September 23, 2020

Month: May 2020

ಮುಂಬಯಿಂದ ಬಂದ ಬೆಳಪುವಿನ ವ್ಯಕ್ತಿಗೆ ಕರೋನಾ ಧೃಡ

ಕಾಪು(31ಮೇ/2020): ಮಹಾರಾಷ್ಟ್ರದಿಂದ ಕುಟುಂಬ ಸಮೇತ ಆಗಮಿಸಿದ್ದ ಕಾಪುವಿನಲ್ಲಿ ಸರಕಾರಿ ಕ್ವಾರಂಟೈನ್ ಮುಗಿಸಿ ಎರಡು ದಿನದ ಹಿಂದೆ ಮನೆಗೆ ಆಗಮಿಸಿದ್ದರು. ಮನೆಗೆ ಬಂದ ಎರಡನೇ ದಿನದಲ್ಲೇ ಕುಟುಂಬದ ವ್ಯಕ್ತಿಗೆ ಕೋವಿಡ್ ಪಾಸಿಟಿವ್ ಬಂದಿರುವ ಹಿನ್ನೆಲೆಯಲ್ಲಿ ಗ್ರಾಮದ ಜನರಲ್ಲಿ ಆತಂಕ ಮನೆ ಮಾಡಿದೆ.
ಕ್ವಾರಂಟೈನ್ ಕೇಂದ್ರದಿಂದ ಬಿಡುಗಡೆಯಾಗಿ ಮನೆಗೆ ಬಂದಿದ್ದ ಕಾಪು ತಾಲೂಕಿನ ಬೆಳಪು ಗ್ರಾಮದ ವ್ಯಕ್ತಿಯೋರ್ವರಿಗೆ ಕೋವಿಡ್-19 ಸೋಂಕು ದೃಢಪಟ್ಟ ಸಂಬಂಧ ರವಿವಾರ ಬೆಳಪು ಗ್ರಾಮದಲ್ಲಿ ಮನೆಯ ಪರಿಸರವನ್ನು ಅಧಿಕಾರಿಗಳು ವ್ಯಕ್ತಿಯ ಮನೆ ಪರಿಸರವನ್ನು ಸೀಲ್ ಡೌನ್ ಮಾಡಿದರು.
ಜಿಲ್ಲಾಡಳಿತದ ನಿರ್ದೇಶನದಂತೆ ಕಾಪು ತಹಶೀಲ್ದಾರ್ ಮಹಮ್ಮದ್ ಇಸಾಕ್, ಕಂದಾಯ ನಿರೀಕ್ಷಕ ಕೆ. ರವಿಶಂಕರ್, ಶಿರ್ವ ಎಸ್ಸೈ ಶ್ರೀಶೈಲ ಮುರುಗೋಡ, ಬೆಳಪು ಗ್ರಾ.ಪಂ.‌ಅಭಿವೃದ್ದಿ ಅಧಿಕಾರಿ ಎಚ್.ಆರ್. ರಮೇಶ್, ಗ್ರಾಮಕರಣಿಕ ಗಣೇಶ್ ಕುಮಾರ್, ಅರುಣ್ ಕುಮಾರ್ ಮೊದಲಾದವರು ಭೇಟಿ ನೀಡಿ, ಕಂಟೈನ್ಮೆಂಟ್ ವಲಯವನ್ನು ಪರಶೀಲಿಸಿದರು.

