January 23, 2021

Month: June 2020

ಬೈಂದೂರಿನ ವ್ಯಕ್ತಿ ಕರೋನಗೆ ಬಲಿ

ಉಡುಪಿ(ಜೂ30/2020): ಬೈಂದೂರು ತಾಲೂಕು ಮೂಲದ ಮಹಾರಾಷ್ಟ್ರದಿಂದ ಆಗಮಿಸಿದ ವ್ಯಕ್ತಿಯೊಬ್ಬರು ಭಾನುವಾರ ಮೃತರಾಗಿದ್ದು ಅವರಿಗೆ ಕೊರೊನಾ ಸೊಂಕು ದೃಡವಾಗಿದೆ.
ಮಹಾರಾಷ್ಟ್ರದ ನಿವಾಸಿ 48 ಪ್ರಾಯದ ವ್ಯಕ್ತಿ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದು ಅಲ್ಲಿ ಚಿಕಿತ್ಸೆ ಪಡೆದಿದ್ದರು. ಅವರನ್ನು ಶನಿವಾರ ಬೈಂದೂರಿಗೆ ಕರೆ ತರಲಾಗಿತ್ತು. ಭಾನುವಾರ ಇವರು ಮೃತ ಪಟ್ಟಿದ್ದರು.
ಭಾನುವಾರ ಆ ವ್ಯಕ್ತಿ ಸಾವನ್ನಪ್ಪುತ್ತಲೇ ಈ ವಿಚಾರವನ್ನು ಇಲಾಖೆಯ ಗಮನಕ್ಕೆ ತರಲಾಗಿತ್ತು. ಮೃತ ವ್ಯಕ್ತಿಯ ಗಂಟಲು ದ್ರವವನ್ನು ಸಂಗ್ರಹಿಸಲಾಗಿತ್ತು ಮತ್ತು ಕೊರೊನಾ ಶಿಷ್ಟಾಚಾರದ ಪ್ರಕಾರ ಅಂತ್ಯಕ್ರಿಯೆ ನಡೆಸಲಾಗಿತ್ತು.
ಗಂಟಲು ದ್ರವದ ವರದಿ ಇಂದು ಕೈ ಸೇರಿದ್ದು ಮೃತ ವ್ಯಕ್ತಿಗೆ ಕೊರೊನಾ ಪಾಸಿಟಿವ್ ಇರುವುದು ದೃಢ ಪಟ್ಟಿದೆ. ಮೃತರ ಸಂಪರ್ಕದಲ್ಲಿದ್ದವರ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ.

ನೂರನೇ ದಿನದ ಸೇವೆ: ಗುರೂಜಿ ಸಾಯಿಈಶ್ವರ್ ಆಶಿರ್ವಾದ ಪಡೆದ ಬಿವಂಡಿ ಸಾಯಿ ಫೌಂಡೇಷನ್ ಅಧ್ಯಕ್ಷ ಪ್ರದೀಪ್ ವಾಸು ಶೆಟ್ಟಿ

