September 23, 2020

Month: April 2020

ಮೂರನೇ ಬಲಿ: ಅಂತಿಮ ವಿಧಿ ಬೋಳೂರು ಹಿಂದೂ ರುಧ್ರಭೂಮಿಯಲ್ಲಿ

ಮಂಗಳೂರು(30ಎ/2020): ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ಮಹಾಮಾರಿ ಸೋಂಕಿಗೆ ಇಂದು ಇನ್ನೊಂದು ಬಲಿಯಾಗಿದೆ.ಬಂಟ್ವಾಳ ತಾಲೂಕಿನ ಕಸಬಾ ಮೂಲದ ರೋಗಿ ಸಂಖ್ಯೆ ಪಿ-409 ಆಗಿದ್ದ  67 ವರ್ಷ ಪ್ರಾಯದ ವೃದ್ಧೆ ಕೋವಿಡ್ ಸೋಂಕಿಗೆ ಇಂದು ಬಲಿಯಾಗಿರುವ ಮಹಿಳೆಯಾಗಿದ್ದಾರೆ.ಏಪ್ರಿಲ್ 18ರಂದು ಉಸಿರಾಟದ ತೊಂದರೆಯಿಂದ ಇವರನ್ನು ನಗರದ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಇದರೊಂದಿಗೆ ಬಂಟ್ವಾಳ ಪೇಟೆಯಿಂದಲೇ ಮೂರನೇ ಮಹಿಳೆ ಕೊರೊನಾ ಸೋಂಕಿಗೆ ಬಲಿಯಾಗಿದ್ದು, ಮೃತ ಮಹಿಳೆಯ ಶವ ಸಂಸ್ಕಾರ ಬೋಳೂರಿನ ಹಿಂದೂ ರುಧ್ರ ಭೂಮಿಯಲ್ಲೇ ನಡೆಸಲು ನಿರ್ಧರಿಸಲಾಗಿದೆ.ಈ ಬಗ್ಗೆ ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಸಭೆ ನಡೆಸಿ ನಿರ್ಧಾರವನ್ನು ಕೈಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಬೋಳೂರು ಹಿಂದೂ ರುಧ್ರಭೂಮಿಯಲ್ಲೇ ಶವ ಸಂಸ್ಕಾರ ನಡೆಸಲು ತೀರ್ಮಾನಿಸಲಾಗಿದೆ. ಈ ಹಿನ್ನೆಲೆ ಜಿಲ್ಲಾಡಳಿತ ಎಲ್ಲಾ ಸಿದ್ಧತೆಗಳನ್ನು ನಡೆಸಲಾಗಿದೆ.ಆಸ್ಪತ್ರೆಯ ಎಲ್ಲಾ ಕಾರ್ಯಗಳು ಮುಗಿದ ಬಳಿಕ ಮೃತದೇಹದ ಹಸ್ತಾಂತರ ಕಾರ್ಯ ನಡೆಯಲಿದೆ. ಬಳಿಕ ಜಿಲ್ಲಾಡಳಿತ ಎಲ್ಲಾ ರೀತಿಯ ಭದ್ರತಾ ಕ್ರಮ ಕೈಗೊಂಡು ಅಂತ್ಯ ಸಂಸ್ಕಾರವನ್ನು ನೆರವೇರಿಸಲಿದೆ.

