January 23, 2021

Month: January 2020

ಯೆನೆಪೋಯಾದಲ್ಲಿ ಹರೇಕಳ ಹಾಜಬ್ಬ ಹಾಗೂ ಡಾ.ಹಬೀಬ್ ರಹಮಾನ್ ಗೆ ಅಭಿನಂದನೆ ಕಾರ್ಯಕ್ರಮ

ಅಬ್ಬಕ್ಕ ನ್ಯೂಸ್ (28.01.2020)ಕೊಣಾಜೆ: ಯಾವುದೇ ಫಲಾಪೇಕ್ಷೆ ಇಲ್ಲದೆ ಪ್ರಾಮಾಣಿಕತೆಯೊಂದಿಗೆ ನಿಸ್ವಾರ್ಥವಾಗಿ ಸಮಾಜಕ್ಕೆ ಕೊಡುಗೆ ನೀಡಿದರೆ ಒಂದಲ್ಲ ಒಂದು ದಿನ ಅವರನ್ನು…

“ಬಾಂಬ್ ಇಟ್ಟವ ತುಳು ಮಾತನಾಡುತ್ತಿದ್ದ” ಆಟೋ ಚಾಲಕ ಹೇಳಿಕೆ

ಮಂಗಳೂರು(20ಜನವರಿ/2020): ಮಂಗಳೂರು ಬಾಂಬ್ ಪತ್ತೆ ಪ್ರಕರಣ ಸಂಬಂಧಿಸಿದಂತೆ ಸ್ಫೋಟಕ ಮಾಹಿತಿಯೊಂದು ಹೊರಬಂದಿದೆ. ಶಂಕಿತ ಆರೋಪಿಯನ್ನು ವಿಮಾನ ನಿಲ್ದಾಣದಕ್ಕೆ ಬಾಡಿಗೆ ಬಂದ ಆಟೋ ಚಾಲಕ ಸ್ವತಃ ತಾನೇ ಪೊಲೀಸರ ಎದುರು ಹಾಜರಾಗಿದ್ದಾನೆ.
ಆಟೋದಲ್ಲಿ ಬಂದ ಅಪರಿಚಿತನೋರ್ವ ಟಿಕೆಟ್ ಕೌಂಟರ್ ಬಳಿ ಕಪ್ಪು ಬಣ್ಣದ ಬ್ಯಾಗ್ ಇರಿಸಿ ನಾಪತ್ತೆ ಆಗಿದ್ದ. ಮಂಗಳೂರು ವಿಮಾನ ನಿಲ್ದಾಣದ ಸಿಸಿಟಿವಿ ದೃಶ್ಯಗಳ ಫೋಟೋಗಳು ಲಭ್ಯವಾಗಿದ್ದು, ಕ್ಯಾಪ್ ಹಾಕಿರುವ ಒಬ್ಬ ಕೈಯಲ್ಲಿ ಬ್ಯಾಗ್ ಹಿಡಿದಿದ್ದಾನೆ. ಈ ವ್ಯಕ್ತಿ ನಿಲ್ದಾಣದಿಂದ ಹೊರಹೋಗುವುದನ್ನು ಫೋಟೋಗಳು ಸಿಕ್ಕಿದ್ದವು. ಹಾಗೆಯೇ ಶಂಕಿತ ಬಂದಿದ್ದ ಎನ್ನಲಾದ ಆಟೋದ ಎರಡು ಫೋಟೋಗಳು ಸಹ ಲಭಿಸಿತ್ತು.
ಈ ಫೋಟೋಗಳಲ್ಲಿ ಆರೋಪಿ ವಿಮಾನ ನಿಲ್ದಾಣದಕ್ಕೆ ಆಟೋದಲ್ಲಿ ಬಂದ ಫೋಟೋ ಕೂಡ ಲಭಿಸಿತ್ತು. ಸುದ್ದಿ ತಿಳಿದ ಆಟೋದ ಚಾಲಕ ಪೊಲೀಸ್ ಠಾಣೆಗೆ ಬಂದು ಸ್ವತಃ ಹಾಜರಾಗಿದ್ದು, ಶಂಕಿತ ಆರೋಪಿಯ ಬಗ್ಗೆ ಮಾಹಿತಿ ನೀಡಿದ್ದಾನೆ. ನನ್ನ ಆಟೋದಲ್ಲಿ ಬಂದ ಶಂಕಿತ ಆರೋಪಿ ತುಳುನಲ್ಲಿ ಮಾತನಾಡುತ್ತಿದ್ದ. ಜೊತೆಗೆ ನನಗೆ 400 ರೂ. ಬಾಡಿಗೆ ಕೊಟ್ಟು ಪಂಪ್‍ವೆಲ್ ಬಳಿ ಇಳಿದುಕೊಂಡು ಹೋದ ಎಂದು ಹೇಳಿದ್ದಾನೆ. ಆಟೋ ಚಾಲಕನ ಮಾಹಿತಿ ಮೇರೆಗೆ ಮೂರು ವಿಶೇಷ ತಂಡಗಳನ್ನು ರಚಿಸಿರುವ ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದಾರೆ

ಮಗುವಿನ ಚಿಕಿತ್ಸೆಗೆ ಸಹಾಯಕ್ಕಾಗಿ ಮನವಿ

ಉಡುಪಿ(15ಜನವರಿ/2020): ಮುಗ್ಧ, ಪುಟ್ಟ ಕಂದಮ್ಮ, ಕುಂದಾಪುರ(ಬೈಂದೂರು ತಾಲೂಕು), ಹೇರೆಂಜಾಲು ಗ್ರಾಮದ ಶ್ರೀ ಮಹೇಶ ಮಡಿವಾಳ (9148526489 )
ಇವರ ಏಕೈಕ ಮುದ್ದು ಮಗಳು.
ಈ ಮಗುವಿಗೆ ಅದ್ಯಾರ ವಕ್ರದೃಷ್ಟಿಯೋ, ವಿಧಿಯಾಟವೋ ತಿಳಿಯದು.
ಕೆಲ ಸಮಯದಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು ಇದೀಗ ಮಣಿಪಾಲದ ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಸಂಪೂರ್ಣ ಗುಣಮುಖವಾಗಲು ಸುಮಾರು 2 ವರ್ಷದ ಚಿಕಿತ್ಸೆ ಪಡೆಯ ಬೇಕೆಂಬುದು ವೈದ್ಯರ ಅಭಿಪ್ರಾಯ.
ಒಟ್ಟಾರೆ ಚಿಕಿತ್ಸೆ ವೆಚ್ಚ ಸುಮಾರು 10 ರಿಂದ 12 ಲಕ್ಷ ರೂಪಾಯಿ ಖರ್ಚು ಆಗುತ್ತದೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ. ದಿನ ಕೂಲಿ ಮಾಡಿ ಜೀವನ ನಡೆಸುತ್ತಿರುವ ತಂದೆ ತಾಯಿ ಚಿಕಿತ್ಸಾ ವೆಚ್ಚ ಭರಿಸಲು ಅಶಕ್ತರಾಗಿರುವುದರಿಂದ ನಿಮ್ಮಲ್ಲಿ ಈ ಮುಗ್ಧ ಮಗುವಿನ ಚಿಕಿತ್ಸೆಗೆ ಸಹಾಯ ನೀಡಿ ಸಹಕರಿಸಲು ಬೇಡಿಕೊಳ್ಳುತ್ತೇವೆ

ಮಹೇಶ್ ಮಡಿವಾಳ ವಿಜಯ ಬ್ಯಾಂಕ್. A/c no. 153001011000823. IFSC code … VIJB0001530
ಮಹೇಶ್ ಮಡಿವಾಳ
ICICI ಬ್ಯಾಂಕ್. ಚಾಂಡಿವಳ್ಳಿ ಮುಂಬಯಿ ಬ್ರಾಂಚ್. A/c no . 102201509566. IFSC code . ICIC0001022