ಮುಂಬಾಯಿ/ಉಡುಪಿ(30ಜೂ/2020): 24 ಮಾರ್ಚ್ 2020ರಿಂದ ಕೋವಿಡ್ 19ರ ಕಾರಣ ಭಾರತದಾದ್ಯಂತ ಲಾಕ್‌ಡೌನ್ ಆದ ನಂತರ ಮುಂಬೈಯ ಬಿವಂಡಿಯ
ಸಾಯಿ ಫೌಂಡೇಶನ್ ಮಹಾರಾಷ್ಟ್ರದಾದ್ಯಂತದ ಬಡ ಮತ್ತು ನಿರ್ಗತಿಕ ಜನರಿಗೆ ಈ ಕೆಳಗಿನ ಸೇವೆಗಳನ್ನು ಒದಗಿಸುತ್ತಿದೆ ಇಂದಿಗೆ ಸೇವೆಯ ನೂರನೇ ದಿನ.
ಬಿವಂಡಿಯ ಸಾಯಿ ಫೌಂಡೇಶನ್ ಇದರ ಅಧ್ಯಕ್ಷ ಪ್ರದೀಪ್ ವಾಸು ಶೆಟ್ಟಿ ಇಂದು ಗುರೂಜಿ ಸಾಯಿಈಶ್ವರ್ ಇವರನ್ನು ಉಡುಪಿ ಬಳಿಯ ಶಂಕರಪುರದ ಶ್ರೀ ಸಾಯಿ ಬಾಬಾ ಮಂದಿರದಲ್ಲಿ ಬೇಟಿಯಾಗಿ ಆಶಿರ್ವಾದ ಪಡೆದರು.
ಬಿವಂಡಿಯ ಸಾಯಿ ಫೌಂಡೇಶನ್ 24ಮಾರ್ಚ್ ನಿಂದ ಇಂದಿನ ವರೆಗೆ ನೀಡಿರುವ ಸೇವೆಗಳು ಹೇಗಿವೆ.
32,000 ಕುಟುಂಬಗಳಿಗೆ ಅಗತ್ಯವಾದ ಅಗತ್ಯ ದಿನಸಿ ಸಾಮಗ್ರಿಗಳನ್ನು ಒದಗಿಸಲಾಗಿದೆ ಇದರಿಂದ ಸುಮಾರು 1,22,000 ಜನರಿಗೆ ಸಹಾಯವಾಯಿತು.
ಭಿವಾಂಡಿ, ಥಾಣೆ, ಮುಂಬೈ ಮತ್ತು ಇತರ ನಗರಗಳಿಂದ ತಮ್ಮ ಸ್ವಂತ ರಾಜ್ಯಗಳಾದ ಯುಪಿ, ಬಿಹಾರ, ಒರಿಸ್ಸಾ ಮತ್ತು ಕೋಲ್ಕತಾ ಇತ್ಯಾದಿಗಳಿಗೆ ನಾಸಿಕ್ ಹೆದ್ದಾರಿಯ ಮೂಲಕ ಹೋಗುತ್ತಿರುವ ಸುಮಾರು 2,00,000 ವಲಸಿಗರಿಗೆ ಉಚಿತ ಸೇವೆಗಳನ್ನು ಎಸ್‌ಎಐ ಧಾಬಾನಲ್ಲಿ ಒದಗಿಸಲಾಗಿದೆ
