January 23, 2021

Month: November 2019

ಮಸೀದಿ ಗಲಾಟೆ: ಅಧ್ಯಕ್ಷನ ಮೇಲೆ ತಲಾವಾರು ದಾಳಿ

ಮಂಗಳೂರು(30ನ/2019): ಗ್ರಾಮ ಪಂಚಾಯತ್ ಅಧ್ಯಕ್ಷನ ಮೇಲೆ ತಲ್ವಾರ್ ದಾಳಿ ನಡೆದ ಘಟನೆ ಬಂಟ್ವಾಳ ತಾಲೂಕಿನ ಕುಕ್ಕಾಜೆ ಮಂಚಿಯಲ್ಲಿ ನಡೆದಿದೆ.
ಇರಾ ಗ್ರಾಮ ಪಂಚಾಯತ್ ಅಧ್ಯಕ್ಷ ರಝಾಕ್ ಮೇಲೆ ಹಲ್ಲೆ ಯಾಗಿರುತ್ತದೆ.ಮಸೀದಿ ವಿಚಾರದಲ್ಲಿ ಎರಡು ತಂಡಗಳ ಮಧ್ಯೆ ಗಲಾಟೆ ಆಗಿದ್ದು ಇದರ ಮುಂದುವರಿದ ಭಾಗವಾಗಿ ಈ ಹಲ್ಲೆ ನಡೆದಿದೆ.
ಕ್ಲಿನಿಕ್ ಒಳಗೆ ಇದ್ದ ರಝಾಕ್ ಅಲ್ಲಗೆ ನುಗ್ಗಿ ಹಲ್ಲೆ ನಡೆಸಿದ ದುಷ್ಕರ್ಮಿಗಳು.ಏಕಾಏಕಿ ರಝಾಕ್ ಮೇಲೆ ತಲ್ವಾರ್ ದಾಳಿಯಿಂದ ಕೈ ಭಾಗಕ್ಕೆ ಗಂಭೀರ ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಪೊಲೀಸರ ಭೇಟಿ ನೀಡಿ ಪರಿಶೀಲನೆ ಮಾಡಿದ್ದರೆ.

169 ಮತಗಳಿಂದ ವಿಶ್ವಾಸ ಮತ ಗೆದ್ದ ಠಾಕ್ರೆ

ಮುಂಬೈ(30ನ/2019): ಮಹಾರಾಷ್ಟ್ರದಲ್ಲಿ ಅಸ್ತಿತ್ವಕ್ಕೆ ಬಂದಿರುವ ಶಿವಸೇನಾ, ಎನ್‌ಸಿಪಿ, ಕಾಂಗ್ರೆಸ್‌ ಪಕ್ಷದ ಮೈತ್ರಿ ಸರ್ಕಾರ ಶನಿವಾರ ವಿಧಾನಸಭೆಯಲ್ಲಿ ವಿಶ್ವಾಸಮತ ಗೆದ್ದಿದೆ.
ಮುಖ್ಯಮಂತ್ರಿ ಉದ್ದವ್‌ ಠಾಕ್ರೆ ವಿಶ್ವಾಸಮತ ಯಾಚನೆ ಮಾಡುವ ನಿರ್ಣಯವನ್ನು ಮಂಡಿಸಿದರು. ತಲೆ ಎಣಿಕೆ ಕಾರ್ಯ ನಡೆಯುತ್ತಿದ್ದಂತೆ ಬಿಜೆಪಿ ಸದಸ್ಯರು ಸದನದಿಂದ ಹೊರ ನಡೆದರು.
ವಿಶ್ವಾಸಮತ ಯಾಚನೆಗೂ ಮುನ್ನ ಹಂಗಾಮಿ ಸ್ಪೀಕರ್‌ ಆಗಿ ದೀಲಿಪ್‌ ಪಾಟೀಲ್‌ ಅವರನ್ನು ನೇಮಕ ಮಾಡಲಾಯಿತು. 
ಶಿವಸೇನಾ, ಎನ್‌ಸಿಪಿ, ಕಾಂಗ್ರೆಸ್‌ ಮೈತ್ರಿ ಸರ್ಕಾರದ ಪರವಾಗಿ 169 ಮತಗಳು ಬಿದ್ದವು.
288 ಸ್ಥಾನಗಳ ಪೈಕಿ ಬಿಜೆಪಿ 105, ಶಿವಸೇನಾ 56, ಕಾಂಗ್ರೆಸ್‌ 44, ಎನ್‌ಸಿಪಿ 54, ಇತರರು 29 ಸ್ಥಾನಗಳನ್ನು ಪಡೆದಿದ್ದಾರೆ. ಬಹುಮತ ಸಾಬೀತುಪಡಿಸಲು 145 ಮತಗಳು ಬೇಕಿದ್ದವು.