Phone pe no 9148526489

Google pay no.9148526489

ಮಂಗಳೂರು ವಿಮಾನ ನಿಲ್ದಾಣ: ಅಕ್ರಮ ಚಿನ್ನ ಸಾಗಾಟ ಪತ್ತೆ

ಮಂಗಳೂರು(15ಜನವರಿ/20): ಮಂಗಳೂರು ವಿಮಾನ ನಿಲ್ದಾಣದ ಏರ್‌ ಕಾರ್ಗೊ ಕಾಂಪ್ಲೆಕ್ಸ್‌ನಲ್ಲಿ ಯಂತ್ರೋಪಕರಣ ಹೆಸರಿನಲ್ಲಿ ಅಕ್ರಮವಾಗಿ ಕಳ್ಳ ಸಾಗಣಿಕೆ ಮಾಡುತ್ತಿದ್ದ 2 ಕೋಟಿ ರೂ. ಮೊತ್ತದ 5 ಕೆಜಿ ಬಂಗಾರವನ್ನು ಕಂದಾಯ ಗುಪ್ತಚರ ನಿರ್ದೇಶನಾಲಯದ (ಡಿಆರ್‌ಐ) ಅಧಿಕಾರಿಗಳು ಸೋಮವಾರ ವಶಪಡಿಸಿಕೊಂಡಿದ್ದಾರೆ.
ಗಣಿ ಉದ್ಯಮದಲ್ಲಿ ಬಳಸುವ ಲೋಹದ ಕನ್ವೇಯರ್‌ ಡ್ರೈವ್‌ ಚೈನ್‌ನ ಒಳಭಾಗದಲ್ಲಿರಿಸಿ ಚಿನ್ನ ಕಳ್ಳಸಾಗಣೆ ಮಾಡಲಾಗಿತ್ತು. ಮೈನಿಂಗ್‌ ಕನ್ವೇಯರ್‌ ಡ್ರೈವ್‌ ಚೈನ್‌ಎಂಬ ಹೆಸರಿನ ಸರಕಿನಲ್ಲಿ ಈ ರೀತಿ ಚಿನ್ನವನ್ನು ಸರಪಣಿಯ ಉಬ್ಬಿನೊಳಗೆ ತುಂಬಿಸಿಡಲಾಗಿತ್ತು. ಆಮದು ಆಗಿರುವ ವಸ್ತುಗಳನ್ನು ಸ್ಕ್ಯಾನಿಂಗ್‌ ಮಾಡುವ ಸಂದರ್ಭದಲ್ಲಿ ಅಧಿಕಾರಿಗಳಿಗೆ ಸಂಶಯ ಬಂದು ತೀವ್ರವಾಗಿ ಪರಿಶೀಲನೆ ನಡೆಸಿದಾಗ ರಹಸ್ಯ ಬಯಲಾಯಿತು. ಬಜಪೆಯ ಸ್ಥಳೀಯ ಯಂತ್ರಗಳು ಹಾಗೂ ಲೇಥ್‌ ಮೆಷಿನ್‌ಗಳನ್ನು ಬಳಸಿ ಮೈನಿಂಗ್‌ ಕನ್ವೇಯರ್‌ ಬೆಲ್ಟ್ನ ಒಳಭಾಗದಲ್ಲಿ ಐದು ವೃತ್ತಾಕಾರದ ಚಿನ್ನದ ತಟ್ಟೆಗಳನ್ನು ಅಡಗಿಸಿಡಲಾಗಿದ್ದ 24 ಕ್ಯಾರೆಟ್‌ ಗುಣಮಟ್ಟದ ಒಟ್ಟು 4.995 ಕೆ.ಜಿ. ಚಿನ್ನವನ್ನು ಹೊರ ತೆಗೆಯಲಾಯಿತು. ಅಧಿಕೃತ ಚಿನ್ನಾಭರಣ ವ್ಯಾಪಾರಿಗಳಿಂದ ಇದನ್ನು ಪರಿಶೀಲಿಸಿ ಚಿನ್ನವೆಂದು ಖಾತ್ರಿ ಪಡಿಸಲಾಯಿತು.
ಈ ಪ್ರಕರಣದಲ್ಲಿ ಚಿನ್ನವನ್ನು ಅಕ್ರಮವಾಗಿ ಆಮದು ಮಾಡುತ್ತಿದ್ದ ಆರೋಪದಲ್ಲಿ ಇಬ್ಬರನ್ನು ಬಂಧಿಸಲಾಗಿದೆ. ಉಡುಪಿಯ ಮೆಸರ್ಸ್‌ ಸ್ವರೂಪ್‌ ಮಿನರಲ್‌ ಪ್ರೈ.ಲಿ. ಎಂಬ ಕಂಪೆನಿಯ ಮನೋಹರ್‌ ಕುಮಾರ್‌ ಪೂಜಾರಿ ಮತ್ತು ಮಂಗಳೂರಿನ ಅಶೋಕನಗರ ನಿವಾಸಿ ಲೋಹಿತ್‌ ಶ್ರೀಯಾನ್‌ ಬಂಧಿತ ಆರೋಪಿಗಳು.
ಮಂಗಳೂರು ವಿಮಾನ ನಿಲ್ದಾಣದಲ್ಲಿ ಒಂದು ದಶಕದ ಅವಧಿಯಲ್ಲಿ ವಶಪಡಿಸಿಕೊಳ್ಳಲಾದ ಅತೀಹೆಚ್ಚು ಮೌಲ್ಯದ ಅಕ್ರಮ ಚಿನ್ನ ಕಳ್ಳಸಾಗಣೆ ಪ್ರಕರಣ ಇದಾಗಿದೆ. ಸರಕು ಸಾಗಾಟ ಹೆಸರಿನಲ್ಲಿ ಈ ಚಿನ್ನವನ್ನು ವಿನೂತನ ಮಾದರಿಯಲ್ಲಿ ಯಂತ್ರದ ಸರಪಣಿಯಲ್ಲಿ ಅಡಗಿಸಿಟ್ಟು ಸಾಗಿಸ ಲಾಗುತ್ತಿತ್ತು.
ಮೆಸರ್ಸ್‌ ಸ್ವರೂಪ್‌ ಮಿನರಲ್‌ ಪ್ರೈ.ಲಿ. ಎಂಬ ಸಂಸ್ಥೆಯ ಮೈನಿಂಗ್‌ ಕನ್ವೇಯರ್‌ ಡ್ರೈವ್‌ ಚೈನ್‌ ಆಮದು ಮಾಡಿಕೊಳ್ಳುತ್ತಿತ್ತು. ಅದರೊಳಗೆ ಚಿನ್ನ ಅಡಗಿಸಿಟ್ಟು ಸಾಗಾಟ ಮಾಡುತ್ತಿರುವ ಬಗ್ಗೆ ಅಧಿಕಾರಿಗಳಿಗೆ ಸುಳಿವು ದೊರಕಿದ್ದು ಈ ಬಗ್ಗೆ ನಿಗಾ ಇಡಲಾಗಿತ್ತು.
ಈ ಬಗ್ಗೆ ಬೆಂಗಳೂರು ಮತ್ತು ಮಂಗಳೂರು ಡಿಆರ್‌ಐ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ಮನೋಹರ್‌ ಕುಮಾರ್‌ನನ್ನು ಬೆಂಗಳೂರಿನಲ್ಲಿ ಮತ್ತು ಲೋಹಿತ್‌ನನ್ನು ಮಂಗಳೂರಿನಲ್ಲಿ ಬಂಧಿಸಲಾಗಿದೆ ಎಂದು ಡಿಆರ್‌ಐ ಉಪ ನಿರ್ದೇಶಕ ಶ್ರೇಯಸ್‌ ಕೆ.ಎಂ. ತಿಳಿಸಿದ್ದಾರೆ. ಪ್ರಕರಣದ ಬಗ್ಗೆ ಇನ್ನಷ್ಟು ತನಿಖೆ ನಡೆಯುತ್ತಿದೆ.

ಅಂತಾರಾಷ್ಟ್ರೀಯ ಮಾಸ್ಟರ್ ಅಥ್ಲೆಟಿಕ್ಸ್ ಗೆ ತಲಪಾಡಿ ನಾರ್ಲದ ಶ್ರೀಮತಿ ಭವ್ಯಾ ಸಂದೀಪ್ ಶೆಟ್ಟಿ ಅಯ್ಕೆ

