October 30, 2020

Month: July 2020

ತುಳುನಾಡ ಪೊರ್ಲು ಸೇವಾ ಟ್ರಸ್ಟ್(ರಿ.)ವತಿಯಿಂದ ಧನ ಸಹಾಯ ಹಸ್ತಾಂತರ

ಮಂಗಳೂರು(30ಜುಲೈ/2020): ಕ್ಯಾನ್ಸರ್ ಪೀಡಿತ ಬಾಲಕನ ಚಿಕಿತ್ಸೆಗೆ ಮತ್ತು ಬಡ ಕುಟುಂಬದ ಇಬ್ಬರು ಹೆಣ್ಣು ಮಕ್ಕಳ ಮದುವೆ ಮಂಗಳ ಕಾರ್ಯಕ್ಕೆ ತುಳುನಾಡ ಪೊರ್ಲು ಸೇವಾ ಟ್ರಸ್ಟ್(ರಿ.) ವತಿಯಿಂದ ಧನ ಸಹಾಯ ಹಸ್ತಾಂತರ.
ಕಳೆದ 47 ತಿಂಗಳ ಹಿಂದೆ ಸಾಮಾಜಿಕ ಜಾಲತಾಣಗಳನ್ನು ಅಸ್ತ್ರವಾನ್ನಾಗಿಸಿಕೊಂಡು ರಚನೆಗೊಂಡ ತುಳುನಾಡ ಪೊರ್ಲು ಸೇವಾ ಟ್ರಸ್ಟ್ ಇಂದು ಸಮಾಜದ ಆಯ್ದ 3 ಕುಟುಂಬಗಳಿಗೆ ನೆರವನ್ನು ನೀಡುವುದರ ಮೂಲಕ ಸೇವಾ ಪಯಣವನ್ನು ಮುಂದುವರಿಸಿದೆ.
ಎಲುಬು ಕ್ಯಾನ್ಸರ್ ಗೆ ಒಳಗಾಗಿ ಮಂಗಳೂರಿನ ಅತ್ತಾವರದ ಕೆ.ಎಂ.ಸಿ ಆಸ್ವತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬೆಳ್ತಂಗಡಿ ತಾಲೂಕಿನ ಕಾಶಿಪಟ್ನ ಕುಮೇರು ದಿವಾಂಗತ ಸುಂದರ ಪೂಜಾರಿ ಚಂಪ ದಂಪತಿಗಳ ಪುತ್ರ ಸುಶಾಂತ್ ಇವರ ಚಿಕಿತ್ಸೆಗೆ ರೂ. 15,000 ಮತ್ತು ತಂದೆ,ಅಣ್ಣನನ್ನು ಕಳೆದುಕೊಂಡು ತನ್ನ ತಾಯಿಯ ಜೊತೆ ವಾಸಿಸುತ್ತಿರುವ ಬೆಳ್ತಂಗಡಿ ತಾಲೂಕು ಶಿರ್ಲಾಲು ದಿವಾಂಗತ ತಿಮ್ಮಪ್ಪ ಮತ್ತು ಜಾನಕಿ ದಂಪತಿಗಳ ಪುತ್ರಿ ರೇವತಿ ಅವರ ಮದುವೆ ಮಂಗಳ ಕಾರ್ಯಕ್ಕೆ ಹಾಗೂ ಮಂಗಳೂರು ತಾಲೂಕಿನ ಸೋಮೇಶ್ವರ ಸಮೀಪದ ಕುಂಪಲದ ಬಡ ಕುಟುಂಬವಾದ ಭಾಸ್ಕರ ಮತ್ತು ಪದ್ಮಾವತಿ ದಂಪತಿಗಳ ಪುತ್ರಿ ಕುಮಾರಿ ಪ್ರಜ್ಞಾ ಇವರ ಮದುವೆ ಮಂಗಳ ಕಾರ್ಯಕ್ಕೆ ತಲಾ ರೂ. 10,000 ಧನ ಸಹಾಯವನ್ನು ಶ್ರೀ ರಕ್ತೇಶ್ವರಿ ದೇವಿ ಸನ್ನಿಧಿ ಬಿ.ಸಿ ರೋಡ್ ಇಲ್ಲಿ ಹಸ್ತಾಂತರಿಸಲಾಯಿತು. ಈ ಸಮಯದಲ್ಲಿ ಸಂಸ್ಥೆಯ ಸೇವಾ ಮಾಣಿಕ್ಯರು ಉಪಸ್ಥಿತರಿದ್ದರು.
ಕೊರೊನ ಮಹಾಮಾರಿಯಿಂದ ಇಡೀ ಜಗತ್ತೇ ಕಂಗೆಟ್ಟರು ಈ ಸಂಸ್ಥೆಯು ತನ್ನ ಸೇವಾ ಪಯಣವನ್ನು ಮುಂದುವರಿಸಿ ಪರರ ಕಷ್ಟದಲ್ಲಿ ನೆರವಾಗುವುದರ ಮೂಲಕ ಸಮಾಜಕ್ಕೆ ಮಾದರಿ ಸಂಸ್ಥೆಯಾಗಿದೆ.

ದ.ಕನ್ನಡಕ್ಕೆ ನೂತನ ಡಿ.ಸಿ ಡಾ.ರಾಜೇಂದ್ರ ಕೆ.ವಿ

ಮಂಗಳೂರು(28ಜುಲೈ/2020): ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿದ್ದ‌ ಸಿಂಧೂ ಬಿ. ರೂಪೇಶ್ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶಿಸಿದೆ. ದ.ಕನ್ನಡ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಡಾ.ರಾಜೇಂದ್ರ ಕೆ.ವಿ ಅವರನ್ನು ನೇಮಕ ಮಾಡಲಾಗಿದೆ.ಡಾ.ರಾಜೇಂದ್ರ ಕೆ.ವಿ ಅವರು ಬೆಳಗಾವಿ ಜಿಲ್ಲಾ ಪಂಚಾಯತ್ ಸಿಇಓ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಅವರನ್ನು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯನ್ನಾಗಿ ಸರ್ಕಾರ ನಿಯೋಜಿಸಿದೆ.