ಇಲ್ಲಿ ಮದ್ಯಹ್ನದ ಹಾಗು ರಾತ್ರಿಯ ಊಟ, ಸ್ನಾನಗೃಹಗಳು, ವಿಶ್ರಾಂತಿಗಾಗಿ ಸೌಲಭ್ಯಗಳು, ಚಹಾ ಮತ್ತು ತಿಂಡಿಗಳು, ಬೇಬಿ ಫೀಡಿಂಗ್ ಸೌಲಭ್ಯಗಳು, ಮುಸ್ಲಿಮರರ ಪ್ರಾರ್ಥನೆಗಾಗಿ ಪ್ರತ್ಯೇಕ ಪ್ರದೇಶವನ್ನು ಏರ್ಪಡಿಸಲಾಗಿದೆ. ಪವಿತ್ರ ರಂಜಾನ್ ತಿಂಗಳಲ್ಲಿ ಮುಸ್ಲಿಮರಿಗಾಗಿ ಇಫ್ತಾರ್ ವಸ್ತುಗಳನ್ನು ವ್ಯವಸ್ಥೆ ಮಾಡಲಾಗಿತ್ತು.ಪ್ರಥಮ ಚಿಕಿತ್ಸಾ ವ್ಯವಸ್ಥೆ, 1000 ವಲಸಿಗರಿಗೆ ತಮ್ಮ ಸ್ವಗ್ರಾಮಗಳಿಗೆ ತೆರಳಲು ಸಾಯಿ ಫೌಂಡೇಶನ್ ಎಲ್ಲಾ ವೆಚ್ಚಗಳು ಬಸ್ ಮತ್ತು ಟ್ರಕ್‌ಗಳನ್ನು ವ್ಯವಸ್ಥೆ ಮಾಡಲಾಗಿದೆ.
ಅನೇಕ ಸ್ವಂತ ವಾಹನವನ್ನು ತುರ್ತು ಆಂಬ್ಯುಲೆನ್ಸ್ ಆಗಿ ಪರಿವರ್ತಿಸಿ ಹತ್ತಿರದ ಆಸ್ಪತ್ರೆಗೆ ಅಗತ್ಯ ಇರುವವರನ್ನು ಕರೆದೊಯ್ಯಲಾಗಿದೆ ಮತ್ತು ಅವರಿಗೆ ಉಚಿತ ಚಿಕಿತ್ಸೆ ನೀಡಲಾಗಿದೆ.
ಕೆಲವು ಬಡ ಮತ್ತು ನಿರ್ಗತಿಕ ವೃದ್ಧರನ್ನು ದತ್ತು ತೆಗೆದುಕೊಂಡು ಅವರಿಗೆ ಜೀವಿತಾವಧಿಯ ಖರ್ಚನ್ನು ಭರಿಸುವ ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಂಡರು.16,000 ಜನರಿಗೆ ಸುಮಾರು 722 ಬಸ್ ಅನ್ನು ಉಚಿತವಾಗಿ ಒದಗಿಸಲಾಗಿದೆ.
1,50,000 ಜನರಿಗೆ ಸುಮಾರು 122 ರೈಲುಗಳ ಪ್ರಯಾಣಿಕರಿಗೆ ಉಚಿತ ಸಿದ್ಧ ಊಟ, ಹಣ್ಣುಗಳು, ಬಿಸ್ಕತ್ತುಗಳು ಮತ್ತು ಇತರ ವಸ್ತುಗಳನ್ನು ಒದಗಿಸಲಾಗಿದೆ.
ಗುರೂಜಿ ಸಾಯಿಈಶ್ವರ್ ಆಶಿರ್ವಾದಿಸಿ ಜನರ ಸೇವೆ ಹೀಗೆ ಮುಂದುವರಿಸಿ ಎಂದರು.