ಮಂಗಳೂರು(15ಜನವರಿ/20): ಕೇರಳ ಕೊಝಿಕೋಡ್ ನಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಮಾಸ್ಟರ್ ಅಥ್ಲೆಟಿಕ್ಸ್ ಚಾಂಪಿಯನ್ ಶಿಫ್-2020 ರಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ ಭಾಗವಹಿಸಿದ ತಲಪಾಡಿ ನಾರ್ಲದ ಶ್ರೀಮತಿ ಭವ್ಯಾ ಸಂದೀಪ್ ಶೆಟ್ಟಿ ಅವರು 400 ಹರ್ಡಲ್ ನಲ್ಲಿ ಚಿನ್ನದ ಪದಕ ,4×100 ರಿಲೇ ಯಲ್ಲಿ ಬೆಳ್ಳಿಯ ಪದಕ,4×400ರಲ್ಲಿ ಬೆಳ್ಳಿಯ ಪದಕ ಗಳಿಸಿದ ಇವರು ಇಂಡೋನೇಷ್ಯಾ ದಲ್ಲಿ ಜರಗುವ ಅಂತಾರಾಷ್ಟ್ರೀಯ ಮಾಸ್ಟರ್ ಅಥ್ಲೆಟಿಕ್ಸ್ ಗೆ ಅಯ್ಕೆಯಾಗಿದ್ದಾರೆ.

ಆನಂದಾಶ್ರಮ ವಿಧ್ಯಾರ್ಥಿನಿ CCRT ಪ್ರಶಸ್ತಿಗೆ ಆಯ್ಕೆ

ಉಳ್ಳಲ(15ಜನವರಿ20): ಭಾರತ ಸರಕಾರದ ಸಾಂಸ್ಕೃತಿಕ ಸಚಿವಾಲಯ ದಿಂದ ಕೊಡಲ್ಪಡುವ CCRT ಸ್ಕಾಲರ್ಶಿಪ್ ಅವಾರ್ಡ್ ಸೋಮೇಶ್ವರ ಆನಂದಾಶ್ರಮ ಪ್ರೌಢ ಶಾಲೆಯ ಶರಣ್ಯ ಪಿ ಬಂಗೇರ, ಇವರಿಗೆ ಲಭಿಸಿರುತ್ತದೆ.
ಈಕೆ ಭರತನಾಟ್ಯ ಕ್ಷೇತ್ರ ದಲ್ಲಿ 2019ನೇಸಾಲಿನ CCRT ಪರೀಕ್ಷೆ ಬರೆದು ಈ ಅವಾರ್ಡ್ ಗೆ ಪಾತ್ರಳಾಗಿರುವರು.
ನಾಟ್ಯ ಗುರು ಶ್ರೀ ಬಾಲಕೃಷ್ಣ ಮಂಜೇಶ್ವರ ಇವರ ಶಿಷ್ಯೆಯಾಗಿರುವ ಇವರು ಈ ಮೊದಲು ಇವರದೇ ಮಾರ್ಗದರ್ಶನ ದಲ್ಲಿ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸಿದ2016ನೇ ಸಾಲಿನ ಭರತನಾಟ್ಯ ಜೂನಿಯರ್ ಪರೀಕ್ಷೆ ಯಲ್ಲಿ ವಿಶಿಷ್ಟ ಶ್ರೇಣಿ ಯಲ್ಲಿ ಉತ್ತೀರ್ಣತೆ ಪಡೆದಿರುವರು. ಅಷ್ಟೆ ಅಲ್ಲದೆ ಆನಂದಾಶ್ರಮ ಪ್ರೌಢ ಶಾಲೆ ಯ ಚಿತ್ರ ಕಲಾ ಅಧ್ಯಾಪಕ ರಾದ ಶ್ರೀ ಹರೀಶ್ ಟಿ ಇವರ ಮಾರ್ಗದರ್ಶನ ದಲ್ಲಿ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸಿದ 2019ನೇ ಸಾಲಿನ ಡ್ರಾಯಿಂಗ್ ಲೋವರ್ ಗ್ರೇಡ್ ಪರೀಕ್ಷೆ ಯಲ್ಲಿ ವಿಶಿಷ್ಟ ಶ್ರೇಣಿ ಯಲ್ಲಿ ಉತ್ತೀರ್ಣತೆ ಪಡೆದಿರುತ್ತಾರೆ.
ಜಿ ಕೆ ಚಾರಿಟೇಬಲ್ ಟ್ರಸ್ಟ್. ರಿ. ಬದಿಯಡ್ಕ ಇವರು “ತುಳುನಾಡ ಸಿರಿ ಪುರ್ಪ” ಅವಾರ್ಡ್ ನೀಡಿ ಗೌರವಿಸಿರುತ್ತಾರೆ.ಇಷ್ಟು ಮಾತ್ರವಲ್ಲದೆ, ಅಶ್ವತ್ಥ್ ಮಂಜನಾಡಿ ಇವರ ಮಾರ್ಗದರ್ಶನ ದಲ್ಲಿ ಶಾಲಾ ಪ್ರತಿಭಾಕಾರಂಜಿಯಲ್ಲಿ ಸತತ 5 ಬಾರಿ ಜಿಲ್ಲಾ ಮಟ್ಟವನ್ನು ಪ್ರತಿನಿಧಿಸಿರುತ್ತಾರೆ. 8ನೇ ತರಗತಿಯಲ್ಲಿ ಕಲಿಯುತ್ತಿರುವ ಈಕೆ ತಲಪಾಡಿ ಬಜಂಗ್ರೆ ನಿವಾಸಿ ಶ್ರೀ ಪುರಶೋತ್ತಮ ಯನ್ ಬಂಗೇರ ಮತ್ತು ಶ್ರೀಮತಿ ಲೀಲಾವತಿ ಇವರ ಪುತ್ರಿ ಯಾಗಿರುವರು.

ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನಕ್ಕೆ ರಾಜ್ಯ ಸರ್ಕಾರದಿಂದ 10ಕೋಟಿ ಅನುದಾನ

ಉಡುಪಿ(12ಜನವರಿ2020): ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಯಡಿಯೂರಪ್ಪನವರು 10 ಕೋಟಿ ರೂಪಾಯಿಗಳ ಅನುದಾನವನ್ನು ಧಾರ್ಮಿಕ ದತ್ತಿ ಇಲಾಖೆ ವತಿಯಿಂದ ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಮಂಜೂರಾತಿ ಮಾಡಿರುತ್ತಾರೆ. ಅನುದಾನ ಬಿಡುಗಡೆ ಮಾಡುವಂತೆ ಸಂಸದೆ ಶೋಭಾ ಕರಂದ್ಲಾಜೆ ನೇತೃತ್ವದಲ್ಲಿ ಮುಖ್ಯ ಮಂತ್ರಿಯವರನ್ನು ಬೇಟಿಯಾಗಿ ಮನವಿ ಸಲ್ಲಿಸಲಾಯಿತು.
ಮೊಗವೀರ ಸಮಾಜದ ಇತಿಹಾಸ ಪುಣ್ಯಕ್ಷೇತ್ರ ಉಚ್ಚಿಲ ಶ್ರೀ ಮಹಾಲಕ್ಷ್ಮಿದೇವಿ ಉಪ್ಪಳದಿಂದ ಹಿಡಿದು ಶಿರೂರಿನ ವರೆಗೆ ಸುಮಾರು 20 ಲಕ್ಷಕ್ಕಿಂತ ಅಧಿಕ ಭಕ್ತಾದಿಗಳು ಆರಾಧನೆ ಮಾಡುವ ಪುಣ್ಯ ಪವಿತ್ರ ಕ್ಷೇತ್ರ. ಈ ಭಾಗದ ಭಜನಾ ಮಂದಿರಗಳ ಕೇಂದ್ರಬಿಂದು ಆಗಿರುವಂತಹ ಮೊಗವೀರರ ಕುಲದೇವಿ ಶ್ರೀ ಮಹಾಲಕ್ಷ್ಮಿ ದೇವಿಯ ದಿವ್ಯ ಸನ್ನಿಧಿ.ಈಗಾಗಲೇ
ದೇವಸ್ಥಾನದ ಜೀರ್ಣೋದ್ಧಾರ ಪ್ರಕ್ರಿಯೆಯು ಗೌರವಾನ್ವಿತ ನಾಡೋಜ ಡಾಕ್ಟರ್ ಜಿ ಶಂಕರ್ ಅವರ ನೇತೃತ್ವದಲ್ಲಿ ಭರದಿಂದ ಸಾಗುತ್ತಿದೆ.ಈ ಮಹತ್ಕಾರ್ಯದಲ್ಲಿ ಅನೇಕ ಸಂಘ ಸಂಸ್ಥೆಗಳು ಭಕ್ತಾದಿಗಳ ಸಹಕಾರದಲ್ಲಿ ಕೆಲಸಗಳು ಪ್ರಾರಂಭವಾಗಿದೆ. ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಯಡಿಯೂರಪ್ಪನವರು 10 ಕೋಟಿ ರೂಪಾಯಿಗಳ ಅನುದಾನವನ್ನು ಧಾರ್ಮಿಕ ದತ್ತಿ ಇಲಾಖೆ ವತಿಯಿಂದ ಮಂಜೂರಾತಿ ಮಾಡಿರುತ್ತಾರೆ.ಮೊಗವೀರ ಸಮಾಜದ ವತಿಯಿಂದ ಮುಖ್ಯಮಂತ್ರಿಗಳಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು.
ಯುವ ನಾಯಕ ಯಶುಪಾಲ್ ಸುವರ್ಣ ,ಡಾ| ಜಿ ಶಂಕರ್ ಮುಂತಾದವರು ಉಪಸ್ಥಿತರಿದ್ದರು.

ಅಡ್ವೆ ನಂದಿಕೂರು ಕಂಬಳ ಫಲಿತಾಂಶ

ಉಡುಪಿ(12ಜನವರಿ/2020): ಅಡ್ವೆ ನಂದಿಕೂರಿನಲ್ಲಿ ನಡೆದ ಕೋಟಿ ಚೆನ್ನಯ ಜೋಡುಕರೆ ಕಂಬಳ ರವಿವಾರ ಯಶಸ್ವಿಯಾಗಿ ಸಂಪನ್ನವಾಗಿದೆ. ಕೊಳಚೂರು ಕೊಂಡೊಟ್ಟು ಸುಕುಮಾರ ಶೆಟ್ಟರ ನೇತೃತ್ವದಲ್ಲಿ ನಡೆದ ಹೊನಲು ಬೆಳಕಿನ ಜೋಡುಕರೆ ಕಂಬಳದಲ್ಲಿ ಒಟ್ಟು 144 ಜೋಡಿ ಕೋಣಗಳು ಭಾಗವಹಿಸಿದ್ದವು.

ಕಂಬಳದ ಜನಪ್ರಿಯ ಕೋಣ ಮುಕೇಶ ಅಡ್ವೆ ಕಂಬಳದಲ್ಲಿ ಮೊದಲ ಬಹುಮಾನ ಪಡೆದು ಮಿಂಚಿದೆ. ಕೊಳಕೆ ಇರ್ವತ್ತೂರು ಭಾಸ್ಕರ ಸುಬ್ಬಯ್ಯ ಕೋಟ್ಯಾನ್ ಅವರ ಯಜಮಾನಿಕೆಯ ಕೋಣಗಳು ಹಗ್ಗ ಹಿರಿಯ ವಿಭಾಗದಲ್ಲಿ ಮೊದಲ ಸ್ಥಾನ ಪಡೆದವು.