ಡಾ.ಭರತ್ ಶೆಟ್ಟಿಯವರಿಂದ ಮಂಗಳೂರು ಕ್ಷೇತ್ರಕ್ಕೆ ಆಹಾರ ಸಾಮಾಗ್ರಿ ಕೊಡುಗೆ

ಮಂಗಳೂರು(30ಎ/2020): ಮಂಗಳೂರು ನಗರ ಉತ್ತರ ಕ್ಷೇತ್ರದ ಶಾಸಕರಾದ ಡಾ.ಭರತ್ ಶೆಟ್ಟಿ ವೈ ಅವರು ಮಂಗಳೂರು ವಿಧಾನಸಭಾ ಕ್ಷೇತ್ರ ( ಉಳ್ಳಾಲ)ಕ್ಕೆ 5000 ಕೆ.ಜಿ. ಅಕ್ಕಿ, 1.5 ಕ್ವಿಂಟಾಲ್ ಸಕ್ಕರೆ, ಬೇಳೆ, ರವೆ ಯನ್ನು ಬಿಜೆಪಿ ಮಂಗಳೂರು ಕ್ಷೇತ್ರದ ಅದ್ಯಕ್ಷರಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಮಂಗಳೂರು ನಗರ ಉತ್ತರ ಭಾಜಪಾ ಅಧ್ಯಕ್ಷರಾದ ತಿಲಕರಾಜ್ ಕೃಷ್ಣಾಪುರ, ಮಂಗಳೂರು ಮಂಡಲ ಅಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್, ಜಿಲ್ಲಾ ಉಪಾದ್ಯಕ್ಷರಾದ ಸಂತೋಷ್ ರೈ ಬೋಳಿಯಾರ್, ಮಂಡಲ ಕಾರ್ಯದರ್ಶಿ ಹೇಮಂತ್ ಶೆಟ್ಟಿ,ರೈತ ಮೋರ್ಚ ಅಧ್ಯಕ್ಷರಾದ ಯೋಗಿಶ್ ಶೆಟ್ಟಿ,ಯುವ ಮೋರ್ಚ ಅದ್ಯಕ್ಷ ಸಚಿನ್ ಮೋರೆ ಸಹಿತ ಅನೇಕ ಭಾಜಪಾ ಕಾರ್ಯಕರ್ತರು ಉಪಸ್ಥಿತರಿದ್ದರು.
ಈ ಸಂದರ್ಬದಲ್ಲಿ ಶಾಸಕ ಡಾ.ಭರತ್ ಶೆಟ್ಟಿಯವರಿಗೆ ಬಿಜೆಪಿ ಮಂಗಳೂರು ಕ್ಷೇತ್ರದ ಕಾರ್ಯಕರ್ತರ ಪರವಾಗಿ ಕೃತಜ್ಞತೆ ಸಲ್ಲಿಸಿದರು.

ಡಾ.ಭರತ್ ಶೆಟ್ಟಿಯವರಿಂದ ಮಂಗಳೂರು ಕ್ಷೇತ್ರಕ್ಕೆ ಆಹಾರ ಸಾಮಾಗ್ರಿ ಕೊಡುಗೆ

ಮಂಗಳೂರು(30ಎ/2020): ಮಂಗಳೂರು ನಗರ ಉತ್ತರ ಕ್ಷೇತ್ರದ ಶಾಸಕರಾದ ಡಾ.ಭರತ್ ಶೆಟ್ಟಿ ವೈ ಅವರು ಮಂಗಳೂರು ವಿಧಾನಸಭಾ ಕ್ಷೇತ್ರ ( ಉಳ್ಳಾಲ)ಕ್ಕೆ 5000 ಕೆ.ಜಿ. ಅಕ್ಕಿ, 1.5 ಕ್ವಿಂಟಾಲ್ ಸಕ್ಕರೆ, ಬೇಳೆ, ರವೆ ಯನ್ನು ಬಿಜೆಪಿ ಮಂಗಳೂರು ಕ್ಷೇತ್ರದ ಅದ್ಯಕ್ಷರಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಮಂಗಳೂರು ನಗರ ಉತ್ತರ ಭಾಜಪಾ ಅಧ್ಯಕ್ಷರಾದ ತಿಲಕರಾಜ್ ಕೃಷ್ಣಾಪುರ, ಮಂಗಳೂರು ಮಂಡಲ ಅಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್, ಜಿಲ್ಲಾ ಉಪಾದ್ಯಕ್ಷರಾದ ಸಂತೋಷ್ ರೈ ಬೋಳಿಯಾರ್, ಮಂಡಲ ಕಾರ್ಯದರ್ಶಿ ಹೇಮಂತ್ ಶೆಟ್ಟಿ,ರೈತ ಮೋರ್ಚ ಅಧ್ಯಕ್ಷರಾದ ಯೋಗಿಶ್ ಶೆಟ್ಟಿ,ಯುವ ಮೋರ್ಚ ಅದ್ಯಕ್ಷ ಸಚಿನ್ ಮೋರೆ ಸಹಿತ ಅನೇಕ ಭಾಜಪಾ ಕಾರ್ಯಕರ್ತರು ಉಪಸ್ಥಿತರಿದ್ದರು.
ಈ ಸಂದರ್ಬದಲ್ಲಿ ಶಾಸಕ ಡಾ.ಭರತ್ ಶೆಟ್ಟಿಯವರಿಗೆ ಬಿಜೆಪಿ ಮಂಗಳೂರು ಕ್ಷೇತ್ರದ ಕಾರ್ಯಕರ್ತರ ಪರವಾಗಿ ಕೃತಜ್ಞತೆ ಸಲ್ಲಿಸಿದರು.