ಖೈದಿಗೆ ಕರೋನಾ, ಪೋಲೀಸ್ ಸಿಬ್ಬಂದಿಗೂ ಕ್ವಾರಂಟೈನ್

ಮಂಗಳೂರು(30ಜೂ/2020): ಮಂಗಳೂರು ಜಿಲ್ಲಾ ಕಾರಾಗೃಹದ ಖೈದಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ.ಮನೋರೋಗದಿಂದ ಬಳಲುತ್ತಿದ್ದ ಖೈದಿಯನ್ನು ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಿಚಾರಣಾಧೀನ ಖೈದಿ.
ಆಸ್ಪತ್ರೆ ಸಿಬ್ಬಂದಿಯಿಂದ ಕೊರೋನಾ ಹರಡಿರುವ ಶಂಕೆ ಇರುತ್ತದೆ.
ಮುನ್ನಚ್ಚೆರಿಕಾ ಕ್ರಮವಾಗಿ ಖೈದಿ ಜೊತೆ ಇದ್ದ ಪೊಲೀಸ್ ಸಿಬ್ಬಂದಿಗೂ ಕ್ವಾರೆಂಟೈನ್ ಮಾಡಲಾಗಿದೆ.

ಖೈದಿಗೆ ಕರೋನಾ, ಪೋಲೀಸ್ ಸಿಬ್ಬಂದಿಗೂ ಕ್ವಾರಂಟೈನ್

ಮಂಗಳೂರು(30ಜೂ/2020): ಮಂಗಳೂರು ಜಿಲ್ಲಾ ಕಾರಾಗೃಹದ ಖೈದಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ.ಮನೋರೋಗದಿಂದ ಬಳಲುತ್ತಿದ್ದ ಖೈದಿಯನ್ನು ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಿಚಾರಣಾಧೀನ ಖೈದಿ.
ಆಸ್ಪತ್ರೆ ಸಿಬ್ಬಂದಿಯಿಂದ ಕೊರೋನಾ ಹರಡಿರುವ ಶಂಕೆ ಇರುತ್ತದೆ.
ಮುನ್ನಚ್ಚೆರಿಕಾ ಕ್ರಮವಾಗಿ ಖೈದಿ ಜೊತೆ ಇದ್ದ ಪೊಲೀಸ್ ಸಿಬ್ಬಂದಿಗೂ ಕ್ವಾರೆಂಟೈನ್ ಮಾಡಲಾಗಿದೆ.

ಇಂದಿನಿಂದ ಲೇಡಿಗೋಷನ್ ಬಂದ್

ಮಂಗಳೂರು(30ಜೂ/2020): ಆರು ದಿನಗಳ ಕಾಲ ಮಂಗಳೂರಿನ ಜಿಲ್ಲಾ ಲೇಡಿಗೋಷನ್ ಹೆರಿಗೆ ಆಸ್ಪತ್ರೆ ಮುಚ್ಚುವ ನಿರ್ಧಾರ ಕೈಗೊಳ್ಳುವ ಬಗ್ಗೆ ವರದಿಯಾಗಿದೆ.
ಇಂದಿನಿಂದ ಜು.6ರವರೆಗೆ ಹೊರ ರೋಗಿ ಮತ್ತು ಒಳರೋಗಿ ಸೇವೆ ಸ್ಥಗಿತಗೊಳ್ಳಾಗುವುದು.
ಆಸ್ಪತ್ರೆಯ ಹೆಚ್ಚಿನ ವೈದ್ಯರು ಮತ್ತು ಸಿಬ್ಬಂದಿ ಕ್ವಾರೆಂಟೈನ್ ನಲ್ಲಿರೋ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.
ಆಸ್ಪತ್ರೆಯ ಎಲ್ಲಾ ವಿಭಾಗ ಸ್ಯಾನಿಟೈಝ್ ಮತ್ತು ಫ್ಯೂಮಿಗೇಷನ್ ಮಾಡಲಾಗುವುದು.
ಮಂಗಳೂರಿನ ಲೇಡಿಗೋಷನ್ ಸರ್ಕಾರಿ ಹೆರಿಗೆ ಆಸ್ಪತ್ರೆ ಅಧೀಕ್ಷಕಿಯವರು ಪ್ರಕಟಿಸಿದಾರೆ.

ಉಳ್ಳಾಲ: ಪೋಲಿಸರಿಗೆ ಮತ್ತೆ ಕರೋನ ಸೋಂಕು

ಉಳ್ಳಾಲ(29ಜೂ/2020): ಇಲ್ಲಿನ ಪೊಲೀಸ್ ಠಾಣೆಯಲ್ಲಿ ಕೋವಿಡ್-19 ಸೋಂಕು ಈ ಮೊದಲು ಆರು ಮಂದಿಗೆ ದೃಢವಾಗಿದ್ದರೆ, ಇಂದು ಮತ್ತೆ ಆರು ಜನ ಸಿಬ್ಬಂದಿಗಳಿಗೆ ಕೋವಿಡ್ -19 ಸೋಂಕು ತಗುಲಿದ ವರದಿಯಾಗಿದೆ.
ಠಾಣೆಯ ಓರ್ವ ಹೋಂ ಗಾರ್ಡ್ ಮತ್ತು ಐವರು ಪೊಲೀಸ್ ಸಿಬ್ಬಂದಿಗೆ ಕೋವಿಡ್-19 ಸೋಂಕು ದೃಢವಾಗಿದೆ. ಇದರಿಂದ ಠಾಣೆಯ ಹತ್ತು ಆರಕ್ಷಕರು ಮತ್ತು ಇಬ್ಬರು ಆರೋಪಿಗಳಿಗೆ ಕೋವಿಡ್ ಸೋಂಕು ದೃಢವಾಗಿದೆ.
ಈ ಹಿಂದೆ ಠಾಣೆಯ ಎಸ್ ಐ, ಎಎಸ್ ಐ, ಇಬ್ಬರು ಡ್ರೈವರ್ ಗಳು ಮತ್ತು ಠಾಣೆಯಲ್ಲಿದ್ದ ಇಬ್ಬರು ಆರೋಪಿಗಳಿಗೆ ಕೋವಿಡ್-19 ಸೋಂಕು ತಾಗಿತ್ತು. ಸದ್ಯ ಠಾಣೆಯನ್ನು ಭಾಗಶಃ ಸೀಲ್ ಡೌನ್ ಮಾಡಲಾಗಿದೆ.

