January 23, 2021

Month: August 2020

ಕೊಣಾಜೆ: ಬೈಕ್ ಅಪಘಾತ ಆಗಿ ಬಾಲಕ ಮೃತ್ಯು

ಉಳ್ಳಾಲ(31ಆಗಷ್ಟ್/2020): ಬೈಕ್ ಅಪಘಾತ ಆಗಿ ಬಾಲಕ ಮೃತ್ಯು. ಕೊಣಾಜೆ ಠಾಣಾ ವ್ಯಾಪ್ತಿಯ ಪಜೀರು ಬಳಿ ಬೈಕ್ ಅಪಘಾತದಲ್ಲಿ ಬಾಲಕನೊರ್ವ ಮೃತಪಟ್ಟ ಘಟನೆ ಭಾನುವಾರ ಸಂಭವಿಸಿದೆ.
ಮೃತನನ್ನು ಪಜೀರು ಪೆರ್ನಂಪ್ಪಾಡಿಯ ಬಶೀರ್ ಅವರ ಪುತ್ರ ಶಾಲಿಕ್ (15) ಎಂದು ಗುರುತಿಸಲಾಗಿದೆ. ಶಾಲಿಕ್ ತನ್ನ ತಂದೆಯೊಂದಿಗೆ ಬೈಕ್ ನಲ್ಲಿ ತೆರಳುತ್ತಿದ್ದಾಗ ಬೈಕ್ ಸ್ಕಿಡ್ ಆಗಿ ಮಗುಚಿ ಬಿದ್ದಿದೆ. ಈ ಸಂದರ್ಭದಲ್ಲಿ ತಲೆಗೆ ಗಂಭೀರ ಗಾಯವಾಗಿ ಬಾಲಕ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ. ಈ ಬಗ್ಗೆ ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕನ್ನಡಿಗರ ಕೆಣಕಿದರೆ ಮರಾಠಿಗರ ಹೆಡೆಮುರಿ ಕಟ್ಟುತ್ತೇವೆ: ಡಾ. ರವಿ ಶೆಟ್ಟಿ ಬೈಂದೂರು

ಬೆಂಗಳೂರು(29ಆ/2020): ಬೆಳಗಾವಿ ಜಿಲ್ಲೆ ಪೀರನವಾಡಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಪ್ರತಿಷ್ಟಾಪನೆಗೆ ವಿರೋಧಿಸಿ ಮರಾಠೀ ಭಾಷಿಗರು ದಾಂಧಲೆ ನಡೆಸಿದ್ದು ಅಕ್ಷಮ್ಯ. ನಮ್ಮ ನೆಲದಲ್ಲಿ ಅಪ್ರತಿಮ ಹೋರಾಟಗಾರ ರಾಯಣ್ಣನ ಪ್ರತಿಮೆ ಸ್ಥಾಪನೆಗೆ ಯಾವ ದೊಣ್ಣೆ ನಾಯಕನ ಅಪ್ಪಣೆಯೂ ಬೇಕಿಲ್ಲ.. ಎಂದು ಕರ್ನಾಟಕ ಕಾರ್ಮಿಕರ ವೇದಿಕೆಯ ರಾಜ್ಯಾಧ್ಯಕ್ಷರಾಗಿ ಹೊಸದಾಗಿ ನಿಯೋಜನೆಗೊಂಡ ಡಾ.ರವಿ ಶೆಟ್ಟಿ ಬೈಂದೂರು ಮಾತನಾಡಿದ್ದಾರೆ.

ರಾಯಣ್ಣ ಪ್ರತಿಮೆ ವಿವಾದ ಕುರಿತು ಇಂದು ಬೆಂಗಳೂರಿನಲ್ಲಿ ಪತ್ರಕರ್ತರ ಜೊತೆ ಮಾಡಿರುವ ಅವರು, ಎಂಇಎಸ್, ಶಿವಸೇನೆ ಅಥವಾ ಮತ್ಯಾರೇ ಆಗಲಿ ನಮ್ಮ ನಾಡಿನ ಹೆಮ್ಮೆಯ ವೀರಪುತ್ರ ಸಂಗೊಳ್ಳಿ ರಾಯಣ್ಣನಿಗೆ ಅಪಮಾನ ಮಾಡಿದರೆ ಕನ್ನಡಿಗರ ಸಹನೆ ಪರೀಕ್ಷಿಸಿದಂತೆ. ಇಂತಹ ಉದ್ಧಟತನಗಳನ್ನು ಕನ್ನಡಿಗರು ಸಹಿಸುವುದಿಲ್ಲ.. ಪದೇಪದೇ ಕರ್ನಾಟಕದ ವಿಷಯದಲ್ಲಿ ತಗಾದೆ ತೆಗೆಯುತ್ತಿರುವ ಮರಾಠಿಗರು ಎಚ್ಚೆತ್ತುಕೊಳ್ಳಬೇಕು ಇಲ್ಲದಿದ್ದರೆ ಕನ್ನಡಿಗರು ಕರ್ನಾಟಕದ ಎಲ್ಲಾ ಸಂಘಟಕರು ಸೇರಿ ಸರಿಯಾದ ಬುದ್ಧಿ ಕಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ಧಾರೆ.

ಸಂಗೊಳ್ಳಿ ರಾಯಣ್ಣ ನಮ್ಮ ನಾಡಿನ ಹೆಮ್ಮೆ. ಅವರ ಪ್ರತಿಮೆ ಸ್ಥಾಪನೆಗೆ ವಿರೋಧಿಸುವುದು ಕನ್ನಡಿಗರ ಕೆಚ್ಚೆದೆಯ ಸ್ವಾಭಿಮಾನ ಕೆಣಕಿದಂತೆ. ನಾಡಿನ ವೀರಪುತ್ರ ಮತ್ತು ವನಿತೆಯರ ವಿರುದ್ಧ ನಮ್ಮ ನೆಲದಲ್ಲಿ ತಗಾದೆ ತೆಗೆದರೆ ತಕ್ಕಪಾಠ ಕಲಿಸಬೇಕಾಗುತ್ತದೆ. ಅಲ್ಲದೆ ಸಂಗೊಳ್ಳಿ ರಾಯಣ್ಣ ಸ್ವತಂತ್ರ ಹೋರಾಟಗಾರರು ಅವರು ಕರ್ನಾಟಕಕ್ಕೆ ಮಾತ್ರ ಸ್ವತಂತ್ರ ತಂದು ಕೊಟ್ಟಿಲ್ಲ ಇಡೀ ನಾಡಿಗೆ ಸ್ವಾತಂತ್ರ್ಯ ತಂದುಕೊಡಲು ಹೋರಾಡಿದ ವೀರ ಪುರುಷ. ಅಂತಹ ಮಹಾನ್ ವ್ಯಕ್ತಿಯ ಪ್ರತಿಮೆಗೆ ಅಡ್ಡಗಾಲು ಹಾಕುತ್ತಿರುವವರು ದೇಶ ವಿರೋಧಿಗಳು ಎಂದು ಗುಡುಗಿದರು.