ಬೋಳೂರಿನ ಮಹಿಳೆಗೆ ಕರೋನಾ ಸೋಂಕು ದೃಢ

ಮಂಗಳೂರು(30ಎ/2020): ಮಂಗಳೂರಿನ ಬೋಳೂರು ನಿವಾಸಿ , 58 ವರ್ಷದ ಮಹಿಳೆಯಲ್ಲಿ ಕೊರೊನಾ ಸೋಂಕು ದೃಢವಾಗಿದ್ದು, ಇವರು ಕಳೆದ ಕೆಲವು ದಿನಗಳ ಹಿಂದೆ ನಗರದ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ರೋಗಿ ಸಂಖ್ಯೆ 501 ರ ಸಂಪರ್ಕಕ್ಕೆ ಬಂದಿದ್ದರು ಎನ್ನಲಾಗಿದೆ.
ಕಳೆದ ಕೆಲವು ದಿನಗಳ ಹಿಂದೆ ಮಹಿಳೆಯಲ್ಲಿ ಜ್ವರ ಕಾಣಿಸಿಕೊಂಡ ಹಿನ್ನಲೆಯಲ್ಲಿ ಅವರ ಗಂಟಲ ಸ್ರಾವವನ್ನು ಪರೀಕ್ಷೆಗಾಗಿ ಕಳುಹಿಸಿತ್ತು. ಕೊರೊನಾ ದೃಢವಾದ ಹಿನ್ನಲೆಯಲ್ಲಿ ಇದೀಗ ಅವರನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಸಂಪರ್ಕಕ್ಕೆ ಬಂದಿದ್ದ ಜನರನ್ನು ಕ್ವಾರಂಟೈನ್ ಗೆ ಒಳಪಡಿಸಲಾಗಿದೆ.
ಬೋಳೂರು ಪರಿಸರದಲ್ಲಿ ಕೊರೊನಾ ಸೋಂಕು ದೃಡವಾದ ಹಿನ್ನಲೆಯಲ್ಲಿ ಕೊರೊನಾ ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಅಲ್ಲಲ್ಲಿ ಬ್ಯಾರಿಕೇಡ್ ಗಳನ್ನು ಅಳವಡಿಸಿ ಬುಧವಾರ ಸಂಜೆಯಿಂದ ಸಾರ್ವಜನಿಕ ಸಂಚಾರವನ್ನು ನಿರ್ಬಂಧಿಸಿದ್ದಾರೆ.

ಬಾಲಿವುಡ್ ನಟ ರಿಷಿ ಕಪೂರ್ ಇನ್ನಿಲ್ಲ

ಮುಂಬೈ: ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ಬಾಲಿವುಡ್‌ ಹಿರಿಯ ನಟ ರಿಷಿ ಕಪೂರ್ (67)‌ ಅವರು ಗುರುವಾರ ಬಳಗ್ಗೆ ಮೃತಪಟ್ಟಿದ್ದಾರೆ. ಅವರನ್ನು ಇಲ್ಲಿನ ಸರ್ ಎಚ್‌ಎನ್‌ ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಗೆ ಬುಧವಾರ ರಾತ್ರಿ ದಾಖಲಿಸಲಾಗಿತ್ತು.
2018ರಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಕಪೂರ್‌, ಅಮೆರಿಕದಲ್ಲಿ ಒಂದು ವರ್ಷಕಾಲ ಚಿಕಿತ್ಸೆ ಪಡದು ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಭಾರತಕ್ಕೆ ವಾಪಸ್‌ ಆಗಿದ್ದರು.
ಫೆಬ್ರವರಿಯಲ್ಲಿ ಅನಾರೋಗ್ಯಕ್ಕೆ ತುತ್ತಾಗಿದ್ದ ಅವರು ಎರಡು ಬಾರಿ ಆಸ್ಪತ್ರೆಗೆ ದಾಖಲಾಗಿ ಗುಣಮುಖರಾಗಿದ್ದರು.
ಅವರನ್ನು ಇಲ್ಲಿನ ಸರ್ ಎಚ್‌ಎನ್‌ ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಗೆ ಬುಧವಾರ ರಾತ್ರಿ ದಾಖಲಿಸಲಾಗಿತ್ತು.