ಪಡುಬಿದ್ರೆ ಕಾರು ಬಸ್ಸು ಅಪಘಾತ ನಾಲ್ವರು ಗಂಭೀರ

ಪಡುಬಿದ್ರೆ(ನ25/2019): ಕಾರು ಹಾಗೂ ಖಾಸಗಿ ಬಸ್ ನಡುವೆ ನಡೆದ ಭೀಕರ ಅಪಘಾತದಲ್ಲಿ ನಾಲ್ವರು ಗಂಭೀರ ಗಾಯಗೊಂಡಿರುವ ಘಟನೆ ರಾಷ್ಟೀಯ ಹೆದ್ದಾರಿ 66 ರ ಬೀಡಿನಕರೆ ಬಳಿ ನಡೆದಿದೆ.
ಮಂಗಳೂರಿನಿಂದ ಉಡುಪಿ ಕಡೆಗೆ ಹೋಗುವ ಬಲೆನೊ ಕಾರೊಂದು ಹಟಾತ್ತನೆ ಡಿವೈಡರ್ ಏರಿ ತಿರುಗಿ ಮಂಗಳೂರು ಕಡೆಗೆ ಹೋಗುವ ವೇಗದೂತ ಬಸ್ಸಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ನಾಲ್ವರು ಗಂಭೀರ ಗಾಯಗೊಂಡಿದ್ದು, ಅವರನ್ನುನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇನ್ನು ಘಟನೆ ನಡೆದ ತಕ್ಷಣ ಗಾಯಗಳುಗಳನ್ನು ಕಾರಿನಿಂದ ಹೊರ ತೆಗೆದು ಆಸ್ಪತ್ರೆಗೆ ಸಾಗಿಸಲು ಸಾರ್ವಜನಿಕರು ಸಹಕರಿಸಿದರು. ಪಡುಬಿದ್ರಿ ಠಾಣಾಧಿಕಾರಿ ಮತ್ತು ಪೊಲೀಸರು ಅಪಘಾತ ಸ್ಥಳಕ್ಕೆ ಧಾವಿಸಿ ಸುಗಮ ಸಂಚಾರಕ್ಕೆ ವ್ಯವಸ್ಥೆಯನ್ನು ಮಾಡಿಕೊಟ್ಟರು.