ಧನಲಕ್ಷ್ಮಿ ಗಟ್ಟಿ ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾ ಅಧ್ಯಕ್ಷರಾಗಿ ಆಯ್ಕೆ

ಮಂಗಳೂರು(29ಜೂ/2020): ಧನಲಕ್ಷ್ಮಿ ಗಟ್ಟಿ ಅವರನ್ನು
ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾ ಅಧ್ಯಕ್ಷರಾಗಿ
ಸಂಸದರು ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ರವರು ಆಯ್ಕೆ ಮಾಡಿದರು.
ಇವರು ಯುವ ವಾಗ್ಮಿ ಸಂಘಟನಾ ಕಾರ್ಯದ ಮೂಲಕ ಜನಸಾಮಾನ್ಯರ ಮನ ಗೆದ್ದ ಯುವ ನಾಯಕಿಯಾಗಿ ಪಕ್ಷದ ಅನೇಕ ಜವಾಬ್ದಾರಿಯನ್ನು ಅತ್ಯಂತ ನಿಷ್ಠೆ ಪ್ರಾಮಾಣಿಕ ದಿಂದ ನಿರ್ವಹಿಸಿರುವರು.
ವಿವಿಧ ಸಮಾಜ ಸೇವಾ ಸಂಘಟನೆಯಲ್ಲಿ ತನ್ನನ್ನು ತಾನು ಗುರುತಿಸಿಕೊಂಡು. ಜಿಲ್ಲಾ ಪಂಚಾಯತ್ ಸದಸ್ಯೆಯಾಗಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆಯಾಗಿ ಅತ್ಯಂತ ನಿಷ್ಠೆ ಪ್ರಾಮಾಣಿಕದಿಂದ ಸೇವೆ ಸಲ್ಲಿಸಿರುವ ಧನಲಕ್ಷ್ಮಿ ಗಟ್ಟಿ.
ಅವರನ್ನು ಸಂಸದರು ಬಿಜೆಪಿ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ರವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷರಾದ ಸುದರ್ಶನ್ ಮೂಡಬಿದ್ರೆರವರು ಹಾಗೂ ಜಿಲ್ಲೆಯ ಎಲ್ಲ ಶಾಸಕರು ಹಿರಿಯರು ಜಿಲ್ಲಾ ಮುಖಂಡರು ಹಾಗೂ ಬಿಜೆಪಿ ಮಂಗಳೂರು ವಿಧಾನಸಭಾ ಕ್ಷೇತ್ರದ ಎಲ್ಲ ನಾಯಕರು ಒಮ್ಮತದಿಂದ ಭಾರತೀಯ ಜನತಾ ಪಾರ್ಟಿ ಜಿಲ್ಲಾ ಮಹಿಳಾ ಮೋರ್ಚಾದ ಅಧ್ಯಕ್ಷರಾಗಿ ನೇಮಕ ಮಾಡಿದ್ದಾರೆ.