ಸರ್ಕಾರಗಳು ತಕ್ಷಣ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿ ರಾಯಣ್ಣನ ಅವರಿಗೆ ಅವಮಾನ ಆಗದ ರೀತಿಯಲ್ಲಿ ನಡೆದುಕೊಳ್ಳಬೇಕು ಎಂಇಎಸ್ ಪುಂಡರ ಪುಟವನ್ನು ತಡೆಗಟ್ಟಿ ಅವರ ಮೇಲೆ ದೂರು ದಾಖಲಿಸಬೇಕು ಹಾಗೂ ಕನ್ನಡಪರ ಹೋರಾಟಗಾರರ ಮೇಲೆ ತೆಗೆದುಕೊಂಡ ಕ್ರಮದ ನಿರ್ಣಯದಿಂದ ಹಿಂದೆ ಸರಿಯಬೇಕು…
ಅಲ್ಲದೆ ಕರ್ನಾಟಕದಲ್ಲಿ ಬಹಳಷ್ಟು ನಮ್ಮ ಧರ್ಮ ಬಾಂಧವರು ಗೌರವದಿಂದ ಮಹಾರಾಷ್ಟ್ರ ಮೂಲದ ಛತ್ರಪತಿ ಶಿವಾಜಿ ಮಹಾರಾಜರ ಫೋಟೋವನ್ನು ಬಳಸುತ್ತಿದ್ದು.. ಅದರಂತೆ ಕರ್ನಾಟಕದ ಮೂಲದ ರಾಯಣ್ಣನ ಪ್ರತಿಮೆಗಳು ಮತ್ತು ಫೋಟೋಗಳಿಗೆ ಗೌರವವನ್ನು ಕೊಡುವುದು ಮಹಾರಾಷ್ಟ್ರ ಕಲಿಯಲಿ. ಇಲ್ಲದಿದ್ದರೆ ಕರ್ನಾಟಕದ ಸ್ವಾಭಿಮಾನಿ ಕನ್ನಡಿಗರು ಮರಾಠಿಗರಿಗೆ ಬುದ್ಧಿ ಕಲಿಸಲು ಮುಂದಾಗಬೇಕಾಗುತ್ತದೆ ಅದಕ್ಕೆ ಸರ್ಕಾರ ನೇರ ಹೊಣೆ ಆಗಬೇಕಿದೆ ಎಂದು ಅಭಿಪ್ರಾಯಪಟ್ಟರು.

ನಮ್ಮ ನಾಡಿನ ನೆಲ-ಜಲ, ಭಾಷೆ ಮತ್ತು ಗಡಿ ವಿಷಯದಲ್ಲಿ ರಾಜಿಯ ಪ್ರಶ್ನೆಯೇ ಇಲ್ಲ. ಈ ನೆಲದ ಅಸ್ಮಿತೆಗೆ ಭಂಗ ತರುವವರನ್ನು ಹೆಡೆಮುರಿ ಕಟ್ಟುವುದು ಸ್ವಾಭಿಮಾನಿ ಕನ್ನಡಿಗರ ರಕ್ತದಲ್ಲೇ ಇದೆ . ರಾಯಣ್ಣರ ವಿಷಯಕ್ಕೆ ಬಂದರೆ ಎಂತಹ ತ್ಯಾಗಕ್ಕೂ ಸಿದ್ಧ.. ಎಂತಹ ಹೋರಾಟಕ್ಕೂ ಸಿದ್ಧ ಎಂದು ಗುಡುಗಿದರು.

ಎಲ್ಲಾ ಕ್ರೀಡೆಯನ್ನು ಗೌರವಿಸಿ ಅಪ್ಪಿಕೊಂಡು ಕೊಂಡಾಡೋಣ: ಸುಜಾತ ಗಜೇಂದ್ರ ಜೈನ್ ಸಾಗರ

ಲೇಖನ:ಸುಜಾತ ಗಜೇಂದ್ರ ಜೈನ್ ಸಾಗರ
ಸಾಧನೆ ಮಾಡಿದಿನಿ ಅನ್ನೋದು ಅಷ್ಟು ಸುಲಭದ ಮಾತಲ್ಲ….! ಅದರ ಹಿಂದಿನ ನೋವು ಪ್ರೀತಿಪಾತ್ರರಿಗಷ್ಟೇ ಗೊತ್ತಾಗುತ್ತೆ ಅಥವಾ ಆ ಕ್ರೀಡೆಯನ್ನು ಮೆಚ್ಚಿಕೊಂಡು ಹುಚ್ಚನಂತೆ ಗೆದ್ದಾಗ ಬೀಗೂತ್ತ….., ಸೋತಾಗ ಅಳುತ್ತಾ ಕುಳಿತುಕೊಳ್ಳುವ ನಮ್ಮಂತಹ ಮನಸ್ಸಿಗೆ ಮಾತ್ರ ಕಾಣುತ್ತೆ ಅನಿಸುತ್ತೆ

ಹೌದು ನನಗೆ ಈ ಕ್ರೀಡಾ ಲೋಕದ ಸವಿಯುಣಿಸಿದ ಮೊದಲಿಗರು ಮಾದೇವಣ್ಣ ಅವರ ಕಸುಬು ಕಂಡಕ್ಟರ್ ಆಗಿದ್ದರು ಕ್ರೀಕೆಟ್ ಹುಚ್ಚು ಹಿಡಿಸಿ ಟಿವಿ ಮುಂದೆ ಕುಳಿತ ನಾವು *ಸಿಕ್ಸ್* ಹೊಡೆದಂತೆ ಕೂಗೂವುದು,ಎದ್ದು ಅಣ್ಣಮ್ಮನ ಸ್ವೇಪ್ ಹಾಕೋದು, ಸೋತಾಗ ನಿಧಾನವಾಗಿ ಜಾರಿಕೊಳ್ಳೋದು ಕಾರಣ ಮಾದೇವಣ್ಣನ ಏಟು ಯಾರು ತಿಂತಾರೇ ಹೇಳಿ……! ಪಕ್ಕದಲ್ಲಿ ಕುಳಿತು ಟಿವಿ ನೋಡುತ್ತಿರುವವರ ನಮ್ಮ ತೊಡೆ ಕೆಂಪಾಗಿ ಹೋಗಿರುತ್ತಿತ್ತು ಅಂತಹ ಏಟು…..! ನಾನು ಮತ್ತೆ ಅವರ ಮಗ ರಾಕೇಶ್ ಬಹಳ ಚುರುಕು ಅವರಿಂದ ಯಾವಾಗಲೂ ಒಂದೆರಡು ಅಡಿ ದೂರದಲ್ಲಿ ಕುಳಿತಿದ್ದರೆ, ಅವರ ಮಗಳು(ನನ್ನ ತಂಗಿ)ಶುಶ್ಮಿತ ಮತ್ತು ನನ್ನ ತಮ್ಮ ಸುಕು ಕಿಲಾಡಿಗಳು,ಪೆದ್ದರು ಈ ಏಟು ಉಚಿತವಾಗಿ ಸಿಗುತ್ತಿತ್ತು ಆ ದಿನಗಳಲ್ಲಿ ಬಾಲ್ಯದ ಸವಿತುಂಬಿಕೊಟ್ಟ ಅವರಿಗೆ ನಾನಿಂದಿಗೂ ಋಣಿ….!
ನಮ್ಮನೆಯಲ್ಲಿ ಬಾಡಿಗೆಗೆ ಬಂದಿದ್ದ ಇವರು ಎಂದು ಹೊರಗಿನವರಂತೆ ಅನಿಸಿರಲಿಲ್ಲ ಈಗ ಕೂಡ ಜಾತಿಯ ಪಾವಿತ್ರ್ಯತೆ ಮೀರಿ ಬೆಳೆದ ಬಂಧ ಮತ್ತು ಬಂಧುಗಳು ಇಂದಿಗೂ ಎಂದೆಂದಿಗೂ…….! ಇದು ಕ್ರೀಡೆ ನಮ್ಮೊಳಗೆ ಹೇಗೆ ಹೋಕ್ಕಿದ್ದು ಎಂಬುದಕ್ಕೆ ಉದಾಹರಣೆ ಅಷ್ಟೇ.