ವೇದವ್ಯಾಸ ಕಾಮತ್, ಯು.ಟಿ ಖಾದರ್ ಜಟಾಪಟಿ

ಮಂಗಳೂರು(29ಎ/2020): ಕೊರೋನಾ ಭೀತಿ‌ ಮಧ್ಯೆಯೂ ಶಾಸಕರುಗಳ ರಾಜಕೀಯ ಮೇಲಾಟ.ಮಂಗಳೂರಿನ ಕಾಂಗ್ರೇಸ್ ಬಿಜೆಪಿ ಶಾಸಕರ ಮಧ್ಯೆ ಮಾತಿನ ವಾರ್,ಶಾಸಕ ಯು.ಟಿ ಖಾದರ್ ಹಾಗೂ ವೇದವ್ಯಾಸ್ ಕಾಮತ್ ನಡುವೆ ಏಕವಚನದಲ್ಲೇ ಮಾತಿನ ಚಕಮಕಿ.
“ಯು.ಟಿ ಖಾದರರ ಕಾರ್ ಬೆಂಗಳೂರಿನಿಂದ ಮಂಗಳೂರಿಗೆ ಬಂದು ಅಲ್ಲಿಂದ ಮರೋಳಿಗೆ ಇಟಲಿಯಿಂದ ಬಂದವರನ್ನು ತಲುಪಿಸುತ್ತದೆ.
ಇಟಲಿಯಿಂದ ದೆಹಲಿಗೆ ಕರೆತರಲು ಸರಕಾರಕ್ಕೆ ತಿಳಿದಿದೆ, ದೆಹಲಿಯಿಂದ ಬೆಂಗಳೂರಿಗೆ ಕರೆತರಲು ಸರ್ಕಾರ ಕೆಲಸಮಾಡಿದೆ ಆದರೆ ಬೆಂಗಳೂರಿನಿಂದ ಮರೊಳಿಗೆ ತಲುಪಿಸಲು ಖಾದರ್ ಹೋಗುತ್ತಾರೆ….
ಜೊತೆಗೆ ಶಾಸಕ ಖಾದರವರ ಕಾರ್ ಪಡುಬಿದ್ರೆಗೆ ಹೋಗುತ್ತದೆ, ಉಡುಪಿಗೆ ಹೋಗುತ್ತದೆ” ಎಂದು ಆರೋಪಿಸಿದರು.

ಕರೋನಾದ ಈ ಕ್ಲಿಷ್ಟಕರ ಸಮಯದಲ್ಲಿ ಹೀಗೆ ಶಾಸಕರೇ ಮಾಡಿದರೆ ಹೇಗೆ ಎಂದು ವೇದವ್ಯಾಸ ಕಾಮತ್ ಆಕ್ಷೇಪ ವ್ಯಕ್ತಪಡಿಸಿದರು.
ಐವನ್ ಡಿಸೋಜ ಖಾದರ್ ಪರವಾಗಿ ಮಧ್ಯ ಪ್ರವೇಶಿಸಿ ಮಾತಿಗೆ ಮಾತು ಬಳೆಸಿದರು.
ಉಸ್ತುವಾರಿ ಸಚಿವರ ನೇತೃತ್ವದಲ್ಲಿ ನಡೆಯುತ್ತಿದ್ದ ಸಭೆ,ಕೊರೋನಾ ತಡೆಗಟ್ಟುವಿಕೆಯ ವಿಚಾರದಲ್ಲಿ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ನಡೆದ ಸಭೆ,ಕರಾವಳಿ ಶಾಸಕರು, ಜನಪ್ರತಿನಿಧಿಗಳು,ಅಧಿಕಾರಿಗಳು ಭಾಗಿಯಾಗಿದ್ದರು,ಶಾಸಕರ ಗಲಾಟೆ ಮಧ್ಯೆ ಮೂಕ ಪ್ರೇಕ್ಷಕರಾದ ಅಧಿಕಾರಿಗಳು.