ಕನೆಹಲಗೆ:

ಪ್ರಥಮ: ಬಾರ್ಕೂರು ಶಾಂತಾರಾಮ ಶೆಟ್ಟಿ

ಹಲಗೆ ಮುಟ್ಟಿದವರು: ಮಂದಾರ್ತಿ ಶಿರೂರು ಗೋಪಾಲ ನಾಯ್ಕ

ದ್ವಿತೀಯ: ಬೇಲಾಡಿ ಬಾವ ಅಶೋಕ್ ಶೆಟ್ಟಿ

ಹಲಗೆ ಮುಟ್ಟಿದವರು: ನಾರಾವಿ ಯುವರಾಜ ಜೈನ್

 

ಅಡ್ಡ ಹಲಗೆ:

ಪ್ರಥಮ: ಬೋಳಾರ ತ್ರಿಶಾಲ್ ಕೆ ಪೂಜಾರಿ “A”
ಹಲಗೆ ಮುಟ್ಟಿದವರು: ಮಂದಾರ್ತಿ ಶಿರೂರು ಗೋಪಾಲ ನಾಯ್ಕ

ದ್ವಿತೀಯ: ಬೋಳಾರ ತ್ರಿಶಾಲ್ ಕೆ ಪೂಜಾರಿ “B”
ಹಲಗೆ ಮುಟ್ಟಿದವರು: ಮಂದಾರ್ತಿ ಶಿರೂರು ಗೋಪಾಲ ನಾಯ್ಕ

 ಹಗ್ಗ ಹಿರಿಯ:
ಪ್ರಥಮ: ಕೊಳಕೆ ಇರ್ವತ್ತೂರು ಭಾಸ್ಕರ ಸುಬ್ಬಯ್ಯ ಕೋಟ್ಯಾನ್
ಓಡಿಸಿದವರು: ಕೊಳಕೆ ಇರ್ವತ್ತೂರು ಆನಂದ್

ದ್ವಿತೀಯ: ಮೂಡಬಿದ್ರಿ ನಿವ್ ಪಡಿವಾಳ್ಸ್ ಮಿಹೀತ್ ಮಿಥುನ್ ಬಿ ಶೆಟ್ಟಿ “A”
ಓಡಿಸಿದವರು: ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ

ಹಗ್ಗ ಕಿರಿಯ:
ಪ್ರಥಮ: ಮಿಜಾರು ಪ್ರಸಾದ್ ನಿಲಯ ಶಕ್ತಿ ಪ್ರಸಾದ್ ಶೆಟ್ಟಿ “A”
ಓಡಿಸಿದವರು: ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ

ದ್ವಿತೀಯ: ಸೂಡ ಹಳೆಮನೆ ಅಜಿತ್ ರಾಜು ಶೆಟ್ಟಿ
ಓಡಿಸಿದವರು: ಮಾಳ ಕಲ್ಲೇರಿ ಭರತ್ ಶೆಟ್ಟಿ

ನೇಗಿಲು ಹಿರಿಯ:
ಪ್ರಥಮ: ಇರುವೈಲು ಪಾನಿಲ ಬಾಡ ಪೂಜಾರಿ
ಓಡಿಸಿದವರು: ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ

ದ್ವಿತೀಯ: ಬೋಳದಗುತ್ತು ಸತೀಶ್ ಶೆಟ್ಟಿ “A”
ಓಡಿಸಿದವರು: ಹೊಕ್ಕಾಡಿಗೋಳಿ ಹಕ್ಕೇರಿ ಸುರೇಶ್ ಶೆಟ್ಟಿ

ನೇಗಿಲು ಕಿರಿಯ:
ಪ್ರಥಮ: ಬ್ರಹ್ಮಾವರ ಹಂದಾಡಿ ಶೇಖರ ಪೂಜಾರಿ
ಓಡಿಸಿದವರು: ಪಣಪಿಲ ಪ್ರವೀಣ್ ಕೋಟ್ಯಾನ್

ದ್ವಿತೀಯ: ಕರ್ನಿರೆ ಮಾಗಂದಡಿ ನಯನ ಪ್ರಕಾಶ್ ಶೆಟ್ಟಿ “A”
ಓಡಿಸಿದವರು: ಮರೋಡಿ ಶ್ರೀಧರ್

ಖಾಸಗಿ ಬಸ್ ಮಾಲಕರ ಸಂಘದಿಂದ ಬಂದ್ ಬೆಂಬಲ ಇಲ್ಲ

ಮಂಗಳೂರು(7ಜನವರಿ/2020): ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಕಾರ್ಮಿಕ ಸಂಘಟನೆಗಳು ಬುಧವಾರ ಕರೆ ನೀಡಿರುವ ಭಾರತ ಬಂದ್ ಗೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಖಾಸಗಿ ಬಸ್ ಮಾಲಕರ ಸಂಘದಿಂದ ಯಾವುದೇ ಬೆಂಬಲ ಇಲ್ಲ.
ನಾಳೆಯ ಮುಷ್ಕರಕ್ಕೆ ಆರು ಬ್ಯಾಂಕ್ ಯೂನಿಯನ್ ಗಳು ಬೆಂಬಲ ನೀಡಿರುವ ಕಾರಣ ಬಹುತೇಕ ಬ್ಯಾಂಕ್ ಗಳು ಬಂದ್ ಆಗಿರಲಿವೆ. ಆದರೆ ಆನ್ ಲೈನ್ ಬ್ಯಾಂಕಿಂಗ್ ಸೇವೆಯಲ್ಲಿ ಯಾವುದೇ ಅಡಚಣೆ ಇರುವುದಿಲ್ಲ.
ಬುಧವಾರ ಕರೆಯಲಾಗಿರುವ ಭಾರತ್ ಬಂದ್ ಗೆ ಮಂಗಳೂರು ಮತ್ತು ಉಡುಪಿಯ ಬಸ್ ಮಾಲಕರ ಬೆಂಬಲವಿಲ್ಲ. ಕರಾವಳಿಯಲ್ಲಿ ಬಸ್ ಗಳು ಎಂದಿನಂತೆ ಸಂಚರಿಸುತ್ತದೆ ಎಂದು ಕೆನರಾ ಬಸ್ ಮಾಲಕರ ಸಂಘದ ಅಧ್ಯಕ್ಷರಾಜವರ್ಮ ಬಲ್ಲಾಳ್ ಮತ್ತು ಉಡುಪಿ ಬಸ್ ಮಾಲಕರ ಸಂಘದ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಪತ್ರಿಕಾ ಹೇಳಿಕೆ ನೀಡಿದ್ದಾರೆ.