ಉಳ್ಳಾಲದ ಮಹಿಳೆ ಕರೋನಾಗೆ ಬಲಿ

ಮಂಗಳೂರು(29ಜೂ/2020): ಮಂಗಳೂರಿನಲ್ಲಿ ಕೊರೋನಾಗೆ ಮತ್ತೊಂದು ಬಲಿ ಆಗಿದೆ.ಮಂಗಳೂರಿನ ಉಳ್ಳಾಲ ಮೂಲದ 60 ವರ್ಷದ ಮಹಿಳೆಯ ಸಾವು ಕರೋನಾದಿಂದ ಸಂಭವಿಸಿದೆ.ಮಂಗಳೂರಿನ ಕೋವಿಡ್ ಆಸ್ಪತ್ರೆಯಲ್ಲಿ ಮಹಿಳೆಯ ಸಾವು ಸಂಭವಿಸಿದೆ.
ಲಿವರ್, ಡಯಾಬಿಟಿಸ್ ಮತ್ತು ಹೃದಯ ಖಾಯಿಲೆಯಿಂದ ಬಳಸಲುತ್ತಿದ್ದ ವೃದ್ಧೆ.
ಮಂಗಳೂರಿ‌ನ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಳಿಕ ಕೋವಿಡ್ ಆಸ್ಪತ್ರೆಗೆ ಬಂದಿದ್ದ ಮಹಿಳೆ,ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ಸಾವಿನ ಸಂಖ್ಯೆ 14ಕ್ಕೆ ಏರಿಕೆಯಾಗಿದೆ.ನಿನ್ನೆ ಒಂದೇ ದಿನ ಮೂವರನ್ನು ಬಲಿ ಪಡೆದಿದ್ದ ಕೊರೋನಾ.

ಪುತ್ತೂರಿನ ಪ್ರವಾಸಿ ಸಮುದ್ರಪಾಲು,ಜೀವ ಉಳಿಸಿದ ಮೊಗವೀರ ಯುವಕರು

ಸುರತ್ಕಲ್(29ಜೂ/2020): ಸುರತ್ಕಲ್ ಸಮೀಪದ ಗುಡ್ಡೆಕೊಪ್ಪ ಎಂಬಲ್ಲಿ ಪುತ್ತೂರಿನಿಂದ
ಬಂದವರೆನ್ನಲಾಗಿದ್ದ ಯುವಕ ಯುವತಿಯರ ಗುಂಪಿನಲ್ಲಿದ್ದ ಕೆಲವರು ಸ್ಥಳೀಯ ಮೀನುಗಾರರ ಎಚ್ಚರಿಕೆಯನ್ನೂ ನಿರ್ಲಕ್ಷಿಸಿ ಸಮುದ್ರಕ್ಕೆ ಇಳಿದಿದ್ದು. ಇವರಲ್ಲಿ ಯುವಕನೊಬ್ಬ ಈಜಾಡುತ್ತಾ ಹಳೆಯ ನೌಕೆಯ ಹತ್ತಿರ ಹೋದವ ಅಲೆಗಳ ರೌದ್ರತೆಗೆ ಭಯಗೊಂಡು ನೌಕೆಯ ಲ್ಯಾಡರ್ ಏರಿನಿಂತು ಸಹಾಯಕ್ಕಾಗಿ ಅಂಗಲಾಚಿದ್ದಾನೆ.
ಈ ಸಂದರ್ಭದಲ್ಲಿ ಗುಡ್ಡೆಕೊಪ್ಪ ನಿವಾಸಿಗಳಾದ ಯಾದವ ಶ್ರೀಯಾನ್ ಹಾಗೂ ಸುಮನ್ ಕೋಟ್ಯಾನ್ ಅವರ ತಂಡ ತಮ್ಮ ಪ್ರಾಣವನ್ನೂ ಲೆಕ್ಕಿಸದೇ ಭೋರ್ಗರೆಯಿತ್ತಿದ್ದ ಅಲೆಗಳ ನಡುವೆ ಈಜಾಡಿ ಆ ಯುವಕನನ್ನು ಸುರಕ್ಷಿತವಾಗಿ ದಡಕ್ಕೆ ಕರೆದುಕೊಂಡುಬಂದಿದ್ದಾರೆ.
ಇದೀಗ ಶ್ರೀಯಾನ್ ಹಾಗೂ ಸುಮನ್ ಅವರ ಸಾಹಸ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ ಮತ್ತು ಇಲ್ಲಿಗೆ ಬರುವ ಪ್ರವಾಸಿಗರು ಸ್ಥಳೀಯರ ಸಲಹೆಗೆ ಕಿವಿಕೊಡಬೇಕೆಂಬ ಆಗ್ರಹವೂ ಕೇಳಿಬಂದಿದೆ.
ಸುರತ್ಕಲ್ ಸಮೀಪದ ಗುಡ್ಡೆಕೊಪ್ಪ ಎಂಬಲ್ಲಿ ಸಮುದ್ರದಲ್ಲಿ ಲಂಗರು ಹಾಕಿ ನಿಂತಿರುವ ಭಗವತೀ ಪ್ರೇಂ ಎಂಬ ಬೃಹತ್ ನೌಕೆಯನ್ನು ನೋಡಲು ಜನ ಬರುತ್ತಿದ್ದಾರೆ. ಅದರಲ್ಲೂ ರಜಾ ದಿನವಾಗಿದ್ದ ನಿನ್ನೆ ಜನ ಸ್ವಲ್ಪ ಹೆಚ್ಚೇ ಇದ್ದರು.