ಫರಂಗಿಪೇಟೆಯಲ್ಲಿ ಮಾತೃನಮನ 

ಬಂಟ್ವಾಳ(25ನ/2019): ಮೊದಲು ತಮ್ಮ ತಮ್ಮ ಮನೆಯನ್ನು ದೇವಾಲಯದಂತೆ ಮಾಡಬೇಕು. ಮಕ್ಕಳಿಗೆ ಸಂಸ್ಕಾರ ಕಲಿಸಲು ಕಲಿಕೆಗೆ ಬೇಕಾದ ಮೊದಲ ಪಾಠ ಶಾಲೆ ಮನೆಯೇ ಆಗಬೇಕು. ಮನೆಗೆ ಬರುವ ಅತಿಥಿಗಳು ಬರುವಾಗ ಅವರನ್ನು ಸತ್ಕರಿಸುವ ಅವರಿಗೆ ಒಳ್ಳೆಯ ಆಧರಾತಿಥ್ಯವನ್ನು ನೀಡುವ ಕ್ರಮವೂ ಮನೆಯಿಂದಲೇ ಮಕ್ಕಳಿಗೆ ಬರಬೇಕು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಖಿಲ ಬಾರತ  ಕುಟುಂಬ ಪ್ರಬೋಧಿನಿ ಸಂಯೋಜಕರಾದ   ಕಜಂಪಾಡಿ ಸುಬ್ರಹ್ಮಣ್ಯ ಭಟ್ ತಿಳಿಸಿದರು.ಅವರು ಪುದು ಗ್ರಾಮದ ನಾಗರಕ್ತೇಶ್ವರಿ ಕ್ಷೇತ್ರದಲ್ಲಿ ಜನವರಿ ೧೬ರಂದು ನಡೆಯಲಿರುವ ಅಷ್ಟಪವಿತ್ರ ನಾಗಮಂಡಲೋತ್ಸವದ ಪ್ರಯುಕ್ತ ಫರಂಗಿಪೇಟೆ ಸೇವಾಂಜಲಿ ಸಭಾಭವನದಲ್ಲಿ ಆದಿತ್ಯವಾರ ನಡೆದ ಮಾತೃನಮನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಧರ್ಮದ ಹಿಂದೆ ಇರುವವರು ಬೇಕು. ಕಲಿಯುಗದಲ್ಲಿ ತಪ್ಪುಗಳನ್ನು ಕಡಿಮೆ ಮಾಡುವ ಸಂಘಟನೆಗಳಿಂದ ಒಳ್ಳೊಳ್ಳೆ ಕಾರ್ಯಕ್ರಮಗಳು ನಡೆಯುತ್ತಿದ್ದು ಇದರಿಂದ ಸಮಾಜ ಅಭಿವೃದ್ಧಿಯಾಗುತ್ತದೆ ಎಂದರು.ಗೌರವ ಮಾರ್ಗದರ್ಶಕರಾಗಿ ಪರಮಪೂಜ್ಯ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಿದರು. ಪ್ರದಾನ ಸಂಚಾಲಕರಾಗಿ ತೇವು ತಾರಾನಾಥ ಕೊಟ್ಟಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದ ಉದ್ಘಾಟನೆಗೂ ಮೊದಲು ಜ್ಯೋತಿಗುಡ್ಡೆ ದುರ್ಗಾಪರಮೇಶ್ವರಿ ದೇವಸ್ಥಾನದ ಸೇವಾ ಬಳಗದವರಿಂದ ವಿಶೇಷ ಸ್ವರ ಮೇಳ ಕಾರ್ಯಕ್ರಮ ನಡೆಯಿತು. ತಬಲಾದಲ್ಲಿ ಉದಯ ಕುಮಾರ್ ಜ್ಯೋತಿಗುಡ್ಡೆ, ಕೊಳಲು ವಾದನದಲ್ಲಿ ವೇಣುಗೋಪಾಲ್, ಸಂಗೀತದಲ್ಲಿ ಸ್ವರೇಣ್ಯ ಜ್ಯೋತಿಗುಡ್ಡೆ, ತಾಳದಲ್ಲಿ ಶ್ರೀನಾಥ್ ಗುಂಡಿಬೆಟ್ಟು ಸಹಕರಿಸಿದ್ದರು. ಗಣ್ಯ ಅತಿಥಿಗಳಿಂದ ಭಾರತ ಮಾತೆಗೆ ಪುಷ್ಪಾರ್ಚನೆ ಅರ್ಪಿಸಲಾಯಿತು. ಆಕರ್ಷಕ ರಂಗೋಲಿ ಹಾಗು  ಅರಸಿನ ಕುಂಕುಮ ಪುಷ್ಪ ದೊಂದಿ ಗೆಸಾಂಪ್ರದಾಯಿಕ ವಾಗಿ  ಸ್ವಾಗತಿಸಿದ್ದು  ವಿಶೇಷ ವಾಗಿತ್ತು  ನಾಗಮಂಡಲೋತ್ಸವಮಹಿಳಾ ಸಮಿತಿ ಸಂಚಾಲಕಿ ಜಯಶ್ರೀ ಕರ್ಕೇರ ಸ್ವಾಗತಿಸಿದರು. ಸಹ ಸಂಚಾಲಕಿ ಆಶಾಚಂದ್ರ ಕಾರ್ಯಕ್ರಮ ನಿರೂಪಿಸಿದರು. ನಾಗಮಂಡಲೋತ್ಸವ ಸಮಿತಿಯ ಸಹ ಸಂಚಾಲಕಿಯರಾದ  ಶೈಲಜಾ ಶೆಟ್ಟಿ, ಆಶಾನಯನ , ಲಾವಣ್ಯಸುರೇಶ್, ಉಮಾಚಂದ್ರಶೇಖರ್, ಗೀತಾ , ಚಂದ್ರಕಲಾ ನಾಣ್ಯ, ಹರಿಣಾಕ್ಷಿ ಗಟ್ಟಿ , ಹರಿಣಾಕ್ಷಿ  ಸದಾನಂದ ನೆತ್ತರಕೆರೆ , ರಾಧಿಕಾ , ಸುನೀತಾ ವಿಠ್ಠಲ , ಅಮಿತಾ ,ಶಾಲಿನಿ , ಲೀಲಾವತಿ , ಉಮಾ ಲಿಂಗಪ್ಪ , ಗೀತಾ ದಯಾನಂದ , ಬೇಬಿ ಆನಂದ  ಈ ಸಂದರ್ಭ ಉಪಸ್ಥಿತರಿದ್ದರು. ಸಹಸಂಚಾಲಕಿ ಕಮಲಾರಮೇಶ್ ಧನ್ಯವಾದ ನೆರವೇರಿಸಿದರು. ಗೌರವಾಧ್ಯಕ್ಷ ಐತಪ್ಪ ಆಳ್ವ ಸುಜೀರುಗುತ್ತು, ಅಧ್ಯಕ್ಷ ಪ್ರಕಾಶ್ಚಂದ್ರ ರೈ ದೇವಸ್ಯ, ಕಾರ್ಯಾಧ್ಯಕ್ಷ ಚಂದ್ರಹಾಸ್ ಶೆಟ್ಟಿ ರಂಗೋಲಿ, ಪ್ರದಾನ ಕಾರ್ಯದರ್ಶಿ ಮನೋಜ್ ಆಚಾರ್ಯ ನಾಣ್ಯ, ಕೋಶಾಧಿಕಾರಿ ಪದ್ಮನಾಭ ಶೆಟ್ಟಿ ಪುಂಚಮೆ, ಗೌರವ ಸಲಹೆಗಾರ ವಜ್ರನಾಭ ಶೆಟ್ಟಿ ಅರ್ಕುಳ ಬೀಡು,  ಸದಾನಂದ ಆಳ್ವ ಕಂಪ, ರಾಧಾಕೃಷ್ಣ ತಂತ್ರಿ ಪೊಳಲಿ , ರಾಜಶೇಖರ್ ರೈ ಕಳ್ಳಿಗೆ, , ಕೊಡಮಣ್ಣು ಕಾಂತಪ್ಪ ಶೆಟ್ಟಿ, ಚಂದ್ರ ಶೇಖರ ತೇಜ  , ಪದ್ಮನಾಭ  ಬಂಗೇರ  ಮಾರಿಪಳ್ಳ , ಮಾಧವ ನಾಣ್ಯ, ಎಂ. ಆರ್. ನಾಯರ್,  ಕೃಷ್ಣ ಕುಮಾರ ಪೂಂಜಾ , ವಿಠ್ಠಲ ಶೆಟ್ಟಿ ನೀರೊಲ್ಬ್ , ಅರುಣ್ ಆರ್ ಶೆಟ್ಟಿ ಪೆರ್ಲಬೈಲ್ , ಪ್ರಕಾಶ್ ಕಿದೆಬೆಟ್ಟು ,ಕ್ಷೇತ್ರ ದ  ಅಧ್ಯಕ್ಷ ಪೂವಪ್ಪ ಬಂಗೇರ  ನಾಣ್ಯ ,  ವಿನಯ ಕಡೆಗೋಳಿ , ಜಗದೀಶ್ ಕಡೆಗೋಳಿ   ಈ ಸಂದರ್ಭ ಉಪಸ್ಥಿತರಿದ್ದರು.