ಲಾಲಾಜಿ ಆರ್.ಮೆಂಡನ್ಗೆ ನೀಡಿದ ನಿಗಮ ಅಧ್ಯಕ್ಷರ ನೇಮಕ ಹಿಂಪಡೆದ ಯಡಿಯೂರಪ್ಪ

ಬೆಂಗಳೂರು(27ಜುಲೈ/2020): ನಾಲ್ಕು ನಿಗಮ ಮಂಡಳಿಗಳ ಅಧ್ಯಕ್ಷರ ನೇಮಕಾತಿಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಿಂಪಡೆಯಲು ಸೂಚಿಸಿದ್ದಾರೆ.
ಡಿ.ದೇವರಾಜ ಅರಸ್ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ನೇಮಕಗೊಂಡಿದ್ದ ಜಿ.ಎಚ್.ತಿಪ್ಪಾರೆಡ್ಡಿ, ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ ಅಧ್ಯಕ್ಷರಾಗಿ ನೇಮಕಗೊಂಡಿದ್ದ ಪರಣ್ಣ ಈಶ್ವರಪ್ಪ ಮುನವಳ್ಳಿ, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿ ನೇಮಕಗೊಂಡಿದ್ದ ಲಾಲಾಜಿ ಆರ್.ಮೆಂಡನ್ ಮತ್ತು ಸಮಾಜ ಕಲ್ಯಾಣ ಮಂಡಳಿ ಅಧ್ಯಕ್ಷರಾಗಿ ನೇಮಕಗೊಂಡಿದ್ದ ಬಸವರಾಜ್ ದಢೇಸೂರ್ ಅವರ ನೇಮಕವನ್ನು ಮುಖ್ಯಮಂತ್ರಿ ಹಿಂಪಡೆದಿದ್ದಾರೆ.
ರಾಜ್ಯದ ವಿವಿಧ ನಿಗಮ ಮಂಡಳಿಗಳಿಗೆ 24 ಶಾಸಕರುಗಳನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಸೋಮವಾರ ಆದೇಶ ಹೊರಡಿಸಿತ್ತು.

ಶಾಂತಾರಾಮ ಸಿದ್ಧಿಯವರ ಮನೆಗೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಬೇಟಿ

ಯಲ್ಲಾಪುರ(25ಜುಲೈ/2020): ಕರ್ನಾಟಕ ವಿಧಾನ ಪರಿಷತ್ತಿನ ನೂತನ ನಾಮನಿರ್ದೇಶಿತ ಸದಸ್ಯ ಬುಡಕಟ್ಟು ಸಿದ್ದಿ ಜನಾಂಗದ ಶ್ರೀ ಶಾಂತರಾಮ ಸಿದ್ದಿಯವರ ಯಲ್ಲಾಪುರ ಬಳಿಯ ಹಿತ್ಲಳ್ಳಿಯ ಮನೆಗೆ ಹಿಂದೂ ಧಾರ್ಮಿಕ ದತ್ತಿ, ಮೀನುಗಾರಿಕೆ, ಬಂದರು, ಒಳನಾಡು ಜಲಸಾರಿಗೆ ಸಚಿವ ಶ್ರೀ ಕೋಟ ಶ್ರೀನಿವಾಸ ಪೂಜಾರಿಯವರು ಭೇಟಿ ನೀಡಿ ಅಭಿನಂದನೆ ಸಲ್ಲಿಸಿದರು.
ಇಂದು ಬೆಳಿಗ್ಗೆ 9 ಗಂಟೆಗೆ ಶ್ರೀ ಶಾಂತರಾಮ ಸಿದ್ದಿಯವರ ಮನೆಗೆ ಭೇಟಿ ನೀಡಿದ ಕೋಟ, ಕಾಡು-ಮೇಡು, ಗುಡ್ಡ-ಬೆಟ್ಟಗಳಲ್ಲಿ ಬದುಕಿ‌ ಬಾಳುತ್ತಿರುವ, ಕಾಡಿನ ಮಕ್ಕಳೆಂದೆ ಪರಿಗಣಿಸಲ್ಪಡುತ್ತಿರುವ ವನವಾಸಿಗಳನ್ನು ಒಟ್ಟುಗೂಡಿಸಿ ಆ ಜನಾಂಗದಲ್ಲಿ ರಾಷ್ಟ್ರೀಯತೆ ಮತ್ತು ರಾಷ್ಟ್ರ ಭಕ್ತಿ ಮೂಡಿಸುತ್ತಿರುವ ಶ್ರೀ ಶಾಂತರಾಮ ಸಿದ್ದಿಯವರನ್ನು ವಿಧಾನ ಪರಿಷತ್ತಿಗೆ ನಾಮಕರಣ ಮಾಡಿದ್ದು ನಮ್ಮ ಸರ್ಕಾರಕ್ಕೊಂದು ಹೆಮ್ಮೆ ಎಂದು‌‌ ಪ್ರತಿಕ್ರಯಿಸಿದರು.
ಕಡು ಬಡತನದಲ್ಲಿ ಬದುಕಿ ಬಾಳುತ್ತಿದ್ದ ಶಾಂತರಾಮ ಸಿದ್ದಿಯವರನ್ನು ಶಾಸಕರನ್ನಾಗಿ‌ ಮಾಡಿದ ಪ್ರಧಾನಿ ಶ್ರೀ ‌ನರೇಂದ್ರ ಮೋದಿ, ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಜೆ.ಪಿ. ನಡ್ಡಾ,‌ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಶ್ರೀ ‌ಬಿ.ಎಲ್. ಸಂತೋಷ್, ರಾಜ್ಯ ಬಿಜೆಪಿ ಅಧ್ಯಕ್ಷರಾದ ಶ್ರೀ ನಳೀನ್ ಕುಮಾರ್ ಕಟೀಲ್, ಮಾನ್ಯ ಮುಖ್ಯಮಂತ್ರಿಯವರಾದ ಶ್ರೀ ಬಿ‌.ಎಸ್. ಯಡಿಯೂರಪ್ಪನವರ ಸಹಿತ, ನಮ್ಮ ಪಾರ್ಟಿಯ ಸರ್ವರು ಅಭಿನಂದನಾರ್ಹರು ಎಂದು ಸಚಿವ‌ ಕೋಟ ಬಾವುಕರಾಗಿ ನುಡಿದರು