ಜನವರಿ 24: ಬಜಪೆಯಿಂದ ಕಟೀಲಿಗೆ ಭವ್ಯ ಹೊರೆ ಕಾಣಿಕೆ ಮೆರವಣಿಗೆ

ಬಜಪೆ(7ಜ/2019): ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆಯಲಿರುವ ಬ್ರಹ್ಮಕಲಶೋತ್ಸವದ ಅಂಗವಾಗಿ ಬಜ್ಪೆಯಿಂದ ಹೋರಡಲಿರುವ ಹೊರೆಕಾಣಿಕೆಯ ಮಹಾಸಭೆಯು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕರಾದ ಅನಂತಪದ್ಮನಾಭ ಅಸ್ರಣ್ಣ ಮತ್ತು ಹಿರಿಯರಾದ ರಾಘವೇಂದ್ರ ಆಚಾರ್ಯರ ನೇತೃತ್ವದಲ್ಲಿ ಬಜ್ಪೆಯ ವಿಜಯ ವಿಠಲ ಭಜನಾ ಮಂದಿರ ದಲ್ಲಿ ನಡೆಯಿತು.
ಆರಂಭದಲ್ಲಿ ಉಡುಪಿ ಪೇಜಾವರ ಮಠದ ಪರಮಪೂಜ್ಯ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರ ಭಾವಚಿತ್ರಕ್ಕೆ ಶ್ರದ್ದಾಂಜಲಿ ಅರ್ಪಿಸಲಾಯಿತು.
ನಂತರ ಹಿರಿಯರ ನೇತೃತ್ವದಲ್ಲಿ ಹೊರೆಕಾಣಿಕೆಯ ಆಮಂತ್ರಣ ಪತ್ರ ಬಿಡುಗಡೆಗೊಳಿಸಲಾಯಿತು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರದಾನ ಅರ್ಚಕರಾದ ಅನಂತ ಪದ್ಮನಾಭ ಅಸ್ರಣ್ಣರು ಬಜ್ಪೆ ಮತ್ತು ಆಸುಪಾಸಿನ ಗ್ರಾಮದ ಜನರು ಕಟೀಲು ಅಮ್ಮನ ಬಗ್ಗೆ ಅಪಾರವಾದ ಭಕ್ತಿಯನ್ನು ಹೊಂದಿರುವಂತವರು, ಈ ಬಾರಿ ಕಟೀಲು ಕ್ಷೇತ್ರಕ್ಕೆ ಬಜ್ಪೆ ಯಿಂದ ಹೋರಡಲಿರುವ ಹೊರೆಕಾಣಿಕೆಯ ಜೊತೆ ಭಕ್ತರೆಲ್ಲರೂ ಪಾದಯಾತ್ರೆ ಕೈಗೊಂಡಿರುವುದು ನಮ್ಮೆಲ್ಲರಿಗೂ ಅತ್ಯಂತ ಸಂತೋಷದ ವಿಷಯ. ಈ ಬಾರಿಯೂ ಈ ಬಾಗದಿಂದ ಹೆಚ್ಚಿನ ಹೊರೆಕಾಣಿಕೆಯ ನಿರೀಕ್ಷೆ ಯಲ್ಲಿದ್ದೇವೆ, ಕ್ಷೇತ್ರಕ್ಕೆ ಹೆಚ್ಚಿನ ಹೊರೆಕಾಣಿಕೆ ತಲುಪಲು ನಾವೆಲ್ಲರೂ ಜತೆಗೂಡಿ ಶ್ರಮಿಸೋಣವೆಂದು ಕರೆ ಕೊಟ್ಟರು. ಅದಲ್ಲದೆ ಕಟೀಲು ಬ್ರಹ್ಮ ಕಲಶೋತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸುವಂತೆ ಆಮಂತ್ರಿಸಿದರು. ಅದಲ್ಲದೆ ಕಟೀಲು ರಸ್ತೆಯ ಅಗಲೀಕರಣ ಕಾಮಗಾರಿಯು ತ್ವರಿತಗತಿಯಲ್ಲಿ ಸಾಗಲು ಶ್ರಮಿಸಿದ ಶಾಸಕರಾದ ಉಮಾನಾಥ್ ಕೋಟಿಯನ್ ಹಾಗೂ ಸಂಸದರಾದ ನಳೀನ್ ಕುಮಾರ್ ಕಟೀಲ್ ರವರನ್ನು ಅಭಿನಂದಿಸಿದರು.