ಮುಡಿಪು: ಸೂರಜ್ ಕಲಾಸಿರಿ-2019 ಉದ್ಘಾಟನೆ

ಉಳ್ಳಾಲ(23ನ/2019): ಮುಡಿಪುವಿನ ಸೂರಜ್ ಸಮೂಹ ವಿದ್ಯಾಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಎರಡು ದಿನಗಳ ಕಾಲ ನಡೆಯಲಿರುವ “ಸೂರಜ್ ಕಲಾಸಿರಿ” -2019 ನ್ನು ಶನಿವಾರ ಉದ್ಘಾಟಿಸಿ ಮಾತನಾಡಿದ ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಪಿ.ಎಸ್. ಯಡಪಡಿತ್ತಾಯ
“ಪ್ರತಿಯೊಂದು ಸಂಸ್ಥೆಗೆ ಸಾಂಸ್ಕತಿಕ ಹಾಗೂ ಸಾಮಾಜಿಕ ಜವಬ್ದಾರಿಯಿದ್ದು ಅದನ್ನು ಉಳಿಸುವ ನಿಟ್ಟಿನಲ್ಲಿ ಸೂರಜ್ ವಿದ್ಯಾ ಸಮೂಹ ಸಂಸ್ಥೆಯ ಕಾಳಜಿ ಶ್ಲಾಘನೀಯ” ಎಂದು ಹೇಳಿದರು.
ಮಕ್ಕಳು ಮೊಬೈಲ್ ಉಪಯೋಗಿಸುವುದು ತಪ್ಪಲ್ಲ, ಆದರೆ ಮೊಬೈಲ್ ಉಪಯೋಗದ ಮೇಲೆ ಸರಿಯಾದ ನಿಯಂತ್ರಣ ಇರಬೇಕು. ಹೇಗೆಂದರೆ ಔಷಧಿ ಅತಿಯಾಗಿ ತೆಗೆದುಕೊಂಡರೆ ಅದು ವಿಷವಾಗುವುದು, ವಿಷ ಮಿತವಾಗಿ ತೆಗೆದುಕೊಂಡರೆ ಅದು ಔಷಧಿಯಾಗುತ್ತದೆ. ಹಾಗಾಗಿ ಸಂಸ್ಕಾರ ಸಂಸ್ಕ್ಋತಿ ಉಳಿಸುವ ಕಾರ್ಯದಲ್ಲಿ ಸದಾ ಪಾಲ್ಗೊಳ್ಳುತ್ತಾ ಬದುಕಿನುದ್ದಕ್ಕೂ ಜಾಗೃತಿಯಿಂದ ಮುನ್ನಡೆಯಬೇಕು ಎಂದರು.
ಕಾರ್ಯಕ್ರಮದಲ್ಲಿ ಉಳ್ಳಾಲ ಸಯ್ಯಿದ್ ಮದನಿ ದರ್ಗಾ ಸಮಿತಿ ಅಧ್ಯಕ್ಷ ಅಬ್ದುಲ್ ರಶೀದ್ ಹಾಜಿ, ಪೆರ್ಮನ್ನೂರು ಸಂತ ಸೆಬೆಸ್ಟಿಯನ್ ಚರ್ಚ್ ಧರ್ಮಗುರು ರೆ.ಫಾ.ಡಾ. ಜೆ.ಬಿ. ಸಲ್ದಾನ್ಹ, ಮಂಗಳೂರಿನ ಅರವಿಂದ್ ಮೋಟಾರ್ಸ್ ಆಡಳಿತ ನಿರ್ದೇಶಕ ಆರೂರು ಕಿಶೋರ್ ರಾವ್, ಎಸಿಪಿ ಕೋದಂಡರಾಮ, ಕೊಂಕಣಿ ಅಕಾಡೆಮಿ ಸದಸ್ಯ ಅರುಣ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಶಾಲಾ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಜುಬೇರ್ ಹಾಗೂ
ಸಂಚಾಲಕಿ ಹೇಮಲತಾ ರೇವಣ್ಕರ್
ಉಪಸ್ಥಿತರಿದ್ದರು.
ಸೂರಜ್ ಸಮೂಹ ಸಂಸ್ಥೆಯ ಅಧ್ಯಕ್ಷ ಮಂಜುನಾಥ್ ಎಸ್. ರೇವಣ್ಕರ್ ಸ್ವಾಗತಿಸಿದರು. ಸುಧಾಕರ ರಾವ್ ಪೇಜಾವರ ಕಾರ್ಯಕ್ರಮ‌ ನಿರೂಪಿಸಿದರು.
ಜ್ಞಾನದೀಪ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಸೆಲ್ವಿಯಾ ಅಮ್ಮಣ್ಣ ವಂದಿಸಿದರು.
ಇದಕ್ಕೂ ಮುನ್ನ ಮುಡಿಪು ಜಂಕ್ಷನ್ ನಿಂದ ಸೂರಜ್ ಕಲಾಸಿರಿ ನಡೆಯುವ ಗುಲಾಬಿ ಶ್ರೀಪಾದ ವೇದಿಕೆ ತನಕ
ಚೆಂಡೆ, ಕುಣಿತ, ಭಜನೆ, ದಫ್, ರಾಜ್ಯದ ವಿವಿಧ ಕಲಾಪ್ರಕಾರಗಳ ನೃತ್ಯ ಹಾಗೂ ಸ್ಕೌಟ್ಸ್ ಗೈಡ್ಸ್ ವಿದ್ಯಾರ್ಥಿಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು.