ಜೈ ಜೈ ವಿವೇಕಾನಂದ ಮ್ಯೂಸಿಕ್ ಅಲ್ಬಂನ ಪೋಸ್ಟರ್ ಬಿಡುಗಡೆ

ಮಂಗಳೂರು(25ಜುಲೈ/2020): ಸೋಲ್ಸ್ ರಿದಂ ತಂಡದ ಮತ್ತೊಂದು ಪ್ರಯತ್ನ. ದೇಶಕಂಡ ಮಹಾನ್ ಸಂತ ಶ್ರೀ ವಿವೇಕಾನಂದ ಸ್ವಾಮಿಗಳ ಕುರಿತಾಗಿ ಯುವಜನತೆಗೆ ಪ್ರೇರಣೆ ಯಾಗುವಂತಹ ಜೈ ಜೈ ಸ್ವಾಮಿ ವಿವೇಕಾನಂದ ಎಂಬ ಮ್ಯೂಸಿಕ್ ಆಲ್ಬಮ್ನ ಪೋಸ್ಟರ್ ಮಂಗಳೂರು ರಾಮಕೃಷ್ಣ ಮಠದ ಶ್ರೀ ಏಕಗಾಮ್ಯನಂದ ಸ್ವಾಮಿಗಳ ದಿವ್ಯ ಹಸ್ತದಲ್ಲಿ ಬಿಡುಗಡೆ ಗೊಂಡಿತು.

ವಿಶೇಷವಾಗಿ ಕನ್ನಡ, ತುಳು, ಹಿಂದಿ, ಇಂಗ್ಲೀಷ್ ನಾಲ್ಕು ಬಾಷೆಗಳಲ್ಲಿ ಈ ಆಲ್ಬಮ್ ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯಂದು ಸೋಲ್ಸ್ ರಿದಂ ಯೂಟ್ಯೂಬ್ ಚಾನಲ್ನಲ್ಲಿ ಬಿಡುಗಡೆ ಗೊಳ್ಳಲಿದೆ. ಪ್ರತಿಭಾವಂತ ಸಂಗೀತ ನಿರ್ದೇಶಕ ಸಂದೇಶ್ ಬಾಬು ಸಂಗೀತಕ್ಕೆ ವಿಜೇಶ್ ದೇವಾಡಿಗ ಮಂಗಳಾದೇವಿ ಕನ್ನಡ ಹಾಗೂ ತುಳು ಸಾಹಿತ್ಯ ನೀಡಿದ್ದು ಹಿಂದಿ ಹಾಡಿಗೆ ಮೇಲ್ವಿನ್ ಆಂಟೋನಿ ಡಿಸೋಜಾ ,ಹಾಗೂ ಇಂಗ್ಲೀಷ್ ನಲ್ಲಿ ಜಯಪ್ರಕಾಶ್ ಸಿ ಎಸ್ ಸಾಹಿತ್ಯ ಬರೆದಿದ್ದು ಸಂಪೂರ್ಣ ನಿರ್ದೇಶನದ ಜವಾಬ್ದಾರಿಯನ್ನು ನಿರ್ವಹಿಸಿದ್ದಾರೆ. ದೇರಳಕಟ್ಟೆ ಸುರೇಶ್ ಕ್ಯಾಮೆರಾ ಹಾಗೂ ಸುಹಾಸ್ ಸಂಕಲನ ಮತ್ತು ಪ್ರಚಾರಕಲೆಯಲ್ಲಿ ಸಹಕರಿಸಿದ್ದಾರೆ . ನಾಲ್ಕು ಬಾಷೆಗಳಲ್ಲಿಯೂ ಕನ್ನಡದ ಯುವ ಗಾಯಕಿ ಕೆಜಿಎಫ್ ಖ್ಯಾತಿಯ ಐರಾ ಉಡುಪಿ ದ್ವನಿಯಾಗಿದ್ದಾರೆ.

ಇದರ ಪೋಸ್ಟರ್ ಮಂಗಳೂರು ರಾಮಕೃಷ್ಣ ಮಠದ ಶ್ರೀ ಏಕಗಾಮ್ಯನಂದ ಸ್ವಾಮಿ ಬಿಡುಗಡೆ ಗೊಳಿಸಿ ಶುಭಹಾರೈಸಿದರು

ಈ ಸಂದರ್ಭದಲ್ಲಿ ನಿರ್ದೇಶಕ ಜಯಪ್ರಕಾಶ್ ಸಿ ಎಸ್, ಸಂಗೀತ ನಿರ್ದೇಶಕ ಸಂದೇಶ್ ಬಾಬು ಸಾಹಿತಿ ವಿಜೇಶ್ ದೇವಾಡಿಗ ಮಂಗಳಾದೇವಿ, ಛಾಯಾಗ್ರಹಕ ದೇರಳಕಟ್ಟೆ ಸುರೇಶ್ ಹಾಗೂ ತಂಡದವರಾದ ನಿರ್ದೇಶಕ ಶಿವಪ್ರಸಾದ್, ಮನೀಷ್ ಕುಲಾಲ್, ರವಿಶಂಕರ್ ಉಪಸ್ಥಿತರಿದ್ದರು.