ನಂತರ ಹೈಸ್ಕೂಲ್ ಗಟ್ಟಿ ಮೇಸ್ಟ್ರು ನಟರಾಜ್ ಸರ್ ನಾವು ಮೂರು ವರ್ಷ ಕೊಚ್ಚೆಯಲ್ಲಿ ಬಿದ್ದು ಎದ್ದು ಆಡಿದ್ದೆ ಜಾಸ್ತಿ ಇಂದಿಗೂ ನಾವು ಅವರೆದುರು ನಿಂತು ಮಾತನಾಡುವ ಧೈರ್ಯ ಮಾಡಲು ಸಾಧ್ಯವಿಲ್ಲ ಅಂತಹ ಗುರುಗಳು ನಮಗೆ…. ಅಲ್ಲಿ ಆಡುವುದರೊದಿಗೆ ಆಟಗಾರರ ಪರಿಚಯ ಮತ್ತು ಎಲ್ಲಾ ಆಟಗಳು ಹೀಗೆ ಆಗಬೇಕು ಎಂದು ತಿದ್ದಿ ಹೇಳಿ ಕಳಿಸಿದ ದೇವರು ಅವರು….. ಆ ಸವಿ ಬೆಳೆದದ್ದು ಶಾಲಾ ದಿನಗಳಿಂದಲೂ ಪೇಪರ್ ಕಟಿಂಗ್ ಇಂದ….!

ಕದ್ದು ಕಟ್ ಮಾಡಿ ಇಟ್ಟುಕೊಳ್ಳುವುದರಲ್ಲಿನ ಸವಿ ಯಾವುದರಲ್ಲೂ ಇರಲು ಸಾಧ್ಯವಿಲ್ಲ ಅನಿಸುತ್ತೆ…..
ಹಾಗೇಯೆ ನಾನು ನೆಚ್ಚಿಕೊಂಡ ಆಟಗಾರರು ಬಹಳ ಇದ್ದಾರೆ ಅದರಲ್ಲಿ ಅಕ್ಷತಕ್ಕ ಕೂಡ ಒಬ್ಬರು ಎನ್ನುವುದಕ್ಕೆ ಬಹಳ ಖುಷಿ ಆಗುತ್ತೆ…..

ನಾನು ಆಗಷ್ಟೇ ಡಿಗ್ರಿ….! ದಿನದ ಬೆಳಗು ನಮ್ಮದು ಪೇಪರ್ ಓದೋದರಿಂದ ಶುರು, ಆಗ ನನಗೆ ಕಂಡ ಚಿತ್ರ ಇವರದು ಕರ್ನಾಟಕ ಪ್ರತಿನಿಧಿಸಿದವರು ಎಂದು …! ಎಷ್ಟು ಖುಷಿ ಆಯ್ತು ಎಂದರೆ, ಅಂದಿನ ಖುಷಿ ಇವತ್ತಿಗೂ ನೆನಪಿದೆ…! ಇವರನ್ನು ನಾವೆಲ್ಲಾ ಹೇಗೆ ನೋಡೋದು ಅಂತ ಫ್ರೇಂಡ್ಸ ಜೊತೆ ಕೇಳಿದ್ದೆ, ಇಲ್ಲಿ ಕುಳಿತು ಕನಸು ಕಾಣು ಎಂದಿದ್ದರು…!
ಎದುರು ನೋಡಲು ಅಸಾಧ್ಯ ಎಂಬ ಮನಸ್ಥಿತಿ ನನಗಾಗ…. !

ಅಚ್ಚರಿ ಎಂದರೆ ಯಾರೇ ಕೇಳಿದರು ಅಕ್ಷತ ಪೂಜಾರಿ ಇಷ್ಟ, ಕ್ರಿಕೇಟ್ ಅಂದ್ರೆ ಧೋನಿ,ಸಚಿನ್,ಶಿಖರ್ ಧವನ್ ಇಷ್ಟ ಅಂತ ಹೇಳುವಾಗಲೆಲ್ಲಾ ಇವರನ್ನು ಭೇಟಿಯಾಗೋಕೆ ಅಸಾಧ್ಯ ಎಂಬ ಮಾತು ಹೇಳಿನೇ ಮಾತು ಮುಗಿಸುತ್ತಿದ್ದೆ ಆದರೆ ಅಕ್ಷತಕ್ಕ ಅಚಾನಕ್ಕಾಗಿ ಮಕ್ಕಿಮನೆ ಕಲಾವೃಂದ ಮಂಗಳೂರು ೨೦೧೯ ಸಂಭ್ರಮದಲ್ಲಿ ಸಿಕ್ಕಿದ್ದರು ನನಗೆ ಮಾತಾಡಿಸೋದು ಹೇಗೆ….? ಇಷ್ಟು ಜನರ ಮಧ್ಯೆ ನಿನ್ಯಾರು ಎಂದು ಕೇಳಿದರೆ ಭಯ…! ಏನೆಲ್ಲಾ ಯೋಚನೆಯಲ್ಲಿ ಆ ದಿನ ಮುಗಿಯಿತು…… ಆ ನೋಡಿದ ಕ್ಷಣ ಎಂದಿಗೂ ಜೀವಂತ… ಆದರೆ ನನಗೆ ಹೇಗಾದರು ಮಾತಾಡಿಸಬೇಕು ಅಂತ ತುಡಿತ…! ಸುದೇಶ್ ಸರ್ ಜೊತೆ ಹೇಗೋ ಧೈರ್ಯ ಮಾಡಿ ಕೇಳಿದೆ ನನ್ನ ಅದೃಷ್ಟ ಅವರಹುಟ್ಟಿದ ಹಬ್ಬ ಒಂದೆರಡು ದಿನ ಬಾಕಿ ಇದೆ ವಿಶ್ ಮಾಡಿ ಅಂದ್ರು ಹೇಗೋ ಅವರ ನಂಬರ್ ತಗೊಂಡು ವಿಶ್ ಮಾಡಿದೆ ಅದು ಮೆಸೆಜ್ ಅಲ್ಲಿ……!

ಥ್ಯಾಂಕ್ಯೂ…..

ಎಂದು ಕಳಿಸಿದ್ದೆ ನನಗೊಂದು ಸಂಭ್ರಮ. ಆ ಸಂಭ್ರಮ ಈ ವರ್ಷ ಹುಟ್ಟಿದ ದಿನ ಮತ್ತದೆ ಸಂದೇಶ ಕಳಿಸಿದೆ ಆಗ ಭೇಟಿಯಾಗೊಣ ಯಾವಾಗಲಾದರೂ ತುಂಬಾ ಖುಷಿ ಆಯ್ತು ಅಂತ ಉತ್ತರ ಬಂತು… ! ಅಂದ್ರೆ ಯಾರಿಗಾದರೂ ಅಷ್ಟೇ ಅಪ್ಪಿಕೊಂಡವರು ಒಂದು ಮಾತನಾಡಿದರೆ ಆಗುವ ಖುಷಿಗೆ ಪಾರವೇ ಇರಲಿಲ್ಲ ಆಟದಲ್ಲಿ ಭಿನ್ನತೆ ಇರಬಹುದು ಅದರೆ ವ್ಯಕ್ತಿ ಇಷ್ಟ ಆದರೆ ಅವರ ಎಲ್ಲಾ ಕಾರ್ಯಗಳು ಬಹಳ ಬೇಗ ಹೃದಯದ ಮೂಲೆಯಲ್ಲಿ ಅವಿತು ಬಿಡುತ್ತವೆ…ಜೊತೆಗೆ ಅವರ ಸರಳತೆ ನನಗೆ ಅವರ ಮೇಲಿರುವ ಪ್ರೀತಿಯನ್ನು ದುಪ್ಪಟ್ಟು ಮಾಡಿದ್ದು ನಿಜ.