ಉಡುಪಿ ಜಿಲ್ಲೆಯಲ್ಲಿ ಮೇ.31ರಿಂದ ಮೂರು ದಿನ ಭಾರೀ ಮಳೆ ಸಾಧ್ಯತೆ

ಉಡುಪಿ(ಮೇ30/2020): ಭಾರತೀಯ ಹವಾಮಾನ ಇಲಾಖೆ/ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ, ಬೆಂಗಳೂರು ಇವರ ಮುನ್ಸೂಚನೆಯಂತೆ ರಾಜ್ಯದ ಕರಾವಳಿ ಭಾಗದಲ್ಲಿ ಮೇ 31 ರಿಂದ ಮುಂದಿನ ಮೂರು ದಿನಗಳ ಕಾಲ ಹೆಚ್ಚಿನ ಮಳೆಯಾಗುವ ಸಾಧ್ಯತೆಯಿದೆಯೆಂದು ಸೂಚಿಸಿರುತ್ತಾರೆ,
ಪ್ರಸ್ತುತ ಉಡುಪಿ ಜಿಲ್ಲೆಯಲ್ಲಿ (ಮೇ 29 ರಮಧಾಹ್ನದ ವರದಿಯಂತೆ) ಹಳದಿ ಅಲರ್ಟ್ ಘೋಷಿಸಲಾಗಿದೆ,ಮೇ31ರಿಂದ ಸುಮಾರು 6.5 ಸೆಂ.ಮೀ ದಿಂದ 11.5 ಸೆಂ.ಮೀ ವರೆಗೆ ಮಳೆಯಾಗುವ ಸಾಧ್ಯತೆಯಿರುತ್ತದೆ, ಈ ಹಿನ್ನಲೆಯಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಮುಂಜಾಗ್ರತಾ ಕ್ರಮ ವಹಿಸಬೇಕಾಗಿರುವುದರಿಂದ ಸಾರ್ವಜನಿಕರಿಗೆ ಈ ಕೆಳಕಂಡoತೆ ಸೂಚನೆಗಳನ್ನು ನೀಡಲಾಗಿದೆ.
ಸಾರ್ವಜನಿಕರು ನದಿ/ಸಮುದ್ರಕ್ಕೆ ಇಳಿಯಬಾರದು, ಮಕ್ಕಳು ಸಾರ್ವಜನಿಕರು ಅಪಾಯಕಾರಿ ವಿದ್ಯುತ್ ಕಂಬ , ಕಟ್ಟಡ/ಮರಗಳ ಕೆಳಗೆ ನಿಲ್ಲದೆ , ಸುರಕ್ಷಿತ ಸ್ಥಳಗಳಲ್ಲಿ ಇರಬೇಕು. ತುರ್ತು ಸೇವೆಗಾಗಿ ಟೋಲ್ ಫ್ರೀ ಸಂಖ್ಯೆ.1077 , ದೂ.ಸಂ. 0820-2574802 ಸಂಪರ್ಕಿಸುವoತೆ ಹಾಗೂ ಜಿಲ್ಲಾ/ತಾಲೂಕು ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿ ಇರುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ಸೂಚಿಸಿದ್ದಾರೆ.

ಬಿ.ಎಸ್.ಯಡಿಯೂರಪ್ಪ ರಾಜಕೀಯ ಕಾರ್ಯದರ್ಶಿಯಾಗಿ ಎನ್.ಆರ್.ಸಂತೋಷ್

ಬೆಂಗಳೂರು(30ಮೇ/2020): ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿಯಾಗಿ ಎನ್.ಆರ್.ಸಂತೋಷ್ ಅವರನ್ನು ನೇಮಕ ಸಂಬಂಧವಾಗಿ ರಾಜ್ಯ ಸರ್ಕಾರದದಿಂದ ಅಧಿಕೃತ ಆದೇಶ ಹೊರಡಿಸಲಾಗಿದೆ.
ಎನ್.ಆರ್.ಸಂತೋಷ್ ಸಿಎಂ ಯಡಿಯೂರಪ್ಪ ಅವರ ಆಪ್ತರಾಗಿದ್ದಾರೆ. ಅದರಲ್ಲೂ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವನ್ನು ಬಿಳಿಸುವಲ್ಲಿ ಸಂತೋಷ್ ಪ್ರಮುಖ ಪಾತ್ರವಹಿಸಿದ್ದರು.
16 ಅತೃಪ್ತ ಕಾಂಗ್ರೆಸ್ ಜೆಡಿಎಸ್ ಶಾಸಕರನ್ನು ಸೆಳೆದು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಿಸುವಲ್ಲಿ ಸಫಲರಾಗಿದ್ದ ಸಂತೋಷ್ ಬಳಿಕ ಅವರನ್ನು ಬಿಜೆಪಿ ಹೈಕಮಾಂಡ್ ಸಲಹೆಯಂತೆ ರಾಜ್ಯದಿಂದ ಹೊರಗೆ ಕರೆದುಕೊಂಡು ಹೋಗಿದ್ದರು.
ಆಗ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರು ಸಂತೋಷ್ ಅವರ ವಿರುದ್ಧ ಹರಿಹಾಯ್ದು ಹೇಳಿಕೆಯನ್ನೂ ಕೊಟ್ಟಿದ್ದರು.
ಯಡಿಯೂರಪ್ಪ ಅವರಿಗೆ 4ನೇ ರಾಜಕೀಯ ಕಾರ್ಯದರ್ಶಿಯಾಗಿ ಎನ್.ಆರ್.ಸಂತೋಷ್ ಅವರು ನೇಮಕರಾಗಿದ್ದಾರೆ