ನಾಳೆ ರಾಜ್ಯಾದ್ಯಂತ ‘ಸಂಡೇ ಲಾಕ್ ಡೌನ್’

ಮಂಗಳೂರು(25ಜು/2020): ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಪೂರ್ಣ ಲಾಕ್ ಡೌನ್ ನಾಳೆ ದಿನವಿಡೀ ಲಾಕ್ ಆಗಲಿದೆ ದಕ್ಷಿಣ ಕನ್ನಡ ಜಿಲ್ಲೆ.
ನಾಳೆ ಯಾವುದೇ ಅಂಗಡಿಗಳನ್ನು ತೆರೆಯುವಂತಿಲ್ಲ,ಎಲ್ಲಾ ರೀತಿಯ ವಾಹನ ಸಂಚಾರ ಬಂದ್,ಅಗತ್ಯ ಸಾಮಗ್ರಿಗಳ ಖರೀದಿಗೆ ಅವಕಾಶವಿರುವುದಿಲ್ಲ,
ಹಾಲು, ಔಷಧಿ, ಆಸ್ಪತ್ರೆಗೆ ಮಾತ್ರ ಅವಕಾಶ,ಇಂದು ರಾತ್ರಿ‌ 9ರಿಂದ ಸೋಮವಾರ ಬೆಳಗ್ಗೆ 5 ಗಂಟೆಯವರೆಗೂ ಸಂಪೂರ್ಣ ಲಾಕ್,
ಪ್ರತಿ ದಿನ ರಾತ್ರಿ 9 ರಿಂದ ಬೆಳಗ್ಗೆ 5 ರವರೆಗೂ ನೈಟ್ ಕರ್ಫ್ಯೂ, ಸಂಡೇ ಲಾಕ್ ಡೌನ್ ಹಾಗೂ ನೈಟ್ ಕರ್ಫ್ಯೂ ಜುಲಾಯಿ 31ರವರೆಗೆ ಅನ್ವಯ,ಎಂದು ದಕ್ಷಿಣ ಕನ್ನಡ ಜಿಲ್ಲಾಡಳಿತ ಸ್ಪಷ್ಟನೆ ನೀಡಿದೆ.

ತೆರೆಯಲಿದೆ ದಕ್ಷಿಣ ಕನ್ನಡದ ಲಾಕ್ ಡೌನ್

ಮಂಗಳೂರು(21ಜುಲೈ/2020): ಗುರುವಾರದಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಲಾಕ್ ಡೌನ್ ತೆರವು.
ಗುರುವಾರ ಬೆಳಗ್ಗೆ 5 ಗಂಟೆ ತನಕ ಮಾತ್ರ ಲಾಕ್ ಡೌನ್ ಇರಲಿದೆ.ಗುರುವಾರದಿಂದ ದ.ಕ‌ ಜಿಲ್ಲೆ ಸಂಪೂರ್ಣ ತೆರೆದಿರುತ್ತದೆ.ಸಾರ್ವಜನಿಕ ಎಲ್ಲಾ ಚಟುವಟಿಕೆಗಳಿಗೆ ಅವಕಾಶ ಮಾಡಿಕೊಟ್ಟ ಜಿಲ್ಲಾಡಳಿತ.ಈ ಹಿಂದೆ ಅವಕಾಶ ನೀಡಿದ್ದ ಎಲ್ಲಾ ಕ್ಷೇತ್ರಗಳೂ ತೆರೆಲಿದೆ.
ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿಕೆ ನೀಡಿರುವರು.

“ಆಟಿದ ಒಂಜಾತ್ ನೆನೆಪುಲು” – ಕೆ.ಎಲ್.ಕುಂಡಂತಾಯ

ಲೇಖನ: ಕೆ.ಎಲ್ ಕುಂಡಂತಾಯ(ಹಿರಿಯ ಜಾನಪದ ತಜ್ಞರು)
“ಆಡೊಂದು ಪೋಪುನ‌” ಎಂದರೆ ಮೆಲ್ಲನೆ ಸಾಗುವ ತಿಂಗಳು ಎಂದೇ ತುಳುವರು ಗುರುತಿಸುವ ತಿಂಗಳು “ಆಟಿ”.
ಸೌರಮಾನಿಗಳ ವರ್ಷದ ನಾಲ್ಕನೇ ತಿಂಗಳು .ಇದು ಕರ್ಕಾಟಕ ಮಾಸವೂ ಹೌದು .
ಕೃಷಿಕಾರ್ಯ ಮುಗಿದು ಧೋ ಎಂದು ಸುರಿಯುತ್ತಿರುವ ಮಳೆಯಿಂದ ವಾತಾವರಣ ತಂಪಾಗಿರುತ್ತದೆ . ಕಾಯಕವಿಲ್ಲದ ಅವಧಿಯಾಗಿರುವುದರಿಂದ ಈ ತಿಂಗಳು ಮೆಲ್ಲನೆ ಸರಿಯುವ ಹಾಗೆ ಭಾಸವಾಗುವುದು ಸಹಜ .