ಇರ್ಫಾನ್ ಖಾನ್ ನಿಧನ

ಮುಂಬೈ(29ಎ/2020): ಅನಾರೋಗ್ಯದಿಂದ ಬಳಲುತ್ತಿದ್ದ ಹಿಂದಿ ಚಿತ್ರನಟ ಇರ್ಫಾನ್ ಖಾನ್ (53)ಬುಧವಾರ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ ಇರ್ಫಾನ್ ಆರೋಗ್ಯ ಕ್ಷೀಣಿಸಿದ ಹಿನ್ನೆಲೆಯಲ್ಲಿ ಮಂಗಳವಾರ ಮುಂಬೈನ ಕೋಕಿಲಾಬೆನ್ ಧೀರೂಬಾಯಿ ಅಂಬಾನಿ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ದಾಖಲಾಗಿದ್ದರು.ಖಾನ್ ಅವರು ಪತ್ನಿ ಸುತಾಪಾ ಸಿಕ್ದರ್ ಹಾಗೂ ಇಬ್ಬರು ಪುತ್ರರು ಸಹಿತ ಅಪಾರ ಬಂಧು ಬಳಗ, ಅಭಿಮಾನಿಗಳನ್ನು ಅಗಲಿದ್ದಾರೆ.
ಇರ್ಫಾನ್ ಖಾನ್ ತಾಯಿ ಶನಿವಾರ ರಾಜಸ್ಥಾನದ ಸ್ವಗೃಹದಲ್ಲಿ ಮೃತಪಟ್ಟರು. ಅವರಿಗೆ 95 ವರ್ಷ ವಯಸ್ಸಾಗಿತ್ತು. ಲಾಕ್‌ಡೌನ್‌ ಪರಿಣಾಮ ಅವರು ತಾಯಿಯ ಅಂತ್ಯ ಕ್ರಿಯೆಯಲ್ಲಿ ಪಾಲ್ಗೊಂಡಿರಲಿಲ್ಲ. ಮಂಗಳವಾರ ಇರ್ಫಾನ್‌ ತೀವ್ರ ಅನಾರೋಗ್ಯದಿಂದ ಮುಂಬೈನ ಆಸ್ಪತ್ರೆಗೆ ದಾಖಲಾಗಿದ್ದರು. 