ಲಾಕ್ ಡೌನ್ 5.0: ಕೇಂದ್ರದ ಮಾರ್ಗಸೂಚಿ ಪ್ರಕಟ

ದೆಹಲಿ(30ಮೇ/2020): ಕೇಂದ್ರ ಸರ್ಕಾರವು ಲಾಕ್ ಡೌನ್ ಐದನೇ ಹಂತದ ಮಾರ್ಗಸೂಚಿ ಪ್ರಕಟಿಸಿದೆ.
ಜೂನ್ ಇಡೀ ತಿಂಗಳು ಶಾಲೆಗಳು ತೆರೆಯುವುದಿಲ್ಲ,
ಜೂನ್ ಎಂಟರಿಂದ ಎಲ್ಲವೂ ವ್ಯವಹಾರಗಳು ತೆರೆಯುತ್ತದೆ,
ಕಂಟೈನ್ಮೆಂಟ್ ಝೋನ್ ಗಳಿಗೆ ಕಠಿಣ ಕ್ರಮ,
ರಾತ್ರಿ 9ರಿಂದ ಬೆಳಿಗ್ಗೆ 5ರ ತನಕ ಕರ್ಫ್ಯೂ,
ಅಂತರರಾಜ್ಯ ಓಡಾಟಕ್ಕೆ ಅವಕಾಶ,
ದೇವಾಲಯ, ಮಾಲ್, ಹೋಟೆಲ್ ಎಲ್ಲವೂ 8ರ ನಂತರ ಪುನರಾಂಭ ಆಗಲಿದೆ.

ಜೂನ್ 8ರ ನಂತರ ಕುದ್ರೋಳಿ ಕ್ಷೇತ್ರದಲ್ಲಿ ಸಾರ್ವಜನಿಕರಿಗೆ ದೇವರ ದರ್ಶನ

ಮಂಗಳೂರು(30ಮೇ/2020): ಜೂನ್ 8ರ ಬಳಿಕವೇ ದೇವಸ್ಥಾನ ಭಕ್ತರ ಪ್ರವೇಶಕ್ಕೆ ತೆರೆದುಕೊಳ್ಳಲಿದೆ ಎಂದು ಆಡಳಿತ ಮಂಡಳಿ
ಕುದ್ರೋಳಿ ಶ್ರೀಗೋಕರ್ಣನಾಥ ಕ್ಷೇತ್ರ ಪ್ರಕಟಿಸಿದೆ.
ಕೊರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಸೂಚನೆಯಂತೆ ಜೂನ್ 8ರ ಬಳಿಕ ದೇವಸ್ಥಾನಗಳನ್ನು ತೆರೆಯಲು ಅನುವು ಮಾಡಿಕೊಡಲಾಗಿದೆ. ಹಾಗಾಗಿ ಜೂನ್ 1ರ ಸೋಮವಾರ ಕುದ್ರೋಳಿ ಕ್ಷೇತ್ರದಲ್ಲಿ ‌ಹಮ್ಮಿಕೊಂಡಿದ್ದ ಧನ್ವಂತರಿ ಹೋಮ ಮತ್ತು ಶತ ಸೀಯಾಳಾಭಿಷೇಕವನ್ನು ಮುಂದೂಡಲಾಗಿದೆ.
ಲಜೂನ್ 8ರ ಬಳಿಕವೇ ದೇವಸ್ಥಾನ ಭಕ್ತರ ಪ್ರವೇಶಕ್ಕೆ ತೆರೆದುಕೊಳ್ಳಲಿದೆ ಎಂದು ಆಡಳಿತ ಮಂಡಳಿ
ಕುದ್ರೋಳಿ ಶ್ರೀಗೋಕರ್ಣನಾಥ ಕ್ಷೇತ್ರ ಪ್ರಕಟಿಸಿದೆ.