ಏನಾಜೆ ಮಸೀದಿಯಲ್ಲಿ ಸಂಭ್ರಮದ ‘ಮೀಲಾದ್ ಫೆಸ್ಟ್ 2019’

ಬಂಟ್ವಾಳ(ನ23/2019): ನಾವು ಪರಸ್ಪರ ಪ್ರೀತಿ, ಸೌಹಾರ್ದ, ಬಾಂಧವ್ಯದಿಂದ ಕೂಡಿ ಬಾಳಬೇಕು. ಇದುವೇ ಇಸ್ಲಾಂ ಧರ್ಮದ ಪ್ರವಾದಿ ಮುಹಮ್ಮದ್ (ಸ.ಅ.) ರ ಇಚ್ಛೆಯಾಗಿದೆ ಎಂದು ಗಡಿಯಾರ ಜುಮಾ ಮಸೀದಿಯ ಖತೀಬ್ ಇಬ್ರಾಹಿಂ ದಾರಿಮಿ ಹೇಳಿದ್ದಾರೆ. ಅವರು ಬಂಟ್ವಾಳ ತಾಲೂಕಿನ ಬುಡೋಳಿ ಏನಾಜೆ ಮುನೀರುಲ್ ಇಸ್ಲಾಂ ಎಜುಕೇಶನಲ್ ಸೆಂಟರ್ (ರಿ) ವತಿಯಿಂದ ಪ್ರವಾದಿ ಮುಹಮ್ಮದ್ (ಸ.ಅ.) ರ ಜನ್ಮದಿನಾಚರಣೆಯ ತಿಂಗಳಿನ ಪ್ರಯುಕ್ತ ಏನಾಜೆ ಮಸೀದಿ ವಠಾರದಲ್ಲಿ ನಡೆದ ‘ಮೀಲಾದ್ ಫೆಸ್ಟ್ -2019’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡಿ ಬದುಕುವುದೇ ಜೀವನ. ಇಸ್ಲಾಂ ಧರ್ಮ ಹೇಳಿದ ರೀತಿಯಲ್ಲಿ ಜೀವನ ಸಾಗಿಸುವುದು ನಮ್ಮ ಕರ್ತವ್ಯ ಅಂದರು. ಇನ್ನು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮುಖ್ಯ ಗುರು ಅಬ್ದುಲ್ ಮಜೀದ್ ದಾರಿಮಿ, ಪ್ರವಾದಿಯವರ ಜೀವನದ ಹಾದಿ ನಮಗೆ ಸದಾ ಪ್ರೇರಣೆ. ನಬಿ ಜನ್ಮದಿನಾಚರಣೆ ಪ್ರಯುಕ್ತ ವಿವಿಧ ಸ್ಪರ್ಧೆಗಳನ್ನು ಆಯೋಜಿಸುವ ಮೂಲಕ ಮಕ್ಕಳ ಪ್ರತಿಭೆಗೆ ಸೂಕ್ತ ವೇದಿಕೆ ಕೊಟ್ಟಂತಾಗುತ್ತದೆ ಅಂದರು. ಕಾರ್ಯಕ್ರಮದ ಮುಂಚೆ ಏನಾಜೆ ಮಸೀದಿಯಲ್ಲಿ ಮೌಲೂದ್ ಪಾರಾಯಣ ನಡೆಯಿತು. ಎರಡನೇ ತರಗತಿಯ ಮೂರು ದರ್ಸ್ ವಿದ್ಯಾರ್ಥಿಗಳಿಂದ ಬುರ್ದಾ ಕಾರ್ಯಕ್ರಮ ಮನಸೆಳೆಯಿತು. ದರ್ಸ್ ವಿದ್ಯಾರ್ಥಿನಿ ಹಫೀಝಾ ರಚಿಸಿದ ಇಸ್ಲಾಮಿಕ್‌ ಕಲಾಕೃತಿ ಬಿಡುಗಡೆಗೊಂಡಿತು. ಇದೇ ವೇಳೆ ವಿವಿಧ ವಿಭಾಗಗಳಲ್ಲಿ ನಡೆದ ಸ್ಫರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ಹಾಗೂ ಸರ್ಟಿಫಿಕೆಟ್ ವಿತರಿಸಿ ಗೌರವಿಸಲಾಯಿತು. ಇದೇ ವೇಳೆ ಏನಾಜೆ ದರ್ಸ್ ನ ಮೂವರು ಅಧ್ಯಾಪಕರನ್ನು ಗೌರವಿಸಲಾಯಿತು. ಮುಖ್ಯ ಅತಿಥಿಗಳಾಗಿ ಪಿ.ಕೆ.ಅಬ್ಬು ಹಾಜಿ, ಬಶೀರ್ ಏನಾಜೆ, ಉಮರ್ ಏನಾಜೆ, ಅಶ್ರಫ್ ಮುಸ್ಲಿಯಾರ್, ಅಬೂಬಕ್ಕರ್ ಸಿದ್ದೀಕ್, ಇಸ್ಮಾಯಿಲ್ ಈಚು, ಮುಹಮ್ಮದ್ ಅಶ್ರಫ್ ಸತ್ತಿಕಲ್ಲು, ಇಸ್ಮಾಯಿಲ್, ಹನೀಫ್ ದರ್ಸಿ, ಅಬ್ದುಲ್ಲಾ ಅನಿತಾ ಸೇರಿ ಮುಂತಾದ ಗಣ್ಯರು ಉಪಸ್ಥಿತರಿದ್ದರು. ಮಾಜಿ ಅಧ್ಯಕ್ಷರು ಕೂಡಾ ಉಪಸ್ಥಿತರಿದ್ದರು. ಕೈಸ್ ಅಹ್ಮದ್ ಕಿರಾಅತ್ ಪಠಿಸಿದರು. ಹಿರಿಯ ಅಧ್ಯಾಪಕ ಉಸ್ಮಾನ್ ದಾರಿಮಿ ಸ್ವಾಗತಿಸಿದರು. ಪತ್ರಕರ್ತ ಶಂಶೀರ್ ಬುಡೋಳಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಕೊನೆಗೆ ಅನ್ನದಾನ ಮಾಡಲಾಯಿತು.