ಉಳ್ಳಾಲ ಕ್ಷೇತ್ರಕ್ಕೆ ಸಹಾಯಹಸ್ತ ನೀಡಿದ ಶಾಸಕರಾದ ವೇದವ್ಯಾಸ್ ಕಾಮತ್

ಮಂಗಳೂರು(29ಎ/2020):ಮಂಗಳೂರು ದಕ್ಷಿಣದ ಶಾಸಕರಾದ ವೇದವ್ಯಾಸ್ ಕಾಮತ್ ವತಿಯಿಂದ 1000ಕಿಟ್ ಉಳ್ಳಾಲ ಕ್ಷೇತ್ರಕ್ಕೆ ನೀಡಿದರು.
ಕೊರೋನೋ ಲಾಕ್ ಡೌನ್ ಬಳಿಕ, ಮಂಗಳೂರು ಕ್ಷೇತ್ರದ ಜನರಿಗೆ ದಿನನಿತ್ಯದ ಜೀವನಕ್ಕೆ ಚ್ಯುತಿ ಬಾರದ ರೀತಿಯಲ್ಲಿ ಬಿಜೆಪಿ ಕ್ಷೇತ್ರಾದ್ಯಕ್ಷರಾದ ಚಂದ್ರಹಾಸ್ ಪಂಡಿತ್ ಹೌಸ್ ಮತ್ತು ಜಿಲ್ಲಾ ಉಪಾದ್ಯಕ್ಷರಾದ ಸಂತೋಷ್ ಕುಮಾರ್ ರೈ ಬೋಳಿಯಾರ್ ಅವಿರತ ಸೇವೆಗಳನ್ನು ನೀಡುತ್ತಿದ್ದು, ಪ್ತಸ್ತುತ ಲಾಕ್ ಡೌನ್ ಮುಂದುವರೆದರೂ ಕ್ಷೇತ್ರದ ಜನರಿಗೆ ಯಾವುದೇ ಸಮಸ್ಯೆಗಳು ತಲೆದೋರಬಾರದು ಎಂಬ ಜನಪರ ಕಾಳಜಿಯಿಂದ ಬಿಜೆಪಿ ಮಂಗಳೂರು ಕ್ಷೇತ್ರಾದ್ಯಕ್ಷರು ನೆರೆಯ ಮಂಗಳೂರು ದಕ್ಷಿಣದ ಶಾಸಕರಾದ ವೇದವ್ಯಾಸ್ ಕಾಮತ್ ರವರಲ್ಲಿ ಉಳ್ಳಾಲ ಭಾಗದ ಜನರ ಪರವಾಗಿ ಮನವಿ ಮಾಡಿದಾಗ, ಅವರ ಕ್ಷೇತ್ರದ ಜನರು ಎಂಬ ಭಾವನೆಯಿಂದ ತಕ್ಷಣ ಸ್ಪಂದಿಸಿದ ಶಾಸಕರು ಉಳ್ಳಾಲ (ಮಂಗಳೂರು)ಕ್ಷೇತ್ರಕ್ಕೆ 1000 ಕ್ಕೂ ಅಧಿಕ ದಿನಸಿ ಕಿಟ್ ಗಳನ್ನು ನೀಡಿ ಸಹಕರಿಸಿದ್ದಾರೆ.
ಈ ಸಂದರ್ಭದಲ್ಲಿ ದ.ಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುದೀರ್ ಶೆಟ್ಟಿ ಕಣ್ಣೂರು, ಮಂಗಳೂರು ಅಧ್ಯಕ್ಷರಾದ ವಿಜಯ ಕುಮಾರ್, ಮೇಯರ್ ದಿವಾಕರ ಪಾಂಡೆಶ್ವರ, ಶ್ರೀಮತಿ ಪೂರ್ಣಿಮ, ಭಾಸ್ಕರ್ ಚಂದ್ರ ಶೆಟ್ಟಿ, ನವೀನ್ ಶೆಟ್ಟಿ ಕುರ್ನಾಡ್, ಪುರುಷೋತ್ತಮ ಕಲ್ಲಾಪು, ಭವಿತ್ ರಾಜ್ ಎಂಡೆಲ್ ಇದ್ದರು.

ಹಾಡುಹಗಲಲ್ಲೇ ದಂಪತಿಗಳ ಬರ್ಬರ ಹತ್ಯೆ,ಆರೋಪಿ ಬಂಧನ

ಮಂಗಳೂರು(29ಎ/2020): ಮಂಗಳೂರಿನ ಹೊರವಲಯದ ಕಿನ್ನಿಗೋಳಿ ಏಳಿಂಜೆಯಲ್ಲಿ ಹಾಡುಹಗಲಲ್ಲೇ ದಂಪತಿಗಳ ಬರ್ಬರ ಹತ್ಯೆ ಘಟನೆ ಜರುಗಿದೆ.

