂದ ಗ್ಯಾಸ್ಟ್ರಿಕ್‌ ಸಮಸ್ಯೆ ಕಾಣಿಸಿಕೊಂಡ ಕಾರಣ ಬುಲೆಟ್‌ ಪ್ರಕಾಶ್ ಬೆಂಗಳೂರಿನ ಕನ್ನಿಂಗ್ ಹ್ಯಾಮ್‌‌ ರಸ್ತೆಯಲ್ಲಿನ ಪೋರ್ಟೀಸ್‌ ಆಸ್ಪತ್ರೆಯಲ್ಲಿ ಕಳೆದ ಐದು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು.
ಚಿಕಿತ್ಸೆ ಫಲಿಸದೆ ಬುಲೇಟ್‌ ಪ್ರಕಾಶ್‌ ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
 

ಕಟೀಲು ದೇವಸ್ಥಾನದ ಚಿನ್ನದ ಕಳಶ(ಕೊಡ)ದಲ್ಲಿ ತಾರೆ “ಶಿಲ್ಪ ಶೆಟ್ಟಿ” ಹೆಸರು

ಮೂಲ್ಕಿ (27ಸೆ/2019) : ಮುಂಬೈಯ ಬ್ರಹ್ಮಕಳಶೋತ್ಸವ ಸಮಿತಿಯವರು 12 ವರ್ಷಗಳ ಹಿಂದೆ ಕಟೀಲು ದೇವಳದಲ್ಲಿ ನಡೆದ ಬ್ರಹ್ಮಕಳಶೋತ್ಸವ ಸಂದರ್ಭ ನೀಡಿದ್ದ…

ಚಂದನವನದೆಡೆಗೆ ಸುಮಿತ್ರ ನಡಿಗೆ…

ಅಬ್ಬಕ್ಕ ನ್ಯೂಸ್(16-9-2019)ಮಂಗಳೂರು: ಚಂದನವನದಲ್ಲಿ ಅನೇಕ ರಾಜ್ಯಗಳ ಚೆಂದುಳ್ಳಿ ಚೆಲುವೆಯರು ತನ್ನ ನಟನೆಯ ಮೂಲಕ ನಿರಂತರ ಚಿತ್ತಾರ ಮೂಡಿಸುತ್ತಿದ್ದಾರೆ. ಇದೀಗ ಮುಂಬೈ…

ತೆಲುಗು ತಾರೆ,ಕರಾವಳಿಯ ಬೆಡಗಿ ಅನುಷ್ಕಾ ಶೆಟ್ಟಿ ಕನ್ನಡಿಗರ ಮನಸ್ಸ ಗೆದ್ದಾಗ

ಟಾಲಿವುಡ್ ನಟಿ ಅನುಷ್ಕಾ ಶೆಟ್ಟಿ ತಮ್ಮ ತಾಯಿಗೆ ಕನ್ನಡದಲ್ಲಿ ಹುಟ್ಟುಹಬ್ಬ ಶುಭಾಶಯ ತಿಳಿಸುವ ಮೂಲಕ ಕೋಟ್ಯಂತರ ಕನ್ನಡಿಗರ ಮನಸ್ಸು ಗೆದ್ದಿದ್ದಾರೆ….

ಕನ್ನಡ ಚಿತ್ರ ನಿರ್ಮಾಪಕ ಕಟಪಾಡಿ ಆಶ್ರಮದಲ್ಲಿ ನಿಧನ

ಉಡುಪಿ (26ಜೂ/2019): ಕನ್ನಡ ಚಿತ್ರ ನಿರ್ಮಾಪಕ, ಉದ್ಯಮಿ ಮಾಲೂರಿನ ಎಂ.ಆರ್ ಕೃಷ್ಣಪ್ಪ ಅವರು ಮಂಗಳವಾರ ನಸುಕಿನ ಜಾವ ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ನಿಧನ…

Related Post