ಉಡುಪಿ: ಕೋವಿಡ್ ಆಸ್ಪತ್ರೆಯಿಂದ 45 ಜನರ ಬಿಡುಗಡೆ

ಉಡುಪಿ(30ಮೇ/2020): ಕೋವಿಡ್-19 ಸೋಂಕಿತರ ಸಂಖ್ಯೆಯಲ್ಲಿ ಏರಿಕೆ ಕಂಡಿದ್ದ ಉಡುಪಿ ಜಿಲ್ಲೆಯಲ್ಲಿ ಇಂದು 45 ಜನರು ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಜಿ ಜಗದೀಶ್ ಹೇಳಿಕೆ ನೀಡಿದರು.
ಇಂದು ಉಡುಪಿಯ ಟಿಎಂಎ ಪೈ ಆಸ್ಪತ್ರೆಯಿಂದ 17 ಮಕ್ಕಳು ಸೇರಿದಂತೆ 45 ಜನರು ಕೋವಿಡ್-19 ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದಿದ್ದಾರೆ.
ಶುಕ್ರವಾರ ಸಂಜೆಯ ವರದಿಯವರೆಗೆ ಜಿಲ್ಲೆಯಲ್ಲಿ ಇದುವರೆಗೆ 164 ಸೋಂಕು ಪ್ರಕರಣಗಳು ದೃಢವಾಗಿದೆ. ಶುಕ್ರವಾರ 15 ಸೋಂಕು ಪ್ರಕರಣಗಳು ಪತ್ತೆಯಾಗಿದೆ.
ಸರಕಾರದ ನೂತನ ನಿಯಮದ ಪ್ರಕಾರ ಕೋವಿಡ್ ಲಕ್ಷಣ ಇಲ್ಲದೇ ಇರುವ ಏಳು ದಿನಕ್ಕಿಂದ ಹೆಚ್ಚಿನ ಚಿಕಿತ್ಸೆ ಪೂರೈಸಿದ ಸೋಂಕಿತರಿಗೆ ನೆಗೆಟಿವ್ ವರದಿಯಾದವರನ್ನು ಇಂದು ಬಿಡುಗಡೆ ಮಾಡಲಾಗಿದೆ. ಅವರು ಮುಂದಿನ ದಿನಗಳಲ್ಲಿ ಮನೆಯಲ್ಲಿ ಎಚ್ಚರದಿಂದ ಇರಬೇಕು, ಸೋಂಕು ಲಕ್ಷಣ ಕಂಡುಬಂದರೆ ತಿಳಿಸಬೇಕು ಎಂದಿದ್ದಾರೆ.

ಭಾನುವಾರ ಸಂಪೂರ್ಣ ಲಾಕ್‌ಡೌನ್ ಇಲ್ಲ

ಬೆಂಗಳೂರು(30ಮೇ/2020): ಜನರ ಬೇಡಿಕೆ ಹಿನ್ನೆಲೆಯಲ್ಲಿ ಹಾಗೂ ರಾಜ್ಯದ ಜನತೆಯ ಹಿತದೃಷ್ಟಿಯಿಂದ ಭಾನುವಾರದಂದು ಸಂಪೂರ್ಣ ಲಾಕ್‌ಡೌನ್ ಇರುವುದಿಲ್ಲ. ಹೀಗಾಗಿ ಎಲ್ಲ ದೈನಂದಿನ ಚಟುವಟಿಕೆಗಳು ಎಂದಿನಂತೆ ನಡೆಯಲಿವೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಕೊರೊನಾ ವೈರಸ್‌ ಸಾಂಕ್ರಾಮಿಕ ಹರಡುವಿಕೆ ತಡೆಯುವ ಉದ್ದೇಶದಿಂದ ದೇಶದಾದ್ಯಂತ ನಾಲ್ಕನೇ ಹಂತದ ಲಾಕ್‌ಡೌನ್ ಜಾರಿಯಲ್ಲಿದೆ. ಈ ಹಂತದಲ್ಲಿ ಅನೇಕ ಚಟುವಟಿಕೆಗಳಿಗೆ ವಿನಾಯಿತಿ ನೀಡಲಾಗಿದೆ. ಆದರೆ, ಭಾನುವಾರದಂದು ಮಾತ್ರ ಸಂಪೂರ್ಣ ಲಾಕ್‌ಡೌನ್ ಇರಬೇಕು. ಅಗತ್ಯ ಸೇವೆ ಹೊರತುಪಡಿಸಿ ಯಾವುದೇ ಚಟುವಟಿಕೆ ನಡೆಸಬಾರದು ಎಂದು ರಾಜ್ಯ ಸರ್ಕಾರ ಈ ಹಿಂದೆ ಆದೇಶಿಸಿತ್ತು. ಅದರಂತೆ ಕಳೆದ ಭಾನುವಾರ ರಾಜ್ಯದಾದ್ಯಂತ ಸಂಪೂರ್ಣ ಲಾಕ್‌ಡೌನ್ ಆಗಿತ್ತು