ಕಾಪು: ಎಸ್.ಎಸ್.ಎಲ್.ಸಿ ವಿಧ್ಯಾರ್ಥಿಗೆ ಸೋಂಕು ಧೃಡ

ಕಾಪು(ಜೂ 28/2020): ಕಾಪು ತಾಲೂಕಿನ ಎಸ್‌.ಎಸ್‌‌.ಎಲ್‌‌.ಸಿ ವಿದ್ಯಾರ್ಥಿನಿಗೆ ಕೊರೊನಾ ಸೋಂಕು ದೃಢಪಟ್ಟಿರುವುದಾಗಿ ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ಕೊರೊನಾ ಪರೀಕ್ಷಾ ವರದಿ ಜೂ 28ರಂದು ಬಂದಿದ್ದು, ವರದಿಯಲ್ಲಿ ಪಾಸಿಟಿವ್‌ ಎಂದು ಖಚಿತವಾಗಿತ್ತು. ಈ ಕಾರಣದಿಂದ ವಿದ್ಯಾರ್ಥಿನಿ ಜೂ29ರಂದು ನಡೆಯಲಿರುವ ಪರೀಕ್ಷೆಯ ಅವಕಾಶದಿಂದ ವಂಚಿತರಾಗಿದ್ದಾರೆ.ವಿದ್ಯಾರ್ಥಿನಿ ಜು.25ರ ಎಸ್‌.ಎಸ್‌.ಎಲ್‌.ಸಿಯ ಕನ್ನಡ ಹಾಗೂ ಜು.27ರಂದು ನಡೆದ ಗಣಿತ ಪರೀಕ್ಷೆ ಬರೆದಿದ್ದರು. ಜೂನ್‌‌ 27ರಂದು ಈಕೆಯ ತಂದೆಯ ಗಂಟಲು ದ್ರವದ ಮಾದರಿ ಪರೀಕ್ಷೆ ಬಂದ ಹಿನ್ನೆಲೆ ಈಕೆಯನ್ನು ಕೂಡಾ ಅದೇ ದಿನ ಕೊರೊನಾ ಪರೀಕ್ಷೆಗೊಳಪಡಿಸಲಾಗಿತ್ತು.ಈಕೆ ಪರೀಕ್ಷೆ ಬರೆದ ಕೇಂದ್ರದಲ್ಲಿ ಸ್ಯಾನಿಟೈಸ್‌‌‌‌‌‌‌ ಹಾಗೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದರಿಂದ ಉಳಿದ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಒಳಪಡಿಸುವ ಅವಶ್ಯಕತೆ ಇಲ್ಲ ಎಂಬುದಾಗಿ ಆರೋಗ್ಯ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.

Related Post