ಸತೀಶ್ ಪಟ್ಲರಿಗೆ ಅವಮಾನ, ರಂಗಸ್ಥಳದಿಂದ ಕೆಳಗಿಳಿಸಿದ ಮೇಳದ ವ್ಯವಸ್ಥಾಪಕ

ಕಟೀಲು(23ನ/2019): ಕಟೀಲು ಶ್ರೀ ದುರ್ಗಾಪರಮೇಶ್ವರಿ ಮೇಳ ಶ್ರೀಕ್ಷೇತ್ರದಲ್ಲಿ ಶುಕ್ರವಾರ ಸಂಜೆ ವೈಭವದಿಂದ ಗೆಜ್ಜೆ ಪೂಜೆ ನಡೆದಿದ್ದು, ಈ ವರ್ಷದ ತಿರುಗಾಟಕ್ಕೆ ಚಾಲನೆ ನೀಡಲಾಯಿತು. ಕಟೀಲು ಶ್ರೀ ದೇವಿಯ ಗರ್ಭಗುಡಿಯ ಮುಂದೆ ಕಲಾವಿದರಿಗೆ ದೇವಳದ ಆರ್ಚಕ ಅನಂತಪದ್ಮನಾಭ ಅಸ್ರಣ್ಣ ಗೆಜ್ಜೆಗಳನ್ನು ನೀಡುವ ಈ ವರ್ಷದ ತಿರುಗಾಟಕ್ಕೆ ಚಾಲನೆ ನೀಡಲಾಯಿತು.
ಭಾಗವತಿಕೆ ನಡೆಸಲು ರಂಗಸ್ಥಳಕ್ಕೆ ಬಂದ ಪಟ್ಲ ಸತೀಶ ಶೆಟ್ಟಿಯನ್ನು ಭಾಗವತಿಕೆ ನಡೆಸಲು ಬಿಡದೆ ವಾಪಸ್ ಕಳುಹಿಸಲಾಯಿತು. ಇದು ಯಕ್ಷಗಾನ ಪ್ರೇಮಿಗಳಿಗೆ ಬೇಸರ ಉಂಟುಮಾಡಿದ್ರೆ, ಪಟ್ಲ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಭಾಗವತಿಕೆ ನಡೆಸಲು ಬಿಡದೆ ಹೊರಕ್ಕೆ ಕಳುಹಿಸಿದ ಬಳಿಕ ಸತೀಸ್ ಪಟ್ಲ ಅವರು ಮೌನವಾಗಿ ಕಟೀಲು ಕ್ಷೇತ್ರದಲ್ಲಿ ದೇವರಿಗೆ ನಮಸ್ಕರಿಸಿ ಅಲ್ಲಿಂದ ಹೊರಟುಹೋಗಿದ್ದಾರೆ ಎನ್ನಲಾಗಿದೆ.
ಕಟೀಲು ಮೇಳದಲ್ಲಿ ಕಲಾವಿದರ ಶೋಷಣೆಯಾಗುತ್ತಿದೆ, ಸಂಬಳ ನೀಡದೆ ಸತಾಯಿಸುತ್ತಿದ್ದಾರೆಂದು ಮೇಳದಿಂದ ಹೊರಹಾಕಲ್ಪಟ್ಟ ಕಲಾವಿದರು ಸೇರಿ ಎರಡು ವರ್ಷಗಳ ಹಿಂದೆ ಹೈಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆ ಬಳಿಕ, ಯಕ್ಷಗಾನ ಮೇಳವನ್ನು ಸಾರ್ವಜನಿಕ ಹರಾಜು ನಡೆಸುವಂತೆ ಆರು ತಿಂಗಳ ಹಿಂದೆ ಕೋರ್ಟ್ ಆದೇಶ ನೀಡಿತ್ತು. ಆದರೆ ಯಕ್ಷಗಾನ ಮೇಳಕ್ಕೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಅವರನ್ನು ಮೇಲ್ವಿಚಾರಣೆಗೆ ನೇಮಿಸಿ ಹೈಕೋರ್ಟ್ ಬುಧವಾರ ಮಧ್ಯಂತರ ಆದೇಶ ನೀಡಿತ್ತು.