ವಿನ್ಸೆಂಟ್ ಡಿಸೋಜ(48) ಪತ್ನಿ ಹೆಲಿನ್ ಡಿಸೋಜ(43) ಹತ್ಯೆಗೊಳಗಾದವರು.
ಪಿಕ್ಕಾಸು ಹಾಗೂ ಹಾರೆಯಿಂದ ಹಲ್ಲೆ ನಡೆಸಿ ಕೊಲೆಯನ್ನು ನೆರೆ ಮನೆಯ ಅಲ್ಪನ್ಸ್ ಸಲ್ಡಾನ ಕೊಲೆ(51) ಮಾಡಿರುವುದಾಗಿ ವರದಿಯಾಗದೆ.
ಮನೆ ಮುಂಭಾಗದಲ್ಲೇ ಬರ್ಬರವಾಗಿ ಕೊಲೆ ಮಾಡಲಾಗಿದ್ದು,ಮನೆ ಪಕ್ಕದ ಜಾಗದ ತಕರಾರಿನ ಹಿನ್ನಲೆಯಲ್ಲಿ‌ ಕೊಲೆ ಮಾಡಲಾಗಿದೆ,
ಸ್ಥಳಕ್ಕೆ ಮುಲ್ಕಿ ಪೊಲೀಸರ ಭೇಟಿ,ಆರೋಪಿ ಪೊಲೀಸ್ ವಶಕ್ಕೆ ಪಡೆದಿದ್ದಾರೆ.

ಸ್ವಗ್ರಾಮಗಳಿಗೆ ಮರಳಿದ ಕಾರ್ಮಿಕ ಕುಟುಂಬಗಳು

ಮಂಗಳೂರು(29/ಎ2020):ತಮ್ಮ ಹೊಟ್ಟೆಪಾಡಿಗಾಗಿ ರಾಜ್ಯದ ವಿವಿಧ ಜಿಲ್ಲೆಗಳಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಿದ್ದ ಕಾರ್ಮಿಕ ವರ್ಗದ ಅನೇಕ ಜನರು ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದ ಬಳಿ ತಂಗಿದ್ದು ಅವರಿಗೆ ಶಾಸಕ ವೇದವ್ಯಾಸ ಕಾಮತ್ ನೇತೃತ್ವದಲ್ಲಿ ಆಹಾರ ವ್ಯವಸ್ಥೆ ಮಾಡಲಾಯಿತು.
ಸದ್ಯ ರಾಜ್ಯ ಸರಕಾರ ಕೊಟ್ಟ ಅನುಮತಿ ಪ್ರಕಾರ ಜಿಲ್ಲಾ ಮತ್ತು ತಾಲೂಕು ಮಟ್ಟದ ಕಾರ್ಮಿಕ ಇಲಾಖೆ ಹಾಗೂ ಜಿಲ್ಲಾಡಳಿತದ ಸಹಕಾರದಿಂದ ಇಂದು ಅವರೆಲ್ಲರನ್ನೂ ತಮ್ಮ ತಮ್ಮ ಊರಿಗೆ ವಾಪಸ್ಸು ಕಳಿಸಲು ಬಸ್ ವ್ಯವಸ್ಥೆ ಮಾಡಲಾಗಿದೆ.
ನಮ್ಮ ಜಿಲ್ಲೆಯ ಆರೋಗ್ಯ ಇಲಾಖೆಯಿಂದ ಅಲ್ಲಿನ ಎಲ್ಲರಿಗೂ ಮಲೇರಿಯಾ,ಡೆಂಗ್ಯೂ ಹಾಗೂ ಜ್ವರದ ಲಕ್ಷಣಗಳನ್ನು ಪರೀಕ್ಷೆ ಮಾಡಲಾಗಿದೆ. ಹೊರಡುವ ಸಂಧರ್ಭದಲ್ಲಿ ಸುಮಾರು 850 ಜನರಿಗೆ ಸಂಘ ಸಂಸ್ಥೆಗಳ ವತಿಯಿಂದ ಊಟದ ವ್ಯವಸ್ಥೆ ಮಾಡಲಾಯಿತು.
ಬಸ್ ಪ್ರಯಾಣಿಕರಿಗೆ ಹಣ್ಣು, ಬಿಸ್ಕೇಟ್,ನೀರಿನ ಬಾಟಲಿ,ಸೋಪ್ ಮುಂತಾದವುಗಳನ್ನು ಒದಗಿಸಿದ್ದಾರೆನಾಳೆ ಬೆಳಗ್ಗೆ ಅವರೆಲ್ಲರೂ ತಮ್ಮ ತಮ್ಮ ಊರಿಗೆ ತಲುಪಲಿದ್ದಾರೆ,

Related Post