ಹೀಗೆ ಯಾಕೆ ಬಂತು ಈ ಮಾತು ಎಂದರೆ ನಾವು ಒಂದಷ್ಟು ಸೀಮಿತ ಗಡಿಯನ್ನು ಹಾಕಿಕೊಂಡು ಬಿಟ್ಟಿದ್ದೇವೆ ಕ್ರಿಕ್ರೇಟ್ ಅಂದ್ರೆ ಮಾತ್ರ ಒಂದು ಶ್ರೇಷ್ಠ ಆಟಗಳಲ್ಲಿ ಒಂದು ಎಂದು ಎಲ್ಲಾ ಕ್ರೀಡೆಗಳು ಕೂಡ ಶ್ರೇಷ್ಟವೆ ಆಗಬೇಕು…..!

ಸಾಧಕನ ಹಿಂದಿನ ಪರಿಶ್ರಮ,ಏಕಾಗ್ರತೆ, ಆಟದ ಮೇಲಿನ ಪ್ರೀತಿಯನ್ನು ಯಾವ ಮಾರ್ಕೇಟ್ನಲ್ಲೂ ಖರೀದಿಸಲು ಸಾಧ್ಯವಿಲ್ಲ…. ನಿನ್ನೆ ಈ ಮುದ್ದಾದ ಕೈಯಲ್ಲಿ ಆದ ಗಾಯವನ್ನು ನೋಡಿ ತುಂಬಾ ಬೇಸರವಾಗುತ್ತದೆ ಅಕ್ಕ ಎಂದಿದ್ದೇ, ಆದರೀಗ ಇಂದಿನ ನಮ್ಮಗಳ ಸಂಭ್ರಮಕ್ಕೆ ಇಂತಹ ಅದೇಷ್ಟೋ ಆಟಗಾರರು ತಮ್ಮ ಜೀವವನ್ನೇ ಮುಡುಪಾಗಿಟ್ಟಿದ್ದಾರೆ..ಸಂಬಳವಿಲ್ಲದ ಚಾಕರಿಯ ರೀತಿ ಅದೇಷ್ಟೋ ಮಂದಿಯ ಬದುಕು ಕೂಡ ಏನು ಇಲ್ಲದೆ ಪದಕಗಳನ್ನು ಮಾರಿ ಜೀವಿಸುವ ಪರಿಸ್ಥಿತಿ ಇಂದು ಎದುರಾಗಿದೆ…..

ಸರ್ಕಾರ ಇನ್ನಾದರೂ ಈ ದಿನವನ್ನು ಅರ್ಥಪೂರ್ಣವಾಗಿ ಆಚರಿಸುವ ಮನಸು ಮಾಡಲಿ ಎಂಬುದು ನನ್ನ ಆಶಯ…! ಕನಸು ಕಾಣುವುದರಲ್ಲಿ ಯಾವ ತಪ್ಪು ಇಲ್ಲ ಎಂದು ಅಂದುಕೊಳ್ಳುತ್ತೇನೆ ಪ್ರತಿಭೆ ಹುಟ್ಟುವುದು ಗುಡಿಸಲಲ್ಲಿ ಬೆಳೆದು ಸಿಂಗರಿಸಕೊಳ್ಳುವುದು ಅರಮನೆಯಲ್ಲಿ ಎಂಬ ಮಾತಿದೆ, ಆದರೆ ಕ್ರೀಡಾ ಲೋಕದ ಕೆಲವು ಆಟಗಾರರು ಇದಕ್ಕೆ ಪಾತ್ರರಾಗುತ್ತಾರೆ‌ ಅಷ್ಟೇ…!
ಪ್ರೋತ್ಸಾಹ ಸಿಕ್ಕರೆ ಎಲ್ಲಾ ರೀತಿಯ ಆಟಗಾರರು ಕೂಡ ನಮ್ಮ ನಾಡಿನ ಹಿರಿಮೆ ಎತ್ತರಿಸುತ್ತಾರಲ್ಲವೇ ಅದಕ್ಕೊಳ್ಳೆ ವೇದಿಕೆ ನಾವೇ ಸೃಷ್ಟಿಸಿ ಕೊಳ್ಳಬೇಕಾಗಿದೆ…… ನಮ್ಮ ನಾಡು ನಮ್ಮ ಹೆಮ್ಮೆ ಎಲ್ಲಾ ಕ್ರೀಡೆಯನ್ನು ಗೌರವಿಸಿ ಅಪ್ಪಿಕೊಂಡು ಕೊಂಡಾಡೋಣ ಏನಂತೀರಾ……?

ಅದೇನೇ ಇರಲಿ ಆಟದ ಜಗತ್ತಿನ ಎಲ್ಲಾ ಸಾಧಕರಿಗೂ ಹಾಗೂ ಸಾಧಿಸುವ ಮನಗಳಿಗೂ ಕ್ರೀಡಾಸಕ್ತರಗೂ ಈ ದಿನದ ಶುಭಾಶಯಗಳು.