ಫಡಣವೀಸ್ ಮತ್ತೆ ಮುಖ್ಯಮಂತ್ರಿ ,ಎನ್‌ಸಿಪಿ ಉಪಮುಖ್ಯಮಂತ್ರಿ

ಮುಂಬೈ(23ನ/2019): ಮಹಾರಾಷ್ಟ್ರದಲ್ಲಿ ಇಂದು ಮುಂಜಾನೆ ನಡೆದ ರಾಜಕೀಯ ಕ್ಷಿಪ್ರ ಬೆಳವಣಿಗೆಯಲ್ಲಿ ಮುಖ್ಯಮಂತ್ರಿಯಾಗಿ ಎರಡನೇ ಬಾರಿಗೆ ರಾಜ್ಯದ ಚುಕ್ಕಾಣಿ ಹಿಡಿದಿರುವ ದೇವೇಂದ್ರ ಫಡಣವೀಸ್ ಮತ್ತು ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಎನ್‌ಸಿಪಿಯ ಅಜಿತ್ ಪವಾರ್ ಅವರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ. 
ಶಿವಸೇನಾ-ಎನ್‌ಸಿಪಿ-ಕಾಂಗ್ರೆಸ್ ಪಕ್ಷಗಳು ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಲಿವೆ ಮತ್ತು ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ರಾಜ್ಯದ ಮುಖ್ಯಮಂತ್ರಿಯಾಗಲಿದ್ದಾರೆ ಎನ್ನುವ ಮಾತುಗಳು ಈ ಮೂಲಕ ಸುಳ್ಳಾಗಿವೆ. ಬೆಳ್ಳಂಬೆಳಗ್ಗೆಯೇ ರಾಜಭವನಕ್ಕೆ ದೌಡಾಯಿಸಿದ್ದ ಎನ್‌ಸಿಪಿ ಮತ್ತು ಬಿಜೆಪಿ ಸೇರಿ ನೂತನ ಸರ್ಕಾರವನ್ನು ರಚಿಸುವ ಮೂಲಕ ಶಾಕ್ ನೀಡಿವೆ. ದೇವೇಂದ್ರ ಫಡಣವೀಸ್ ಎರಡನೇ ಅವಧಿಗೆ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಅಯ್ಯಪ್ಪ ಸ್ವಾಮಿ ಶಿಬಿರದಲ್ಲಿ ಗುರುಸ್ವಾಮಿ ನಿಧನ

ಉಳ್ಳಾಲ(22ನ/2019): ಅಯ್ಯಪ್ಪ ಮಾಲಾಧಾರಿ ಗುರುಸ್ವಾಮಿಯೊಬ್ಬರು ಅಯ್ಯಪ್ಪನನ್ನು ಪೂಜಿಸುತ್ತಿದ್ದ ಶಿಭಿರದಲ್ಲಿಯೇ ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿದ ಘಟನೆ ಮಾಡೂರು ಎಂಬಲ್ಲಿ ನಡೆದಿದೆ.