ಕೊರೋನಾ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ಗಂಭೀರತೆ ಇಲ್ಲ: ಯು.ಟಿ ಖಾದರ್

ಮಂಗಳೂರು(30ಮೇ/2020): ಡಾಕ್ಟರ್ ಮತ್ತು ನರ್ಸ್ ಗಳಿಗೆ ಎರಡು ತಿಂಗಳಿನಿಂದ ಸಂಬಳ ಆಗಿಲ್ಲ.ಕೊರೋನಾ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ಗಂಭೀರತೆ ಇಲ್ಲ ಎಂದು ಮಾಜಿ ಸಚಿವ ಯು.ಟಿ ಖಾದರ್ ಗಂಭೀರ ಆರೋಪ ಮಾಡಿದ್ದಾರೆ.
ಎಲ್ಲಾ ಕಡೆ ವೈದ್ಯರು,ನರ್ಸ್ ಗಳು ಕೆಲಸ ಮಾಡಿದ್ದಾರೆ.ಕೊರೋನಾ ಸಂಧರ್ಭದಲ್ಲೇ ವೇತನ ನೀಡದೆ ಸತಾಯಿಸಿದ್ದಾರೆ,ಕೊರೋನಾ ವಾರಿಯರ್ಸ್ ರನ್ನು ಸರ್ಕಾರ ನಿರ್ಲಕ್ಷ್ಯಿಸಿದೆ,ಅವರಿಗೆ ಸರ್ಕಾರ ತಕ್ಷಣ ಸಂಬಳ ಬಿಡುಗಡೆ ಮಾಡಬೇಕು,ಕೊರೋನಾ ವಾರಿಯರ್ಸ್‌ಗೆ ಸಂಬಳ ನೀಡದೆ ಸತಾಯಿಸಿದೆ,ಇನ್ನೂ ರಾಜ್ಯದಲ್ಲಿ ಕೊರೋನಾ ರೋಗಿಗಳ ಸ್ಥಿತಿ ಹೇಗಿರಬೇಡ,ಎಂದು ರಾಜ್ಯ ಸರ್ಕಾರದ ವಿರುದ್ಧ ಮಾಜಿ ಸಚಿವ ಯುಟಿ ಖಾದರ್ ಗಂಭೀರ ಆರೋಪ ಮಾಡಿದ್ದಾರೆ.