ಮೇಘಾಲಯ ವಿದ್ಯಾರ್ಥಿಯ ಪ್ರಾಣಿ ಪ್ರೇಮ:ಗುರೂಜಿ ಸಾಯಿಈಶ್ವರ್ ಶ್ಲಾಘನೆ

ಕಾಪು(24ಆ/2020): ಗಣೇಶ ಚತುರ್ಥಿಯ ದಿನ ಶಂಕರಪುರದ ದ್ವಾರಕಾಮಾಹಿ ಶ್ರೀ ಸಾಯಿಬಾಬಾ ಮಂದಿರಕ್ಕೆ ಐದಾರು ಕರೆಗಳು ಇನ್ನಂಜೆಯ ಸ್ಥಳೀಯ ಸಾರ್ವಜನಿಕರಿಂದ ಬಂದಿದ್ದು “ರಸ್ತೆಯಲ್ಲಿ ನಾಯಿ ಅಪಘಾತಕ್ಕೀಡಾಗಿದ್ದು ಬೇಗ ತೆಗೆಯಿರಿ ಗಣೇಶೋತ್ಸವ ಮೆರವಣಿಗೆ ಇದೇ ದಾರಿಯಲ್ಲಿ ಹೋಗಲಿದೆ” ಎಂದು ಹೇಳುತ್ತಿದ್ದರಲ್ಲದೆ ಯಾರೂ ನಾಯಿಯನ್ನು ದಾರಿಯಿಂದ ತೆಗೆಯುವ ವ್ಯವಸ್ಥೆ ಮಾಡಿರಲ್ಲಿಲ್ಲ.
ಶಂಕರಪುರದ ಶ್ರೀ ಸಾಯಿ ಸಾಂತ್ವನ ಮಂದಿರ ಟ್ರಸ್ಟ್ ನ ವತಿಯಿಂದ ನಡೆಯುವ ಪ್ರಾಣಿ-ಪಕ್ಷಿ ಮೋಕ್ಷ ವಾಹನಕ್ಕೆ ಕರೆಗಳು ಬಂದಿದ್ದು ಮಂದಿರದ ಚಾಲಕ ಅಪಘಾತವಾದ ಸ್ಥಳಕ್ಕೆ ಹೋದಾಗ ನಾಯಿ ಅಪಘಾತಕ್ಕೀಡಾಗಿದ್ದರು ಪ್ರಾಣ ಹೋಗಿಲ್ಲ,ಈ ವಾಹನ ಸತ್ತಂತ ಪ್ರಾಣಿ-ಪಕ್ಷಿಗಳನ್ನು ಸೇವೆಯ ರೂಪದಲ್ಲಿ ಮಾತ್ರ ಮಣ್ಣು ಮಾಡುತ್ತದೆ.ಅಪಘಾತದಲ್ಲಿ ಗಾಯಗೊಂಡ ಯಾವುದೇ ಪ್ರಾಣಿ-ಪಕ್ಷಿಗಳನ್ನು ಆರೈಕೆ ಮಾಡಲು ಮಂದಿರದಲ್ಲಿ ವ್ಯವಸ್ಥೆ ಇಲ್ಲದ ಕಾರಣ, ಏನು ಮಾಡುವುದು ಎಂದು ಚಾಲಕ ಯೋಚನೆ ಮಾಡುತ್ತಿದ್ದ. ಸ್ಥಳೀಯರು ಎಲ್ಲರೂ ದೂರದಿಂದಲೇ ನಿಂತು ನೋಡುತ್ತಿದ್ದರು ಮತ್ತು ಅದೇ ದಾರಿಯಲ್ಲಿ ಗಣೇಶೋತ್ಸವ ಮೆರವಣಿಗೆ ಬರುತ್ತಿರುವ ಬಗ್ಗೆ ಮಾತಾಡುತ್ತಿದ್ದರು.
ಆಗ ಅಲ್ಲಿಯೇ ಇದ್ದ ಮೇಘಾಲಯ ಮೂಲದ ಸ್ಥಳೀಯ ಹಾಸ್ಟೆಲ್ ವಿಧ್ಯಾರ್ಥಿ ತೋಮಸ್ ಎಂಬಾತ ಚಾಲಕನ ಸಮಸ್ಯೆಗಳನ್ನು ಕೇಳಿ ತಾನು ವಾಸವಿರುವ ಹಾಸ್ಟೆಲ್ನ ಬಳಿ ತಂದು ಇಡಿ ಎಂದನು.ತಾ23 ಬೆಳಿಗ್ಗೆ ನಾಯಿ ತನ್ನ ಪ್ರಾಣ ಬಿಟ್ಟಿದೆ ಎಂದು ಮಂದಿರಕ್ಕೆ ತೋಮಸ್ ಕರೆ ಮಾಡಿದರು ತಕ್ಷಣ ಸೇವಾಕರ್ತರು ಮೋಕ್ಷ ವಾಹನದಲ್ಲಿ ತೆರಳಿ ನಾಯಿಯನ್ನು ಮಣ್ಣು ಮಾಡಿದರು.
ಗುರೂಜಿಯವರ ಹೇಳಿಕೆಯಂತೆ “ನಾವು ವರ್ಷಕ್ಕೆ ಮೂರು ನಾಲ್ಕು ಸಾವಿರ ಪ್ರಾಣಿ ಪಕ್ಷಿಗಳನ್ನು ಮಣ್ಣು ಮಾಡುತ್ತೇವೆ ಇದು ನಮಗೆ ತೃಪ್ತಿ ಸಂತೋಷವನ್ನು ಕೊಟ್ಟಂತ ವಿಚಾರ, ನಾವು ಸರ್ಕಾರ,ಸಂಘ ಸಂಸ್ಥೆಗಳ ಪ್ರೋತ್ಸಾಹ ಇಲ್ಲದೆ ನಾಲ್ಕು ವರ್ಷದಿಂದ ಈ ಸೇವೆಯನ್ನು ಮಾಡುತ್ತಿದ್ದೇವೆ,ಮಾಡುವ ಈ ಸೇವೆ ಪರಮಾತ್ಮನ ಸೇವೆ ಎಂದು ತಿಳಿದು ಮಾಡುತ್ತಿದ್ದೇವೆ.ನಿನ್ನೆಯ ದಿನ ನಮ್ಮ ಸೇವೆಯಲ್ಲಿ ಆದ ಸಮಸ್ಯೆಯನ್ನು ಗುರುತಿಸಿದ್ದು ದೂರದ ಮೇಘಾಲಯದ ವಿಧ್ಯಾರ್ಥಿ ತೋಮಸ್ ಎಂಬಾತ,ಅವರಿಗೆ ನಮ್ಮ ಸಮಸ್ಯೆ ತಿಳಿದು ಅಲ್ಲಯೇ ಪರಿಹಾರ ಮಾಡುವ ಪ್ರಯತ್ನ ಮಾಡಿರುವರು”ಎಂದಿರುವರು.

ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ: ಚಾಲಕ್ ಸಾಥ್’ ಯೋಜನೆಯಿಂದ ಆರ್ಥಿಕ ನೆರವು

ತೊಕ್ಕೊಟ್ಟು(22ಆ/2020): ಚಾಲಕ್ ಸಾಥ್ ಯೋಜನೆಯಡಿ ಆರ್ಥಿಕ ನೆರವು ವಿತರಣೆಗೆ ಚಾಲನೆ
ಸಮಾಜದಲ್ಲಿ ಚಾಲಕ ವರ್ಗ ಶ್ರಮ ಜೀವಿಗಳಾಗಿದ್ದು, ಸಾರ್ವಜನಿಕವಾಗಿ ಸೇವೆ ಸಲ್ಲಿಸುತ್ತಿದ್ದಾರೆ, ಲಾಕ್ ಡೌನ್ ಸಂದರ್ಭದಲ್ಲಿ ಸರ್ಕಾರ ಕೇವಲ 28 ಸಾವಿರ ಚಾಲಕರಿಗೆ ಹೆಸರಿಗಾಗಿ ಹಣ ಜಮಾಯಿಸಿ ಇಬ್ಬಗೆ ನೀತಿ ತೋರಿದೆ ಎಂದು ಫೆಡರೇಶನ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿವಾಕರ್ ಅಭಿಪ್ರಾಯಪಟ್ಟರು.
ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಇದರ ಮಂಗಳೂರು ಕ್ಷೇತ್ರ ಸಮಿತಿಯಿಂದ ‘ಚಾಲಕ್ ಸಾಥ್’ ಯೋಜನೆಯಡಿ ಅಟೋರಿಕ್ಷಾ ಚಾಲಕರಿಗೆ ಆರ್ಥಿಕ ನೆರವು ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಲಾಕ್ ಡೌನ್ ಸಂದರ್ಭದಲ್ಲಿ ಸರ್ಕಾರ ಮಾತ್ರವಲ್ಲದೆ ಯಾವುದೇ ಬ್ಯಾಂಕುಗಳಲ್ಲೂ ಚಾಲಕ ವರ್ಗಕ್ಕೆ ಸಾಲ ನೀಡಿಲ್ಲ, ಇಂತಹ ಸಂದರ್ಭದಲ್ಲಿ ವೆಲ್ಫೇರ್ ಪಕ್ಷ ಹಾಗೂ ಕೆಲವು ಸಂಘಟನೆಗಳು ನೆರವು ನೀಡಿರುವುದು ಶ್ಲಾಘನೀಯ ಎಂದರು.
ವೆಲ್ಫೇರ್ ಪಾರ್ಟಿ ಆಫ್ ಜಿಲ್ಲಾ ಕಾರ್ಯದರ್ಶಿ ಮುತ್ತಲಿಬ್ ಮಾತನಾಡಿ, ಚಾಲಕ್ ಸಾಥ್ ಯೋಜನೆಯಡಿ ಮಂಗಳೂರು ಕ್ಷೇತ್ರದಿಂದ 200 ಅರ್ಜಿಗಳ ನಿರೀಕ್ಷೆಯಿತ್ತಾದರೂ 600 ಅರ್ಜಿಗಳು ಬಂದಿವೆ. ರಾಜಕೀಯ ನಾಯಕರು ಗುತ್ತಿಗೆದಾರರಿಂದಲೋ ಅಥವಾ ಇನ್ನಿತರ ಮೂಲಗಳಿಂದ ಹಣ ಪಡೆದು ಸಹಾಯ ಮಾಡುತ್ತಿದೆಯೇ ಹೊರತು ವೈಯಕ್ತಿಕವಾಗಿ ಸಹಾಯ ಮಾಡುವುದಿಲ್ಲ‌‌‌. ಆದರೆ ವೆಲ್ಫೇರ್ ಪಕ್ಷದ ಮುಖಂಡರು ವೈಯಕ್ತಿಕ ಹಾಗೂ ಅಭಿಮಾನಿಗಳ ಸಹಕಾರದಿಂದ ಜನರಿಗೆ ಸಹಾಯ ಮಾಡುತ್ತಿದೆ ಎಂದು ತಿಳಿಸಿದರು. ‌
ವೆಲ್ಫೇರ್ ಪಕ್ಷದ ಮಂಗಳೂರು ಕ್ಷೇತ್ರಾಧ್ಯಕ್ಷ ಹನೀಫ್ ತಲಪಾಡಿ ಮಾತನಾಡಿ, ಇಂದು ರಾಜಕೀಯದಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ, ಲಾಕ್ ಡೌನ್ ಸಂದರ್ಭ ಜನಪ್ರತಿನಿಧಿಗಳು ತಮಗೆ ಕಾಮಗಾರಿಗಳಲ್ಲಿ ಬಂದ ಕಮೀಷನ್ ಹಣ ಹಂಚುತ್ತಿದ್ದರೂ ಅಟೋ ಚಾಲಕರು ಹಾಗೂ ಜನಸಾಮಾನ್ಯರು ಸಂಕಷ್ಟ ಅನುಭವಿಸುತ್ತಿರಲಿಲ್ಲ ಎಂದರು.
ಫಾರೂಕ್ ಅಲೇಕಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಲೀಲ್ ಮುಕಚ್ಚೇರಿ ಕಾರ್ಯಕ್ರಮ ನಿರೂಪಿಸಿದರು. ‌