| ಆಟಿದ ಮರ್ದ್ |

ಆಹಾರದಲ್ಲಾಗುವ ಬದಲಾವಣೆಯಿಂದ,
ತಂಪಾದ ಪ್ರಕೃತಿಯ ಪರಿಣಾಮವಾಗಿ , ಸುರಿಯುವ ಮಳೆಯಿಂದಾಗಿ ಆರೋಗ್ಯವನ್ನು ರಕ್ಷಸಿಕೊಳ್ಳಲು ಆಟಿಯ ಅಮಾವಾಸ್ಯೆಯ ದಿನ “ಆಟಿದ ಮರ್ದ್” – ಹಾಳೆ ಮರದ ಕೆತ್ತೆಯಿಂದ ತಯಾರಿಸುವ ಮದ್ದನ್ನು ಸೇವಿಸುವುದು ರೂಢಿ . ಈ ಮದ್ದಿಗೆ ಒಂದು ಶ್ರದ್ಧೆ , ವಿಶ್ವಾಸ ,ನಂಬಿಕೆ ಹುಟ್ಟಲು ಹತ್ತಾರು ಒಪ್ಪಿಗೆಗಳು, ವಿಧಿಗಳು , ಕ್ರಮಗಳು. ಅದಕ್ಕೆ ಆಟಿ ತಿಂಗಳ‌ ಅಮಾವಾಸ್ಯೆ ಪ್ರಶಸ್ತವಾದ ದಿನ , ಇದು ಪುರಾತನವಾದ ನಿರ್ಧಾರ.ನಮಗೆ ಹುಣ್ಣಿಮೆ , ಸಂಕ್ರಮಣ ಎಲ್ಲವೂ ಪರ್ವದಿನಗಳೇ . ಅದಕ್ಕೆ ಸಂಬಂಧಿಸಿದ ಆಚರಣೆಗಳಿರುತ್ತವೆ. ‘ಆಟಿಮದ್ದಿನ’ ಉಷ್ಣ ತಡೆದುಕೊಳ್ಳಲು ‘ಮೆತ್ತೆಯ ಗಂಜಿ’ ಮರೆಯಬಾರದ ಸಂಗತಿ .ಅಂತೆಯೇ ಆಟಿ
ಅಮಾವಾಸ್ಯೆ “ಮದ್ದು ಕುಡಿಯುವ” ಆಚರಣೆ .
ಆಟಿ ತಿಂಗಳಲ್ಲಿ ನಮ್ಮ ರಕ್ಷಣೆಗೆ ನಾವು ಮದ್ದು ಕುಡಿಯುವುದು . ಮುಗಿಯಲಿಲ್ಲ ಗದ್ದೆಗಳಲ್ಲಿ ಬೆಳೆಯುತ್ತಿರುವ ನಮ್ಮ ಬೆಳೆಗಳ ರಕ್ಷಣೆಯೂ ಆಗಬೇಕಲ್ಲ . ಅಂದರೆ ಬೆಳೆಯ ಮೇಲಿನ ಕಾಳಜಿ , ಸಂರಕ್ಷಣೆ ಒಂದು ಮೌಲ್ಯವಾಗಿದ್ದ ದಿನಗಳಾಗಿದ್ದುವು . ಬೆಳೆಯನ್ನು ದೇವರೆಂದು ಭಕ್ತಿಯಿಂದ , ಮಕ್ಕಳೆಂಬ ಪ್ರೀತಿಯಿಂದ ಸ್ವೀಕರಿಸುವ ರೈತ ಇವತ್ತಿಗೂ ಆ ಬೆಳೆಯೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿದ್ದಾನೆ .
ನಾವು ಮದ್ದು ಕುಡಿದು ಆರೋಗ್ಯ ಕಾಪಾಡಿಕೊಳ್ಳುವಂತೆ ಬೆಳೆಯುತ್ತಿರುವ ‘ಎಣೆಲ್’ ಬೆಳೆಯ ರಕ್ಷಣೆಗೆ ಕಾಸರ್ಕದ ಮರದ ಗೆಲ್ಲುಗಳನ್ನು ಕಡಿದು ಗದ್ದೆಗೆ ಹಾಕುವ ಕ್ರಮವಿತ್ತು . ಈ ಮರದ ಗೆಲ್ಲು ಬೆಳೆಗೆ ಬರುವ ಮಾರಿ( ಹುಳು ಬಾಧೆ)ಯನ್ನು ತಡೆಯುತ್ತದೆ ಎಂಬುದೊಂದು ಒಡಂಬಡಿಕೆ .