ಉಡುಪಿ: ಜಿ.ಪಂ ಸಿಬ್ಬಂದಿಗೆ ಕರೋನಾ ಇಲ್ಲ

ಉಡುಪಿ(30ಮೇ/2020): ಉಡುಪಿ ಜಿಪಂ ಸಿಬ್ಬಂದಿ, ಕಟಪಾಡಿ ಸರಕಾರಿಗುಡ್ಡೆಯ 30ರ ಹರೆಯದ ಯುವಕನ 3ನೇ ಬಾರಿ ನಡೆಸಿದ ಗಂಟಲದ್ರವದ ಪರೀಕ್ಷಾ ವರದಿ ನೆಗೆಟಿವ್ ಬಂದಿದೆ.
ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಕೋವಿಡ್ ನೋಡೆಲ್ ಅಧಿಕಾರಿ ಡಾ ಪ್ರಶಾಂತ್ ಭಟ್ ಮೇ 24ರಂದು ಮಂಗಳೂರು ಪ್ರಯೋಗಾಲಯದಿಂದ ಇವರ ಗಂಟಲು ದ್ರವದ ಮಾದರಿಯ ಪರೀಕ್ಷೆಯ ವರದಿ ಪಾಸಿಟಿವ್ ಬಂದಿದ್ದು, ಯುವಕನನ್ನು ಆಸ್ಪತ್ರೆಗೆ ದಾಖಲಿಸಿ ಪ್ರತ್ಯೇಕವಾಗಿರಿಸಿ ನೋಡಿಕೊಳ್ಳಲಾಗುತ್ತಿತ್ತು.
ಆದರೆ ಆತನಲ್ಲಿ ಸೋಂಕಿನ ಸಾಧ್ಯತೆ ಇಲ್ಲ ಕಾರಣ ಎರಡು ಮತ್ತು ಮೂರನೇ ವರದಿಯಲ್ಲಿ ನೆಗೆಟಿವ್ ಇರುವುದು ಖಚಿತವಾಗಿದೆ.

ಕದ್ರಿ ಕ್ರಿಕೆಟ್‍ರ್ಸ್ ಕ್ಲಬ್‌ನ ಅಂಗಸಂಸ್ಥೆ ಆಸರೆ ಫ್ರೆಂಡ್ಸ್ ಕದ್ರಿ ವತಿಯಿಂದ ಮನೆ ಹಸ್ತಾಂತರ

ಮಂಗಳೂರು(ಮೇ29/2020): ನಗರದ ಕದ್ರಿ ಕ್ರಿಕೆಟ್‌ರ್ಸ್ ಕ್ಲಬ್ (ರಿ) ನ ಅಂಗ ಸಂಸ್ಥೆಯಾದ ಆಸರೆ ಫ್ರೆಂಡ್ಸ್ ಕದ್ರಿ ವತಿಯಿಂದ ನಗರದ ಮಂಕಿಸ್ಟಾಂಡ್ ಬಳಿ ಬಡ ಕುಟುಂಬವೊಂದಕ್ಕೆ ಸುಮಾರು ರೂ. 2 ಲಕ್ಷ 75 ಸಾವಿರ ವೆಚ್ಚದಲ್ಲಿ ನಿರ್ಮಿಸಲಾದ “ಆಸರೆ ನಿಲಯ” ಮನೆಯ ಹಸ್ತಾಂತರ ಕಾರ್ಯಕ್ರಮ ಶುಕ್ರವಾರ ನಡೆಯಿತು.

ಆಸರೆ ಫ್ರೆಂಡ್ಸ್ ನ ಪರವಾಗಿ ಮಂಗಳೂರು ಮೇಯರ್ ದಿವಾಕರ್ ಪಾಂಡೇಶ್ವರ್ ಅವರು ನೂತನ ಮನೆಯ ಚಾವಿಯನ್ನು ಶ್ರೀಮತಿ ಮೀನಾಕ್ಷಿ ಬಂಗೇರ ಹಾಗೂ ಎ.ಉಮೇಶ್ ದಂಪತಿಗಳಿಗೆ ಹಸ್ತಾಂತರಿಸಿದರು. ಈ ಸಂದರ್ಭ ಮಾತನಾಡಿದ ಅವರು, ಆಸರೆ ಫ್ರೆಂಡ್ಸ್ ಹಲವಾರು ಸಮಾಜಮುಖಿ ಕೆಲಸಕಾರ್ಯಗಳನ್ನು ಮಾಡುವ ಮೂಲಕ ಬಡವರ್ಗದ ಜನತೆಗೆ ಆಸರೆಯಾಗಿದೆ. ಇವರ ಈ ಸೇವೆ ಎಲ್ಲರಿಗೂ ಮಾದರಿಯಾಗಲಿ. ಇವರು ಇನ್ನಷ್ಟು ಸಮಾಜಸೇವೆಯಲ್ಲಿ ತೊಡಗುವಂತಾಗಲು ದೇವರು ಇವರಿಗೆ ಶಕ್ತಿ ನೀಡಲಿ ಎಂದು ಹಾರೈಸಿದರು.