ಕಲ್ಲಾಪು ಡೆವಲಪ್ ಮೆಂಟ್ ಗ್ರೂಪ್ ವತಿಯಿಂದ ಆಯುಷ್ಮಾನ್ ನೋಂದಣಿ

ಉಳ್ಳಾಲ(21ಆ/2020): ಆಯುಷ್ಮಾನ್ ಕಾರ್ಡು ಆರೋಗ್ಯದ ಸೌಲಭ್ಯಗಳನ್ನು ಪಡೆಯಲು ಉಪಕಾರಿ. ಕಾರ್ಡು ಪಡೆದುಕೊಂಡವರು ಉಪಯೋಗವನ್ನು ಇತರರಿಗೆ ತಿಳಿಸುವ ಕಾರ್ಯವಾಗಲಿ‌ .ನಾಗರಿಕರಿಗೆ ಸಹಾಯಹಸ್ತವಾಗಿ ಮಾಡಿರುವ ಕಾರ್ಯ ಶ್ಲಾಘನೀಯ ಎಂದು ನಗರಸಭೆ ಪೌರಾಯುಕ್ತ ರಾಯಪ್ಪ ಅಭಿಪ್ರಾಯಪಟ್ಟರು.
ಕಲ್ಲಾಪು ಡೆವಲಪ್ ಮೆಂಟ್ ಗ್ರೂಪ್ ಇದರ ವತಿಯಿಂದ ಉಚಿತ ಆಯುಷ್ಮಾನ್ ಕಾಡ್ ೯ ನೋಂದಣಿ ಮತ್ತು ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಈ ಸಂದರ್ಭ ನಗರಸಭೆ ಸದಸ್ಯ ಮುಷ್ತಾಕ್ ಪಟ್ಲ, ಶ್ರೀ ಕೊರಗ ತನಿಯ ಸೇವಾ ಟ್ರಸ್ಟ್ ಸೇವಂತಿಗುಡ್ಡೆ ಅಧ್ಯಕ್ಷ ಮೋಹನ್ ಸಾಲ್ಯಾನ್,
ಹಿರಿಯ ಅಭಿಯಂತರ ತುಳಸೀದಾಸ್ , ಉದ್ಯಮಿ ಶರೀಫ್ ಸೇಫ್ ವೇ, ಸಾಯಿ ಪರಿವಾರ್ ಸಂಚಾಲಕ ಪುರುಷೋತ್ತಮ್ ಕಲ್ಲಾಪು , ನವಾಝ್ ಉಪಸ್ಥಿತರಿದ್ದರು.

ಕೊಣಾಜೆಯಲ್ಲಿ ಮನೆ‌ ಕುಸಿದು ತೀವ್ರ ಹಾನಿ ಮಹಿಳೆಗೆ ಗಾಯ

ಕೊಣಾಜೆ(21ಆ/2020): ಕೊಣಾಜೆ ಗ್ರಾಮದ ನರೇಕಳ ಎಂಬಲ್ಲಿ ಮಳೆಗೆ ಮನೆ ಕುಸಿದು ತೀವ್ರ ಹಾನಿಯಾದ ಘಟನೆ ಗುರುವಾರ ಮುಂಜಾನೆ ನಡೆದಿದೆ.
ಗುರುವಾರ ಮುಂಜಾನೆ 6 ಗಂಟೆಯ ವೇಳೆಗೆ ತೀವ್ರವಾದ ಮಳೆ ಸುರಿಯಲಾರಂಭಿಸಿದ್ದು ಈ ಸಂದರ್ಭದಲ್ಲಿ ನರೇಕಳದ ಕೊರಗಪ್ಪ ಮೂಲ್ಯ ಎಂಬವರ ಮನೆಯ‌ ಮಾಡು ಏಕಾಏಕಿ ಕುಸಿದು‌ ಬಿದ್ದಿದೆ.
ಘಟನೆ ನಡೆದಾಗ ಮನೆಯಲಿ ಸುಮಾರು ಎಂಟು ಮಂದಿ ಇದ್ದು ಮನೆಯಿಂದ ಹೊರ ಓಡಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದೇ ಮನೆಯ ದೇವಕಿ ಎಂಬ ಮಹಿಳೆಗೆ ಕಾಲಿಗೆ ಗಾಯವಾಗಿದೆ ಎಂದು ತಿಳಿದು ಬಂದಿದೆ.
ಮನೆಯ ಮಾಡು ಕುಸಿತದಿಂದ ಮನೆಯೊಳಗಿರುವ ವಸ್ತುಗಳಿಗೂ ಹಾನಿ ಸಂಭವಿಸಿದೆ. ಘಟನಾ ಸ್ಥಳಕ್ಕೆ ಗ್ರಾಮಕರಣಿಕ ಪ್ರಸಾದ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ

ಮುಂಬೈ ಕುಲಾಲ ಸಂಘದವತಿಯಿಂದ ಪಿಯುಸಿ ವಿಶೇಷ ವಿಧ್ಯಾರ್ಥಿನಿಗೆ ಧನ ಸಹಾಯ

ಮುಂಬಯಿ(19ಆ/2020): ಬಡತನ, ಅಂಗ ವೈಕಲ್ಯ ವನ್ನೂ ಮೀರಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇಕಡಾ 467 ಅಂಕ ಪಡೆದಿರುವುದು, ಮನಸ್ಸಿದ್ರೆ ಏನೂ ಬೇಕಾದರೂ ಮಾಡಬಹುದು ಎನ್ನುವುದನ್ನು ತೋರಿಸಿಕೊಟ್ಟ ಬಂಟ್ವಾಳದ ಭಾಗ್ಯಶ್ರೀಗೆ ಮುಂಬಯಿ ಕುಲಾಲ ಸಂಘದ ಸದಸ್ಯರ ಸಹಕಾರದಿಂದ.50000 ವಿದ್ಯಾಭ್ಯಾಸಕ್ಕಾಗಿ ನೀಡಲಾಯಿತು
ಭಾಗ್ಯಶ್ರೀ ಬಂಟ್ವಾಳ ತಾಲೂಕಿನ ಕೂರಿಯಾಳ ಗ್ರಾಮದ ಕೇಶವ ಕುಲಾಲ್ ಮತ್ತು ರಾಜೀವಿ ಇವರ ಸುಪುತ್ರಿ. ತಂದೆ ಕೇಶವರು ಕೂಡಾ ಹುಟ್ಟಿನಿಂದಲೇ ಅಂಗವೈಕಲ್ಯಕ್ಕೆ ತುತ್ತಾಗಿದ್ದು ಮನೆಯ ಪಕ್ಕದಲ್ಲಿಯೇ ಒಂದು ಗೂಡಂಗಡಿಯನ್ನು ಇಟ್ಟುಕೊಂಡಿದ್ದಾರೆ. ಇಬ್ಬರು ಹೆಣ್ಣು ಮಕ್ಕಳಿದ್ದು ಹಿರಿಯ ಮಗಳು ದ್ವಿತೀಯ ಬಿ.ಕಾಂ ಓದುತ್ತಿದ್ದಾಳೆ. ತಾಯಿಗೆ ಬೀಡಿ ಕಟ್ಟುವುದೇ ಕಾಯಕ. ಭಾಗ್ಯಶ್ರೀ ಕಿರಿಯವಳು.
ಈಕೆಗೆ ಸೊಂಟದ ಕೆಳಗೆ ಬಲವೇ ಇಲ್ಲ ಆದರೆ ಕಲಿಕೆಯಲ್ಲಿ ಭಾರೀ ಆಸಕ್ತಿ. ತನ್ನ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಲೊರೆಟ್ಟೋ ಚರ್ಚ್ ಶಾಲೆಯಲ್ಲಿ ಕಲಿತು ಅಲ್ಲಿಯೂ ಉತ್ತಮ ಅಂಕಗಳನ್ನೇ ಪಡೆದುಕೊಂಡಿದ್ದಾಳೆ. ಅಮ್ಮ ಎತ್ತಿಕೊಂಡು ಹೋಗಿಯೇ ಅವಳನ್ನು ಶಾಲೆಗೆ ಬಿಟ್ಟು ಅಲ್ಲಿಯೇ ಇದ್ದು ಮತ್ತೆ ಸಂಜೆ ಮನೆಗೆ ಕರೆದುಕೊಂಡು ಹೋಗುತ್ತಿದ್ದರು. ಎಸ್.ಎಸ್.ಎಲ್.ಸಿಯಲ್ಲಿ 470 ಅಂಕಗಳನ್ನು ಪಡೆದು ಉತ್ತೀರ್ಣಳಾಗಿ ಮುಂದೆ ಪಿಯುಸಿಗೆ ಎಸ್.ವಿ.ಎಸ್ ಪದವಿಪೂರ್ವ ಕಾಲೇಜನ್ನು ಸೇರಿದ ಇವಳದ್ದು ಎಲ್ಲರೂ ನೆನಪಿಟ್ಟುಕೊಳ್ಳುವಂತಹ ಸಾಧನೆ
ಇನ್ನು ಮನೆಯಲ್ಲಿಯೇ ಇದ್ದು ಬಿ.ಕಾಂ. ಕಲಿಯಬೇಕೆಂಬ ಆಸೆ ಯನ್ನು ಹೊಂದಿದ ಪ್ರತಿಭಾವಂತೆ ಭಾಗ್ಯಶ್ರೀ ಗೆ ಮುಂಬಯಿಯ ಕುಲಾಲ ಸಂಘವು ಆರ್ಥಿಕ ಸಹಾಯವನ್ನು ಒದಗಿಸಲು ಮುಂದೆ ಬಂದಿದ್ದು ಸಮಾಜದ ಹಲವಾರು ಗಣ್ಯರು ತಮ್ಮ ಬೆಂಬಲವನ್ನು ಸೂಚಿಸಿದ್ದು ಈಗಾಗಲೇ .ಸುನಿಲ್ ಆರ್ ಸಾಲ್ಯಾನ್ ಬಾಯ್ಕಲ. ಜಗದೀಶ್ ಆರ್ ಬಂಜನ್, ಅಂಬರ್ ನಾಥ್, ಸಾಯಿನಾಥ. ಬಿ. ಸಾಲ್ಯಾನ್ ದುಬಾಯಿ, ಆನಂದ ಕುಲಾಲ್ ಜೋಗೇಶ್ವರಿ, ದೇವದಾಸ ಎಲ್ ಕುಲಾಲ್ ಡೊಂಬಿವಲಿ , ಡಿ. ಐ. ಮೂಲ್ಯ ಕಲ್ಯಾಣ್ , ಮಮತಾ ಎಸ್ ಗುಜರನ್, ಆಶಲತಾ ಮೂಲ್ಯ ಗೋರೆಗಾವ್, ರಘು ಮೂಲ್ಯ ಖಾರ್ ಘರ್, ಮಾಲತಿ ಅಂಚನ್ ಐರೋಲಿ, ಸುಧಾಕರ್ ಟಿ. ಕುಲಾಲ್ ರಬಾಲೆ. ದಿವಾಕರ್ ಮೂಲ್ಯ ಏರೋಲಿ. ಪ್ರೇಮ ಎಲ್ ಮೂಲ್ಯ ವಾಶಿ. ಅಶ್ವಿತಾ ಮೂಲ್ಯ ವಾಶಿ. ಧನವಂತಿ ಎಸ್ ಬಂಜನ್ .ವಿಶ್ವನಾಥ್ ಮೂಲ್ಯ. ರೇಣುಕ ಸಾಲಿಯನ್ ಮೀರಾರೋಡ್. ಜಯ ಎಸ್ ಅಂಚನ್ ಏರೋಲಿ. ಪಿ ಶೇಖರ್ ಮೂಲ್ಯ. ಸಂಜೀವ ಬಂಗೇರ ಸಾಯನ್ ಸದಾನಂದ ಎಸ್ ಕುಲಾಲ್ ವಾಸಿ. ಜಯರಾಜ್ ಪಿ ಸಾಲ್ಯಾನ್ ಘಾಟ್ಕೋಪರ್. ಮೊದಲಾದವರು ತಮ್ಮ ಸಹಾಯ ಹಸ್ತವನ್ನು ನೀಡಿದ್ದಾರೆ.