ಹೊರೆಕಾಣಿಕೆಯಲ್ಲಿ ಭಾಗವಹಿಸುವ ಭಕ್ತರು ಲುಂಗಿ, ಸಾರಿ ಯಂತಹ ಉಡುಪುಗಳನ್ನು ಧರಿಸುವ ಮೂಲಕ ಸನಾತನ ಹಿಂದೂ ಧರ್ಮದ ಸಂಸ್ಕೃತಿಯನ್ನು ಉಳಿಸೋಣವೆಂದು ಕರೆ ನೀಡಿದರು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಡಾ !! ಜಯರಾಮ್ ಶೆಟ್ಟಿಯವರು ಹೊರೆಕಾಣಿಕೆಯನ್ನು ಯಾವುದೇ ತರಹದ ಅಡೆತಡೆ ಗಳಿಲ್ಲದೆ ಕ್ಷೇತ್ರಕ್ಕೆ ಯಶಸ್ವಿಯಾಗಿ ಮುಟ್ಟಿಸಲು ನಮ್ಮೆಲ್ಲರ ಪ್ರಯತ್ನ ಅತ್ಯಂತ ಅಮೂಲ್ಯವಾಗಿದೆ . ಅದಲ್ಲದೆ ಕಳೆದ 12 ವರ್ಷದ ಹಿಂದೆ ಕಟೀಲು ಕ್ಷೇತ್ರ ದಲ್ಲಿ ನಡೆದ ಬ್ರಹ್ಮ ಕಲಶೋತ್ಸವಕ್ಕೆ ಬಜ್ಪೆ ಮತ್ತು ಆಸುಪಾಸಿನ ಗ್ರಾಮಗಳಿಂದ ಅನ್ನದಾನಕ್ಕೆ ಬೇಕಾದ ಸುಮಾರು 35 ಲಕ್ಷ ವೆಚ್ಚದ ಹೊರೆಕಾಣಿಕೆಯನ್ನು ( ಸೀಯಾಳ, ಹಿಂಗಾರ,ಬಾಲೆ ಎಲೆ ತೆಂಗಿನಕಾಯಿ ಹೊರತುಪಡಿಸಿ ) ಕ್ಷೇತ್ರಕ್ಕೆ ತಲುಪಿಸಿರುವುದು ಅವಿಸ್ಮರಣೀಯವೆಂದು ನೆನಪಿಸಿದರು, ಅದಲ್ಲದೆ ಈ ಬಾರಿ ಅದಕ್ಕಿಂತಳು ಹೆಚ್ಚಿನ ಹೊರೆಕಾಣಿಕೆಯನ್ನು ತಲುಪಿಸಲು ನಾವೆಲ್ಲರೂ ಜತೆಗೂಡಿ ಪ್ರಯತ್ನಿಸೋಣವೆಂದು ಕಿವಿಮಾತು ನುಡಿದರು.

ಸುಕೇಶ್ ಶೆಟ್ಟಿ ಮುಂಡಾರುಗುತ್ತು ರವರು ಮಾತನಾಡಿ ಬಜ್ಪೆ ಪರಿಸರ ವನ್ನು ಅಲಂಕರಿಸುವ ಬಗ್ಗೆ, ಸ್ವಾಗತ ದ್ವಾರ ಹಾಕುವ ಬಗ್ಗೆ ಈಗಾಗಲೇ ಪೂರ್ವ ಸಿದ್ದತೆಗಳು ತಯಾರಾಗಿವೆ.

ಹೊರೆಕಾಣಿಕೆಯನ್ನು ಸಲ್ಲಿಸಲು ಇಚ್ಚಿಸುವವರು, ಈಗಾಗಲೇ ನೇಮಕ ಮಾಡಿರುವ ಗ್ರಾಮದ ಪ್ರಮುಖರ ಮೂಲಕ ಮಾಹಿತಿಯನ್ನು ಪಡೆದು ಕೊಳ್ಳಬಹುದೆಂದು ತಿಳಿಸಿದರು.ಈಗಾಗಲೇ ಸಮಯ ನಿಗದಿಪಡಿಸಿರುವಂತೆ ಜನವರಿ 24 ರಂದು ಸಂಜೆ 3 ಗಂಟೆಗೆ ಸರಿಯಾಗಿ ಬಜ್ಪೆಯಿಂದ ಹೊರೆಕಾಣಿಕೆಯ ಮೆರವಣಿಗೆಗೆ ಹಿರಿಯರ ನೇತೃತ್ವದಲ್ಲಿ ಚಾಲನೆ ನೀಡಲಾಗುವುದು. ಹೊರೆಕಾಣಿಕೆ ಸಲ್ಲಿಸುವವರು ಒಂದು ಗಂಟೆ ಮುಂಚಿತವಾಗಿ ಬಜ್ಪೆಗೆ ತಲುಪಿಸಬೇಕಾಗಿ ವಿನಂತಿಸಿದರು. ದಾರಿಯುದ್ದಕ್ಕೂ ಮೆರವಣಿಗೆ ಯಶಸ್ವಿ ಗೊಳಿಸಲು ಭಜನಾ ಮಂಡಳಿಗಳು, ಚೆಂಡೆ, ಕೀಳು ಕುದುರೆ ನರ್ತಕರು, ತಂಪು ಪಾನೀಯ ವಿತರಕರು, ಸ್ವಚ್ಛತಾ ಸಮಿತಿಯವರು, ತುರ್ತು ಚಿಕಿತ್ಸೆ , ಪೊಲೀಸ್ ಇಲಾಖೆ ಯವರ ಜತೆ ಹೆಚ್ಚಿನ ಸ್ವಯಂ ಸೇವಕರು ಶ್ರಮಿಸಬೇಕೆಂದು ವಿನಂತಿಸಿದರು.

Related Post