| ರೆಡಿಮೇಡ್ ಆಕರ್ಷಣೆ |

ಕೃಷಿ ಪ್ರಧಾನವಾದ ಬದುಕು . ಮಳೆಗಾಲ ,
ಹೆಚ್ವು ಪ್ರಮಾಣದ ಮಳೆ ಸುರಿದರೆ ನೆರೆ ಹಾವಳಿ ,ಕೆಲವೊಮ್ಮೆ ಊರುಗಳ ನಡುವಿನ ಸಂಪರ್ಕವೇ ಕಡಿದುಹೋಗುವ ಸ್ಥಿತಿ . ಇದು ಒಂದು ಕಾಲದ ಆಟಿ ತಿಂಗಳ ವಾತಾವರಣ .
ಆದರೆ ಈಗ ಅಂತಹ ಮಳೆಯೂ ಇಲ್ಲ , ಸ್ವಲ್ಪಮಟ್ಟಿನ ಅಭಿವೃದ್ಧಿ ಸಾಧಿತವಾಗಿರುವುದರಿಂದ ಸಂಪರ್ಕ ಕಡಿದು ಹೋಗುವ ಸಾಧ್ಯತೆ ಕಡಿಮೆ .ನಾಗರಿಕತೆ ಬೆಳೆದಕಾರಣ , ಅದ್ಭುತವಾದ ತಂತ್ರಜ್ಞಾನ ಬೆಳೆದ ಈಕಾಲದಲ್ಲಿ ‘ಆಟಿ’ಯ ನೈಜ ಅನುಭವ ಆನುಭವಿಸುವ ಅವಕಾಶವೇ ಇಲ್ಲವಾಗಿದೆ . ಯೋಚಿಸಲೂ ಆಗದಷ್ಟು ನಾವು ಮುಂದುವರಿದು ಆಗಿದೆ . ಕೃಷಿಯನ್ನು ಅವಗಣಿಸಿಯಾಗಿದೆ . ಆದರೆ ಆ ಪ್ರಾಚೀನ ದಿನಗಳನ್ನು ಕಲ್ಪಿಸ ಬಹುದೇನೋ ?
ಆ ಕಾಲ “ರೆಡಿಮೇಡ್” ಕಾಲವಾಗಿರಲಿಲ್ಲ . ಆಹಾರ – ತಿಂಡಿತಿನಸುಗಳು ಮನೆಯಲ್ಲಿ ಮಾಡಿರುವುದಕ್ಕೆ ಸೀಮಿತವಾಗಿತ್ತು. ಮನೆಯಿಂದ – ಹಳ್ಳಿಯಿಂದ ಪೇಟೆಗೆ ಹೋಗಬೇಕಾದ ಸಂದರ್ಭ ಬಂದರೆ ಅಲ್ಲೆಲ್ಲೊ ಹೊಟೇಲುಗಳಲ್ಲಿ ಏನಾದರೆ ತಿಂದರೆ ಆಯಿತು , ಅವು ಮನೆಗೆ ಬರುತ್ತಿರಲಿಲ್ಲ .
ಅದಕ್ಕೆ ಮನೆಗಳಲ್ಲಿ ಬೇಡಿಕೆಯೂ ಇರಲಿಲ್ಲ .
ಪೇಟೆ ಆಹಾರಗಳ ಗುಣಮಟ್ಟದ ಬಗ್ಗೆ ವಿಶ್ವಾಸವೂ ಇರಲಿಲ್ಲ . ಇದ್ದಕ್ಕಿದ್ದಹಾಗೆ ಕಾಲಬದಲಾಯಿತು . ಮುಂದುವರಿದ – ಅಭಿವೃದ್ಧಿಯ ಧಾವಂತದಲ್ಲಿ ಮನೆಯ ತಿಂಡಿಗಳು ಮಾಡಲು ಅವಕಾಶವಿಲ್ಲ , ಅವಿಭಕ್ತ ಕುಟುಂಬ ಹರಿದು ಹಂಚಾಗಿ ಕುಟುಂಬವೊಂದರ ಸದಸ್ಯರ ಸಂಖ್ಯೆ ಮೂರು ತಪ್ಪಿದರೆ ನಾಲ್ಕಕ್ಕೆ ಸೀಮಿತವಾಯಿತು. ಹಳ್ಳಿಯಿಂದ ನಗರಕ್ಕೆ ವಲಸೆ ಅನಿವಾರ್ಯವಾಯಿತು. ಗಂಡ ಹೆಂಡತಿ ಇಬ್ಬರೂ ದುಡಿಯುವುದು ಅನಿವಾರ್ಯವಾಯಿತು . ಈ ದುಡಿಮೆ ಕಾರಣವಾಗಿ ಕೌಟುಂಬಿಕ ಬದುಕಿನ ಅವಧಿ ಹ್ರಸ್ವವಾಯಿತು .
ಹೀಗೆ ಒದಗಿದ ಅವಸರದ ಬದುಕಿಗೆ ರೆಡಿಮೇಡ್ ಆಹಾರಗಳ ಅವಲಂಬನೆ ಸಹಜವಾಯಿತು . ಹಳ್ಳಿಯ ವಾತಾವರಣವಿಲ್ಲವಾಯಿತು . ರೆಡಿಮೇಡ್ ಆಹಾರ ,ತಿಂಡಿಗಳೇ ಶ್ರೇಷ್ಠ ವಾದುವು . ಗೊತ್ತಿದೆ , ಗುಣಮಟ್ಟದ ಮೇಲೆ ಸಂಶಯವಿದೆ ಆದರೂ ಉಪಯೋಗ ನಮಗೆ ಗೊತ್ತಿಲ್ಲದಂತೆ ಬದುಕಿನ ಒಂದಂಗವಾಯಿತು . ಇವತ್ತಿಗೂ ನಗರದಲ್ಲಿರುವ ಮಂದಿ ಹಳ್ಳಿಯಲ್ಲಿರುವ ತವರಿಗೆ – ಮನೆಗೆ ಬಂದರೆ ಉಪ್ಪಿನಕಾಯಿ ಸಹಿತ ಲಭ್ಯವಾದುವುಗಳನ್ನು ಹೊತ್ತೊಯ್ಯುತ್ತಾರೆ .ಅಂದರೆ ಹಳ್ಳಿಮನೆಯ ಆಹಾರ ,ತಿನಸುಗಳೇ ಗುಣಮಟ್ಟದವು , ರುಚಿಯೂ ಇರುವಂತಹದ್ದು ,
ಕಲಬೆರಕೆಯಂತು ಖಂಡಿತಾ ಇಲ್ಲದಿರುವಂತಹದ್ದು , ಶುದ್ಧವಾದುದು ಎಂದು ಗೊತ್ತಿದೆ .
ಏನಿದು ಆಟಿ ಎಂದು , ಆಟಿ ಅಮಾವಾಸ್ಯೆ ಎಂದು ಆರಂಭಿಸಿ ರೆಡಿಮೇಡ್ ಆಹಾರಗಳ ಬಗ್ಗೆ ಬರೆಯತೊಡಗಿದೆ ಎಂದು ತಿಳಿಯ ಬೇಡಿರಿ .ಈ ಆಟಿ ತಿಂಗಳಲ್ಲಿ ನಮ್ಮ ಪೂರ್ವಜರು ಕಾಪಿಡುತ್ತಿದ್ದ ಆಹಾರಗಳು ಮತ್ತು ತಿಂಡಿಗಳ ಬಗ್ಗೆ ಒಮ್ಮೆ ನೆನಪಿಸಿಕೊಳ್ಳೋಣ ಎಂದು .