ಕುಲಾಲ ಸಂಘದ ಅಧ್ಯಕ್ಷರಾದ ದೇವದಾಸ ಎಲ್ ಕುಲಾಲ್, ಉಪಾಧ್ಯಕ್ಷ ರಘು ಮೂಲ್ಯ ಪಾದೆಬೆಟ್ಟು, ಗೌರವ ಪ್ರದಾನ ಕಾರ್ಯದರ್ಶಿ ಕರುಣಾಕರ ಸಾಲ್ಯಾನ್, ಕೋಶಾಧಿಕಾರಿ ಜಯ ಅಂಚನ್, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಮಮತಾ ಗುಜರನ್
ಅಮೂಲ್ಯ ಸಂಪಾದಕ ಶಂಕರ್ ವೈ ಮೂಲ್ಯ, ಜ್ಯೋತಿ ಕೋಅಪರೇಟಿವ್ ಸೊಸೈಟಿಯ ಕಾರ್ಯಾಧ್ಯಕ್ಷ ಗಿರೀಶ್. ಬಿ. ಸಾಲ್ಯಾನ್ ಭಾಗ್ಯಶ್ರೀಯ ಸಾಧನೆಗೆ ಅಭಿನಂದನೆ ಸಲ್ಲಿಸಿದ್ದು. ದಾನಿಗಳ ಸಹಾಯಕ್ಕೆ ಕೃತಜ್ನತೆ ಸಲ್ಲಿಸಿರುವರು.
ಕುಲಾಲ ಸಂಘ ಮುಂಬಯಿ ಆಸಕ್ತ ಕುಲಾಲ ಸಮಾಜದ ಬಂಧುಗಳಿಗೆ ನಿರಂತರವಾಗಿ ಕಳೆದ 90 ವರ್ಷಗಳಿಂದ ಸಹಕಾರ ನೀಡುತ್ತ ಬಂದಿದೆ
ಲಾಕ್ ಡೌನ್ ಸಂದರ್ಭದಲ್ಲಿ ಸುಮಾರು 300 ಕುಟುಂಬಗಳಿಗೆ ಐದು ಲಕ್ಷಕ್ಕೂ ಮಿಕ್ಕಿ ದಿನ ಸಾಮಾಗ್ರಿಗಳನ್ನು ನೀಡಿದೆ.

ಯಕ್ಷಗಾನ ಅರ್ಥಧಾರಿ ಜೋಕಟ್ಟೆ ಮಹಮ್ಮದ್ ನಿಧನ

ಮಂಗಳೂರು (14ಅಕ್ಟೋಬರ್/2020): ಜಿಲ್ಲೆಯ ಹಿರಿಯ ಸಾಮಾಜಿಕ ಧುರೀಣ, ಉದ್ಯಮಿ, ತೊಂಭತ್ತರ ದಶಕದ ಅಪರೂಪದ ಯಕ್ಷಗಾನ ಅರ್ಥಧಾರಿ – ವೇಷಧಾರಿ ಸರಳ – ಸಜ್ಜನ ಸ್ನೇಹ ಜೀವಿ ಜೋಕಟ್ಟೆ ಮಹಮ್ಮದ್ ಅವರು ನಿನ್ನೆ ನಿಧನರಾದ ವರದಿಯಾಗಿದೆ.
ಶೇಣಿಯವರಂತಹ ಹಿರಿಯರ ಸಾಂಗತ್ಯದಲ್ಲಿ ಯಕ್ಷಗಾನ ಕಲಾಸಕ್ತಿಯನ್ನು ಬೆಳೆಸಿಕೊಂಡು ಹಿರಿಯ – ಕಿರಿಯ ಅರ್ಥಧಾರಿಗಳ ಕೂಟದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದ್ದ ಜನಾಬ್ ಮಹಮ್ಮದ್ ಅವರ ವಿಜಯದ ಭೀಷ್ಮನ ಪಾತ್ರ ಜಯಭೇರಿ ಗಳಿಸಿತ್ತು.
ಜೋಕಟ್ಟೆಯವರ ನಿಧನದಿಂದ ಸಮಾಜದ ನಡುವಿನ ಸಾಮರಸ್ಯದ ಸಾಮಾಜಿಕ – ಸಾಂಸ್ಕೃತಿಕ ಕೊಂಡಿಯೊಂದು ಕಳಚಿದಂತಾಗಿದೆ.
ಯಕ್ಷಗಾನ ತಾಳಮದ್ದಳೆ ಆಸಕ್ತರು ಜೋಕಟ್ಟೆ ಮಹಮ್ಮದ್ ರವರ ನಿಧನಕ್ಕೆ ದುಃಖ ವ್ಯಕ್ತ ಪಡಿಸಿರುತ್ತಾರೆ.

ವಿಕ್ಕಿ ಮೊಬೈಲ್ ಉಡುಪಿ ಇವರಿಂದ ಸ್ವಾತಂತ್ರ್ಯೋತ್ಸವ ಗಣೇಶೋತ್ಸವ ವಿಶೇಷ ಆಫರ್

ಉಡುಪಿ(14August/2020): ಮತ್ತೆ ಸುದ್ದಿ ಮಾಡುತ್ತಿದೆ ವಿಕ್ಕಿ ಮೊಬೈಲ್.
ಉಡುಪಿಯ ಪ್ರತಿಷ್ಠಿತ ಮೊಬೈಲ್ ಸಂಸ್ಥೆಯಾದ ವಿಕ್ಕಿ ಮೊಬೈಲ್ನಲ್ಲಿ ಗ್ರಾಹಕರಿಗೆ ಸ್ವಾತಂತ್ರ್ಯೋತ್ಸವ ಹಾಗೂ ಗಣೇಶ ಚತುರ್ಥಿ ಪ್ರಯುಕ್ತ ಜನರಿಗೆ ಆಕರ್ಷಕ ಆಫರ್ ಗಳನ್ನು ನೀಡುತ್ತಿದೆ…
ವಿಶೇಷವಾಗಿ ಉಡುಪಿಯಲ್ಲಿ ಮೊಟ್ಟಮೊದಲ ಬಾರಿಗೆ ನಿಮ್ಮ ಎಟಿಎಂ ಕಾರ್ಡ್ ಮೂಲಕ ಇಎಂಐ ಸೌಲಭ್ಯವನ್ನು ಒದಗಿಸುತ್ತದೆ ಕೇವಲ 999 ಇಎಂಐ ಪಾವತಿಸುವ ಮೂಲಕ ನಿಮ್ಮ ನೆಚ್ಚಿನ ಮೊಬೈಲನ್ನು ಪಡೆದುಕೊಂಡು ಹೋಗಬಹುದು ಒಂದು ಕಂತು ಇಎಂಐ ಕ್ಯಾಶ್ಬ್ಯಾಕ್ ಆಗಿ ಕೂಡ ನೀಡುತ್ತದೆ ಪ್ರತಿಷ್ಠಿತ ಬ್ರಾಂಡ್ ಗಳ ಮೊಬೈಲ್ ಖರೀದಿಗೆ ಹತ್ತು ಪರ್ಸೆಂಟ್ ಕ್ಯಾಶ್ಬ್ಯಾಕ್ ಕೂಡ ನೀಡುತ್ತಿದೆ ONE TIME ಮೊಬೈಲ್ ಸ್ಕ್ರೀನ್ ರೆಪ್ಲೇಸ್ಮೆಂಟ್ ಹಾಗೂ ಕೃತಿ ಪ್ರತಿಕರಿದಿಗೂ ಉಚಿತ ಉಡುಗೊರೆಯನ್ನು ನೀಡುತ್ತಿದೆ..
ವಿಕ್ಕಿ ಮೊಬೈಲ್ ಫ್ರೀಡಂ ಆಫರ್ ನ ವಿಶೇಷತೆಗಳು:-
One time screen replacement
10% Cash Back
Emi on 999rs
1 emi cash back
Free Gift
Emi On ATM card
ಎಲ್ಲಾ BRAND ನ ಮೊಬೈಲ್ ಗಳು ಬೇರೆಲ್ಲ ಅಂಗಡಿಗಿಂತ ಹಾಗೂ ONLINE ಗಿಂತ ಕಡಿಮೆ ಬೆಲೆಯಲ್ಲಿ
VICKY MOBILE
OPP:Kediyoor Hotel Baliga tower udupi
Mob:9886834279
9743490364

Related Post