ಆನಂದ ಎಂ.ಕೆ(62) ಮೃತಪಟ್ಟ ಗುರುಸ್ವಾಮಿ. ಕೆಲ ದಿನಗಳ ಹಿಂದಷ್ಟೇ ಅಯ್ಯಪ್ಪ ಮಾಲೆ ಧರಿಸಿದ್ದ ಇವರು ಮಾಡೂರು ಕೊರಗಜ್ಜ ಸೇವಾ ಸಮಿತಿ ಬಳಿ ತಾತ್ಕಾಲಿಕವಾಗಿ ನಿರ್ಮಿಸಿದ್ದ ಅಯ್ಯಪ್ಪ ಶಿಭಿರದಲ್ಲಿಯಲ್ಲಿ ವೃತಾಚರಣೆ ಮಾಡುತ್ತಿದ್ದರು. ಗುರುಸ್ವಾಮಿಯಾಗಿದ್ದ ಇವರು ಗುರುವಾರ ರಾತ್ರಿ ಎಂದಿನಂತೆ ಕಿರಿಯ ಸ್ವಾಮಿಗಳ ಜೊತೆ ಅಯ್ಯಪ್ಪ ಸ್ವಾಮಿಯ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದ್ದರು‌. ಆದರೆ ನಿದ್ದೆಗೆ ಜಾರಿದ ಬಳಿಕ ಮಲಗಿದಲ್ಲೇ ಹೃದಯಾಘಾತವಾಗಿದೆ ಎನ್ನಲಾಗಿದೆ. ಬೆಳಿಗ್ಗೆ ಇತರೆ ಸ್ವಾಮಿಗಳು ಎಬ್ಬಿಸಲು ಮುಂದಾಗಿದ್ದು, ಈ ವೇಳೆ ಏಳದೇ ಇದ್ದಾಗ ತಕ್ಷಣ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ ಆಸ್ಪತ್ರೆಯಲ್ಲಿ ವೈದ್ಯರು ಮೃತಪಟ್ಟಿರುವುದಾಗಿ ಖಚಿತಪಡಿಸಿದ್ದಾರೆ. ಮೃತ ಆನಂದ ಅವರ ಅಂತ್ಯಕ್ರಿಯೆಯನ್ನು ಅವರ ಸ್ವಗೃಹವಾದ ಮಾಡೂರಿನಲ್ಲಿ ನೆರವೇರಿಸಿದ್ದು, ಕುಟುಂಬಿಕರು, ಮಾಲಾಧಾರಿಗಳು ಸೇರಿದಂತೆ ಹಲವು ಗಣ್ಯರು ಮೃತರ ಅಂತಿಮ ದರ್ಶನ ಪಡೆದರು.
ಆನಂದ ಗುರುಸ್ವಾಮಿಗಳು ಮಾಡೂರು ಕೊರಗಜ್ಜ ಸೇವಾ ಸಮಿತಿಯ ಉಪಾಧ್ಯಕ್ಷರೂ ಆಗಿದ್ದರು. ಮೃತರು ಪತ್ನಿ, ಓರ್ವ ಪುತ್ರ, ಪುತ್ರಿ, ಮೊಮ್ಮಗಳನ್ನು ಅಗಲಿದ್ದಾರೆ.

“ಸ್ಟೈಲಿಂಗ್ ಅಟ್ ದ ಟಾಪ್”: ಡಿ.ವೀರೇಂದ್ರ ಹೆಗ್ಗಡೆಯವರಿಂದ ಕನ್ನಡ ಕೃತಿ ಬಿಡುಗಡೆ

ಧರ್ಮಸ್ಥಳ(ನ20/2019): ಹೇರ್ ಸ್ಟೈಲೋ ಮೂಲಕ ಅಂತರಾಷ್ಟ್ರೀಯ ಹಿರಿಮೆಗೆ ಪಾತ್ರರಾದ ಮುಂಬಯಿನ ಖ್ಯಾತ ಕೇಶ ವಿನ್ಯಾಸಕಾರ, ಶಿವಾ’ಸ್ ಹೇರ್ ಡಿಝೈನರ್’ಸ್ ಪ್ರೈವೇಟ್ ಲಿಮಿಟೆಡ್‌ನ ಆಡಳಿತ ನಿರ್ದೇಶಕ ಡಾ| ಶಿವರಾಮ ಕೃಷ್ಣ ಭಂಡಾರಿ ಅವರ `ಸ್ಟೈಲಿಂಗ್ ಅಟ್ ದ ಟಾಪ್’ ಕನ್ನಡ ಕೃತಿಯನ್ನು ಇಂದಿಲ್ಲಿ ಸಂಜೆ ಶ್ರೀ ಕ್ಷೇತ್ರ ಧರ್ಮಸ್ಥಳದ ಖಾವಂದರ ಬೀಡುನಲ್ಲಿ ಧರ್ಮಾಧಿಕಾರಿ ಪದ್ಮಭೂಷಣ ಡಾ| ಡಿ.ವೀರೇಂದ್ರ ಹೆಗ್ಗಡೆ ಬಿಡುಗಡೆ ಗೊಳಿಸಿ ಶುಭನುಡಿಗಳನ್ನಾಡಿದರು. 
ಈ ಸಂದರ್ಭದಲ್ಲಿ ಭಂಡಾರಿ ಮಹಾ ಮಂಡಲ ಇದರ ಸಂಸ್ಥಾಪಕಾಧ್ಯಕ್ಷ, ನಾಗೇಶ್ವರ ಸಿನಿ ಕ್ರಿಯೇಷನ್ಸ್‌ನ ಆಡಳಿತ ನಿರ್ದೇಶಕ ಕಡಂದಲೆ ಸುರೇಶ್ ಎಸ್. ಭಂಡಾರಿ, ಕೃತಿಕರ್ತೆ ಜಯಶ್ರೀ ಜಿ.ಶೆಟ್ಟಿ,
ಕೃತಿಯ ಕನ್ನಡ ಅನುವಾದಕ ಶಿವಾನಂದ ಬೇಕಲ್,
ರಾಷ್ಟ್ರೀಯ ಹಿರಿಮೆಯ ಪತ್ರಿಕಾ ಛಾಯಾಚಿತ್ರಕಾರ ಗೋಪಾಲ ಶೆಟ್ಟಿ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ಪ್ರೊ| ಎಂ.ಪಿ ಶ್ರೀನಾಥ್ ಅರಸಿನಮಕ್ಕಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ರಾಮಕೃಷ್ಣ ಭಟ್ ಬೇಳಾಲು ವಂದಿಸಿದರು.

Related Post