| ನೀರುಪ್ಪಡ್ |

ಉಪ್ಪಡ್ , ನೀರುಪ್ಪಡ್ , ಗೆರೆಂಗ್ ಬೈಪಾದ್ ಉರುಟು ತುಂಡು ಮಲ್ತ್ ದ್ ನುಂಗಾದ್ ದೀತಿನವು , ಅಪ್ಪಲ , ಸಾಂತಾನಿ ,ಪೆಲತರಿ , ಮುಂತಾದ ವಸ್ತುಗಳನ್ನು ಮಳೆಗಾಲಕ್ಕೆಂದೇ ಬೇಸಗೆಯಲ್ಲಿ ತಯಾರಿಸಿ ವಿಶಿಷ್ಟರೀತಿಯಲ್ಲಿ ಕಾಪಿಡುವ ಕ್ರಮವಿತ್ತು . ಅದಕ್ಕೆಂದೇ ನೀರುಪ್ಪಡ್ದ ಮಂಡೆ , ಉಪ್ಪಡ್ದ ಭರಣಿ , ಕರ , ಬೈತ ಕುರುಂಟು ಹೀಗೆ ಹಲವು ವಿಧದ ಪಾತ್ರೆಗಳಿದ್ದುವು . ಈ ಆಹಾರಗಳ ಮೆಲುಕು ಒಂದು ಅಪೂರ್ವ ಅನುಭವ .
ಮನೆಯ ಚಾವಡಿಯಲ್ಲಿ ಮುಚ್ಚಿಗೆಯ ಕೆಳಗೆ ಸಾಲಾಗಿ ನೇತಾಡಿಸಿಟ್ಟಿರುವ ಸೌತೆ ; ಮನೆಯ ಚಾವಡಿಗೂ ಒಂದು ಶೋಭೆ , ಮಳೆಗಾಲಕ್ಕೆ ಒಳ್ಳೆಯ ಪದಾರ್ಥ .ಸೌತೆಗೆ ಹೆಸರು ಮುಂತಾದ ಧಾನ್ಯಗಳನ್ನು ಬೆರೆಸಿ ಮಾಡುವ ಪದಾರ್ಥ , ಸೌತೆಗೆ ಕಾಪಿಟ್ಟ ಹಲಸಿನ ಬೋಲೆ ( ಹಲಸಿನ ಬೀಜ ) ಬೆರೆಸಿ ಮಾಡುವ ಪದಾರ್ಥವಂತೂ ಒಳ್ಳೆಯ ರುಚಿಯಾದ ಆಹಾರ . ಕೆಸುವಿನ‌ ಎಳತ್ತು ಎಲೆಯನ್ನು ಸುರುಳಿ ಸುತ್ತಿ ಒಂದು ಗಂಟುಹಾಕಿದರೆ ಅಥವಾ ಎರಡು ಸುತ್ತು ಮಾಡಿದರೆ ಅದು ‘ತೇಟ್ಲ‌’. ಸೌತೆ ಅಥವಾ ಬೋಲೆ( ಹಲಸಿನ ಬೀಜ)ಯೊಂದಿಗಿನ ಪದಾರ್ಥವೂ ಒಂದು ರುಚಿಕರ ಖಾದ್ಯವೇ .
ಉಪ್ಪುನೀರಿನಲ್ಲಿ ಹಾಕಿಟ್ಟ ಮಾವಿನಕಾಯಿ ಒಂದಿದ್ದರೆ ಉಪ್ಪು ,ಕಾಯಿ ಮೆಣಸು ಬೆರೆಸಿ( ನುರ್ತುದು) ಗಂಜಿಯ ಬಟ್ಟಲಲ್ಲೆ ಗಂಜಿಯೊಂದಿಗೆ ಊಟದ ವೇಳೆಯೇ ಸಿದ್ಧಪಡಿಸಿ ಮಾಡುವ ಊಟದ ರುಚಿ ಮರೆತು ಹೋಗಿ ಕನಿಷ್ಠ ಅರ್ಧ ಶತಮಾನವೇ ಕಳೆಯಿತು .ಅಲ್ಲಲ್ಲಿ ಇದೆ ಅನ್ನಿ.
ಹಲಸಿ ಸೋಳೆ – ರಚ್ಚೆಯನ್ನೂ ಇದೇ ಕ್ರಮದಲ್ಲಿ ಉಪಯೋಗಿಸುವುದಿದೆ .ಇದೆಲ್ಲ ಒಂದು ನೆನಪುಮಾತ್ರ . ಹಲಸಿನ , ಗೆಣಸಿನ ಹಪ್ಪಳಗಳನ್ನು ಗೆಂಡದಲ್ಲಿ ಕಾಯಿಸಿ ತಿನ್ನುವುದು ಒಂದು ಜಾನಪದ ಅನುಭವ .ಇವೆಲ್ಲ ಬರೆಯಲಾಗದ ರುಚಿಗಳು .
‘ತೊಜಂಕ್’ , ಕೆಸು ಮೊದಲಾದ ಸೊಪ್ಪು ಪ್ರಧಾನವಾಗಿ ಉಳಿದಂತೆ ಹಲವು ವಿಧದ ಸೊಪ್ಪುಗಳು ಮಳೆಗಾಲದ ಪದಾರ್ಥಗಳೇ ಆಗುತ್ತಿದ್ದುವು .ಇವುಗಳಲ್ಲಿ ಕೆಸುವಿನ ಎಲೆಯ ‘ಪತ್ರೊಡೆ’ ವಿಶೇಷ.
ಆಟಿ ಅಮಾವಾಸ್ಯೆ , ಆಟಿ ತಿಂಗಳ ಒಂದು ನೆನಪಾಗಿ ಈ ಬರವಣಿಗೆ.

ಆಟಿದ ಅಮಾಸೆ , ಆಟಿದ ಅಗೆಲ್ , ಆಡಿದ ಕತ್ತಲೆ , ಆಟಿ ಕುಳ್ಳುನಿ , ಆಟಿದ ದೊಂಬು , ಆಟಿದ ಪರ್ಬ , ಆಟಿದ ಪುಣ್ಣಮೆ,ಆಟಿಕಳಂಜೆ ,ಆಟಿಪಂತಿ ,ಆಟಿದ ಮಲಕ,ಆಟಿಪಿದಾಯಿಪಾಡುನಿ ಹೀಗೆ ಆಟಿ ತಿಂಗಳಿಗೆ ಸಂಬಂಧಿಸಿದ ಆಚರಣೆಗಳಾಗಿವೆ.