ವಿಶೇಷ ಅಥಿತಿಗಳಾಗಿ ಭಾಗವಹಿಸಿದ್ದ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮಾತ್ ಅವರು ಮಾತನಾಡಿ, ಕಳೆದ ಹಲವಾರು ಸಮಯಗಳಿಂದ ಹಲವಾರು ರೀತಿಯಲ್ಲಿ ಸಮಾಜ ಸೇವೆಯಲ್ಲಿ ತೊಡಗಿಕೊಂಡಿರುವ ಆಸರೆ ಫ್ರೆಂಡ್ಸ್ ಇಂದು ಒಂದು ಬಡ ಕುಟುಂಬದ ಕಣ್ಣೀರು ಒರೆಸುವ ಬಹುದೊಡ್ಡ ಕೆಲಸ ಮಾಡಿದೆ. ಮಾನವೀಯ ನೆಲೆಯಲ್ಲಿ ಇವರು ಮಾಡಿರುವ ಈ ಸೇವೆ ಪ್ರತಿಯೊಬ್ಬರ ಮನಸ್ಸಿಗೆ ಮುಟ್ಟುವಂತಾಗಲಿ. ಕದ್ರಿ ಕ್ರಿಕೆಟರ್‍ಸ್ ಕ್ಲಬ್ ಹಾಗೂ ಆಸರೆ ಫ್ರೆಂಡ್ಸ್ ನ ಈ ನಿರಂತರ ಸೇವೆ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸ್ಥಳೀಯ ಮನಪಾ ಸದಸ್ಯ ಪ್ರೇಮನಂದ ಶೆಟ್ಟಿ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ಬಿರುವೆರ್ ಕುಡ್ಲ ಅಧ್ಯಕ್ಷ ಉದಯ ಪೂಜಾರಿ ಬಳ್ಳಾಲ್ ಭಾಗ್, ಉದ್ಯಮಿಗಳಾದ ಲಕ್ಷ್ಮೀಶ ಭಂಡಾರಿ, ರತ್ನಾಕರ್ ಜೈನ್ ಚಿತ್ರ ನಿರ್ಮಾಪಕ ಕಿಶೋರ್‍ ಡಿ.ಶೆಟ್ಟಿ, ಪ್ರಮುಖರಾದ ಅಶೋಕ್ ಕುಮಾರ್ ಡಿ.ಕೆ, ದಿನೇಶ್ ದೇವಾಡಿಗ, ಗೋಕುಲ್ ಕದ್ರಿ, ಅಮೃತ,ವಿ,ಕದ್ರಿ ಮುಂತಾದವರು ಅಥಿತಿಗಳಾಗಿದ್ದರು.

ಕದ್ರಿ ಕ್ರಿಕೆಟರ್‍ಸ್ ಕ್ಲಬ್ ಅಧ್ಯಕ್ಷ ದೀಪಕ್ ಸಾಲಿಯಾನ್, ಉಪಾಧ್ಯಕ್ಷ ಗೌರವ ಕದ್ರಿ, ಕಾರ್ಯದರ್ಶಿ ಹರೀಶ್ ದೇವಾಡಿಗ, ಜೊತೆ ಕಾರ್ಯದರ್ಶಿ ದೀಪಕ್ ಶೆಟ್ಟಿ, ನಿಕಟಪೂರ್ವ ಅಧ್ಯಕ್ಷ ಧನರಾಜ್ ಎನ್.ಡಿ, ಆಸರೆ ಫ್ರೆಂಡ್ಸ್ ಅಧ್ಯಕ್ಷ ದಿನೇಶ್ ಕದ್ರಿ, ಕಾರ್ಯದರ್ಶಿ ಮಂಜುನಾಥ್ ದೇವಾಡಿಗ ಮುಂತಾದವರು ಉಪಸ್ಥಿತರಿದ್ದರು.

ಕದ್ರಿ ಕ್ರಿಕೆಟರ್‍ಸ ಕ್ಲಬ್ ಗೌರವ ಅಧ್ಯಕ್ಷ ಮೋಹನ್ ಕೊಪ್ಪಳ ಕದ್ರಿ ಸ್ವಾಗತಿಸಿದರು, ವಿ.ಜೆ. ಮಧುರಾಜ್ ಗುರುಪುರ ಕಾರ್ಯಕ್ರಮ ನಿರೂಪಿಸಿದರು.

Related Post