ಸೋಮವಾರ “ಆಟಿದ ಅಮವಾಸ್ಯೆ”

(ಸಂಗ್ರಹ) ತುಳುನಾಡಿನ ಜಾನಪದ ಸಾಂಸ್ಕೃತಿಕ ಆಚರಣೆಗಳಲ್ಲಿ ಆಟಿ (ಆಷಾಢ) ತಿಂಗಳಿಗೆ ವಿಶಿಷ್ಟ ರೀತಿಯ ಮಾನ್ಯತೆ ಇದೆ. ಆಟಿ ತಿಂಗಳ ಅಮಾವಾಸ್ಯೆಯಂದು ಹಾಲೆ ಮರದ ತೊಗಟೆಯ ಕಷಾಯ ಕುಡಿಯುವುದು ಕರಾವಳಿ ಜನರ ಸಂಪ್ರದಾಯ.
ಆಟಿ ಅಮಾವಾಸ್ಯೆಯ ದಿನದಂದು ಸೂರ್ಯೋದಯಕ್ಕೂ ಮುನ್ನ ಹಾಲೆಮರದ ತೊಗಟೆಯನ್ನು ಬಿಳಿಕಲ್ಲಿನಿಂದ(ಬೊಳ್ಳು ಕಲ್ಲು) ಜಜ್ಜಿ ತೆಗೆದು ತೊಗಟೆ ತರಲಾಗುತ್ತದೆ. ತೊಗಟೆಯನ್ನು ಜಜ್ಜಿ ರಸ ತೆಗೆದು ಕರಿಮೆಣಸು, ಬೆಳ್ಳುಳ್ಳಿ, ಓಮ ಸೇರಿಸಿ ಅರೆದು ಮನೆಮಂದಿಯೆಲ್ಲಾ ಖಾಲಿ ಹೊಟ್ಟೆಯಲ್ಲಿ ಸೇವಿಸುವ ಸಂಪ್ರದಾಯವಿದೆ.
ಮರಕ್ಕೆ ಆಟಿ ತಿಂಗಳ ಅಮಾವಾಸ್ಯೆಯಂದು ವಿಶೇಷ ಔಷಧಿ ಗುಣ ಬರುತ್ತದೆ ಎಂಬ ನಂಬಿಕೆ. ಹಾಲೆಮರದ ತೊಗಟೆಯ ರಸ ಸೇವಿಸಿದರೆ ಹೊಟ್ಟೆನೋವು, ಕಫ ಮತ್ತಿತರೆ ಕಾಯಿಲೆಗಳು ಒಂದು ವರ್ಷ ಬರುವುದಿಲ್ಲ ಎಂಬ ನಂಬಿಕೆ ಇದೆ.
ಹೀಗೆ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಕರಾವಳಿ ಜನರು ಆಟಿ ಅಮಾವಾಸ್ಯೆ ದಿನದಂದು ಕಷಾಯ ಸೇವಿಸುವ ಪದ್ಧತಿ ಬೆಳೆದು ಬಂದಿದೆ. ಔಷಧೀಯ ಕ್ಷೇತ್ರದಲ್ಲಿ ಎಷ್ಟೆ ಬದಲಾವಣೆಗಳಾದರೂ ಹಾಲೆಮರದ ತೊಗಟೆ ರಸದ ಕುರಿತು ಜನರ ನಂಬಿಕೆ ಬದಲಾಗದೆ ಸಾಮಾಜಿಕ, ಧಾರ್ಮಿಕವಾಗಿ ತನ್ನದೇ ಆದ ಸ್ಥಾನ ಉಳಿಸಿಕೊಂಡಿದೆ.

ದ್ವಿತೀಯ ಪಿ.ಯು.ಸಿ.ಯಲ್ಲಿ 582 ಅOಕ ಗಳಿಸಿದ ಅಭಿಷೇಕ್ ಕೋಟ್ಯಾನ್

ಮಂಗಳೂರು(17ಜು/2020): ನಂತೂರು ಪದುವಾ ಪದವಿ ಪೂರ್ವ ಕಾಲೇಜು ಇಲ್ಲಿನ ವಿದ್ಯಾರ್ಥಿ ಅಭಿಷೇಕ್ ಕೋಟ್ಯಾನ್
ದ್ವಿತೀಯ ಪಿ.ಯು.ಸಿ.ಯಲ್ಲಿ 582(97%)ಅತ್ಯಧಿಕ ಅOಕ ಪಡೆದು, ಕಾಲೇಜಿನಲ್ಲಿ ದ್ವಿತೀಯ ಸ್ಥಾನ ಪಡೆದಿರುವ. ಇವರು ಪ್ರಾಥಮಿಕ ಶಿಕ್ಷಣ 1ರಿಂದ -3ನೇ ತರಗತಿ ನಾರಾಯಣ ಗುರು ಶಾಲೆ ಕುದ್ರೋಳಿ,4ರಿಂದ -10ನೇ ತರಗತಿ ಅಶೋಕ ವಿದ್ಯಾಲಯ ಆOಗ್ಲ ಮಾಧ್ಯಮ ಶಾಲೆ ಅಶೋಕನಗರ.
ಪಡೆದಿರುತ್ತಾರೆ.ಜೊತೆಗೆ ಕ್ರೀಡಾ ಕ್ಷೇತ್ರ ಚೆಸ್ ನಲ್ಲಿ ಜಿಲ್ಲೆ, ರಾಜ್ಯ ಮಟ್ಟದಲ್ಲಿ ಭಾಗವಹಿಸಿ, ಜಿಲ್ಲಾ ಮಟ್ಟದಲ್ಲಿ ಪ್ರಶಸ್ತಿಯನ್ನು ಗೆದ್ದ ಪ್ರತಿಭಾವಂತರು ಕೂಡಾ ಹೌದು. ಇವರು ಬಿಲ್ಲವ ಸಂಘ ಉರ್ವ-ಅಶೋಕನಗರ ಇದರ ಸದಸ್ಯರುಗಳಾದ ಶ್ರೀಮತಿ ವಿನುತಾ ಲೋಹಿತಾಕ್ಪ ಕೋಟ್ಯಾನ್ ದಂಬೆಲ್ ಇವರ ಸುಪುತ್ರ.

Related Post